ಅಪ್ರಾಪ್ತಗೆ ಲೈಂಗಿಕ ಕಿರುಕುಳ ಆರೋಪ. ಬೆಳಿಯೂರುಕಟ್ಟೆ ನಿವಾಸಿ ಪ್ರಸಾದ್ ಬಂಧನ

ಸುದ್ದಿಗಳು News

Posted by vidyamaana on 2024-07-24 10:52:54 |

Share: | | | | |


ಅಪ್ರಾಪ್ತಗೆ ಲೈಂಗಿಕ ಕಿರುಕುಳ ಆರೋಪ. ಬೆಳಿಯೂರುಕಟ್ಟೆ ನಿವಾಸಿ ಪ್ರಸಾದ್ ಬಂಧನ

ಪುತ್ತೂರು : ಅಪ್ರಾಪ್ತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬೆಳಿಯೂರುಕಟ್ಟೆ ನಿವಾಸಿಯೋರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ.

ಬೆಳಿಯೂರುಕಟ್ಟೆ ನಿವಾಸಿ ಅಪ್ರಾಪ್ತೆಗೆ ವಿವಾಹಿತ ಪ್ರಸಾದ್ ಎಂಬ ವ್ಯಕ್ತಿ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.

 Share: | | | | |


ಖರ್ಗೆ ಭೇಟಿಯಾದ ಪುತ್ತೂರು ಶಾಸಕ ಅಶೋಕ್ ರೈ

Posted by Vidyamaana on 2023-05-19 15:46:03 |

Share: | | | | |


ಖರ್ಗೆ ಭೇಟಿಯಾದ ಪುತ್ತೂರು ಶಾಸಕ ಅಶೋಕ್ ರೈ

ಪುತ್ತೂರು: ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರನ್ನು ದೆಹಲಿಯಲ್ಲಿ ಭೇಟಿಯಾದ ಪುತ್ತೂರು ಶಾಸಕ ಅಶೋಕ್ ರೈಯವರು ಖರ್ಗೆ ಜೊತೆ ಮಾತುಕತೆ ನಡೆಸಿದರು. ಪುತ್ತೂರು ಶಾಸಕರಾದ ಬಳಿಕ ಮೊದಲ ಬಾರಿಗೆ ದೆಹಲಿಗೆ ಭೇಟಿ ನೀಡಿದ ಅವರು ಖರ್ಗೆ ಸೇರಿದಂತೆ ಹಲವು ಕಾಂಗ್ರೆಸ್ ಪ್ರಮುಖರನ್ನು ಭೇಟಿಯಾದರು.

ಪಿಕಪ್ ಡಿಕ್ಕಿ: ದ್ವಿಚಕ್ರ ಸವಾರ ಅಬೂಬಕ್ಕರ್ ಮೃತ್ಯು

Posted by Vidyamaana on 2023-07-09 11:36:05 |

Share: | | | | |


ಪಿಕಪ್ ಡಿಕ್ಕಿ: ದ್ವಿಚಕ್ರ ಸವಾರ ಅಬೂಬಕ್ಕರ್ ಮೃತ್ಯು

ಬೆಳ್ತಂಗಡಿ : ದ್ವಿಚಕ್ರ ವಾಹನಕ್ಕೆ ಪಿಕಪ್ ಡಿಕ್ಕಿಯಾಗಿ, ಸವಾರ ಮೃತಪಟ್ಟ ಘಟನೆ ಬೆಳ್ತಂಗಡಿಯ ಊರುವಲು ಗ್ರಾಮದ ಕುಪ್ಪೆಟ್ಟಿ ರಸ್ತೆ ಮಜ್ಜೆ ಎಂಬಲ್ಲಿ ನಡೆದಿದೆ.

ಮೃತರನ್ನು ಶುಂಠಿಪಲಿಕೆ ನಿವಾಸಿ ಅಬೂಬಕರ್ ಎಂದು ಗುರುತಿಸಲಾಗಿದೆ. ಮೃತರ ಪತ್ನಿ ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ತೀವ್ರತೆಗೆ ದ್ವಿಚಕ್ರ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ  ಪುತ್ತೂರು ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸೆ.30, 2024 ರೊಳಗೆ ಜಮ್ಮು-ಕಾಶ್ಮೀರದ ವಿಧಾನಸಭೆ ಚುನಾವಣೆ ನಡೆಸಲು ಸುಪ್ರಿಂ ಕೋರ್ಟ್ ಸೂಚನೆ

Posted by Vidyamaana on 2023-12-11 15:57:29 |

Share: | | | | |


ಸೆ.30, 2024 ರೊಳಗೆ ಜಮ್ಮು-ಕಾಶ್ಮೀರದ ವಿಧಾನಸಭೆ ಚುನಾವಣೆ ನಡೆಸಲು ಸುಪ್ರಿಂ ಕೋರ್ಟ್ ಸೂಚನೆ

ನವದೆಹಲಿ: ಸೆಪ್ಟೆಂಬರ್ 30, 2024 ರೊಳಗೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ನಡೆಸಲು ಸುಪ್ರಿಂಕೋರ್ಟ್ ಸೂಚನೆ ನೀಡಿದೆ. ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ತೀರ್ಪು ನೀಡಿದ ಬಳಿಕ ಪಂಚಪೀಠ ಈ ಆದೇಶವನ್ನು ನೀಡಿದೆ.2024 ರ ಸೆಪ್ಟೆಂಬರ್ 30 ರೊಳಗೆ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಗೆ ಚುನಾವಣೆ ನಡೆಸಲು ಭಾರತದ ಚುನಾವಣಾ ಆಯೋಗವು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಾವು ನಿರ್ದೇಶಿಸುತ್ತೇವೆ" ಎಂದು ಸಿಜೆಐ 370 ನೇ ವಿಧಿಯ ತೀರ್ಪಿನಲ್ಲಿ ಹೇಳಿದರು.


"370 (1) (ಡಿ) ವಿಧಿಯನ್ನು ಬಳಸಿಕೊಂಡು ಭಾರತದ ಸಂವಿಧಾನದ ಎಲ್ಲಾ ನಿಬಂಧನೆಗಳನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಒಂದೇ ಬಾರಿಗೆ ಅನ್ವಯಿಸಬಹುದು ಎಂದು ನಾವು ಅಭಿಪ್ರಾಯಪಟ್ಟಿದ್ದೇವೆ. CO 273 ಅನ್ನು ಹೊರಡಿಸಲು ರಾಷ್ಟ್ರಪತಿ ಗಳು ಅಧಿಕಾರವನ್ನು ಬಳಸುವುದು ದುರುದ್ದೇಶಪೂರಿತವೆಂದು ನಾವು ಭಾವಿಸುವುದಿಲ್ಲ. ಹೀಗಾಗಿ ನಾವು ರಾಷ್ಟ್ರಪತಿಗಳು ಅಧಿಕಾರದ ಪ್ರಯೋಗವನ್ನು ಮಾನ್ಯವೆಂದು ಪರಿಗಣಿಸುತ್ತೇವೆ" ಎಂದು ಸಿಜೆಐ ಹೇಳಿದರು. ಜಮ್ಮು ಮತ್ತು ಕಾಶ್ಮೀರ ಸಂವಿಧಾನ ಸಭೆಯ ವಿಸರ್ಜನೆಯ ನಂತರ 370 (3) ನೇ ವಿಧಿಯ ಅಡಿಯಲ್ಲಿ ಅಧಿಕಾರವು ಅಸ್ತಿತ್ವದಲ್ಲಿಲ್ಲ ಎಂದು ಹೇಳುವುದು ಏಕೀಕರಣ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ಕಾರಣವಾಗುತ್ತದೆ ಎಂದು ಸಿಜೆಐ ಹೇಳಿದ್ದಾರೆ. ರಾಜ್ಯದಲ್ಲಿನ ಯುದ್ಧ ಪರಿಸ್ಥಿತಿಗಳಿಂದಾಗಿ 370 ನೇ ವಿಧಿಯು ಮಧ್ಯಂತರ ವ್ಯವಸ್ಥೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. 370 ನೇ ವಿಧಿ ತಾತ್ಕಾಲಿಕ ನಿಬಂಧನೆ ಎಂದು ಪಠ್ಯ ಓದುವಿಕೆ ಸೂಚಿಸುತ್ತದೆ ಎಂದು ಸಿಜೆಐ ತೀರ್ಪನ್ನು ಓದಿದರು.

ಭಾರತ ಸೇರಿ ಜಗತ್ತಿನಾದ್ಯಂತ X ಸರ್ವರ್ ಡೌನ್ ಬಳಕೆದಾರರ ಪರದಾಟ

Posted by Vidyamaana on 2024-04-23 21:50:13 |

Share: | | | | |


ಭಾರತ ಸೇರಿ ಜಗತ್ತಿನಾದ್ಯಂತ X ಸರ್ವರ್ ಡೌನ್ ಬಳಕೆದಾರರ ಪರದಾಟ

ನವದೆಹಲಿ: ಟ್ವಿಟರ್ ಸ್ಥಗಿತದ ಕೆಲವೇ ವಾರಗಳ ನಂತರ, ಎಲೋನ್ ಮಸ್ಕ್ ಒಡೆತನದ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ (ಹಿಂದೆ ಟ್ವಿಟರ್) ಮಂಗಳವಾರ ಮತ್ತೆ ಸರ್ವರ್‌ ಡೌನ್ ಆಗಿರುವ ಬಗ್ಗೆ ವರದಿ ಬರುತ್ತಿದ್ದಾವೆ.ಎಕ್ಸ್‌ ಸ್ಥಗಿತ ಟ್ರ್ಯಾಕಿಂಗ್ ವೆಬ್ಸೈಟ್ Downdetector.com ಪ್ರಕಾರ, ಭಾರತದಲ್ಲಿ ನೂರಾರು ಬಳಕೆದಾರರು ಎಕ್ಸ್ ಅನ್ನು ಪ್ರವೇಶಿಸುವಲ್ಲಿ, ಬಳಕೆ ಮಾಡುವಲ್ಲಿ ಸಮಸ್ಯೆಗಳನ್ನು ಎದುರಿಸಿದ್ದಾರೆ.

ಗುತ್ತಿಗೆದಾರನ ಮನೆಯಲ್ಲಿ ಸಿಕ್ಕಿದ್ದು ಕಮಿಷನ್ ಹಣ, ತೆಲಂಗಾಣದ ಚುನಾವಣೆಗೆ ತೆಗೆದಿಟ್ಟ ಹಣ ; ನಳಿನ್ ಕುಮಾರ್ ಆರೋಪ

Posted by Vidyamaana on 2023-10-14 12:10:54 |

Share: | | | | |


ಗುತ್ತಿಗೆದಾರನ ಮನೆಯಲ್ಲಿ ಸಿಕ್ಕಿದ್ದು ಕಮಿಷನ್ ಹಣ, ತೆಲಂಗಾಣದ ಚುನಾವಣೆಗೆ ತೆಗೆದಿಟ್ಟ ಹಣ ; ನಳಿನ್ ಕುಮಾರ್ ಆರೋಪ

ಮಂಗಳೂರು: ಬೆಂಗಳೂರಿನ ಗುತ್ತಿಗೆದಾರರೊಬ್ಬರ ಮನೆಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದ 42 ಕೋಟಿ ರೂಪಾಯಿ ನಗದು ಕಮಿಷನ್ ನೀಡಲು ತಂದಿಟ್ಟಿದ್ದ ಹಣ ಎಂಬ ಮಾಹಿತಿ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರಿನಲ್ಲಿ ಅಂಬಿಕಾಪತಿ ಎಂಬ ಗುತ್ತಿಗೆದಾರನ ಮನೆಗೆ ಐಟಿ ದಾಳಿ ಆಗಿದೆ. ಕೆಲ ದಿನಗಳ ಹಿಂದೆ 600 ಕೋಟಿ ರೂ. ಬಾಕಿ ಹಣವನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಈಗ ಅಲ್ಲಿ ಸಿಕ್ಕಿರುವುದು ಕಮಿಷನ್ ಹಣ ಎಂಬ ಮಾಹಿತಿ ಸಿಕ್ಕಿದೆ. ರಾಜ್ಯದಲ್ಲಿ ಇವತ್ತು ಎಟಿಎಂ ಸರ್ಕಾರ ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಇದೇ ಸಾಕ್ಷಿ. 


ಇದು ತೆಲಂಗಾಣದ ಚುನಾವಣೆಗೆ ಸಂಗ್ರಹಿಸಲಾದ ಹಣ ಎನ್ನಲಾಗುತ್ತಿದೆ. ಕೆಲವು ಅಧಿಕಾರಿಗಳೇ ಈ ಹಿಂದೆ ರಾಜ್ಯಪಾಲರಿಗೆ ಕಮಿಷನ್ ಬಗ್ಗೆ ದೂರು ಕೊಟ್ಟಿದ್ದರು. ನಾವು ಚುನಾವಣೆ ಹೊತ್ತಲ್ಲೇ ಇದು ಎಟಿಎಂ ಸರಕಾರ ಅಂದಿದ್ದೆವು ಎಂದರು. 


ರಾಜ್ಯದಲ್ಲಿ ಆಡಳಿತ ಹಳಿ ತಪ್ಪಿದೆ ಅನ್ನೋದಕ್ಕೆ ಸಾಕ್ಷಿ ಇದು. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಯಾವುದೇ ಕೆಲಸಕ್ಕೆ ಹಿಂಜರಿಯಲ್ಲ. ಈಗಾಗಲೇ ಎರಡು ಗುತ್ತಿಗೆದಾರರು ಇವರ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐಟಿಯವರು ಯಾರ ಒತ್ತಡದಿಂದಲೂ ದಾಳಿಗಳನ್ನು ಮಾಡುವುದಿಲ್ಲ. ಗುತ್ತಿಗೆದಾರರಿಗೆ ಅನುದಾನ ಬಿಡುಗಡೆಯಾದ ಬೆನ್ನಲ್ಲೇ ಹಣ ಸಿಕ್ಕಿರೋದು ಅನುಮಾನ ಹುಟ್ಟಿಸಿದೆ ಎಂದರು.


ಇದೊಂದು ಭ್ರಷ್ಟಾಚಾರಿಗಳ ಬೆಂಗಾವಲಿಗಿರುವ ಕಲೆಕ್ಷನ್ ಮತ್ತು ಎಟಿಎಂ ಸರ್ಕಾರ. ಸುಳ್ಳು ಹೇಳಿ, ಭರವಸೆ ಕೊಟ್ಟು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದ ಅವರು, ಇಡೀ ಕರ್ನಾಟಕ ಕತ್ತಲೆಯಲ್ಲಿದೆ, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿದೆ. ರೈತರಿಗೆ ವಿದ್ಯುತ್ ಇಲ್ಲ, ನಿದ್ದೆಗೆಟ್ಟರೂ ರೈತರಿಗೆ ಕರೆಂಟ್ ಇಲ್ಲ ಎಂದು ಕಿಡಿ ಕಾರಿದರು.

ಒಂದು ವರದಿಗೆ ಅಲುಗಾಡಿದ ಅದಾನಿ ಸಾಮ್ರಾಜ್ಯ- ನಂ.1 ಶ್ರೀಮಂತ ಪಟ್ಟದಿಂದ 16 ನೇ ಸ್ಥಾನಕ್ಕೆ ಇಳಿದ ಗೌತಮ್ ಅದಾನಿ : 8 ಲಕ್ಷ 19 ಸಾವಿರದ 134 ಕೋಟಿ ನಷ್ಟ

Posted by Vidyamaana on 2023-02-02 15:09:34 |

Share: | | | | |


ಒಂದು ವರದಿಗೆ ಅಲುಗಾಡಿದ ಅದಾನಿ ಸಾಮ್ರಾಜ್ಯ- ನಂ.1 ಶ್ರೀಮಂತ ಪಟ್ಟದಿಂದ 16 ನೇ ಸ್ಥಾನಕ್ಕೆ ಇಳಿದ ಗೌತಮ್ ಅದಾನಿ : 8 ಲಕ್ಷ 19 ಸಾವಿರದ 134 ಕೋಟಿ ನಷ್ಟ

ನವದೆಹಲಿ (ಫೆ.2): ಕಳೆದ ವಾರ ಅದಾನಿ (Adani) ಗ್ರೂಪ್‌ ಕಂಪನಿಗಳ ಮೇಲೆ ಅಮೆರಿಕದ ಶಾರ್ಟ್‌ ಸೆಲ್ಲರ್ ಹಾಗೂ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್‌ ವಂಚನೆ ಹಾಗೂ ಮೋಸದ ಆರೋಪ ಮಾಡಿತ್ತು. ಅಲ್ಲಿಂದ ಇಲ್ಲಿಯವರೆಗೂ ಷೇರುಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ನಷ್ಟಗಳನ್ನು ಕಂಡಿತ್ತು.ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಷೇರುಗಳು ಕುಸಿತ ಕಾಣುತ್ತಿರುವ ಹಿನ್ನಲೆಯಲ್ಲಿ 20 ಸಾವಿರ ಕೋಟಿಗೂ ಹೆಚ್ಚಿನ ಫಾಲೋಆನ್‌ ಪಬ್ಲಿಕ್‌ ಆಫರ್‌ (ಎಫ್‌ಪಿಓ) ಜೊತೆ ಮುಂದುವರಿಯುವುದು ಸರಿಯಲ್ಲ ಎಂದಿದ್ದ ಅದಾನಿ ಗ್ರೂಪ್‌, ಇದನ್ನು ರದ್ದು ಮಾಡಿತ್ತು. ಸಂಪೂರ್ಣವಾಗಿ ಎಫ್‌ಪಿಓ ಮಾರಾಟವಾಗಿದ್ದರಿಂದ 20 ಸಾವಿರ ಕೋಟಿ ರೂಪಾಯಿಯನ್ನು ಹೂಡಿಕೆದಾರರಿಗೆ ವಾಪಸ್‌ ಮಾಡುವುದಾಗಿ ತಿಳಿಸಿತ್ತು.ಷೇರು ಕುಸಿತ ಕಾಣುತ್ತಿರುವ ಹಂತದಲ್ಲಿ ಎಫ್‌ಪಿಒ ಜೊತೆ ಮುಂದುವರಿಯುವುದು ನೈತಿಕವಾಗಿ ಸರಿಯಲ್ಲ ಎಂದು ಗೌತಮ್‌ ಅದಾನಿ ಕೂಡ ಹೇಳಿದ್ದಾರೆ.

ಈ ನಡುವೆ ಕಂಪನಿಯ ಒಟ್ಟು ಷೇರುಗಳಿಂದಾದ ನಷ್ಟ 100 ಬಿಲಿಯನ್‌ ಡಾಲರ್‌ ಎಂದು ಹೇಳಲಾಗಿದೆ. ಭಾರತೀಯ ರೂಪಾಯಿಯಲ್ಲಿ 8 ಲಕ್ಷದ 19 ಸಾವಿರದ 134 ಕೋಟಿ ರೂ ನಷ್ಟ ಎಂದು ಹೇಳಲಾಗಿದೆ. ಇದರೊಂದಿಗೆ ಏಷ್ಯಾದ ಮೊದಲ ಶ್ರೀಮಂತ ಎಂಬ ಫೋರ್ಬ್ಸ್ ಪಟ್ಟಿಯಲ್ಲಿದ್ದ ಅದಾನಿ ಏಕಾಏಕಿ 16 ನೇ ಸ್ಥಾನಕ್ಕೆ ಕುಸಿದಿದ್ದಾರೆ.ಅದಾನಿ ಸಮೂಹದ ಷೇರುಗಳು ಭಾರಿ ಕುಸಿತ ಕಾಣುತ್ತಿರುವುದು ಹೂಡಿಕೆದಾರರಲ್ಲಿ ತೀವ್ರ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹೂಡಿಕೆದಾರರಿಗೆ ಎದುರಾಗಿರುವ ಅಪಾಯದ ಬಗ್ಗೆ ಚರ್ಚಿಸಲು ದೈನಂದಿನ ಸಂಸದೀಯ ಕಲಾಪವನ್ನು ಮೊಟಕುಗೊಳಿಸಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿದವು.

ಈ ನಡುವೆ ಅದಾನಿ ಸಮೂಹ ಸಂಸ್ಥೆಗಳಿಗೆ ನೀಡಿದ ಸಾಲಗಳ ಕುರಿತಂತೆ ಭಾರತೀಯ ಬ್ಯಾಂಕ್‌ಗಳಿಂದ ರಿಸರ್ವ್‌ ಬ್ಯಾಂಕ್‌ ಮಾಹಿತಿ ಕೇಳಿದೆ ಎಂದು ವರದಿಯಾಗಿದೆ.

ಈ ನಡುವೆ ಸಂಸತ್‌ ಅಧಿವೇಶನದಲ್ಲಿ ಹಿಂಡೆನ್‌ಬರ್ಗ್‌ ಮಾಡಿರುವ ಆರೋಪಗಳ ಬಗ್ಗೆ ಚರ್ಚೆ ನಡೆಸಲು ಸಮಯ ಮೀಸಲಿಡುವಂತೆ ಭಾರತದ ಸಂಸದರು ಆಗ್ರಹಿಸಿದ್ದಾರೆ. ಅದಾನಿ ಗ್ರೂಪ್‌ನಲ್ಲಿ ಸರ್ಕಾರಿ ಮಾಲೀಕತ್ವದ ಭಾರತೀಯ ಜೀವ ವಿಮಾ ನಿಗಮ ಹಾಗೂ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಕೂಡ ದೊಡ್ಡ ಹೂಡಿಕೆದಾರರಾಗಿದ್ದಾರೆ. LIC ಶೇರ್ ಮೌಲ್ಯ ಕುಸಿತವಾಗಿದೆ.ಗುರುವಾರ ಮುಂಬೈನ ಬಿಎಸ್‌ಇ ಆರಂಭಿಕ ವಹಿವಾಟಿನಲ್ಲಿ ಅದಾನಿ ಸಮೂಹದ ಎಲ್ಲಾ 10 ಷೇರುಗಳು ಕೂಡ ಕುಸಿದವು. ಅದಾನಿ ಎಂಟರ್‌ಪ್ರೈಸಸ್‌, ಅದಾನಿ ಟ್ರಾನ್ಸ್‌ಮಿಷನ್‌ ಮತ್ತು ಅದಾನಿ ಪೋರ್ಟ್ಸ್‌ ನಷ್ಟವನ್ನು ಶೇ.10ರಷ್ಟು ಕಂಡಿದೆ. ಹಿಂಡೆನ್‌ಬರ್ಗ್‌ ವರದಿಯಿಂದ ಅದಾನಿ ಕಂಪನಿ ಷೇರುಗಳ ಮಾರಾಟ ವಿಪರೀತವಾಗಿ ಹೆಚ್ಚಾಗಿದೆ.

ಗುರುವಾರ ಮಾರುಕಟ್ಟೆಗಳು ಪ್ರಾರಂಭವಾಗುವ ಸ್ವಲ್ಪ ಸಮಯದ ಮೊದಲು ಬಿಡುಗಡೆಯಾದ ವೀಡಿಯೊದಲ್ಲಿ ಸಂಸ್ಥಾಪಕ ಗೌತಮ್ ಅದಾನಿ, ತಮ್ಮ ಕಂಪನಿಗಳ ಆರ್ಥಿಕ ಸ್ಥಿತಿಗತಿ ಬಗ್ಗೆ ಇರುವ ಕಳವಳಗಳನ್ನು ತಳ್ಳಿಹಾಕಿದರು. ಎಫ್‌ಪಿಓ ರದ್ದು ಮಾಡಿದ್ದರಿಂದ ಈಗಾಗಲೇ ನಡೆಯುತ್ತಿರುವ ಯೋಜನೆಗಳು ಹಾಗೂ ಭವಿಷ್ಯದ ಯೋಜನೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.

ಹೂಡಿಕೆದಾರರನ್ನು ರಕ್ಷಣೆ ಮಾಡುವ ಕಾರಣದಿಂದ ಎಫ್‌ಪಿಓ ಮಾರಾಟವನ್ನು ರದ್ದು ಮಾಡಿದ್ದೇವೆ. ಯಾಕೆಂದರೆ, ಪ್ರಸ್ತುತ ಮಾರುಕಟ್ಟೆಯಲ್ಲಿ ನಮ್ಮ ಷೇರುಗಳು ದೊಡ್ಡ ಮಟ್ಟದಲ್ಲಿ ಇಳಿಕೆ ಕಾಣುತ್ತಿವೆ. ಎಫ್‌ಪಿಓಗೆ ಈಗ ತಾನೆ ಸಹಿ ಹಾಕಿರುವ ಈ ಹೂಡಿಕೆದಾರರು ಇದರಿಂದ ದೊಡ್ಡ ಮಟ್ಟದ ನಷ್ಟ ಕಾಣುತ್ತಾರೆ. ಆ ಕಾರಣದಿಂದ ಎಫ್‌ಪಿಓ ರದ್ದು ಮಾಡಿದ್ದಾಗಿ ಹೇಳಿದ್ದಾರೆ.ನನಗೆ ನನ್ನ ಹೂಡಿಕೆದಾರರ ಹಿತವೇ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಮತ್ತೆಲ್ಲವೂ ನಂತರದ ಸ್ಥಾನದಲ್ಲಿರುತ್ತದೆ ಎಂದು ವಿಡಿಯೋದಲ್ಲಿ ಅದಾನಿ ಹೇಳಿದ್ದಾರೆ. ಹೂಡಿಕೆದಾರರಿಗೆ ಆಗಬಹುದಾದ ನಷ್ಟವನ್ನು ಗಮನದಲ್ಲಿಟ್ಟುಕೊಂಡು ಮಾರಾಟವನ್ನು ಹಿಂಪಡೆದುಕೊಳ್ಳಲಾಗಿದೆ ಎಂದಿದ್ದಾರೆ.

ಅದಾನಿ ಗ್ರೂಪ್‌ ಈವರೆಗೂ 8.4 ಟ್ರಿಲಿಯನ್‌ ರೂಪಾಯಿ ಅಂದರೆ, 102 ಬಿಲಿಯನ್‌ ಯುಎಸ್‌ ಡಾಲರ್‌ ಹಣವನ್ನು ಷೇರುಮಾರುಕಟ್ಟೆಯಿಂದ ಕಳೆದುಕೊಂಡಿದೆ. ಅದಾನಿ ಗ್ರೂಪ್‌ನ ಒಟ್ಟು 10 ಲಿಸ್ಟೆಡ್ ಕಂಪನಿಗಳಿದ್ದು, ಮುಂಬೈ ಮಾರುಕಟ್ಟೆಯಲ್ಲಿ ಎಲ್ಲಾ 10 ಷೇರುಗಳು ಆರಂಭದಲ್ಲಿ ಕುಸಿದರೂ ಬಳಿಕ ಚೇತರಿಕೆ ಕಂಡಿದ್ದವು. ಅದಾನಿ ಎಂಟರ್‌ಪ್ರೈಸಸ್‌ ಕಂಪನಿಯ ಷೇರುಗಳು ಗುರುವಾರ ಒಂದೇ ದಿನ ಶೇ. 18ರಷ್ಟು ಕುಸಿದಿದೆ

Recent News


Leave a Comment: