ಪುತ್ತೂರು: ಲಾರಿ - ಸ್ಕೂಟರ್ ನಡುವೆ ಭೀಕರ ಅಪಘಾತ :ಮಿತ್ತೂರು ನಿವಾಸಿ ಶಿವರಾಮ ನಾಯ್ಕ ಮೃತ್ಯು

ಸುದ್ದಿಗಳು News

Posted by vidyamaana on 2024-07-24 08:25:31 | Last Updated by Vidyamaana on 2024-07-24 08:25:31

Share: | | | | |


ಪುತ್ತೂರು: ಲಾರಿ - ಸ್ಕೂಟರ್ ನಡುವೆ ಭೀಕರ ಅಪಘಾತ :ಮಿತ್ತೂರು ನಿವಾಸಿ ಶಿವರಾಮ ನಾಯ್ಕ ಮೃತ್ಯು

ಪುತ್ತೂರು: ನೆಹರುನಗರ ಮಂಜಲ್ಪಡ್ಪು ಬಳಿಯ ಮಂಗಲ ಸ್ಟೋರ್ಸ್ ಮುಂಭಾಗ ಜು.23 ರಂದು  ಲಾರಿ ಮತ್ತು ತ್ರಿವೀಲ್ಡರ್ ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಮಿತ್ತೂರು ಏಮಾಜೆಯ ವಿಕಲಚೇತನ ಶಿವರಾಮ ನಾಯ್ಕ (50ವ) ಎಂಬವರು ಮೃತಪಟ್ಟ ಬಗ್ಗೆ ವರದಿಯಾಗಿದೆ

ಮಂಗಳೂರು ಕಡೆ ಹೋಗುತ್ತಿದ್ದ ಲಾರಿ ವೊಂದು ವಿಕಲಚೇತನ ಶಿವರಾಮ ಅವರು ಚಲಾಯಿಸುತ್ತಿದ್ದ ತ್ರಿವೀಲ್ಡ‌ರ್ ಸ್ಕೂಟರ್ ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ತೀವ್ರ ಗಾಯಗೊಂಡ ಸವಾರ ಮೃತ ಪಟ್ಟಿದ್ದಾರೆಂದು ತಿಳಿದು ಬಂದಿದೆ.

 Share: | | | | |


ಲೋಕಸಭಾ ಚುನಾವಣೆ : ಪುತ್ತೂರು ವಿಧಾನಸಭಾ ಕ್ಷೇತ್ರದ ನಗರ ಕಾಂಗ್ರೆಸ್ ವ್ಯಾಪ್ತಿಯ ಚುನಾವಣಾ ಉಸ್ತುವಾರಿಗಳಾಗಿ ರಂಜಿತ್ ಬಂಗೇರ, ಮಹಮ್ಮದ್ ರಿಯಾಜ್, ರೋಶನ್ ರೈ ನೇಮಕ

Posted by Vidyamaana on 2024-04-11 04:38:26 |

Share: | | | | |


ಲೋಕಸಭಾ ಚುನಾವಣೆ : ಪುತ್ತೂರು ವಿಧಾನಸಭಾ ಕ್ಷೇತ್ರದ ನಗರ ಕಾಂಗ್ರೆಸ್ ವ್ಯಾಪ್ತಿಯ ಚುನಾವಣಾ ಉಸ್ತುವಾರಿಗಳಾಗಿ ರಂಜಿತ್ ಬಂಗೇರ, ಮಹಮ್ಮದ್ ರಿಯಾಜ್, ರೋಶನ್ ರೈ ನೇಮಕ

ಪುತ್ತೂರು :ದಕ್ಷಿಣ ಕನ್ನಡ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ಪುತ್ತೂರು ನಗರ ಕಾಂಗ್ರೆಸ್ ವ್ಯಾಪ್ತಿಯ ಲೋಕಸಭಾ ಚುನಾವಣೆ ಉಸ್ತುವಾರಿಗಳಾಗಿ ರಂಜಿತ್ ಬಂಗೇರ ಕೆ., ಮಹಮ್ಮದ್ ರಿಯಾಜ್, ರೋಶನ್ ರೈ ಅವರನ್ನು ನೇಮಕ ಮಾಡಲಾಗಿದೆ.

WhatsApp ಬಳಕೆದಾರರಿಗೆ ಗುಡ್ ನ್ಯೂಸ್

Posted by Vidyamaana on 2023-07-24 06:57:08 |

Share: | | | | |


WhatsApp ಬಳಕೆದಾರರಿಗೆ ಗುಡ್ ನ್ಯೂಸ್

ನವದೆಹಲಿ :(ಜು.24) ಮೆಟಾ ಮಾಲೀಕತ್ವದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವ್ಯಾಟ್ಸ್‌ಆಯಪ್ ಇದೀಗ ಹೊಸ ಫೀಚರ್ಸ್ ಬಿಡುಗಡೆ ಮಾಡಿದೆ. ಪ್ರಮುಖವಾಗಿ ಬಳಕೆದಾರರ ಬಹುದಿನಗಳ ಬೇಡಿಕೆಯನ್ನು ವ್ಯಾಟ್ಸ್‌ಆಯಪ್ ಈಡೇರಿಸಿದೆ. ಇದೀಗ ವ್ಯಾಟ್ಸ್‌ಆಯಪ್‌ ವಿಡಿಯೋ ಕಾಲ್ ವೇಳೆ ಲ್ಯಾಂಡ್‌ಸ್ಕೇಪ್ ಮೂಡ್ ಪ್ರವರ್ತಿಸಲಿದೆಇಷ್ಟು ದಿನ ವಿಡಿಯೋ ಕಾಲ್ ಮಾಡುವಾಗ ಕೇವಲ ಪೋರ್ಟ್ರೈಟ್ ಮೂಡ್ ಮಾತ್ರ ಅನಮತಿ ನೀಡುತ್ತಿತ್ತು. ಆದರೆ ಹೊಸ ಫೀಚರ್‌ನಿಂದ ವಿಡಿಯೋ ಕಾಲ್ ಮಾಡುಲ ಬಳಕೆದಾರರು ಮೊಬೈಲ್‌ನ್ನು ಪೋರ್ಟ್ರೈಟ್ ಅಥವಾ ಲ್ಯಾಂಡ್‌ಸ್ಕೇಪ್ ಯಾವುದೇ ಮೂಡ್‌ನಲ್ಲೂ ಕರೆ ಮಾಡಿ ಸಂಭಾಷಣೆ ನಡೆಸಬಹುದು. ಹೊಸ ಫೀಚರ್ ಇದಕ್ಕೆ ಅನುಮತಿ ನೀಡಲಿದೆ.ವಿಡಿಯೋ ಕಾಲ್ ವೇಳೆ ಲ್ಯಾಂಡ್‌ಸ್ಕೇಪ್ ಮೂಡ್‌ನಲ್ಲಿ ಮೊಬೈಲ್ ಇಟ್ಟು ಸಂಭಾಷಣೆ ನಡೆಸಲು ಅಥವಾ ಇನ್ನಿತರ ಕಾರಣಗಳಿಗೆ ಬಳಕೆದಾರರು ಬಹುದಿನಗಳಿಂದ ಬೇಡಿಕೆ ಇಟ್ಟಿದ್ದರು. ಇದೀಗ ಬಳಕೆದಾರರು ಮೊಬೈಲ್‌ನ್ನು ಲ್ಯಾಂಡ್‌ಸ್ಕೇಪ್ ಮೂಡ್‌ನತ್ತ ತಿರುಗಿಸಿದರೆ ವಿಡಿಯೋ ಕಾಲ್‌ಗೆ ಯಾವುದೇ ಸಮಸ್ಯೆ ಇಲ್ಲ. ಕರೆಯಲ್ಲಿರುವ ವ್ಯಕ್ತಿ ಅಥವಾ ಚಿತ್ರಗಳು ಉಲ್ಟಾ ಕಾಣುವುದಿಲ್ಲ. ಬಳಕೆದಾರರ ಮುಂದಿದ್ದ ಸಮಸ್ಯೆಯೊಂದನ್ನು ವ್ಯಾಟ್ಸ್‌ಆಯಪ್ ಬಗೆಹರಿಸಿದೆ.ಲ್ಯಾಂಡ್‌ಸ್ಕೋಪ್ ಮೂಡ್ ವಿಡಿಯೋ ಕಾಲ್ ಜೊತೆಗೆ ಕಾಲ್ ಸೈಲೆಂಟ್ ಫೀಚರನ್ನು ವ್ಯಾಟ್ಸ್‌ಆಯಪ್ ಪರಿಚಯಿಸಿದೆ. ಈ ಮೂಲಕ ಅನಗತ್ಯ, ಸ್ಪ್ಯಾಮ್ ಕಾಲ್, ಅಪರಿಚಿತ ಕರೆಗಳನ್ನು ನಿರ್ಬಂಧಿಸಲು ಸಾಧ್ಯವಿದೆ. ವ್ಯಾಟ್ಸ್‌ಆಯಪ್ ಸೆಟ್ಟಿಂಗ್ ಮೂಲಕ ಪ್ರೈವೈಸ್ ಕಾಲ್ ಆಯ್ಕೆ ಮಾಡಿದರೆ ಕಿರಿಕಿರಿಯಿಂದ ದೂರ ಉಳಿಯಲು ಸಾಧ್ಯವಿದೆ. ಅಪರಿಚಿತ ಮತ್ತು ಸ್ಪಾಯಮ್‌ ಕರೆಗಳ ಕಿರಿಕಿರಿಯಿಂದ ಬಳಕೆದಾರರಿಗೆ ಮುಕ್ತಿ ನೀಡಲು ಫೋನ್‌ನಲ್ಲಿ ಸೇವ್‌ ಆಗಿಲ್ಲದ ನಂಬರ್‌ಗಳಿಂದ ಬರುವ ಫೋನ್‌ ಕರೆಗಳನ್ನು ಸ್ವಯಂಚಾಲಿತವಾಗಿ ಸೈಲೆಂಟ್‌ ಮಾಡುವ ಹೊಸ ಫೀಚರನ್ನು ವಾಟ್ಸಾಪ್‌ ಬಿಡುಗಡೆ ಮಾಡಿದೆ. ಇದಕ್ಕಾಗಿ ವಾಟ್ಸಾಪ್‌ ಸೆಟ್ಟಿಂಗ್‌ನಲ್ಲಿ ಸೈಲೆಂಟ್‌ ಅನ್‌ನೋನ್‌ ನಂಬ​ರ್‍ಸ್ ಆಯ್ಕೆಯನ್ನು ಎನೇಬಲ್‌ ಮಾಡಿದರೆ ಸಾಕು. ಗೊತ್ತಿಲ್ಲದ ನಂಬರ್‌ಗಳಿಂದ ಬರುವ ಕರೆಗಳನ್ನು ವಾಟ್ಸಾಪ್‌ ಸೈಲೆಂಟ್‌ ಮಾಡಲಿದೆ. ಈ ಹೊಸ ಫೀಚರನ್ನು ಮಂಗಳವಾರ ಘೋಷಿಸಿದ ಮೆಟಾ ಸಿಇಒ ಮಾರ್ಕ್ ಜ್ಯೂಕರ್‌ ಬಗ್‌ರ್‍, ಈಗ ವಾಟ್ಸಾಪ್‌ ಅನ್‌ನೋನ್‌ ಕಾಲ್‌ಗಳನ್ನು ಸೈಲೆಂಟ್‌ ಮಾಡಲಿದೆ.ಆಯಂಡ್ರಾಯ್ಡ್‌ ಮತ್ತು ಐಫೋನ್‌ ಬಳಕೆದಾರರು ಈಗ ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ.


ಇಷ್ಟಕ್ಕೇ ವ್ಯಾಟ್ಸ್‌ಆಯಪ್ ಹೊಸ ಫೀಚರ್ ಕತೆ ಮುಗಿದಿಲ್ಲ. ಇದೀಗ ವ್ಯಾಟ್ಸ್‌ಆಯಪ್ ಚಾಟ್ ಟ್ರಾನ್ಸ್‌ಫರ್ ಆಯ್ಕೆಯನ್ನು ನೀಡಿದೆ. ಒಂದು ಫೋನ್‌ನಿಂದ ಮತ್ತೊಂದು ಫೋನ್‌ಗೆ ವ್ಯಾಟ್ಸ್‌ಆಯಪ್‌ನ ಚಾಟ್‌ಗಳನ್ನು ಯಾವುದೇ ಅಡೆ ತಡೆ ಇಲ್ಲದೆ ಟ್ರಾನ್ಸ್‌ಫರ್ ಮಾಡಲು ಈ ಫೀಚರ್‌ನಿಂದ ಸಾಧ್ಯವಿದೆ. ಹಳೇ ಫೋನ್‌ನಿಂದ ಹೊಸ ಫೋನ್‌ಗೆ ಚಾಟ್ ಟ್ರಾನ್ಸ್‌ಫರ್ ಸುಲಭವಾಗಿ ಮಾಡಲು ಸಾಧ್ಯವಿದೆ. ಹೊಸ ಫೀಚರ್‌ನಿಂದ ಐಫೋನ್‌ಗೂ ಚಾಟ್ ಟ್ರಾನ್ಸ್‌ಫರ್ ಮಾಡಲು ಸಾಧ್ಯವಿದೆ. ಇದರ ಜೊತೆಗೆ ವ್ಯಾಟ್ಸ್‌ಆಯಪ್ ಹೊಸ ಹೊಸ ಸ್ಟಿಕ್ಕರ್ ಬಿಡುಗಡೆ ಮಾಡಿದೆ

ಪಕ್ಷ ಬದಿಗಿಟ್ಟು ಪದ್ಮರಾಜ್, ಕೋಟ, ಗೀತಾರನ್ನು ಗೆಲ್ಲಿಸುವ: ಸತ್ಯಜಿತ್ ಸುರತ್ಕಲ್

Posted by Vidyamaana on 2024-04-01 19:50:03 |

Share: | | | | |


ಪಕ್ಷ ಬದಿಗಿಟ್ಟು ಪದ್ಮರಾಜ್, ಕೋಟ, ಗೀತಾರನ್ನು ಗೆಲ್ಲಿಸುವ: ಸತ್ಯಜಿತ್ ಸುರತ್ಕಲ್

ಮಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದ.ಕನ್ನಡದಲ್ಲಿ ಪದ್ಮರಾಜ್, ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಮತ್ತು ಶಿವಮೊಗ್ಗ ಕ್ಷೇತ್ರದಲ್ಲಿ ಗೀತಾ ಶಿವರಾಜ್ ಕುಮಾರ್ ಅವರನ್ನು ನಾರಾಯಣಗುರು ವಿಚಾರ ವೇದಿಕೆ ಬೆಂಬಲಿಸಲಿದೆ ಎಂದು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಹೃದಯಾಘಾತ ಹೆಚ್ಚಳ ಹಿನ್ನಲೆ

Posted by Vidyamaana on 2023-08-20 12:48:35 |

Share: | | | | |


ರಾಜ್ಯದಲ್ಲಿ ಹೃದಯಾಘಾತ ಹೆಚ್ಚಳ ಹಿನ್ನಲೆ

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೃದಯಘಾತ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹೃದಯಾಘಾತಕ್ಕೆ ಬ್ರೇಕ್ ಹಾಕಲು ಆರೋಗ್ಯ ಇಲಾಖೆ ಒಂದು ಪ್ಲಾನ್ ಮಾಡಿದೆ.ಹೃದಯಘಾತ ತಡೆಗೆ ಆರೋಗ್ಯ ಇಲಾಖೆ ಪುನೀತ್ ರಾಜಕುಮಾರ್ ಅಪ್ಪು ಹೃದಯ ಕವಚ ಯೋಜನೆ ಜಾರಿಗೆ ಮುಂದಾಗಿದೆ .ದಿಡೀರ್ ಸಾವು ಹೃದಯಘಾತದ ಸಂಖ್ಯೆ ಏರಿಕೆ ತಡೆಗೆ ಹೃದಯಾಘಾತ ತಪ್ಪಿಸಲು ಮುಂದಾದ ಆರೋಗ್ಯ ಇಲಾಖೆ,ಅಪ್ಪು ಯೋಜನೆ ಜಾರಿಗೆ ಬಂದ ಆರೋಗ್ಯ ಇಲಾಖೆ ಬಜೆಟ್ ಅಲ್ಲಿ ಈ ಕುರಿತು ಹಿಂದೆ ಘೋಷಣೆ ಮಾಡಲಾಗಿತ್ತು ಆ ಯೋಜನೆಯನ್ನು ಇದೀಗ ಅನುಷ್ಠಾನಕ್ಕೆ ತರಲು ಆರೋಗ್ಯ ಇಲಾಖೆ ಮುಂದಾಗಿದೆ.ಹೃದಯಾಘಾತವನ್ನು ತಡೆಗಟ್ಟಲು ಹಾಗೂ ಹೃದಯಘಾತ ಮುಂಚೆ ಯಾವ ರೀತಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಳ್ಳಬೇಕು ಎಂಬುದರ ಕುರಿತು ಅರಿವು ಮೂಡಿಸುವುದು ಈ ಯೋಜನೆಯಲ್ಲಿದೆ.


ಅಪ್ಪು ಹೃದಯ ಕವಚ ಯೋಜನೆ ಜಾರಿ ಮಾಡಲಾಗಿದ್ದು ಈ ಕುರಿತು ಜಯದೇವ ಆಸ್ಪತ್ರೆಯ ಅಡಿಯಲ್ಲಿ 45 ತಾಲೂಕು ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆ ನೀಡಲು ಯೋಜನೆ ಹಾಕಿಕೊಳ್ಳಲಾಗಿದೆ. ಸಂಬಂಧಿಸಿದ ಕಂಡುಬಂದರೆ ವಿಡಿಯೋ ಕಾನ್ಫರೆನ್ಸ್ ಮೂಲಕ ತಜ್ಞವೈದ್ಯರಿಂದ ಸಲಹೆ ನೀಡಲಾಗುತ್ತದೆ.ವಿಡಿಯೋ ಅಥವಾ ಆಡಿಯೋ ಮೂಲಕ ತಜ್ಞ ವೈದ್ಯರಿಂದ ಸಲಹೆ ನೀಡಲಾಗುತ್ತಿದ್ದು ವೈದ್ಯರ ತಂಡವು ಕೇಸ್ ಆಪರೇಟ್ ಮಾಡಲಿದ್ದಾರೆಎಂದು ಆರೋಗ್ಯ ಇಲಾಖೆಯ ಆಯುಕ್ತ ರಣದೀಪ ತಿಳಿಸಿದರು.


ಪುನೀತ್ ರಾಜಕುಮಾರ್ ಹೆಸರಲ್ಲಿ ಎಇಡಿ(ಆಟೋಮೆಟಿಕ್ ಎಕ್ಸ್ಟರ್ನಲ್ ಡೆಫಿಲೆಟರ್ಸ್) ಅಳವಡಿಕೆ


ಹೃದಯಾಘಾತ ತಡೆಗಟ್ಟಲು ಪುನೀತ್ ಹೆಸರಲ್ಲಿ ಎಇಡೀ ಅಳವಡಿಸುತ್ತಿದ್ದೂ, ಸುಮಾರು ಮೂರು ಕೋಟಿ ವೆಚ್ಚದಲ್ಲಿ ಆಸ್ಪತ್ರೆಗಳಲ್ಲಿ ಅಳವಡಿಕೆ ಮಾಡಲಾಗಿದೆ. ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಹೆಸರಲ್ಲಿ ಅಳವಡಿಕೆ ಮಾಡಿದ್ದು, ಆರಂಭಿಕಾ ಹಂಥದಲ್ಲಿ 45 ಆಸ್ಪತ್ರೆಯಲ್ಲಿ ಎ ಈಡಿ ಮಾಡೆಲ್ ಅಳವಡಿಕೆ ಈ ಬಗ್ಗೆ ಬಜೆಟ್ ನಲ್ಲಿ ಸಿದ್ದರಾಮಯ್ಯನವರು ಘೋಷಿಸಿದ್ದರು. ಆಸ್ಪತ್ರೆಗಳಲ್ಲಿ ಸರ್ಕಾರ ಎಇಡಿ ಅಳವಡಿಕೆಗೆ ಟೆಂಡರ್ ಕರೆದಿದೆ.

ಏನಿದು ಎಇಡಿ? 

ಎಲೆಕ್ಟ್ರಿಕ್ ಶಾಕ್ ಮೂಲಕ ಹೃದಯ ಬಡಿತವನ್ನು ಸಾಮಾನ್ಯ ಸ್ಥಿತಿಗೆ ಬರುವಂತೆ ಮಾಡುತ್ತದೆ . ತುರ್ತು ಪ್ರಾಥಮಿಕ ಚಿಕಿತ್ಸೆ ಬಳಿಕ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಬಹುದಾಗಿದೆ.ಹೃದಯ ನಾರ್ಮಲ್ ಆಗಿ ಒಂದು ನಿಮಿಷಕ್ಕೆ 75 ರಿಂದ 80 ವರೆಗೆ ಬಡಿದುಕೊಳ್ಳುತ್ತದೆ. ಅದು ತಕ್ಷಣವಾಗಿ 300 ರಿಂದ 400ಕ್ಕೆ ಹೆಚ್ಚದರೆ ಅಲ್ಲಿ ಹೃದಯದ ಬಡಿತ ವೈಬ್ರೇಶನ್ ಉಂಟಾಗುತ್ತದೆ. ಆ ಸಂದರ್ಭದಲ್ಲಿ ಅಂತಹ ವ್ಯಕ್ತಿ ಎಲ್ಲ ಬೆವರುತ್ತಿರುತ್ತಾರೆ. ಅವರ ಕೈ ಹಾಗೂ ದೇಹ ತನ್ನಗಗಿರುತ್ತೆ. ಎಇಡಿ ವ್ಯಕ್ತಿಯ ಎದೆಯ ಮೇಲೆ ಇಟ್ಟರೆ ತಕ್ಷಣ 300 ರಿಂದ 400 ಇದ್ದ ಹೃದಯ ಬಡಿತ ಸಹಜ ಸ್ಥಿತಿಗೆ ಬರುತ್ತದೆ ಎಂದು ಜಯದೇವ ಆಸ್ಪತ್ರೆಯ ಹೃದಯ ತಜ್ಞ ಡಾ. ಅರುಣ್ ಮಾಹಿತಿ ನೀಡಿದರು.

ನಾಪತ್ತೆ

Posted by Vidyamaana on 2024-09-02 20:02:57 |

Share: | | | | |


ನಾಪತ್ತೆ

ಮೂಡುಬಿದಿರೆ: ಇಲ್ಲಿನ‌ ಕಾಲೇಜೊಂದರ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕಾಣೆಯಾದ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಲೇಜಿನ ಹಾಸ್ಟೆಲ್ ನಲ್ಲಿ ವಾಸವಾಗಿದ್ದ ಬೆಂಗಳೂರು ಮೂಲದ ಬೃಂದಾ ಜೈನ್ (17) ಕಾಣೆಯಾದ ವಿದ್ಯಾರ್ಥಿನಿ. ಕಳೆದ ಒಂದು ವಾರದ ಹಿಂದೆ ಹಾಸ್ಟೆಲ್ ನಿಂದ ಕಾಣೆಯಾಗಿರುವುದಾಗಿ ತಿಳಿದು ಬಂದಿದೆ.

ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ದೃಢ : FSL ತನಿಖೆ ವೇಳೆ ಬಹಿರಂಗ

Posted by Vidyamaana on 2024-03-02 09:29:59 |

Share: | | | | |


ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ದೃಢ : FSL ತನಿಖೆ ವೇಳೆ ಬಹಿರಂಗ

ಬೆಂಗಳೂರು : ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಘೋಷಣೆ ಕೂಗಿದ್ದು ದೃಢ ಎಂದು FSL ವರದಿಯಲ್ಲಿ ಬಹಿರಂಗವಾಗಿದೆ.ಕಳೆದ ಕೆಲವು ದಿನಗಳ ಹಿಂದೆ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಗೆಲುವು ದಾಖಲಿಸಿದ ಸಂದರ್ಭದಲ್ಲಿ ಅವರ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಹಾಕಿದ್ದರು.ನಾಸೀರ್ ಸಾಬ್ ಜಿಂದಾಬಾದ್ ಮತ್ತು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರುವ ಮಾಹಿತಿ ಇದೀಗ ಬಹಿರಂಗವಾಗಿದೆ ಎಂದು ಹೇಳಲಾಗುತ್ತಿದೆ.


FSL ಪರಿಶೀಲನೆ ವೇಳೆ ಆಡಿಯೋ ಮತ್ತು ವಿಡಿಯೋ ಎಡಿಟ್ ಮಾಡಿಲ್ಲ. FSL ವರದಿ ಅನ್ವಯ ಪೊಲೀಸರು ಈಗ ತನಿಖೆಯನ್ನು ಚುರುಕುಗೊಳಿಸುತ್ತಿದ್ದು, ವಶಕ್ಕೆ ಪಡೆದಿದ್ದ ಅನುಮಾನಾಸ್ಪದ ವ್ಯಕ್ತಿಗಳ ವಾಯ್ಸ್ ಗಳನ್ನು ರವಾನೆ ಮಾಡಲಾಗಿತ್ತು.ಪೊಲೀಸರ ತನಿಖೆಯ ವೇಳೆ ಅನುಮಾನಿತ ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿತ್ತು.ಅನುಮಾನಿತರ ಪೈಕಿ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.ಎಫ್ ಎಸ್ ಎಲ್ ನಿಂದ ವಾಯ್ಸ್ ಮ್ಯಾಚ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ವಾಯ್ಸ್ ಮ್ಯಾಚ್ ಆದ ಕೂಡಲೇ ಅಧಿಕೃತವಾಗಿ ಬಂಧನ ಮಾಡಲು ಪೊಲೀಸರು ತಯಾರಿ ಮಾಡಿಕೊಂಡಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

Recent News


Leave a Comment: