ಉಳ್ಳಾಲ ಖಾಝಿ ಸೈಯ್ಯದ್ ಫಝಲ್ ಕೋಯಮ್ಮ ತಂಙಳ್ ನಿಧನ

ಸುದ್ದಿಗಳು News

Posted by vidyamaana on 2024-07-08 11:07:30 | Last Updated by Vidyamaana on 2024-07-08 11:07:30

Share: | | | | |


ಉಳ್ಳಾಲ ಖಾಝಿ ಸೈಯ್ಯದ್ ಫಝಲ್ ಕೋಯಮ್ಮ ತಂಙಳ್ ನಿಧನ

ಮಂಗಳೂರು(ಇಟ್ಟಿಕುಳಂ): ಉಳ್ಳಾಲ ಖಾಝಿ ಸಯ್ಯದ್ ಫಝಲ್ ಕೋಯಮ್ಮ ತಂಜಳ್ ನಿಧನರಾಗಿದ್ದಾರೆ. ಕಣ್ಣೂರಿನ ಇಟ್ಟಿಕುಳಂ ನಿವಾಸಿಯಾಗಿರುವ ಹಾಗೂ ಉಳ್ಳಾಲ ಖಾಝಿಯಾಗಿದ್ದ ಇವರು ಕೂರ ತಂಜಳ್ ಎಂದೇ ಪ್ರಸಿದ್ದರಾಗಿದ್ದರು. ಅಲ್ಪಕಾಲದಿಂದ ಅನಾರೋಗ್ಯದಿಂದಿದ್ದ ಅವರು ಇಂದು ಬೆಳಿಗ್ಗೆ ನಿಧರಾಗಿದ್ದಾರೆ.

ಮೃತರು ಪತ್ನಿ ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ. ಇಂದು ರಾತ್ರಿ 9

ಗಂಟೆ ವೇಳೆಗೆ ಕೂರ ಮಸೀದಿ ವಠಾರದಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ಮೂಲಗಳು ತಿಳಿಸಿದೆ. ಸುಲ್ತಾನುಲ್ ಉಲಮಾ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ಇಂದು ಸಂಜೆ 5 ಗಂಟೆಗೆ ಕೂರ ಮಸೀದಿಯಲ್ಲಿ ನಡೆಯಲಿರುವ ಜನಾಝಾನಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಉಪ್ಪಿನಂಗಡಿ : ಕಾಲೇಜು ವಿದ್ಯಾರ್ಥಿ ಅತ್ತಾವುಲ್ಲಾ ನೇಣು ಬಿಗಿದು ಆತ್ಮಹತ್ಯೆ

Posted by Vidyamaana on 2024-02-15 11:24:39 |

Share: | | | | |


ಉಪ್ಪಿನಂಗಡಿ : ಕಾಲೇಜು ವಿದ್ಯಾರ್ಥಿ ಅತ್ತಾವುಲ್ಲಾ  ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಪೆರಿಯಡ್ಕ ನಿವಾಸಿ ಅತ್ತಾವುಲ್ಲಾ (22) ಮೃತ ಯುವಕ.ಅತ್ತಾವುಲ್ಲಾ ರವರ ಸಂಬಂಧಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.


ಅತ್ತಾವುಲ್ಲಾ ತಾಯಿಯೊಂದಿಗೆ ವಾಸವಾಗಿದ್ದು, ಮಡಂತ್ಯಾರಿನ ಕಾಲೇಜಿನಲ್ಲಿ ದ್ವಿತಿಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದರು.


ಅತ್ತಾವುಲ್ಲಾ ಸುಮಾರು 1 ½ ತಿಂಗಳಿಂದ ಕಾಲೇಜಿಗೆ ಹೋಗದೇ ಮನೆಯಲ್ಲಿಯೇ ಇದ್ದು, ಮಾನಸಿಕ ಖಿನ್ನತೆಗೆ ಒಳಗಾದಂತೆ ವರ್ತಿಸುತ್ತಿದ್ದು, ಫೆ.14 ರಂದು ರಾತ್ರಿ ಆತನ ತಾಯಿ ನೆರೆಮನೆಯ ಮೆಹಂದಿ ಕಾರ್ಯಕ್ರಮಕ್ಕೆ ಹೋಗಿ ವಾಪಸ್ಸು ಮನೆಗೆ ಬಂದು ನೋಡಿದಾಗ ಅತ್ತಾವುಲ್ಲಾ ಮನೆಯ ಕೋಣೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಅತ್ತಾವುಲ್ಲಾ ಯಾವುದೋ ಕಾರಣದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ., ಜೀವನದಲ್ಲಿ ಜಿಗುಪ್ಸೆ ಹೊಂದಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಹೊರತು ಆತನ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.


ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಯುಡಿಆರ್ ನಂಬ್ರ 03/2024 ಕಲಂ:174 CRPC ರಂತೆ ಪ್ರಕರಣ ದಾಖಲಾಗಿದೆ.

ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

Posted by Vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಒಂದು ಕೊಲೆಯ ಹಿಂದೆ ನೂರು ಕಥೆ – ಮಾಜಿ ಪ್ರೇಮಿಯ ವಿರುದ್ಧ ಕಂಪ್ಲೇಂಟ್ ಕೊಡಲು ಹೋಗ್ತಿದ್ದವಳು ಹೆಣವಾದ್ಲು..

Posted by Vidyamaana on 2023-08-25 06:55:20 |

Share: | | | | |


ಒಂದು ಕೊಲೆಯ ಹಿಂದೆ ನೂರು ಕಥೆ – ಮಾಜಿ ಪ್ರೇಮಿಯ ವಿರುದ್ಧ ಕಂಪ್ಲೇಂಟ್ ಕೊಡಲು ಹೋಗ್ತಿದ್ದವಳು ಹೆಣವಾದ್ಲು..

ಪುತ್ತೂರು: ಗುರುವಾರ (ಆ.24) ಮಟಮಟ ಮಧ್ಯಾಹ್ನದ ಹೊತ್ತು ಯುವತಿಯೋರ್ವಳ ಹತ್ಯೆಗೆ ಪುತ್ತೂರು ಸಾಕ್ಷಿಯಾಯಿತು. 


ಇಲ್ಲಿನ ಮಹಾಲಿಂಗೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಪುಷ್ಕರಣಿಯ ಸಮೀಪ, ಮಹಿಳಾ ಪೊಲೀಸ್ ಠಾಣೆಗೆ ಹೊಂದಿಕೊಂಡಂತೆಯೇ ಈ ಘಟನೆ ನಡೆದಿದ್ದು ವಿಪರ್ಯಾಸವೇ ಸರಿ.


ಮಹಾಲಿಂಗೇಶ್ವರನ  ಸಾನ್ನಿಧ್ಯವಿರುವ  ಜಾಗದಲ್ಲಿ ಇಂತಹ ಒಂದು ದುರ್ಘಟನೆ ನಡೆಯಬಾರದಿತ್ತು ಎಂದು ಜನ ಈ ಘಟನೆಗೆ ಮಮ್ಮಲ ಮರುಗಿದರು. ಆ ಯವತಿ ವಿಲವಿಲ  ಒದ್ದಾಡಿ ಪ್ರಾಣಬಿಟ್ಟ ವಿಲಕ್ಷಣ ಘಟನೆ ಮಧ್ಯಾಹ್ನ ಸುಮಾರು 2 ಗಂಟೆಯ ಹೊತ್ತಿಗೆ ಹಲವರ ಕಣ್ಣೆದುರೇ ನಡೆದು ಹೋಯಿತು.


ಆಕೆ ಇನ್ನೇನು ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಬೇಕು ಅನ್ನುವಷ್ಟರಲ್ಲಿ ಚೂರಿಯಿಂದ ಕತ್ತು ಸೀಳಿದ್ದ ಆರೋಪಿ. ಮೃತಪಟ್ಟ ದುರ್ದೈವಿಯ ಹೆಸರು ಗೌರಿ (18 ವರ್ಷ). ಕೊಲೆ ಮಾಡಿದ ಆರೋಪಿಯ ಹೆಸರು ಪದ್ಮರಾಜ್ (24 ವರ್ಷ)


ಹೊಸ ಲವ್ವಿ-ಡವ್ವಿಗೆ ಭಗ್ನಪ್ರೇಮಿಯ ಸಿಟ್ಟು ಕಾರಣವಾಯಿತೇ??

ಪದ್ಮರಾಜ್ ಮೂಲತಃ ವೇಣೂರು ನಿವಾಸಿ. ಕಳೆದೊಂದು ವರ್ಷದಿಂದ ಜೆಸಿಬಿ ಆಪರೇಟರ್ ಆಗಿ ಬಂಟ್ವಾಳದ ಮಣಿನಾಲ್ಕೂರು ಬಳಿ ಕೆಲಸ ಮಾಡಿಕೊಂಡಿದ್ದ. ಇದರ ನಡುವೆ ಅಳಿಕೆ ನಿವಾಸಿ ವಿಜಯನ್ ಎಂಬವರ ಪುತ್ರಿ ಗೌರಿಯ ಪರಿಚಯವಾಗಿದೆ. ಕೆಲವರ ಪ್ರಕಾರ, ಕಳೆದ 8 ವರ್ಷಗಳಿಂದ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಎಂದು. ಆದರೆ ಕಳೆದ 2 ವರ್ಷಗಳಿಂದ ಯುವತಿ ಗೌರಿಗೆ ಇನ್ನೊಬ್ಬನ ಪರಿಚಯವಾಗಿದ್ದು, ಆತನ ಜೊತೆ ಪ್ರೇಮಾಂಕುರವಾಗಿತ್ತಂತೆ. ಇದೇ ವಿಚಾರವಾಗಿ ಗೌರಿ ಹಾಗೂ ಪದ್ಮರಾಜ್ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಈ ವಿಚಾರ ಠಾಣೆಯ ಮೆಟ್ಟಿಲೇರಿದೆ ಎಂಬ ಮಾಹಿತಿಯೂ ಇದೆ.


ಗುರುವಾರ ಅನ್ಯರ ಬೈಕ್ ಏರಿಕೊಂಡ ಬಂದ ಪದ್ಮರಾಜ್, ನೇರವಾಗಿ ಗೌರಿ ಕೆಲಸ ಮಾಡಿಕೊಂಡಿದ್ದ ಟೆಕ್ಸ್’ಟೈಲ್ ಮಳಿಗೆಗೆ ಹೋಗಿದ್ದಾನೆ. ಅಲ್ಲಿ ಅವರಿಬ್ಬರ ನಡುವೆ ಗಲಾಟೆ ನಡೆದಿದೆ. ಇದರಿಂದ ಬೇಸತ್ತ ಗೌರಿ, ಪಕ್ಕದ ಅಂಗಡಿಯ ಯುವತಿ ಬಳಿ – ತಾನು ಠಾಣೆಗೆ ಹೋಗಿ ದೂರು ಕೊಟ್ಟು ಬರುತ್ತೇನೆ – ಎಂದು ತಿಳಿಸಿ ಹೊರಟ್ಟಿದ್ದಾಳೆ. ಹಾಗೇ ಹೋದವಳೇ, ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವರ ದ್ವಾರದ ಬಳಿ ಪದ್ಮರಾಜ್ ಮತ್ತೆ ಎದುರಾಗಿದ್ದಾನೆ. ನೇರವಾಗಿ ತನ್ನಲ್ಲಿದ್ದ ಚೂರಿಯಿಂದ ಗೌರಿಯ ಕತ್ತಿಗೆ ಗುರಿ ಇಟ್ಟಿದ್ದಾನೆ.

ಹೊಟ್ಟೆ ಮೇಲೆ ಕೂತು ಕತ್ತು ಸೀಳಿದ!!

ಮಧ್ಯಾಹ್ನದ ಹೊತ್ತು. ಆಸುಪಾಸಿನಲ್ಲಿ ಜನಸಂಚಾರವಿತ್ತು. ಗೌರಿಯ ಹತ್ಯೆ ನಡೆಯುತ್ತಿದ್ದಾಗ ನೋಡಿದ ಪ್ರತ್ಯಕ್ಷದರ್ಶಿಗಳು ಹೇಳುವಂತೆ, ಯುವಕನೋರ್ವ ಯುವತಿಯನ್ನು ತಳ್ಳಿ ಆಕೆಯ ಹೊಟ್ಟೆ ಮೇಲೆ ಕುಳಿತು, ಕುತ್ತಿಗೆಗೆ ಚಾಕುವಿನಿಂದ ತಿವಿಯುತ್ತಿದ್ದ. ಇದನ್ನು ನೋಡಿ ಬೊಬ್ಬೆ ಹೊಡೆದಾಗ, ಆತನ ತಮಗೆ ಚಾಕು ತೋರಿಸಿದ. “ಎದುರು ಬತ್ತರ್ಂಡ ನಿಕ್ಲೆನ್ಲ ಕೆರ್ಪೆ” ಎಂದು ಬೊಬ್ಬಿರಿದ. ಇದನ್ನು ನೋಡಿದ ಸಾರ್ವಜನಿಕರಿಗೆ ಏನೊಂದು ತೋಚಲಿಲ್ಲ. ಅಷ್ಟರಲ್ಲಿ ಗೌರಿಯ ದೇಹವನ್ನು ಬಿಟ್ಟ ಹಂತಕ ಪದ್ಮರಾಜ್ ನೇರವಾಗಿ ತಾನು ಬಂದಿದ್ದ ಬೈಕ್ ಏರಿ ಸಾವಕಾಶವಾಗಿ ತೆರಳಿದ್ದ. ಸಾರ್ವಜನಿಕರು ಠಾಣೆಗೆ ಮಾಹಿತಿ ನೀಡಿದರು. ನಂತರ ನಡೆದದ್ದು ಪೊಲೀಸ್ ಕ್ರಮಗಳು.

ಬೈಕ್ ನಂಬರ್ ಸೃಷ್ಟಿಸಿದ ಗೊಂದಲ!!!

ಇದರ ನಡುವೆ ಆರೋಪಿ ಪದ್ಮರಾಜ್ ಬೈಕ್ ಒಂದಷ್ಟು ಗೊಂದಲಗಳನ್ನು ಸೃಷ್ಟಿಸಿತು. ಬೈಕ್ ನಂಬರ್ ಆಧಾರದಲ್ಲಿ ಆರೋಪಿಯನ್ನು ಪತ್ತೆ ಮಾಡೋಣವೆಂದು ಮುಂದುವರಿದಾಗ, ಅದು ಅನ್ಯಧರ್ಮೀಯರ ಹೆಸರನ್ನು ತೋರಿಸುತ್ತಿತ್ತು. ಅಷ್ಟರಲ್ಲಿ ಹತ್ಯೆಗೈದ ಯುವಕನ ಹೆಸರು ಪದ್ಮರಾಜ್ ಎಂದು ಬಹಿರಂಗಗೊಂಡಿತ್ತು.


ಅಷ್ಟಕ್ಕೂ ಆದದ್ದೇನೆಂದರೆ – ಪದ್ಮರಾಜ್ ತನಗೆ ಪರಿಚಯದವರ ಪಲ್ಸರ್ ಬೈಕನ್ನು ಸರ್ವೀಸಿಗೆ ಇಡುತ್ತೇನೆಂದು ಹೇಳಿ ತೆಗೆದುಕೊಂಡು ಹೋಗಿದ್ದ. ಆದರೆ ಪಲ್ಸರ್ ಬೈಕನ್ನು ಸರ್ವೀಸಿಗೆ ಇಡದೇ, ನೇರವಾಗಿ ಯುವತಿ ಇರುವಲ್ಲಿಗೆ ತೆರಳಿದ್ದಾನೆ. ಘಟನೆಯ ಬಗ್ಗೆ ಬೈಕ್ ವಾರಸುದಾರರಿಗೆ ಏನೊಂದು ತಿಳಿದಿಲ್ಲ ಎನ್ನುವುದು ತಿಳಿದುಬಂದಿದೆ.


ಆಸ್ಪತ್ರೆ ಹಾದಿಯಲ್ಲಿ ಮೃತಪಟ್ಟ ಯುವತಿ!

ದೇವಸ್ಥಾನದ ದ್ವಾರದ ಬಳಿಯಲ್ಲಿ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿದ್ದ ಯುವತಿ ಗೌರಿಯನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಯಿತು. ಮಂಗಳೂರು ಆಸ್ಪತ್ರೆಗೆ ತಲುಪುವ ಮೊದಲೇ ಗೌರಿ ಇಹಲೋಕ ತ್ಯಜಿಸಿದ್ದಳು.


ಪದ್ಧರಾಜ್‌ ಕೃತ್ಯ ಎಸಗಿದ ಬಳಿಕ ಘಟನೆಯ ಬಗ್ಗೆ ತನ್ನ ಪರಿಚಿತರೋರ್ದರಿಗೆ ಕರೆ ಮಾಡಿ ವಿಷಯ

ಹೇಳಿ ಕಣ್ಣೀರಿಟ್ಟಿದ್ದ ಬಳಿಕ ಬೈಕಿನಲ್ಲಿ ಮಾವಿನಕಟ್ಟೆಯ ಅಂಗಡಿಯೊಂದರ ಬಳಿ ಬ೦ದಿದ್ದ ಬೈಕ್‌ ಏರಿತೆರಳುತ್ತಿರುವ ದೃಶ್ಯ ಸಿಸಿ ಕೆಮಾರದಲ್ಲಿ ದಾಖಲಾಗಿದ್ದು ಇದೇ ಆಧಾರದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದರು.

. ಎಸ್ಪಿ ಸಿ.ಬಿ. ರಿಷ್ಯಂತ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು. ಆರೋಪಿಯನ್ನು ಕ್ಷಣಾರ್ಧದಲ್ಲಿ ಪತ್ತೆ ಹಚ್ಚಿ ಬಂಧಿಸಿದ ಪೊಲೀಸರ ಕ್ರಮಕ್ಕೆ ಶಾಸಕ ಅಶೋಕ್ ಕುಮಾರ್ ರೈ ಅವರೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಶಾಸಕರ ಇಂದಿನ ಕಾರ್ಯಕ್ರಮ (ಜೂ 2)

Posted by Vidyamaana on 2023-06-02 03:15:32 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ (ಜೂ 2)

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರು ಜೂನ್ 2ರಂದು ಮಧ್ಯಾಹ್ನದ‌ ಬಳಿಕ ಕುಡಿಯುವ ನೀರಿನ‌ ವಿಷಯದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.

ಬೆಳಿಗ್ಗೆ 11 ಗಂಟೆಗೆ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆ

ಮಧ್ಯಾಹ್ನ 3 ಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳ ಸಭೆ.

ಸಂಜೆ 5.30ಕ್ಕೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳ ಸಭೆ.

ಇನ್ಮುಂದೆ SP-DCP-IG ಗಳು ಪ್ರತಿ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದು ಕಡ್ಡಾಯ: ಸಿಎಂ ಸೂಚನೆ

Posted by Vidyamaana on 2024-07-06 16:17:31 |

Share: | | | | |


ಇನ್ಮುಂದೆ SP-DCP-IG ಗಳು ಪ್ರತಿ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದು ಕಡ್ಡಾಯ: ಸಿಎಂ ಸೂಚನೆ

ಬೆಂಗಳೂರು : ಪ್ರತೀ SP-DCP-IG ಗಳು ಪೊಲೀಸ್ ಮ್ಯಾನ್ಯುಯಲ್ ತಮ್ಮ ವ್ಯಾಪ್ತಿಯ ಪ್ರಕಾರ ಪ್ರತಿ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದು ಕಡ್ಡಾಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟ ಸೂಚನೆ ನೀಡಿದರು. ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ 2024ರ ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಷವನ್ನು ಉದ್ಘಾಟಿಸಿ, ನೂತನ ತಂತ್ರಾಂಶಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ನಿಮ್ಮ ವ್ಯಾಪ್ತಿಯಲ್ಲಿ ಕ್ಲಬ್ ಗಳು, ಇಸ್ಪೀಟ್, ಬೆಟ್ಟಿಂಗ್, ಡ್ರಗ್ಸ್ ಗಳನ್ನು ನಿಲ್ಲಿಸದಿದ್ದರೆ SP ಮತ್ತು‌ IG ಮಟ್ಟದ ಅಧಿಕಾರಿಗಳನ್ನೂ ನೇರ ಹೊಣೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು. SP-IG ಗಳು ಪ್ರತಿ ಠಾಣೆಗಳಿಗೆ ಹೋಗಿ ಪರಿಶೀಲನೆ ನಡೆಸಿದರೆ ಇವನ್ನೆಲ್ಲಾ ತಪ್ಪಿಸಬಹುದು ಎಂದು ಎಚ್ಚರಿಸಿದರು.

ನಾಳೆಯಿಂದಲೇ SP, IG ಗಳು ಠಾಣೆಗಳಿಗೆ ಭೇಟಿ ನೀಡಬೇಕು. ಭೇಟಿ ನೀಡಿ ಅರ್ಧಗಂಟೆಯಲ್ಲಿ ಶಾಸ್ತ್ರ ಮುಗಿಸಬಾರದು. ಕೂಲಂಕುಶ ಪರಿಶೀಲನೆ ನಡೆಸಬೇಕು ಎಂದು ಎಚ್ಚರಿಸಿದರು.

ಫೇಕ್ ನ್ಯೂಸ್ ಪ್ರಸಾರ ತಡೆಗಟ್ಟಿ: ಇಲ್ಲಾಂದ್ರೆ ಕ್ರಮ ಎದುರಿಸಿ: ಫೇಕ್ ನ್ಯೂಸ್ ಗಳು ಸಮಾಜದ ನೆಮ್ಮದಿಗೆ ಕಂಟಕವಾಗಿವೆ. ಇವು ವಿಪರೀತ ಹೆಚ್ಚಾಗುತ್ತಿವೆ. ಇವುಗಳ ತಡೆಗೆ fact check ಘಟಕಗಳನ್ನು ಮಾಡಿದ್ದೇವೆ. ಆದರೂ ಫೇಕ್ ನ್ಯೂಸ್ ಗಳು ಹೆಚ್ಚಾಗುತ್ತಿವೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಸದ್ಯ ಫೇಕ್ ನ್ಯೂಸ್ ತಡೆಯಲು ಆಗುತ್ತಿರುವ ಕೆಲಸ ಸಾಲುತ್ತಿಲ್ಲ ಎಂದು ಎಚ್ಚರಿಸಿದರು.

ಅಮಿತ್ ಶಾ ಭೇಟಿ ಹಿನ್ನಲೆ - ಫೆ.11:ಮದ್ಯದಂಗಡಿ ಬಂದ್‌

Posted by Vidyamaana on 2023-02-10 12:13:12 |

Share: | | | | |


ಅಮಿತ್ ಶಾ ಭೇಟಿ ಹಿನ್ನಲೆ - ಫೆ.11:ಮದ್ಯದಂಗಡಿ ಬಂದ್‌

ಪುತ್ತೂರು:ಫೆ.11ರಂದು ಕೇಂದ್ರ ಗೃಹ ಹಾಗೂ ಸಹಕಾರಿ ಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪುತ್ತೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಫೆ.11ರಂದು ಅಪರಾಹ್ನ 12 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮದ್ಯದಂಗಡಿಗಳನ್ನು ಬಂದ್ ಮಾಡಲು ಜಿಲ್ಲಾಧಿಕಾರಿಯವರು ಆದೇಶಿಸಿದ್ದಾರೆ. ಭದ್ರತೆ ಹಾಗೂ ಸುರಕ್ಷತೆಯ ಹಿತದೃಷ್ಟಿಯಿಂದ ಪುತ್ತೂರು ವಲಯ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪುತ್ತೂರು ವಲಯ ವ್ಯಾಪ್ತಿಯಲ್ಲಿರುವ ಎಲ್ಲಾ ರೀತಿಯ ಮದ್ಯ/ಶೇಂದಿ ಮಾರಾಟ/ ದಾಸ್ತಾನು/ಸಾಗಾಣಿಕೆಯನ್ನು ನಿರ್ಬಂಧಿಸಲಾಗಿದ್ದು ಎಲ್ಲಾ ರೀತಿಯ ಮದ್ಯ / ಶೇಂದಿ ಅಂಗಡಿಗಳನ್ನು ಫೆ.11ರಂದು ಅಪರಾಹ್ನ 12 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಮುಚ್ಚುವಂತೆ ದ.ಕ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ರವರು ಆದೇಶ ಹೊರಡಿಸಿದ್ದಾರೆ.



Leave a Comment: