ಎಫ್‌ಐಆರ್ ರದ್ದು ಕೋರಿ ಶಾಸಕ ಹರೀಶ್ ಪೂಂಜ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಸುದ್ದಿಗಳು News

Posted by vidyamaana on 2024-07-05 17:03:24 |

Share: | | | | |


ಎಫ್‌ಐಆರ್ ರದ್ದು ಕೋರಿ ಶಾಸಕ ಹರೀಶ್ ಪೂಂಜ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಳ್ತಂಗಡಿ : ಅಕ್ರಮ ಕಲ್ಲು ಕೊರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಠಾಣೆಗೆ ಹೋಗಿ ಪೊಲೀಸರಿಗೆ ಬೆದರಿಕೆ ಹಾಕಿದ ಪ್ರಕರಣ ಹಾಗೂ ಅನುಮತಿ ಪಡೆಯದೆ ಪ್ರತಿಭಟನೆ ಮಾಡಿದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಹಾಕಿದ್ದ ಅರ್ಜಿಯನ್ನು ಹೈಕೋರ್ಟ್ ನ ಜನಪ್ರತಿನಿಧಿಗಳ ಕೋರ್ಟ್ ಇಂದು ವಜಾಗೊಳಿಸಿದೆ.

ಎರಡು ಪ್ರಕರಣವನ್ನು ರದ್ದು ಕೋರಿ ಹಾಕಿದ ಅರ್ಜಿಯ ಬಗ್ಗೆ ಜೂ. 5 ರಂದು(ಇಂದು) ಬೆಂಗಳೂರಿನ ಹೈಕೋರ್ಟ್ ನ ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ಈ ವೇಳೆ ಕೋರ್ಟ್ ಎರಡು ಪ್ರಕರಣವನ್ನು ರದ್ದು ಮಾಡಲು ಸಾಧ್ಯವಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿದೆ ಹಾಗೂ ಈ ಪ್ರಕರಣದಲ್ಲಿ ಹೈಕೋರ್ಟ್ ಮಧ್ಯಪ್ರದೇಶಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

 Share: | | | | |


ಮಂಗಳೂರು ಕಪಿತಾನಿಯೋ ಶಾಲೆಯ ಮತಗಟ್ಟೆ ಹೊರಗಡೆ ಕಮಲ – ಖಾಕಿ ಜಟಾಪಟಿ!

Posted by Vidyamaana on 2024-04-26 11:11:36 |

Share: | | | | |


ಮಂಗಳೂರು ಕಪಿತಾನಿಯೋ ಶಾಲೆಯ ಮತಗಟ್ಟೆ ಹೊರಗಡೆ ಕಮಲ – ಖಾಕಿ ಜಟಾಪಟಿ!

ಮಂಗಳೂರು, ಎ.25: ಕಪಿತಾನಿಯೋ ಶಾಲೆಯ ಮತಗಟ್ಟೆ ಹೊರಗಡೆ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಜಟಾಪಟಿ ನಡೆದಿದೆ. 


ಮತಗಟ್ಟೆ ಹೊರಗೆ ಮಾಧ್ಯಮಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪ್ರತಿಕ್ರಿಯೆ ನೀಡುತ್ತಿದ್ದಾಗ, ಅಲ್ಲಿ ಒಂದಷ್ಟು ಗುಂಪು ಸೇರಿದ್ದರು. ಈ ವೇಳೆ, ಬಿಜೆಪಿ ಕಾರ್ಯಕರ್ತನೊಬ್ಬ ಪ್ರಶ್ನೆ ಮಾಡಲು ಬಂದಿದ್ದಾನೆ. ಮಂಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ಟಿಡಿ ನಾಗರಾಜ್ ಬಳಿ ವಾಯ್ಸ್ ರೈಸ್ ಮಾಡಿ ಮಾತನಾಡಿದ್ದಾನೆ. ಇದರಿಂದ ಸಿಟ್ಟಿಗೆದ್ದ ಇನ್ಸ್ ಪೆಕ್ಟರ್, ಬಿಜೆಪಿ ಕಾರ್ಯಕರ್ತನ ಕಾಲರ್ ಹಿಡಿದು ಎಳೆದೊಯ್ದಿದ್ದಾರೆ.

ಕುಂಬ್ರ ಬದ್ರಿಯಾ ನಗರದಲ್ಲಿ ಸ್ವಾತಂತ್ರ್ಯ ದಿನಾಚರಣೆ

Posted by Vidyamaana on 2023-08-15 14:44:58 |

Share: | | | | |


ಕುಂಬ್ರ ಬದ್ರಿಯಾ ನಗರದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಪುತ್ತೂರು; ಕುಂಬ್ರ ಬದ್ರಿಯಾ ನಗರ ಬದ್ರಿಯಾ ಜುಮಾ ಮಸ್ಜಿದ್ ಹಾಗೂ ಮದ್ರಸ ವಠಾರದಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಜಮಾತ್ ಅಧ್ಯಕ್ಷ ಉಸ್ಮಾನ್ ಮುಸ್ಲಿಯಾರ್ ದ್ವಜಾರೀಹಣಗೈದರು.‌ಖತೀಬರಾದ‌ ಇಸ್ಮಾಯಿಲ್ ಸ ಅದಿ ದುವಾ ನೆರವೇರಿಸಿದರು.‌ಜಮಾತ್ ಕಾರ್ಯದರ್ಶಿ ಅದ್ರಾಮ ಕೊಯಿಲ, ಕೋಶಾಧಿಕಾರಿ ಇಸ್ಮಾಯಿಲ್ ಬದ್ರಿಯಾನಗರ, ಜಮಾತ್ ಮಾಜಿ ಕಾರ್ಯದರ್ಶಿ ಇಸ್ಮಾಯಿಲ್ ಕೋಳಿಗದ್ದೆ, ಫಾರೂಕ್ ಮಗಿರೆ, ಆದು ಕೊಯಿಲ, ಸಿಎಂ‌ಅಬ್ದುಲ್ ರಹಿಮಾನ್, ರಝಾಕ್ ಆಟೋ ಸಾಂತಿಯಡಿ,ಸಿರಾಜ್ ಬದ್ರಿಯಾನಗರ ,ಸಾದಿಕ್ ಮಗಿರೆ ಮತ್ತಿತರರು ಉಪಸ್ಥಿತರಿದ್ದರು. ಉಸ್ತಾದ್ ಖಲೀಲ್ ಸ ಅದಿ ಸ್ವಾಗತಿಸಿ, ಮುಅಲ್ಲಿಂ ವಂದಿಸಿದರು.

ಬನ್ನೂರು ನಿವಾಸಿ ಸೀತಾರಾಮ ಶೆಟ್ಟಿ ನೇಣು ಬಿಗಿದು ಆತ್ಮಹತ್ಯೆ

Posted by Vidyamaana on 2024-04-29 21:24:36 |

Share: | | | | |


ಬನ್ನೂರು ನಿವಾಸಿ ಸೀತಾರಾಮ ಶೆಟ್ಟಿ ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು: ಇಲ್ಲಿನ ಬನ್ನೂರಿನ ಮೇಲ್ಮಜಲು ನಿವಾಸಿ ಸೀತಾರಾಮ ಶೆಟ್ಟಿ (55 ವ.) ಆದಿತ್ಯವಾರ ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಖಾಸಗಿ ಗ್ಯಾಸ್ ಕಂಪೆನಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ದುಡಿಯುತ್ತಿದ್ದ ಇವರು, ಮನೆಮನೆಗೆ ಗ್ಯಾಸ್ ಪೂರೈಕೆ ಮಾಡುತ್ತಿದ್ದರು.

ವಿಧಾನಪರಿಷತ್​ ಚುನಾವಣೆ: ಜೆಡಿಎಸ್​ಗೆ ಶಾಕ್​ ನೀಡಿದ ಬಿಜೆಪಿ, ತುರ್ತು ಸಭೆ ಕರೆದ HDK

Posted by Vidyamaana on 2024-05-12 12:11:43 |

Share: | | | | |


ವಿಧಾನಪರಿಷತ್​ ಚುನಾವಣೆ: ಜೆಡಿಎಸ್​ಗೆ ಶಾಕ್​ ನೀಡಿದ ಬಿಜೆಪಿ, ತುರ್ತು ಸಭೆ ಕರೆದ HDK

ಬೆಂಗಳೂರು : ಕರ್ನಾಟಕ ರಾಜ್ಯ ವಿಧಾನಪರಿಷತ್​ ಚುನಾವಣೆಯ ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿ, ಮೈತ್ರಿ ಪಕ್ಷ ಜೆಡಿಎಸ್​ಗೆ ಒಂದು ಸ್ಥಾನವನ್ನಷ್ಟೆ ನೀಡಿರುವುದು ಜೆಡಿಎಸ್ ಪಕ್ಷದಲ್ಲಿ ಬಿರುಗಾಳಿಯನ್ನು ಬೀಸಿದೆ. ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಜೆಡಿಎಸ್​ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಮಂಡ್ಯ ನಾಯಕರ ಸಭೆಯನ್ನು ಕರೆದಿದ್ದಾರೆ.

ಲೋಕಸಭಾ ಚುನಾವಣೆ ಬಳಿಕ ವಿಧಾನ ಪರಿಷತ್​ ಚುನಾವಣೆಯಲ್ಲೂ ಮೈತ್ರಿ ಮುಂದಿವರೆಸಿರುವ ಜೆಡಿಎಸ್​ ಮತ್ತು ಬಿಜೆಪಿ, ಒಟ್ಟು 6 ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಕ್ಷೇತ್ರ ಹಂಚಿಕೆ ಮಾಡಿಕೊಂಡಿದ್ದು ಕ್ಷೇತ್ರಗಳ ಪಟ್ಟಿಯನ್ನು ಬಿಜೆಪಿ ಚುನಾವಣಾ ಸಮಿತಿ ಬಿಡುಗಡೆ ಮಾಡಿದೆ.

ಅಣ್ಣಪ್ಪ ಸ್ವಾಮಿಯ ಸನ್ನಿಧಿಯಲ್ಲಿ ಮಗಳ ಸಾವಿಗೆ ನ್ಯಾಯ ಕೋರಿ ಸೌಜನ್ಯ ಅಮ್ಮನ ಕಣ್ಣೀರ ಪ್ರಾರ್ಥನೆ

Posted by Vidyamaana on 2023-08-27 07:48:36 |

Share: | | | | |


ಅಣ್ಣಪ್ಪ ಸ್ವಾಮಿಯ ಸನ್ನಿಧಿಯಲ್ಲಿ ಮಗಳ ಸಾವಿಗೆ ನ್ಯಾಯ ಕೋರಿ ಸೌಜನ್ಯ ಅಮ್ಮನ ಕಣ್ಣೀರ ಪ್ರಾರ್ಥನೆ


ಬೆಳ್ತಂಗಡಿ: ಹಿಂದೂ ಪರ ಸಂಘಟನೆಗಳಾಗಿರುವ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳದ ನೇತೃತ್ವದಲ್ಲಿ ಇಂದು (ಆ.27) ಧರ್ಮಸ್ಥಳದ ಅಣ್ಣಪ್ಪ ಬೆಟ್ಟಕ್ಕೆ ಹಮ್ಮಿಕೊಂಡಿರುವ ಪಾದಯಾತ್ರೆ ಬಿಗುವಿನ ವಾತಾವರಣದ ನಡುವೆ ಕ್ಷೇತ್ರದಲ್ಲಿರುವ ಅಣ್ಣಪ್ಪ ಸ್ವಾಮಿ ಬೆಟ್ಟದ ಬಳಿಗೆ ತಲುಪಿದೆ.


ನೇತ್ರಾವತಿ ಸ್ನಾನಘಟ್ಟದಿಂದ ಧರ್ಮಸ್ಥಳದಲ್ಲಿರುವ ಅಣ್ಣಪ್ಪ ಸ್ವಾಮಿಯ ಬೆಟ್ಟದವರೆಗೆ ನಡೆದ ಈ ಪಾದಯಾತ್ರೆಯಲ್ಲಿ ಸೌಜನ್ಯಾಳ ತಾಯಿ ಕುಸುಮಾವತಿ ಜೊತೆ ವಿ.ಹಿಂ.ಪ ಮತ್ತು ಬಜರಂಗದಳದ ಸಾವಿರಾರು ಕಾರ್ಯಕರ್ತು ಪಾಲ್ಗೊಂಡರು.


ಈ ಹಿನ್ನಲೆಯಲ್ಲಿ ಅಣ್ಣಪ್ಪ ಬೆಟ್ಟದ ವ್ಯಾಪ್ತಿಯಲ್ಲಿ ಪೊಲೀಸರು ಬಿಗು ಬಂದೋಬಸ್ತ್ ಏರ್ಪಡಿಸಿದ್ದರು. ಖುದ್ದು ಜಿಲ್ಲಾ ಎಸ್.ಪಿ ರಿಷ್ಯಂತ್ ಅವರೇ ಬಂದೋಬಸ್ತ್ ಉಸ್ತುವಾರಿ ವಹಿಸಿಸದ್ದರು.


ಈ ಸಂದರ್ಭ ಅಣ್ಣಪ್ಪ ಬೆಟ್ಟದ ಮುಂಭಾಗ ಮತ್ತು ಸುತ್ತಲಿನ ಪರಿಸರದಲ್ಲಿ ಧರ್ಮಸ್ಥಳ ಗ್ರಾಮಸ್ಥರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಒಂದು ಹಂತದಲ್ಲಿ ಗ್ರಾಮಸ್ಥರು ಮತ್ತು ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರ ನಡುವೆ ಸಣ್ಣಮಟ್ಟಿನ ಮಾತಿನ ಚಕಮಕಿಯೂ ನಡೆಯಿತು.


ಸೌಜನ್ಯ ಅವರ ತಾಯಿ ಕುಸುಮಾವತಿ ಅವರು ಕ್ಷೇತ್ರವನ್ನು ಪ್ರವೇಶಿಸುವುದಕ್ಕೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಆದರೆ ಎಸ್.ಪಿ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಅಲ್ಲಿದ್ದವರ ಮನಒಲಿಸುವಲ್ಲಿ ಸಮರ್ಥರಾದರು.


ಈ ನಡುವೆ, ಓಂ ನಮಃ ಶಿವಾಯ ಘೋಷಣೆ ಮೊಳಗಿಸುತ್ತಾ ಕೇಸರಿ ಕಾರ್ಯಕರ್ತರು ಮತ್ತು ಕುಸುಮಾವತಿ ಅವರು ಪಾದಯಾತ್ರೆ ಮೂಲಕ ಧರ್ಮಸ್ಥಳ ದ್ವಾರದ ಬಳಿ ತಲುಪಿದರು.


ಹಿಂದು ಸಂಘಟನೆಗಳ ಕಾರ್ಯಕರ್ತರ ಜೊತೆ ಪಾದಯಾತ್ರೆಯಲ್ಲಿ ಆಗಮಿಸಿದ ಕುಸುಮಾವತಿ ಅವರನ್ನು ಪ್ರಾರಂಭದಲ್ಲಿ ಧರ್ಮಸ್ಥಳ ದ್ವಾರದ ಬಳಿ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದರು. ಇಲ್ಲಿಂದ ಕೇವಲ 500 ಮೀಟರ್ ದೂರದಲ್ಲಿ ಅಣ್ಣಪ್ಪ ಬೆಟ್ಟವಿದೆ.


ಬಳಿಕ, ಸೌಜನ್ಯ ತಾಯಿ ಕುಸುಮಾವತಿ ಸೇರಿದಂತೆ ಕೆಲವರನ್ನು ಮಾತ್ರವೇ ಪೊಲೀಸರು ಅಣ್ಣಪ್ಪ ಸ್ವಾಮಿ ಬೆಟ್ಟ ಕಡೆ ತೆರಳಲು ಅನುಮತಿ ನೀಡಿದರು. ಬಳಿಕ ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಭಾಗ ಕುಸುಮಾವತಿ ಅವರು ಕೈಮುಗಿದು ಪ್ರಾರ್ಥಿಸಿ ತಮ್ಮ ಮಗಳ ಸಾವಿಗೆ ನ್ಯಾಯ ದೊರಕಿಸಿಕೊಟ್ಟು ನಿಜವಾದ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಹಿಂದು ಸಂಘಟನೆಗಳ ಮುಖಂಡರ 

ಜೊತೆ ಪ್ರಾರ್ಥನೆ ಸಲ್ಲಿಸಿದರು.


ಅಣ್ಣಪ್ಪ ಸ್ವಾಮಿಗೆ ಕಾಣಿಕೆ ಸಲ್ಲಿಸಿ ಕುಸುಮಾವತಿ ಅವರು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಅಣ್ಣ ಸ್ವಾಮಿ ಸನ್ನಿಧಿಯಲ್ಲಿ ದುಃಖ ತಡೆಯಲಾಗದೆ ಕುಸುಮಾವತಿ ಅವರು ಕಣ್ಣೀರು ಹಾಕಿ ತನ್ನ ಮಗಳ ಸಾವಿಗೆ ಕಾರಣರಾದ ಅರೋಪಿಗಳಿಗೆ ತಕ್ಕ ಶಿಕ್ಷೆಯಾಗುವಂತೆ ಅಣ್ಣ ಸ್ವಾಮಿಯ ಮುಂದೆ ಪ್ರಾರ್ಥಿಸಿದರು.


ಇದಕ್ಕೂ ಮೊದಲು ಕುಸುಮಾವತಿ ಅವರು ಆರೋಪಿಗಳೆಂದು ಹೇಳುತ್ತಿರುವ ಧೀರಜ್ ಕೆಲ್ಲ, ಉದಯ್ ಜೈನ್ ಮತ್ತು ಧೀರಜ್ ಜೈನ್ ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಭಾಗ ಪ್ರಾರ್ಥಿಸಿ ತಾವು ನಿರಪರಾಧಿಗಳೆಂದು ಹೇಳಿಕೊಂಡರು.


ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮದ ನಾಗರಿಕರು ಬೃಹತ್ ಸಂಖ್ಯೆಯಲ್ಲಿ ಸೇರಿದ್ದರು. ಅವರನ್ನು ಚದುರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.


ಒಟ್ಟಿನಲ್ಲಿ ಜಿಲ್ಲೆಯಾದ್ಯಂತ ಭಾರೀ ಕುತೂಹಲ ಮೂಡಿಸಿದ್ದ ಇಂದಿನ ಈ ಪಾದಯಾತ್ರೆ ಮತ್ತು ಆಣೆ ಪ್ರಮಾಣ ವಿಚಾರ ಒಂದಿಷ್ಟು ಉದ್ವಿಗ್ನತೆಗಳ ನಡುವೆ ಕೊನೆಗೂ ಶಾಂತವಾಗಿಯೇ ಮುಕ್ತಾಯಗೊಂಡಿದೆ.

ಭೀಕರ ರಸ್ತೆ ಅಪಘಾತ ಪ್ರಕರಣ : ಸಾವಿನ ಸಂಖ್ಯೆ 13ಕ್ಕೆ ಏರಿಕೆ,ಇಬ್ಬರ ಸ್ಥಿತಿ ಗಂಭೀರ

Posted by Vidyamaana on 2024-06-28 19:01:49 |

Share: | | | | |


ಭೀಕರ ರಸ್ತೆ ಅಪಘಾತ ಪ್ರಕರಣ : ಸಾವಿನ ಸಂಖ್ಯೆ 13ಕ್ಕೆ ಏರಿಕೆ,ಇಬ್ಬರ ಸ್ಥಿತಿ ಗಂಭೀರ

ಹಾವೇರಿ : ಇಂದು ಬೆಳ್ಳಂಬೆಳಗ್ಗೆ ಹಾವೇರಿಯಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಹತ್ತಕ್ಕೂ ಹೆಚ್ಚು ಜನರು ಸಾವನಪ್ಪಿದು ಇದೀಗ ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ ಎಂದು ಹಾವೇರಿಯ ಎಸ್ ಪಿ ಅಂಶಿ ಕುಮಾರ್ ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಇಬ್ಬರು ಮಕ್ಕಳು ಇಬ್ಬರು ಪುರುಷರು ಸೇರಿದಂತೆ 9 ಮಹಿಳೆಯರು ಸಾವನಪ್ಪಿದ್ದಾರೆ.

ಹೌದು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಅಪಘಾತ ನಡೆದಿದೆ. ಚಿಂಚೋಳಿಯ ಮಾಯಮ್ಮ ದೇವಿ ದರ್ಶನ ಪಡೆದು ವಾಪಸಾಗುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಬೆಳ್ಳಂ ಬೆಳಗ್ಗೆ ಭೀಕರ ರಸ್ತೆ ಅಪಘಾತದಲ್ಲಿ 13 ಜನ ಸಾವನ್ನಪಪ್ಪಿದ್ದಾರೆ ಎಂದು ಎಸ್ ಪಿ ಅಂಶಿ ಕುಮಾರ್ ಮಾಹಿತಿ ನೀಡಿದ್ದಾರೆ.ಮೃತರು ಶಿವಮೊಗ್ಗ ಜಿಲ್ಲೆಯ ಮೂಲದವರು ಎಂದು ತಿಳಿದು ಬಂದಿದೆ. ಪರಶುರಾಮ, ಭಾಗ್ಯ, ನಾಗೇಶ್, ವಿಶಾಲಾಕ್ಷಿ,ಅರ್ಪಿತ,ಸುಭದ್ರ, ಬಾಯಿ, ಪುಣ್ಯ, ಮಂಜುಳಾಬಾಯಿ, ಆದರ್ಶ, ಮಾನಸ, ಅಪರೂಪ, ಮಂಜುಳಾ ಮೃತಪಟ್ಟವರ ಎಂದು ಗುರುತಿಸಲಾಗಿದೆ.

Recent News


Leave a Comment: