ಶಿರೂರಿನ ಭೂಕುಸಿತದಲ್ಲಿ ಕಾಣೆಯಾದ ಲಾರಿ ನೀರಿನ ಅಡಿಯಲ್ಲಿ ಪತ್ತೆ; ಮಾಹಿತಿ ನೀಡಿದ ಸಚಿವ

ಸುದ್ದಿಗಳು News

Posted by vidyamaana on 2024-07-24 18:06:21 | Last Updated by Vidyamaana on 2024-07-24 18:06:21

Share: | | | | |


ಶಿರೂರಿನ ಭೂಕುಸಿತದಲ್ಲಿ ಕಾಣೆಯಾದ ಲಾರಿ ನೀರಿನ ಅಡಿಯಲ್ಲಿ ಪತ್ತೆ; ಮಾಹಿತಿ ನೀಡಿದ ಸಚಿವ

ಕಾರವಾರ: ಉತ್ತರ ಕನ್ನಡದ ಶಿರೂರಿನ ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಕೋಝಿಕ್ಕೋಡ್ ಮೂಲದ ಅರ್ಜುನ್ ಅವರ ಲಾರಿ ಎಂದು ನಂಬಲಾದ ಟ್ರಕ್ ನದಿಯ ಆಳದಲ್ಲಿ ಇರುವ ಸುಳಿವು ಲಭ್ಯವಾಗಿದೆ. ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಇದನ್ನು ಖಚಿತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಸಚಿವರು ಮಾಹಿತಿ ನೀಡಿದ್ದಾರೆ.

ನದಿಯ ಕೆಳಭಾಗದಲ್ಲಿ ಟ್ರಕ್ ಪತ್ತೆಯಾಗಿದೆ ಎಂದು ತಿಳಿದು ಬಂದಿದ್ದು ಅದಕ್ಕಾಗಿ ಶೋಧ ನಡೆಯುತ್ತಿದೆ.

ಶಿರೂರಿನಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯ ಒಂಬತ್ತನೇ ದಿನದಂದು, ಲಾರಿಯ ಬಗ್ಗೆ ನಿರ್ಣಾಯಕ ಮಾಹಿತಿಯನ್ನು ಪಡೆಯಲಾಗಿದೆ. ಇಂದು ಬೆಳಗ್ಗೆ ಬೂಮ್ ಲೆಂಗ್ತ್ ಕ್ರೇನ್ ಬಂದಿದ್ದು, ತಪಾಸಣೆ ಪುನರಾರಂಭವಾಗಿದೆ. ಈ ಯಂತ್ರವು 60 ಅಡಿ ಆಳದವರೆಗೆ ಹುಡುಕಬಲ್ಲ ಸಾಮರ್ಥ್ಯ ಹೊಂದಿದೆ. ಪೊಲೀಸ್ ವಾಹನದೊಂದಿಗೆ ವಾಹನವನ್ನು ಸ್ಥಳಕ್ಕೆ ತರಲಾಗಿದೆ.

ಈ ಕುರಿತು ಕೃಷ್ಣ ಬೈರೇಗೌಡ Xನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ X ಖಾತೆಯಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.ಜುಲೈ 16 ರಂದು ಬೆಳಿಗ್ಗೆ ಕೋಝಿಕ್ಕೋಡ್‌ನ ಕಂಡ್ಯಕ್ಕಲ್ ಮೂಲದ ಅರ್ಜುನ್ (30) ಕರ್ನಾಟಕ-ಗೋವಾ ಗಡಿಯಲ್ಲಿ ಹಾದು ಹೋಗುವ ಪನ್ವೇಲ್-ಕನ್ಯಾಕುಮಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದ್ದರು. ಭೂಕುಸಿತದಲ್ಲಿ ಟೀ ಅಂಗಡಿ ಮಾಲೀಕ ಸೇರಿದಂತೆ 10 ಜನರು ಸಾವನ್ನಪ್ಪಿದ ಸ್ಥಳದಲ್ಲಿ ಲಾರಿಯ ಜಿಪಿಎಸ್ ಸ್ಥಳವನ್ನು ಕೊನೆಯದಾಗಿ ಪತ್ತೆ ಹಚ್ಚಲಾಯಿತು.

 Share: | | | | |


FDA ಪರೀಕ್ಷಾ ಅಕ್ರಮ – ಗುಪ್ತಾಂಗದಲ್ಲಿಟ್ಟು ಬ್ಲೂಟೂತ್ ಸಾಗಿಸಿದ ಪರೀಕ್ಷಾರ್ಥಿಗಳು

Posted by Vidyamaana on 2023-10-30 14:59:50 |

Share: | | | | |


FDA ಪರೀಕ್ಷಾ ಅಕ್ರಮ – ಗುಪ್ತಾಂಗದಲ್ಲಿಟ್ಟು ಬ್ಲೂಟೂತ್ ಸಾಗಿಸಿದ ಪರೀಕ್ಷಾರ್ಥಿಗಳು

ಯಾದಗಿರಿ : ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾದ ಪ್ರಥಮ ದರ್ಜೆ ಸಹಾಯಕರ (ಎಫ್‌ಡಿಎ) ಹುದ್ದೆಯ ಪರೀಕ್ಷೆಯಲ್ಲಿ ಕೆಲವು ಪರೀಕ್ಷಾರ್ಥಿಗಳು ಬ್ಲೂಟೂತ್ ಡಿವೈಸ್‌ಅನ್ನು ಗುಪ್ತಾಂಗಗಳಲ್ಲಿ ಇಟ್ಟುಕೊಂಡು ಪರೀಕ್ಷಾ ಕೇಂದ್ರಕ್ಕೆ ಹೋಗುತ್ತಿದ್ದರು. ಅಲ್ಲಿ ಇಟ್ಟುಕೊಂಡ ಡಿವೈಸ್‌ಗಳನ್ನು ಮೆಟಲ್‌ ಡಿಟೆಕ್ಟರ್‌ನಿಂದಲೂ ಪತ್ತೆ ಮಾಡಲಾಗಿಲ್ಲ.ನಂತರ, ಶೌಚಗೃಹಕ್ಕೆ ಹೋಗಿ ಕಿವಿ, ಜನಿವಾರ, ಶರ್ಟ್‌ ಕಾಲರ್‌ನಲ್ಲಿ ಇಟ್ಟುಕೊಂಡು ಬರುತ್ತಿದ್ದರು ಎಂದು ಯಾದಗಿರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ. ಸಂಗೀತಾ ತಿಳಿಸಿದ್ದಾರೆ.


ಯಾದಗಿರಿಯಲ್ಲಿ ಎಫ್‌ಡಿಎ ಪರೀಕ್ಷಾ ವೇಳೆ ನಡೆದ ಅಕ್ರಮ ಪ್ರಕರಣದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆ ಬ್ಲೂಟೂತ್ ಡಿವೈಸ್ ಬಳಸಿ ಎಫ್‌ಡಿ ಎಕ್ಸಾಂ ಬರೆಯುತ್ತಿರುವ ಬಗ್ಗೆ ಬಲ್ಲ ಮೂಲಗಳಿಂದ ಮಾಹಿತಿ ಬಂತು. ತಕ್ಷಣ ನಾವು ಎರಡು ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಯಿತು. ಅಕ್ರಮವಾಗಿ ಪರೀಕ್ಷೆ ಬರೆಯಲು ಮುಂದಾಗಿದ್ದ 9 ಜನ ಪರೀಕ್ಷಾರ್ಥಿಗಳನ್ನ ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಂದ 4 ಬ್ಲೂಟೂತ್ ಡಿವೈಸ್, ಎರಡು ವಾಕಿ-ಟಾಕಿ, ಒಂಬತ್ತು ಮೊಬೈಲ್ ಸೇರಿ 9 ಜನರಿಂದ ವಿವಿಧ ಮಾದರಿಯ ಬಟ್ಟೆಗಳು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.ಇನ್ನು ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದ ಬಂಧಿತ ಆರೋಪಿಗಳೆಲ್ಲರೂ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನವರು. ಆದರೆ, ಅದರಲ್ಲಿ ಒಬ್ಬರು ಮಾತ್ರ ವಿಜಯಪುರದವರು. ಇವರೆಲ್ಲರೂ ತಮ್ಮ ಸಂಬಂಧಿಕರ ಮುಖಾಂತರ ಹಣ ನೀಡಿರುವುದಾಗಿ ಮಾಹಿತಿ ನೀಡಿದ್ದಾರೆ. ಆದರೆ, ಯಾರಿಗೆ ನೀಡಿದ್ದಾರೆ ಎಂಬ ಮಾಹಿತಿ ಇನ್ನೂ ತಿಳಿದಿಲ್ಲ. ಆರೋಪಿಗಳನ್ನು ಇಂದು ಸಂಜೆ ಅಡಿಶನಲ್ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರು ಪಡಿಸಲಾಗಿತ್ತು. ಪ್ರಕರಣದ ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಪೊಲೀಸ್ ಕಸ್ಟಡಿಗೆ ನಾವು ಕೇಳಿದ್ದೆವು. ಆದರೆ, ನ್ಯಾಯಾಧೀಶರು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ನೀಡಿದ್ದಾರೆ ಎಂದರು.ಪರೀಕ್ಷಾ ಕೇಂದ್ರ ಪ್ರವೇಶ ವೇಳೆ ಪೊಲೀಸ್ ಇಲಾಖೆ ವೈಫಲ್ಯ ವಿಚಾರದ ಬಗ್ಗೆ ಮಾತನಾಡಿ, ಪೊಲೀಸ್ ಇಲಾಖೆ ಎಲ್ಲಾ ಬಿಗಿ ಭದ್ರತೆ ವಹಿಸಿತ್ತು, ಆದಾಗ್ಯೂ ಈ ಘಟನೆ ನಡೆದಿದೆ. ಮೊದಲಿನ ಪರೀಕ್ಷೆಗೆ ಮೆಟಲ್ ಡಿಟೆಕ್ಟರ್ ನಿಂದ ತಪಾಸಣೆ ನಡೆಸಿರಲಿಲ್ಲ. ಈ ಪ್ರಕರಣ ಗಮನಕ್ಕೆ ಬಂದ ತಕ್ಷಣ ಮೆಟಲ್ ಡಿಟೆಕ್ಟರ್ ಬಳಸಿದ್ದೇವೆ. ಮೊದಲೇ ಮೆಟಲ್ ಡಿಟೆಕ್ಟರ್ ಬಳಸಿದ್ರೂ ಸಹ ಬ್ಲುಟ್ಯುತ್ ಡಿವೈಸ್ ಕ್ಯಾಚ್ ಮಾಡ್ತಿರಲಿಲ್ಲ. ಬ್ಲೂಟೂತ್ ಡಿವೈಸ್ ಅನ್ನು ಪರೀಕ್ಷಾರ್ಥಿಗಳು ಗುಪ್ತಾಂಗಗಳಲ್ಲಿ ಇಟ್ಟುಕೊಂಡು ಪರೀಕ್ಷಾ ಕೇಂದ್ರಕ್ಕೆ ಹೋಗುತ್ತಿದ್ದರು. ನಂತರ, ಪರೀಕ್ಷಾ ಕೇಂದ್ರದಲ್ಲಿ ಶೌಚಾಲಯ ಹೋಗಿ ಕಿವಿ, ಜನಿವಾರ, ಶರ್ಟ್ ಕಾಲರ್, ಬಟನ್, ಅಂಡರ್ ವೇರ್‌ಗಳಲ್ಲಿ ಇಟ್ಟುಕೊಳ್ಳುತ್ತಿದ್ದರು ಎಂಬುದಾಗಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಸಂಗೀತಾ ತಿಳಿಸಿದರು. ಕೆಇಎ ಪರಿಕ್ಷೆ ಅಕ್ರಮ ಪ್ರಕರಣಕ್ಕೆ ಅಕ್ಕನೇ ಸಾಥ್: ಕೆಇಎ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತಮ್ಮನ ಅಕ್ರಮಕ್ಕೆ ಸಪೋರ್ಟ ಮಾಡಿದ ತಪ್ಪಿಗೆ ಅಕ್ಕ ಅರೆಸ್ಟ್ ಆಗಿದ್ದಾಳೆ. ಕಲಬುರಗಿ ವಿವಿ ಪರೀಕ್ಷಾ ಕೇಂದ್ರದಲ್ಲಿ ಬ್ಲ್ಯೂಟೂತ್ ಮೂಲಕ ಅಕ್ರಮವಾಗಿ ಪರೀಕ್ಷೆ ಬರೆದಿದ್ದ ಲಕ್ಷ್ಮೀಕಾಂತ ಎನ್ನುವ ಅಭ್ಯರ್ಥಿ. ಈ ಲಕ್ಷ್ಮೀಕಾಂತಗೆ ಹೊರಗಡೆ ಕಾರನಲ್ಲಿ ಕುಳಿತು ಮೊಬೈಲ್ ಬಳಸಿ ಉತ್ತರ ಹೇಳುತ್ತಿದ್ದ ಆತನ ಅಕ್ಕ. ತಮ್ಮನ ಅಕ್ರಮಕ್ಕೆ ಸಪೋರ್ಟ ಮಾಡಿದ ತಪ್ಪಿಗೆ ಅಕ್ಕ ಶೈಲಶ್ರಿ ತಳವಾರ ಸಹ ಅರೆಸ್ಟ್ ಆಗಿದ್ದಾಳೆ. ಲಕ್ಷ್ಮೀಪುತ್ರ ಅಫಜಲಪೂರ ತಾಲೂಕಿನ ಸೊನ್ನ ಗ್ರಾಮದ ನಿವಾಸಿಯಾಗಿದ್ದಾನೆ. ಇನ್ನು ಅಕ್ಕ ಶೈಲಶ್ರೀ ಚಿಕ್ಕಬಳ್ಳಾಪುರ ದಲ್ಲಿ ನರ್ಸಿಂಗ್ ಓದುತ್ತಿದ್ದಾಳೆ. ಈಗ ಪೊಲೀಸರು ಆರೋಪಿಗಳನ್ನು ಬಂಧಿಸಿ ವೈದ್ಯಕೀಯ ತಪಾಸಣೆಗೆ ಕರೆದೊಯ್ದ ನಂತರ 14 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.

ಮಕ್ಕಳನ್ನು ಗುಂಡಿಟ್ಟು ಕೊಲ್ಲಿ: ಪೊಲೀಸ್‌ ಆಯುಕ್ತರ ಎದುರು ತಂದೆ ಕಣ್ಣೀರು

Posted by Vidyamaana on 2024-08-22 07:41:17 |

Share: | | | | |


ಮಕ್ಕಳನ್ನು ಗುಂಡಿಟ್ಟು ಕೊಲ್ಲಿ: ಪೊಲೀಸ್‌ ಆಯುಕ್ತರ ಎದುರು ತಂದೆ ಕಣ್ಣೀರು

ಹುಬ್ಬಳ್ಳಿ: ನಾನು ಕಳೆದ 40 ವರ್ಷಗಳಿಂದ‌ ಕಷ್ಟಪಟ್ಟು ಬೆಳೆಸಿದ್ದೇನೆ, ಆದರೆ ಅವರು ನಮ್ಮ ಮನೆತನದ ಮಾನ-ಮರ್ಯಾದೆ ಹಾಳು ಮಾಡಿದ್ದಾರೆ. ಅವರನ್ನು ಗುಂಡಿಟ್ಟು ಕೊಲ್ಲಿ. ಬೇಕಾದರೆ ಬರೆದುಕೊಡುವೆ ಎಂದು ನಗರದಲ್ಲಿ ತಂದೆಯೊಬ್ಬ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ ಎದುರು ಕಣ್ಣೀರು ಹಾಕಿದ್ದಾರೆ.ಈ ವಿಡಿಯೋ ಈಗ ವೈರಲ್ ಆಗಿದೆ.

ಹಳೇಹುಬ್ಬಳ್ಳಿ ಸದರಸೋಪಾ ಬ್ಯಾಹಟ್ಟಿ ಪ್ಲಾಟ್ ನಿವಾಸಿ ಗೌಸಸಾಬ ಕರಡಿಗುಡ್ಡ ಎಂಬವರು ಮಕ್ಕಳಿಬ್ಬರ‌ ನಡತೆ ಬಗ್ಗೆ ಪೊಲೀಸ್ ಆಯುಕ್ತರ ಎದುರು ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದಾರೆ.

ರವಿವಾರ ರಾತ್ರಿ ಎರಡು ಗುಂಪುಗಳ ನಡುವೆ ನಡೆದ ಗ್ಯಾಂಗ್‌ವಾರ್‌ ಘಟನೆಗೆ ಸಂಬಂಧಿಸಿ ಕಸಬಾಪೇಟೆ ಪೊಲೀಸರು ಸೋಮವಾರ ಬೆಳಗ್ಗೆ ಬುಡರಸಿಂಗಿ ಬಳಿಯ ರಿಂಗ್ ರಸ್ತೆಯಲ್ಲಿ ಗೌಸಸಾಬ್‌ ಅವರ ಮಗನಾದ ಅಫ್ತಾಬ್ ಮತ್ತು ಶಾಹಬಾದ್‌ನನ್ನು ವಶಕ್ಕೆ ಪಡೆಯಲು ಹೋದಾಗ ಅಫ್ತಾಬ್‌ನು ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದಾಗ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದರು.

ಬೆಳಗಾವಿ ಸುವರ್ಣ ಸೌಧದ ಮುಂಭಾಗದಲ್ಲಿ ಗಿಡ ನೆಟ್ಟ ಶಾಸಕ ಅಶೋಕ್ ರೈ

Posted by Vidyamaana on 2023-12-07 12:39:41 |

Share: | | | | |


ಬೆಳಗಾವಿ ಸುವರ್ಣ ಸೌಧದ ಮುಂಭಾಗದಲ್ಲಿ ಗಿಡ ನೆಟ್ಟ ಶಾಸಕ ಅಶೋಕ್ ರೈ

ಪುತ್ತೂರು: ವಿಧಾನ ಸಭಾ ಅಧಿವೇಶನ ನಡೆಯುತ್ತಿರುವ ಬೆಳಗಾವಿ ಸುವರ್ಣ ಸೌಧದ ಮುಂಭಾಗದಲ್ಲಿ ಪುತ್ತೂರು ಶಾಸಕರಾದ ಅಶೋಕ್ ರೈ ಗಿಡ ನೆಡುವ ಮೂಲಕ ಬೆಳಗಾವಿಯ ಅಧಿವೇಶನದ ಸವಿನೆನಪಿನ ಗುರುತು ಮಾಡಿದರು. ಹಲಸಿನ ಗಿಡವನ್ನು ಶಾಸಕರು ನೆಡುವ ಮೂಲಕ ತನ್ನ ಪರಿಸರ  ಪ್ರೇಮವನ್ನು ಮೆರೆದರು. ಪುತ್ತೂರಿನ ರಸ್ತೆ ಬದಿಗಳಲ್ಲಿ ಕಾಟು ಮಾವಿನ ಗಿಡ ನೆಡುವ ಮೂಲಕ ಸುದ್ದಿಯಾಗಿದ್ದ ಶಾಸಕರು ಬೆಳಗಾವಿಯಲ್ಲಿ ಹಲಸಿನ ಗಿಡ ನೆಡುವ ಮೂಲಕ ಎರಡನೇ ಬಾರಿಗೆ ಸುದ್ದಿಯಾದರು.

ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ವಿದ್ಯಾರ್ಥಿನಿ ಸುರಕ್ಷಾ ಆತ್ಮಹತ್ಯೆ

Posted by Vidyamaana on 2023-09-30 12:45:02 |

Share: | | | | |


ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ವಿದ್ಯಾರ್ಥಿನಿ ಸುರಕ್ಷಾ ಆತ್ಮಹತ್ಯೆ

ಚಿಕ್ಕಮಗಳೂರು: ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ಪದವಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಾವರಿ ಎಂಬ ಗ್ರಾಮದಲ್ಲಿ ನಡೆದಿದೆ.



ಶೃಂಗೇರಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಸುರಕ್ಷಾ (19) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡವರು.

ಸುರಕ್ಷಾ ಗಣೇಶ ಹಬ್ಬಕ್ಕೆಂದು ಮನೆಗೆ ತೆರಳಿದ್ದಾಗ, ಪೋಷಕರು ಹಲವು ವಿಷಯದಲ್ಲಿ ಬುದ್ದಿವಾದ ಹೇಳಿದ್ದರು. ಇದರಿಂದ ಮನನೊಂದು ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಶೋಕಣ್ಣಡ ಪನ್ಪೆ ಪುತ್ತೂರಿನಲ್ಲೊಂದು ಹೊಸ ಟ್ರೆಂಡ್

Posted by Vidyamaana on 2023-06-13 06:53:21 |

Share: | | | | |


ಅಶೋಕಣ್ಣಡ ಪನ್ಪೆ  ಪುತ್ತೂರಿನಲ್ಲೊಂದು ಹೊಸ ಟ್ರೆಂಡ್

ಪುತ್ತೂರು: ಪುತ್ತೂರಿನಲ್ಲಿ ಇದೀಗ ‘ಅಶೋಕಣ್ಣಡ ಪನ್ಪೆ” ಎಂಬ ಹೊಸ ಟ್ರೆಂಡ್ ಶುರುವಾಗಿದೆ. ಯಾವುದೇ ಸಮಸ್ಯೆ ಎದುರಾದರೂ, ಜನರು ಅಶೋಕ್ ರೈ ಹೆಸರು ಹೇಳುತ್ತಿದ್ದಾರೆ. ಇಂತಹ ಅನೇಕ ನಿದರ್ಶನಗಳು ನಮ್ಮ ಕಣ್ಣ ಮುಂದೆ ಸಿಕ್ಕಿದೆ. ಇದೀಗ ಕುಡಿಯುವ ನೀರು ಪಡೆಯಲು ಇದೇ ಟ್ರೆಂಡ್ ನಿವಾಸಿಗಳಿಗೆ ಸಹಕಾರಿಯಾಗಿದೆ.

ಪುತ್ತೂರು ನಗರಸಭೆ ವ್ಯಾಪ್ತಿಯ ಪಡ್ನೂರು ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಕುಡಿಯುವ ನೀರಿಗೂ ತಾತ್ವಾರ. ಸರಿಯಾಗಿ ಕುಡಿಯುವ ನೀರೇ ಬರುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳ ಕೂಗು. ಆದರೆ ನೀರು ಬಿಡುವವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸಂಬಂಧಪಟ್ಟವರ ಗಮನ ಸೆಳೆದರೂ ಸ್ಪಂದನೆ ಸಿಗದಾಯಿತು.

ಕೊನೆ ಬಾರಿಯೆಂಬಂತೆ ನೀರು ಬಿಡುವವರನ್ನು ಸಂಪರ್ಕಿಸಿದ ಮಹಿಳೆಯೋರ್ವರಿಗೆ ಶೂನ್ಯ ಸ್ಪಂದನೆ ಸಿಕ್ಕಿತು. “ನನ ನಿಕ್ಲೆಡ ಪಂಡ್’ದ್ ದಾಲ ಪ್ರಯೋಜನ ಇಲ್ಲ. ಯಾನ್ ಎಂಎಲ್ಎ ಅಶೋಕಣ್ಣಡನೇ ಪನ್ಪೆ” (ಇನ್ನು ನಿಮ್ಮಲ್ಲಿ ಹೇಳಿ ಪ್ರಯೋಜನವಿಲ್ಲ. ನಾನು ಅಶೋಕಣ್ಣನಲ್ಲಿಯೇ ಹೇಳುತ್ತೇನೆ) ಎಂದು ಮಹಿಳೆ ಉಸುರಿದ್ದರಷ್ಟೇ. ಸಂಜೆ ವೇಳೆಗೇ ನೀರು ಬಂದಿತ್ತು.

ಅಷ್ಟು ಸಮಯದಿಂದ ಬಾರದ ಕುಡಿಯುವ ನೀರು, ಶಾಸಕರ ಹೆಸರು ಹೇಳುತ್ತಿದ್ದಂತೆ ಬಂದದ್ದು ಹೇಗೆ? ಎಲ್ಲರಿಗೂ ಆಶ್ಚರ್ಯವೋ ಆಶ್ಚರ್ಯ. ಹಾಗಾದರೆ ಕುಡಿಯುವ ನೀರಿಗೆ ಕೊರತೆ ಬಂದಿದೆ ಎಂದಲ್ಲ. ನೀರು ಬಿಡುವವರಲ್ಲಿ ಏನೋ ಸಮಸ್ಯೆ ಇದೆ ಎಂದಾಯ್ತು. ಶಾಸಕ ಅಶೋಕ್ ಕುಮಾರ್ ರೈ ಅವರ ಹೆಸರು ಹೇಳುತ್ತಿದ್ದಂತೆ ನೀರು ಆಗಮಿಸಿದೆ.

ಚಂದ್ರಯಾನದ ಯಶಸ್ಸಿಗೆ ಮಸೀದಿ ಗಳಲ್ಲಿ ಪ್ರಾರ್ಥಿಸಲು ರಾಜ್ಯ ದಾರಿಮಿ ಉಲಮಾ ಒಕ್ಕೂಟ ಕರೆ

Posted by Vidyamaana on 2023-08-23 08:47:08 |

Share: | | | | |


ಚಂದ್ರಯಾನದ ಯಶಸ್ಸಿಗೆ ಮಸೀದಿ ಗಳಲ್ಲಿ ಪ್ರಾರ್ಥಿಸಲು ರಾಜ್ಯ ದಾರಿಮಿ ಉಲಮಾ ಒಕ್ಕೂಟ ಕರೆ

ಮಂಗಳೂರು :ದೇಶಕ್ಕೆ ದೇಶವೇ ಕಾತರದಿಂದ ಕಾಯುತ್ತಿರುವ ಚಂದ್ರಯಾನ -3 ರ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಗುರಿ ತಲುಪುವಂತಾಗಳು ಪ್ರತೀ ಮಸೀದಿಗಳಲ್ಲಿ ಇಂದು ಪ್ರಾರ್ಥನೆ ನಡೆಸುವಂತೆ ರಾಜ್ಯ ದಾರಿಮಿ ಒಕ್ಕೂಟ ಕರೆ ನೀಡಿದೆ.

ದೇಶದ ಕೀರ್ತಿ ಬಾನೆತ್ತರಕ್ಕೇರಿ ಆ ಮೂಲಕ ದೇಶದ ಪ್ರಜೆಗಳು ಅಭಿಮಾನ ಪಡುವಂತಾಗಲು ಚಂದ್ರಯಾನ ಯಶಸ್ಸು ಕಾಣ ಬೇಕಿರುವುದು ನಮ್ಮೆಲ್ಲರ ಅಗತ್ಯವಾಗಿದೆ.

ಇದಕ್ಕಾಗಿ ರಾತ್ರಿ ಹಗಲೆನ್ನದೇ ದುಡಿದ ವಿಜ್ಞಾನಿಗಳ ,ಸಿಬ್ಬಂದಿ ವರ್ಗದವರ ಒಳಿತಿಗಾಗಿ ಕೂಡಾ  ಪ್ರಾರ್ಥನೆ ನಡೆಸಲು ಸಂಘಟನೆ ಕರೆ ನೀಡಿದೆ.



Leave a Comment: