ಕಾರು ಚಾಲನೆಯ ತರಬೇತಿ ನೀಡುವ ವೇಳೆ ಅಸಭ್ಯವಾಗಿ ವರ್ತಿಸಿದ್ದ ಆರೋಪ:ಅಣ್ಣಪ್ಪ ಮಾಲಕತ್ವದ ಮಾರುತಿ ಡ್ರೈವಿಂಗ್ ಸ್ಕೂಲ್‌ನ ಪರವಾನಗಿ ರದ್ದು

ಸುದ್ದಿಗಳು News

Posted by vidyamaana on 2024-07-23 21:09:49 |

Share: | | | | |


ಕಾರು ಚಾಲನೆಯ ತರಬೇತಿ ನೀಡುವ ವೇಳೆ ಅಸಭ್ಯವಾಗಿ ವರ್ತಿಸಿದ್ದ ಆರೋಪ:ಅಣ್ಣಪ್ಪ ಮಾಲಕತ್ವದ  ಮಾರುತಿ ಡ್ರೈವಿಂಗ್ ಸ್ಕೂಲ್‌ನ ಪರವಾನಗಿ ರದ್ದು

ಬೆಂಗಳೂರು : ಬಸವೇಶ್ವರನಗರದ ಮಾರುತಿ ಡ್ರೈವಿಂಗ್‌ ಸ್ಕೂಲ್‌ನ ಪರವಾನಗಿ ಹಾಗೂ ಅದೇ ಶಾಲೆಯ ತರಬೇತುದಾರನ ಚಾಲನಾ ಪರವಾನಗಿಯನ್ನು (ಡಿಎಲ್‌) ಸಾರಿಗೆ ಮತ್ತು ರಸ್ತೆ ಸುರಕ್ಷತಾ ಇಲಾಖೆ ರದ್ದುಗೊಳಿಸಿದೆ. 

ಯುವತಿಗೆ ಕಾರು ಚಾಲನೆಯ ತರಬೇತಿ ನೀಡುವ ವೇಳೆ ಅಸಭ್ಯವಾಗಿ ವರ್ತಿಸಿದ್ದ ಆರೋಪದ ಅಡಿ ಕಾರು ತರಬೇತಿದಾರನ ವಿರುದ್ಧ ಬಸವೇಶ್ವರನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಾದ ಬೆನ್ನಲ್ಲೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಸೂಚನೆಯಂತೆ ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ.

ನಗರದ ಯಾವುದೇ ಡ್ರೈವಿಂಗ್ ಶಾಲೆಯಲ್ಲೂ ಈ ರೀತಿಯ ಘಟನೆಗಳು ನಡೆಯಬಾರದು. ಈ ನಿಟ್ಟಿನಲ್ಲಿ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಹಾಲಕ್ಷ್ಮೀಪುರದ 18 ವರ್ಷದ ಯುವತಿ ನೀಡಿದ್ದ ದೂರು ಆಧರಿಸಿ, ಬಸವೇಶ್ವರನಗರದ ಮಾರುತಿ ಡ್ರೈವಿಂಗ್‌ ಸ್ಕೂಲ್‌ನ ತರಬೇತುದಾರ ಅಣ್ಣಪ್ಪ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಏನಿದು ಪ್ರಕರಣ?:‌

ದೂರು ನೀಡಿದ್ದ ಯುವತಿ ಕಾರು ಚಾಲನೆ ಕಲಿಯಲು ಮಾರುತಿ ಡ್ರೈವಿಂಗ್‌ ಸ್ಕೂಲ್‌ಗೆ ಸೇರಿದ್ದರು. ಅಣ್ಣಪ್ಪ ಎಂಬಾತ ಕಾರು ಚಾಲನೆ ಬಗ್ಗೆ ತರಬೇತಿ ನೀಡಿದ್ದರು. ಒಂದು ತಿಂಗಳ ಕೋರ್ಸ್‌ ಮುಕ್ತಾಯವಾದ ಮೇಲೆ ಅಣ್ಣಪ್ಪ, ನಿಮ್ಮ ಮನೆಯ ಕಾರಿನಲ್ಲೇ ಪರಿಪೂರ್ಣವಾಗಿ ಚಾಲನೆ ಬಗ್ಗೆ ಹೇಳಿಕೊಡುತ್ತೇನೆ. ಒಂದು ಗಂಟೆಯ ವಿಶೇಷ ಕ್ಲಾಸ್‌ಗೆ ₹750 ಕೊಡಬೇಕು ಎಂದು ಯುವತಿಯನ್ನು ಕೇಳಿಕೊಂಡಿದ್ದರು. ಯುವತಿ 15 ದಿನಗಳ ವಿಶೇಷ ಕ್ಲಾಸ್‌ಗೆ ಅಣ್ಣಪ್ಪ ಅವರಿಗೆ ₹10,500 ಪಾವತಿಸಿದ್ದರು. ಅದರಂತೆ ಅಣ್ಣಪ್ಪ ವಿಶೇಷ ತರಬೇತಿ ಆರಂಭಿಸಿದ್ದರು ಎಂದು ಪೊಲೀಸರು ಹೇಳಿದರು.

ಪ್ರತಿದಿನ ಯುವತಿಯ ಮನೆ ಬಳಿ ಬಂದು ಆಕೆಯ ಕಾರಿನಲ್ಲೇ ಅಣ್ಣಪ್ಪ ಚಾಲನೆ ತರಬೇತಿ ನೀಡುತ್ತಿದ್ದರು. ಜುಲೈ 7ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಯುವತಿ ಮನೆ ಬಳಿ ಬಂದಿದ್ದ ಅಣ್ಣಪ್ಪ, ಯುವತಿಯನ್ನು ಕಾರಿನಲ್ಲಿ ಕರೆದುಕೊಂಡು ಚಾಲನೆ ಬಗ್ಗೆ ಹೇಳಿಕೊಡಲು ಮುಂದಾಗಿದ್ದರು. ಬಸವೇಶ್ವರ ನಗರದ ನ್ಯಾಷನಲ್‌ ಶಾಲೆಯ ಮೇಲ್ಸೇತುವೆಯಲ್ಲಿ ತೆರಳುವಾಗ, ಯುವತಿ ಕಾರು ಚಾಲನೆ ಮಾಡುತ್ತಿದ್ದರು. ಆಗ ಅಣ್ಣಪ್ಪ ಅಸಭ್ಯವಾಗಿ ವರ್ತಿಸಿದ್ದರು ಎಂದು ಪೊಲೀಸರು ತಿಳಿಸಿದರು.

ತರಬೇತುದಾರನ ಅಸಭ್ಯ ವರ್ತನೆಯಿಂದ ಗಾಬರಿಗೊಂಡಿದ್ದ ಯುವತಿ ಕಾರನ್ನು ಮನೆಯತ್ತ ತಿರುಗಿಸಿದ್ದರು. ಅದಾದ ಮೇಲೆ ತರಬೇತುದಾರ ಸುಮ್ಮನಾಗಿದ್ದರು. ಅಣ್ಣಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಯುವತಿ ಪೊಲೀಸರಿಗೆ ದೂರು ನೀಡಿದ್ದರು.

 Share: | | | | |


ತನ್ನ ಕಸ್ಟಮರ್ಸ್ ಗಳಿಗೆ ಕೈ ಎತ್ತಿಬಿಟ್ಟ ಬಿಟ್ ಕ್ವಾಂಠ್!?

Posted by Vidyamaana on 2023-09-15 18:31:28 |

Share: | | | | |


ತನ್ನ ಕಸ್ಟಮರ್ಸ್ ಗಳಿಗೆ ಕೈ ಎತ್ತಿಬಿಟ್ಟ ಬಿಟ್ ಕ್ವಾಂಠ್!?

ಪುತ್ತೂರು : ಹಣ ಎಂದರೆ ಹೆಣ ಕೂಡ ಬಾಯಿ ಬಿಡುತ್ತದೆ ಎಂಬ ಗಾದೆಯಂತೆ ಬಹುತೇಕ ಜನರು ಹಣದ ವಿಚಾರದಲ್ಲೇ ಮೋಸ ಹೋಗುತ್ತಾರೆ. ಬಿಟ್ ಕ್ವಾಂಟ್ ಎಂಬ ಮನಿ ಆ್ಯಪ್ ನಲ್ಲಿ ಹಣ ಹೂಡಿಕೆ ಮಾಡಿದ ಜನರು ಮೋಸ ಹೋಗಿದ್ದಾರೆ. ಪುತ್ತೂರು ತಾಲೂಕಿನ ಹಲವು ಮಂದಿ ಈ ಆ್ಯಪ್ ನಲ್ಲಿ ಹಣ ಹೂಡಿ ಮೋಸ ಹೋಗಿದ್ದಾರೆ ಎಂಬ ಬಗ್ಗೆ ವರದಿಯಾಗಿದೆ.


‘ಬಿಟ್ ಕ್ವಾಂಟ್’… ಇದೊಂದು ವಿದೇಶಿ ಹಣ ಹೂಡಿಕೆಯ ಆಪ್ ಆಗಿದೆ. 2018ರಲ್ಲಿ ಆರಂಭಗೊಂಡ ಲಂಡನ್ ಯುನೈಟೆಡ್ ಕಿಂಗ್ ಡಂ ಕಂಪೆನಿ ಅಂತ ಹೇಳಲಾಗಿದೆ.


ಇದೊಂದು ಕ್ರಿಪ್ಟೋಕರೆನ್ಸಿಗಳಿಗೆ ವಿನಿಮಯ ವೇದಿಕೆಯಾಗಿದೆ. ಮೊದಲಿಗೆ ಬಿಟ್ ಕ್ವಾಂಟ್ ಎಂಬ ಆ್ಯಪ್ ಅನ್ನು ನಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬೇಕಾಗಿದೆ.


ಆ್ಯಪ್ ಡೌನ್‌ಲೋಡ್ ಮಾಡಿ ಅದರಲ್ಲಿರುವ ಅಪ್ಲಿಕೇಶನ್ ಭರ್ತಿ ಮಾಡಿದ ಬಳಿಕ ನಾವು ಹಣ ಹೂಡಿಕೆ ಮಾಡಬೇಕಾಗುತ್ತದೆ. ಇದರಲ್ಲಿ 6 ಸಾವಿರದಿಂದ 5 ಲಕ್ಷದ ತನಕ ಹಣ ಹೂಡಿಕೆ ಮಾಡಬಹುದಾಗಿದೆ. ಹೀಗೆ ಹಣ ಹೂಡಿಕೆ ಮಾಡಿದ ಗ್ರಾಹಕರಿಗೆ ಆಪ್‌ನಲ್ಲಿ 10 ಕಂಪೆನಿಗಳನ್ನು ತೋರಿಸಲಾಗುತ್ತದೆ. ಪ್ರತಿದಿನ ಸಂಜೆ ಈ ಕಂಪೆನಿಗಳಲ್ಲಿ ಟ್ರೆಡಿಂಗ್ ಮಾಡುವ ವ್ಯವಸ್ಥೆ ಇರುತ್ತದೆ. ಕೆಲವು ದಿನ ಎರಡು ಟ್ರೇಡಿಂಗ್ ಇದ್ದರೆ., ಇನ್ನುಳಿದ ದಿನ ಒಂದೇ ಟ್ರೇಡಿಂಗ್ ಇರುತ್ತದೆ. ಟ್ರೇಡಿಂಗ್ ಬಗ್ಗೆ ವಾಟ್ಸಪ್ ಗ್ರೂಪ್‌ಗಳಲ್ಲಿ ಮಾಹಿತಿ ಹಂಚಿಕೊಳ್ಳಲಾಗುತ್ತದೆ. ಇದಲ್ಲದೆ ನಾವು ಯಾವ ಕಂಪೆನಿಗೆ ಟ್ರೇಡಿಂಗ್ ಮಾಡಬೇಕು ಎನ್ನುವ ಬಗ್ಗೆಯೂ ನಮಗೆ ವಾಟ್ಸಪ್ ಗ್ರೂಪ್‌ನಲ್ಲಿ ಮಾಹಿತಿ ಬರುತ್ತದೆ.


ನಾವು 6 ಸಾವಿರ ಹಣ ಹೂಡಿಕೆ ಮಾಡಿದ ದಿನದಿಂದಲೇ ಟ್ರೇಡಿಂಗ್ ಆರಂಭವಾಗುತ್ತದೆ. ಹೊಸದಾಗಿ ಸೇರಿದ ಗ್ರಾಹಕರ ಟ್ರೇಡಿಂಗ್ ಸಿಗ್ನಲ್ ದರ ಶೇ.6, ಅತ್ಯಧಿಕ ವಹಿವಾಟು ಸಿಗ್ನಲ್ ದರ ಶೇ.10 ಆಗಿರುತ್ತದೆ.


ನಾವು ಒಬ್ಬ ವ್ಯಕ್ತಿಯನ್ನು 6 ಸಾವಿರ ಹಣ ಹೂಡಿಕೆ ಮಾಡಿ ಆಹ್ವಾನಿಸಿದಾಗ ನಮ್ಮ ಟ್ರೇಡಿಂಗ್ ಸಿಗ್ನಲ್ ದರ ಶೇ.7 ಆಗುತ್ತದೆ. 2 ಜನರನ್ನು ಸೇರಿಸಿದರೆ ಶೇ.8 ಹಾಗೇ ಹೆಚ್ಚುತ್ತಾ ಹೋಗುತ್ತದೆ. ನಾವು 8 ಜನರನ್ನು ಸೇರಿಸಿದಾಗ ನಮ್ಮ ಟ್ರೇಡಿಂಗ್ ಸಿಗ್ನಲ್ ದರ ಶೇ.10 ಆಗುತ್ತದೆ.


ಕಂಪೆನಿಯವರು ಜನರನ್ನು ನಂಬಿಸುವ ರೀತಿಯೇ ಹಣ ಹೂಡಿಕೆ ಮಾಡಿ ಟ್ರೇಡಿಂಗ್ ಮಾಡುತ್ತಾ ಹೋದಂತೆ ತನ್ನ ಚಾಣಾಕ್ಷತನವನ್ನು ತೋರಿಸುತ್ತಾ. ಹೆಚ್ಚೆಚ್ಚು ಹಣ ಪಡೆಯುತ್ತಾ ಜನರಿಗೆ ಮೋಸ ಮಾಡುತ್ತಾ ಹೋಗುತ್ತದೆ.


ಸ್ಮಾರ್ಟ್ ಯುಗದಲ್ಲಿ ನಾವು ಬಹಳಷ್ಟು ಎಚ್ಚರಿಕೆಯಿಂದ ಹೆಜ್ಜೆ ಇರಿಸಬೇಕಾದ ಅನಿವಾರ್ಯತೆ ಇದೆ. ಯಾವುದೇ ಆಮಿಷಗಳಿಗೆ ಬಲಿಯಾಗಬೇಡಿ ಅದರಲ್ಲೂ ಹಣದ ವಿಚಾರದಲ್ಲಿ ನಾವು ಬಹಳ ಜಾಗರೂಕತೆಯಿಂದ ವ್ಯವಹರಿಸಬೇಕಾಗಿದೆ

ಪರ್ಬ ಪರ್ಬ ಎಲ್ಲಾಂಜಿ ಐತಾರ ಬಂಟರ ಭವನೊಡ್

Posted by Vidyamaana on 2023-07-21 02:09:52 |

Share: | | | | |


ಪರ್ಬ  ಪರ್ಬ ಎಲ್ಲಾಂಜಿ ಐತಾರ ಬಂಟರ ಭವನೊಡ್

ಪುತ್ತೂರು: ಯುವ ಬಂಟರ ಸಂಘ ಪುತ್ತೂರು ತಾಲೂಕು ಇದರ ಆಶ್ರಯದಲ್ಲಿ ಯುವ ಬ೦ಟರ ದಿನಾಚರಣೆಯ ಪ್ರಯುಕ್ತ ಜು. 23 ರಂದು ತುಳುನಾಡ ಬ೦ಟೆರೆ ಪರ್ಬ-2023 ಎನ್ನುವ ವಿಶಿಷ್ಟ ಸಾಂಸ್ಕೃತಿಕ ಸ್ಪರ್ಧೆಗಳು ಪುತ್ತೂರು ಕೊಂಬೆಟ್ಟು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಲಿದೆ ಎಂದು ಯುವ ಬಂಟರ ಸಂಘದ ಅಧ್ಯಕ್ಷ ಶಶಿರಾಜ್‌ ರೈ ಮುಂಡಾಳೆಗುತ್ತುರವರು ತಿಳಿಸಿದ್ದಾರೆ. ತುಳುನಾಡ ಬಂಟೆರೆ ಪರ್ಬ ಕಾರ್ಯಕ್ರಮದಲ್ಲಿ ತುಳುನಾಡು ಮತ್ತು ಬಂಟ ಸಂಸ್ಕೃತಿಯ ಪ್ರದರ್ಶನಕ್ಕೆ ಮಾತ್ರ ಅವಕಾಶವನ್ನು ನೀಡಲಾಗಿದೆ. ಕಳೆದ ವರ್ಷ ನನ್ನ ಅವಧಿಯಲ್ಲಿ ಹಿರಿಯ ಬಂಟ ಚೇತನಗಳ ಸ್ಮರಣೆ ಮಾಡುವ ಬಂಟ ಸ್ಮೃತಿ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ. ಈ ಬಾರಿ, ಗಾಂಧಿವಾದಿಯಾಗಿ ಇತ್ತೂರಿನ ಅಭಿವೃದ್ಧಿಗೆ ಬಹಳಷ್ಟು ಕೊಡುಗೆಯನ್ನು ನೀಡಿರುವ ನಿವೃತ್ತ ತಹಶೀಲ್ದಾರ್ ಚಿಲ್ಲೆತ್ತಾರು ಕೋಚಣ್ಣ ರೈ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮ ರಥವನ್ನು ಸಮರ್ಪಿಸಿದ ಜಯಕರ್ನಾಟಕ ಸಂಸ್ಥಾಪಕ ಎನ್. ಮುತ್ತಪ್ಪ ರೈ ಹಾಗೂ ಬೆಂಗಳೂರು ಬಂಟರ ಸಂಘದ ಅಧ್ಯಕ್ಷರಾಗಿ ಹಲವಾರು ಬಂಟರ ಅಭಿವೃದ್ಧಿಗೆ ಸಹಕಾರಿಯಾಗಿದ್ದ ಡಾ. ಮುಂಡಾಳೆಗುತ್ತು ತಿಮ್ಮಪ್ಪ ರೈರವರುಗಳ ಸ್ಮೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಸವಣೂರು ವಿಶ್ವಜಿತ್ ಶೆಟ್ಟಿಯವರು ಬ೦ಟ ಸಮಾಜದ ಪರವಾಗಿ ಗೌರವ ಸ್ವೀಕರಿಸಲಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆ:

ಕಾರ್ಯಕ್ರಮವನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್‌ ಕುಮಾರ್ ರೈ ಮಾಲಾಡಿರವರು ಉದ್ಘಾಟಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ, ಮುಂಬಯಿ ಹೇರಂಭಾ ಗ್ರೂಪ್‌ನ ಆಡಳಿತ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ, ಇಂಟರ್‌ನ್ಯಾಶನಲ್ ಸಿವಿಲ್ ಸರ್ವೆ೦ಟ್ ನಿತ್ಯಾನಂದ ಶೆಟ್ಟಿ,ಮುಂಬಯಿ ನಿವೃತ್ತ ಪೊಲೀಸ್ ಡೆಟಿ ಕಮಿಷನರ್ ಶಾರ್ಪ್‌ ಶೂಟರ್ ಖ್ಯಾತಿಯ ಪ್ರಕಾಶ್ ಭಂಡಾರಿ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಂಗಳೂರು ಮಹಾನಗರ ಪಾಲಿಕೆಯ ಜಂಟಿ ಆಯುಕ್ತ ವಾಣಿ ಎಸ್ ಆಳ್ವ, ಉದ್ಯಮಿಗಳಾದ ಗುಣರಂಜನ್ ಶೆಟ್ಟಿ, ಪ್ರಕಾಶ್ ರೈ ದೇರ್ಲ, ಮಾಜಿ ಶಾಸಕರಾದ ಶಕುಂತಳಾ ಟಿ.ಶೆಟ್ಟಿ, ಮಲ್ಲಿಕಾ ಪ್ರಸಾದ್‌ ಸಹಿತ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಜೊತೆಯಾಗಲಿದ್ದಾರೆ.

ಈ ಕಾರ್ಯಕ್ರಮವು ಒಂದು ಈವೆಂಟ್ ರೀತಿಯಲ್ಲಿ ನಡೆಯಲಿದ್ದು, ಸಭಾ ಕಾರ್ಯಕ್ರಮವು ಚಿಕ್ಕದಾಗಿ ಚೊಕ್ಕದಾಗಿ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಖ್ಯಾತ ನಿರೂಪಕ ನಿತೇಶ್ ಎಕ್ಕಾರುರವರು ಕಾರ್ಯಕ್ರಮದ ಮುಖ್ಯ ನಿರೂಪಕರಾಗಿರುತ್ತಾರೆ ಎಂದು ಶಶಿರಾಜ್ ರೈ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸಿನಿಮಾ ತಾರೆಯರು:

          ಕಾರ್ಯಕ್ರಮದ ಮಧ್ಯೆ ನಮ್ಮನ್ನು ರಂಜಿಸಲು ನಮ್ಮೂರಿನ ಬಂಟಿ ತಾರೆಯರಾದ ವಿಜಯ್‌ ಕುಮಾರ್ ಕೊಡಿಯಾಲ್‌ಬೈಲ್‌, ರೂಪೇಶ್ ಶೆಟ್ಟಿ, ರಚನಾ ಶೆಟ್ಟಿ, ಯಶ್ ಶೆಟ್ಟಿ, ದೀಪಕ್ ರೈ ಪಾಣಾಜೆ, ಸುಂದರ ರೈ ಮಂದಾರ, ಗಾಯಕ ನಿಶಾನ್ ರೈ ಮಠಂತಬೆಟ್ಟು, ಸಂಗೀತ ನಿರ್ದೇಶಕ ಪ್ರಸಾದ್, ಪ್ರೋ ಕಬಡ್ಡಿ ಆಟಗಾರ ಪ್ರಶಾಂತ್ ರೈ ಕೈಕಾರ ಸೇರಿದಂತೆ ಹಲವಾರು ಮಂದಿ ಸಾಧಕರು ಭಾಗವಹಿಸಲಿದ್ದಾರೆ ಎಂದು ಶಶಿರಾಜ್ ರೈ ಮುಂಡಾಳೆಗುತ್ತು ತಿಳಿಸಿದರು.

ಕಾರ್ಯಕ್ರಮದ ಸಂಚಾಲಕರುಗಳಾದ ಹರ್ಷಕುಮಾರ್ ರೈ ಮಾಡಾವು, ಭಾಗ್ಯಶ್ ರೈ ಕೆಯ್ಯೂರು ತಾಲೂಕು ಯುವ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ರಂಜಿನಿ ಶೆಟ್ಟಿ, ಕೋಶಾಧಿಕಾರಿ ಅಶೋಕ್ ಶೆಟ್ಟಿ ಕೆ.ಸಿ., ಉಪಾಧ್ಯಕ್ಷ ಗಣೇಶ್‌ ಶೆಟ್ಟಿ ನೆಲ್ಲಿಕಟ್ಟೆ, ರವಿಪ್ರಸಾದ್ ಶೆಟ್ಟಿ ಬನ್ನೂರು, ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಪವನ್‌ ಶೆಟ್ಟಿ ಕಂಬಳತಡ್ಡ ಪ್ರತಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

       ತುಳುನಾಡ ಬಂಟೆರೆ ಪರ್ಬ ಕಾರ್ಯಕ್ರಮ ವೈಶಿಷ್ಟ್ಯಪೂರ್ಣವಾದ ಕಾರ್ಯಕ್ರಮವಾಗಿ ಮೂಡಿಬರಲಿದೆ. ಸುಮಾರು 3 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ. ಮಧ್ಯಾಹ್ನದ ಭೋಜನದ ವ್ಯವಸ್ಥೆ ಮುತ್ತಪ್ಪ ರೈಯವರ ಕುಟುಂಬಸ್ಥರು ಮತ್ತು ಮನೆಯವರಿಂದ ನಡೆಯಲಿದೆ. ಬೆಳಿಗ್ಗೆ 9 ರಿಂದ ಸಂಜೆ 6 ರತನಕ ನಿರಂತರವಾಗಿ ನಡೆಯುವ ಕಾರ್ಯಕ್ರಮದಲ್ಲಿ ಬಂಟ ಬಾಂಧವರು ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಿ ಪ್ರೋತ್ಸಾಹವನ್ನು ನೀಡಬೇಕಾಗಿ ವಿನಂತಿ, ಕಾರ್ಯಕ್ರಮವು ಬಂಟರ ಯಾನೆ ನಾಡವರ ಮಾತೃಸಂಘ, ಪುತ್ತೂರು ತಾಲೂಕು ಸಮಿತಿ, ತಾಲೂಕು ಬಂಟರ, ಮಹಿಳಾ ಹಾಗೂ ವಿದ್ಯಾರ್ಥಿ ಬಂಟರ ಸಂಘದ ಸಹಕಾರದಲ್ಲಿ ನಡೆಯಲಿದೆ. ಯುವ ಬಂಟರ ಸಂಘದ ಆಶ್ರಯದಲ್ಲಿ ಪ್ರತಿ ವರ್ಷ ನಡೆಯುವ ಗಣಹೋಮ, ಶ್ರೀ ಸತ್ಯ ನಾರಾಯಣ ಪೂಜೆಯು ಜು. 22 ರಂದು ಪುತ್ತೂರು ಬಂಟರ ಭವನದಲ್ಲಿ ಬೆಳಿಗ್ಗೆ ನಡೆಯಲಿದೆ.

ಶಶಿರಾಜ್ ರೈ ಮುಂಡಾಳಗುತ್ತು-ಅಧ್ಯಕ್ಷರು ತಾಲೂಕು ಯುವ ಬಂಟರ ಸಂಘ ಪುತ್ತೂರು.

BIG NEWS : ವಿಧಾನಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕಾಂಗ್ರೆಸ್‌ ನೂತನ ಸಂಸದ ಇ.ತುಕಾರಾಂ

Posted by Vidyamaana on 2024-06-14 18:14:17 |

Share: | | | | |


BIG NEWS : ವಿಧಾನಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕಾಂಗ್ರೆಸ್‌ ನೂತನ ಸಂಸದ ಇ.ತುಕಾರಾಂ

ಬೆಂಗಳೂರು : ಬಳ್ಳಾರಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ನೂತನ ಸಂಸದರಾಗಿ ಆಯ್ಕೆಯಾದ ಕಾಂಗ್ರೆಸ್ಸಿನ ಇ.ತುಕಾರಾಂ ಅವರು ಇಂದು ವಿಧಾನಸಭೆ ಸದಸ್ಯ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದರು.ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿಗೆ ಇ. ತುಕಾರಾಮ್ ಅವರು ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.

ಫುಲ್ ಟೈಟಾಗಿ ರಸ್ತೆಯಲ್ಲೇ ತೂರಾಡಿದ ಖ್ಯಾತ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಬಿ ವಿಡಿಯೋ ವೈರಲ್

Posted by Vidyamaana on 2024-08-05 22:01:09 |

Share: | | | | |


ಫುಲ್ ಟೈಟಾಗಿ ರಸ್ತೆಯಲ್ಲೇ ತೂರಾಡಿದ ಖ್ಯಾತ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಬಿ ವಿಡಿಯೋ ವೈರಲ್

ಮುಂಬೈ :ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ನಡೆಯಲು ಆಗದಷ್ಟು ಫುಲ್ ಟೈಟಾಗಿ ತೂರಾಡಿದ್ದಾರೆ.ಅವರು ನಡೆಯಲು ಕಷ್ಟಪಡುತ್ತಿರುವ ಮತ್ತು ಸರಿಯಾಗಿ ನಿಲ್ಲಲು ಸಾಧ್ಯವಾಗದೇ ಬೈಕ್‌ ಹಿಡಿದುಕೊಂಡು ನಿಲ್ಲಲು ಪ್ರಯತ್ನಿಸಿದ ವಿಡಿಯೋ ವೈರಲ್ ಆಗಿದೆ.

ಕಾಂಬ್ಳಿ ಅವರು ನಡೆಯಲು ಕಷ್ಟಪಡುವುದನ್ನು ನೋಡಲಾಗದ ಕೆಲವರು ಅವರಿಗೆ ಸಹಾಯ ಮಾಡಿದ್ದಾರೆ. ಘಟನೆಯ ವೀಡಿಯೊವನ್ನು ಹಲವಾರು ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

2013ರಲ್ಲಿ ಚೆಂಬೂರಿನಿಂದ ವಾಹನ ಚಲಾಯಿಸಿಕೊಂಡು ಬರುತ್ತಿದ್ದಾಗ ಕಾಂಬ್ಳಿ ಅವರಿಗೆ ಹೃದಯಾಘಾತವಾಗಿತ್ತು. ಪೊಲೀಸ್ ಅಧಿಕಾರಿಯೊಬ್ಬರು ಲೀಲಾವತಿ ಆಸ್ಪತ್ರೆಗೆ ಕರೆದೊಯ್ದು ಪ್ರಾಣ ಉಳಿಸಿದ್ದರು. 52 ವರ್ಷ ವಯಸ್ಸಿನ ಅವರು ತಮ್ಮ ಎರಡು ಬ್ಲಾಕ್ ಅಪಧಮನಿಗಳಲ್ಲಿ ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಿದ್ದರು.

ಕಾಂಬ್ಳಿ ತಮ್ಮ ವೃತ್ತಿಜೀವನದ ಆರಂಭಿಕ ಹಂತಗಳಲ್ಲಿ ದೇಶೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಸಮೃದ್ಧ ರನ್ ಗಳಿಸುತ್ತಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಎಡಗೈ ಆಟಗಾರ ಕಾಂಬ್ಳಿ 129 ಪಂದ್ಯಗಳಲ್ಲಿ 9965 ರನ್‌ಗಳಿಗೆ 59.67 ಸರಾಸರಿ ಹೊಂದಿದ್ದರು.

ರೋಟರಿ ಸೆಂಟ್ರಲ್ ನಿಂದ ಮನೆಗೊಂದು ಗಿಡ

Posted by Vidyamaana on 2023-07-28 03:15:42 |

Share: | | | | |


ರೋಟರಿ ಸೆಂಟ್ರಲ್ ನಿಂದ ಮನೆಗೊಂದು ಗಿಡ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ಪ್ರಶಾಂತಿ ಸದ್ಭಾವನ ಟ್ರಸ್ಟ್ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ವತಿಯಿಂದ ಕೇಪುಳು ಸಿಗಂದೂರು ಮನೆಯಲ್ಲಿ ಮನೆಗೊಂದು ಗಿಡ ಕಾರ್ಯಕ್ರಮ ನಡೆಯಿತು.


ಮೈಸೂರಿನ ಅವಧೂತರಾದ ಅರ್ಜುನ್ ಮಹಾರಾಜ್ ಗುರೂಜಿಯವರು ಗಿಡ ವಿತರಣೆಗೆ ಚಾಲನೆ ನೀಡಿದರು.


ಸಿಗಂದೂರು ಮನೆಯ ಡಾ ಸಂತೋಷ್ ಪ್ರಭು, ಪ್ರಶಾಂತಿ ಸದ್ಭಾವನಾ ಟ್ರಸ್ಟ್ ನ ಮದುಸೂದನ್ ನಾಯಕ್, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷ ಡಾ. ರಾಜೇಶ್ ಬೆಜ್ಜಂಗಳ, ಮೆಂಬರ್ಶಿಪ್ ಡೆವಲಪ್ ಮೆಂಟ್ ಚೇರ್ ಮೇನ್ ಅಶ್ರಫ್, ಸವಣೂರು ವಿದ್ಯಾರಶ್ಮಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ, ಸದಸ್ಯರಾದ ವಸಂತ ಶಂಕರ್, ಉಪನ್ಯಾಸಕಿ ಗೀತಾ ವಸಂತ್ ಉಪಸ್ಥಿತರಿದ್ದರು.

ಇಂದು (ಜೂನ್ 30)ಹಾಜಿ ಮುಸ್ತಫಾ ಕೆಂಪಿ ಅವರಿಗೆ ಹುಟ್ಟೂರ ಸಂತಾಪ

Posted by Vidyamaana on 2023-06-30 04:42:52 |

Share: | | | | |


ಇಂದು (ಜೂನ್ 30)ಹಾಜಿ ಮುಸ್ತಫಾ ಕೆಂಪಿ ಅವರಿಗೆ ಹುಟ್ಟೂರ ಸಂತಾಪ

ಉಪ್ಪಿನಂಗಡಿ: ಇತ್ತೀಚೆಗಷ್ಟೇ ನಿಧನರಾದ ಮುಸ್ತಫಾ ಕೆಂಪಿ ಹಾಜಿ ಅವರಿಗೆ ಶ್ರದ್ಧಾಂಜಲಿ ಕೋರಿ ಜೂನ್ 30ರಂದು ಸಂಜೆ 4.30ಕ್ಕೆ ಉಪ್ಪಿನಂಗಡಿ ಎಚ್.ಎಂ. ಹಾಲ್ ನಲ್ಲಿ ಹುಟ್ಟೂರ ಸಂತಾಪ ಆಯೋಜಿಸಲಾಗಿದೆ.

ನಾಡಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಅವಿಶ್ರಾಂತ ದುಡಿದ ಉಪ್ಪಿನಂಗಡಿಯ ಹೆಮ್ಮೆಯ ಪುತ್ರ ಮುಸ್ತಫಾ ಕೆಂಪಿ ಅವರಿಗೆ ಉಪ್ಪಿನಂಗಡಿ ನಾಗರಿಕರ ವತಿಯಿಂದ ಹುಟ್ಟೂರ ಸಂತಾಪ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Recent News


Leave a Comment: