KSRTC ಬಸ್-ಕಾರು ಡಿಕ್ಕಿ, ಕ್ರೈಸ್ಥ ಧರ್ಮಗುರು ಫಾ. ಆಂಥೋಣಿ ಪೀಟರ್ ಮೃತ್ಯು..

ಸುದ್ದಿಗಳು News

Posted by vidyamaana on 2024-07-24 17:11:55 |

Share: | | | | |


KSRTC ಬಸ್-ಕಾರು ಡಿಕ್ಕಿ, ಕ್ರೈಸ್ಥ ಧರ್ಮಗುರು ಫಾ. ಆಂಥೋಣಿ ಪೀಟರ್ ಮೃತ್ಯು..

ಶಿವಮೊಗ್ಗ : ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಕಾರು ಡಿಕ್ಕಿಯಾದ ಪರಿಣಾಮ ಕ್ರೈಸ್ತ ಧರ್ಮಗುರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಸಮೀಪ ಸವಳಂಗ ಚಿನ್ನಿಕಟ್ಟೆ ಬಳಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.ಕೆಎಸ್‌ಆರ್‌ಟಿಸಿ ಬಸ್ಸು ಹಾನಗಲ್‌ನಿಂದ ಶಿವಮೊಗ್ಗ ಕಡೆಗೆ ಹೋಗುತ್ತಿತ್ತುಎನ್ನಲಾಗಿದೆ.

ಕ್ರೈಸ್ತ ಧರ್ಮಗುರು ಇದ್ದ ಕಾರು ಶಿವಮೊಗ್ಗ ಕಡೆಯಿಂದ ತೆರಳುತ್ತಿತ್ತು. ಚಿನ್ನಿಕಟ್ಟೆ ಬಳಿ ಕಾರು, ಬಸ್ಸು ಮುಖಾಮುಖಿ ಡಿಕ್ಕಿಯಾಗಿವೆ. ಅಪಘಾತದ ರಭಸಕ್ಕೆ ಕಾರು ರಸ್ತೆ ಪಕ್ಕದ ಜಮೀನಿಗೆ ಉರುಳಿ ಬಿದ್ದಿದ್ದು ಸಂಪೂರ್ಣ ನುಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಶಿಕಾರಿಪುರ ಧರ್ಮಕೇಂದ್ರದ ಧರ್ಮಗುರು ಆಂಥೋಣಿ ಪೀಟರ್‌ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದ್ದು ನ್ಯಾಮತಿ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ.

 Share: | | | | |


ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ಬಲಿ ಪಡೆದ ಕೇಬಲ್ ವೈರ್

Posted by Vidyamaana on 2024-03-23 06:09:56 |

Share: | | | | |


ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ಬಲಿ ಪಡೆದ ಕೇಬಲ್ ವೈರ್

ತುಮಕೂರು, ಮಾ.22: ಸಾವು ಯಾವ ರೂಪದಲ್ಲಿ ಬರುತ್ತದೆಯೋ ಹೇಳಲು ಅಸಾಧ್ಯ. ಅದರಂತೆ ತುಮಕೂರು(Tumakuru) ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಇಪ್ಪಾಡಿ ಗ್ರಾಮದಲ್ಲಿ ಯಮನ ರೂಪದಲ್ಲಿ ಬಂದ ಕೇಬಲ್ ವೈರ್ , ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಚಿಂಚಲಕಟ್ಟೆ ಮೂಲದ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್​ವೊಬ್ಬರನ್ನ ಬಲಿ ಪಡೆದಿದೆ. ಲಕ್ಷ್ಮೀ ಬಾಯಿ ಜಾದವ್ (36), ಮೃತ ದುರ್ದೈವಿ.ಘಟನೆ ವಿವರ

ಕುಣಿಗಲ್ ತಾಲ್ಲೂಕಿನ ಇಪ್ಪಾಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಇವರು, ಇಂದು ಕೆಲಸ ಮುಗಿಸಿ ಇಪ್ಪಾಡಿಯಿಂದ ಕುಣಿಗಲ್ ಪಟ್ಟಣಕ್ಕೆ ಬೈಕ್​ನಲ್ಲಿ ಬರುವಾಗ ದಾರಿಯಲ್ಲಿ ಹಾದುಹೋಗಿದ್ದ ಕೇಬಲ್ ವೈರ್​ಗೆ ವಿದ್ಯುತ್ ತಂತಿ ತಗುಲಿ ಲಕ್ಷ್ಮೀಬಾಯಿ ಮೇಲೆ‌ ಬಿದ್ದಿದೆ. ಕೇಬಲ್ ವೈರ್ ಬಿದ್ದ ಪರಿಣಾಮ ಲಕ್ಷ್ಮೀಬಾಯಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಇನ್ನು ಬೈಕ್ ಸವಾರ ಇಪ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಲಕ್ಣ್ಮಣ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕುಣಿಗಲ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಲಕ್ಷ್ಮೀ ಬಾಯಿ ಅವರ ಮೃತದೇಹವನ್ನ ಕುಣಿಗಲ್ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದ್ದು, ಕುಣಿಗಲ್ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದ ಸ್ಥಳ ಪತ್ತೆಹಚ್ಚಿದ ಬೆಂಗಳೂರು ಪೊಲೀಸರು

Posted by Vidyamaana on 2023-11-26 22:18:38 |

Share: | | | | |


ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದ ಸ್ಥಳ ಪತ್ತೆಹಚ್ಚಿದ ಬೆಂಗಳೂರು ಪೊಲೀಸರು

ಮಂಡ್ಯ, ನ.26: ಬೆಂಗಳೂರು ನಗರದ ಬೈಯಪ್ಪನಹಳ್ಳಿ ಠಾಣಾ ಪೊಲೀಸರು ಮಂಡ್ಯ ತಾಲೂಕಿನ ಹುಲ್ಲೇನಹಳ್ಳಿ ಹಾಡ್ಯದಲ್ಲಿ ಪತ್ತೆಹಚ್ಚಿದ ಆಲೆಮನೆಯಲ್ಲಿ ಲಿಂಗ ಪತ್ತೆ ಮಾತ್ರವಲ್ಲ, ಅಲ್ಲಿ ಹೆಣ್ಣು ಭ್ರೂಣ ಹತ್ಯೆ(Female Feticide) ಕೂಡ ಮಾಡಲಾಗುತ್ತಿತ್ತು ಎಂಬ ವಿಚಾರ ಬಯಲಿಗೆ ಬಂದಿದೆ.


ಅಲೆಮನೆ ಸುತ್ತಲೂ ಕಬ್ಬಿನಗದ್ದೆಗಳು, ಓಡಾಡಲು ಬಂಡಿಜಾಡು. ಆರೋಪಿ ನವೀನ್​ಗೆ ಸಂಬಂಧಿ ಜಾಗ ಇದಾಗಿದೆ. ಕಬ್ಬಿನಗದ್ದರೆ ಒಳಭಾಗದ ಅಲೆಮನೆ ಪಕ್ಕಸಲ್ಲಿ ಭ್ರೂಣ ಪತ್ತೆ ಜೊತೆ ಹೆಣ್ಣು ಭ್ರೂಣ ಹತ್ಯೆ ಕೂಡ ನಡೆಯುತ್ತಿತ್ತು. ಸಣ್ಣ ಸುಳಿವೂ ಬಿಡದೆ ಆಲೆಮನೆಯಲ್ಲಿ ಕಳೆದ 2 ವರ್ಷಗಳಿಂದ ಭ್ರೂಣ ಲಿಂಗ ಪತ್ತೆ ದಂಧೆ ನಡೆಯುತ್ತಿತ್ತು.ಆರೋಪಿಗಳು ಮಧ್ಯವರ್ತಿಗಳಿಂದ ಗರ್ಭಿಣಿಯರ ಸಂಪರ್ಕ‌ ಮಾಡುತ್ತಿದ್ದರು. ಆಲೆಮನೆ ಕೊಠಡಿವೊಂದರಲ್ಲಿ ಸ್ಕ್ಯಾನಿಂಗ್ ಮಷಿನ್ ಇಡಲಾಗಿತ್ತು. ತಮ್ಮ ಸ್ವಂತ ವಾಹನದಲ್ಲಿ ಆಲೆಮನೆಗೆ ಕರೆತಂದು ಸ್ಕ್ಯಾನಿಂಗ್ ನಡೆಸುತ್ತಿದ್ದರು. ಸ್ಕ್ಯಾನಿಂಗ್ ವೇಳೆ ಹೆಣ್ಣು ಭ್ರೂಣ ಎಂದು ತಿಳಿದಾಕ್ಷಣವೇ ಅಬಾರ್ಷನ್ ಮಾಡಲಾಗುತ್ತದೆ.


ಈ ಬಗ್ಗೆ ಆರೋಪಿಗಳು ತನಿಖೆ ವೇಳೆ ಭಯಾನಕ ಸಂಗತಿ ಬಾಯಿ ಬಿಟ್ಟಿದ್ದಾರೆ. ಪೊಲೀಸರು ಈಗಾಗಲೇ ಮಂಡ್ಯದ‌ ನಯನ್, ನವೀನ್ ಹಾಗೂ ಶಿವನಂಜೇಗೌಡ, ವಿರೇಶ್ ಎಂಬವರನ್ನು ಬಂಧಿಸಿದ್ದು, ತನಿಖೆ ಮುಂದುವರಿದಂತೆ ಇಬ್ಬರು ವೈದ್ಯರು ಸೇರಿದಂತೆ ಐವರು ಅರೆಸ್ಟ್ ಆಗಿದ್ದಾರೆ. ಚೆನೈ ಮೂಲದ ಡಾ ತುಳಸಿರಾಮ್, ಮೈಸೂರಿನ ಡಾ. ಚಂದನ್ ಬಲ್ಲಾಳ್, ಚಂದನ್ ಪತ್ನಿ ಮೀನಾ, ಲ್ಯಾಬ್ ಟೆಕ್ನಿಶಿಯನ್ ನಿಸ್ಸಾರ್, ರಿಸಪ್ಷನಿಸ್ಟ್ ರಿಜ್ಮಾ ಬಂಧಿತರಾಗಿದ್ದಾರೆ.

ನಂತೂರು ವೃತ್ತದಲ್ಲಿ ಪ್ರಾಣ ಹಿಂಡುತ್ತಿದ್ದ ಗುಂಡಿಗಳು

Posted by Vidyamaana on 2023-09-23 09:49:40 |

Share: | | | | |


ನಂತೂರು ವೃತ್ತದಲ್ಲಿ ಪ್ರಾಣ ಹಿಂಡುತ್ತಿದ್ದ ಗುಂಡಿಗಳು

ಮಂಗಳೂರು: ನಂತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿ ಬಿದ್ದು ಕಳೆದ ಎರಡು ವಾರಗಳಲ್ಲಿ ವಾಹನ ಸವಾರರು ಚಲಿಸಲಾಗದ ಸ್ಥಿತಿ ಉಂಟಾಗಿತ್ತು. ತಿರುವಿನ ಭಾಗದಲ್ಲಿಯೇ ಇಂತಹ ಸ್ಥಿತಿಯಾಗಿದ್ದರಿಂದ ಅಲ್ಲಿ ಟ್ರಾಫಿಕ್ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬಂದಿಯೂ ಭಾರೀ ತ್ರಾಸ ಪಡುತ್ತಿದ್ದರು. ಅಲ್ಲದೆ, ಟ್ರಾಫಿಕ್ ಜಾಮ್ ಸಮಸ್ಯೆಗೂ ಕಾರಣವಾಗಿತ್ತು. ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತ ಪೊಲೀಸ್ ಸಿಬಂದಿಯೇ ಗುಂಡಿ ಬಿದ್ದ ಜಾಗಕ್ಕೆ ಜಲ್ಲಿ ಹುಡಿ ತಂದು ತಾತ್ಕಾಲಿಕ ರಿಪೇರಿ ಕೆಲಸ ಮಾಡಿದ್ದಾರೆ.


ಟ್ರಾಫಿಕ್ ಕರ್ತವ್ಯದಲ್ಲಿದ್ದ ಕದ್ರಿ ಸಂಚಾರಿ ಠಾಣೆ ವಿಭಾಗದ ಎಸ್ಐ ಈಶ್ವರ ಸ್ವಾಮಿ ಮತ್ತು ಎಎಸ್ಐ ವಿಶ್ವನಾಥ ರೈ ಅವರು ಹಾರೆ, ಗುದ್ದಲಿಯನ್ನು ಹಿಡಿದು ತಾವೇ ದುರಸ್ತಿ ಕೆಲಸ ಮಾಡಿದ್ದಾರೆ. ವಾಹನಗಳ ಸಾಗಾಟದ ನಡುವೆಯೇ ಗುಂಡಿ ಬಿದ್ದ ರಸ್ತೆಯನ್ನು ಮುಚ್ಚಿ ಸಾರ್ವಜನಿಕರ ಮೆಚ್ಚುಗೆ ಗಳಿಸಿದ್ದಾರೆ.

ನಂತೂರು ವೃತ್ತದಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿ ಜೊತೆಗೂಡುವುದರಿಂದ ಸಾವಿರಾರು ವಾಹನಗಳು ಸಂಚಾರ ನಡೆಸುತ್ತವೆ. ಉಡುಪಿ ಕಡೆಯಿಂದ ಬರುವ ದೊಡ್ಡ ಗಾತ್ರದ ವಾಹನಗಳು ಬೆಂಗಳೂರು, ಪುತ್ತೂರು, ಮಡಿಕೇರಿ ಕಡೆಗೆ ಸಾಗಲು ನಂತೂರು ವೃತ್ತದಲ್ಲಿ ಎಡಕ್ಕೆ ತಿರುವು ಪಡೆಯುತ್ತದೆ. ಅದೇ ಜಾಗದಲ್ಲಿ ಪೂರ್ತಿ ಡಾಮರು ಕಿತ್ತು ಹೋಗಿದ್ದರಿಂದ ಗುಂಡಿ ಬಿದ್ದು ಜಲ್ಲಿ ಜಾರಿ ಹೋಗಿತ್ತು. ಇದರಿಂದ ದ್ವಿಚಕ್ರ ವಾಹನ ಸವಾರರಂತೂ ಪ್ರಾಣ ಕೈಯಲ್ಲಿ ಹಿಡಿದು ಸಾಗುವ ಸ್ಥಿತಿಯಾಗಿತ್ತು. ಇತ್ತೀಚೆಗೆ 15 ದಿನಗಳಲ್ಲಿ ಮಳೆ ಹೆಚ್ಚು ಬಿದ್ದಿದ್ದರಿಂದ ಸಂಚಾರವೇ ದುಸ್ತರವಾಗಿತ್ತು. ಮಹಿಳೆಯರು ದ್ವಿಚಕ್ರ ವಾಹನದಲ್ಲಿ ಸಾಗುವಾಗ ಅಲ್ಲಿಯೇ ನಿಂತು ಪೊಲೀಸರು ಜಾಗ್ರತೆ ವಹಿಸಬೇಕಾದ ಸ್ಥಿತಿಯಿತ್ತು.


ಹೆದ್ದಾರಿ ಅಧಿಕಾರಿಗಳಿಗೆ ಪೊಲೀಸರು ತಿಳಿಸಿದ್ದರೂ, ನಿರ್ಲಕ್ಷ್ಯ ವಹಿಸಿದ್ದರಿಂದ ಇದೀಗ ಪೊಲೀಸ್ ಸಿಬಂದಿಯೇ ಜಲ್ಲಿಯನ್ನು ತಂದು ರಸ್ತೆ ರಿಪೇರಿ ಮಾಡಿಸಿದ್ದಾರೆ. ಪೊಲೀಸರ ಕೆಲಸದ ಬಗ್ಗೆ ಸಾರ್ವಜನಿಕರ ಕಡೆಯಿಂದ ಅಭಿನಂದನೆಗಳ ಮಹಾಪೂರ ಜಾಲತಾಣದಲ್ಲಿ ಹರಿದು ಬಂದಿದೆ. ಇದೇ ಮಳೆಗಾಲದಲ್ಲಿ ಮೂರನೇ ಬಾರಿ ರಸ್ತೆ ಕಿತ್ತು ಹೋಗಿದ್ದು, ಹೆದ್ದಾರಿ ಅಧಿಕಾರಿಗಳ ಕಳಪೆ ಕಾಮಗಾರಿಯನ್ನೂ ಇದು ಎತ್ತಿತೋರಿಸಿದೆ.

ಶಿರಾಡಿಘಾಟ್‌ನಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ

Posted by Vidyamaana on 2024-08-08 08:17:14 |

Share: | | | | |


ಶಿರಾಡಿಘಾಟ್‌ನಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ

ಹಾಸನ: ಶಿರಾಡಿಘಾಟ್‌ನಲ್ಲಿ ಗುಡ್ಡ ಕುಸಿದಿದ್ದ ಸ್ಥಳದಲ್ಲಿ ಮಣ್ಣನ್ನು ತೆರವು ಮಾಡಿರುವ ಅಧಿಕಾರಿಗಳು, ಇದೀಗ ಎಲ್ಲಾ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಕೊಂಚ ಮಳೆ ಕಡಿಮೆಯಾದ ಹಿನ್ನೆಲೆ ದಿನದ 24 ಗಂಟೆ ಕಾಲ ವಾಹನಗಳ ಓಡಾಟಕ್ಕೆ ಜಿಲ್ಲಾಡಳಿತ ಅವಕಾಶ ಮಾಡಿಕಟ್ಟಿದೆ.

ಕಟೀಲು ದೇವಳದ ಮುಂಭಾಗ ಹೊತ್ತಿ ಉರಿದ ಬಸ್

Posted by Vidyamaana on 2023-05-17 10:52:40 |

Share: | | | | |


ಕಟೀಲು ದೇವಳದ ಮುಂಭಾಗ ಹೊತ್ತಿ ಉರಿದ ಬಸ್

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಳದ ಮುಂಭಾಗದಲ್ಲಿ  ಬಸ್ ಹೊತ್ತಿ ಉರಿದ ಘಟನೆ ಬುಧವಾರ ಮಧ್ಯಾಹ್ನ ವರದಿಯಾಗಿದೆ.

ಬೆಂಕಿಗೆ ಆಹುತಿಯಾದ ಬಸ್ ಎಂಆರ್‌ಪಿಯಲ್ ಗೆ ಸೇರಿದ್ದು ಎನ್ನಲಾಗಿದೆ. ಇದು ಕಟೀಲು ದೇವಸ್ಥಾನದ ಮುಂಭಾಗವಾಗಿ ಮಂಗಳೂರು ಕಡೆ ತೆರಳುತ್ತಿದ್ದ ಸಂದರ್ಭ ಬಸ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.

ಘಟನೆಗೆ ಬಸ್ಸಿನಲ್ಲಿ ನಡೆದ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗಿದೆ. ತಕ್ಷಣ ಎಚ್ಚೆತ್ತುಕೊಂಡ ದೇವಸ್ಥಾನದ ಸಿಬ್ಬಂದಿ ಮತ್ತು ಸ್ಥಳೀಯರು ಬೆಂಕಿಯನ್ನು ನಂದಿಸುವಲ್ಲಿ ಸಫಲರಾಗಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.


ಭವಾನಿ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಮಾಜಿ ಸಚಿವ ಹೆಚ್ ಡಿ ರೇವಣ್ಣ

Posted by Vidyamaana on 2023-12-04 18:01:47 |

Share: | | | | |


ಭವಾನಿ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ  ಕ್ಷಮೆ ಕೇಳುತ್ತೇನೆ  ಮಾಜಿ ಸಚಿವ ಹೆಚ್ ಡಿ ರೇವಣ್ಣ

ಬೆಳಗಾವಿ, ಡಿ 04: ನನ್ ಪತ್ನಿ ಭವಾನಿ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಹೇಳಿದ್ದಾರೆ.


ತಾವಿದ್ದ ಕಾರಿಗೆ ಗುದ್ದಿದ ಬೈಕ್ ಸವಾರನಿಗೆ ಭವಾನಿ ರೇವಣ್ಣ ಬೈದಿರುವ ಬಗ್ಗೆ ಪ್ರತಿಕ್ರಿಯಿಸಿ, ಬೈಕ್ ಸವಾರನೇ ಒಂದು ಬದಿಯಿಂದ ಬಂದು ಗುದ್ದಿದ್ದಾನೆ. ಹೆಚ್ಚು ಕಡಿಮೆ ಆಗಿದ್ದರೆ ಏನಾಗುತ್ತಿತ್ತು?. ಅವರು ಏನೂ ಅಹಂಕಾರದಿಂದ ಮಾತಾಡಿಲ್ಲ. ಭವಾನಿ ಅವರು ಯಾರದ್ದೋ ಸ್ನೇಹಿತನ ಕಾರಿನಲ್ಲಿ ಹೋಗಿದ್ದರು. ಹೀಗಾಗಿ ಅವರು ಸಿಟ್ಟಲ್ಲಿ ಮಾತನಾಡಿದ್ದಾರೆ. ನಮ್ಮ‌ ಕುಟುಂಬದವರಿಂದ ಯಾರಿಗೂ ನೋವು ಮಾಡುವ ಕೆಲಸ ಆಗಿಲ್ಲ ಎಂದು ಹೇಳಿದ್ದಾರೆ.


ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ ಏನಾಗುವುದು?.


ಅಪಘಾತದ ವಿಡಿಯೋವನ್ನು ಬೇಕಂತಲೇ ಯಾರೋ ವೈರಲ್ ಮಾಡಿದ್ದಾರೆ. ಅವರು ಬೈಕ್ ಸವಾರನ ಪ್ರಾಣದ ಬಗ್ಗೆ ಮಾತನಾಡಿಲ್ಲ. ಇವರದ್ದೇ ಪ್ರಾಣ ಹೋಗಿದ್ದರೆ ಏನು ಮಾಡುವುದು?. ಆದ್ದರಿಂದ ಭವಾನಿ ಅವರ ಮಾತಿನಿಂದ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ. ಭವಾನಿ ಯಾವತ್ತೂ ಯಾರಿಗೂ ನೋವು ಮಾಡಿಲ್ಲ.


ಅಪಘಾತದ ಕುರಿತು ದೂರು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, ವಾಹನ ಅಪಘಾತ ಆದ ಮೇಲೆ ದೂರು ಕೊಡದಿದ್ದರೆ ತಪ್ಪಾಗಲ್ಲವಾ?. ಘಟನೆ ನಡೆದ ಬಳಿಕ ಠಾಣೆಗೆ ತಿಳಿಸಬೇಕಲ್ಲವಾ?. ಇನ್ಷುರೆನ್ಸ್ ಗಾಗಿ ದೂರು ನೀಡಿದ್ದಾರೆ ಅಷ್ಟೇ. ಬೈಕ್ ಸವಾರನಿಂದ ಕಾರಿನ‌ ಹಾನಿಯ ಮೊತ್ತ ಕೇಳುವುದಿಲ್ಲ. ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದರು.


ಬೈಕ್ ಸವಾರ ಕುಡಿದಿದ್ದ. ಕುಡಿದು ಬಂದು ಕಾರಿಗೆ ಮುಂದಿನಿಂದ ಗುದ್ದಿದ್ದಾನೆ. ಈತನಿಂದ ಕಾರಿನಲ್ಲಿದ್ದವರ ಪ್ರಾಣಕ್ಕೆ ತೊಂದರೆ ಆಗಿದ್ದರೆ?. ಎಷ್ಟೇ ನಿಧಾನವಾಗಿ ಹೋಗಿದ್ದರೂ ಬಂದು ಮಧ್ಯದಲ್ಲಿ ಗುದ್ದಿದ್ದಾನೆ. ಅದನ್ನು ದೊಡ್ಡ ವಿಷಯ ಮಾಡುವುದು ಬೇಡ ಎಂದು ಹೇಳಿದರು.


ಯಾರನ್ನೂ ಪ್ರಕರಣದಲ್ಲಿ ಸಿಲುಕಿಸುವ ಉದ್ದೇಶ ಹೊಂದಿರಲಿಲ್ಲ. ಅವರ ಹೇಳಿಕೆಯಿಂದ ನೋವಾಗಿದ್ದರೆ ರಾಜ್ಯದ ಜನತೆಯ ಕ್ಷಮೆ ಕೋರುತ್ತೇನೆ. ಬೈಕ್ ಸವಾರ ಮದ್ಯ ಕುಡಿದಿದ್ದ ಕಾರಣ ಅಪಘಾತ ಸಂಭವಿಸಿದೆ. ಆತನ ವಿರುದ್ಧ ದೂರು, ಕ್ರಮ ಕೈಗೊಳ್ಳಲ್ಲ. ಯಾರೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದರು.


ಭವಾನಿ ರೇವಣ್ಣ ಇದ್ದ ಕಾರಿಗೆ ಡಿಕ್ಕಿ ಹೊಡೆದ ಬೈಕ್ ಸವಾರ :


ಜೆಡಿಎಸ್ ನಾಯಕಿ ಭವಾನಿ ರೇವಣ್ಣ ಸಂಚರಿಸುತ್ತಿದ್ದ ಕಾರಿಗೆ ಬೈಕ್​ ಸವಾರನೋರ್ವ ಡಿಕ್ಕಿ ಹೊಡೆದ ಘಟನೆ ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ರಾಂಪುರ ಜಂಕ್ಷನ್​ ಬಳಿ ಭಾನುವಾರ ನಡೆದಿತ್ತು. ಈ ವೇಳೆ ಭವಾನಿ ರೇವಣ್ಣ ಬೈಕ್​ ಸವಾರರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.

Recent News


Leave a Comment: