ಶಿರೂರು ದುರಂತ: ಮಾನವೀಯ ನೆರವು ನೀಡಿದ ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸಿದ ಜಿಲ್ಲಾಧಿಕಾರಿ

ಸುದ್ದಿಗಳು News

Posted by vidyamaana on 2024-07-24 22:11:50 |

Share: | | | | |


ಶಿರೂರು ದುರಂತ: ಮಾನವೀಯ ನೆರವು ನೀಡಿದ ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸಿದ ಜಿಲ್ಲಾಧಿಕಾರಿ

‌ಮಂಗಳೂರು: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಮೃತಪಟ್ಟಿದ್ದ ವೃದ್ಧೆಯ ಅಂತ್ಯ ಸಂಸ್ಕಾರಕ್ಕೆ ಮಾನವೀಯತೆ ನೆಲೆಯಲ್ಲಿ ನೆರವು ನೀಡಿದ್ದ ಮಂಗಳೂರಿನ ಪತ್ರಕರ್ತರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ತಮ್ಮ ಕಚೇರಿಗೆ ಆಹ್ವಾನಿಸಿ ಸನ್ಮಾನಿಸಿದರು.ಶಿರೂರು ಗುಡ್ಡ ದುರಂತದಲ್ಲಿ ಉಳುವರೆ ಗ್ರಾಮದ ಸಣ್ಣಿ ಹನುಮಂತ ಗೌಡ ಎಂಬ ವೃದ್ಧೆಯ ಮೃತದೇಹ 8 ದಿನಗಳ ಬಳಿಕ ಮಂಗಳವಾರ ಸಿಕ್ಕಿದ್ದು ಪೋಸ್ಟ್ ಮಾರ್ಟಂ ಬಳಿಕ ಮೃತದೇಹವನ್ನು ಮನೆಯಿದ್ದ ಜಾಗಕ್ಕೆ ಸಾಗಿಸಿ ಅಂತಿಮ ಸಂಸ್ಕಾರ ನಡೆಸಲು ಪತ್ರಕರ್ತರಾದ ಶಶಿ ಬೆಳ್ಳಾಯರು, ಮೋಹನ್ ಕುತ್ತಾರ್, ಆರಿಫ್ ಯು.ಆರ್. ಗಿರೀಶ್ ಮಳಲಿ ಹಾಗೂ ಶಿವಶಂಕರ್ ನೆರವಾಗಿದ್ದರು

ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದನ್ನು ಗಮನಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಂದ ಪತ್ರಕರ್ತರ ಮಾಹಿತಿ ಪಡೆದು ಕಚೇರಿಯಲ್ಲಿ ಸನ್ಮಾನಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಅವರು ಜಿಲ್ಲಾಧಿಕಾರಿಯವರಿಗೆ ಪತ್ರಕರ್ತರ ಪರಿಚಯ ಮಾಡಿಕೊಟ್ಟರು.


ಬಳಿಕ ಮಾತಾಡಿದ ಜಿಲ್ಲಾಧಿಕಾರಿ ಅವರು, ನಿಮ್ಮ ಈ ಕಾರ್ಯ ಶ್ಲಾಘನೀಯವಾಗಿದೆ. ಇದೊಂದು ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆ ತರುವಂತಹ ಕಾರ್ಯ. ಮುಂದೆಯೂ ಇಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಿ, ಏನಾದರೂ ಅಗತ್ಯ ನೆರವು ಬೇಕಾದಲ್ಲಿ ಜಿಲ್ಲಾಡಳಿತ ನಿಮ್ಮ ಜೊತೆಗಿದೆ. ನಿಮ್ಮಂತಹ ಉತ್ಸಾಹಿ ತರುಣರ ಅವಶ್ಯಕತೆ ಸಮಾಜಕ್ಕೆ ಇದೆ ಎಂದು ಬೆನ್ನುತಟ್ಟಿದರು. ಅಲ್ಲದೇ ಶಿರೂರು ಮತ್ತು ಉಳುವರೆ ಗ್ರಾಮದ ಸದ್ಯದ ಸ್ಥಿತಿಗತಿಯ ಬಗ್ಗೆ ಪತ್ರಕರ್ತರಿಂದ ಮಾಹಿತಿ ಪಡೆದರು

 Share: | | | | |


ಬೆಂಗಳೂರು: ಮನೆಯಲ್ಲಿದ್ದ ಮಹಿಳೆ ಬೆತ್ತಲೆ ಶವವಾಗಿ ಪತ್ತೆ

Posted by Vidyamaana on 2024-04-20 20:38:39 |

Share: | | | | |


ಬೆಂಗಳೂರು: ಮನೆಯಲ್ಲಿದ್ದ ಮಹಿಳೆ ಬೆತ್ತಲೆ ಶವವಾಗಿ ಪತ್ತೆ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮನೆಯಲ್ಲಿದ್ದ ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರಿನ ಕೊಡಿಗೇಹಳ್ಳಿಯ ಭದ್ರಪ್ಪ ಲೇಔಟನಲ್ಲಿ ಘಟನೆ ನಡೆದಿದೆ.ಕೊಲೆಯಾದ ಮಹಿಳೆಯನ್ನು ಶೋಭಾ ಎಂದು ಗುರುತಿಸಲಾಗಿದೆ.

ಶೋಭಾ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕೊಟ್ಟಿದದ್ದ ಶೋಭಾ,ಭದ್ರಪ್ಪ ಲೇಔಟ್ ಮನೆಯಲ್ಲಿ ಕುಟುಂಬ ಸಮೇತ ವಾಸವಿದ್ದರು. ಮನೆಯಲ್ಲಿ ಆಗಾಗ್ಗೆ ಒಬ್ಬರೇ ಇರುತ್ತಿದ್ದರು

ಪ್ರತಿ ಬಾರಿ ಹೇಳಿದ್ದರು ಈ ಸಲ ಕಪ್ ನಮ್ದೆ, ಇಲ್ಲಿದೆ ಕಪ್; ಕನ್ನಡದಲ್ಲೇ ಸಂಭ್ರಮ ಹಂಚಿಕೊಂಡ ಶೇಯಾಂಕ

Posted by Vidyamaana on 2024-03-18 09:53:47 |

Share: | | | | |


ಪ್ರತಿ ಬಾರಿ ಹೇಳಿದ್ದರು ಈ ಸಲ ಕಪ್ ನಮ್ದೆ, ಇಲ್ಲಿದೆ ಕಪ್; ಕನ್ನಡದಲ್ಲೇ ಸಂಭ್ರಮ ಹಂಚಿಕೊಂಡ ಶೇಯಾಂಕ

ನವದೆಹಲಿ : ಈ ಸಲ ಕಪ್ ನಮ್ದೆ, ಪ್ರತಿ ಭಾರಿ ಆರ್‌ಸಿಬಿ ಅಭಿಮಾನಿಗಳ ಈ ಘೋಷಣೆ ಜನಪ್ರಿಯವಾಗಿದೆ. ಆದರೆ ಅಂತಿಮ ಹಂತದಲ್ಲಿ ನಿರಾಸೆಯೊಂದಿಗೆ ಮರಳುವ ಅಭಿಮಾನಿಗಳು ಮತ್ತೆ ಮುಂದಿನ ಆವೃತ್ತಿಯಲ್ಲೇ ಇದೇ ಘೋಷಣೆ ಮೊಳಗಿಸಿ ತಂಡವನ್ನು ಹುರಿದುಂಬಿಸುತ್ತಿದ್ದರು. ಇದೀಗ ಮಹಿಳಾ ಆರ್‌ಸಿಬಿ ತಂಡ ಟ್ರೋಫಿ ಗೆದ್ದಿದೆ.ಗೆಲುವಿನ ಬಳಿಕ ಮೈದಾನದಲ್ಲಿ ಸಂಭ್ರಮ ಹಂಚಿಕೊಂಡ ತಂಡದಲ್ಲಿರುವ ಸ್ಟಾರ್ ಕನ್ನಡತಿ ಶ್ರೇಯಾಂಕಾ ಪಾಟೀಲ್, ಪ್ರತಿ ಬಾರಿ ಅಭಿಮಾನಿಗಳು ಈ ಸಲ ಕಪ್ ನಮ್ದೆ ಅಂತಾ ಹೇಳುತ್ತಾರೆ. ಇದೀಗ ನಾವು ಕಪ್ ಗೆದ್ದಿದ್ದೇವೆ ಎಂದಿದ್ದಾರೆ.


ಮಹಿಳಾ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅದ್ಭುತ ಪ್ರದರ್ಶನ ನೀಡಿ 8 ವಿಕೆಟ್ ಗಲುವು ದಾಖಲಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿದ ಆರ್‌ಸಿಬಿ ಟ್ರೋಫಿ ಗೆದ್ದುಕೊಂಡಿದೆ. ಅದ್ಭುತ ಗೆಲುವಿನಿಂದ ಆರ್‌ಸಿಬಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದರೆ. ಮಹಿಳೆಯರ ತಂಡ ಗೆದ್ದಾಯ್ತು, ಈ ಬಾರಿ ಪುರುಷರ ತಂಡವೂ ಗೆಲ್ಲಲಿದೆ ಅನ್ನೋ ವಿಶ್ವಾಸವನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ ಶ್ರೇಯಾಂಕಾ ಪಾಟೀಲ್ ನೀಡಿದ ಈ ಸಲ ಕಪ್ ಗೆದ್ದಿದ್ದೇವೆ ಅನ್ನೋ ಹೇಳಿಕೆ ಅಭಿಮಾನಿಗಳ ಸಂಭ್ರಮವನ್ನು ಡಬಲ್ ಮಾಡಿದೆ.ಫೈನಲ್ ಪಂದ್ಯದಲ್ಲಿ 4 ವಿಕೆಟ್ ಕಬಳಿಸಿದ ಶ್ರೇಯಾಂಕಾ ಪಾಟೀಲ್ ಪರ್ಪಲ್ ಕ್ಯಾಪ್ ಗೆದ್ದುಕೊಂಡಿದ್ದಾರೆ. ವಿಶೇಷ ಅಂದರೆ ಗರಿಷ್ಠ ರನ್ ಸಿಡಿಸಿದ ಆರ್‌ಸಿಬಿ ಆಟಗಾರ್ತಿ ಎಲ್ಲಿಸ್ ಪೆರಿ ಆರೆಂಜ್ ಕ್ಯಾಪ್ ಗೆದ್ದಿದ್ದಾರೆ. ಶ್ರೇಯಾಂಕ ಪಾಟೀಲ್ ಅದ್ಬುತ ಪ್ರದರ್ಶನ ಆರ್‌ಸಿಬಿ ತಂಡಕ್ಕೆ ಗೆಲುವಿನ ಹಿರಿಮೆ ತಂದುಕೊಟ್ಟಿದೆ. ಇದರ ಜೊತೆಗೆ ಕಪ್ ನಮ್ದೆ ಕನ್ನಡದ ಘೋಷಣೆಯನ್ನು ದೆಹಲಿಯಲ್ಲಿ ಮೊಳಗಿಸಿದ್ದಾರೆ. ಮಹಿಳೆಯರ ಐಪಿಎಲ್‌ನಲ್ಲಿ ಕಪ್ ನಮ್ದಾಗಿದೆ. ಇದೀಗ ಪುರುಷರ ಕಪ್ ನಮ್ಮದಾಗಬೇಕಿದೆ ಅನ್ನೋ ಕೂಗು ಅಭಿಮಾನಿಗಳು ಮೊಳಗಿಸಿದ್ದಾರೆ.ಮಹಿಳಾ ಐಪಿಎಲ್ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಬ್ಯಾಟಿಂಗ್ ಮಾಡಿತ್ತು. ಆದರೆ ಆರ್‌ಸಿಬಿ ಬೌಲಿಂಗ್ ದಾಳಿಗೆ ಉತ್ತರಿಸಲು ಸಾಧ್ಯವಾಗಲಿಲ್ಲ. ಆರಂಭಿಕರಿಬ್ಬರು ಹೋರಾಟ ನೀಡಿದರೆ, ಉಳಿದವರಿಗೆ ಕ್ರೀಸ್‌ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿ 113 ರನ್‌ಗಳಿಗೆ ಡೆಲ್ಲಿ ಕ್ಯಾಪಿಟಲ್ಸ್ ಆಲೌಟ್ ಆಯಿತು. ಇದರೊಂದಿಗೆ ಆರ್‌ಸಿಬಿ 114 ರನ್ ಟಾರ್ಗೆಟ್ ಪಡೆದುಕೊಂಡಿತು.ಟಾರ್ಗೆಟ್ ಚೇಸ್ ಮಾಡಿದ ಆರ್‌ಸಿಬಿಗೆ ನಾಯಕಿ ಸ್ಮೃತಿ ಮಂಧನಾ ಹಾಗೂ ಸೋಫಿ ಡಿವೈನ್ ಆರಂಭ ನೆರವಾಯಿತು. ಬಳಿಕ ಎಲ್ಲಿಸ್ ಪೆರಿ, ರಿಚಾ ಘೋಷ್ ಹೋರಾಟದಿಂದ ಆರ್‌ಸಿಬಿ ಕೇವಲ 2 ವಿಕೆಟ್ ಕಳೆದುಕೊಂಡು 8 ವಿಕೆಟ್ ಭರ್ಜರಿ ಗೆಲುವು ಕಂಡಿತು. ಟ್ರೋಫಿ ಗೆದ್ದುಕೊಂಡಿತು.

ಬೆಳ್ತಂಗಡಿ, ಕಬಡ್ಡಿ ಪಂದ್ಯಾವಳಿಯಲ್ಲಿ ಅಂಪೈರ್ ತೀರ್ಪಿನ ವಿರುದ್ಧ ಅಸಮಾಧಾನ; ರೊಚ್ಚಿಗೆದ್ದ ಆಟಗಾರರಿಂದ ಮೈದಾನದಲ್ಲೇ ಫೈಟಿಂಗ್

Posted by Vidyamaana on 2023-02-22 04:33:01 |

Share: | | | | |


ಬೆಳ್ತಂಗಡಿ, ಕಬಡ್ಡಿ ಪಂದ್ಯಾವಳಿಯಲ್ಲಿ ಅಂಪೈರ್ ತೀರ್ಪಿನ ವಿರುದ್ಧ ಅಸಮಾಧಾನ; ರೊಚ್ಚಿಗೆದ್ದ ಆಟಗಾರರಿಂದ ಮೈದಾನದಲ್ಲೇ ಫೈಟಿಂಗ್

ಬೆಳ್ತಂಗಡಿ: ಕಬಡ್ಡಿ ಪಂದ್ಯಾವಳಿಯಲ್ಲಿ ಅಂಪೈರ್ ತೀರ್ಪಿನ ವಿರುದ್ಧ ಅಸಮಾಧಾನಗೊಂಡ ಆಟಗಾರರು ಮೈದಾನದಲ್ಲಿ ಹೊಡೆದಾಡಿಕೊಂಡ ಘಟನೆ ಮುಂಡಾಜೆಯಲ್ಲಿ ನಡೆದಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅಭಿಮಾನಿಗಳು ಅಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಆಟಗಾರರ ಮಧ್ಯೆ ಗಲಾಟೆ ನಡೆದಿದ್ದು, ಸದ್ಯ ಹೊಡೆದಾಟದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಸೋಮಂತಡ್ಕದ ಆಡೂರು ಮೈದಾನದಲ್ಲಿ ಫೆ. 19ರಂದು . ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅಭಿಮಾನಿಗಳು ಕಬಡ್ಡಿ ವಂದ್ಯಾವಳಿ ಆಯೋಜಿಸಿದ್ದರು. ಇದರಲ್ಲಿ ಶಾಸಕ ಹರೀಶ್ ಪೂಂಜ ಅಭಿಮಾನಿಗಳು ಹಾಗೂ ಆಟಗಾರರ ಮಧ್ಯೆ ನಡೆದ ಹೊಡೆದಾಟವಾಗಿದೆ.

ವಿಮೆನ್ ಇಂಡಿಯಾ ಮೂವ್ ಮೆಂಟ್ ಪುತ್ತೂರು ಸಮಿತಿ ಅಸ್ತಿತ್ವಕ್ಕೆ

Posted by Vidyamaana on 2023-09-06 13:34:11 |

Share: | | | | |


ವಿಮೆನ್ ಇಂಡಿಯಾ ಮೂವ್ ಮೆಂಟ್ ಪುತ್ತೂರು ಸಮಿತಿ ಅಸ್ತಿತ್ವಕ್ಕೆ

ಪುತ್ತೂರು: ವಿಮೆನ್ ಇಂಡಿಯಾ  ಮೂವ್ ಮೆಂಟ್ WIM ಪುತ್ತೂರು ತಾಲೂಕು ಸಮಿತಿ ರಚನೆಯನ್ನು ಉಪ್ಪಿನ೦ಗಡಿ ಯಲ್ಲಿ ನಡೆಸಲಾಯಿತು


ವಿಮೆನ್ ಇ೦ಡಿಯಾ -ಮೂವ್ ಮೆಂಟ್

ಜಿಲ್ಲಾಧ್ಯಕ್ಷರಾದ ನೌರೀನ್‌ ಅಲಂಪಾಡಿ ನೇತೃತ್ವದಲ್ಲಿ ನೂತನ ಸಮಿತಿ ರಚಿಸಲಾಯಿತು. ಪುತ್ತೂರು ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಝಾಹಿದ ಸಾಗರ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಝರಿನಾ ಉಪ್ಪಿನಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ಸೌದಾ ಮಠ, ಜೊತೆ ಕಾರ್ಯದರ್ಶಿಯಾಗಿ ಘಾತಿಮಾ ನಿರ್ಮ ಕೋಶಾಧಿಕಾರಿಯಾಗಿ ಫಾಹಿನ ನಝೀರ್ ಆಯ್ಕೆಯಾದರು. ಸದಸ್ಯರುಗಳಾಗಿ ಝುಹರ ಬನ್ನೂರು, ಫೌಝಿಯಾ, ಅಸ್ಟೆ, ನಫೀಸ ಮಠ, ಸಫೀನಾ ಉಪ್ಪಿನಂಗಡಿ, ಮುಂತಾಝ್ ಇಕ್ವಾಲ್, ಶಂನಾಝ್, ಶಾಹಿದ, ನಸೀಮಾ ಕೆ ಎಂ, ನುಸ್ರತ್‌ ಕುದ್ರಡ್ಕ ಆಯ್ಕೆಯಾದರು.


ಸಭೆಯನ್ನುದ್ದೇಶಿಸಿ ವಿಮೆನ್ ಇಂಡಿಯಾ ಮೂವೆಂಟ್ ಜಿಲ್ಲಾದ್ಯಕ್ಷರಾದ ನೌರಿನ್‌ ಅಲಂಪಾಡಿ ಮಾತಾಡಿದರು. ಝಾಹಿದ ಸಾಗರ್ ಸ್ವಾಗತಿಸಿ ವಂದಿಸಿದರು.

ಪುತ್ತೂರು ಶಾಸಕರ ಇಂದಿನ ಕಾರ್ಯಕ್ರಮ

Posted by Vidyamaana on 2023-05-31 23:25:52 |

Share: | | | | |


ಪುತ್ತೂರು ಶಾಸಕರ ಇಂದಿನ ಕಾರ್ಯಕ್ರಮ

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರು ಗುರುವಾರ ಅಂದರೆ ಜೂನ್ 1ರಂದು ಸಂಜೆ 4.30ರಿಂದ ಸಾರ್ವಜನಿಕ ಅಹವಾಲು ಸ್ವೀಕಾರ ಮಾಡಲಿದ್ದಾರೆ.

*ಬೆಳಿಗ್ಗೆ 10 ಗಂಟೆಗೆ ಪುತ್ತೂರಿನಲ್ಲಿ‌ ಕ್ಲಿನಿಕ್ ಉದ್ಘಾಟನೆ*

*10.30ರಿಂದ ಸಂಜೆ 4 ಖಾಸಗಿ ಕಾರ್ಯಕ್ರಮದಲ್ಲಿ ಭಾಗಿ*

*ಸಂಜೆ 4.30ರಿಂದ ಕಚೇರಿಯಲ್ಲಿ ಸಾರ್ವಜನಿಕರ ಭೇಟಿ ಅಹವಾಲು ಸ್ವೀಕಾರ ಮಾಡಲಿದ್ದಾರೆ*

ಪುತ್ತೂರಿನ ಶೈಕ್ಷಣಿಕ ಮುಕುಟಕ್ಕೊಂದು ಹೊಸ ಗರಿ – ಸುದಾನ ಪಿ.ಯು ಕಾಲೇಜು ಜು.27ರಂದು ಶುಭಾರಂಭ

Posted by Vidyamaana on 2024-07-26 15:01:18 |

Share: | | | | |


ಪುತ್ತೂರಿನ ಶೈಕ್ಷಣಿಕ ಮುಕುಟಕ್ಕೊಂದು ಹೊಸ ಗರಿ – ಸುದಾನ ಪಿ.ಯು ಕಾಲೇಜು ಜು.27ರಂದು ಶುಭಾರಂಭ

ಪುತ್ತೂರು: 33 ವರ್ಷಗಳ ಹಿಂದೆಯೇ ನಾಡಿನ ಶೈಕ್ಷಣಿಕ ಕ್ರಾಂತಿಗೆ ನಾಂದಿಯನ್ನು ಹಾಡಿದ ಬಾಸೆಲ್ ಮಿಷನ್ ಸಂಸ್ಥೆಯ ಮೂಲದಿಂದ ಸುದಾನ ವಿದ್ಯಾಸಂಸ್ಥೆಗಳ ಉದಯವಾಗಿದ್ದು ಇದೀಗ ವಿಸ್ತರಿತ ಶೈಕ್ಷಣಿಕ ಸೇವೆಯಲ್ಲೊಂದು ಹೊಸ ಹೆಜ್ಜೆಯನ್ನಿರಿಸಿದ ಸುದಾನ ಸಮೂಹ ಶಿಕ್ಷಣ ಸಂಸ್ಥೆಯು ಸುದಾನ ಕ್ಯಾಂಪಸ್ಸಿನಲ್ಲಿ ಸುಧಾನ ಪದವಿ ಪೂರ್ವ ಕಾಲೇಜ್ ಅನ್ನು ಪ್ರಾರಂಭಿಸಿದೆ. ಇದರ ಉದ್ಘಾಟನಾ ಕಾರ್ಯಕ್ರಮವು ಜು.27 ರಂದು ಸಂಸ್ಥೆಯ ಸುದಾನ ಎಡ್ವರ್ಡ್ ಸಭಾಂಗಣದಲ್ಲಿ ಜರಗಲಿದೆ.

ನೂತನ ಸುದಾನ ಪದವಿ ಪೂರ್ವ ಕಾಲೇಜ್‌ ಅನ್ನು ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್‌ರವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ, ಮಂಗಳೂರು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಯಣ್ಣರವರು ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಸುದಾನ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಕೇಂದ್ರದ ಅಧ್ಯಕ್ಷ ರೆ.ವಿಜಯ ಹಾರ್ವಿನ್‌ರವರು ವಹಿಸಿಕೊಳ್ಳಲಿದ್ದಾರೆ. 


ಗೌರವ ಅತಿಥಿಗಳಾಗಿ ಪ್ರತ್ತೂರಿನ ಮಾಜಿ ಶಾಸಕರಾದ ಶ್ರೀಮತಿ ಶಕುಂತಳಾ ಟಿ.ಶೆಟ್ಟಿ, ಸಂಜೀವ ಮಠಂದೂರು, ಪುತ್ತೂರು ನಗರಸಭಾ ಪೌರಾಯುಕ್ತ ಮಧು ಎಸ್.ಮನೋಹರ್, ಸವಣೂರು ವಿದ್ಯಾರಶ್ಮಿ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು, ಸುದಾನ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಕೇಂದ್ರದ ಕಾರ್ಯದರ್ಶಿ ಡಾ. ಪೀಟರ್ ವಿಲ್ಸನ್ ಪ್ರಭಾಕರ್, ಕೋಶಾಧಿಕಾರಿ ಆಸ್ಕರ್ ಆನಂದ್, ಸುದಾನ ಪದವಿ ಪೂರ್ವ ಕಾಲೇಜಿನ ಪ್ರಾಯಪಾಲ ಸುಪ್ರೀತ್ ಕೆ.ಸಿರವರು ಉಪಸ್ಥಿತರಿರಲಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.



Leave a Comment: