KSRTC ಬಸ್-ಕಾರು ಡಿಕ್ಕಿ, ಕ್ರೈಸ್ಥ ಧರ್ಮಗುರು ಫಾ. ಆಂಥೋಣಿ ಪೀಟರ್ ಮೃತ್ಯು..

ಸುದ್ದಿಗಳು News

Posted by vidyamaana on 2024-07-24 17:11:55 |

Share: | | | | |


KSRTC ಬಸ್-ಕಾರು ಡಿಕ್ಕಿ, ಕ್ರೈಸ್ಥ ಧರ್ಮಗುರು ಫಾ. ಆಂಥೋಣಿ ಪೀಟರ್ ಮೃತ್ಯು..

ಶಿವಮೊಗ್ಗ : ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಕಾರು ಡಿಕ್ಕಿಯಾದ ಪರಿಣಾಮ ಕ್ರೈಸ್ತ ಧರ್ಮಗುರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಸಮೀಪ ಸವಳಂಗ ಚಿನ್ನಿಕಟ್ಟೆ ಬಳಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.ಕೆಎಸ್‌ಆರ್‌ಟಿಸಿ ಬಸ್ಸು ಹಾನಗಲ್‌ನಿಂದ ಶಿವಮೊಗ್ಗ ಕಡೆಗೆ ಹೋಗುತ್ತಿತ್ತುಎನ್ನಲಾಗಿದೆ.

ಕ್ರೈಸ್ತ ಧರ್ಮಗುರು ಇದ್ದ ಕಾರು ಶಿವಮೊಗ್ಗ ಕಡೆಯಿಂದ ತೆರಳುತ್ತಿತ್ತು. ಚಿನ್ನಿಕಟ್ಟೆ ಬಳಿ ಕಾರು, ಬಸ್ಸು ಮುಖಾಮುಖಿ ಡಿಕ್ಕಿಯಾಗಿವೆ. ಅಪಘಾತದ ರಭಸಕ್ಕೆ ಕಾರು ರಸ್ತೆ ಪಕ್ಕದ ಜಮೀನಿಗೆ ಉರುಳಿ ಬಿದ್ದಿದ್ದು ಸಂಪೂರ್ಣ ನುಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಶಿಕಾರಿಪುರ ಧರ್ಮಕೇಂದ್ರದ ಧರ್ಮಗುರು ಆಂಥೋಣಿ ಪೀಟರ್‌ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದ್ದು ನ್ಯಾಮತಿ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ.

 Share: | | | | |


ಚಲಿಸುತ್ತಿರುವ ರೈಲಿನ ಮುಂದೆ ಕೈಕೈ ಹಿಡಿದು ಮಲಗಿ ಆತ್ಮಹತ್ಯೆ ಮಾಡಿಕೊಂಡ ಅಪ್ಪ ಮಗ : ಭಯಾನಕ ದೃಶ್ಯ ಸಿಸಿಟಿವಿ ವಿಡಿಯೋದಲ್ಲಿ ವೈರಲ್

Posted by Vidyamaana on 2024-07-10 22:22:24 |

Share: | | | | |


ಚಲಿಸುತ್ತಿರುವ ರೈಲಿನ ಮುಂದೆ ಕೈಕೈ ಹಿಡಿದು ಮಲಗಿ ಆತ್ಮಹತ್ಯೆ ಮಾಡಿಕೊಂಡ ಅಪ್ಪ ಮಗ : ಭಯಾನಕ ದೃಶ್ಯ ಸಿಸಿಟಿವಿ ವಿಡಿಯೋದಲ್ಲಿ ವೈರಲ್

ಮುಂಬೈ :ಅಪ್ಪಮಗ ಚಲಿಸುತ್ತಿದ್ದ ರೈಲಿನಡಿ ಕೈಕೈ ಹಿಡಿದು ಮಲಗಿ ಸಾವನಪ್ಪಿದ ಘಟನೆ ಮುಂಬೈನಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಈ ದೃಶ್ಯದ ವಿಡಿಯೋ ಎದೆ ನಡುಗಿಸುವಂತಿದೆ.

ಸೋಮವಾರ ಬೆಳಗ್ಗೆ 11:30 ರ ಸುಮಾರಿಗೆ ಮೀರಾ ಬಯಾಂದರ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಹರೇಶ್ ಮೆಹತಾ ಹಾಗೂ ಅವರ ಮಗ ಜಯ್ ಮೆಹತಾ ಎಂದು ಗುರುತಿಸಲಾಗಿದೆ

ಐದನೇ ಐಪಿಎಲ್ ಟ್ರೋಫಿ ಗೆದ್ದ ಸಿಎಸ್‌ಕೆ

Posted by Vidyamaana on 2023-05-29 23:28:24 |

Share: | | | | |


ಐದನೇ ಐಪಿಎಲ್ ಟ್ರೋಫಿ ಗೆದ್ದ ಸಿಎಸ್‌ಕೆ

ಅಹ್ಮದಾಬಾದ್ : ಕೊನೇ ಎಸೆತದವರೆಗೂ ನೋಡುಗರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದ ರೋಚಕ ಫೈನಲ್ ಪಂದ್ಯದಲ್ಲಿ ಒತ್ತಡ ನಿಭಾಯಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗುಜರಾತ್ ಟೈಟನ್ ಎದುರು 5 ವಿಕೆಟ್‌ಗಳ ಜಯ ದಾಖಲಿಸಿ ದಾಖಲೆಯ 5ನೇ ಟ್ರೋಫಿ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಅಂತಿಮ 2 ಎಸೆತಗಳಲ್ಲಿ 10 ರನ್‌ಗಳ ಅಗತ್ಯವಿದ್ದಾಗ ಅನುಭವಿ ವೇಗದ ಬೌಲರ್ ಮೋಹಿತ್ ಶರ್ಮಾ ಎದುರು ಸಿಕ್ಸ್ ಮತ್ತು ಫೋರ್ ಬಾರಿಸಿದ ರವೀಂದ್ರ ಜಡೇಜಾ, ಸಿಎಸ್‌ಕೆ ಕೊರಳಿಗೆ ಜಯದ ಮಾಲೆ ತೊಡಿಸಿದರು.

ಸಿಎಸ್‌ಕೆಗೆ 15 ಓವರ್‌ಗಳಲ್ಲಿ 171 ರನ್ ಗುರಿ


ಗೆಲುವಿಗೆ 215 ರನ್‌ಗಳ ಅಸಾಧ್ಯದ ಗುರಿ ಬೆನ್ನತ್ತಿದ ಸಿಎಸ್‌ಕೆ ಬ್ಯಾಟಿಂಗ್ ಆರಂಭಿಸಿ 3 ಎಸೆತಗಳನ್ನು ಎದುರಿಸುತ್ತಿದ್ದಂತೆಯೇ ಧಾರಾಕಾರ ಮಳೆ ಶುರುವಾಗಿ ಆಟಕ್ಕೆ ಅಡಚಣೆ ಎದುರಾಯಿತು. 2 ಗಂಟೆಗಳ ಕಾಲ ಆಟ ಸ್ಥಗಿತಗೊಂಡು 12:10ಕ್ಕೆ ಮರಳಿ ಶುರುವಾದಾಗ ಸಿಎಸ್‌ಕೆಗೆ 15 ಓವರ್‌ಗಳಲ್ಲಿ 171 ರನ್‌ಗಳ ಕಠಿಣ ಗುರಿ ಪಡೆದಿತ್ತು

.ಹೊಡಿಬಡಿ ಆಟವಾಡಿದ ಸಿಎಸ್‌ಕೆ

ಗೆಲ್ಲಲು ಓವರ್‌ಗೆ 12 ರನ್ ಗಳಿಸುವ ಒತ್ತಡಕ್ಕೆ ಸಿಲುಕಿದ್ದ ಸಿಎಸ್‌ಕೆ, ಆರಂಭದಿಂದಲೂ ಹೊಡಿಬಡಿ ಆಟಕ್ಕೆ ಕೈ ಹಾಕಿತ್ತು. ಋತುರಾಜ್ ಗಾಯಕ್ವಾಡ್ (26), ಡೆವೋನ್ (47), ಶಿವಂ ದುಬೇ (32*), ಅಜಿಂಕ್ಯ ರಹಾನೆ (27), ರವೀಂದ್ರ ಜಡೇಜಾ (15*) ಮತ್ತು ಅಂಬಾಟಿ ರಾಯುಡು (19) ಬೌಲರ್‌ಗಳನ್ನು ಬೆಂಡೆತ್ತಿದ ಪರಿಣಾಮ ಸಿಎಸ್‌ಕೆ ಗೆಲುವು ಸಾಧ್ಯವಾಯಿತು. ಟೈಟನ್ಸ್ ಪರ ನೂರ್ ಅಹ್ಮದ್ (17ಕ್ಕೆ 2) ಮತ್ತು ಮೋಹಿತ್ ಶರ್ಮಾ (36ಕ್ಕೆ 3) ವಿಕೆಟ್ ಪಡೆದು ಒತ್ತಡ ಹೇರಿದರೂ, ಅದೃಷ್ಟ ಸಿಎಸ್‌ಕೆ ಕೈಹಿಡಿದಿತ್ತು. ಈ ಜಯದೊಂದಿಗೆ ಸಿಎಸ್‌ಕೆ ಐಪಿಎಲ್‌ನಲ್ಲಿ ಅತಿ ಹೆಚ್ಚು (5) ಟ್ರೋಫಿ ಗೆದ್ದು, ಮುಂಬೈ ಇಂಡಿಯನ್ಸ್ ದಾಖಲೆಯನ್ನು ಸರಿಗಟ್ಟಿದೆ.ಟೈಟನ್ಸ್ ಮೊತ್ತ

ಟಾಸ್ ಸಾತು ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟನ್ಸ್ ಸ್ಪೋಟಕ ಆರಂಭ ಪಡೆಯಿತು. ಆರಂಭದಲ್ಲೇ ಸಿಕ್ಕ ಜೀವದಾನ ಬಳಸಿಕೊಂಡ ಶೂಭಮನ್ ಗಿಲ್, 28 ಎಸೆತಗಳಲ್ಲಿ 37 ರನ್ ಸಿಡಿಸಿದರು. ಮತ್ತೊಂದು ದೊಡ್ಡ ಇನಿಂಗ್ಸ್ ಆಡುವ ಸುಳಿವು ನೀಡಿದ್ದರಾದರೂ, ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ಎಂಎಸ್ ಧೋನಿ ಅವರ ವಿಕೆಟ್‌ಕೀಪಿಂಗ್ ಕಲೆಗಾರಿಕೆಯ ಎದುರು ಸ್ಟಂಪ್‌ಔಟ್ ಆಗಿ ನಿರಾಶೆ ಅನುಭವಿಸಿದರು. ಮೊದಲ ವಿಕೆಟ್‌ಗೆ 7 ಓವರ್‌ಗಳಲ್ಲಿ 66 ರನ್ ಕಲೆಹಾಕಿತ್ತು. ಮತ್ತೊಬ್ಬ ಓಪನರ್ ವೃದ್ಧಿಮಾನ್ ಸಹಾ (54) ಬಿರುಸಿನ ಅರ್ಧಶತಕ ಬಾರಿಸಿದರು

.ಸಾಯ್ ಸುದರ್ಶನ್ ಅಬ್ಬರ

ಇನಿಂಗ್ಸ್ ಆರಂಭದಲ್ಲಿ ರನ್ ಹೆಕ್ಕಲು ಕಷ್ಟ ಪಟ್ಟಿದ್ದ ಯುವ ಬ್ಯಾಟರ್ ಸಾಯ್ ಸುದರ್ಶನ್ 10 ಎಸೆತಗಳಲ್ಲಿ 8 ರನ್ ಗಳಿಸಿದ್ದರು. ಆದರೆ, ನಿಧಾನವಾಗಿ ರನ್ ಗಳಿಕೆಯ ವೇಗ ಹೆಚ್ಚಿಸಿಕೊಂಡ 47 ಎಸೆತಗಳಲ್ಲಿ 96 ರನ್ ಸಿಡಿಸಿ ಟೈಟನ್ಸ್ ತಂಡ ಬೃಹತ್ ಮೊತ್ತಕ್ಕೆ ಕಾರಣರಾದರು. ಗುಜರಾತ್ ಟೈಟನ್ಸ್ ತನ್ನ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 214 ರನ್‌ಗಳ ಶಿಖರ ನಿರ್ಮಿಸಿತು. ಸ್ಲಾಗ್ ಓವರ್‌ಗಳಲ್ಲಿ ಹಾರ್ದಿಕ್ ಪಾಂಡ್ಯ, 12 ಎಸೆತಗಳಲ್ಲಿ ಅಜೇಯ 21 ರನ್ ಸಿಡಿಸಿದರು.

ಚೇಸಿಂಗ್ ತೆಗೆದುಕೊಂಡ ಚೆನ್ನೈ

ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಎದುರು ಪೈಪೋಟಿ ಕಾದಾಟ ನಡೆಸಲಿದೆ. ಮಳೆ ಕಾರಣ ಭಾನುವಾರ (ಮೇ 28) ಪಂದ್ಯ ಟಾಸ್ ಕೂಡ ಕಾಣಲಿಲ್ಲ. ಹೀಗಾಗಿ ಮುಂದೂಡಲ್ಪಟ್ಟ ಪಂದ್ಯದಲ್ಲಿ ಟ್ರೋಫಿ ರಾರಿಗೆ ಒಲಿಯಲಿದೆ ಎಂಬ ಕುತೂಹಲ ಟಾಸ್ ಗೆದ್ದ ಎಂಎಸ್ ಧೋನಿ, ಚೇಸಿ ಆಯ್ಕೆ ಮಾಡಿಕೊಂಡರು.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾತ್ಮಕ ಪೋಸ್ಟ್‌: ಮಂಗಳೂರು ಪೊಲೀಸ್‌ ಆಯುಕ್ತರಿಂದ ಎಚ್ಚರಿಕೆ

Posted by Vidyamaana on 2023-05-17 16:29:23 |

Share: | | | | |


ಸಾಮಾಜಿಕ ಜಾಲತಾಣಗಳಲ್ಲಿ  ಪ್ರಚೋದನಾತ್ಮಕ ಪೋಸ್ಟ್‌: ಮಂಗಳೂರು ಪೊಲೀಸ್‌ ಆಯುಕ್ತರಿಂದ ಎಚ್ಚರಿಕೆ

ಮಂಗಳೂರು: ವಿಧಾನಸಭಾ ಚುನಾವಣೆ ಫ‌ಲಿತಾಂಶ ಪ್ರಕಟವಾದ ಬಳಿಕ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ, ಪ್ರಚೋದನಾತ್ಮಕ ಸಂದೇಶಗಳನ್ನು ಪೋಸ್ಟ್‌ ಮಾಡುತ್ತಿರುವುದು ಕಂಡು ಬಂದಿದ್ದು ಇಂತಹ ಪೋಸ್ಟ್‌ಗಳನ್ನು ಹಾಕುವ ಅಥವಾ ಫಾರ್ವರ್ಡ್‌ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್‌ ಆಯುಕ್ತ ಕುಲದೀಪ್‌ ಕುಮಾರ್‌ ಆರ್‌. ಜೈನ್‌ ಎಚ್ಚರಿಕೆ ನೀಡಿದ್ದಾರೆ.ಜಾತಿ, ಧರ್ಮ ಮತ್ತು ಪ್ರದೇಶ ಆಧಾರಿತವಾಗಿ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ಉಂಟು ಮಾಡುವಂತಹ ಮತ್ತು ವೈಯಕ್ತಿಕ ನಿಂದನೆ ಮಾಡುವಂತಹ ದ್ವೇಷಪೂರಿತ ಮತ್ತು ಪ್ರಚೋದನಾತ್ಮಕ ಪೋಸ್ಟ್‌ಗಳ ಮೇಲೆ ನಿಗಾ ಇಡಲು “ಸೋಶಿಯಲ್‌ ಮೀಡಿಯಾ ಮಾನಿಟರಿಂಗ್‌ ಸೆಲ್‌’ ರಚಿಸಲಾಗಿದೆ. ಇಂತಹ ಸಂದೇಶ ಪೋಸ್ಟ್‌ ಮಾಡುವುದು, ಫಾರ್ವರ್ಡ್‌ ಮಾಡುವುದು, ಲೈಕ್‌, ಕಮೆಂಟ್‌ ಮಾಡುವುದು ಅಪರಾಧವಾಗಿದ್ದು ಈ ರೀತಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಯಾವುದೇ ಸುಳ್ಳು ಸುದ್ದಿ ಮತ್ತು ದ್ವೇಷದ ಸಂದೇಶಗಳಿಗೆ ಕಿವಿಗೊಡಬಾರದು ಎಂದು ಪೊಲೀಸ್‌ ಆಯುಕ್ತರು ಮನವಿ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

Posted by Vidyamaana on 2023-07-23 12:44:06 |

Share: | | | | |


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಮಂಗಳೂರು : ಹವಾಮಾನ ಇಲಾಖೆಯು ಮುಂದಿನ 24 ಗಂಟೆಗಳಲ್ಲಿ ರಾಜ್ಯದ 11 ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಿದೆ. ಈ 11 ಜಿಲ್ಲೆಯಲ್ಲಿ ಶಿವಮೊಗ್ಗ ಜಿಲ್ಲೆಯೂ ಸೇರ್ಪಡೆಗೊಂಡಿದೆ.ಬೆಳಗಾವಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಸಂಭವ್ಯವಿದೆ.ಬಾಗಲಕೋಟೆ, ಚಿತ್ರದುರ್ಗ, ಗದಗ ಮತ್ತು ಮೈಸೂರಿನಲ್ಲಿ ಚದುರಿದ ಮಳೆ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿ, ವಿಜಯನಗರ ರಾಯಚೂರು, ಚಾಮರಾಜ್ ನಗರ ಮತ್ತು ಮಂಡ್ಯದಲ್ಲಿ ತುಂತುರು ಮಳೆ ಬೀಳುವ ಸಾಧ್ಯತೆ ಇದೆ. ಕಲ್ಬುರ್ಗಿಯಲ್ಲಿ ಅತಿಸಾಧಾರಣ ಮಳೆ ಬೀಳುವ ಸಂಭವವಿದೆ.


ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಆಗುಂಬೆ, ಹೊಸನಗರದ ಸೊನಾಲೆ, ತ್ರಿಣಿವೆ, ಸುಳಗೋಡು, ಮೇಲಿನ ಬೆಸಿಗೆ, ನಗರ, ಮುಂಬಾರು ತೀರ್ಥಹಳ್ಳಿಯ ಹಾದಿಗಲ್ಲು, ಬಿದರಗೋಡು, ಹೊನ್ನೆತಾಳುವಿನಲ್ಲಿ ಉತ್ತಮ ಮಳೆಯಾಗಿದೆ.ಜಿಲ್ಲೆಯ ಪ್ರಮುಖ ಜಲಾಶಯಗಳ ಮಟ್ಟ

ಚಿಕ್ಕಮಗಳೂರಿನ 10 ಗ್ರಾಮಪಂಚಾಯಿತಿಗಳಲ್ಲಿ ಉತ್ತಮ ಮಳೆತಾಗಿದ್ದು ಇದರಿಂದ ತುಂಗ ಜಲಾಶಯದಲ್ಲಿ ಒಳಹರಿವು ಹೆಚ್ಚಳವಾಗಿದೆ. ನಿನ್ನೆ ರಾತ್ರಿ 35 ಸಾವಿರ ಕ್ಯೈಸೆಕ್ ನೀರು ಹರಿಬರುತ್ತಿದ್ದು ಬೆಳಗಿನ ಜಾವದ ಸಮಯದಲ್ಲಿ ಮಳೆ ಕಡಿಮೆಯಾದ ಕಾರಣ ಜಲಾಶಯಕ್ಕೆ 20 ಸಾವಿರ ಕ್ಯೂಸೆಕ್ ನೀರು ಹರಿದು ಬಂದಿತ್ತು.


ಈಗ ಮಳೆ ಹೆಚ್ಚಾದ ಕಾರಣ 40 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ತುಂಗ ನದಿಯ ಗಾಜನೂರು ಜಲಾಶಯದಲ್ಲಿ 21 ಗೇಟು ತೆರೆದು ಹರಿಬಿಡಲಾಗುತ್ತಿದೆ.ಅದರಂತೆ ಭದ್ರೆಯ ಒಖಹರಿವು ಹೆಚ್ಚಳವಾಗಿದೆ. 186 ಅಡಿ ಎತ್ತರದ ಜಲಾಶಯದಲ್ಲಿ ಪ್ರಸ್ತುತ 145ಅಡಿ ನೀರು ಸಂಗ್ರಹವಾಗಿದೆ. 12165 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇಷ್ಟು ಹೊತ್ತಿಗೆ ಭದ್ರ ಡ್ಯಾಂ ತುಂಬಿ ಗೇಟ್ ಓಪನ್ ಮಾಡಲಾಗಿತ್ತು. 184 ಅಡಿ ನೀರು ಸಂಗ್ರಹವಾಗಿತ್ತು. ಜು.18, 2022 ರಂದು ಜಲಾಶಯದಿಂದ ನದಿಗೆ ನೀರು ಹರಿಸಲಸಗಿತ್ತು.


ಅದರಂತೆ ಲಿಂಗನ ಮಕ್ಕಿ ಜಲಾಶಯದಲ್ಲಿ 52,374 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 1819 ಅಡಿ ಎತ್ತರದ ಜಲಾಶಯದಲ್ಲಿ ಸಧ್ಯಕ್ಕೆ 1770.70 ಅಡಿ ನೀರು ಸಂಗ್ರಹವಾಗಿದೆ. ನಿನ್ನೆ 1767.30 ಅಡಿ ನೀರು ಸಂಗ್ರಹವಾಗಿತ್ತು. ಒಳಹರಿವು ಹೆಚ್ಚಳದಿಂದ ಮೂರು ಅಡಿ ಹೆಚ್ಚಳವಾಗಿದೆ. ಕಳೆದ ವರ್ಷ ಈ ದಿನ 1797 ಅಡಿ ನೀರು ಸಂಗ್ರಹವಾಗಿದೆ.

ಜಯ ನಮ್ದೇ- ಗೆಲುವನ್ನು ಹೀಗೆ ಸಂಭ್ರಮಿಸಿ.. ಅಶೋಕ್ ರೈ ಕೈ ಕಾರ್ಯಕರ್ತರಿಗೆ ಹೇಳಿದ್ದೇನು

Posted by Vidyamaana on 2023-05-11 09:09:32 |

Share: | | | | |


ಜಯ ನಮ್ದೇ- ಗೆಲುವನ್ನು ಹೀಗೆ ಸಂಭ್ರಮಿಸಿ.. ಅಶೋಕ್ ರೈ ಕೈ ಕಾರ್ಯಕರ್ತರಿಗೆ ಹೇಳಿದ್ದೇನು

ಪುತ್ತೂರು: ವಿಧಾನಸಭಾ ಚುನಾವಣೆಗೆ ಮತದಾನ ನಿನ್ನೆಯಷ್ಟೇ ಮುಕ್ತಾಯಗೊಂಡಿದೆ. ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಉತ್ತಮ ಮತದಾನವಾಗಿದೆ. ಕ್ಷೇತ್ರದ ಜನರು ಮತ್ತು ವಿವಿಧ ರಾಜಕೀಯ ಪಕ್ಷಗಳ ನಾಯಕರು, ಕಾರ್ಯಕರ್ತರು ಹಾಗೂ ಪಕ್ಷೇತರ ಅಭ್ಯರ್ಥಿ ಹಾಗೂ ಅವರ ಹಿಂಬಾಲಕರೂ ಸಹ ಗೆಲುವಿನ ಲೆಕ್ಕಾಚಾರ ಮತ್ತು ಕಾತರದಲ್ಲಿದ್ದಾರೆ.


ಈ ನಡುವೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು ವಿಡಿಯೋ ಒಂದನ್ನು ರಿಲೀಸ್ ಮಾಡಿದ್ದು ಅದರಲ್ಲಿ ಅವರು ಮತದಾರರಿಗೆ ಕೃತಜ್ಞತೆ ಅರ್ಪಿಸುವ ಜೊತೆಗೆ ಗೆಲುವು ತಮ್ಮದೇ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಅವರ ಮಾತಿನ ಸಾರಾಂಶ ಇಲ್ಲಿದೆ.., ‘ಒಳ್ಳೆಯ ರೀತಿಯಲ್ಲಿ ಚುನಾವಣೆ ನಡೆದಿದೆ, ಅಲೆ ನಮ್ಮ ಪರವಾಗಿದ್ದು ನಾವು ಸುಮಾರು 25 ಸಾವಿರದಿಂದ 30 ಸಾವಿರ ಅಂತರದಿಂದ ಜಯಭೇರಿ ಬಾರಿಸ್ತೇವೆ. ನಮ್ಮ ಕಾರ್ಯಕರ್ತರಿಗೆ ನನ್ನದೊಂದು ಮನವಿ ಇದೆ, ಯಾರೂ ಕೂಡಾ ವಿಜಯೋತ್ಸವ ಸಂದರ್ಭದಲ್ಲಿ ಬೇರೆ ಪಕ್ಷದವರ ಮನೆಯ ಹತ್ತಿರ ಅವರ ಮನೆಗಳ ಕಾಂಪೌಡ್ ಸಮೀಪ ಪಟಾಕಿ ಹೊಡೆಯುವ ಕೆಲಸ ಮಾಡಬಾರದು, ಅದೇ ರೀತಿ ಅನ್ಯಪಕ್ಷದವನರನ್ನು ನಿಂದಿಸುವ ಅಥವಾ ಅವರಿಗೆ ನೋವು ಉಂಟುಮಾಡುವ ರೀತಿಯಲ್ಲಿ ಯಾರೂ ವರ್ತಿಸಬಾರದು. ಹಿಂದೆ ಏನೇ ಆಗಿರ್ಬಹುದು ಆದರೆ ಈ ಬಾರಿ ಇಂತಹ ಯಾವುದೇ ವರ್ತನೆಗೆ ನೀವು ಅವಕಾಶ ಮಾಡಿಕೊಡಬಾರದು’ ಎಂದು ಅಶೋಕ್ ಕುಮಾರ್ ರೈ ಹೇಳುವ ಮೂಲಕ ಪುತ್ತೂರು ಕ್ಷೇತ್ರದಲ್ಲಿ ಸೌಹಾರ್ದ ರಾಜಕೀಯ ವಾತಾವರಣವನ್ನು ನಿರ್ಮಿಸಿ ಅದನ್ನು ಮುಂದುವರಿಸಿಕೊಂಡು ಹೋಗುವ ಭರವಸೆಯನ್ನು ಮೂಡಿಸಿದ್ದಾರೆ.

ಶ್ರೀ ಅನಂತಪುರದಲ್ಲಿ ಪೂರ್ಣ ದರ್ಶನ ತೋರಿದ ಬಬಿಯಾ

Posted by Vidyamaana on 2024-06-16 08:13:42 |

Share: | | | | |


ಶ್ರೀ ಅನಂತಪುರದಲ್ಲಿ ಪೂರ್ಣ ದರ್ಶನ ತೋರಿದ ಬಬಿಯಾ

ಕುಂಬಳೆ : ಸರೋವರ ಕ್ಷೇತ್ರವೆಂದೇ ಖ್ಯಾತಿ ಪಡೆದ ಶ್ರೀ ಅನಂತಪುರದಲ್ಲಿ ತಿಂಗಳುಗಳ ಹಿಂದೆ ಪ್ರತ್ಯಕ್ಷಗೊಂಡ ನೂತನ ಮೊಸಳೆ ಮರಿ (ಬಬಿಯಾ – 3) ಇದೇ ಮೊದಲ ಬಾರಿಗೆ ಶುಕ್ರವಾರ ಸಂಜೆ ಕ್ಷೇತ್ರ ಪ್ರಾಂಗಣ ಏರುವ ಮೂಲಕ ತನ್ನ ಪೂರ್ಣ ದರ್ಶನ ತೋರಿದೆ.

ಸುಮಾರು 80 ವರ್ಷಗಳಿಂದ ಕ್ಷೇತ್ರದ ಕೊಳದಲ್ಲಿ ನೆಲೆಸಿದ್ದ ಮೊಸಳೆಯು 2022ರ ಅಕ್ಟೋಬರ್‌ 9ರಂದು ರಾತ್ರಿ ಈ ಹಿಂದೆ ಇದ್ದ ಮೊಸಳೆ (ಬಬಿಯಾ) ಮೃತಪಟ್ಟಿತ್ತು

Recent News


Leave a Comment: