ಶಿರೂರು ಭೂಕುಸಿತ ದುರಂತ : ಪತ್ತೆಯಾಯ್ತು ಎಂಟನೇ ಮೃತದೇಹ

ಸುದ್ದಿಗಳು News

Posted by vidyamaana on 2024-07-23 18:35:28 |

Share: | | | | |


ಶಿರೂರು ಭೂಕುಸಿತ ದುರಂತ : ಪತ್ತೆಯಾಯ್ತು ಎಂಟನೇ ಮೃತದೇಹ

ಕಾರವಾರ: ಶಿರೂರು ಭೂಕುಸಿತ ಸ್ಥಳದಲ್ಲಿ 8 ದಿವಸದ ಬಳಿಕ ಮತ್ತೊಂದು ಮೃತದೇಹ ಪತ್ತೆಯಾಗಿದೆ. ಈ ಮೂಲಕ 8ನೇ ಮೃತದೇಹ ಸಿಕ್ಕಂತಾಗಿದೆ. ಈ ನಡುವೆ ಕೇರಳದ ಲಾರಿ ಚಾಲಕ ಅರ್ಜುನ್‌ ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. 

ಮಂಗಳವಾರ ಬೆಳಗ್ಗೆ ಗುಡ್ಡ ಕುಸಿತದಿಂದ ನಾಪತ್ತೆಯಾಗಿದ್ದ ಮಹಿಳೆ ಸಣ್ಣಿ ಹನ್ಮಂತ ಗೌಡ (57) ಸಾವನ್ನಪ್ಪಿದ್ದು, ಮೃತದೇಹ ದೊರೆತಿದೆ. ಗಂಗಾವಳಿ ನದಿಯ ಗಂಗೆಕೊಳ್ಳ ಸಮೀಪ ಅವರ ಶವ ಪತ್ತೆಯಾಗಿದೆ. ಶಿರೂರು ಗುಡ್ಡ ಕುಸಿತದಿಂದಾಗಿ ಉಳುವರೆ ಗ್ರಾಮದಲ್ಲಿ ಮನೆ ಕುಸಿತವಾಗಿ ಸಣ್ಣಿ ಹನ್ಮಂತ ಗೌಡ ಅವರು ಕಣ್ಮರೆಯಾಗಿದ್ದರು. ಇನ್ನೂ ಅರ್ಜುನ್‌ ಸಹಿತ ಮೂವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಸ್ಥಳದಲ್ಲಿ NDRF, SDRF, ಮಿಲಿಟರಿ ಕಾರ್ಯಪಡೆಯಿಂದ ಶೋಧ ಕಾರ್ಯ ಮುಂದುವರೆದಿದೆ. 

ಕೇರಳ ಮಾಧ್ಯಮಗಳ ಕವರೇಜ್‌ 

ಸದ್ಯ ಕರ್ನಾಟಕದ ಉತ್ತರ ಕನ್ನಡದಲ್ಲಾದ ಭೂಕುಸಿತ ವರದಿಯನ್ನ ಕನ್ನಡಿಗರು ಕೂಡಾ ಮಲಯಾಳಂ ಸುದ್ದಿವಾಹಿನಿಗಳಲ್ಲಿ ವೀಕ್ಷಿಸುವಂತಾಗಿದೆ. ಕೇರಳದ ಪ್ರಮುಖ ರಾಜ್ಯ ಮಟ್ಟದ ವಾಹಿನಿಗಳು ಕಳೆದ 4 ದಿನಗಳಿಂದಲೂ ಉತ್ತರ ಕನ್ನಡದಲ್ಲಿ ಬೀಡುಬಿಟ್ಟಿವೆ. ಅರ್ಜುನ್‌ ಶೋಧ ಕಾರ್ಯಾಚರಣೆಗೆ ಹೆಚ್ಚಿನ ಒತ್ತಡ ಏರುತ್ತಿದೆ. ಜೊತೆಗೆ ಕೇರಳದ ನಾಗರಿಕ ಸುರಕ್ಷತಾ ತಂಡಗಳು ಕೂಡಾ ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲಿ ಕೇರಳದಿಂದ ಶಿರೂರಿಗೆ ತಂಡವಾಗಿ ಆಗಮಿಸಿವೆ

 Share: | | | | |


ನೆಲ್ಯಾಡಿ : ದ.ಕ. ಜಿಲ್ಲೆ ತೆಂಗು ರೈತ ಉತ್ಪಾದಕರ ಸಂಸ್ಥೆಯ 9ನೇ ಶಾಖೆ ಉದ್ಘಾಟನೆ

Posted by Vidyamaana on 2023-09-18 15:36:23 |

Share: | | | | |


ನೆಲ್ಯಾಡಿ : ದ.ಕ. ಜಿಲ್ಲೆ ತೆಂಗು ರೈತ ಉತ್ಪಾದಕರ ಸಂಸ್ಥೆಯ 9ನೇ ಶಾಖೆ ಉದ್ಘಾಟನೆ

ನೆಲ್ಯಾಡಿ : ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಸಂಸ್ಥೆಯ 9ನೇ ಶಾಖೆಯು ನೆಲ್ಯಾಡಿ ರಬ್ಬರ್ ಸೊಸೈಟಿ ಬಳಿ ಸೈಂಟ್ ಮೇರೀಸ್ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.



ಉದನೆ ಸಂತ ಅಂತೋನೀಸ್ ವಿದ್ಯಾಸಂಸ್ಥೆಯ ಸಂಚಾಲಕರಾದ ರೆ.ಫಾ. ಹನಿ ಜೇಕಬ್ ರವರು ಶಾಖೆಯ ಕಚೇರಿಯನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.



ಸಭಾ ಕಾರ್ಯಕ್ರಮವನ್ನು ಬೆಳಾಲು ಆರಿಕೋಡಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.



ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಬಾಲಕೃಷ್ಣ ಬಾಣಜಾಲು, ಕೌಕ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲೋಕೇಶ್ ಬಾಣಜಾಲು, ನೆಲ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಲಾಂ ಬಿಲಾಲ್, ಸಂಘದ ಅಧ್ಯಕ್ಷರಾದ ಕುಸುಮಾಧರ್ ಎಸ್.ಕೆ., ಸಂಘದ ಉಪಾಧ್ಯಕ್ಷರಾದ ಗಿರಿಧರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೇತನ್ ಎ. ಉಪಸ್ಥಿತರಿದ್ದರು.


ನವ್ಯ ಸ್ವಾಗತಿಸಿದರು. ಚೇತನ್ ಎ. ಪ್ರಾಸ್ತಾವಿಕವಾಗಿ ಮಾತನಾಡಿದರು. ಅರ್ಪಣಾ ವಂದಿಸಿದರು. ಡಾ. ರಾಜೇಶ್ ಬೆಜ್ಜಂಗಳ ನಿರೂಪಿಸಿದರು.

ಲೋಕಸಭೆ ಭದ್ರತಾ ಲೋಪ: ಮೈಸೂರಿನಲ್ಲಿ ಬಾಡಿಗೆಗೆ 2 ರೂಮ್ ಮಾಡಿಕೊಂಡಿದ್ದ ಮನೋರಂಜನ್

Posted by Vidyamaana on 2023-12-23 21:33:16 |

Share: | | | | |


ಲೋಕಸಭೆ ಭದ್ರತಾ ಲೋಪ: ಮೈಸೂರಿನಲ್ಲಿ ಬಾಡಿಗೆಗೆ 2 ರೂಮ್ ಮಾಡಿಕೊಂಡಿದ್ದ ಮನೋರಂಜನ್

ನವದೆಹಲಿ:ಸಂಸತ್ ಭವನದಲ್ಲಿ ಸ್ಮೋಕ್ ಬಾಂಬ್ ದಾಳಿ ನಡೆಸಿದ ಆರೋಪಿ ಮನೋರಂಜನ್ ಬಗ್ಗೆ ಒಂದೊಂದಾಗಿ ಸ್ಪೋಟಕ ಮಾಹಿತಿ ಹೊರ ಬೀಳುತ್ತಿದೆ.ಅವನು ಮೈಸೂರಿನಲ್ಲಿ ಬಾಡಿಗೆಗೆ ಎರಡು ರೂಮ್ ಮಾಡಿಕೊಂಡಿದ್ದ ವಿಚಾರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.ರೂಮ್ ಮಾಡಿಕೊಳ್ಳಲು ಹಣ ಹೇಗೆ ಹೊಂದಿಸುತ್ತಿದ್ದ ಎಂಬುದೇ ಪೊಲೀಸರಿಗೆ ಅಚ್ಚರಿಯಾಗಿದೆ.ಮನೆಯವರು ಹೇಳುವಂತೆ ಆತನಿಗೆ ನಾವು ಹೆಚ್ಚು ಹಣ ಕೊಡುತ್ತಿರಲಿಲ್ಲ.ದೆಹಲಿಗೆ ಹೋಗಲು, ಮೈಸೂರಿನಲ್ಲಿ ಎರಡು ರೂಮ್ ಬಾಡಿಗೆ ಪಡೆಯಲು ಹಣ ಹೇಗೆ ಹೊಂದಿಸಿದ ಎಂದು ಮನೆಯವರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.ಮನೋರಂಜನ್ ಮೈಸೂರಿನಲ್ಲಿ ಎರಡು ರೂಮ್ ಮಾಡಿಕೊಳ್ಳುವ ಅಗತ್ಯ ಏನಿತ್ತು? ಸಾಕಷ್ಟು ಸಮಯ ಹಿಂದಿನಿಂದಲೇ ಸಂಸತ್ ಭವನದ ಮೇಲೆ ದಾಳಿಗೆ ಸಂಚು ಹೂಡಲಾಗಿತ್ತೇ ಎಂಬ ಅನುಮಾನ ಇದೀಗ ವ್ಯಕ್ತವಾಗಿದ್ದು ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.


ಮೈಸೂರಿನಲ್ಲಿ ಬಾಡಿಗೆ ರೂಮನ್ನು ಪಡೆದ ಬಗ್ಗೆ ಆತನ ಸ್ನೇಹಿತರೇ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ.

ಅ.30: ಮಿತ್ತೂರಿನಲ್ಲಿ ಭಾರತ್ ವೆಹಿಕಲ್ ಬಝಾರ್ ಶುಭಾರಂಭ

Posted by Vidyamaana on 2023-10-23 15:26:10 |

Share: | | | | |


ಅ.30: ಮಿತ್ತೂರಿನಲ್ಲಿ ಭಾರತ್ ವೆಹಿಕಲ್ ಬಝಾರ್ ಶುಭಾರಂಭ

ಪುತ್ತೂರು: ಎಚ್.ಎಂ.ಎಸ್ ಗ್ರೂಪ್‌ನವರ ಭಾರತ್ ವೆಹಿಕಲ್ ಬಝಾರ್ ಅ.30ರಂದು ಮಿತ್ತೂರಿನಲ್ಲಿ ಶುಭಾರಂಭಗೊಳ್ಳಲಿದೆ. ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ದುವಾ ನೆರವೇರಿಸಲಿದ್ದು ಎಚ್.ಎಂ.ಎಸ್ ಗ್ರೂಪ್‌ನ ಚೇರ್‌ಮೆನ್ ಹರೀಶ್ ಎಂ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರು ವಾಹನ ಮಾರಾಟ ಕೇಂದ್ರವನ್ನು ಉದ್ಘಾಟಿಸಲಿದ್ದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್‌ರವರು ಕಚೇರಿ ಉದ್ಘಾಟಿಸಲಿದ್ದಾರೆ.


ಸಯ್ಯದ್ ಇಬ್ರಾಹಿಂ ಹಂಝ ತಂಙಳ್ ಪಾಟ್ರಕೋಡಿ ಹಾಗೂ ಸಯ್ಯದ್ ಮಹಮ್ಮದ್ ಮಿಹ್ರಾಜ್ ಅಲ್ ಹಾದಿ ಅಲ್ ಅಶ್‌ಅರಿ ತಂಙಳ್‌ರವರು ವಿಶೇಷ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.

ಅತಿಥಿಗಳಾಗಿ ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ, ವಿಟ್ಲ ಪೊಲೀಸ್ ಠಾಣಾ ಸರ್ಕಲ್ ಇನ್ಸ್‌ಪೆಕ್ಟರ್ ಎಚ್.ಇ ನಾಗರಾಜ್, ಕೊಂಬೆಟ್ಟು ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ನೆಟ್ಲಮುಡ್ನೂರು ಗ್ರಾ.ಪಂ ಅಧ್ಯಕ್ಷೆ ಸಮಿತಾ ಬಿ ಪೂಜಾರಿ, ಎಚ್.ಎಂ.ಎಸ್ ಗ್ರೂಪ್ ಬೆಂಗಳೂರು ಇದರ ಸುಬೋಧ್ ಬಿ ಶೆಟ್ಟಿ, ಕೊಡಾಜೆ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಹಾಜಿ ಕೊಡಾಜೆ(ರಾಜ್‌ಕಮಲ್), ಮಿತ್ತೂರು ಶುಭೋದಯ ಫ್ಯೂಯಲ್ಸ್‌ನ ಮಾಲಕ ಗೋಪಾಲಕೃಷ್ಣ ಭಟ್, ಕೆದಂಬಾಡಿ ಗ್ರಾ.ಪಂ ಸದಸ್ಯ ಪ್ರವೀಣ್ ಶೆಟ್ಟಿ ತಿಂಗಳಾಡಿ, ಪತ್ರಕರ್ತ ಲತೀಫ್ ನೇರಳಕಟ್ಟೆ, ನ್ಯಾಯವಾದಿ ರಮಾನಾಥ ರೈ, ಯುವ ಉದ್ಯಮಿ ಬಾತಿಷ್ ಅಳಕೆಮಜಲು, ಸಂಸ್ಥೆಯ ಕಟ್ಟಡದ ಮಾಲಕ ಎ ವೆಂಕಪ್ಪ ನಾಯ್ಕ, ಮಿತ್ತೂರು ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಸಲೀಂ ಕೆ.ಎಸ್ ಭಾಗವಹಿಸಲಿದ್ದಾರೆ.

ಆರು ಮಂದಿಗೆ ಗೌರವಾರ್ಪಣೆ:

ಕಬಕ ಶ್ರೀ ಮಹಾದೇವಿ ಇಂಜಿನಿಯರಿಂಗ್ ಮತ್ತು ಮೋಟಾರ್ ವರ್ಕ್ಸ್ ಇದರ ಜಯರಾಮ ಕಬಕ, ವಿನಾಯಕ ಬೆಸ್ಟ್ ಮಾರುತಿ ಪಾಯಿಂಟ್ ಕಬಕ ಇದರ ದಿನೇಶ್ ಪಿ, ಪುತ್ತೂರು ಕಾರ್ ಡೆಕೋರ್‌ನ ತೌಫೀಕ್, ಸಾನ್ವಿ ಇಂಜಿನಿಯರಿಂಗ್ ವರ್ಕ್ಸ್ ಕಬಕ ಇದರ ಮನೋಹರ ಶೆಟ್ಟಿ, ಡೇಟಿಂಗ್ ಮತ್ತು ಪೈಂಟಿಂಗ್ ಇದರ ಬಕ್ಷ್ ಪರ್ಲಡ್ಕ ಮಚ್ಚಿಮಲೆ ಹಾಗೂ ಪೈಂಟರ್ ಹರೀಶ್ ನಾಯ್ಕ ಇವರಿಗೆ ಗೌರವರ್ಪಾಣೆ ಕಾರ್ಯಕ್ರಮ ನಡೆಯಲಿದೆ.


ಭಾರತ್ ವೆಹಿಕಲ್ ಬಝಾರ್‌ನಲ್ಲಿ ಉಪಯೋಗಿಸಿದ ಕಾರುಗಳು ಹಾಗೂ ಗೂಡ್ಸ್ ವಾಹನಗಳ ಖರೀದಿ, ಮಾರಾಟ ಮತ್ತು ವಿನಿಮಯ, ವಾಹನಗಳ ಇನ್ಸೂರೆನ್ಸ್, ವೆಹಿಕಲ್ ಫೈನಾನ್ಸ್ ಹಾಗೂ ಕಾರು ವಾಶ್ ಲಭ್ಯವಿರಲಿದೆ ಎಂದು ಎಚ್.ಎಂ.ಎಸ್ ಸಂಸ್ಥೆಯ ಪ್ರಕಟನೆ ತಿಳಿಸಿದೆ.

ಪಿಎಸ್ಐ ನೇಮಕಾತಿ ಹಗರಣ: ಮರು ಪರೀಕ್ಷೆ ಗೆ ಹೈಕೋರ್ಟ್ ಆದೇಶ

Posted by Vidyamaana on 2023-11-10 13:54:17 |

Share: | | | | |


ಪಿಎಸ್ಐ ನೇಮಕಾತಿ ಹಗರಣ: ಮರು ಪರೀಕ್ಷೆ ಗೆ ಹೈಕೋರ್ಟ್ ಆದೇಶ

ಬೆಂಗಳೂರು : 545 ಪೊಲೀಸ್ ಸಬ್ ಇನ್ಸ್ ಪೆಕ್ಟರ್ (PSI) ನೇಮಕಾತಿ ಅಕ್ರಮ ಹಿನ್ನಲೆಯಲ್ಲಿ, ಈ ಮೊದಲು ನಡೆಸಿದ್ದ ಲಿಖಿತ ಪರೀಕ್ಷೆ, ಆಯ್ಕೆ ಪಟ್ಟಿಯನ್ನು ರದ್ದುಪಡಿಸಿ, ಹೊಸದಾಗಿ ಪರೀಕ್ಷೆ ನಡೆಸಲು ಹಿಂದಿನ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ 269 ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.ಇದೀಗ ಹೈಕೋರ್ಟ್ ಪಿಎಸ್‌ಐ ನೇಮಕಾತಿಯ ಮರು ಪರೀಕ್ಷೆಗೆ ಆದೇಶ ಮಾಡಿದೆ. ಈ ಮೂಲಕ ಹೈಕೋರ್ಟ್ ಮೆಟ್ಟಿಲೇರಿದ್ದಂತ ಅಭ್ಯರ್ಥಿಗಳಿಗೆ ಬಿಗ್ ಶಾಕ್ ನೀಡಿದೆ. 


ರಾಜ್ಯ ಸರ್ಕಾರವು ಪಿಎಸ್‌ಐ ನೇಮಕಾ ಅಕ್ರಮದ ನಂತ್ರ ಪರೀಕ್ಷೆ, ಆಯ್ಕೆ ಪಟ್ಟಿ ರದ್ದುಪಡಿಸಿದ್ದನ್ನು ಪ್ರಶ್ನಿಸಿ ಅಭ್ಯರ್ಥಿ ಎನ್ ವಿ ಚಂದನ್ ಸೇರಿದಂತೆ ಆಯ್ಕೆ ಪಟ್ಟಿಯಲ್ಲಿದ್ದ 296ಕ್ಕೂ ಹೆಚ್ಚು ಅಭ್ಯರ್ಥಿಗಳು ಕೆಎಸ್ ಸಿಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ವಜಾಗೊಳಿಸಿತ್ತು. ಹೀಗಾಗಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.


ಮರು ಪರೀಕ್ಷೆ ವಿರೋಧಿಸಿ 296 ಅಭ್ಯರ್ಥಿಗಳು ಸಲ್ಲಿಸಿದ್ದಂತ ಅರ್ಜಿಯನ್ನು ವಿಚಾರಣೆ ನಡೆಸಿದ್ದಂತ ಹೈಕೋರ್ಟ್ ನ್ಯಾಯಪೀಠವು, ಮರು ಪರೀಕ್ಷೆಗೆ ಮಧ್ಯಂತರ ತಡೆಯಾಜ್ಞೆಯನ್ನು ನೀಡಿತ್ತು. ಆ ಬಳಿಕ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತ್ತು.ನ್ಯಾಯಮೂರ್ತಿ ದಿನೇಶ್ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠವು ಇಂದು ತನ್ನ ಕಾಯ್ದಿರಿಸಿದ್ದಂತ ತೀರ್ಪನ್ನು ಇಂದು ಪ್ರಕಟಿಸಿದ್ದು, 545 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿಗೆ ಮರು ಪರೀಕ್ಷೆ ನಡೆಸುವಂತ ಆದೇಶ ಹೊರಡಿಸಿದೆ. ಅಲ್ಲದೇ ಸ್ವತಂತ್ರ ಸಂಸ್ಥೆಯಿಂದ ಮರು ಪರೀಕ್ಷೆ ನಡೆಸುವಂತೆ ಹೈಕೋರ್ಟ್ ಮಹತ್ವದ ಆದೇಶ ಮಾಡಿದೆ.


ಅಂದಹಾಗೇ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಂತ 296ಕ್ಕೂ ಹೆಚ್ಚು ಅಭ್ಯರ್ಥಿಗಳು ಅಕ್ರಮ ಎಸಗಿದವರನ್ನು ಪ್ರತ್ಯೇಕಿಸಿ, ಅಕ್ರಮದಲ್ಲಿ ಭಾಗಿಯಾಗಿರದೇ ಇರುವವರನ್ನು ನೇಮಕಾತಿ ಅಂತಿಮಗೊಳಿಸುವಂತೆ ಕೋರಿದ್ದರು. ಈ ಅರ್ಜಿಗೆ ಹೈಕೋರ್ಟ್ ಮರು ಪರೀಕ್ಷೆ ನಡೆಸುವಂತೆ ಮಹತ್ವದ ತೀರ್ಪನ್ನು ಹೊರಡಿಸಿದೆ.

ವಿಟ್ಲ:ಸಹೋದರಿಬ್ಬರು ವಿಷ ಸೇವನೆ -ಗಂಭೀರ

Posted by Vidyamaana on 2023-09-13 16:21:22 |

Share: | | | | |


ವಿಟ್ಲ:ಸಹೋದರಿಬ್ಬರು ವಿಷ ಸೇವನೆ -ಗಂಭೀರ

ವಿಟ್ಲ: ಕುದ್ದುಪದವು ನಿವಾಸಿ ಸಹೋದರರಿಬ್ಬರು

ವಿಷ ಸೇವನೆ ಮಾಡಿ ಗಂಭೀರವಾಗಿ ಅಸ್ವಸ್ಥಗೊಂಡು ವಿಟ್ಲ ಆಸ್ಪತ್ರೆಗೆ ದಾಖಲಾಗಿದ್ದಾರೆ.ಮೈರ ಮೂಲದ ಕುದ್ದುಪದವು ನಿವಾಸಿ ಪವನ್ ಹಾಗೂ ಪೃಥ್ವಿ ರಾಜ್ ವಿಷ ಸೇವನೆ ಮಾಡಿದವರು ಎಂದು ತಿಳಿದು ಬಂದಿದೆ. ಎರಡು ಪ್ರತ್ಯೇಕ ತುರ್ತುವಾಹನಗಳ ಮೂಲಕ ಅಸ್ವಸ್ಥರನ್ನು ವಿಟ್ಲ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಬಳಿಕ ಅಲ್ಲಿಂದ ಹೆಚ್ಚುವರಿ ಚಿಕಿತ್ಸೆಗಾಗಿ ವರ್ಗಾವಣೆ ಮಾಡಲಾಗಿದೆ.

ಶ್ರೀ ರಾಮನ ಪ್ರಾಣಪ್ರತಿಷ್ಠೆ: ಸಿಹಿತಿಂಡಿ ಹಂಚಿ ಸಂಭ್ರಮ

Posted by Vidyamaana on 2024-01-22 21:11:36 |

Share: | | | | |


ಶ್ರೀ ರಾಮನ ಪ್ರಾಣಪ್ರತಿಷ್ಠೆ: ಸಿಹಿತಿಂಡಿ ಹಂಚಿ ಸಂಭ್ರಮ

ಪುತ್ತೂರು: ಅಯೋಧ್ಯೆಯಲ್ಲಿ ಶ್ರೀ ರಾಮಚಂದ್ರನ ಪ್ರಾಣಪ್ರತಿಷ್ಠೆ  ಹಿನ್ನೆಲೆಯಲ್ಲಿ ಪುತ್ತೂರಿನ ರಾಧಿಕ ಪ್ಲಾಜ್ಹಾ ಹಾಗೂ  ರಾಘವೇಂದ್ರ ಕಾಂಪ್ಲೆಕ್ಸ್ ನಲ್ಲಿ 

ಲಘು ಉಪಹಾರ, ಸಿಹಿತಿಂಡಿ ಹಾಗೂ ತಂಪು ಪಾನೀಯದ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭ ಆರ್ . ಭಾನುಪ್ರಕಾಶ್,ಜಗದೀಶ್ ಆಚಾರ್ಯ,ಕೃಷ್ಣಪ್ಪ ಗೌಡ,ರೋಹಿತ್,ನಾಗೇಶ್ ಆಚಾರ್ಯ,ಸಂತೋಷ ಬಂಬಿಲ ,ಪದ್ಮನಾಭ,ಅಭಿಷೇಕ್,ರಾಜೇಶ್ ಆಚಾರ್ಯ,ವಿನೋದ್,ಕೇಶವ ಅಭಿರಾ,ವೆಂಕಟೇಶ್,ಗಣೇಶ್ ಕೊಡಿಯಾಡಿ,ದೀಕ್ಷಿತ್,ಹರ್ಷಿತ್

ಹರೀಶ್ ಸಾವಿತ್ರಿ ಜ್ಯುವೆಲರಿ,ಕೃಷ್ಣಯ್ಯಾ ಆಚಾರ್ಯ,ಪ್ರಸಾದ್ ಸುಬ್ರಮಣ್ಯ,ಗಣೇಶ್ ವಿಟ್ಲ,ರಾಮಣ್ಣ ನಿಡ್ದ್ಪಳಿ,ಚಂದ್ರ ಸುಳ್ಯ ಉಪಸ್ಥಿತರಿದ್ದರು

Recent News


Leave a Comment: