ಅತಿ ವೇಗವಾಗಿ ಬಂದು ಮಹಿಳೆಗೆ ಡಿಕ್ಕಿ ಹೊಡೆದ ಟ್ಯಾಕ್ಸಿ; ವಿಡಿಯೊ ನೋಡಿ

ಸುದ್ದಿಗಳು News

Posted by vidyamaana on 2024-07-23 19:43:42 |

Share: | | | | |


ಅತಿ ವೇಗವಾಗಿ ಬಂದು ಮಹಿಳೆಗೆ ಡಿಕ್ಕಿ ಹೊಡೆದ ಟ್ಯಾಕ್ಸಿ; ವಿಡಿಯೊ ನೋಡಿ

ಪುಣೆ: ಅತಿ ವೇಗ ಅಪಘಾತಕ್ಕೆ ಕಾರಣವೆಂದು ತಿಳಿದರೂ ಕೂಡ ಕೆಲವು ಚಾಲಕರು ಅವಸರದಲ್ಲಿ ವೇಗವಾಗಿ ವಾಹನ ಚಲಾಯಿಸಿ ಜನರ ಜೀವಕ್ಕೆ ಆಪತ್ತು ತರುತ್ತಿದ್ದಾರೆ. ಎಲ್ಲೆಂದರಲ್ಲಿ ನಿಂತ ಜನರ ಮೇಲೂ ವಾಹನವನ್ನು ಹಾರಿಸಿಕೊಂಡು ಹೋಗುತ್ತಾರೆ. ಇದೀಗ ಅಂತಹದೊಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Hit and Run Case)ಆಗಿದೆ.ಪ್ರಿ-ಚಿಂಚ್ವಾಡ್‍ನಲ್ಲಿ ಅತಿವೇಗವಾಗಿ ಚಲಿಸುತ್ತಿದ್ದ ಟ್ಯಾಕ್ಸಿ ಮಹಿಳೆಗೆ ಡಿಕ್ಕಿ ಹೊಡೆದು ನಂತರ ಚಾಲಕ ಅಪಘಾತದ ಸ್ಥಳದಿಂದ ಓಡಿಹೋದ ಹೊಸ ಹಿಟ್ ಅಂಡ್ ರನ್ ಪ್ರಕರಣ ವರದಿಯಾಗಿದೆ. ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂಬುದಾಗಿ ತಿಳಿದುಬಂದಿದೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಪುಣೆಯಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಪಿಂಪ್ರಿ-ಚಿಂಚ್ವಾಡ್‍ನಲ್ಲಿ ಈ ಘಟನೆ ನಡೆದಿದೆ. ಈ ಹಿಟ್ ಅಂಡ್ ರನ್ ಪ್ರಕರಣ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೊದಲ್ಲಿ ಭಾನುವಾರ ಮಧ್ಯಾಹ್ನ 1:30ರ ಸುಮಾರಿಗೆ ರಸ್ತೆಯಲ್ಲಿ ಮಹಿಳೆ ನಡೆದುಕೊಂಡು ಹೋಗುತ್ತಿರುವಾಗ ಎದುರಿಗೆ ವೇಗವಾಗಿ ಬಂದ ಟ್ಯಾಕ್ಸಿ ಮಹಿಳಾ ಪಾದಚಾರಿಗೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದೆ. ರಸ್ತೆಯಲ್ಲಿದ್ದ ಇತರ ಜನರು ಆಕೆಯ ಸಹಾಯಕ್ಕಾಗಿ ಓಡಿ ಬರುತ್ತಿರುವುದು ಕಂಡುಬಂದಿದೆ. ಟ್ಯಾಕ್ಸಿಗೆ ಡಿಕ್ಕಿ ಹೊಡೆದ ಮಹಿಳೆ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದು, ಈ ಬಗ್ಗೆ ಪಿಂಪ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಈ ಪ್ರಕರಣದ ಬಗ್ಗೆ ಪಿಂಪ್ರಿ-ಚಿಂಚ್ವಾಡ್ ಡಿಸಿಪಿ ಶಿವಾಜಿ ಪವಾರ್ ಮಾತನಾಡಿ, ಈ ಅಪಘಾತದಲ್ಲಿ ಸಂತ್ರಸ್ತೆ ರೇಖಾ ಗಾಯಗೊಂಡಿದ್ದಾರೆ. ಈಗ ಅವರ ಆರೋಗ್ಯ ಸ್ಥಿರವಾಗಿದೆ. 24 ವರ್ಷದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಕಾರಿನ ಚಾಲಕ ಕುಡಿದಿರಲಿಲ್ಲ ಎಂದು ಪೊಲೀಸರು ದೃಢಪಡಿಸಿದ್ದಾರೆ. ಮೇಲ್ನೋಟಕ್ಕೆ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದು ಮಹಾರಾಷ್ಟ್ರದಲ್ಲಿ ವರದಿಯಾದ ಮೊದಲ ಹಿಟ್ ಅಂಡ್ ರನ್ ಪ್ರಕರಣವಲ್ಲ. ಈಗಾಗಲೇ ಹಿಟ್ ಅಂಡ್ ರನ್ ಪ್ರಕರಣ ಮತ್ತೊಂದು ಸುದ್ದಿಯಲ್ಲಿ, ವೇಗವಾಗಿ ಬಂದ ಆಡಿ ಕಾರು ಎರಡು ಆಟೋರಿಕ್ಷಾಗಳಿಗೆ ಡಿಕ್ಕಿ ಹೊಡೆದಿದೆ. ಒಂದು ಆಟೋರಿಕ್ಷಾ ಚಾಲಕನ ಸ್ಥಿತಿ ಚಿಂತಾಜನಕವಾಗಿದ್ದು, ಅದರಲ್ಲಿದ್ದ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಮುಲುಂಡ್ ಪೊಲೀಸರು ಆಡಿ ಕಾರನ್ನು ವಶಪಡಿಸಿಕೊಂಡಿದ್ದಾರೆ, ಆದರೆ ಅಪಘಾತದ ನಂತರ ಅದರ ಚಾಲಕ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

 Share: | | | | |


ಕುಸಿದು ಬಿದ್ದ ಬಿಜೆಪಿ ಫೈರ್ ಬ್ರ್ಯಾಂಡ್​ ಯತ್ನಾಳ್​ ಆಂಬುಲೆನ್ಸ್​​ ಮೂಲಕ ಆಸ್ಪತ್ರೆಗೆ ಶಿಫ್ಟ್

Posted by Vidyamaana on 2023-07-19 12:29:31 |

Share: | | | | |


ಕುಸಿದು ಬಿದ್ದ ಬಿಜೆಪಿ  ಫೈರ್ ಬ್ರ್ಯಾಂಡ್​  ಯತ್ನಾಳ್​ ಆಂಬುಲೆನ್ಸ್​​ ಮೂಲಕ ಆಸ್ಪತ್ರೆಗೆ ಶಿಫ್ಟ್

ಬೆಂಗಳೂರು : ಹತ್ತು ಶಾಸಕರನ್ನು ವಿಧಾನ ಸಭೆಯಿಂದ ಅಮಾನತ್ತು ಮಾಡಲಾದ ಹಿನ್ನೆಲೆಯಲ್ಲಿ ಮಾರ್ಷಲ್ ಗಳು ಶಾಸಕರನ್ನು ಹೊತ್ತು ಹೊರ ಹಾಕುವ ವೇಳೆ ಬಿಜೆಪಿ ಶಾಸಕರು ಪ್ರತಿಭಟನೆ ಮಾಡುತ್ತಿದ್ದರು, ಬಸವನಗೌಡ ಯತ್ನಾಳ್ ವಿಧಾನ ಸೌಧದ ಕಾರಿಡಾರ್‍ ನಲ್ಲಿ ಕುಸಿದು ಬಿದ್ದರು.ಗದ್ದಲದ ವೇಳೆ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಅಸ್ವಸ್ಥ, ಬಿಪಿ ಜಾಸ್ತಿಯಾಗಿ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರನ್ನು ತುರ್ತುವಾಹನದ ಮೂಲಕ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.


ಸ್ಪೀಕರ್ ನಿಲುವು ಖಂಡಿಸಿ ಬಿಜೆಪಿ ಸದ್ಯಸರು ವಿಧಾನಸಭೆಯ ಬಾಗಿಲ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದರು, ಈ ವೇಳೆ ಬಿಪಿಯಲ್ಲಿ ಏಳಿರಿಳಿತವಾಗಿ ಬಸನಗೌಡ ಯತ್ನಾಳ್ ಅಸ್ವಸ್ಥರಾಗಿದ್ದು, ಕೂಡಲೇ ಸ್ಥಳದಲ್ಲಿದ್ದವರು ಅವರನ್ನು ಅಂಬ್ಯುಲೆನ್ಸ್‌ ಮೂಲಕ ಶಿಫ್ಟ್‌ ಮಾಡಲಾಗಿದೆ ಅಂತ ತಿಳಿದು ಬಂದಿದೆ.

ಬೆಳ್ತಂಗಡಿ : ಹಾವು ರಕ್ಷಣೆ ವೇಳೆ ಸ್ನೇಕ್ ಅಶೋಕ್ ಗೆ ಹಾವು ಕಡಿತ, ಸ್ಥಿತಿ ಗಂಭೀರ

Posted by Vidyamaana on 2023-03-26 03:07:34 |

Share: | | | | |


ಬೆಳ್ತಂಗಡಿ : ಹಾವು ರಕ್ಷಣೆ ವೇಳೆ ಸ್ನೇಕ್ ಅಶೋಕ್ ಗೆ ಹಾವು ಕಡಿತ,  ಸ್ಥಿತಿ ಗಂಭೀರ

ಬೆಳ್ತಂಗಡಿ : ಮನೆಗೆ ಬಂದಿದ್ದ ಹಾವು ರಕ್ಷಣೆ ಮಾಡುವ ವೇಳೆ ನಾಗರ ಹಾವು ಕಚ್ಚಿ ಬೆಳ್ತಂಗಡಿಯ ಸ್ನೇಕ್ ಅಶೋಕ್ ಲಾಯಿಲ ಗಂಭೀರ ಸ್ಥಿತಿಯಲ್ಲಿದ್ದು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿತ್ತಿದ್ದಾರೆ.


ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಬಳಿಯಲ್ಲಿ ಮಾ.25 ರಂದು ರಾತ್ರಿ ಸುಮಾರು 10 ಗಂಟೆ ವೇಳೆ ಮನೆಯಲ್ಲಿ ನಾಗರ ಹಾವು ಇರುವ ಬಗ್ಗೆ ಮಾಹಿತಿ ನೀಡಿದ್ದು ಅದರಂತೆ ರಕ್ಷಣೆ ಮಾಡಲು ಸ್ನೇಕ್ ಅಶೋಕ್ ಲಾಯಿಲ ಹಿಡಿಯುವಾಗ ಬಲ ಕಾಲಿಗೆ ನಾಗರ ಹಾವು ಕಚ್ಚಿದೆ.ಘಟನೆ ಬಳಿಕ ನೇರ ಉಜಿರೆ ಬೆನಕ ಆಸ್ಪತ್ರೆಗೆ ಬಂದಿದ್ದು ಪರೀಕ್ಷಿಸಿದ ವೈದ್ಯರು ಮಂಗಳೂರು ಆಸ್ಪತ್ರೆಗೆ ರವಾನಿಸಲು ಸೂಚಿಸಿದ್ದಾರೆ. ಬಳಿಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಬಂದು ಪ್ರಥಮ ಚಿಕಿತ್ಸೆ ನೀಡಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಾಬಾ ಅಂಬುಲೆನ್ಸ್ ಚಾಲಕ ಜಲೀಲ್ ಮತ್ತು ಪತ್ರಕರ್ತ ಪ್ರತೀಕ್ ಕೋಟ್ಯಾನ್ ತಕ್ಷಣ ಮಂಗಳೂರು ಕಂಕನಾಡಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆಗೆ ದಾಖಲಿಸಿದ್ದಾರೆ.ಸ್ನೇಕ್ ಅಶೋಕ್ ಲಾಯಿಲ ಗಂಭೀರ ಸ್ಥಿತಿಯಲ್ಲಿದ್ದು ಸದ್ಯ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ನೇಕ್ ಅಶೋಕ್ ಅವರಿಗೆ ಈ ಮೊದಲು ನಾಗರ ಹಾವು ಕಚ್ಚಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಪ್ರಸಿದ್ಧ ಹಾವು ರಕ್ಷಕರಲ್ಲಿ ಸ್ನೇಕ್ ಅಶೋಕ್ ಲಾಯಿಲ ಒಬ್ಬರಾಗಿದ್ದಾರೆ.

ವಿಟ್ಲ : ಹೊಟೇಲ್ ಬಳಿಯಲ್ಲಿ ಕುಡಿದು ಬಿದ್ದು ವ್ಯಕ್ತಿ ಮೃತ್ಯು

Posted by Vidyamaana on 2024-01-31 15:13:50 |

Share: | | | | |


ವಿಟ್ಲ : ಹೊಟೇಲ್ ಬಳಿಯಲ್ಲಿ ಕುಡಿದು ಬಿದ್ದು ವ್ಯಕ್ತಿ ಮೃತ್ಯು

ವಿಟ್ಲ: ಮಂಗಳೂರು ರಸ್ತೆಯ ವಿಜಯ ಹೊಟೇಲ್ ಬಳಿಯಲ್ಲಿ ವ್ಯಕ್ತಿಯೋರ್ವರು ಕುಡಿದು ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.


ಮೃತ ಪಟ್ಟ ವ್ಯಕ್ತಿ ಅಪ್ಪೇರಿಪಾದೆ ನಿವಾಸಿ ಸಂದೀಪ್ (45).


ಕೂಲಿ ಕೆಲಸ ಮಾಡುತ್ತಿದ್ದ ಸಂದೀಪ್ ರವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ವಿಪರೀತ ಕುಡಿತದ ಚಟವಿದ್ದು, ಇದರಿಂದಲೇ ಸಾವನ್ನಪ್ಪಿದ್ದಾರೆ ಎಂದು ಸಾರ್ವಜನಿಕರಿಂದ ತಿಳಿದು ಬಂದಿದೆ,

ಉತ್ತರಕರ್ನಾಟಕ ಭಾಗದ SSLC ಪರೀಕ್ಷೆಯಲ್ಲಿ ಮಾಸ್ ಕಾಪಿ ಆಗ್ತಿತ್ತು : MLC ಅಭ್ಯರ್ಥಿ ಭೋಜೇಗೌಡ ಆರೋಪ

Posted by Vidyamaana on 2024-05-19 17:56:29 |

Share: | | | | |


ಉತ್ತರಕರ್ನಾಟಕ ಭಾಗದ SSLC ಪರೀಕ್ಷೆಯಲ್ಲಿ ಮಾಸ್ ಕಾಪಿ ಆಗ್ತಿತ್ತು : MLC ಅಭ್ಯರ್ಥಿ ಭೋಜೇಗೌಡ ಆರೋಪ

ಮಂಗಳೂರು : ಪ್ರತಿವರ್ಷ ನಡೆಯುವ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತರ ಕರ್ನಾಟಕದ ಭಾಗದ ಎಲ್ಲಾ ವಿದ್ಯಾರ್ಥಿಗಳು ಮಾಸ್ ಕಾಪಿ ಮಾಡುತ್ತಿದ್ದರು ಎಂದು ಎಂಎಲ್ಸಿ ಬೋಜೆ ಗೌಡ ಗಂಭೀರವಾದಂತ ಆರೋಪವನ್ನು ಮಾಡಿದ್ದಾರೆ.ಮಂಗಳೂರಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಇದು ವಿದ್ಯಾರ್ಥಿಗಳ ಭವಿಷ್ಯದ ವಿದ್ಯಾಭ್ಯಾಸಕ್ಕೆ ಮಾರಕವಾಗುತ್ತಿತ್ತು.ಈ ಹಿನ್ನಲೆ ನೈರುತ್ಯ ಕ್ಷೇತ್ರಗಳಿಗೆ ಪರೀಕ್ಷೆ ಸಮಯ ಅನ್ಯಾಯ ಆಗುತ್ತಿರುವ ಬಗ್ಗೆ ವಿಧಾನ ಪರಿಷತ್‌ನಲ್ಲಿ ಹೇಳಿದ್ದೆ. ಜೊತೆಗೆ ಪರೀಕ್ಷೆ ವೇಳೆ ಸಿಸಿಟಿವಿ ಅಳವಡಿಕೆ ಕುರಿತು ಪರಿಷತ್​​ನಲ್ಲಿ ಆಗ್ರಹಿಸಿದ್ದೆ ಎಂದರು.

ಶಾಸಕರ ಇಂದಿನ ಕಾರ್ಯಕ್ರಮ ಆ 21

Posted by Vidyamaana on 2023-08-21 03:06:53 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ ಆ 21

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಆಗಸ್ಟ್ 21 ರಂದು

ಬೆಳಿಗ್ಗೆ 10 ಗಂಟೆಗೆ ಮಾಡನ್ನೂರು‌ನೂರುಲ್ ಹುದಾದಲ್ಲಿ ಸ್ಥಾಪಕ ದಿನಾಚರಣೆ

11 ಗಂಟೆಗೆ ಬಡಗನ್ನೂರಿನಲ್ಲಿ ಗ್ರಾಮ ಒನ್ ಚಾಲನಾ ಕಾರ್ಯಕ್ರಮ

ಸಂಜೆ 6 ಗಂಟೆಗೆ ಮಂಗಳೂರಿನಲ್ಲಿ ಖಾಸಗಿ

ಅಭಿರಾಮ್‌ ಫ್ರೆಂಡ್ಸ್‌ ವತಿಯಿಂದ ಚಿಕ್ಕಮುಡ್ನೂರು ಶಾಲೆಗೆ ಟೇಬಲ್‌ ಚಯರ್‌ ವಿತರಣೆ

Posted by Vidyamaana on 2023-08-19 14:25:24 |

Share: | | | | |


ಅಭಿರಾಮ್‌ ಫ್ರೆಂಡ್ಸ್‌ ವತಿಯಿಂದ ಚಿಕ್ಕಮುಡ್ನೂರು ಶಾಲೆಗೆ ಟೇಬಲ್‌ ಚಯರ್‌ ವಿತರಣೆ

ಪುತ್ತೂರು: ಅಭಿರಾಮ್‌ ಫ್ರೆಂಡ್ಸ್‌ (ರಿ.) ಪುತ್ತೂರು ಇದರ ವತಿಯಿಂದ ಹಿರಿಯ ಪ್ರಾ. ಶಾಲೆ ಕೃಷ್ಣನಗರ ಹಾಗೂ ಕೇಪುಳು, ನೆಲ್ಲಿಕಟ್ಟೆ, ರೋಟರಿಪುರ, ಕೆಮ್ಮಾಯಿ ಗುಂಡಿಜಾಲು, ಬೀರ್ನಹಿತ್ಲು ಅಂಗನವಾಡಿಯ ಮಕ್ಕಳಿಗೆ ಸ್ವಾತಂತ್ರ್ಯ ದಿನಾಚರಣೆಯಂದು ಸಿಹಿತಿಂಡಿ ವಿತರಿಸಿದರು.

ಚಿಕ್ಕಮುಡ್ನೂರು ಹಿ.ಪ್ರಾ ಶಾಲೆಗೆ ಚಯರ್‌, ಟೇಬಲ್‌ ವಿತರಣೆ:

ಚಿಕ್ಕಮುಡ್ನೂರು ಹಿ.ಪ್ರಾ ಶಾಲೆಯ ಮಕ್ಕಳಿಗೆ ನಲಿ-ಕಲಿಗೆ ಬೇಕಾದಂತಹ‌ ಮೂರು ಟೇಬಲ್‌ ಹಾಗೂ 15 ಚಯರ್ ಗಳನ್ನು ಅಭಿರಾಮ್‌ ಫ್ರೆಂಡ್ಸ್‌ (ರಿ.)ನ  ಅಧ್ಯಕ್ಷರು ಮತ್ತು ಸದಸ್ಯರು ಶಾಲಾ ಮುಖ್ಯೋಪಾಧ್ಯಾಯಿನಿ ಪುಷ್ಪಲತಾರವರಿಗೆ ಹಸ್ತಾಂತರಿಸಿದರು. ಅಭಿರಾಮ್‌ ಫ್ರೆಂಡ್ಸ್‌ (ರಿ.)ನ ಅಧ್ಯಕ್ಷ ತೇಜಕುಮಾರ್‌ ಕೆಮ್ಮಾಯಿ, ಕಾರ್ಯದರ್ಶಿ ಸನತ್‌ ಸುವರ್ಣ, ಉಪಾಧ್ಯಕ್ಷರಾದ ಪ್ರಜೀತ್ ಮಂಜಲ್ಪಡ್ಪು, ಹರ್ಷಿತ್‌ ರಾಮ್‌ ಬಳ್ಳಾಲ್‌, ಖಜಾಂಜಿ ಜಯೇಶ್‌ ಹಾಗೂ ಸದಸ್ಯರಾದ ಶರತ್‌ ಕೇಪುಳು, ರಮೇಶ್‌ ಬಂಡಾಜೆ, ಭರತ್‌, ಚಿದಾನಂದ ಕೇಪುಳು, ರಾಜೇಶ್‌ ಜಿಡೆಕಲ್ಲು, ಕಾರ್ತಿಕ್‌ ಊರಮಾಲು, ಕಿಶೋರ್‌ ತಾರಿಗುಡ್ಡೆ, ಪ್ರದೀಪ್‌ ಕೇಪುಳು, ಅವಿನಾಶ್‌ ಶೆಟ್ಟಿ, ಅಭಿಷೇಕ್‌ ಶೆಟ್ಟಿ, ಕಾರ್ತಿಕ್ ಚಿಕ್ಕಪುತ್ತೂರು, ಶಾಲಾ ಎಸ್‌ಡಿಎಂಸಿ ಸದಸ್ಯರು, ಬನ್ನೂರು ಗ್ರಾ, ಪಂ ತಿಮ್ಮಪ್ಪ ಪೂಜಾರಿ, ರಾಘವೇಂದ್ರ ಅಂದ್ರಟ ಮಕ್ಕಳ ಪೋಷಕರು, ಊರುವರು ಉಪಸ್ಥಿತರಿದ್ದರು.

Recent News


Leave a Comment: