ಶಿರೂರು ದುರಂತ: ಮಾನವೀಯ ನೆರವು ನೀಡಿದ ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸಿದ ಜಿಲ್ಲಾಧಿಕಾರಿ

ಸುದ್ದಿಗಳು News

Posted by vidyamaana on 2024-07-24 22:11:50 |

Share: | | | | |


ಶಿರೂರು ದುರಂತ: ಮಾನವೀಯ ನೆರವು ನೀಡಿದ ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸಿದ ಜಿಲ್ಲಾಧಿಕಾರಿ

‌ಮಂಗಳೂರು: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಮೃತಪಟ್ಟಿದ್ದ ವೃದ್ಧೆಯ ಅಂತ್ಯ ಸಂಸ್ಕಾರಕ್ಕೆ ಮಾನವೀಯತೆ ನೆಲೆಯಲ್ಲಿ ನೆರವು ನೀಡಿದ್ದ ಮಂಗಳೂರಿನ ಪತ್ರಕರ್ತರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ತಮ್ಮ ಕಚೇರಿಗೆ ಆಹ್ವಾನಿಸಿ ಸನ್ಮಾನಿಸಿದರು.ಶಿರೂರು ಗುಡ್ಡ ದುರಂತದಲ್ಲಿ ಉಳುವರೆ ಗ್ರಾಮದ ಸಣ್ಣಿ ಹನುಮಂತ ಗೌಡ ಎಂಬ ವೃದ್ಧೆಯ ಮೃತದೇಹ 8 ದಿನಗಳ ಬಳಿಕ ಮಂಗಳವಾರ ಸಿಕ್ಕಿದ್ದು ಪೋಸ್ಟ್ ಮಾರ್ಟಂ ಬಳಿಕ ಮೃತದೇಹವನ್ನು ಮನೆಯಿದ್ದ ಜಾಗಕ್ಕೆ ಸಾಗಿಸಿ ಅಂತಿಮ ಸಂಸ್ಕಾರ ನಡೆಸಲು ಪತ್ರಕರ್ತರಾದ ಶಶಿ ಬೆಳ್ಳಾಯರು, ಮೋಹನ್ ಕುತ್ತಾರ್, ಆರಿಫ್ ಯು.ಆರ್. ಗಿರೀಶ್ ಮಳಲಿ ಹಾಗೂ ಶಿವಶಂಕರ್ ನೆರವಾಗಿದ್ದರು

ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದನ್ನು ಗಮನಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಂದ ಪತ್ರಕರ್ತರ ಮಾಹಿತಿ ಪಡೆದು ಕಚೇರಿಯಲ್ಲಿ ಸನ್ಮಾನಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಅವರು ಜಿಲ್ಲಾಧಿಕಾರಿಯವರಿಗೆ ಪತ್ರಕರ್ತರ ಪರಿಚಯ ಮಾಡಿಕೊಟ್ಟರು.


ಬಳಿಕ ಮಾತಾಡಿದ ಜಿಲ್ಲಾಧಿಕಾರಿ ಅವರು, ನಿಮ್ಮ ಈ ಕಾರ್ಯ ಶ್ಲಾಘನೀಯವಾಗಿದೆ. ಇದೊಂದು ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆ ತರುವಂತಹ ಕಾರ್ಯ. ಮುಂದೆಯೂ ಇಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಿ, ಏನಾದರೂ ಅಗತ್ಯ ನೆರವು ಬೇಕಾದಲ್ಲಿ ಜಿಲ್ಲಾಡಳಿತ ನಿಮ್ಮ ಜೊತೆಗಿದೆ. ನಿಮ್ಮಂತಹ ಉತ್ಸಾಹಿ ತರುಣರ ಅವಶ್ಯಕತೆ ಸಮಾಜಕ್ಕೆ ಇದೆ ಎಂದು ಬೆನ್ನುತಟ್ಟಿದರು. ಅಲ್ಲದೇ ಶಿರೂರು ಮತ್ತು ಉಳುವರೆ ಗ್ರಾಮದ ಸದ್ಯದ ಸ್ಥಿತಿಗತಿಯ ಬಗ್ಗೆ ಪತ್ರಕರ್ತರಿಂದ ಮಾಹಿತಿ ಪಡೆದರು

 Share: | | | | |


ಸ್ನೇಹಿತರ ಬೆಟ್ಟಿಂಗ್ - ಯುವತಿಯ ಹಿಂಭಾಗ ಟಚ್ ಮಾಡಿದ ಪೋಲಿ ಇದೀಗ ಪೊಲೀಸರ ಅತಿಥಿ!

Posted by Vidyamaana on 2024-01-31 20:32:27 |

Share: | | | | |


ಸ್ನೇಹಿತರ ಬೆಟ್ಟಿಂಗ್ - ಯುವತಿಯ ಹಿಂಭಾಗ ಟಚ್ ಮಾಡಿದ ಪೋಲಿ ಇದೀಗ ಪೊಲೀಸರ ಅತಿಥಿ!

ಬೆಂಗಳೂರು :ಇತ್ತೀಚೆಗೆ ನಮ್ಮೂರ ಹೋಟೆಲ್‌ನಲ್ಲಿ ನಿಂತಿದ್ದ ಯುವತಿಗೆ ಅಲ್ಲೇ ಇದ್ದ ಯುವಕನೋರ್ವ ಯುವತಿಯ ಹಿಂದಿನ ಭಾಗಕ್ಕೆ ಬೇಕಂತಲೇ ಟಚ್‌ ಮಾಡಿ ಕೀಟಲೆ ಮಾಡಿ ಅಲ್ಲಿಂದ ಎಸ್ಕೇಪ್‌ ಆಗಿದ್ದ. ಈ ಕುರಿತು ಯುವತಿಯ ಪೋಷಕರು ನೀಡಿದ ದೂರಿಯನನ್ವಯ ವಿಜಯನಗರ ಪೊಲೀಸರು ಕೇಸು ದಾಖಲಿಸಿದ್ದು, ಇದೀಗ ಆರೋಪಿ ಚಂದನ್‌ ಎಂಬಾತನನ್ನು ಬಂಧಿಸಿದ್ದಾರೆ.


ಡಿ.30 ರಂದು ಸಂಜೆ 7.30ರ ಸುಮಾರಿಗೆ ಸ್ನೇಹಿತೆಯೊಂದಿಗೆ ನಮ್ಮೂರ ಹೋಟೆಲ್‌ಗೆ ತಿಂಡಿ ತಿನ್ನಲೆಂದು ಯುವತಿ ಬಂದಿದ್ದು, ಆಕೆಯನ್ನು ಕಂಡ ಯುವಕ ಬೇಕೆಂತಲೇ ಆಕೆಯ ಸೊಂಟದ ಹಿಂಭಾಗ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ. ಕೂಡಲೇ ಯುವತಿ ತರಾಟೆ ತೆಗೆದುಕೊಂಡಾಗ ಅಲ್ಲಿಂದ ಓಡಿ ಹೋಗಿದ್ದ. ಈ ಘಟನೆ ಸಂಬಂಧ ವೀಡಿಯೋ ಜ.18 ರಂದು ವೈರಲ್‌ ಆಗಿತ್ತು. ಯುವತಿ ಪೋಷಕರು ಪೊಲೀಸರಿಗೆ ಈ ಕುರಿತು ದೂರು ನೀಡಿದ್ದು, ತನಿಖೆ ಕೈಗೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಕಾಮುಕ ಚಂದನ್‌ನನ್ನು ಬಂಧಿಸಿದ್ದಾರೆ.


ಗ್ಯಾಸ್‌ ಸಿಲಿಂಡರ್‌ ಡೆಲಿವರಿ ಕೆಲಸ ಮಾಡುವ ವೃತ್ತಿ ಮಾಡಿಕೊಂಡಿದ್ದ ಆರೋಪಿ ಚಂದನ್‌, ಹಂಪಿನಗರ ನಿವಾಸಿ. ಘಟನೆ ನಡೆದ ದಿನ ಸ್ನೇಹಿತರೊಂದಿಗೆ ಸಿನಿಮಾ ನೋಡಿಕೊಂಡು ಬಂದ ಚಂದನ್‌ ಭರ್ಜರಿ ಪಾರ್ಟಿ, ಕಂಠ ಪೂರ್ತಿ ಕುಡಿದು ಊಟಕ್ಕೆ ಎಂದು ವಿಜಯನಗರ ಹೋಟೆಲ್‌ಗೆ ಬಂದಿದ್ದ. ಊಟ ಮುಗಿಸಿ ಹೋಟೆಲ್‌ ಹೊರಗೆ ಚಂದನ್‌ ಗ್ಯಾಂಗ್‌ ಮಾತಾಡಿಕೊಂಡು ನಿಂತಿದ್ದರು.


ಈ ಸಂದರ್ಭದಲ್ಲಿ ಯುವತಿ ಅಲ್ಲಿಗೆ ಬಂದಿದ್ದಾಳೆ. ಇದನ್ನು ಕಂಡ ಸ್ನೇಹಿತನೋರ್ವ ಆಕೆಯನ್ನು ಮುಟ್ಟಿದರೆ ಐದು ಸಾವಿರ ಕೊಡುತ್ತೀನಿ ಎಂದು ಚಂದನ್‌ಗೆ ಹೇಳಿದ್ದಾನೆ. ಅಷ್ಟಕ್ಕೇ ಚಂದನ್‌ ಕುಡಿದ ಅಮಲಿನಲ್ಲಿ ಹಿಂಬದಿಯಿಂದ ಹೋಗಿ ಯುವತಿಗೆ ಮುಟ್ಟಿ ಅನುಚಿತವಾಗಿ ವರ್ತನೆ ಮಾಡಿ ಕಾಲ್ಕಿತ್ತಿದ್ದ. ನಂತರ ಯುವತಿ ತನ್ನ ಪೋಷಕರಿಗೆ ವಿಷಯ ತಿಳಿಸಿದ್ದು, ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಳು. ಇದೀಗ ಪೊಲೀಸರು ಆರೋಪಿ ಚಂದನ್‌ನನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.

ತಮ್ಮ ವಿರುದ್ಧ ಮಾಧ್ಯಮಗಳು ಯಾವುದೇ ರೀತಿಯ ಮಾನಹಾನಿಕರ ವರದಿ ಪ್ರಕಟಿಸದಂತೆ ಕೋರ್ಟ್‌ ಮೆಟ್ಟಿಲೇರಿದ ಮಾಜಿ ಸಿ.ಎಂ.ಬೊಮ್ಮಾಯಿ

Posted by Vidyamaana on 2024-08-28 14:45:52 |

Share: | | | | |


ತಮ್ಮ ವಿರುದ್ಧ ಮಾಧ್ಯಮಗಳು ಯಾವುದೇ ರೀತಿಯ ಮಾನಹಾನಿಕರ ವರದಿ ಪ್ರಕಟಿಸದಂತೆ ಕೋರ್ಟ್‌ ಮೆಟ್ಟಿಲೇರಿದ ಮಾಜಿ ಸಿ.ಎಂ.ಬೊಮ್ಮಾಯಿ

ಹಾವೇರಿ ಸಂಸದ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ವಿರುದ್ಧದ ಯಾವುದೇ ಮಾನ ಹಾನಿಕರ ಸುದ್ದಿಗಳನ್ನು ಪ್ರಸಾರ ಮಾಡದಂತೆ ಪ್ರತಿಬಂಧಕಾದೇಶ ಕೋರಿ ಬೆಂಗಳೂರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಪ್ರತಿಬಂಧಕಾದೇಶ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿರುವ ಬೆಂಗಳೂರಿನ ಸತ್ರ ನ್ಯಾಯಾಲಯವು ಬುಧವಾರಕ್ಕೆ ಆದೇಶ ಕಾಯ್ದಿರಿಸಿದೆ.

ಬಸವರಾಜ ಬೊಮ್ಮಾಯಿ ಸಲ್ಲಿಸಿರುವ ಮೂಲ ದಾವೆಯ ಭಾಗವಾಗಿ ಮಧ್ಯಂತರ ಅರ್ಜಿಯ ವಿಚಾರಣೆಯನ್ನು 8ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ವಾಣಿ ಎ. ಶೆಟ್ಟಿ ನಡೆಸಿದರು.

ವಕೀಲ ಕೆ.ಎನ್. ಜಗದೀಶ್ ಮತ್ತು ಮಾಧ್ಯಮಗಳು ತಮ್ಮ ವಿರುದ್ಧದ ಆಕ್ಷೇಪಾರ್ಹ ಹೇಳಿಕೆ ಮತ್ತು ಸುದ್ದಿಗಳನ್ನು ಪ್ರಕಟಿಸದಂತೆ ಪ್ರತಿಬಂಧಕಾದೇಶ ನೀಡಲು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಮಂಗಳವಾರ ಅರ್ಜಿಯ ವಿಚಾರಣೆ ನಡೆಸಲಾಗಿದ್ದು, ಬುಧವಾರ ಆದೇಶ ನೀಡುವ ಸಾಧ್ಯತೆ ಇದೆ.

ಫೆ.11ರಂದು ಕಡಬದಲ್ಲಿ ಸ್ಪಂದನಾ ಸಮುದಾಯ ಸಹಕಾರಿ ಸಂಘ ಶುಭಾರಂಭ

Posted by Vidyamaana on 2024-02-08 21:58:54 |

Share: | | | | |


ಫೆ.11ರಂದು ಕಡಬದಲ್ಲಿ ಸ್ಪಂದನಾ ಸಮುದಾಯ ಸಹಕಾರಿ ಸಂಘ ಶುಭಾರಂಭ

ಕಡಬ: ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಅನುಗ್ರಹ ಕಾಂಪ್ಲೆಕ್ಸ್‌ನಲ್ಲಿ ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘ ಪ್ರವರ್ತಿತ ಸ್ಪಂದನಾ ಸಮುದಾಯ ಸಹಕಾರ ಸಂಘ ಶುಭಾರಂಭಗೊಳ್ಳಲಿದ್ದು, ಇದರ ಸಭಾ ಕಾರ್ಯಕ್ರಮವು ಕಡಬ ಒಕ್ಕಲಿಗ ಸಮುದಾಯ ಭವನದಲ್ಲಿ ಫೆ.11ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೇಶವ ಅಮೈ ಕಲಾಯಿಗುತ್ತು ಹೇಳಿದ್ದಾರೆ.


ಅವರು ಫೆ.8ರಂದು ಕಡಬದ ಸ್ಪಂದನಾ ಸಮುದಾಯ ಸಹಕಾರಿ ಸಂಘದ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇವಲ ಗೌಡ ಸಮುದಾಯದ ಏಳಿಗೆ ಅಲ್ಲದೆ ಇತರ ಸಮುದಾಯದೊಂದಿಗೆ ವ್ಯವಹಾರ, ಪರಸ್ಪರ ಸಹಕಾರ ಇಟ್ಟುಕೊಳ್ಳುವ ಇರಾದೆಯಿಂದ ಸಮುದಾಯದ ವತಿಯಿಂದ ಸಹಕಾರಿ ಸಂಘವನ್ನು ಸ್ಥಾಪಿಸಲು ಉದ್ದೇಶಿಸಿ 2023ರ ಸಪ್ಟೆಂಬರ್ ನಲ್ಲಿ ಕೆಲಸ ಪ್ರಾರಂಭಿಸಿ ಎರಡು ತಿಂಗಳಿನಲ್ಲಿ ಸಹಕಾರ ನಿಬಂಧನೆಗಳ ಪ್ರಕಾರ ಠೇವಣಿ ಹಾಗೂ ಸದಸ್ವತ್ವ ನೊಂದಾಣಿ ಕಾರ್ಯಗಳನ್ನು ಪೂರ್ಣಗೊಳಿಸಲಾಯಿತು. ಬಳಿಕ ಡಿ.26ರಂದು ಆದಿ ಚುಂಚನಗಿರಿ ಮಠದ ನಿರ್ಮಾಲನಂದನಾಥ ಸ್ವಾಮೀಜಿ ಹಾಗೂ ಕಾವೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿಯವರು ಉದ್ಘಾಟನೆ ನಡೆಸಿದ್ದರು. ತಾಲೂಕು ಕೇಂದ್ರ ಕಡಬದ ಜನರ ಆರ್ಥಿಕ ಸಬಲೀಕರಣ, ಸಮುದಾಯದ ಸ್ವಸಹಾಯ ಮತ್ತು ಸೇವೆಯ ಧೈಯವನ್ನು ಹೊಂದಿರುವ ಸಹಕಾರಿ ಸಂಘದ ಶುಭಾರಂಭ ಸಭಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ, ಮಂಗಳೂರು, ಸಹಕಾರ ಸಂಘಗಳ ಉಪನಿಬಂಧಕರಾದ ರಮೇಶ್ ಎಚ್.ಎನ್, ಕಡಬ ತಾಲೂಕು ತಹಶೀಲ್ದಾರ್ ಪ್ರಭಾಕರ ಖಜೂರೆ, ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೀಲಾವತಿ ಇ, ಕರ್ನಾಟಕ ರಾಜ್ಯ ಕೆಪಿಸಿಸಿ ಸದಸ್ಯ ಕೃಷ್ಣಪ್ಪ, ಜಿಲ್ಲಾ ಪರಿಷತ್‌ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೃಷ್ಣ ಶೆಟ್ಟಿ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಶೆಟ್ಟಿ,ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಕಡಬ ಶಾಖೆಯ ವ್ಯವಸ್ಥಾಪಕಿ ಅಮಿತಾ ಶೆಟ್ಟಿ, ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ಕಲ್ಪುರೆ, ಕಡಬ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಸಲಹಾ ಸಮಿತಿ ಅಧ್ಯಕ್ಷ ಸುದರ್ಶನ ಗೌಡ ಕೋಡಿಂಬಾಳ, ವೆಂಕಟರಮಣ ಕ್ರೆಡಿಟ್ ಕೋ ಅಪರೇಷವ್ ಸೊಸೈಟಿ ಅಧಕ್ಷ ಗಣೇಶ್ ಕೈಕುರೆ ಮೊದಲಾವರು ಉಪಸ್ಥಿತರಿರಲಿದ್ದಾರೆ ಎಂದು ಕೇಶವ ಅಮೈ ಹೇಳಿದ್ದಾರೆ.


ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಚೇತನ್ ಆನೆಗುಂಡಿ, ಒಕ್ಕಲಿಗ ಗೌಡ ಸೇವಾ ಸಂಘದ ಉಪಾಧ್ಯಕ್ಷ ತಮ್ಮಯ್ಯ ಗೌಡ ಸುಳ್ಯ, ನಿರ್ದೇಶಕರಾದ ನಾಗೇಶ್‌ ಕೆಡೆಂಜಿ, ಗೀತಾ ಅಮೈ ಕೇವಳ, ಗೋಪಾಲ ಎಣ್ಣೆಮಜಲು, ಹಿರಿಯಣ್ಣ ಗೌಡ ಎ. ಆಶಾ ತಿಮ್ಮಪ್ಪ ಗೌಡ, ಲೋಕೇಶ್ ಬಿ.ಎನ್.ಉಪಸ್ಥಿತರಿದ್ದರು.

ಸ್ವಾತಂತ್ರ್ಯೋತ್ಸವಕ್ಕೆ ಇಲಾಖೆಯವರು ಹಣ ಸಂಗ್ರಹಿಸುವುದು ಬೇಡ ಪೂರ್ತಿ ಖರ್ಚು ನಾನು ನೀಡುತ್ತೇನೆ

Posted by Vidyamaana on 2023-08-12 03:27:28 |

Share: | | | | |


ಸ್ವಾತಂತ್ರ್ಯೋತ್ಸವಕ್ಕೆ ಇಲಾಖೆಯವರು ಹಣ ಸಂಗ್ರಹಿಸುವುದು ಬೇಡ ಪೂರ್ತಿ ಖರ್ಚು ನಾನು ನೀಡುತ್ತೇನೆ

ಪುತ್ತೂರು; ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಈ ಬರಿಯ ೭೬ ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವು ಕಿಲ್ಲೆ ಮೈದಾನದಲ್ಲಿ ಎಂದಿನಂತೆ ನಡೆಯಲಿದ್ದು ಬಳಿಕ ಪುರಭವನದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಲಿದೆ. ಸ್ವಾತಂತ್ರ್ಯೋತ್ಸವ ದಿನದಂದು ಎಲ್ಲಾ ಖರ್ಚುಗಳನ್ನು ನಾನೇ ನೀಡುತ್ತೇನೆ ಎಂದು ಶಾಸಕರಾದ ಅಶೋಕ್ ರೈ ಅಧಿಕಾರಿಗಳಿಗೆ ವಾಗ್ದಾನ ನೀಡಿದ್ದು ಖರ್ಚಿನ ಮೊತ್ತವನ್ನು ಈಗಾಗಲೇ ಅಧಿಕಾರಿಗಳ ಕೈಗೆ ನೀಡಿದ್ದಾರೆ.

ಪ್ರತೀ ಬಾರಿ ಸ್ವಾತಂತ್ರ್ಯೋತ್ಸವ ದಿನದ ಖರ್ಚಿನ ಹಣವನ್ನು ವಿವಿಧ ಇಲಾಖೆಯಿಂದ ಒಟ್ಟುಗೂಡಿಸಿ ಅದನ್ನು ಬಳಸುತ್ತಿದ್ದರು. ಸ್ವಾತಂತ್ರ್ಯೋತ್ಸವ ಆಚರಣಾ ಪೂರ್ವಭಾವಿ ಸಭೆಯಲ್ಲಿ ಶಾಸಕರಿಗೆ ಅಧಿಕಾರಿಗಳು ಈ ವಿಚಾರವನ್ನು ತಿಳಿಸಿದ್ದರು. ಇಲಾ ಖೆಗಳಿಂದ ಹಣ ಒಗ್ಗೂಡಿಸುವುದು ಬೇಡ ಅದು ಕೂಡಾ ಭೃಷ್ಟಾಚಾರದ ಒಂದು ಭಾಗವಾಗಿದೆ ಯಾವುದೇ ಕಾರಣಕ್ಕೂ ಯಾವ ಇಲಾಖೆಯವರು ಕೂಡಾ ಸ್ವಾತಂತ್ರ್ಯೋತ್ಸವದ ಖರ್ಚಿಗೆ ಹಣ ನೀಡುವುದು ಬೇಡ ಎಷ್ಟು ಖರ್ಚಾಗುತ್ತದೆ ಎಂದು ತಿಳಿಸಿ ಆ ಮೊತ್ತವನ್ನು ನಾನು ನೀಡುವುದಾಗಿ ಶಾಸಕರು ತಿಳಿಸಿದ್ದಾರೆ. ಪುತ್ತೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಪುತ್ತೂರಿನಲ್ಲಿ ಸ್ವಂತ ಹಣದಿಂದ ಸರಕಾರಿ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬಂದಿದ್ದು ಶಾಸಕರ ನಡೆಗೆ ಮತ್ತು ಭೃಷ್ಟಾಚಾರದ ವಿರೋಧಿನಿಲುವಿಗೆ ಪ್ರಶಂಸೆ ವ್ಯಕ್ತವಾಗಿದೆ.

ತುಮಕೂರಿನಲ್ಲಿ ತ್ರಿವಳಿ ಕೊಲೆ ಪ್ರಕರಣ: ಬೆಳ್ತಂಗಡಿಯ ಮನೆಗಳಿಗೆ ತಲುಪಿದ ಮೃತದೇಹ

Posted by Vidyamaana on 2024-03-29 11:32:14 |

Share: | | | | |


ತುಮಕೂರಿನಲ್ಲಿ ತ್ರಿವಳಿ ಕೊಲೆ ಪ್ರಕರಣ: ಬೆಳ್ತಂಗಡಿಯ ಮನೆಗಳಿಗೆ ತಲುಪಿದ ಮೃತದೇಹ

ಬೆಳ್ತಂಗಡಿ, ಮಾ.29: ತುಮಕೂರಿನಲ್ಲಿ ಇತ್ತೀಚೆಗೆ ಬೆಳ್ತಂಗಡಿಯ ಮೂವರನ್ನು ಕೊಲೆಗೈದು ಕಾರು ಸಹಿತ ಬೆಂಕಿ ಹಚ್ಚಿ ಸುಟ್ಟು ಹಾಕಿದ ಪ್ರಕರಣದಲ್ಲಿ ಕೊಲೆಯಾದವರ ಮೃತದೇಹಗಳು ಇಂದು (ಮಾ.29) ಮುಂಜಾನೆ ಬೆಳ್ತಂಗಡಿಯ ಮನೆಗಳಿಗೆ ತಲುಪಿದೆ.


ನಡ ಗ್ರಾಮದ ಟಿ.ಬಿ. ಕ್ರಾಸ್ ನಿವಾಸಿ ಆಟೋ ಚಾಲಕ ಶಾಹುಲ್ ಹಮೀದ್, ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್ ಮತ್ತು ಶಿರ್ಲಾಲು ಗ್ರಾಮದ ಸಿದ್ದೀಕ್ ಯಾನೆ ಇಮ್ಮಿಯಾಝ್ ಎಂಬವರ ಮೃತದೇಹಗಳು ಕೊಲೆಗೈದು ಕಾರು ಸಹಿತ ಸುಟ್ಟು ಹಾಕಿದ ಸ್ಥಿತಿಯಲ್ಲಿ ಮಾ.22ರಂದು ತುಮಕೂರಿನ ಕುಚ್ಚಂಗಿ ಕೆರೆ ಎಂಬಲ್ಲಿ ಪತ್ತೆಯಾಗಿದ್ದವು.ಮೃತದೇಹಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದರಿಂದ ಗುರುತು ಪತ್ತೆ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಡಿಎನ್ ಎ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರ ವರದಿ ಬಂದಿರುವ ಕಾರಣ ಇದೀಗ ಮೂವರ ಮೃತದೇಹಗಳನ್ನು ಹಸ್ತಾಂತರಿಸಲಾಗಿದ್ದು, ಕೃತ್ಯ ಬೆಳಕಿಗೆ ಬಂದ ಏಳು ದಿನಗಳ ಬಳಿಕ ಅಂದರೆ ಇಂದು ಬೆಳಗ್ಗೆ ಉಜಿರೆಗೆ ತಲುಪಿವೆ.


.

ರಾಹುಲ್ ಗಾಂಧಿಯನ್ನು ಭೇಟಿಯಾದ ಮನುಭಾಕರ್ - VIDEO

Posted by Vidyamaana on 2024-08-10 04:50:56 |

Share: | | | | |


ರಾಹುಲ್ ಗಾಂಧಿಯನ್ನು ಭೇಟಿಯಾದ ಮನುಭಾಕರ್ - VIDEO

ನವದೆಹಲಿ: ಒಲಿಂಪಿಕ್ ಡಬಲ್ ಪದಕ ವಿಜೇತ ಮನು ಭಾಕರ್ (Manu Bhaker) ಅವರು ಶುಕ್ರವಾರ ನವದೆಹಲಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾದರು.

ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಪಿಸ್ತೂಲ್ ಶೂಟಿಂಗ್‌ನಲ್ಲಿ ಎರಡು ಪದಕಗಳನ್ನು ಗೆದ್ದು ಇತಿಹಾಸ ಬರೆದ ಮನು ಭಾಕರ್‌ ಅವರು, ಬುಧವಾರ ಕಾಂಗ್ರೆಸ್‌ನ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದರು.

Recent News


Leave a Comment: