KSRTC ಬಸ್-ಕಾರು ಡಿಕ್ಕಿ, ಕ್ರೈಸ್ಥ ಧರ್ಮಗುರು ಫಾ. ಆಂಥೋಣಿ ಪೀಟರ್ ಮೃತ್ಯು..

ಸುದ್ದಿಗಳು News

Posted by vidyamaana on 2024-07-24 17:11:55 |

Share: | | | | |


KSRTC ಬಸ್-ಕಾರು ಡಿಕ್ಕಿ, ಕ್ರೈಸ್ಥ ಧರ್ಮಗುರು ಫಾ. ಆಂಥೋಣಿ ಪೀಟರ್ ಮೃತ್ಯು..

ಶಿವಮೊಗ್ಗ : ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಕಾರು ಡಿಕ್ಕಿಯಾದ ಪರಿಣಾಮ ಕ್ರೈಸ್ತ ಧರ್ಮಗುರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಸಮೀಪ ಸವಳಂಗ ಚಿನ್ನಿಕಟ್ಟೆ ಬಳಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.ಕೆಎಸ್‌ಆರ್‌ಟಿಸಿ ಬಸ್ಸು ಹಾನಗಲ್‌ನಿಂದ ಶಿವಮೊಗ್ಗ ಕಡೆಗೆ ಹೋಗುತ್ತಿತ್ತುಎನ್ನಲಾಗಿದೆ.

ಕ್ರೈಸ್ತ ಧರ್ಮಗುರು ಇದ್ದ ಕಾರು ಶಿವಮೊಗ್ಗ ಕಡೆಯಿಂದ ತೆರಳುತ್ತಿತ್ತು. ಚಿನ್ನಿಕಟ್ಟೆ ಬಳಿ ಕಾರು, ಬಸ್ಸು ಮುಖಾಮುಖಿ ಡಿಕ್ಕಿಯಾಗಿವೆ. ಅಪಘಾತದ ರಭಸಕ್ಕೆ ಕಾರು ರಸ್ತೆ ಪಕ್ಕದ ಜಮೀನಿಗೆ ಉರುಳಿ ಬಿದ್ದಿದ್ದು ಸಂಪೂರ್ಣ ನುಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಶಿಕಾರಿಪುರ ಧರ್ಮಕೇಂದ್ರದ ಧರ್ಮಗುರು ಆಂಥೋಣಿ ಪೀಟರ್‌ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದ್ದು ನ್ಯಾಮತಿ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ.

 Share: | | | | |


ಪೊಲೀಸರ ಮಹತ್ವದ ಕ್ರಮ : ಇನ್ಮುಂದೆ ವಾಟ್ಸಪ್ ಮೂಲಕವೂ ದೂರು ನೀಡಬಹುದು!

Posted by Vidyamaana on 2023-06-16 04:21:50 |

Share: | | | | |


ಪೊಲೀಸರ ಮಹತ್ವದ ಕ್ರಮ : ಇನ್ಮುಂದೆ ವಾಟ್ಸಪ್ ಮೂಲಕವೂ ದೂರು ನೀಡಬಹುದು!

ಬೆಂಗಳೂರು :ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರು ಮತ್ತೊಂದು ಮಹತ್ವದ ಕ್ರಮಕ್ಕೆ ಮುಂದಾಗಿದ್ದು, ಇನ್ಮುಂದೆ ವಾಟ್ಸಪ್ ಮೂಲಕವೂ ದೂರು ಪಡೆಯಲು ಮುಂದಾಗಿದ್ದಾರೆ.ಈ ಬಗ್ಗೆ ಟ್ವೀಟರ್ ನಲ್ಲಿ ಮಾಹಿತಿ ನೀಡಿರುವ ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ ಅವರು, ದಯಾನಂದ್, ನಮ್ಮ 112 ಉನ್ನತೀಕರಿಸಲು ಮೊದಲ ಹೆಜ್ಜೆ ಇರಿಸಲಾಗಿದೆ.ನಾಗರಿಕರು ತುರ್ತು ಸಂದರ್ಭದಲ್ಲಿ ಸಹಾಯಕ್ಕೆ ಹಾಗೂ ಇತರೆ ಯಾವುದೇ ರೀತಿಯ ದೂರುಗಳು ಇದ್ದರೆ ಇನ್ನು ಮುಂದೆ 9480801000 ವಾಟ್ಸ್‌ಆಯಪ್ ನಂಬರ್‌ಗೆ ಕಳುಹಿಸಬಹುದು ಎಂದು ಹೇಳಿದ್ದಾರೆ.

ನಮ್ಮ 112 ನಿಯಂತ್ರಣ ಕೊಠಡಿ‌ ಮೂಲಕ ಜನರ ದೂರು ಸ್ವೀಕರಿಸುತ್ತಿದ್ದ ಬೆಂಗಳೂರು ಪೊಲೀಸರು, ಇದೀಗ ವಾಟ್ಸ್‌ಆಯಪ್‌ ಮೂಲಕವೂ ದೂರು ಪಡೆಯಲು ಮುಂದಾಗಿರುವುದರಿಂದ ಸಾರ್ವಜನಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ.

ಬಿಜೆಪಿ ಅಭ್ಯರ್ಥಿಗೆ ಎಂಟು ಬಾರಿ ಮತದಾನ ಮಾಡಿದ ವ್ಯಕ್ತಿ; ವಿಡಿಯೋ ವೈರಲ್

Posted by Vidyamaana on 2024-05-20 14:34:59 |

Share: | | | | |


ಬಿಜೆಪಿ ಅಭ್ಯರ್ಥಿಗೆ ಎಂಟು ಬಾರಿ ಮತದಾನ ಮಾಡಿದ ವ್ಯಕ್ತಿ; ವಿಡಿಯೋ ವೈರಲ್

ಲಕ್ನೋ: ವ್ಯಕ್ತಿಯೊಬ್ಬ ಮತದಾನ ಮಾಡುವಾಗ ಬಿಜೆಪಿ ಅಭ್ಯರ್ಥಿಗೆ ಹಲವು ಬಾರಿ ಮತದಾನ ಮಾಡಿದ್ದು, ಅದನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದು ವೈರಲ್ ಆದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕೃತ್ಯವೆಸಗಿದ ಯುವಕನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ರಾಜನ್ ಸಿಂಗ್ ಎಂದು ಗುರುತಿಸಲಾಗಿದೆ. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಸೇರಿದಂತೆ ವಿರೋಧ ಪಕ್ಷಗಳ ಹಲವು ನಾಯಕರು ಎಕ್ಸ್ ನಲ್ಲಿ ವಿಡಿಯೋ ಹಂಚಿ ಆಗ್ರಹಿಸಿದ ಬಳಿಕ ಆರೋಪಿಯನ್ನು ಬಂಧಿಸಲಾಯಿತು.

ಸಮಸ್ಯೆ ಹೇಳಿಕೊಂಡು ಕಣ್ಣೀರಿಟ್ಟ ಮಹಿಳೆ; ಅಧಿಕಾರಿಗಳಿಗನ್ನು ತಾರಾಟೆಗೆ ತೆಗೆದುಕೊಂಡ ಲೋಕಾಯುಕ್ತ ಎಸ್​ಪಿ ಸೈಮನ್

Posted by Vidyamaana on 2023-12-16 07:34:09 |

Share: | | | | |


ಸಮಸ್ಯೆ ಹೇಳಿಕೊಂಡು ಕಣ್ಣೀರಿಟ್ಟ ಮಹಿಳೆ; ಅಧಿಕಾರಿಗಳಿಗನ್ನು ತಾರಾಟೆಗೆ ತೆಗೆದುಕೊಂಡ ಲೋಕಾಯುಕ್ತ ಎಸ್​ಪಿ ಸೈಮನ್

ಕಡಬ : ಕುಟ್ರುಪ್ಪಾಡಿ ಗ್ರಾಮದ ಉಳಿಪ್ಪು ನಿವಾಸಿ ಶಿಬು ಎಂಬವರ ಪತ್ನಿ ಸೌಮ್ಯ ಅವರು ಅಕ್ರಮ ಸಕ್ರಮ ಕಡತ ವಿಲೇವಾರಿಯಲ್ಲಿ ಅಧಿಕಾರಿಗಳಿಂದ ಆಗಿರುವ ಅನ್ಯಾಯವನ್ನು ಲೋಕಾಯುಕ್ತ ಅಧಿಕಾರಿಗಳ ಮುಂದೆ ಹೇಳಿ ಕಣ್ಣೀರಿಟ್ಟ ಪ್ರಸಂಗ ನಡೆದಿದೆ.

ಇದರಿಂದ ಕೆಂಡಾಮಂಡಲರಾದ ಲೋಕಾಯುಕ್ತ ಎಸ್ಪಿ ಸೈಮನ್ ಅವರು ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗದ ಅಧಿಕಾರಿಗಳಿಂದ ಕಡಬ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ, ಸೌಮ್ಯ ಕಳೆದ ಎಂಟು ವರ್ಷಗಳಿಂದ ನಮ್ಮ ಅಕ್ರಮ ಸಕ್ರಮ ಕಡತವನ್ನು ವಿಲೇವಾರಿ ಮಾಡದೆ ವಿನಾಕಾರಣ ಸತಾಯಿಸುತ್ತಿದ್ದಾರೆ. ಕಳೆದ ವರ್ಷ ಕುಟ್ರುಪ್ಪಾಡಿಯಲ್ಲಿ ನಡೆದ ಜಿಲ್ಲಾಧಿಕಾರಿಯವರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ನಾವು ದೂರು ನೀಡಿದಾಗ ಒಂದು ವಾರದೊಳಗೆ ಕಡತ ವಿಲೇವಾರಿ ಮಾಡಿ ಹಕ್ಕು ಪತ್ರ ನೀಡಬೇಕೆಂದು ಕಂದಾಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಯವರು ಸೂಚನೆ ನೀಡಿದ್ದರು.ಆದರೆ ಈವರೆಗೆ ಯಾವ ಪ್ರಕ್ರಿಯೆಯೂ ನಡೆದಿಲ್ಲ ಎಂದು ಅಳಲು ತೋಡಿಕೊಂಡರು.ತನಗೆ ಕಳೆದ ಎಂಟು ವರ್ಷಗಳಿಂದ ಅನ್ಯಾಯ ಮಾಡಲಾಗುತ್ತಿದೆ ಎಂದು ಲೋಕಾಯುಕ್ತ ಅಧಿಕಾರಿಗಳ ಎದುರು ಕಣ್ಣೀರಿಟ್ಟು ಸೌಮ್ಯ ತನ್ನ ಸಮಸ್ಯೆಯನ್ನು ಹೇಳಿಕೊಂಡರು.

ಇದರಿಂದ ಕೆಂಡಾಮಂಡಲರಾದ ಲೋಕಾಯುಕ್ತ ಅಧಿಕಾರಿಗಳು ಸ್ಥಳದಲ್ಲಿದ್ದ ತಹಶೀಲ್ದಾರ್, ಉಪತಹಶೀಲ್ದಾರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು, 15 ದಿನಗಳ ಒಳಗೆ ಆ ಕಡತ ವಿಲೇವಾರಿ ಮಾಡಿಕೊಡುವಂತೆ ಸೂಚನೆ ನೀಡಿದರು. ಕಡತ ವಿಲೇವಾರಿ ಆಗದಿದ್ದರೆ ತಮ್ಮ ಗಮನಕ್ಕೆ ತರುವಂತೆ ಸೌಮ್ಯ ಅವರಿಗೆ ಅಭಯ ನೀಡಿದರು.ಇದೇ ಸಮಯದಲ್ಲಿ, ಸಾರ್ವಜನಿಕರಿಗೆ ಯಾವುದೇ ಅಧಿಕಾರಿಗಳು ಸರಿಯಾಗಿ ಸ್ಪಂದನೆ ನೀಡದೆ ಅಧಿಕಾರ ನಡೆಸಿದರೆ, ಸರ್ಕಾರಿ ಸವಲತ್ತುಗಳನ್ನು ದೊರಕಿಸಿಕೊಡುವಲ್ಲಿ ವಿನಕಾರಣ ತೊಂದರೆ ನೀಡಿದಲ್ಲಿ, ಅಧಿಕಾರಿಗಳು ಸಾರ್ವಜನಿಕರಿಗೆ ಸರ್ಕಾರಿ ಕೆಲಸದಲ್ಲಿ ತೊಂದರೆ ನೀಡಿದರೆ, ಲೋಕಾಯುಕ್ತಕ್ಕೆ ದೂರು ನೀಡಬಹುದು. ದೂರು ಯೋಗ್ಯವಾಗಿದ್ದಲ್ಲಿ ವಿಚಾರಣೆಗೆ ಒಳಪಡಿಸಲಗುವುದು ಎಂದು ಹೇಳಿದರು. ಅದೇ ರೀತಿ ಜನರು ಕೂಡಾ ಹೆಚ್ಚಿನ ಸ್ಪಂದನೆ ಕೊಡಬೇಕು. ಈ ಕಾರ್ಯಕ್ರಮದಲ್ಲಿ ಕೇವಲ ಐದು ದೂರುಗಳು ಮಾತ್ರ ಬಂದಿವೆ. ಅವುಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ವರ್ಗಾಯಿಸಿ ಮುಂದಿನ ಕ್ರಮ ಕೈಗೊಳ್ಳಗಾವುದು ಎಂದು ಹೇಳಿದರು.ಇನ್ಮುಂದೆ ಯಾವುದೇ ಅಧಿಕಾರಿಯಿಂದ ತೊಂದರೆಯಾದರೆ ಸಾರ್ವಜನಿಕರು ತಕ್ಷಣ ಲೋಕಾಯುಕ್ತಕ್ಕೆ ನೇರವಾಗಿ ದೂರು ನೀಡಬಹುದು, ಎಲ್ಲಾ ದೂರುಗಳಿಗೆ ಸಾಧ್ಯವಾದಷ್ಟು ಸ್ಪಂದಿಸಿ ಮುಂದೆ ಸೂಕ್ತ ಕ್ರಮ ಜರಗಿಸಲು ಲೋಕಾಯುಕ್ತ ಅಧಿಕಾರಿಗಳು ಬದ್ಧರಾಗಿದ್ದಾರೆ ಎಂದರು.


ಸೀತಾರಾಮ ನಾಯ್ಕ್ ಹಾಗೂ ವೆಂಕಟ್‌ರಾಜ್ ಕೋಡಿಬೈಲು ದೂರು ನೀಡಿ, ಕಡಬದಲ್ಲಿ ಕೆರೆ ಒತ್ತುವರಿ ಮಾಡಿಕೊಂಡು ಸಾರ್ವಜನಿಕರಿಗೆ ನಡೆದಾಡಲು ದಾರಿ ಇಲ್ಲದಂತೆ ಮಾಡಲಾಗಿದೆ. ನಮಗೆ ನ್ಯಾಯ ಒದಗಿಸಬೇಕೆಂದು ವಿನಂತಿ ಮಾಡಿಕೊಂಡರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಲೋಕಾಯುಕ್ತ ಅಧಿಕಾರಿಗಳು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಿ ತಕ್ಷಣ ಕೆರೆ ಒತ್ತುವರಿ ತೆರವುಗೊಳಿಸಿ, ರಸ್ತೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕೆಂದರು.ಸಂದರ್ಭದಲ್ಲಿ ಲೋಕಾಯುಕ್ತ ಡಿವೈಎಸ್‌ಪಿಗಳಾದ ಗಾನಾ ಪಿ.ಕುಮಾರ್, ಚೆಲುವರಾಜ್, ಕಡಬ ತಹಶೀಲ್ದಾರ್ ಪ್ರಭಾಕರ್​ ಖಜೂರೆ, ಉಪತಹಶೀಲ್ದಾರ್​ಗಳಾದ ಮನೋಹರ್ ಕೆ.ಟಿ, ಗೋಪಾಲ್ ಕಲ್ಲುಗುಡ್ಡೆ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ಭವಾನಿಶಂಕರ್, ಕಡಬ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೀಲಾವತಿ, ಕಂದಾಯ ನಿರೀಕ್ಷಕ ಪೃಥ್ವಿರಾಜ್ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ಪುತ್ತೂರಿನಲ್ಲಿ ಇಂದು ಬೆಳಿಗ್ಗೆಯಿಂದ ಕರೆಂಟ್ ಕಟ್

Posted by Vidyamaana on 2023-08-02 23:19:34 |

Share: | | | | |


ಪುತ್ತೂರಿನಲ್ಲಿ ಇಂದು ಬೆಳಿಗ್ಗೆಯಿಂದ ಕರೆಂಟ್ ಕಟ್

ಪುತ್ತೂರು: ತುರ್ತು ಕಾಮಗಾರಿ ನಿಮಿತ್ತ 110/33/11 ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ದರ್ಬೆ ಫೀಡರ್‌ನಲ್ಲಿ ಆ.3ರಂದು ಗುರುವಾರ ಪೂರ್ವಾಹ್ನ ಗಂಟೆ 10:00 ರಿಂದ ಅಪರಾಹ್ನ 5:00 ರವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದುದರಿಂದ, 110/33/11 ಕೆ.ವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್‌ನಿಂದ ವಿದ್ಯುತ್ ಸರಬರಾಜಾಗುವ ಪ್ರೈವೇಟ್ ಬಸ್ ಸ್ಟಾಂಡ್, ಕೆಎಸ್‌ಆರ್‌ಟಿಸಿ ಬಸ್ ಸ್ಟಾಂಡ್, ನೆಲ್ಲಿಕಟ್ಟೆ, ಎಳ್ಳುಡಿ ಮತ್ತು ಕಲ್ಲಾರೆ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಪ್ರೀತಿಗೆ ಪೋಷಕರ ನಿರಾಕರಣೆ; ಪ್ರೇಮಿಗಳಿಬ್ಬರು ನೇಣಿಗೆ ಶರಣು

Posted by Vidyamaana on 2024-02-03 18:08:10 |

Share: | | | | |


ಪ್ರೀತಿಗೆ ಪೋಷಕರ ನಿರಾಕರಣೆ; ಪ್ರೇಮಿಗಳಿಬ್ಬರು ನೇಣಿಗೆ ಶರಣು

ಕಲಬುರಗಿ : ಅಣ್ಣ-ತಂಗಿ ವರಸೆಯ ಪ್ರೀತಿಗೆ ಪೋಷಕರು ನಿರಾಕರಿಸಿದ ಹಿನ್ನೆಲೆ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಯಡ್ರಾಮಿ ತಾಲೂಕಿನ ಮಾಗಣಗೇರೆ ಗ್ರಾಮದಲ್ಲಿ ನಡೆದಿದೆ. ಶಶಿಕಲಾ (20) ಗೊಲ್ಲಾಳಪ್ಪ (24) ನೇಣಿಗೆ ಶರಣಾದ ಪ್ರೇಮಿಗಳು. ಶಶಿಕಲಾ ಮತ್ತು ಗೊಲ್ಲಾಳಪ್ಪ ಇಬ್ಬರು ಕೂಡ ವರಸೆಯಲ್ಲಿ ಅಣ್ಣ ತಂಗಿ ಆಗಿದ್ದರು.ಗೊಲ್ಲಾಳಪ್ಪ ಪ್ರೀತಿಯನ್ನು ನಿರಾಕರಿಸಿ ಶಶಿಕಲಾಗೆ ಬೇರೆ ಮದುವೆ ಮಾಡಲು ಕುಟುಂಬಸ್ಥರು ಮುಂದಾಗಿದ್ದರು. ಅದರಂತೆ ವಿಜಯಪುರ ಜಿಲ್ಲೆಯ ಸಿಂಧಗಿ ಗ್ರಾಮದ ಯುವಕನ ಜೊತೆ ನಿಶ್ಚಿತಾರ್ಥ ಮಾಡಿಸಿದ್ದರು. ಮುಂದಿನ ತಿಂಗಳು ಮದುವೆ ಕೂಡ ನಿಶ್ಚಯವಾಗಿತ್ತು ಎನ್ನಲಾಗಿದೆ.ಪ್ರೇಯಸಿಗೆ ಮದುವೆ ನಿಶ್ಚಯ ಆಗಿರುವ ವಿಷಯ ತಿಳಿದ ಗೊಲ್ಲಾಳಪ್ಪ ನಿನ್ನೆ ರಾತ್ರಿ ಶಶಿಕಲಾಳನ್ನು ಮನೆಯಿಂದ ಕರೆದುಕೊಂಡು ಹೋಗಿದ್ದಾನೆ. ನಂತರ ಮಾಗಣಪುರ ಗ್ರಾಮದ ದೇವಸ್ಥಾನದಲ್ಲಿ ಜೋಡಿ ಮದುವೆ ಮಾಡಿಕೊಂಡಿದ್ದಾರೆ. ಬಳಿಕ ಅದೇ ಗ್ರಾಮದ ಹೊರವಾಲಯದ ತೋಟದ ಜಮೀನಿನಲ್ಲಿ ಇಬ್ಬರು ನೇಣಿಗೆ ಶರಣಾಗಿದ್ದಾರೆ. ಪ್ರೇಮಿಗಳಿಬ್ಬರು ನೇಣಿಗೆ ಶರಣಾಗುವ ಮುನ್ನ ತಾವು ಮದುವೆ ಮಾಡಿಕೊಂಡಿರುವುದರ ಬಗ್ಗೆ ಸೆಲ್ಫಿ ಫೋಟೋ ತೆಗೆದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಯಡ್ರಾಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೆಳ್ತಂಗಡಿ : ಮರ ಕಟ್ಟಿಂಗ್ ಮಾಡುವಾಗ ಕೆಳಗೆ ಬಿದ್ದ ಮೆಷಿನ್

Posted by Vidyamaana on 2023-12-20 17:11:58 |

Share: | | | | |


ಬೆಳ್ತಂಗಡಿ : ಮರ ಕಟ್ಟಿಂಗ್ ಮಾಡುವಾಗ ಕೆಳಗೆ ಬಿದ್ದ ಮೆಷಿನ್

ಬೆಳ್ತಂಗಡಿ : ಮರ ಕಟ್ಟಿಂಗ್ ಮಾಡುವಾಗ ಮೆಷಿನ್ ಅಯತಪ್ಪಿ ಕೆಳಗೆ ಬುದ್ದಿದ್ದು.ಚಾಲನ ಸ್ಥಿತಿಯಲ್ಲಿದ್ದ ಮೆಷಿನಿನ ಗರಗಸ ಕುತ್ತಿಗೆಗೆ ಸಿಲುಕಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿಯ ಸಾವ್ಯದಲ್ಲಿ ಡಿ. 20 ರಂದು ನಡೆದಿದೆ.



ಬೆಳ್ತಂಗಡಿ ತಾಲೂಕು ಸಾವ್ಯ ಗ್ರಾಮದ ಸಾವ್ಯ ಹೊಸಮನೆ ಎಂಬಲ್ಲಿ ತನ್ನ ಮನೆಯ ಬಳಿ ಡಿ.19 ರಂದು ಬೆಳಗ್ಗೆ 11:30 ರ ಸಮಯಕ್ಕೆ ಕಟ್ಟಿಗೆ ಮಾಡುವ ಸಲುವಾಗಿ ಪ್ರಶಾಂತ್ ಪೂಜಾರಿ ಮತ್ತು ಸಹೋದರ ಪ್ರಮೋದ್ ಜೊತೆ ಮರ ಕಡಿಯುವ ಕಟ್ಟಿಂಗ್ ಮಿಷಿನ್ ಮೂಲಕ ಮರ ಕಡಿಯುವ ಸಮಯದಲ್ಲಿ ಪ್ರಶಾಂತ್ ಪೂಜಾರಿ ಕಟ್ಟಿಂಗ್ ಮಿಷಿನ್ ಜೊತೆಗೆ ಹಿಡಿತ ತಪ್ಪಿ ನೆಲಕ್ಕೆ ಬಿದ್ದಾಗ ಚಾಲನಾ ಸ್ಥಿತಿಯಲ್ಲಿದ್ದ ಕಟ್ಟಿಂಗ್ ಮೆಷಿನಿನ ಗರಗಸ ಆಕಸ್ಮಿಕವಾಗಿ ಕುತ್ತಿಗೆಯ ಬಳಿ ತಾಗಿ, ತೀವ್ರ ರಕ್ತ ಗಾಯಗಳಾಗಿ ಗಂಭೀರವಾಗಿದ್ದು ಚಿಕಿತ್ಸೆಗಾಗಿ ತಕ್ಷಣ ಮೂಡಬಿದ್ರೆ ಆಳ್ವಾಸ್  ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆ.ಎಮ್.ಸಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿದಾಗ ಚಿಕಿತ್ಸೆ ಫಲಿಸದೆ ಪ್ರಶಾಂತ್ ಪೂಜಾರಿ (36) ಎಂಬವರು ಡಿ.20ರಂದು(ಇಂದು) ಬೆಳಗ್ಗಿನ ಜಾವ ಸುಮಾರು 2 ಗಂಟೆಗೆ ಮೃತಪಟ್ಟಿದ್ದಾರೆ. ಈ ಬಗ್ಗೆ ಪ್ರಶಾಂತ್ ಸಹೋದರ ಪ್ರಮೋದ್ (33) ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Recent News


Leave a Comment: