ಇಂದು (ಜು.O6) ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಕಾಲೇಜಿಗೆ ರಜೆ

ಸುದ್ದಿಗಳು News

Posted by vidyamaana on 2024-07-06 04:30:03 |

Share: | | | | |


ಇಂದು (ಜು.O6) ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಕಾಲೇಜಿಗೆ ರಜೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಹಿನ್ನೆಲೆಯಲ್ಲಿ ಶನಿವಾರ (ನಾಳೆ, ಜು.6) ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ

ಪದವಿ ಪೂರ್ವ ಕಾಲೇಜುಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರಜೆ ಘೋಷಿಸಿ ಆದೇಶಿಸಿದ್ದಾರೆ.

 Share: | | | | |


ನರಿಮೊಗರು ಟಿಪಿಎಲ್ ಟೈ ಬ್ರೇಕರ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯ

Posted by Vidyamaana on 2024-02-27 15:54:22 |

Share: | | | | |


ನರಿಮೊಗರು ಟಿಪಿಎಲ್ ಟೈ ಬ್ರೇಕರ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯ

ಪುತ್ತೂರು: ಪುರುಷರಕಟ್ಟೆ ಟೈ ಬ್ರೇಕರ್ಸ್ ನೇತೃತ್ವದಲ್ಲಿ ಮತ್ತು ಪ್ರಕಾಶ್ ಪುರುಷರಕಟ್ಟೆ ಸಾರಥ್ಯದಲ್ಲಿ ನರಿಮೊಗರು ಶಾಲಾ ಮೈದಾನದಲ್ಲಿ ಫೆ. 24, 25ರಂದು ನಡೆದ 25ನೇ ವರ್ಷದ ಹೊನಲು ಬೆಳಕಿನ ಟಿಪಿಎಲ್ ಟೈ ಬ್ರೇಕರ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಫ್ರೆಂಡ್ಸ್ ಸರ್ಕಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. 

2 ದಿನಗಳ ಪಂದ್ಯ ಅದ್ಭುತವಾಗಿ ಮೂಡಿಬಂದಿದ್ದು, ಗ್ರಾಮೀಣ ಪ್ರತಿಭೆಗಳಿಗೆ ಸೂಕ್ತ ವೇದಿಕೆಯಾಗಿತ್ತು. ತುಳುನಾಡ ಚಕ್ರವರ್ತಿ ತಂಡ ರನ್ನರ್ಸ್ ಆಗಿ ಮೂಡಿಬಂತು. ಪ್ರಥಮ ಬಹುಮಾನವಾಗಿ 50 ಸಾವಿರ ರೂ. ಹಾಗೂ ದ್ವಿತೀಯ ಬಹುಮಾನವಾಗಿ 25 ಸಾವಿರ ರೂ.ವನ್ನು ನೀಡಲಾಯಿತು. ಗೆದ್ದ ತಂಡದ ಮಾಲಕ ಅನ್ಸರ್ ಪುರುಷರಕಟ್ಟೆ ಅವರಿಗೆ ಫ್ರಿಡ್ಜ್ ಅನ್ನು ಕೊಡುಗೆಯಾಗಿ ನೀಡಿ ಗೌರವಿಸಲಾಯಿತು.

 ಸರಣಿ ಶ್ರೇಷ್ಠ  ಪ್ರಶಸ್ತಿಗೆ ಭಾಜನರಾದ ಮಸೂದ್ ಮುಕ್ವೆ ಪಂದ್ಯದುದ್ದಕ್ಕೂ ಪ್ರೇಕ್ಷಕರ ಗಮನ ಸೆಳೆದರು. ಬೆಸ್ಟ್ ಕ್ಯಾಪ್ಟನ್, ಬೆಸ್ಟ್ ಬ್ಯಾಟ್ಸ್ ಮನ್, ಬೆಸ್ಟ್ ಬೌಲರ್, ಬೆಸ್ಟ್ ಕೀಪರ್ ಹೀಗೆ ತಂಡವನ್ನು ಮುನ್ನಡೆಸುವಲ್ಲಿ ಆಲ್ ರೌಂಡರ್ ಆಗಿ ಕಾರ್ಯನಿರ್ವಹಿಸಿದರು. ಸಮಯ ಹಾಗೂ ಸಂದರ್ಭಕ್ಕೆ ತಕ್ಕಂತೆ ಎಲ್ಲಾ ವಲಯಗಳಲ್ಲೂ ತನ್ನ ಛಾಪು ಮೂಡಿಸಿ, ಸರಣಿ ಶ್ರೇಷ್ಠ ಎನಿಸಿಕೊಂಡರು.

ಆಬೀದ್ ರೆಂಜಲಾಡಿ ಅಂಡರ್ ಗ್ರೌಂಡ್ ನಲ್ಲಿ ಬೆಸ್ಟ್ ಬೌಲರ್, ಇಸ್ಮಾಯಿಲ್ ರೆಂಜಲಾಡಿ ಅಂಡರ್ ಗ್ರೌಂಡ್ ನಲ್ಲಿ ಬೆಸ್ಟ್ ಬ್ಯಾಟ್ಸ್ ಮನ್, ಬಾತಿ ಐ.ಬಿ. ಉತ್ತಮ ಫೀಲ್ಡರ್, ಸಾಸ್ಸಾ ಉತ್ತಮ ಕೀಪರ್, ಜಂಜಿರ್ ಕೊಡ್ನೀರ್ ಉತ್ತಮ ಹಿಡಿತಗಾರ, ಸಂದೀಪ್ ಎನರ್ಜಿಕ್ ಪ್ಲೇಯರ್ ಪ್ರಶಸ್ತಿಯನ್ನು ಪಡೆದುಕೊಂಡರು.

ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಇಂದಿನ (ಎ 28)ಪ್ರಚಾರ ಸಭೆಗಳು

Posted by Vidyamaana on 2023-04-28 02:41:26 |

Share: | | | | |


ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಇಂದಿನ (ಎ 28)ಪ್ರಚಾರ ಸಭೆಗಳು

ಪುತ್ತೂರು: ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರ ಚುನಾವಣಾ ಪ್ರಚಾರ ಕಾರ್ಯ ಬಿರುಸಿನಿಂದ ಸಾಗುತ್ತಿದ್ದು, ಗ್ರಾಮಾಂತರ ಭಾಗಗಳಲ್ಲಿ ಪ್ರಚಾರ ಸಭೆಗಳನ್ನು ಆಯೋಜಿಸಲಾಗುತ್ತಿದೆ.

BREAKING NEWS: ರಾಹುಲ್ ಗಾಂಧಿ ಬಿಟ್ಟುಕೊಟ್ಟ ಲೋಕಸಭಾ ಕ್ಷೇತ್ರ ಯಾವುದು ಗೊತ್ತಾ!!

Posted by Vidyamaana on 2024-06-17 20:02:28 |

Share: | | | | |


BREAKING NEWS: ರಾಹುಲ್ ಗಾಂಧಿ ಬಿಟ್ಟುಕೊಟ್ಟ ಲೋಕಸಭಾ ಕ್ಷೇತ್ರ ಯಾವುದು ಗೊತ್ತಾ!!

ನವದೆಹಲಿ: ಉತ್ತರ ಪ್ರದೇಶದ ರಾಯ್ ಬರೇಲಿ ಮತ್ತು ಕೇರಳದ ವಯನಾಡ್ ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು  ಕೇರಳದ ವಯನಾಡು ಕ್ಷೇತ್ರವನ್ನು ಬಿಟ್ಟುಕೊಟ್ಟುಉತ್ತರ ಪ್ರದೇಶದ ರಾಯ್ ಬರೇಲಿ ಉಳಿಸಿ ಕೊಳ್ಳಲಿದ್ದಾರೆ  ಎಂದು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಪ್ರಕಟಿಸಿದ್ದಾರೆ.

ಅಲ್ಫಿಯಾ ಜೊತೆ ಅಖಿಲ್ ಮದುವೆ: ತಾಳಿ ಕಟ್ಟುವ ವೇಳೆ ವಧುವನ್ನು ಎಳೆದೊಯ್ದ ಪೊಲೀಸರು.

Posted by Vidyamaana on 2023-06-21 07:59:35 |

Share: | | | | |


ಅಲ್ಫಿಯಾ ಜೊತೆ ಅಖಿಲ್ ಮದುವೆ: ತಾಳಿ ಕಟ್ಟುವ ವೇಳೆ ವಧುವನ್ನು ಎಳೆದೊಯ್ದ ಪೊಲೀಸರು.

ತಿರುವನಂತಪುರಂ: ಮುಸ್ಲಿಂ ಯುವತಿಯೊಬ್ಬಳು ಹಿಂದೂ ಯುವಕನನ್ನು ಮದುವೆ ಆಗಲು ಹೋದ ವೇಳೆ ಪೊಲೀಸರು ಮಂಟಪದಿಂದ ಯುವತಿಯನ್ನು ಎಳೆದೊಯ್ದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.ಜೂ.17 ರಂದು ಆಲ್ಫಿಯಾ (18) ಅಖಿಲ್ (21) ನನ್ನು ತಿರುವನಂತಪುರಂನಲ್ಲಿರುವ ಕೋವಲಂ ದೇವಾಲಯದಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ. ಇನ್ನೇನು ಮದುವೆ ಶಾಸ್ತ್ರ ನಡೆದು ತಾಳಿ ಕಟ್ಟುವ ವೇಳೆಯೇ ಪೊಲೀಸರು ದೇವಸ್ಥಾನಕ್ಕೆ ಬಂದು ಯುವತಿಯನ್ನು ಎಳೆದುಕೊಂಡು ಹೋಗಿದ್ದಾರೆ.ಮುಸ್ಲಿಂ ಯುವತಿ ಆಗಿರುವ ಆಲ್ಫಿಯಾ ಹಿಂದೂ ಯುವಕ ಅಖಿಲ್‌ ನನ್ನು ಕಳೆದ ಕೆಲ ಸಮಯದಿಂದ ಪ್ರೀತಿಸುತ್ತಿದ್ದಾಳೆ. ಇಬ್ಬರ ಧರ್ಮ ಬೇರೆಯಾಗಿದ್ದರಿಂದ ಎರಡೂ ಕಡೆಯಿಂದ ಸಂಬಂಧಕ್ಕೆ ವಿರೋಧವಿದೆ.


ಜೂ.16 ರಂದು ಆಲ್ಫಿಯಾ ವಿವಾಹವಾಗುವ ನಿಟ್ಟಿನಲ್ಲಿ ತಿರುವನಂತಪುರಂಕ್ಕೆ ತೆರಳಿದ್ದಾರೆ. ಮರುದಿನ ಆಲ್ಫಿಯಾ ಮನೆಯವರು ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದಾರೆ ದೇವಸ್ಥಾನದಲ್ಲಿ ಇನ್ನೇನು ಅಖಿಲ್‌ – ಆಲ್ಫಿಯಾ ವಿವಾಹ ನಡೆಯಬೇಕು ಅಷ್ಟರಲ್ಲೇ ಪೊಲೀಸರು ಬಂದಿದ್ದಾರೆ. ಪ್ರಕರಣವನ್ನು ಮುಕ್ತಾಯಗೊಳಿಸಲು ಆಲ್ಫಿಯಾಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕಾಗಿದ್ದು,  ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ನಿಟ್ಟಿನಲ್ಲಿ ನಮ್ಮೊಂದಿಗೆ ಬನ್ನಿ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಪೊಲೀಸರ ಮಾತನ್ನು ಕೇಳದಿದ್ದಕ್ಕೆ ಆಲ್ಫಿಯಾಳನ್ನು ಪೊಲೀಸರು ಎಳೆದೊಯ್ದು ವಾಹನದಲ್ಲಿ ಕೂರಿಸಿದ್ದಾರೆ.ನಾನು ಸ್ವಇಚ್ಛೆಯಿಂದ ಅಖಿಲ್‌ ನೊಂದಿಗೆ ಮದುವೆಯಾಗಲು ಮನೆಯಿಂದ ಬಂದಿರುವುದಾಗಿ ಪೊಲೀಸರ ಬಳಿ ಜೂ.16 ರಂದು ಹೇಳಿದ್ದೆ. ನನಗೆ 18 ವರ್ಷ ಆಗಿಲ್ಲ ಎಂದಿದ್ದಾರೆ. ನನ್ನ ಮನೆಯವರು ದೂರು ನೀಡಿದ ಬಳಿಕ ಈ ಘಟನೆ ನಡೆದಿದೆ ಎಂದು ಯುವತಿ ಅಲ್ಫಿಯಾ ಹೇಳಿದ್ದಾಳೆ.

ಲೋಕಸಭೆಯಲ್ಲಿ ಬಿಜೆಪಿ ಹಿನ್ನಡೆಗೆ ಕಾರಣ ತಿಳಿಸಿದ ಡಿ.ವಿ ಸದಾನಂದಗೌಡ

Posted by Vidyamaana on 2024-07-01 22:01:49 |

Share: | | | | |


ಲೋಕಸಭೆಯಲ್ಲಿ ಬಿಜೆಪಿ ಹಿನ್ನಡೆಗೆ ಕಾರಣ ತಿಳಿಸಿದ ಡಿ.ವಿ ಸದಾನಂದಗೌಡ

ಬೆಂಗಳೂರು :- ಲೋಕಸಭೆಯಲ್ಲಿ ಬಿಜೆಪಿ ಹಿನ್ನಡೆಗೆ ಡಿವಿ ಸದಾನಂದಗೌಡ ಕಾರಣ ತಿಳಿಸಿದ್ದಾರೆ.ಲೋಕಸಭಾ ಚುನಾವಣೆಯಲ್ಲಿ‌ 8 ಕಡೆ ಬಿಜೆಪಿ ಸೋಲಿಗೆ ಹಾಗೂ ಉಳಿದೆಡೆ ಕಡಿಮೆ ಮಾರ್ಜಿನ್ ಬರಲು ಪ್ರಧಾನಿ ಮೋದಿಯವರ ಮೇಲಿನ ನಮ್ಮ ಅತಿಯಾದ ಆತ್ಮ ವಿಶ್ವಾಸ ಹಾಗೂ ಕಾರ್ಯಕರ್ತರ ಕಡಗಣನೆಯೇ ಕಾರಣ ಎಂದರು.

ಈ ಲೋಕಸಭಾ ಚುನಾವಣೆಯಲ್ಲೂ ನಮಗೆ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ನಾವು ವಿಧಾನಸಭಾ ಫಲಿತಾಂಶದ ಹಿನ್ನೆಡೆಯನ್ನು ಗಂಭೀರವಾಗಿ ಪರಿಗಣಿಸಬೇಕಿತ್ತು. ಕಾರ್ಯಕರ್ತರನ್ನು ಉತ್ತೇಜಿಸಿ ಚುನಾವಣೆ ಮಾಡುವ ಕೆಲಸ ಆಗಲಿಲ್ಲ. ಮೋದಿ ಹೆಸರಿನಲ್ಲಿ ಅತಿಯಾದ ಆತ್ಮವಿಶ್ವಾಸ ಬಿಜೆಪಿ 8 ಸೀಟ್ ಕಳೆದುಕೊಳ್ಳಲು ಕಾರಣವಾಯಿತು ಎಂದು ಅವರು ಹೇಳಿದ್ದಾರೆ.

ಇನ್ನರ್‌ವೀಲ್ ಕ್ಲಬ್ ಪುತ್ತೂರು ಅಧ್ಯಕ್ಷರಾಗಿ ಅಶ್ವಿನಿಕೃಷ್ಣ ಮುಳಿಯ, ಕಾರ್ಯದರ್ಶಿ ಶ್ರೀದೇವಿ ರೈ

Posted by Vidyamaana on 2023-06-13 23:20:14 |

Share: | | | | |


ಇನ್ನರ್‌ವೀಲ್ ಕ್ಲಬ್ ಪುತ್ತೂರು ಅಧ್ಯಕ್ಷರಾಗಿ ಅಶ್ವಿನಿಕೃಷ್ಣ ಮುಳಿಯ, ಕಾರ್ಯದರ್ಶಿ ಶ್ರೀದೇವಿ ರೈ

ಪುತ್ತೂರು: ಪುತ್ತೂರು ಇನ್ನ‌ವೀಲ್ ಕ್ಲಬ್‌ನ ನೂತನ ಅಧ್ಯಕ್ಷೆಯಾಗಿ ಅಶ್ವಿನಿಕೃಷ್ಣ ಮುಳಿಯ, ಕಾರ್ಯದರ್ಶಿಯಾಗಿ ಶ್ರೀದೇವಿ ರೈ, ಕೋಶಾಧಿಕಾರಿಯಾಗಿ ಸೀಮಾ ನಾಗರಾಜ್‌ರವರು ಆಯ್ಕೆಗೊಂಡಿದ್ದಾರೆ.

ಕ್ಲಬ್‌ನ ಸಂಪಾದಕಿಯಾಗಿ ಸುಧಾ ಕಾರ್ಯಪ್ಪ, ISO ಆಗಿ ಆಶಾ ನಾಯಕ್, ವೆಬ್ ಕೋ-ಆರ್ಡಿನೇಟರ್ ಆಗಿ ವಚನಾ ಜಯರಾಮ್‌ ರವರು ಆಯ್ಕೆಯಾಗಿರುತ್ತಾರೆ.

ನಿಕಟಪೂರ್ವ ಅಧ್ಯಕ್ಷೆಯಾಗಿ ಟೈನಿ ದೀಪಕ್, ಉಪಾಧ್ಯಕ್ಷೆಯಾಗಿ ರಾಜೇಶ್ವರಿ ಆಚಾ‌ ಹಾಗೂ ನಿರ್ದೇಶಕರುಗಳಾಗಿ ರಾಜೇಶ್ವರಿ ಬಲರಾಮ್, ರಮಾ ಪ್ರಭಾಕರ್, ಪುಷ್ಪಾ ಕೆದಿಲಾಯ, ವೈ. ವಿಜಯಲಕ್ಷ್ಮಿ ಶೆಣೈ ಮತ್ತು ವೀಣಾ ಜಿ.ಕೆರವರು ಆಯ್ಕೆಯಾಗಿರುತ್ತಾರೆ.

ಲೈನ್ ಎ ಲೈಟ್" ಎನ್ನುವುದು ಇನ್ನರ್‌ವೀಲ್ ಕ್ಲಬ್‌ನ ಈ ವರ್ಷದ ಧೈಯ ವಾಕ್ಯ. ಆರೋಗ್ಯ, ಸ್ವಚ್ಛತೆ, ಕಡಿಮೆ ಪೇಪರ್ ಬಳಕೆ, ಮಹಿಳಾ ಸಬಲೀಕರಣ, ಪರಿಸರ ಕಾಳಜಿ, ಬಡ ಮಕ್ಕಳ ವಿಧ್ಯಾಭ್ಯಾಸಕ್ಕೆ ನೆರವು ಹೀಗೆ ಹಲವಾರು ಯೋಜನೆಗಳು ಈ ಧೈಯ ವಾಕ್ಯದಡಿ ಬರುತ್ತದೆ. ಕ್ಲಬ್‌ನ ಎಲ್ಲಾ ಸದಸ್ಯರುಗಳು ಇದಕ್ಕೆ ಪೂರಕವಾದ ಚಟುವಟಿಕೆಗಳನ್ನು ಮಾಡಲಿದ್ದಾರೆ ಎಂದು ನಿಯೋಜಿತ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ ಇವರು ತಿಳಿಸಿದ್ದಾರೆ.

ನಾಳೆ ಪದಗ್ರಹಣ: ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜೂ.15ರಂದು ಬೆಳಗ್ಗೆ 11ರಿಂದ ರೋಟರಿ ಮನೀಷಾ ಹಾಲ್‌ನಲ್ಲಿ ನಡೆಯಲಿದೆ. ಪದಗ್ರಹಣವನ್ನು ಜಿಲ್ಲಾ ISO ರಜನಿ ಭಟ್‌ರವರು ನಡೆಸಿಕೊಡಲಿದ್ದಾರೆ.

Recent News


Leave a Comment: