ಹತ್ತೂರ ಒಡೆಯನ ನೆಲಕ್ಕೆ ಕಾಲಿಟ್ಟ MRPL ತೆಂಕಿಲದಲ್ಲಿ ಮಹೇಶ್ವರ ಪೆಟ್ರೋಲಿಯಂ ಶುಭಾರಂಭ

ಸುದ್ದಿಗಳು News

Posted by vidyamaana on 2024-07-23 21:30:52 |

Share: | | | | |


ಹತ್ತೂರ ಒಡೆಯನ ನೆಲಕ್ಕೆ ಕಾಲಿಟ್ಟ MRPL ತೆಂಕಿಲದಲ್ಲಿ ಮಹೇಶ್ವರ ಪೆಟ್ರೋಲಿಯಂ ಶುಭಾರಂಭ

ಪುತ್ತೂರು: ಪೆಟ್ರೋಲಿಯಂ ಉತ್ಪನ್ನಗಳ ತಯಾರಿಕಾ ಸಂಸ್ಥೆ ಒ.ಎನ್.ಜಿ.ಸಿ.ಯ ಅಂಗ ಸಂಸ್ಥೆಯಾಗಿರುವ ಎಂ.ಆರ್.ಪಿ.ಎಲ್.ನ ಹೈಕ್ಯೂ ರಿಟೇಲ್ ಔಟ್ ಲೆಟ್ ಮಹೇಶ್ವರ ಪೆಟ್ರೋಲಿಯಂ ಜು.21ರಂದು ಮಾಣಿ-ಮೈಸೂರು ರಾಷ್ಟಿಯ ಹೆದ್ದಾರಿಯ ಪುತ್ತೂರಿನ ಬೈಪಾಸ್ ರಸ್ತೆಯ ತೆಂಕಿಲದಲ್ಲಿ ವಿವಿಧ ಗಣ್ಯರ ಸಮ್ಮುಖದಲ್ಲಿ ಶುಭಾರಂಭ ಗೊಂಡಿತ್ತು . ಸಭಾ ಕಾರ್ಯಕ್ರಮಕ್ಕೂ ಮೊದಲು ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಸಂಸ್ಥೆಯ ಕಚೇರಿಯನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಸವಣೂರು ವಿದ್ಯಾಸಂಸ್ಥೆಗಳ ಸಂಚಾಲಕರಾಗಿರುವ ಸವಣೂರು ಸೀತಾರಾಮ ರೈ, ಸ್ಥಳೀಯ ನಗರ ಸಭಾ ಸದಸ್ಯೆ ಯಶೋಧಾ ಪೂಜಾರಿ ಮತ್ತು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಪೆಟ್ರೋಲ್ ಹಾಕುವ ಯಂತ್ರಗಳ ರಿಬ್ಬನ್ ಕತ್ತರಿಸುವ ಮೂಲಕ ಸಾಂಕೇತಿಕವಾಗಿ ತೈಲ ತುಂಬುವ ಕಾರ್ಯಕ್ಕೆ ಚಾಲನೆಯನ್ನು ನೀಡಿದರು. ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾಗಿರುವ ವಾಮನ್ ಪೈ ಅವರು ಉಚಿತ ನೈಟ್ರೋಜನ್ ಪೂರೈಕ್ ವ್ಯವಸ್ಥೆಯನ್ನು ಉದ್ಘಾಟಿಸಿದರು.

ಬಳಿಕ, ಎವಿಜಿ ಇಂಗ್ಲಿಷ್ ಮೀಡಿಯಂ ಶಾಲೆಯ ಪ್ರಾಂಶುಪಾಲೆ ಅವರ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮ ಪ್ರಾರಂಭ ಗೊಂಡಿತ್ತು . ಮಹೇಶ್ವರ ಪೆಟ್ರೋಲಿಯಂ ಸಂಸ್ಥೆಯ ಮಾಲಕರಾಗಿರುವ ಶಿವಪ್ರಸಾದ್ ಶೆಟ್ಟಿ ಕಿನಾರ ಅವರು ಅತಿಥಿ ಗಣ್ಯರನ್ನು ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಸ್ವಾಗತಿಸಿದರು. ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಮಾಜಿ ಶಾಸಕ ಸಂಜೀವ ಮಠಂದೂರು ಸಹಿತ ವೇದಿಕೆಯಲ್ಲಿದ್ದ ಅತಿಥಿ ಗಣ್ಯರು ದೀಪ ಪ್ರಜ್ವಲಿಸುವ ಮೂಲಕ ಮಹೇಶ್ವರ ಪೆಟ್ರೋಲಿಯಂ ಸಂಸ್ಥೆಯ ಕಾರ್ಯಾಚರಣೆಗೆ ಅಧಿಕೃತ ಚಾಲನೆಯನ್ನು ನೀಡಿದರು.

ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಆನುವಂಶಿಕ ಅರ್ಚಕರಾಗಿರುವ ಗಣೇಶ್ ಭಟ್ ಅವರು ಮಾತನಾಡಿ, ತಲಪಾಡಿಯ ದುರ್ಗಾಪರಮೇಶ್ವರಿ ದೇವರು ಈ ಸಂಸ್ಥೆಯ ಮಾಲಕರಾಗಿರುವ ಶಿವಪ್ರಸಾದ್ ಶೆಟ್ಟಿ ಅವರಿಗೆ ಕುಲದೇವರಾಗಿರುವ ಕಾರಣ ತಲಪಾಡಿ ಕ್ಷೇತ್ರöಕ್ಕೂ ಪುತ್ತೂರಿಗೂ ವಿಶೇಷ ನಂಟಿದೆ ಎಂದು ಹೇಳಿದರು. ಶಿವಪ್ರಸಾದ್ ಶೆಟ್ಟಿ ಅವರು ದೈವಭಕ್ತರಾಗಿದ್ದು ಅವರ ಸತ್ಕರ್ಮ ಮತ್ತು ದೇವರ ಮೇಲೆ ಅವರಿಟ್ಟ ಭಕ್ತಿ ಹಾಗೂ ಗುರು-ಹಿರಿಯರ ಮೇಲಿನ ಗೌರವ ಅವರನ್ನು ಇಂದು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ದೈವ-ದೇವರ ಅನುಗ್ರಹದೊಂದಿಗೆ ಈ ನೂತನ ಸಂಸ್ಥೆಯು ಉತ್ತಮ ಸೇವೆಯ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿ ಇನ್ನಷ್ಟು ಹೆಸರುವಾಸಿಯಾಗಲಿ ಎಂದು ಅವರು ಶುಭಾಶೀರ್ವಾದ ನೀಡಿದರು.

Additional Image

ದ.ಕ. ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಭಗವಂತನನ್ನು ತೋರಿಸುವವ ಗುರು, ಜ್ಞಾನವನ್ನು ಕೊಡುವವ ಗುರು ಎಂಬ ಮಾತನ್ನು ನಮ್ಮ ಹಿರಿಯತು ಹೇಳಿದ್ದಾರೆ. ಅಂತಹ ಗುರುವಿನ ಪ್ರೇರಣೆ ಇರತಕ್ಕಂತಹ ವೇದವ್ಯಾಸ ಮಹರ್ಷಿಗಳ ಜನ್ಮದಿನದ ಪುಣ್ಯಸಂದರ್ಭವಾಗಿರುವ ಈ ಗುರುಪೂರ್ಣಮಿಯ ದಿನದಂದು ಈ ಪುತ್ತೂರಿನ ಪುಣ್ಯ ನೆಲದಲ್ಲಿ ಮಹೇಶ್ವರ ಪೆಟ್ರೋಲಿಯಂ ಸಂಸ್ಥೆ ಉದ್ಘಾಟನೆಗೊಂಡಿರುವುದು ಈ ಸಂಸ್ಥೆಗೆ ಗುರುಹಿರಿಯರ ಆಶೀರ್ವಾದ ಇದೆ ಎಂಬುದಕ್ಕೆ ಸ್ಪಷ್ಟ ನಿದರ್ಶನ ಎಂದು ಹೇಳಿದರು. ಈ ಸಂಸ್ಥೆಯು ಎಂ.ಆರ್.ಪಿ.ಎಲ್.ನ ಒಂದಹ ಅತ್ಯುನ್ನತ ಸಂಸ್ಥೆಯಾಗಿ ಬೆಳೆಯುತ್ತದೆ, ಮಾತ್ರವಲ್ಲದೇ ಶಿವಪ್ರಸಾದ್ ಶೆಟ್ಟಿ ಅವರು ಓರ್ವ ಯಸಸ್ವಿ ಪೆಟ್ರೋಲಿಯಂ ಉದ್ಯಮಿಯಾಗಿ ಬೆಳೆಯುತ್ತಾರೆ ಎಂಬ ವಿಶ್ವಾಸವನ್ನು ಕಟೀಲ್ ಅವರು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದರು. ಶಿವಪ್ರಸಾದ್ ಅವರು ಭೂವ್ಯವಹಾರದಲ್ಲಿ ಓರ್ವ ಯಶಸ್ವಿ ಉದ್ಯಮಿಯಾಗಿ ಪುತ್ತೂರಿನ ಮಟ್ಟಿಗೆ ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಶ್ರೀಮಂತಿಕೆ ಬಂದಾಗ ಕೆಲವರಿಗೆ ಎಲ್ಲವೂ ಮರೀತದೆ, ಆದರೆ ಶಿವಪ್ರಸಾದ್ ಅವರು ತಮ್ಮಲ್ಲಿರುವ ಹೃದಯ ಶ್ರೀಮಂತಿಕೆಯಿAದ ತಮ್ಮ ವ್ಯವಹಾರದ ಜೊತೆಗೆ ಸಾಮಾಜಿಕ ಕಾರ್ಯದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇನ್ನು ಶಿವಪ್ರಸಾದ್ ಅವರು ಓರ್ವ ಧಾರ್ಮಿಕ ಮನೋಭಾವದ ವ್ಯಕ್ತಿ ಎಂಬುದಕ್ಕೆ ಉದಾಹರಣೆಯಾಗಿ, ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಸಂದರ್ಭದಲ್ಲಿ ಒಂದು ಗುಡಿ ನಿರ್ಮಾಣದ ಸಂಪೂರ್ಣ ಜವಾಬ್ದಾರಿ ತನ್ನದು ಎಂದು ಮಾತುಕೊಟ್ಟು ಅದರಂತೆ ನಡೆದುಕೊಂಡ ವಿಚಾರವನ್ನು ಕಟೀಲ್ ಅವರು ಸಭೆಯ ಮುಂದೆ ಬಿಚ್ಚಿಟ್ಟರು. ತೈಲೋದ್ಯಮ ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ದೇಶಾದ್ಯಂತ ಕ್ರಾಂತಿಕಾರಿ ಬದಲಾವಣೆಗಳಾಗಿದ್ದು ಎಂ.ಆರ್.ಪಿ.ಎಲ್, ಭಾರತ್ ಪೆಟ್ರೋಲಿಯಂ ಸಹಿತ ಎಲ್ಲಾ ಸಂಸ್ಥೆಗಳೂ ಸ್ಪರ್ಧಾತ್ಮಕ ವ್ಯವಹಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಇದು ಈ ಕ್ಷೇತ್ರದಲ್ಲಿ ಅಪರಿಮಿತ ಅವಕಾಶಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು. ಪುತ್ತೂರು ಪರಿಸರದಲ್ಲಿ ಎಂ.ಆರ್.ಪಿ.ಎಲ್.ನ ಪ್ರಥಮ ಔಟ್ ಲೆಟ್ ಪ್ರಾರಂಭಿಸುವ ಅವಕಾಶ ಶಿವಪ್ರಸಾದ್ ಅವರಿಗೆ ಸಿಕ್ಕಿರುವುದಕ್ಕೆ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸುವುದಾಗಿ ಮತ್ತು ಈ ಉದ್ಯಮದಲ್ಲಿ ಶಿವಪ್ರಸಾದ್ ಅವರಿಗೆ ಯಶಸ್ಸು ಲಭಿಸಲಿ ಎಂಬ ಸದಾಶಯದ ನುಡಿಗಳನ್ನು ನಳಿನ್ ಕುಮಾರ್ ಕಟೀಲ್ ನೀಡಿದರು. 

Additional Image


Additional Image

ವ್ಯಕ್ತಿಯೊಬ್ಬರು ಉದ್ಯಮದಲ್ಲಿ ಬೆಳೆದರೂ ಕೂಡ ಹೇಗೆ ತನ್ನ ಪಾಡಿಗೆ ತನ್ನ ವ್ಯವಹಾರವನ್ನು ನಡೆಸಿಕೊಂಡು ಸಾಮಾಜಿಕವಾಗಿಯೂ, ಧಾರ್ಮಿಕವಾಗಿಯೂ ತನ್ನನ್ನು ತೊಡಗಿಸಕೊಳ್ಳುತ್ತಾರೆ ಎಂಬುದಕ್ಕೆ ಶಿವಪ್ರಸಾದ್ ಅವರು ಉತ್ತಮ ಉದಾಹರಣೆಯಾಗಿದ್ದಾರೆ ಎಂದು ಅಶೋಕ್ ಕುಮಾರ್ ರೈ ಹೇಳಿದರು. ಕಳೆದ ಸಲ ಮಹಾಲಿಂಗೇಶ್ವರ ದೇವರಿಗೆ ಒಂದಷ್ಟು ಜನರ ಸಹಕಾರದೊಂದಿಗೆ ಬಂಗಾರದ ಮಾಲೆಯನ್ನು ಒಪ್ಪಿಸುವಲ್ಲಿ ಮುಂದಾಳತ್ವವನ್ನು ಶಿವಪ್ರಸಾದ್ ಅವರು ವಹಿಸಿಕೊಂಡಿರುವುದು ಅವರಲ್ಲಿರುವ ಧಾರ್ಮಿಲ ಪ್ರಜ್ಞೆಗೆ ಸಾಕ್ಷಿ ಎಂಬ ವಿಚಾರವನ್ನು ಶಾಸಕರು ಈ ಸಂದರ್ಬದಲ್ಲಿ ವಿಶೇಷವಾಗಿ ಶ್ಲಾಘಿಸಿದರು.

 Share: | | | | |


ತರೀಕೆರೆಯಲ್ಲಿ ಮೈತ್ರಿ ಅಭ್ಯರ್ಥಿಗಳದ ಡಾ. ಧನಂಜಯ ಸರ್ಜಿ ಮತ್ತು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್. ಎಲ್. ಭೋಜೇಗೌಡರಪರ ಮತಯಾಚನೆ ಮತ್ತು ಪೂರ್ವಭಾವಿ ಸಭೆ

Posted by Vidyamaana on 2024-05-26 14:28:46 |

Share: | | | | |


ತರೀಕೆರೆಯಲ್ಲಿ ಮೈತ್ರಿ ಅಭ್ಯರ್ಥಿಗಳದ ಡಾ. ಧನಂಜಯ ಸರ್ಜಿ ಮತ್ತು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್. ಎಲ್. ಭೋಜೇಗೌಡರಪರ ಮತಯಾಚನೆ ಮತ್ತು ಪೂರ್ವಭಾವಿ ಸಭೆ

ತರೀಕೆರೆ : ವಿಧಾನ ಪರಿಷತ್ ನೈರುತ್ಯ ಪದವಿಧರ ಮತ್ತು ನೈರುತ್ಯ ಶಿಕ್ಷಕರ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ತರೀಕೆರೆ ಮಂಡಲದ ವತಿಯಿಂದ ಇಲ್ಲಿನ ಅರಮನೆ ಹೋಟೆಲ್ ಸಭಾಂಗಣದಲ್ಲಿ ಬಿಜೆಪಿ ಕಾರ್ಯಕರ್ತರ ಮತ್ತು ಚುನಾವಣಾ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿತ್ತು. 

ಸಭೆಯಲ್ಲಿ ತರೀಕೆರೆ ಮಂಡಲದ ಬಿಜೆಪಿ ವಾರ್ಡ್ ಅಧ್ಯಕ್ಷರು , ಬೂತ್ ಅಧ್ಯಕ್ಷರು, ಮಹಾಶಕ್ತಿ ಕೇಂದ್ರದ ಪ್ರಮುಖರಿಗೆ ಚುನಾವಣೆಯ ರೂಪುರೇಷೆಗಳನ್ನು ತಿಳಿಸಿ ತಮ್ಮ ವ್ಯಾಪ್ತಿಯ ಮಹಾಶಕ್ತಿ ಕೇಂದ್ರಗಳಲ್ಲಿ ಪದವೀಧರ ಮತದಾರರನ್ನು ತಲುಪಿ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಮತ್ತು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್. ಎಲ್. ಭೋಜೇಗೌಡರ ಪರವಾಗಿ ಮತಯಾಚಿಸಿ, ಗೆಲ್ಲಿಸುವಂತೆ ಮನವಿ ಮಾಡಲಾಯಿತು. 

ರಾಜ್ಯದಲ್ಲಿ ಹಿಜಾಬ್ ನಿಷೇಧ ಆದೇಶ ಇನ್ನೂ ವಾಪಸ್ ಪಡೆದಿಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

Posted by Vidyamaana on 2023-12-23 16:13:29 |

Share: | | | | |


ರಾಜ್ಯದಲ್ಲಿ ಹಿಜಾಬ್ ನಿಷೇಧ ಆದೇಶ ಇನ್ನೂ ವಾಪಸ್ ಪಡೆದಿಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ರಾಜ್ಯದಲ್ಲಿ ಹಿಜಾಬ್ ನಿಷೇಧ ಆದೇಶ ಇನ್ನೂ ವಾಪಸ್ ಪಡೆದಿಲ್ಲ, ಯೋಚನೆ ಮಾಡಿದ್ದೇವೆ ಅಷ್ಟೇ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.ಹಿಜಾಬ್ ಆದೇಶ ಇನ್ನೂ ವಾಪಸ್ ಪಡೆದಿಲ್ಲ, ಯೋಚನೆ ಮಾಡಿದ್ದೇವೆ ಅಷ್ಟೇ . ಯಾರೋ ಪ್ರಶ್ನೆ ಮಾಡಿದ್ದರು, ಅದಕ್ಕೆ ಉತ್ತರ ನೀಡಿದ್ದೇನೆ ಎಂದರು.


ಹಿಜಾಬ್ ವಿವಾದ ಆದೇಶ ವಾಪಸ್ ಕುರಿತು ಸಿಎಂ ಸಿದ್ದರಾಮಯ್ಯ ಹೇಳಿಕೆ ವಿವಾದವಾಗುತ್ತಿದ್ದಂತೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.


ಸಿದ್ದರಾಮಯ್ಯ ಹೇಳಿದ್ದೇನು..? ಏನಿದು ವಿವಾದ


ಮೈಸೂರಿನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿ, ಹಿಜಾಬ್ ನಿಷೇಧ ಆದೇಶ ಪಡೆಯಲು ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ.


ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕವಲಂದೆ ಗ್ರಾಮದಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ಅವರ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಬೋಗಸ್. ಬಟ್ಟೆ, ಜಾತಿ ಆಧಾರದ ಮೇಲೆ ಜನರನ್ನು, ಸಮಾಜವನ್ನು ವಿಭಜಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.ಉಡುಪು ಧರಿಸುವುದು ಅವರವರ ಇಷ್ಟ. ಬಟ್ಟೆ ತೊಡುವುದು, ಊಟ ಮಾಡುವುದು ನಿಮಗೆ ಸೇರಿದ್ದು. ಅದಕ್ಕೆ ನಾನು ಏಕೆ ಅಡ್ಡಿಪಡಿಸಲಿ? ಬಟ್ಟೆ, ಜಾತಿ ಆಧಾರದ ಮೇಲೆ ಬಿಜೆಪಿ ಜನರನ್ನು ವಿಭಜಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು.

ಗ್ಯಾಸ್ ಸಂಪರ್ಕಕ್ಕೆ ಕೆವೈಸಿ: ಇಲಾಖೆಯಿಂದ ಸ್ಪಷ್ಟೀಕರಣ

Posted by Vidyamaana on 2023-12-21 16:36:14 |

Share: | | | | |


ಗ್ಯಾಸ್ ಸಂಪರ್ಕಕ್ಕೆ ಕೆವೈಸಿ: ಇಲಾಖೆಯಿಂದ ಸ್ಪಷ್ಟೀಕರಣ

ಉಡುಪಿ: ಮನೆಯ ಅನಿಲ ಸಂಪರ್ಕಕ್ಕೆ ಸಂಬಂಧಿಸಿದಂತೆ ಮಾಹಿತಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರಂತೆ ಡಿ.31ರೊಳಗೆ ಅನಿಲ ಸಂಪರ್ಕ ಇದ್ದವರು ಆಧಾರ ಸಂಖ್ಯೆಯೊಂದಿಗೆ ಕೆವೈಸಿ ಮಾಡಿಸಬೇಕು. ಇದರಿಂದ ಜ.1ರಿಂದ ಸಬ್ಸಿಡಿ (903ರಿಂದ 500ಕ್ಕೆ) ಸಿಗುತ್ತದೆ.ಇಲ್ಲದಿದ್ದರೆ ಸಬ್ಸಿಡಿ ರಹಿತವಾಗಿ ಸಂಪರ್ಕ ಕಮರ್ಷಿಯಲ್ ಆಗಿ ಮಾರ್ಪಟ್ಟು ಸಿಲಿಂಡರ್‌ಗೆ 1400ರೂ. ನೀಡ ಬೇಕಾಗುತ್ತದೆ ಎಂಬುದೇ ಈ ಸಂದೇಶವಾಗಿತ್ತು.


ಈ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವಂತೆ ಜನರು ಗ್ಯಾಸ್ ಪಡೆದ ಎಜೆನ್ಸಿಗೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದೊಂದಿಗೆ ತೆರಳಿ ಕೈವೈಸಿ ಮಾಡಿಸಲು ಧಾವಿಸಿದ್ದು, ಅಂಗಡಿ ಮುಂದೆ ನೂಕುನುಗ್ಗಲು ಉಂಟಾಗುತ್ತಿದೆ. ಜನರು ಉದ್ದನೆ ಕ್ಯೂನಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು. 


ಈ ಬಗ್ಗೆ ಉಜ್ವಲ ಯೋಜನೆಯ ನೋಡಲ್ ಅಧಿಕಾರಿ ರಾಹುಲ್ ಅವರನ್ನು ಸಂಪರ್ಕಿಸಿ ವೈರಲ್ ಆಗಿರುವ ಸಂದೇಶದ ಕುರಿತು ಪ್ರಶ್ನಿಸಿದಾಗ, ಅದೊಂದು ಫೇಕ್ ಸುದ್ದಿ ಎಂದು ತಳ್ಳಿ ಹಾಕಿದರು. ಕೆವೈಸಿ ಮಾಡಿರುವವರಿಗೆ ಸಬ್ಸಿಡಿ ಮತ್ತೆ ನೀಡುವ ಹಾಗೂ ಮಾಡಿಸದಿದ್ದವರಿಗೆ ಸಿಲಿಂಡರ್ ಒಂದರ ದರ ಹೆಚ್ಚಾಗುವ ಸುದ್ದಿ ಸಂಪೂರ್ಣ ಸುಳ್ಳು ಎಂದು ಸ್ಪಷ್ಟಪಡಿಸಿದರು.


ಕೇಂದ್ರದ ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ ಸಚಿವಾಲಯ ದಿಂದ ಬಂದಿರುವ ನೋಟಿಫಿಕೇಷನ್‌ನಲ್ಲಿ ಕೇಂದ್ರ ಸರಕಾರದ ಉಜ್ವಲ (ಪಿಎಂಯುವೈ) ಹಾಗೂ ಪಹಲ್ (ಪಿಎಎಚ್‌ಎಎಲ್) ಯೋಜನೆಯ ಫಲಾನುಭವಿಗಳ ಗ್ಯಾಸ್ ಸಂಪರ್ಕವನ್ನು ಆಧಾರ್ ದೃಢೀಕರಣದೊಂದಿಗೆ ಆದ್ಯತೆಯ ನೆಲೆಯಲ್ಲಿ ಕೆವೈಸಿ ಮಾಡುವ ಸೂಚನೆ ಮಾತ್ರ ಇದ್ದು ಬೇರೆ ಯಾವುದೇ ಪ್ರಸ್ತಾಪವೂ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 


ಗ್ಯಾಸ್ ಸಂಪರ್ಕ ಹೊಂದಿರುವವರೆಲ್ಲರೂ ಕೈವೈಸಿ ಮಾಡಿಸಬೇಕು. ಆದರೆ ಅವರಿಗೆ ಯಾವುದೇ ಸಮಯವನ್ನು ನಿಗದಿ ಪಡಿಸಿಲ್ಲ. ಕೊನೆಯ ದಿನವನ್ನೂ ತಿಳಿಸಿಲ್ಲ. ಸಬ್ಸಿಡಿ ಮತ್ತೆ ನೀಡುವ ಪ್ರಸ್ತಾಪವಂತೂ ಇಲ್ಲವೇ ಇಲ್ಲ. ಈಗ ಉಜ್ವಲ ಫಲಾನು ಭವಿಗಳನ್ನು ಹೊರತು ಪಡಿಸಿ ಬೇರೆ ಯಾರಿಗೂ ಅನಿಲದ ಸಿಲಿಂಡರ್‌ನಲ್ಲಿ ಸಬ್ಸಿಡಿ ಸಿಗುತ್ತಿಲ್ಲ. ಹೀಗಾಗಿ ಬಳಕೆದಾರರು ಗೊಂದಲಕ್ಕೊಳ ಗಾಗಬಾರದು ಎಂದು ಅವರು ತಿಳಿಸಿದರು.

ಮಂಗಳೂರು ಹುಲಿವೇಷ ಕುಣಿತದ ವೇಳೆ ಆಯತಪ್ಪಿ ಬಿದ್ದು ಯುವಕನಿಗೆ ಗಾಯ: ಆಸ್ಪತ್ರೆಗೆ ದಾಖಲು

Posted by Vidyamaana on 2023-10-24 11:56:20 |

Share: | | | | |


ಮಂಗಳೂರು  ಹುಲಿವೇಷ ಕುಣಿತದ ವೇಳೆ ಆಯತಪ್ಪಿ ಬಿದ್ದು ಯುವಕನಿಗೆ ಗಾಯ: ಆಸ್ಪತ್ರೆಗೆ ದಾಖಲು

ಮಂಗಳೂರು: ಹುಲಿವೇಷ ಕುಣಿತದ ವೇಳೆ ದುರ್ಘಟನೆಯೊಂದು ಸಂಭವಿಸಿದೆ. ಹುಲಿವೇಷ ಕುಣಿತದ ವೇಳೆ ಆಯತಪ್ಪಿ ಬಿದ್ದು ಯುವಕ ಗಾಯಗೊಂಡಿರುವ ಘಟನೆ ಮಂಗಳೂರಿನ ಮಂಗಳಾದೇವಿ ದೇವಸ್ಥಾನದಲ್ಲಿ ನಡೆದಿದೆ.


ಕುಣಿತದ ವೇಳೆ ಹುಲಿವೇಷಧಾರಿಯೊಬ್ಬರು ರಿವರ್ಸ್ ಪಲ್ಟಿ ಹೊಡೆಯುತ್ತಿದ್ದಾಗ ಆಯತಪ್ಪಿ ಬಿದ್ದಿದ್ದಾರೆ . ಯುವಕನ ತಲೆ ನೆಲಕ್ಕೆ ಬಡಿದು ಕತ್ತು ಉಳುಕಿದ ಪರಿಣಾಮ ಹುಲಿವೇಷಧಾರಿ ಗಾಯಗೊಂಡಿದ್ದಾರೆ . ತಕ್ಷಣ ಆಸ್ಪತ್ರೆಗೆ ದಾಖಲಿಸಿ ಯುವಕನಿಗೆ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಸಣ್ಣ ಗಾಯಗಳೊಂದಿಗೆ ಯುವಕ ಪ್ರಯಾಪಾಯದಿಂದ ಪಾರಾಗಿದ್ದಾರೆ .

ಮಕ್ಕಳನ್ನು ಗುಂಡಿಟ್ಟು ಕೊಲ್ಲಿ: ಪೊಲೀಸ್‌ ಆಯುಕ್ತರ ಎದುರು ತಂದೆ ಕಣ್ಣೀರು

Posted by Vidyamaana on 2024-08-22 07:41:17 |

Share: | | | | |


ಮಕ್ಕಳನ್ನು ಗುಂಡಿಟ್ಟು ಕೊಲ್ಲಿ: ಪೊಲೀಸ್‌ ಆಯುಕ್ತರ ಎದುರು ತಂದೆ ಕಣ್ಣೀರು

ಹುಬ್ಬಳ್ಳಿ: ನಾನು ಕಳೆದ 40 ವರ್ಷಗಳಿಂದ‌ ಕಷ್ಟಪಟ್ಟು ಬೆಳೆಸಿದ್ದೇನೆ, ಆದರೆ ಅವರು ನಮ್ಮ ಮನೆತನದ ಮಾನ-ಮರ್ಯಾದೆ ಹಾಳು ಮಾಡಿದ್ದಾರೆ. ಅವರನ್ನು ಗುಂಡಿಟ್ಟು ಕೊಲ್ಲಿ. ಬೇಕಾದರೆ ಬರೆದುಕೊಡುವೆ ಎಂದು ನಗರದಲ್ಲಿ ತಂದೆಯೊಬ್ಬ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ ಎದುರು ಕಣ್ಣೀರು ಹಾಕಿದ್ದಾರೆ.ಈ ವಿಡಿಯೋ ಈಗ ವೈರಲ್ ಆಗಿದೆ.

ಹಳೇಹುಬ್ಬಳ್ಳಿ ಸದರಸೋಪಾ ಬ್ಯಾಹಟ್ಟಿ ಪ್ಲಾಟ್ ನಿವಾಸಿ ಗೌಸಸಾಬ ಕರಡಿಗುಡ್ಡ ಎಂಬವರು ಮಕ್ಕಳಿಬ್ಬರ‌ ನಡತೆ ಬಗ್ಗೆ ಪೊಲೀಸ್ ಆಯುಕ್ತರ ಎದುರು ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದಾರೆ.

ರವಿವಾರ ರಾತ್ರಿ ಎರಡು ಗುಂಪುಗಳ ನಡುವೆ ನಡೆದ ಗ್ಯಾಂಗ್‌ವಾರ್‌ ಘಟನೆಗೆ ಸಂಬಂಧಿಸಿ ಕಸಬಾಪೇಟೆ ಪೊಲೀಸರು ಸೋಮವಾರ ಬೆಳಗ್ಗೆ ಬುಡರಸಿಂಗಿ ಬಳಿಯ ರಿಂಗ್ ರಸ್ತೆಯಲ್ಲಿ ಗೌಸಸಾಬ್‌ ಅವರ ಮಗನಾದ ಅಫ್ತಾಬ್ ಮತ್ತು ಶಾಹಬಾದ್‌ನನ್ನು ವಶಕ್ಕೆ ಪಡೆಯಲು ಹೋದಾಗ ಅಫ್ತಾಬ್‌ನು ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದಾಗ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದರು.

ಚಿಂತೆ ಇಲ್ಲದವ ರೈಲ್ವೆ ಹಳಿಯ ಮೇಲೆ ಛತ್ರಿ ಹಿಡಿದು ಮಲಗಿದ..!; ಇಲ್ಲಿದೆ ನೋಡಿ ವಿಚಿತ್ರ ವ್ಯಕ್ತಿಯ ವಿಡಿಯೊ

Posted by Vidyamaana on 2024-08-27 08:49:44 |

Share: | | | | |


ಚಿಂತೆ ಇಲ್ಲದವ ರೈಲ್ವೆ ಹಳಿಯ ಮೇಲೆ ಛತ್ರಿ ಹಿಡಿದು ಮಲಗಿದ..!; ಇಲ್ಲಿದೆ ನೋಡಿ ವಿಚಿತ್ರ ವ್ಯಕ್ತಿಯ ವಿಡಿಯೊ

ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಎನ್ನುತ್ತಾರೆ..ಈ ವ್ಯಕ್ತಿಯನ್ನ ನೋಡಿ, ರೈಲ್ವೆ ಹಳಿ ಎನ್ನುವುದನ್ನೂ ಮರೆತು ಅದೆಷ್ಟು ಸುಖವಾಗಿ ನಿದ್ರಿಸಿ, ದೊಡ್ಡ ಅವಾಂತರ ಸೃಷ್ಟಿಸಿದ್ದಾನೆ. ರೈಲ್ವೆ ಹಳಿಯ ಮೇಲೆ, ಛತ್ರಿ ಹಿಡಿದು ಮಲಗಿದ ಈತನಿಗೋಸ್ಕರ ರೈಲು ನಿಂತಿತ್ತು..ಇವನ ಅದೃಷ್ಟ ಚೆನ್ನಾಗಿತ್ತು..ಯಾರೋ ಮಲಗಿದ್ದನ್ನ ಗ್ರಹಿಸಿದ ರೈಲಿನ ಲೋಕೋ ಪೈಲೆಟ್‌ ಕೂಡಲೇ ಎಚ್ಚೆತ್ತುಕೊಂಡು ರೈಲು ನಿಲ್ಲಿಸಿ ವ್ಯಕ್ತಿಯ ಜೀವ ಉಳಿಸಿದ್ದಾರೆ.

ಆದರೆ ಈತನ ನಿದ್ದೆಯ ಕಾರಣಕ್ಕೆ, ಪ್ರಯಾಣಿಕರಿಗೆ ತೊಂದರೆಯಾಗಿದ್ದಂತೂ ಸತ್ಯ..

ಬಹುಶಃ ಇಂಥ ದೃಶ್ಯಗಳೆಲ್ಲ ನೋಡಲು ಸಿಗುವುದು ಅಪರೂಪ. ನಿದ್ರೆ ಮಾಡುವುದು ಎಲ್ಲ ಚಿಂತೆಗಳಿಂದ ಮನಸಿಗೆ ವಿಶ್ರಾಂತಿ ಕೊಡಲು. ಆದರೆ ಉತ್ತರ ಪ್ರದೇಶದ ಈ ವ್ಯಕ್ತಿಯ ನಿದ್ರೆ ಒಂದು ಕ್ಷಣ ಆತಂಕವನ್ನೇ ಮೂಡಿಸಿತ್ತು. ಮಳೆಯಿಂದ ಪಾರಾಗಲು ಛತ್ರಿಯನ್ನ ಹಿಡಿದು, ಪ್ರಯಾಗ್‌ರಾಜ್‌ನ ರೈಲ್ವೆ ಹಳಿಯ ಮೇಲೆ ಮಲಗಿದ್ದ. ಅವನೇನಾದರೂ ಆತ್ಮಹತ್ಯೆ ಮಾಡಿಕೊಳ್ಳಲು ಹೀಗೆ ಮಾಡಿದ್ದಿರಬಹುದಾ ಎಂದುಕೊಳ್ಳಬೇಡಿ..ಅವನು ಸಾಯಲು ಹೊರಟವನು ಅಲ್ಲ. ವಿಶ್ರಾಂತಿಗಾಗಿ ಹಳಿ ಮೇಲೆ ಮಲಗಿದವನು ಅಲ್ಲೇ ನಿದ್ದೆಗೆ ಜಾರಿದ್ದ. ಅವನ ಅದೃಷ್ಟ ತುಂಬ ಚೆನ್ನಾಗಿದ್ದ ಕಾರಣ, ಲೋಕೋ ಪೈಲೆಟ್‌ ದೂರದಿಂದಲೇ ಈತನನ್ನ ಗಮನಿಸಿದ್ದ. ರೈಲು ನಿಲ್ಲಿಸಿ, ನಡೆದುಕೊಂಡು ಅವನ ಬಳಿ ಬಂದು ಎಬ್ಬಿಸಿದ್ದರು. ನನ್ನ ರೈಲು ಮುಂದೆ ಸಾಗಬೇಕು..ನೀನು ಪಕ್ಕಕ್ಕೆ ಹೋಗಿ ಮಲಗು ಎಂದು ಹೇಳಿದ್ದರು..!

Recent News


Leave a Comment: