ಶಿರೂರು ಭೂಕುಸಿತ ದುರಂತ : ಪತ್ತೆಯಾಯ್ತು ಎಂಟನೇ ಮೃತದೇಹ

ಸುದ್ದಿಗಳು News

Posted by vidyamaana on 2024-07-23 18:35:28 |

Share: | | | | |


ಶಿರೂರು ಭೂಕುಸಿತ ದುರಂತ : ಪತ್ತೆಯಾಯ್ತು ಎಂಟನೇ ಮೃತದೇಹ

ಕಾರವಾರ: ಶಿರೂರು ಭೂಕುಸಿತ ಸ್ಥಳದಲ್ಲಿ 8 ದಿವಸದ ಬಳಿಕ ಮತ್ತೊಂದು ಮೃತದೇಹ ಪತ್ತೆಯಾಗಿದೆ. ಈ ಮೂಲಕ 8ನೇ ಮೃತದೇಹ ಸಿಕ್ಕಂತಾಗಿದೆ. ಈ ನಡುವೆ ಕೇರಳದ ಲಾರಿ ಚಾಲಕ ಅರ್ಜುನ್‌ ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. 

ಮಂಗಳವಾರ ಬೆಳಗ್ಗೆ ಗುಡ್ಡ ಕುಸಿತದಿಂದ ನಾಪತ್ತೆಯಾಗಿದ್ದ ಮಹಿಳೆ ಸಣ್ಣಿ ಹನ್ಮಂತ ಗೌಡ (57) ಸಾವನ್ನಪ್ಪಿದ್ದು, ಮೃತದೇಹ ದೊರೆತಿದೆ. ಗಂಗಾವಳಿ ನದಿಯ ಗಂಗೆಕೊಳ್ಳ ಸಮೀಪ ಅವರ ಶವ ಪತ್ತೆಯಾಗಿದೆ. ಶಿರೂರು ಗುಡ್ಡ ಕುಸಿತದಿಂದಾಗಿ ಉಳುವರೆ ಗ್ರಾಮದಲ್ಲಿ ಮನೆ ಕುಸಿತವಾಗಿ ಸಣ್ಣಿ ಹನ್ಮಂತ ಗೌಡ ಅವರು ಕಣ್ಮರೆಯಾಗಿದ್ದರು. ಇನ್ನೂ ಅರ್ಜುನ್‌ ಸಹಿತ ಮೂವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಸ್ಥಳದಲ್ಲಿ NDRF, SDRF, ಮಿಲಿಟರಿ ಕಾರ್ಯಪಡೆಯಿಂದ ಶೋಧ ಕಾರ್ಯ ಮುಂದುವರೆದಿದೆ. 

ಕೇರಳ ಮಾಧ್ಯಮಗಳ ಕವರೇಜ್‌ 

ಸದ್ಯ ಕರ್ನಾಟಕದ ಉತ್ತರ ಕನ್ನಡದಲ್ಲಾದ ಭೂಕುಸಿತ ವರದಿಯನ್ನ ಕನ್ನಡಿಗರು ಕೂಡಾ ಮಲಯಾಳಂ ಸುದ್ದಿವಾಹಿನಿಗಳಲ್ಲಿ ವೀಕ್ಷಿಸುವಂತಾಗಿದೆ. ಕೇರಳದ ಪ್ರಮುಖ ರಾಜ್ಯ ಮಟ್ಟದ ವಾಹಿನಿಗಳು ಕಳೆದ 4 ದಿನಗಳಿಂದಲೂ ಉತ್ತರ ಕನ್ನಡದಲ್ಲಿ ಬೀಡುಬಿಟ್ಟಿವೆ. ಅರ್ಜುನ್‌ ಶೋಧ ಕಾರ್ಯಾಚರಣೆಗೆ ಹೆಚ್ಚಿನ ಒತ್ತಡ ಏರುತ್ತಿದೆ. ಜೊತೆಗೆ ಕೇರಳದ ನಾಗರಿಕ ಸುರಕ್ಷತಾ ತಂಡಗಳು ಕೂಡಾ ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲಿ ಕೇರಳದಿಂದ ಶಿರೂರಿಗೆ ತಂಡವಾಗಿ ಆಗಮಿಸಿವೆ

 Share: | | | | |


ಪಡಿತರ ಚೀಟಿ ತಿದ್ದುಪಡಿ-ಪರಿಷ್ಕೃತ ದಿನಾಂಕ ಪ್ರಕಟ

Posted by Vidyamaana on 2023-09-06 07:05:24 |

Share: | | | | |


ಪಡಿತರ ಚೀಟಿ ತಿದ್ದುಪಡಿ-ಪರಿಷ್ಕೃತ ದಿನಾಂಕ ಪ್ರಕಟ

ಪುತ್ತೂರು : ಪಡಿತರ ಚೀಟಿ ತಿದ್ದುಪಡಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಜಿಲ್ಲಾವಾರು ಬದಲಾವಣೆ ಮಾಡಿ ಆಹಾರ ಇಲಾಖೆ ಆದೇಶ ಹೊರಡಿಸಿದೆ.


ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ ಸಹಿತ ವಿವಿಧ ಜಿಲ್ಲೆಗಳಲ್ಲಿ ಸೆ. 12ರಿಂದ ಸೆ. 14ರ ವರೆಗೆ ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ಅವಕಾಶ ಕಲ್ಪಿಸಲಾಗಿದೆ. ಈ ಮೊದಲು ಸೆ.1 ರಿಂದ ಸೆ. 10ರ ವರೆಗೆ ಪಡಿತರ ಚೀಟಿ ತಿದ್ದುಪಡಿಗೆ ನಿಗದಿಪಡಿಸಿದ್ದ ಆದೇಶವನ್ನು ಇಲಾಖೆ ಹಿಂಪಡೆದಿದೆ. ಪಡಿತರ ಚೀಟಿ ತಿದ್ದುಪಡಿಗೆ ಭರಪೂರ ಅರ್ಜಿ ಸಲ್ಲಿಕೆಯಾಗುತ್ತಿರುವ ಕಾರಣದಿಂದ ಆಹಾರ ಇಲಾಖೆಯ ಸರ್ವ‌್ರನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ 1 ಗಂಟೆಯಲ್ಲಿ ಸುಮಾರು 500ಕ್ಕೂ ಅಧಿಕ ಅರ್ಜಿ ಸಲ್ಲಿಕೆಯಾಗುತ್ತಿರುವ ಕಾರಣದಿಂದ ಸರ್ವರ್ ಸಮಸ್ಯೆ ಎದುರಾಗಿತ್ತು. ಇದರಿಂದಾಗಿ ಜನರು ಪಡಿತರ ಚೀಟಿ ತಿದ್ದುಪಡಿಗೆ ವಿವಿಧ ಕೇಂದ್ರಗಳನ್ನು ಸಂಪರ್ಕಿಸಿದರೂ ತಿದ್ದುಪಡಿ ಆಗುತ್ತಿರಲಿಲ್ಲ. ಈ ಸಮಸ್ಯೆಯನ್ನು ಗಮನಿಸಿದ ಆಹಾರ ಇಲಾಖೆ ಸರ್ವರ್ ನಿಭಾಯಿಸಲು ಇದೀಗ ಜಿಲ್ಲಾವಾರು ದಿನಾಂಕವನ್ನು ನಿಗದಿಪಡಿಸಿದೆ. ಅದರಂತೆ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ ಸಹಿತ ವಿವಿಧ ಜಿಲ್ಲೆಗಳಲ್ಲಿ ಸೆ. 12ರಿಂದ ಸೆ. 14ರ ವರೆಗೆ ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ಅವಕಾಶ ಮಾಡಲಾಗಿದೆ.

ಪುತ್ತೂರು : ಬ್ರೈಟ್ ಭಾರತ್ ಸಂಸ್ಥೆಯ ಲೋಗೋ ಅನಾವರಣಗೊಳಿಸಿದ ಶಾಸಕ ಅಶೋಕ್ ಕುಮಾರ್ ರೈ

Posted by Vidyamaana on 2023-09-13 17:31:23 |

Share: | | | | |


ಪುತ್ತೂರು : ಬ್ರೈಟ್ ಭಾರತ್ ಸಂಸ್ಥೆಯ ಲೋಗೋ ಅನಾವರಣಗೊಳಿಸಿದ ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು : ವಿಧಾನಾಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ಯವರು ಪುತ್ತೂರಿನಲ್ಲಿ ನೂತನವಾಗಿ ಆರಂಭಗೊಂಡಿರುವ ಬ್ರೈಟ್ ಭಾರತ್ ಸಂಸ್ಥೆಯ ಲೋಗೋ ಅನಾವರಣಗೊಳಿಸಿದರು.



ಸಂಸ್ಥೆಯಡಿಯಲ್ಲಿ ನಾಲ್ಕು ಮನೆಗಳು ಹಾಗೂ ಲಕ್ಷಾಂತರ ಮೌಲ್ಯದ ಬಂಪರ್ ಬಹುಮಾನಗಳಿರುವ ಸ್ಕೀಮ್ ಪ್ರೊಜೆಕ್ಟ್ ಸೇರಿ, ಕನ್ಸ್ಟ್ರಕ್ಷನ್, ಇವೆಂಟ್ ಮ್ಯಾನೇಜ್ಮೆಂಟ್, ವೆಬ್ ಡೆವಲಪ್‌ಮೆಂಟ್ ಇರಲಿದೆ.



ಪುತ್ತೂರಿನಲ್ಲಿ ಸಂಸ್ಥೆಯ ನೂತನ ಕಚೇರಿ ಕಲ್ಲಿಮಾರ್ ನಲ್ಲಿರುವ ಕೀರ್ತನ ಪ್ಯಾರಡೈಸ್ ಬಿಲ್ಡಿಂಗ್ ನಲ್ಲಿ ಶೀಘ್ರದಲ್ಲಿ ಶುಭಾರಂಭಗೊಳ್ಳಲಿದೆ ಎಂದು ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.


ಬ್ರೈಟ್ ಭಾರತ್ ಸದಸ್ಯರಾಗುವವರು, ಹೆಚ್ಚಿನ ಮಾಹಿತಿಗಾಗಿ 9535261577 , 9535061588 , 9148952599 ಸಂಪರ್ಕಿಸಬಹುದಾಗಿದೆ.

ಪತ್ನಿ ನಿದ್ರೆಯಲ್ಲಿದ್ದಾಗಲೇ ಡೂಪ್ಲಿಕೇಟ್‌ ಕೀ ಬಳಸಿ ಕತ್ತು ಕುಯ್ದು ಹೋದ ಪತಿ!

Posted by Vidyamaana on 2024-08-29 05:28:04 |

Share: | | | | |


ಪತ್ನಿ ನಿದ್ರೆಯಲ್ಲಿದ್ದಾಗಲೇ ಡೂಪ್ಲಿಕೇಟ್‌ ಕೀ ಬಳಸಿ ಕತ್ತು ಕುಯ್ದು ಹೋದ ಪತಿ!

ಬೆಂಗಳೂರು :(ಆ.28): ಸಿನಿಮಾದಲ್ಲಿ ಕೊರಿಯೋಗ್ರಾಫರ್‌ ಆಗಿದ್ದ ನವ್ಯಶ್ರಿ ಕೊಲೆ ಪ್ರಕರಣದ ಮತ್ತಷ್ಟು ಅಪ್‌ಡೇಟ್‌ಗಳು ಗೊತ್ತಾಗಿವೆ. ನವ್ಯಶ್ರಿ ಹಾಗೂ ಕಿರಣ್‌ ಕಳೆದ ಮೂರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆ ಬಳಿಕ ಕೆಂಗೇರಿ ಉಪನಗರದ 1ನೇ ಬ್ಲಾಕ್‌ನ ಎಸ್.ಎಂ.ವಿ.ಲೇಔಟ್‌ನಲ್ಲಿ ವಾಸವಾಗಿದ್ದರು.

ಮಂಗಳವಾರ ಬೆಳಿಗ್ಗೆ ಸ್ನೇಹಿತೆಗೆ ಕರೆ ಮಾಡಿದ್ದ ನವ್ಯಾ ಮನೆಗೆ ಬರುವಂತೆ ತಿಳಿಸಿದ್ದಳು. ಈ ವೇಳೆ ಆಕೆಯೊಂದಿಗೆ ಮಾತನಾಡುವ ವೇಳೆ, ತನಗೆ ಮನೆಯಲ್ಲೂ ನೆಮ್ಮದಿಯಿಲ್ಲ. ಹೊರಗಡೆಯೂ ನೆಮ್ಮದಿ ಇಲ್ಲ ಎಂದು ಹೇಳಿದ್ದರು. ಸ್ನೇಹಿತೆ ಮನೆಗೆ ಬಂದ ಬಳಿಕ ನವ್ಯಾ, ತನ್ನ ಇನ್ನೊಬ್ಬ ಗೆಳೆಯನಿಗೆ ಕರೆ ಮಾಡಿದ್ದಳು. ಆತನೊಂದಿಗೆ ಮಾತನಾಡುವ ವೇಳೆ ನನಗೆ ಮನೆಯಲ್ಲಿ ಸೇಫ್‌ ಫೀಲ್‌ ಆಗುತ್ತಿಲ್ಲ. ತಕ್ಷಣವೇ ಭೇಟಿಯಾಗಬಹುದಾ ಎಂದು ಕೇಳಿದ್ದಳು. ಬಳಿಕ ಮೂವರು ಕಾರ್‌ನಲ್ಲಿಯೇ ಆರ್‌ಆರ್‌ ನಗರದವರೆಗೂ ಹೋಗಿ ಮೋಮೋಸ್‌ ತಿಂದಿದ್ದರು. ಈ ಹಂತದಲ್ಲಿ ಗಂಡನ ಮೇಲೆ ದೂರು ನೀಡುವಂತೆ ನವ್ಯಾಶ್ರಿಯ ಗೆಳೆಯ ಹೇಳಿದ್ದ. ಬಳಿಕ ಗೆಳೆಯನನ್ನು ಆತನ ಮನೆಗೆ ನವ್ಯಾಶ್ರೀ ಡ್ರಾಪ್‌ ಮಾಡಿದ್ದರು. ಆಕೆಯ ಗೆಳತಿಯ ಜೊತೆ ರಾತ್ರಿ 11.30ಕ್ಕೆ ಮನೆಗೆ ಬಂದಿದ್ದರು.

ಉಜಿರೆ: ಪುತ್ರನ ಕುತ್ತಿಗೆ ಇರಿದ ಜನ್ಮದಾತ

Posted by Vidyamaana on 2023-10-30 10:44:32 |

Share: | | | | |


ಉಜಿರೆ: ಪುತ್ರನ ಕುತ್ತಿಗೆ ಇರಿದ ಜನ್ಮದಾತ

ಬೆಳ್ತಂಗಡಿ : ತಂದೆ ಮತ್ತು ಮಗನ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳವೊಂದು ಮಗನ ಕೊಲೆಯೊಂದಿಗೆ ಅಂತ್ಯವಾದ ಘಟನೆ ಅ.೨೯ರಂದು ಉಜಿರೆಯ ಕೊಡೆಕಲ್ಲು ಎಂಬಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಕೊಡೆಕಲ್ಲು ನಿವಾಸಿ ಕೃಷ್ಣಯ್ಯ ಆಚಾರಿ (೭೫ವ) ಎಂಬವರು ಅ.೨೯ರಂದು ಎಂದಿನಂತೆ ಮಲಗಿರುವ ವೇಳೆ ಅವರ ಮಗ ಜಗದೀಶ್ ಅಚಾರಿ (೩೧ವ) ಅವರು ತಂದೆಯೊಂದಿಗೆ ಯಾವುದೋ ಕಾರಣಕ್ಕೆ ಮಾತು ಆರಂಭಿಸಿದ್ದು, ಇದು ಮಾತಿಗೆ ಮಾತು ಬೆಳೆದು ಕೋಪ ಗೊಂಡ ತಂದೆ ಕೃಷ್ಣಯ್ಯ ಆಚಾರಿ ಎಂಬವರು ಮಗನ ಕುತ್ತಿಗೆಗೆ ಚೂರಿಯಿಂದ ಇರಿದಿದ್ದಾರೆ. ಈ ವೇಳೆ ತೀವ್ರವಾಗಿ ಗಾಯಗೊಂಡ ಜಗದೀಶ್ ಅವರನ್ನು ಮನೆಯವರು ಸೇರಿ ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅವರು ಸಾವನ್ನಪ್ಪಿದ್ದಾರೆ.

ಕೃತ್ಯಕ್ಕೆ ಬಳಸಿದ ಚೂರಿಯನ್ನು ಕೃಷ್ಣಯ್ಯ ಆಚಾರಿ ಅವರು ೧೯೬೦ರಲ್ಲಿ ಖರೀದಿಸಿ ತನ್ನ ಕಪಾಟಿನಲ್ಲಿ ಇಟ್ಟಿದ್ದಾಗಿ ತಿಳಿದುಬಂದಿದ್ದು, ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆಯಾದ ಜಗದೀಶ್ ಅವರ ಮೃತದೇಹವನ್ನು ಇಂದು (ಅ.೩೦ರಂದು) ಮಂಗಳೂರು ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಶವಪರೀಕ್ಷೆ ನಡೆಸಲಾಗುವುದು ಎಂದು ತಿಳಿದುಬಂದಿದೆ.

ಆರೋಪಿ ಕೃಷ್ಣಯ್ಯ ಅಚಾರಿ ಎಂಬವರಿಗೆ ಇಬ್ಬರು ಹೆಣ್ಣು, ಐದು ಜನ ಗಂಡು ಮಕ್ಕಳು ಇದ್ದಾರೆ.


ಬೆಳ್ತಂಗಡಿ ಸರ್ಕಲ್‌ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ, ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಧನರಾಜ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ


ನಾಳೆ ರಾಜ್ಯಾದ್ಯಂತ ರಾಷ್ಟ್ರೀಯ ಲೋಕ ಅದಾಲತ್‌

Posted by Vidyamaana on 2023-12-08 08:11:30 |

Share: | | | | |


ನಾಳೆ ರಾಜ್ಯಾದ್ಯಂತ ರಾಷ್ಟ್ರೀಯ ಲೋಕ ಅದಾಲತ್‌

ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಡಿ.9ರಂದು ರಾಜ್ಯ ವ್ಯಾಪಿ ರಾಷ್ಟ್ರೀಯ ಲೋಕ ಅದಾಲತ್‌ (ಜನತಾ ನ್ಯಾಯಾಲಯ) ಆಯೋಜನೆ ಮಾಡಿದೆ. ಇದು ಈ ವರ್ಷದ ನಾಲ್ಕನೇ ಲೋಕ ಅದಾಲತ್‌ ಆಗಿದೆ. ವ್ಯಾಜ್ಯ ಮುಕ್ತ, ಸೌಹಾರ್ದಯುತ ಸಮಾಜ ನಿರ್ಮಾಣದ ಉದ್ದೇಶದಿಂದ ಈ ಅದಾಲತ್ ಮಾಡಲಾಗುತ್ತಿದೆ.


ಡಿ.9ರಂದು ಹೈಕೋರ್ಟ್‌ನ ಬೆಂಗಳೂರು, ಧಾರವಾಡ, ಕಲಬುರಗಿ ಪೀಠಗಳು ಸಹಿತ ರಾಜ್ಯದ ಎಲ್ಲ ಜಿಲ್ಲಾ ನ್ಯಾಯಾಲಯ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಏಕಕಾಲಕ್ಕೆ ಸಾವಿರಕ್ಕೂ ಅಧಿಕ ವಿಚಾರಣ ಪೀಠಗಳಲ್ಲಿ ಲೋಕ್‌ ಅದಾಲತ್‌ ಕಲಾಪಗಳು ನಡೆಯಲಿವೆ.


ರಾಜ್ಯದ ಎಲ್ಲ ಜಿಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ 19.93 ಲಕ್ಷ ಪ್ರಕರಣಗಳ ಪೈಕಿ 2.60 ಲಕ್ಷ ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಲು ಉದ್ದೇಶಿಸಲಾಗಿದೆ. ಪ್ರಕರಣಗಳನ್ನು ಗುರುತಿಸುವ ಪ್ರಕ್ರಿಯೆ ಇನ್ನೂ ಚಾಲ್ತಿಯಲ್ಲಿದ್ದು, ಈ ಸಂಖ್ಯೆ ಏರಿಕೆಯಾಗಬಹುದು.


ಕರ್ನಾಟಕ ಹೈಕೋರ್ಟ್‌ನ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರ ಸಭಾ ಭವನದಲ್ಲಿ ಗ ಸುದ್ದಿಗೋಷ್ಠಿಯಲ್ಲಿ ಪ್ರಾಧಿಕಾರದ ನೂತನ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಪಿ.ಎಸ್‌. ದಿನೇಶ್‌ ಕುಮಾರ್‌ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಶಂಕರ್‌, ಉಪ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್‌ ಜೊತೆಗೆ ಇದ್ದರು.

ಬಾಡಿಗೆ ಕಾರು ಚಾಲಕನ ಖಾತೆಗೆ ಬ್ಯಾಂಕ್​ನಿಂದ ಕ್ರೆಡಿಟ್​ ಆಯ್ತು 9 ಸಾವಿರ ಕೋಟಿ ರೂ! ಮುಂದೇನಾಯ್ತು ಗೊತ್ತಾ?

Posted by Vidyamaana on 2023-09-21 14:48:10 |

Share: | | | | |


ಬಾಡಿಗೆ ಕಾರು ಚಾಲಕನ ಖಾತೆಗೆ ಬ್ಯಾಂಕ್​ನಿಂದ ಕ್ರೆಡಿಟ್​ ಆಯ್ತು 9 ಸಾವಿರ ಕೋಟಿ ರೂ! ಮುಂದೇನಾಯ್ತು ಗೊತ್ತಾ?

ಚೆನ್ನೈ: ಬಾಡಿಗೆ ಚಾಲಕನೋರ್ವನ ಬ್ಯಾಂಕ್​ ಖಾತೆಗೆ ತಮಿಳುನಾಡು ಮರ್ಕೆಂಟೈಲ್​ ಬ್ಯಾಂಕ್​ನಿಂದ 9 ಸಾವಿರ ಕೋಟಿ ರೂಪಾಯಿ ಜಮಾ ಆಗಿರುವ ಘಟನೆ ಇದೀಗ ರಾಜ್ಯದೆಲ್ಲೆಡೆ ಸಂಚಲನ ಮೂಡಿಸಿದೆ. ಈ ಬಗ್ಗೆ ಕಾರು ಚಾಲಕ ಹಾಗೂ ಬ್ಯಾಂಕ್​ ಕಡೆಯಿಂದ ಲಾಯರ್​ಗಳು ಮಧ್ಯಸ್ಥಿಕೆವಹಿಸಿ ರಾಜಿ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.


ಪಳನಿ ನೇಯ್ಕಪಟ್ಟಿ ನಿವಾಸಿ ರಾಜಕುಮಾರ್​, ಕೋಡಂಬಾಕ್ಕಂನಲ್ಲಿ ಸ್ನೇಹಿತರೊಬ್ಬರ ರೂಂನಲ್ಲಿದ್ದು, ಬಾಡಿಗೆ ಬಾಡಿಗೆ ಕಾರು ಓಡಿಸುತ್ತಿದ್ದಾರೆ. ಸೆ. 9 ರಂದು ಮಧ್ಯಾಹ್ನ 3 ಗಂಟೆ ಹೊತ್ತಿಗೆ ರಾಜಕುಮಾರ್​ ಅವರು ತಮ್ಮ ಕಾರಿನಲ್ಲಿ ಮಲಗಿದ್ದಾಗ ಮೊಬೈಲ್​ಗೆ ಮೆಸೇಜ್​ ಬಂದಿದೆ. ರಾಜಕುಮಾರ್​ ಅವರ ಬ್ಯಾಂಕ್​ ಖಾತೆಗೆ ಮರ್ಕೆಂಟೈಲ್​ ಬ್ಯಾಂಕ್​ನಿಂದ 9 ಸಾವಿರ ಕೋಟಿ ರೂಪಾಯಿ ಜಮಾ ಆಗಿದೆ ಎಂದು ಮೆಸೇಜ್​ ಮೂಲಕ ತಿಳಿಸಲಾಗಿತ್ತು. ಅದರಲ್ಲಿದ್ದ ಸೊನ್ನೆಗಳನ್ನು ಲೆಕ್ಕ ಹಾಕಲಾಗದೆ ಎಷ್ಟು ಹಣ ಬಂದಿದೆ ಎಂದು ಗೊಂದಲದಲ್ಲಿದ್ದ ರಾಜಕುಮಾರ್,​ ಯಾರೋ ಮೋಸ ಮಾಡಲೆಂದೇ ಈ ರೀತಿಯ ಮೆಸೇಜ್​ ಕಳುಹಿಸಿದ್ದಾರೆ, ತಮ್ಮ ಖಾತೆಯಲ್ಲಿ 15 ರೂಪಾಯಿ ಮಾತ್ರ ಇದೆ ಎಂದುಕೊಂಡಿದ್ದರು. ಆದರೂ ಒಂದು ಬಾರಿ ನೋಡೋಣ ಎಂದು ತಮ್ಮ ಸ್ನೇಹಿತರೊಬ್ಬರಿಗೆ 21 ಸಾವಿರ ರೂಪಾಯಿ ಕಳುಹಿಸಿದ್ದಾರೆ. ಆಗ ನಿಜವಾಗಿಯೂ ಅವರ ಖಾತೆಗೆ 9 ಸಾವಿರ ಕೋಟಿ ರೂಪಾಯಿ ಹಣ ಬಂದಿರುವುದು ನಿಜ ಎಂದು ನಂಬಿ ಖುಷಿಯಾಗಿದ್ದಾರೆ.


ಆದರೆ ಅಷ್ಟರಲ್ಲಿ ತಮಿಳುನಾಡು ಮರ್ಕೆಂಟೈಲ್​ ಬ್ಯಾಂಕ್​ನ ಕೇಂದ್ರ ಕಚೇರಿ ತೂತುಕುಡಿಯಿಂದ ರಾಜಕುಮಾರ್​ ಅವರಿಗೆ ದೂರವಾಣಿ ಕರೆ ಬಂದಿದೆ. ಫೋನ್​ ಮಾಡಿದವರು ತಪ್ಪಾಗಿ ನಿಮ್ಮ ಖಾತೆಗೆ 9 ಸಾವಿ ಕೋಟಿ ಹಣ ಜಮೆಯಾಗಿದೆ. ಬ್ಯಾಂಕ್​ನಿಂದ ಜಮೆ ಆಗಿರುವ ಹಣವನ್ನು ಖರ್ಚು ಮಾಡದಂತೆ ಬ್ಯಾಂಕ್​ ಆಡಳಿತ ಮಂಡಳಿ ರಾಜಕುಮಾರ್​ ಅವರಿಗೆ ತಿಳಿಸಿದೆರಾಜಕುಮಾರ್​ ಅವರು ಸ್ನೇಹಿತನಿಗೆ ಕಳುಹಿಸಿದ 21 ಸಾವಿರ ಹೊರತುಪಡಿಸಿ, ಉಳಿದ ಎಲ್ಲಾ ಹಣವನ್ನು ತಕ್ಷಣವೇ ಹಿಂಪಡೆದಿದೆ. ಇದಾದ ನಂತರ ಬ್ಯಾಂಕ್​ನವರು ಉಳಿದ 21 ಸಾವಿರ ರೂಪಾಯಿಯನ್ನು ಹಿಂತಿರುಗಿಸುವಂತೆ ರಾಜಕುಮಾರ್​ ಅವರಿಗೆ ಬೆದರಿಕೆ ಹಾಕಲು ಆರಂಭಿಸಿತ್ತು ಎನ್ನಲಾಗಿದೆ. ರಾಜಕುಮಾರ್​ ಅವರು ಹತ್ತಿರದ ಪೊಲೀಸ್​ ಠಾಣೆಗೆ ದೂರು ನೀಡಲು ನಿರ್ಧರಿಸಿದ್ದಾರೆ. ಆದರೆ ನಂತರ ತಮಿಳುನಾಡು ಮರ್ಕೆಂಟೈಲ್​ ಬ್ಯಾಂಕ್​ನ ಕಡೆಯಿಂದ ಹಾಗೂ ಕಾರು ಚಾಲಕ ರಾಜಕುಮಾರ್​ ಕಡೆಯಿಂದ ವಕೀಲರು ಚೆನ್ನೈನ ತ್ಯಾಗರಾಯನಗರದಲ್ಲಿರುವ ಶಾಖೆಗೆ ತೆರಳಿ ಸಂಧಾನ ಮಾತುಕತೆ ನಡೆಸಿದ್ದಾರೆ.ಸಂಧಾನ ಮಾತುಕತೆಯಲ್ಲಿ ಬ್ಯಾಂಕ್​ನವರು ರಾಜಕುಮಾರ್​ ಅವರು ಈಗಾಗಲೇ 9 ಸಾವಿರ ಕೋಟಿ ರೂಪಾಯಿಯಲ್ಲಿ ಸ್ನೇಹಿತನಿಗೆ ನೀಡಿದ 21 ಸಾವಿರ ರೂಪಾಯಿಯನ್ನು ಹಿಂತಿರುಗಿಸುವುದು ಬೇಡ ಎನ್ನುವುದರ ಜೊತೆಗೆ ಅವರಿಗೆ ವಾಹನ ಸಾಲವನ್ನು ನೀಡುವುದಾಗಿಯೂ ಹೇಳಿದ್ದಾರೆ. ಆದರೆ ರಾಜಕುಮಾರ್​ ಆ ಆಫರ್​ ಅನ್ನು ಸ್ವೀಕರಿಸಿಲ್ಲ ಎಂದು ವರದಿಯಾಗಿದೆ. ಒಬ್ಬ ಕಾರು ಚಾಲಕನ ಖಾತೆಗೆ ಏಕಾಏಕಿ 9 ಸಾವಿರ ಕೋಟಿ ಹಣ ಜಮೆ ಆಗಿರುವುದು ಭಾರಿ ಸಂಚಲನ ಮೂಡಿಸಿದೆ.

Recent News


Leave a Comment: