ಶಿರೂರು ಗುಡ್ಡ ಕುಸಿತ ಪ್ರಕರಣ : ನಾಪತ್ತೆಯಾಗಿದ್ದ ಲಾರಿ ಪತ್ತೆ, ಚಾಲಕ ಅರ್ಜುನನಿಗೆ ಮುಂದುವರೆದ ಶೋಧ ಕಾರ್ಯ!

ಸುದ್ದಿಗಳು News

Posted by vidyamaana on 2024-07-24 19:54:18 |

Share: | | | | |


ಶಿರೂರು ಗುಡ್ಡ ಕುಸಿತ ಪ್ರಕರಣ : ನಾಪತ್ತೆಯಾಗಿದ್ದ ಲಾರಿ ಪತ್ತೆ, ಚಾಲಕ ಅರ್ಜುನನಿಗೆ ಮುಂದುವರೆದ ಶೋಧ ಕಾರ್ಯ!

ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ 66ರ ಬಳಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಲಾರಿ ಇದೀಗ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಆದರೆ ಲಾರಿ ಚಾಲಕ ಅರ್ಜುನ ಇನ್ನೂ ಪತ್ತೆ ಆಗಿರದ ಕಾರಣ ಶೋಧ ಕಾರ್ಯ ಮುಂದುವರೆದಿದೆ.

ಕಳೆದ 8 ದಿನಗಳಿಂದ ಶಿರೂರು ಗುಡ್ಡ ಕುಸಿತ ಸ್ಥಳದಲ್ಲಿ ಎನ್ ಡಿ ಆರ್ ಎಫ್ ಎಚ್ ಡಿ ಆರ್ ಎಫ್ ತಂಡ ಸೇರಿದಂತೆ ಮಿಲ್ಟ್ರಿ ತಂಡ ಕೂಡ ಮಣ್ಣು ತೆರವು ಕಾರ್ಯಾಚರಣೆಗೆ ಆಗಮಿಸಿತ್ತು. ಈ ವೇಳೆ ನಿನ್ನೆಯವರೆಗೆ 8 ಮೃತದೇಹಗಳನ್ನು ಪತ್ತೆ ಮಾಡಲಾಗಿದ್ದು, ಇನ್ನೂ ಹಲವರು ಮಣ್ಣಿನ ಅಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆಇದೀಗ ಗಂಗಾವಳಿ ನದಿಯಲ್ಲಿ ನಾಪತ್ತೆಯಾಗಿದ್ದ ಲಾರಿ ಪತ್ತೆಯಾಗಿದೆ. ಟಿಂಬರ್ ಲಾರಿ ನದಿಯಲ್ಲಿ ಪತ್ತೆ ಆಗಿರುವ ಸ್ಥಿತಿಯಲ್ಲಿ ಇದೆ.ಕೇರಳ ಮೂಲದ ಲಾರಿ ನದಿಯಲ್ಲಿ ಇದೀಗ ಪತ್ತೆಯಾಗಿದೆ. ಲಾರಿ ಜೊತೆಗೆ ಚಾಲಕ ಅರ್ಜುನ್ ನಾಪತ್ತೆಯಾಗಿದ್ದರು. ಲಾರಿ ಪತ್ತೆಯಾದ ಸ್ಥಳಕ್ಕೆ ಡಿಸಿ ಲಕ್ಷ್ಮಿಪ್ರಿಯ ಭೇಟಿ ನೀಡಿದ್ದಾರೆ. ಕಾರವಾರದ ಶಿರೂರು ಬಳಿ ಗುಡ್ಡ ಕುಸಿತ ಪ್ರಕರಣದ ಬಗ್ಗೆ ಇದೀಗ ಗಂಗಾವಳಿ ನದಿಯಲ್ಲಿ ನಾಪತ್ತೆಯಾಗಿದ್ದ ಲಾರಿ ಪತ್ತೆಯಾಗಿದೆ

 Share: | | | | |


ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಯ ತಲೆಗೆ 50 ಬಾರಿ ಸುತ್ತಿಗೆಯಿಂದ ಬಡಿದು ಕೊಲೆ

Posted by Vidyamaana on 2024-01-31 15:19:04 |

Share: | | | | |


ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಯ ತಲೆಗೆ 50 ಬಾರಿ ಸುತ್ತಿಗೆಯಿಂದ ಬಡಿದು ಕೊಲೆ

ಅಮೆರಿಕ: ಅಂಗಡಿಯಲ್ಲಿ ಪಾರ್ಟ್ ಟೈಂ ಕೆಲಸ ಮಾಡಿ, ಶಿಕ್ಷಣ ಪಡೆಯುತ್ತಿದ್ದ ಭಾರತದ ವಿದ್ಯಾರ್ಥಿಯನ್ನ, ಅಮೆರಿಕದ ನಿವಾಸಿ ಕೊಂದಿರುವ ಘಟನೆ ನಡೆದಿದೆ.ಮೃತ ವಿದ್ಯಾರ್ಥಿ ವಿವೇಕ್ ಸೈನಿ(25) ಎಂದು ಗುರುತಿಸಲಾಗಿದ್ದು, ಈತ ಹರ್ಯಾಣಾದ ಪಂಚಕುಲದ ನಿವಾಸಿಯಾಗಿದ್ದ.ಅಮೆರಿಕದ ಜಾರ್ಜಿಯಾದಲ್ಲಿ, ಶಿಕ್ಷಣ ಪಡೆಯುತ್ತ, ಅಂಗಡಿಯೊಂದರಲ್ಲಿ ಪಾಾರ್ಟ್‌ ಟೈಮ್ ಕೆಲಸ ಮಾಡುತ್ತಿದ್ದ. ಈತನನ್ನು ಕೊಂದ ವ್ಯಕ್ತಿ ಜೂಲಿಯನ್ ಫಾಕ್ನರ್ ಎಂದು ಗುರುತಿಸಲಾಗಿದ್ದು, ಈತ ಮಾದಕ ವ್ಯಸನಿಯಾಗಿದ್ದ.


ಕೆಲ ದಿನಗಳಿಂದ ವಿವೇಕ್ ಕೆಲಸ ಮಾಡುತ್ತಿದ್ದ ಅಂಗಡಿಗೆ ಬಂದು, ವಿವೇಕ್ ಜೊತೆ ಫ್ರೆಂಡ್ಲಿಯಾಗಿದ್ದ. ಅಲ್ಲದೇ, ಪ್ರತಿದಿನ ಫ್ರೀಯಾಗಿ ಸಾಮಾನುಗಳನ್ನು ತೆಗೆದುಕೊಂಡು ಹೋಗುತ್ತಿದ್ದ. ಆದರೆ ಕೆಲ ದಿನಗಳ ಹಿಂದೆ ವಿವೇಕ್, ತಾನು ಇನ್ನು ಫ್ರೀಯಾಗಿ ಇದನ್ನೆಲ್ಲ ಕೊಡಲಾಗುವುದಿಲ್ಲ. ಇದುವರೆಗೆ ತೆಗೆದುಕೊಂಡು ಹೋದ ವಸ್ತುಗಳ ದುಡ್ಡನ್ನು ಹಿಂದಿರುಗಿಸು ಎಂದಿದ್ದಾನೆ.


ಈ ಕಾರಣಕ್ಕೆ ಕೋಪಗೊಂಡಿದ್ದ ಜೂಲಿಯನ್, ಸುತ್ತಿಗೆ ತಂದು, ವಿವೇಕ್ ಮೇಲೆ ಏಕಾಏಕಿ ದಾಳಿ ಮಾಡಿದ್ದಾನೆ. ಅಲ್ಲದೇ, 50 ಬಾರಿ ತಲೆಗೆ ಹೊಡೆದಿದ್ದಾನೆ. ಹೊಡೆದ ಪೆಟ್ಟಿಗೆ ವಿವೇಕ್ ಸಾವನ್ನಪ್ಪಿದ್ದಾನೆ.ಇನ್ನು ಆರೋಪಿಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಮೃತನ ಕುಟುಂಬಸ್ಥರು, ಮೃತದೇಹವನ್ನು ಭಾರತಕ್ಕೆ ತರಿಸಿಕೊಡಿ ಎಂದು ಮನವಿ ಮಾಡಿದ್ದಾರೆ.

ಧರ್ಮಾಧಾರಿತ ರಾಜಕೀಯ ಹತ್ಯಾ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿ: ರಮಾನಾಥ ರೈ ಆಗ್ರಹ

Posted by Vidyamaana on 2023-05-27 08:55:58 |

Share: | | | | |


ಧರ್ಮಾಧಾರಿತ ರಾಜಕೀಯ ಹತ್ಯಾ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿ: ರಮಾನಾಥ ರೈ ಆಗ್ರಹ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಈ ವರೆಗೆ ನಡೆದಿರುವ ಧರ್ಮಾಧಾರಿತ ಮತ್ತು ರಾಜಕೀಯ ಪ್ರೇರಿತ ಹತ್ಯಾ ಪ್ರಕರಣಗಳ ತನಿಖೆಗೆ ಪೊಲೀಸರ ವಿಶೇಷ ತನಿಖಾ ತಂಡ ರಚಿಸುವಂತೆ ಮಾಜಿ ಸಚಿವ ಬಿ.ರಮಾನಾಥ ರೈ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಡೆದಿರುವ ರಾಜಕೀಯ ಪ್ರೇರಿತ ಹತ್ಯಾ ಪ್ರಕರಣಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಮುಂದೆ ಈ ರೀತಿಯ ಘಟನೆಗಳು ನಡೆಯಬಾರದು ಎಂದರು.

ಧರ್ಮಾಧಾರಿತ ರಾಜಕೀಯ ಹತ್ಯೆಗಳು ಜಿಲ್ಲೆಯಲ್ಲಿ ತುಂಬಾ ಆಗಿದೆ. ಹಿಂದೂ ಮತ್ತು ಮುಸ್ಲಿಮ್ ಸಮುದಾಯದ ಆನೇಕ ಮಂದಿ ಅಮಾಯಕರು ಬಲಿಯಾಗಿದ್ದಾರೆ. ಕೇವಲ ವೋಟಿಗಾಗಿ ಅಮಾಯಕ ಹರೀಶ್‌ ಪೂಜಾರಿಯ ಕೊಲೆಯಾಗಿದೆ. ಶರತ್ ಮಡಿವಾಳ, ಅಶ್ರಫ್, ಜಲೀಲ್‌, ಪ್ರವೀಣ್ ನೆಟ್ಟಾರು, ಮಸೂದ್, ಫಾಝಿಲ್, ಪ್ರಶಾಂತ್, ಬಾಳಿಗಾ, ಹರೀಶ್‌ ಪೂಜಾರಿ ಹೀಗೆ ಆನೇಕ ಮಂದಿಯ ಹತ್ಯೆ ಆಗಿದೆ. ಈ ಎಲ್ಲ ಹತ್ಯೆಗಳಲ್ಲಿ ಕಾಂಗ್ರೆಸ್‌ನ ಯಾವನೇ ಒಬ್ಬ ಕಾರ್ಯಕರ್ತ ಭಾಗಿಯಾಗಿಲ್ಲ. ಆರೋಪ ಪಟ್ಟಿಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನ ಹೆಸರಿಲ್ಲ. ಬಿಜೆಪಿ ಮತ್ತು ಎಸ್‌ಡಿಎಪಿಯ ಕೆಲವು ಮಂದಿ ಹತ್ಯೆಯಲ್ಲಿ ಭಾಗಿಯಾಗಿ ರುವುದು ಬೆಳಕಿಗೆ ಬಂದಿದೆ ಎಂದರು.

ಜಿಲ್ಲೆಯಲ್ಲಿ ನಡೆದಿರುವ ಧರ್ಮಾಧಾರಿತ ರಾಜಕೀಯ ಹತ್ಯಾ ಪ್ರಕರಣಗಳಲ್ಲಿ ಬಲಿಯಾದವರ ಪಟ್ಟಿಯನ್ನು ಸರಕಾರ ತಯಾರಿಸಬೇಕು. ಪ್ರತಿಯೊಂದು ಹತ್ಯಾ ಪ್ರಕರಣದ ನಿಷ್ಪಕ್ಷ ತನಿಖೆಯಾಗಬೇಕು. ಹತ್ಯಾ ಪ್ರಕರಣಗಳಲ್ಲಿ ಯಾರೆಲ್ಲ ಭಾಗಿ ಯಾಗಿದ್ದಾರೆ ಎಂಬ ವಿಚಾರ ಹೊರಬರಬೇಕು ಮತ್ತು ಅವರಿಗೆತಕ್ಕ ಶಿಕ್ಷೆಯಾಗಬೇಕು. ವಿಶೇಷ ತನಿಖಾ ತಂಡದ ನೇತೃತ್ವವನ್ನು ಡಾ.ಎ.ಸುಬ್ರಹ್ಮಣೇಶ್ವರ ರಾವ್ ಅವರಂತಹ ಹಿರಿಯ ಐಪಿಎಸ್ ಅಧಿಕಾರಿಗಳಿಗೆ ನೀಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಸರಕಾರ ಇದ್ದಾಗ ಯಾವುದೇ ಹತ್ಯೆಗಳು ಆಗಿಲ್ಲ ಎಂದು ಬಿಜೆಪಿ ವಾದ. ಜನರನ್ನು ತಪ್ಪು ದಾರಿಗೆಳೆಯುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಇಲ್ಲಿ ಹತ್ಯೆ ಮಾಡಿದವರು ಯಾರು ಎನ್ನುವುದು ಮುಖ್ಯ. ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಮತೀಯ ಶಕ್ತಿಗಳು ಅಹಿತಕರ ಘಟನೆಯನ್ನು ಸೃಷ್ಟಿಸುವ ಸಾಧ್ಯತೆ ಇದೆ. ಹೀಗಾಗಿ ಸರಕಾರ ದ.ಕ. ಜಿಲ್ಲೆಯಲ್ಲಿ ಹಿಂದೆ ನಡೆದಿರುವ ಧರ್ಮಾಧಾರಿತ ಮತ್ತು ರಾಜಕೀಯ ಪ್ರೇರಿತ ಹತ್ಯಾ ಪ್ರಕರಣಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು. ಜಿಲ್ಲೆಯ ಶಾಂತಿ, ಸಾಮರಸ್ಯಕ್ಕೆ ಧಕ್ಕೆಯಾಗಬಾರದು ಎಂದರು.

ಉಜಿರೆ: ಪುತ್ರನ ಕುತ್ತಿಗೆ ಇರಿದ ಜನ್ಮದಾತ

Posted by Vidyamaana on 2023-10-30 10:44:32 |

Share: | | | | |


ಉಜಿರೆ: ಪುತ್ರನ ಕುತ್ತಿಗೆ ಇರಿದ ಜನ್ಮದಾತ

ಬೆಳ್ತಂಗಡಿ : ತಂದೆ ಮತ್ತು ಮಗನ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳವೊಂದು ಮಗನ ಕೊಲೆಯೊಂದಿಗೆ ಅಂತ್ಯವಾದ ಘಟನೆ ಅ.೨೯ರಂದು ಉಜಿರೆಯ ಕೊಡೆಕಲ್ಲು ಎಂಬಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಕೊಡೆಕಲ್ಲು ನಿವಾಸಿ ಕೃಷ್ಣಯ್ಯ ಆಚಾರಿ (೭೫ವ) ಎಂಬವರು ಅ.೨೯ರಂದು ಎಂದಿನಂತೆ ಮಲಗಿರುವ ವೇಳೆ ಅವರ ಮಗ ಜಗದೀಶ್ ಅಚಾರಿ (೩೧ವ) ಅವರು ತಂದೆಯೊಂದಿಗೆ ಯಾವುದೋ ಕಾರಣಕ್ಕೆ ಮಾತು ಆರಂಭಿಸಿದ್ದು, ಇದು ಮಾತಿಗೆ ಮಾತು ಬೆಳೆದು ಕೋಪ ಗೊಂಡ ತಂದೆ ಕೃಷ್ಣಯ್ಯ ಆಚಾರಿ ಎಂಬವರು ಮಗನ ಕುತ್ತಿಗೆಗೆ ಚೂರಿಯಿಂದ ಇರಿದಿದ್ದಾರೆ. ಈ ವೇಳೆ ತೀವ್ರವಾಗಿ ಗಾಯಗೊಂಡ ಜಗದೀಶ್ ಅವರನ್ನು ಮನೆಯವರು ಸೇರಿ ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅವರು ಸಾವನ್ನಪ್ಪಿದ್ದಾರೆ.

ಕೃತ್ಯಕ್ಕೆ ಬಳಸಿದ ಚೂರಿಯನ್ನು ಕೃಷ್ಣಯ್ಯ ಆಚಾರಿ ಅವರು ೧೯೬೦ರಲ್ಲಿ ಖರೀದಿಸಿ ತನ್ನ ಕಪಾಟಿನಲ್ಲಿ ಇಟ್ಟಿದ್ದಾಗಿ ತಿಳಿದುಬಂದಿದ್ದು, ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆಯಾದ ಜಗದೀಶ್ ಅವರ ಮೃತದೇಹವನ್ನು ಇಂದು (ಅ.೩೦ರಂದು) ಮಂಗಳೂರು ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಶವಪರೀಕ್ಷೆ ನಡೆಸಲಾಗುವುದು ಎಂದು ತಿಳಿದುಬಂದಿದೆ.

ಆರೋಪಿ ಕೃಷ್ಣಯ್ಯ ಅಚಾರಿ ಎಂಬವರಿಗೆ ಇಬ್ಬರು ಹೆಣ್ಣು, ಐದು ಜನ ಗಂಡು ಮಕ್ಕಳು ಇದ್ದಾರೆ.


ಬೆಳ್ತಂಗಡಿ ಸರ್ಕಲ್‌ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ, ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಧನರಾಜ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ


ರಾಜ್ಯಾಧ್ಯಂತ ಕಲರ್‌ ಕಾಟನ್‌ ಕ್ಯಾಂಡಿ ನಿಷೇಧ- ಸಚಿವ ದಿನೇಶ್ ಗುಂಡೂರಾವ್ ಘೋಷಣೆ

Posted by Vidyamaana on 2024-03-11 12:58:02 |

Share: | | | | |


ರಾಜ್ಯಾಧ್ಯಂತ ಕಲರ್‌ ಕಾಟನ್‌ ಕ್ಯಾಂಡಿ ನಿಷೇಧ- ಸಚಿವ ದಿನೇಶ್ ಗುಂಡೂರಾವ್ ಘೋಷಣೆ

ಗಳೂರು:ರಾಜ್ಯಾಧ್ಯಂತ ಕಾಟನ್‌ ಕ್ಯಾಂಡಿ ನಿಷೇಧ ಮಾಡಲಾಗಿದೆ ಅಂತ ಆರೋಗ್ಯ ಸಚಿವ ದಿನೇಶ್‌ ಗುಂಡುರಾವ್‌ ಅವರು ಹೇಳಿದರು. ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಅವರು ಈ ಬಗ್ಗೆ ತಿಳಿಸಿದರು. ಇದೇ ವೇಳೆ ಅವರು ಮಾತನಾಡಿ, ವಿವಿಧ ಕಡೆಗಳಲ್ಲಿ ಎರಡು ಪದಾರ್ಥಗಳಲ್ಲಿ ನ ಸ್ಯಾಂಪಲ್‌ಗಳನ್ನು ಸಂಗ್ರಹಿಸ ಮಾಡಲಾಯಿತು.ಗೋಬಿ ಮಂಚೂರಿಯ 121 ಮಾದರಿಯನ್ನು ಸಂಗ್ರಹ ಮಾಡಲಾಯಿತು. ಇದಲ್ಲದೇ ಇದರಲ್ಲಿ ಎರಡು ವಿಶಕಾರಿ ಅಂಶಗಳು ಪತ್ತೆಯಾಗಿದ್ದು, ಇದರಿಂದ ಇದರ ಸೇವನೆ ಮಾಡುವುದು ಯೋಗ್ಯವಲ್ಲ ಅಂತ ಹೇಳಿದರು. ಇದನ್ನು ದಿನ ನಿತ್ಯ ಸೇವನೆ ಮಾಡುವುದರಿಂದ ಕ್ಯಾನ್ಸರ್ ಬರುವ ಸಂಭವಿದೆ ಅಂಥ ಹೇಳಿದರು. ಇದನ್ನು ಬಳಕೆ ಮಾಡುವುದು ಕಾನೂನು ಬಾಹಿರ ಅಂಥ ಹೇಳಿದರು.


ಮಾದರಿಗಳನ್ನು ಬೇರೆ ಬೇರೆ ಕಡೆ ಸಂಗ್ರಹಿಸಲಾಗಿತ್ತು. 171 ಗೋಬಿ ಮಂಚೂರಿ ಮಾದರಿಯನ್ನು ಸಂಗ್ರಹಿಸಲಾಗಿದೆ. ಅದರಲ್ಲಿ ಕೃತಕ ಬಣ್ಣಗಳ ಅಸುರಕ್ಷಿತ ಮಾದರಿಯನ್ನು ಪತ್ತೆ ಹಚ್ಚಿರೋದು 107 ಇದೆ. ಸೋ ಗೋಬಿ ಮಂಚೂರಿನೂ ಮಾಡಿದ್ದೇವೆ, ಕ್ಯಾಂಡಿಯನ್ನೂ ಮಾಡಿದ್ದೇವೆ ಎಂದರು.


ಒಂದು ರೋಡಮೈನ್ ಬೀ, ಇನ್ನೊಂದು ಟಾಟ್ರಾಸೈನ್ ಅಂತ ಅದು ಇವತ್ತು ನಾವು ಈ ಒಂದು ಪದಾರ್ಥಗಳಲ್ಲಿ, ನಮ್ಮ ಸ್ಯಾಂಪಲ್ಲಿನಲ್ಲಿ ಸಿಕ್ಕಿದೆ. ಇದು ನಮ್ಮ ಉಪಯೋಗಕ್ಕೆ ಅನ್ ಸೇಫ್. ರೋಡಮೈನ್ ಬೀ ಕ್ಯಾನ್ಸರ್ ಗೆ ಬರೋದಕ್ಕೆ ಒಂದು ರೀತಿ ಕಾರಣವಾಗುತ್ತದೆ. ಈ ಕೆಮಿಕಲ್ ಅವಕಾಶ ಮಾಡಿಕೊಡುತ್ತದೆ. ವಿಶೇಷವಾಗಿ ಈ ಬಣ್ಣವನ್ನು ಯೂಸ್ ಮಾಡುವ ಹಾಗೋ ಇಲ್ಲ. ಯಾವ ಪದಾರ್ಥಗಳಲ್ಲೂ ಯೂಸ್ ಮಾಡೋ ಹಾಗೇಇಲ್ಲ. ಹಾಗಿದ್ದರೂ ಅದನ್ನು ಸ್ಯಾಂಪಲ್ ಗಳಲ್ಲಿ ಪರೀಕ್ಷೆಯಲ್ಲಿ ಬಳಕೆ ಮಾಡಿರೋದು ಕಂಡು ಬಂದಿದೆ ಎಂದರು.


ಯಾಕೆ ರೋಡಮೈನ್ ಬೀ ಬಳಕೆ ಮಾಡುತ್ತಾರೆ ಅಂದರೇ ಪಿಂಕ್ ಕಲರ್ ಬರೋದಕ್ಕೆ ಬಳಕೆ ಮಾಡುತ್ತಾರೆ. ಈಗ ನಮ್ಮ ಆರೋಗ್ಯ ಇಲಾಖೆಯ ಆಯುಕ್ತರು ಕೂಡ ಸುತ್ತೋಲೆ ಹೊರಡಿಸುತ್ತಾರೆ. ಅದನ್ನು ಬಳಕೆ ಮಾಡುವಂತಿಲ್ಲ. ಬಳಕೆ ಮಾಡಿದ್ರೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.


ಗೋಬಿ ಮಂಚೂರಿ ಇದೊಂದು ಪುಡ್ ಐಟಂ. ಟಾಟ್ರಾಸೈನ್ ಏನಿದೆ ಅದು ಅಪ್ರೂವ್ಡ್ ಆರ್ಟಿಫಿಷಲ್ ಪುಡ್ ಕಲ್ಲರ್. ಕೆಮಿಕಲ್ ಬಳಕೆ ಮಾಡದಂತ ಗೋಬಿಮಂಚೂರಿಯನ್ನು ಬಳಕೆಗೆ ಅವಕಾಶ ನೀಡಲಾಗುತ್ತದೆ. ವಿತ್ ಔಟ್ ಕಲರ್ ಬಳಕೆ ಮಾಡಿರದ ಕ್ಯಾಂಡಿಯನ್ನು ಬಳಕೆ ಮಾಡೋದಕ್ಕೆ ಅವಕಾಶ ನೀಡಲಾಗುತ್ತದೆ. ಅದರ ಹೊರತಾಗಿ ಕಲರ್ ಬಳಕೆ ಮಾಡುವಂತ ಗೋಬಿಮಂಚೂರಿ, ಕ್ಯಾಂಡಿ ನಿಷೇಧ ಮಾಡಲಾಗುತ್ತಿದೆ ಎಂಬುದಾಗಿ ಘೋಷಣೆ ಮಾಡಿದರು

ಕುಂದಾಪುರ; ಅಪಾರ್ಟ್ ಮೆಂಟ್ ನ 5ನೇ ಮಹಡಿಯಿಂದ ಕಾಲು ಜಾರಿ ಬಿದ್ದು ಮಹಿಳೆ ಸಾವು

Posted by Vidyamaana on 2024-03-26 09:13:48 |

Share: | | | | |


ಕುಂದಾಪುರ; ಅಪಾರ್ಟ್ ಮೆಂಟ್ ನ 5ನೇ ಮಹಡಿಯಿಂದ ಕಾಲು ಜಾರಿ ಬಿದ್ದು ಮಹಿಳೆ ಸಾವು

ಕುಂದಾಪುರ; ಅಪಾರ್ಟ್ ಮೆಂಟ್ ನ 5ನೇ ಮಹಡಿಯಿಂದ ಕಾಲು ಜಾರಿ ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ಹಳೇ ಗೀತಾಂಜಲಿ ಟಾಕೀಸ್ ಸಮೀಪ ನಡೆದಿದೆ.

ಲಕ್ಷ್ಮೀ ಪ್ರತಾಪ್‌ ನಾಯಕ್ (41) ಮೃತ ದುರ್ದೈವಿ. ನಿನ್ನೆ ಸಂಜೆ ಲಕ್ಷ್ಮೀಳೆ ಫ್ಲ್ಯಾಟಿನ ಮಹಡಿಯ ಮೇಲೆ ಒಣಗಿಸಲು ಹಾಕಿದ್ದ ತೆಂಗಿನಕಾಯಿ ತರಲು ಹೋಗಿದ್ದಾಗ ಆಕಸ್ಮಿಕವಾಗಿ ಮಹಡಿಗೆ ಅಳವಡಿಸಲಾಗಿದ್ದ ಫೈಬರ್ ಶೀಟ್ ಮೇಲೆ ಕಾಲಿಟ್ಟಿದ್ದರಿಂದ ಅದು ತುಂಡಾಗಿ ಎರಡನೇ ಮಹಡಿಯ ಫ್ಲೋರಿಗೆ ಬಿದ್ದರೆನ್ನಲಾಗಿದೆ. ಇದರಿಂದ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಪತಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಘಟನೆಯ ಬಗ್ಗೆ ಕುಂದಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಟ್ಲದಲ್ಲಿ ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ

Posted by Vidyamaana on 2024-05-04 21:14:26 |

Share: | | | | |


ವಿಟ್ಲದಲ್ಲಿ ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ

ವಿಟ್ಲ: ಬಿಸಿಲಿನ ತೀವ್ರತೆಯಿಂದಾಗಿ ಚಲಿಸುತ್ತಿದ್ದ ಬಸ್ಸಿನ ಗಾಜು ಇದ್ದಕ್ಕಿಂದ್ದಂತೆ ಒಡೆದ ಘಟನೆ ವಿಟ್ಲದ ಉರಿಮಜಲು ಎಂಬಲ್ಲಿ ನಡೆದಿದೆ. ಕೇರಳ ರಾಜ್ಯ ಸಾರಿಗೆ ಬಸ್ಸಿನ ಗಾಜು ಒಡೆದಿದ್ದು, ಇಬ್ಬರು ಮಕ್ಕಳು ಮತ್ತು ಚಾಲಕ ಗಾಯಗೊಂಡಿದ್ದಾರೆ.

ಪುತ್ತೂರಿನಿಂದ ವಿಟ್ಲ ಮೂಲಕ ಕಾಸರಗೋಡಿಗೆ ಹೊರಟಿದ್ದ ಕೇರಳ ರಾಜ್ಯದ ಮಲಬಾರ್ ಬಸ್ ಉರಿಮಜಲು ಸೊಸೈಟಿ ತಲುಪುತ್ತಿದ್ದಂತೆ ಮುಂಭಾಗದ ಗಾಜು ಒಡೆದಿದೆ.

Recent News


Leave a Comment: