ಶಿರೂರಿನ ಭೂಕುಸಿತದಲ್ಲಿ ಕಾಣೆಯಾದ ಲಾರಿ ನೀರಿನ ಅಡಿಯಲ್ಲಿ ಪತ್ತೆ; ಮಾಹಿತಿ ನೀಡಿದ ಸಚಿವ

ಸುದ್ದಿಗಳು News

Posted by vidyamaana on 2024-07-24 18:06:21 | Last Updated by Vidyamaana on 2024-07-24 18:06:21

Share: | | | | |


ಶಿರೂರಿನ ಭೂಕುಸಿತದಲ್ಲಿ ಕಾಣೆಯಾದ ಲಾರಿ ನೀರಿನ ಅಡಿಯಲ್ಲಿ ಪತ್ತೆ; ಮಾಹಿತಿ ನೀಡಿದ ಸಚಿವ

ಕಾರವಾರ: ಉತ್ತರ ಕನ್ನಡದ ಶಿರೂರಿನ ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಕೋಝಿಕ್ಕೋಡ್ ಮೂಲದ ಅರ್ಜುನ್ ಅವರ ಲಾರಿ ಎಂದು ನಂಬಲಾದ ಟ್ರಕ್ ನದಿಯ ಆಳದಲ್ಲಿ ಇರುವ ಸುಳಿವು ಲಭ್ಯವಾಗಿದೆ. ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಇದನ್ನು ಖಚಿತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಸಚಿವರು ಮಾಹಿತಿ ನೀಡಿದ್ದಾರೆ.

ನದಿಯ ಕೆಳಭಾಗದಲ್ಲಿ ಟ್ರಕ್ ಪತ್ತೆಯಾಗಿದೆ ಎಂದು ತಿಳಿದು ಬಂದಿದ್ದು ಅದಕ್ಕಾಗಿ ಶೋಧ ನಡೆಯುತ್ತಿದೆ.

ಶಿರೂರಿನಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯ ಒಂಬತ್ತನೇ ದಿನದಂದು, ಲಾರಿಯ ಬಗ್ಗೆ ನಿರ್ಣಾಯಕ ಮಾಹಿತಿಯನ್ನು ಪಡೆಯಲಾಗಿದೆ. ಇಂದು ಬೆಳಗ್ಗೆ ಬೂಮ್ ಲೆಂಗ್ತ್ ಕ್ರೇನ್ ಬಂದಿದ್ದು, ತಪಾಸಣೆ ಪುನರಾರಂಭವಾಗಿದೆ. ಈ ಯಂತ್ರವು 60 ಅಡಿ ಆಳದವರೆಗೆ ಹುಡುಕಬಲ್ಲ ಸಾಮರ್ಥ್ಯ ಹೊಂದಿದೆ. ಪೊಲೀಸ್ ವಾಹನದೊಂದಿಗೆ ವಾಹನವನ್ನು ಸ್ಥಳಕ್ಕೆ ತರಲಾಗಿದೆ.

ಈ ಕುರಿತು ಕೃಷ್ಣ ಬೈರೇಗೌಡ Xನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ X ಖಾತೆಯಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.ಜುಲೈ 16 ರಂದು ಬೆಳಿಗ್ಗೆ ಕೋಝಿಕ್ಕೋಡ್‌ನ ಕಂಡ್ಯಕ್ಕಲ್ ಮೂಲದ ಅರ್ಜುನ್ (30) ಕರ್ನಾಟಕ-ಗೋವಾ ಗಡಿಯಲ್ಲಿ ಹಾದು ಹೋಗುವ ಪನ್ವೇಲ್-ಕನ್ಯಾಕುಮಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದ್ದರು. ಭೂಕುಸಿತದಲ್ಲಿ ಟೀ ಅಂಗಡಿ ಮಾಲೀಕ ಸೇರಿದಂತೆ 10 ಜನರು ಸಾವನ್ನಪ್ಪಿದ ಸ್ಥಳದಲ್ಲಿ ಲಾರಿಯ ಜಿಪಿಎಸ್ ಸ್ಥಳವನ್ನು ಕೊನೆಯದಾಗಿ ಪತ್ತೆ ಹಚ್ಚಲಾಯಿತು.

 Share: | | | | |


ಜುಲೈ 29 : ಶ್ರೀರಾಮ್ ನಿಂದ ಬೃಹತ್ ಮೇಳ

Posted by Vidyamaana on 2023-07-28 16:19:22 |

Share: | | | | |


ಜುಲೈ 29 : ಶ್ರೀರಾಮ್ ನಿಂದ ಬೃಹತ್ ಮೇಳ

ಪುತ್ತೂರು: ಶ್ರೀರಾಮ್ನಲ್ಲಿ ಜುಲೈ 29ರಂದು ಎಲ್ಲಾ ಮಾದರಿಯ ವಾಹನಗಳ ಖರೀದಿ ಹಾಗೂ ಮಾರಾಟದ ಬೃಹತ್ ಮೇಳ ನಡೆಯಲಿದೆ.

ಪುತ್ತೂರಿನ ನೆಹರುನಗರ ಮಾಸ್ಟರ್ ಪ್ಲಾನರಿ ಬಳಿಯ ಎಸ್.ಆರ್. ರೋಡಿನ ನಂದಾದೀಪ ಶಾರದಾ ಯಾರ್ಡಿನಲ್ಲಿ ಮೇಳ ಹಮ್ಮಿಕೊಳ್ಳಲಾಗಿದೆ. ಮೇಳಕ್ಕೆ ಪೂರಕ ಎಂಬಂತೆ ಶ್ರೀರಾಮ್ ಫೈನಾನ್ಸ್ ಸಂಸ್ಥೆ ವತಿಯಿಂದ ಸಾಲ ಸೌಲಭ್ಯದ ವ್ಯವಸ್ಥೆಯೂ ಇದೆ ಎಂದು ಪ್ರಕಟಣೆ ತಿಳಿಸಿದೆ.ಹೆಚ್ಚಿನ ವಿವರಗಳಿಗೆ ಈ ನಂಬರ್ ನ್ನು ಸಂಪರ್ಕಿಸಿ


 Kaushik - 9008920180, Sudhakar -96864 31133 Lakshmikanth-8073143248, Raksha -8448997061

Anil kumar -9845341253

ಭಾರತದ ಬೆನ್ನಲ್ಲೇ ಚಂದ್ರನಲ್ಲಿಗೆ ನೌಕೆ ಹಾರಿಸಿದ ರಷ್ಯಾ

Posted by Vidyamaana on 2023-08-12 01:45:46 |

Share: | | | | |


ಭಾರತದ ಬೆನ್ನಲ್ಲೇ ಚಂದ್ರನಲ್ಲಿಗೆ ನೌಕೆ ಹಾರಿಸಿದ ರಷ್ಯಾ

ನವದೆಹಲಿ: ಭಾರತವು ತಿಂಗಳ ಹಿಂದಷ್ಟೇ ಚಂದ್ರನಲ್ಲಿಗೆ ಬಾಹ್ಯಾಕಾಶ ನೌಕೆ ಉಡಾವಣೆ ಮಾಡಿತ್ತು. ಅದಿನ್ನೂ ಚಂದ್ರನ ಕಕ್ಷೆಯಲ್ಲಿದ್ದು ಅಂಗಳಕ್ಕೆ ಇಳಿಯಲು ಸಾಧ್ಯವಾಗಿಲ್ಲ‌. ಬಾಹ್ಯಾಕಾಶ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿರುವ ರಷ್ಯಾ ಈಗ ತರಾತುರಿಯಲ್ಲಿ ಚಂದ್ರನೆಡೆಗೆ ನೌಕೆ ಕಳಿಸಿಕೊಟ್ಟಿದೆ. ಸುಮಾರು 50 ವರ್ಷಗಳ ಬಳಿಕ ಮೊದಲ ಬಾರಿ ದಿಢೀರ್ ಎಂಬಂತೆ ಚಂದ್ರನೆಡೆಗೆ ನೌಕೆಯನ್ನು ಕಳುಹಿಸಿದ್ದು ಜಗತ್ತಿನ ಗಮನ ಸೆಳೆದಿದೆ. 


ಒಂದು ವರ್ಷದಿಂದ ಉಕ್ರೇನ್‌ನೊಂದಿಗೆ ಸಂಘರ್ಷದಲ್ಲಿ ತೊಡಗಿರುವ ರಷ್ಯಾ ಈಗ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಸಾಧನೆಗೆ ಹೆಜ್ಜೆ ಇಟ್ಟಿದೆ. ಅಂದಹಾಗೆ, 1976ರ ಬಳಿಕ ರಷ್ಯಾ ಮೊದಲ ಬಾರಿಗೆ ಚಂದ್ರನೆಡೆಗೆ ಕುತೂಹಲದ ದೃಷ್ಟಿ ಬೀರಿದೆ. 

ಲೂನಾ-25 ಪ್ರೋಬ್ ಅನ್ನು ಹೊತ್ತ ರಾಕೆಟ್ ಗುರುವಾರ ಮಧ್ಯಾಹ್ನ ವೇಳೆಗೆ ವೊಸ್ಟೊಚ್ನಿ ಕಾಸ್ಮೊಡ್ರೋಮ್‌ನಿಂದ ಉಡಾವಣೆಯಾಗಿದೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮಾಸ್ ತಿಳಿಸಿದೆ. ಈ ನೌಕೆಯು ಒಂದೇ ವಾರದ ಅಂತರದಲ್ಲಿ ಅಂದರೆ, ಆಗಸ್ಟ್ 21ರ ವೇಳೆಗೆ ಚಂದ್ರನ ಅಂಗಳ ತಲುಪಲಿದೆ. 


ಕೇವಲ 5 ದಿನಗಳಲ್ಲಿ ಚಂದ್ರನ ಕಕ್ಷೆಯನ್ನು ತಲುಪಲಿದ್ದು ಅಲ್ಲಿಂದ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿಯುವುದಕ್ಕೆ ತಯಾರಿ ನಡೆಸಲಿದೆ. ಇದೇ ಮೊದಲ ಬಾರಿಗೆ, ಭೂಮಿಯಿಂದ ಕಳಿಸಲ್ಪಟ್ಟ ನೌಕೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ಸಾಹಸ ಮಾಡಲಿದೆ. ಇಲ್ಲಿವರೆಗೆ ಚಂದ್ರನ ಮೇಲೆ ನಡೆಸಲಾಗಿರುವ ಎಲ್ಲಾ ಕಾರ್ಯಾಚರಣೆಗಳು ಸಮಭಾಜಕ ವಲಯದಲ್ಲಿ ಮಾತ್ರ ಇಳಿದಿವೆ ಎಂದು ರೋಸ್ಕೊಸ್ಮಾಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೆಟಿಎಂ ಕಪ್ ಸಿಸನ್ 2 - 2024ರ ಸ್ಪರ್ಧೆಗೆ ಮನ್ವಿತ್ ಕುಮಾ‌ರ್, ವಿಜಯ ಕುಮಾರ್ ಆಯ್ಕೆ

Posted by Vidyamaana on 2024-03-23 19:39:14 |

Share: | | | | |


ಕೆಟಿಎಂ ಕಪ್ ಸಿಸನ್ 2 - 2024ರ ಸ್ಪರ್ಧೆಗೆ  ಮನ್ವಿತ್ ಕುಮಾ‌ರ್, ವಿಜಯ ಕುಮಾರ್ ಆಯ್ಕೆ

ಪುತ್ತೂರು: ಕೊಯಂಬುತ್ತೂರಿನ ಕೆಎಆರ್‌ಐ ಮೊಟಾ‌ರ್ ಸ್ಪೀಡ್‌ವೇಯಲ್ಲಿ ಮಾ 24 ರಂದು ನಡೆಯುವ ದೇಶದ ಅತೀ ದೊಡ್ಡ ಬೈಕ್ ರೇಸ್ ಕೆಟಿಎಂ ಕಪ್ ಸಿಸನ್ 2 -2024ರ ಸ್ಪರ್ಧೆಗೆ ಪುತ್ತೂರಿನ ಬೊಳುವಾರು ಆಕ್ಸಿಸ್ ಬ್ಯಾಂಕ್‌ ಬಳಿಯ ಆಕ್ವಾ ಫ್ಲ್ಯಾಶ್ ಡಿಟೇಲಿಂಗ್ ಮತ್ತು ಕಾರ್‌ವಾಶ್ ಸಂಸ್ಥೆಯ ಮಾಲಕ ಬೆದ್ರಳ ಮುಕೈ ನಿವಾಸಿ ಲಕ್ಷ್ಮಿ ನರಸಿಂಹ ಮೂರ್ತಿ ಇವರ ಪುತ್ರ

 ಮನ್ವಿತ್ ಕುಮಾರ್ ಮತ್ತು ವಿಜಯ  ಪೆರ್ಲಂಪಾಡಿ ನಿವಾಸಿ ದಾಸಪ್ಪ ಗೌಡ ಮತ್ತು ರಾಧಮ್ಮ ದಂಪತಿಯ ಪುತ್ರ ವಿಜಯ ಕುಮಾರ್ ಆಯ್ಕೆಯಾಗಿದ್ದಾರೆ

ಜಮೀಲಾ ಸನಿಕ ಳಿಗೆ ಮಿಡಿದ ಹೃದಯಗಳು...

Posted by Vidyamaana on 2023-09-24 11:14:53 |

Share: | | | | |


ಜಮೀಲಾ ಸನಿಕ ಳಿಗೆ ಮಿಡಿದ ಹೃದಯಗಳು...

    ಹ್ರದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರೂ  ಆರೋಗ್ಯ ವಂತಳಾಗಿಯೇ ಕಾಣುತ್ತಿದ್ದ ಮಗು... ಸಾವಕಾಶವಾಗಿ ಶಸ್ತ್ರಕ್ರಿಯೆ ಯೊಂದನ್ನು ನಡೆಸಲು ವೈದ್ಯರು ಸೂಚಿಸಿದ್ದರು. ಈ ಮಧ್ಯೆ ಕುಟುಂಬ ಸಮೇತ ಪವಿತ್ರ ಉಮ್ರಾ ಕರ್ಮವನ್ನು ನಿರ್ವಹಿಸಿ ಬಂದಿದ್ದರು,ಮಗುವನ್ನು ಶಾಲೆಗೂ ದಾಖಲು ಮಾಡಿದ್ದರು.

ಇದ್ದಕ್ಕಿದ್ದಂತೆಯೇ ಇತ್ತೀಚೆಗೆ ಮಗು ತೀವ್ರ ಅನಾರೋಗ್ಯಳಾದಾಗ ಬೆಂಗಳೂರಿನ ನಾರಾಯಣ ಹ್ರದಯಾಲಯದಲ್ಲಿ ದಾಖಲುಮಾಡಿದ್ದರು.

  ಲಕ್ಷಾಂತರ ರೂಪಾಯಿ ಗಳನ್ನು ವ್ಯಯಿಸಿ ಚಿಕಿತ್ಸೆ ಮಾಡುತ್ತಾ ಕಂದಮ್ಮಳ ಜೀವರಕ್ಷಿಸಲು ಶತಪ್ರಯತ್ನ ಪಡುತ್ತಿದ್ದರೂ ಕೊನೆಗೆ ಶಸ್ತ್ರಕ್ರಿಯೆಗೂ ಸ್ಪಂದಿಸದೆ , ಅಲ್ಲಾಹನ ಅನುಲ್ಲಂಘನೀಯ ವಿಧಿಯ ಮುಂದೆ ಆ ಮಗು ಕೊನೆಯುಸಿರೆಳೆಯಿತು. ಅಲ್ಲಾಹನೇ...! ಸಹನೆ ನೀಡು...ಮಾತಾ ಪಿತರಿಗೆ  ಫಲಶ್ರುತಿಯಾದ ಸಂತಾನಗಳಲ್ಲಿ ಸೇರಿಸು.. ಸ್ವರ್ಗೋದ್ಯಾವನದಲ್ಲಿ ಒಂದು ಗೂಡಿಸು....ಆಮೀನ್...

*"ಅಲ್ಲಾಹನು ಹೇಳುತ್ತಿದ್ದಾನೆಂದು ಪ್ರವಾದಿ ಸ.ಅ.ರು ಹೇಳಿದರು: ನನ್ನ ದಾಸನಾದ ಸತ್ಯ ವಿಶ್ವಾಸಿಯ ನಿಕಟ ಬಂಧುವನ್ನು ನಾನು ಕರೆಸಿಕೊಂಡಾಗ (ಅರ್ಥಾತ್ ಮರಣಗೊಳಿಸಿದಾಗ) ಆ ಸತ್ಯವಿಶ್ವಾಸಿಯು ಸಹನೆಯೊಂದಿಗೆ ತನ್ನ ಪ್ರತಿಫಲವನ್ನು ಆಗ್ರಹಿಸಿದರೆ ಅವನಿಗೆ ಸ್ವರ್ಗ ವಲ್ಲದೆ ಬೇರೆ ಪ್ರತಿಫಲವಿಲ್ಲ."*


ಕಂಠಪೂರ್ತಿ ಕುಡಿದು ಯುವತಿಯರ ಹೈಡ್ರಾಮ: ರಸ್ತೆಯಲ್ಲಿ ಬಿದ್ದು ಒದ್ದಾಡಿದ ನಾರಿಮಣಿಯರು

Posted by Vidyamaana on 2023-10-20 20:54:38 |

Share: | | | | |


ಕಂಠಪೂರ್ತಿ ಕುಡಿದು ಯುವತಿಯರ ಹೈಡ್ರಾಮ: ರಸ್ತೆಯಲ್ಲಿ ಬಿದ್ದು ಒದ್ದಾಡಿದ ನಾರಿಮಣಿಯರು

ಬೆಂಗಳೂರು ;- ಕೋರಮಂಗಲದ ಡ್ರಂಕನ್ ಡ್ಯಾಡಿ ಎಂಬ ಪಬ್‌ನಲ್ಲಿ ಹುಡುಗಿಯರು ಕಂಠ ಪೂರ್ತಿ ಕುಡಿದಿದ್ದರು. ಬಳಿಕ ಕುಡಿದು ಟೈಟ್‌ ಆಗಿ ರಾತ್ರಿ 12: 30ರ ಸುಮಾರಿಗೆ ರಸ್ತೆಗಿಳಿದು ಹೈಡ್ರಾಮಾವನ್ನೇ ಮಾಡಿದ್ದಾರೆ. ಮೈಮೇಲೆ ಪ್ರಜ್ಞೆಯೇ ಇಲ್ಲದಷ್ಟು ಕುಡಿದು ರಸ್ತೆಯಲ್ಲಿ ಬಿದ್ದು ಒದ್ದಾಡಿದ್ದಾರೆ.ಒಬ್ಬ ಯುವತಿಯಂತೂ ನಡುರಸ್ತೆಯಲ್ಲೇ ಮಲಗಿಕೊಂಡರೆ, ಮತ್ತೊಬ್ಬಳು ಕಾರಿನ ಮೇಲೆ ಕುಳಿತುಕೊಂಡು ಪೋಸ್‌ ನೀಡಿದ್ದಾಳೆ. ಮತ್ತೊಬ್ಬಳು ಎಲ್ಲೆಂದರಲ್ಲಿ ಬಿದ್ದು ‌ಒದ್ದಾಡಿದ್ದಾಳೆ. ಕುಡಿದ‌ ಮತ್ತಿನಲ್ಲಿ ತಾವು ಏನು ಮಾಡುತ್ತಿದ್ದೇವೆ ಎಂಬುದೇ ಅರಿವಿಲ್ಲದಂತೆ ಹುಚ್ಚಾಟವಾಡಿದ್ದಾರೆ.


ನಡುರಸ್ತೆಯಲ್ಲೇ ಹುಡುಗಿಯರ ಆಟೋಟಾಪದಿಂದ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಇತ್ತ ಇವರ ರಂಪಾಟವನ್ನೆಲ್ಲ ನೋಡುತ್ತಿದ್ದ ಜನರು ವಿಡಿಯೊ ಮಾಡಿಕೊಂಡಿದ್ದಾರೆ. ಕೆಲ ಸ್ಥಳೀಯರು ಮತ್ತು ಸಾರ್ವಜನಿಕರಿಗೆ ಹಲ್ಲೆ‌ ಮಾಡಿದ ಆರೋಪವು ಕೇಳಿ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೋರಮಂಗಲ ಪೊಲೀಸರು ಭೇಟಿ ನೀಡಿ ಯುವತಿಯರಿಗೆ ವಾರ್ನ್ ಮಾಡಿ ಕಳುಹಿಸಿದ್ದಾರೆ.

ಪುತ್ತೂರು: ಆಂಬ್ಯುಲೆನ್ಸ್ -ಕಂಟೈನರ್ ಅಪಘಾತ-ಐರ್ವರಿಗೆ ಗಾಯ

Posted by Vidyamaana on 2024-09-02 17:19:31 |

Share: | | | | |


ಪುತ್ತೂರು: ಆಂಬ್ಯುಲೆನ್ಸ್ -ಕಂಟೈನರ್ ಅಪಘಾತ-ಐರ್ವರಿಗೆ ಗಾಯ

ಪುತ್ತೂರು: ಇಂದು ( ಸೆ.2) ಸಂಜೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಬಳಿ ಆಂಬ್ಯುಲೆನ್ಸ್ ಮತ್ತು ಕಂಟೈನರ್ ಮಧ್ಯೆ ಅಪಘಾತ ಸಂಭವಿಸಿ ಆಂಬ್ಯುಲೆನ್ಸ್‌ನಲ್ಲಿದ್ದ ಐದು ಮಂದಿ ಗಾಯಗೊಂಡ ಘಟನೆ ನಡೆದಿದೆ.

ಜಯಪ್ರಕಾಶ್ ಎಂಬವರು ಸುಳ್ಯದಿಂದ ಮಂಗಳೂರು ಆಸ್ಪತ್ರೆಗೆ ಮಗುವೊಂದನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತಿದ್ದ ಆಂಬ್ಯುಲೆನ್ಸ್(ಕೆಎ 21, ಬಿ 1971) ಹಾಗೂ ಪುತ್ತೂರು ಕಡೆಯಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕಂಟೈನರ್ ಲಾರಿ ಮಧ್ಯೆ ಅಪಘಾತ ಸಂಭವಿಸಿದ್ದು ಘಟನೆಯಿಂದ ಆಂಬ್ಯುಲೆನ್ಸ್ ನಲ್ಲಿದ್ದ ಮಗು ಸಹಿತ ಐದು ಮಂದಿಗೆ ಗಾಯವಾಗಿದ್ದು ಅವರನ್ನು ಇನ್ನೊಂದು ಆಂಬ್ಯುಲೆನ್ಸ್‌ ಕರೆಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

Recent News


Leave a Comment: