ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯ

ಸುದ್ದಿಗಳು News

Posted by vidyamaana on 2024-07-24 16:52:02 |

Share: | | | | |


ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯ

ವದೆಹಲಿ : ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯಿಸಿದರು.


ಈ ಹಿಂದೆ ಮಂಗಳೂರು- ಸುಬ್ರಹ್ಮಣ್ಯ ನಡುವೆ ಮೀಟರ್ ಗೇಜ್ ಹಳಿ ಇದ್ದಾಗ ಪ್ಯಾಸೆಂಜರ್ ರೈಲು ಓಡಾಟ ಇತ್ತು. ಬ್ರಾಡ್ ಗೇಜ್ ಹಳಿ ಮಾಡುವ ಸಲುವಾಗಿ 2005ರಲ್ಲಿ ಈ ರೈಲಿನ ಸಂಚಾರವನ್ನು ನಿಲ್ಲಿಸಲಾಗಿತ್ತು. ಆನಂತರ, ಬ್ರಾಡ್ ಗೇಜ್ ಹಳಿಯಾಗಿ ಪರಿವರ್ತನೆ ಮಾಡಲಾಗಿದೆ. ಅಂದು ಓಡುತ್ತಿದ್ದ ಪ್ಯಾಸೆಂಜರ್ ರೈಲು ಮಂಗಳೂರಿನಿಂದ ಕಬಕ- ಪುತ್ತೂರು ನಡುವೆ ಓಡಾಟ ನಡೆಸುತ್ತಿದ್ದು, ಅದನ್ನು ಸುಬ್ರಹ್ಮಣ್ಯದವರೆಗೆ ವಿಸ್ತರಣೆ ಮಾಡಬೇಕು.

ಮಂಗಳೂರು – ಸುಬ್ರಹ್ಮಣ್ಯ ಮಧ್ಯೆ ರೈಲು ಓಡಾಟವಾದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆ, ಕಾಲೇಜಿಗೆ ಹೋಗುವವರಿಗೆ ಉಪಯೋಗವಾಗಲಿದೆ. ಗ್ರಾಮಾಂತರ ಪ್ರದೇಶವಾದ ಸುಳ್ಯದಿಂದ ಮಂಗಳೂರಿಗೆ ಪ್ರತಿದಿನ ಓಡಾಟ ಮಾಡುವವರಿದ್ದಾರೆ. ಅವರಿಗೂ ಉಪಯುಕ್ತ ಆಗಲಿದೆ. ಇದು ಸೌತ್ ವೆಸ್ಟರ್ನ್ ರೈಲ್ವೇ ವಿಭಾಗದಲ್ಲಿದ್ದು, ನಮ್ಮ ಜಿಲ್ಲೆಯ ಒಳಗೆ ಸಂಚರಿಸುವ ಏಕೈಕ ಪ್ಯಾಸೆಂಜರ್ ರೈಲಾಗಿದೆ.


ಜನಸಾಮಾನ್ಯರ ಹಿತದೃಷ್ಟಿಯಿಂದ ಈ ರೈಲನ್ನು ಸುಬ್ರಹ್ಮಣ್ಯದವರೆಗೂ ವಿಸ್ತರಣೆ ಮಾಡಬೇಕು ಎಂದು ರೈಲ್ವೇ ಸಚಿವರನ್ನು ಮನವಿ ಮಾಡಿದ್ದಾರೆ. ಇದಕ್ಕುತ್ತರಿಸಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಸೇನೆಯಿಂದ ನಿವೃತ್ತಿ ಪಡೆದು ಸಂಸದರಾಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ಬಗ್ಗೆ ಗೌರವ ಹೊಂದಿದ್ದು, ರೈಲ್ವೇ ವಿಚಾರಗಳ ಬಗ್ಗೆ ಯಾವುದೇ ಮನವಿಯಿದ್ದರೂ ನನ್ನ ಕಚೇರಿಗೆ ಬಂದು ವೈಯಕ್ತಿಕವಾಗಿ ಚರ್ಚಿಸಬಹುದು. ಪರಿಹರಿಸಲು ಮುಕ್ತನಿದ್ದೇನೆ ಎಂದು ಹೇಳಿದರು.

 Share: | | | | |


ಬುದ್ದಿ ಹೇಳಿದ್ದಕ್ಕೆ ಶಿಕ್ಷಕನಿಗೆ ಮಾರಕಾಸ್ತ್ರ ಹಿಡಿದು ವಿದ್ಯಾರ್ಥಿ ಬೆದರಿಕೆ

Posted by Vidyamaana on 2023-08-25 08:59:25 |

Share: | | | | |


ಬುದ್ದಿ ಹೇಳಿದ್ದಕ್ಕೆ ಶಿಕ್ಷಕನಿಗೆ ಮಾರಕಾಸ್ತ್ರ ಹಿಡಿದು ವಿದ್ಯಾರ್ಥಿ ಬೆದರಿಕೆ

ಮಂಡ್ಯ: ತರಗತಿಗೆ ಹಾಜರಾಗದ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ್ದಕ್ಕೆ ವಿದ್ಯಾರ್ಥಿಯೊಬ್ಬ ಶಿಕ್ಷಕರ ಎದುರು ಲಾಂಗ್ ಝಳಪಿಸಿದ ಘಟನೆ ನಾಗಮಂಗಲದಲ್ಲಿ ನಡೆದಿದೆ.

ನಗರದ ಖಾಸಗಿ ಕಾಲೇಜಿನಲ್ಲಿ ಡಿಪ್ಲೋಮಾ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ತರಗತಿಗೆ ಸರಿಯಾಗಿ ಹಾಜರಾಗುತ್ತಿರಲಿಲ್ಲ. ಈ ಬಗ್ಗೆ ಉಪನ್ಯಾಸಕರೊಬ್ಬರು ತಿಳುವಳಿಕೆ ಹೇಳುವಂತೆ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಕೋಪಗೊಂಡ ವಿದ್ಯಾರ್ಥಿ ತಲವಾರು ಹಿಡಿದು ಉಪನ್ಯಾಸಕರಿಗೆ ಬೆದರಿಕೆ ಹಾಕಿದ್ದಾನೆ. ಬೆದರಿಕೆ ಹಾಕುತ್ತಿರುವ ವೀಡಿಯೋ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.


ಈ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ 34 ಸಾವಿರ ಬಡ ದೇವಸ್ಥಾನಗಳಿಗೂ ಶೀಘ್ರವೇ ಸಿಗಲಿದೆ ಗೃಹಜ್ಯೋತಿ ಉಚಿತ ವಿದ್ಯುತ್ ಸೌಲಭ್ಯ!

Posted by Vidyamaana on 2023-10-26 11:44:20 |

Share: | | | | |


ರಾಜ್ಯದ 34 ಸಾವಿರ ಬಡ ದೇವಸ್ಥಾನಗಳಿಗೂ ಶೀಘ್ರವೇ ಸಿಗಲಿದೆ ಗೃಹಜ್ಯೋತಿ ಉಚಿತ ವಿದ್ಯುತ್ ಸೌಲಭ್ಯ!

ಬೆಂಗಳೂರು : ಸರಕಾರದ ಹೊಸ ಯೋಜನೆ ಅನ್ವಯ ರಾಜ್ಯದಲ್ಲಿ ಈಗಾಗಲೇ ಫಲಾನುಭವಿಗಳಿಗೆ ಉಚಿತವಾಗಿ ದೊರೆಯುತ್ತಿರುವ 200 ಯುನಿಟ್ ವಿದ್ಯುತ್, ಮುಂದಿನ ದಿನಗಳಲ್ಲಿ ಸಿ ಗ್ರೇಡ್ ನ ಬಡ ದೇವಸ್ಥಾನಗಳಿಗೂ ವಿಸ್ತರಣೆಯಾಗಲಿದೆ ಎಂದು ಮುಜುರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.


ಯಾವ ದೇವಾಲಯವು 5 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯ ಪಡೆಯುತ್ತಿದೆಯೋ, ಆ ದೇವಾಲಯವು ಈ ಯೋಜನೆಗೆ ಒಳಗಾಗುತ್ತದೆ. ಅಂದಾಜಿನಂತೆ 34,700 ದೇಗುಲಗಳು ಇದರ ಪ್ರಯೋಜನ ಪಡೆದುಕೊಳ್ಳಲಿದೆ ಎನ್ನಲಾಗಿದೆ. ಇಲಾಖೆಯ ವ್ಯಾಪ್ತಿಯಲ್ಲಿ ಎ ಗ್ರೇಡ್‌ನ 175, ಬಿ ಗ್ರೇಡ್‌ನ 330 ಮತ್ತು ಸಿ ಗ್ರೇಡ್‌ನ 34,700 ದೇವಸ್ಥಾನಗಳಿವೆ. ವಾರ್ಷಿಕವಾಗಿ ದೇವಾಲಯದ ಆದಾಯ 25 ಲಕ್ಷ ರೂಪಾಯಿಗೂ ಅಧಿಕವಾಗಿದ್ದರೆ, ಮೂಲಸೌಕರ್ಯ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸ್ಥಳೀಯ ಹಂತದಲ್ಲೇ ಅವಕಾಶಗಳಿವೆ. ಆದರೆ, 1 ರಿಂದ 5 ಲಕ್ಷ ರೂ. ಒಳಗೆ ಆದಾಯ ಪಡೆಯುವ ಸಿ ಗ್ರೇಡ್ ದೇಗುಲಗಳಿಗೆ ಮಾತ್ರ ಯಾವುದೇ ಸೌಕರ್ಯಗಳಿಲ್ಲದೆ ಅಭಿವೃದ್ಧಿ ಕುಂಠಿತಗೊಂಡಿದೆ ಎನ್ನಲಾಗಿದೆ.ಇನ್ನು ರಾಜ್ಯದಲ್ಲಿ ಸಿ ಗ್ರೇಡ್ ದೇವಾಲಯಗಳು ಮಾಸಿಕ ವಿದ್ಯುತ್, ನೀರಿನ ವೆಚ್ಚ ಭರಿಸಲೂ ಪರದಾಡುವ ಸನ್ನಿವೇಶವಿದೆ. ಆದ್ದರಿಂದ ಪ್ರಸ್ತುತ ಚಾಲ್ತಿಯಲ್ಲಿರುವ ಗೃಹಜ್ಯೋತಿ ಯೋಜನೆ ದೇವಸ್ಥಾನಗಳಿಗು ವಿಸ್ತರಣೆಯಾಗಲಿದೆ.


ರಾಜ್ಯದಲ್ಲಿ ಈ ಹಿಂದಿನ ಸರಕಾರಗಳು ಎ ಗ್ರೇಡ್ ದೇವಸ್ಥಾನಗಳ ಆದಾಯದ ಶೇ.20ರಷ್ಟು ಪಾಲನ್ನು ಸಿ ಗ್ರೇಡ್ ದೇಗುಲಗಳ ಅಭಿವೃದ್ಧಿಗೆ ನೀಡಬೇಕೆಂಬ ಯೋಜನೆಯನ್ನು ರೂಪಿಸಿದ್ದವು. ಅವರ ಯಾವ ಯೋಜನೆಯು ಬರಲಿಲ್ಲ. ದೇವಸ್ಥಾನಕ್ಕೆ ಉಪಯೋಗವಾಗುವ ನಿಟ್ಟಿನಲ್ಲಿ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ಸಿ ಗ್ರೇಡ್ ದೇವಸ್ಥಾನಗಳಿಗೂ ಉಚಿತ ವಿದ್ಯುತ್ ಪೂರೈಸಲು ರಾಜ್ಯ ಸರಕಾರ ಮುಂದಾಗಿದೆ.


ಈ ಯೋಜನೆಯ ಕುರಿತು ಶೀಘ್ರವೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗರೆಡ್ಡಿ ತಿಳಿಸಿದ್ದಾರೆ

ಪುತ್ತೂರು :ಇಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ

Posted by Vidyamaana on 2024-04-28 07:20:40 |

Share: | | | | |


ಪುತ್ತೂರು :ಇಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ

ಪುತ್ತೂರು : ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ವರ್ಷಾವಧಿ ನೇಮ ನಡಾವಳಿಯು ಏ.28 ರಂದು ನಡೆಯಲಿದೆ.

ಏ.28 ರಂದು ಬೆಳಿಗ್ಗೆ 6 ಗಂಟೆಯಿಂದ ಶ್ರೀ ದಂಡನಾಯಕ ದೈವದ ವಾಲಸರಿ ನೇಮ ನಡೆಯಲಿದೆ.

ಉತ್ತರಕರ್ನಾಟಕ ಭಾಗದ SSLC ಪರೀಕ್ಷೆಯಲ್ಲಿ ಮಾಸ್ ಕಾಪಿ ಆಗ್ತಿತ್ತು : MLC ಅಭ್ಯರ್ಥಿ ಭೋಜೇಗೌಡ ಆರೋಪ

Posted by Vidyamaana on 2024-05-19 17:56:29 |

Share: | | | | |


ಉತ್ತರಕರ್ನಾಟಕ ಭಾಗದ SSLC ಪರೀಕ್ಷೆಯಲ್ಲಿ ಮಾಸ್ ಕಾಪಿ ಆಗ್ತಿತ್ತು : MLC ಅಭ್ಯರ್ಥಿ ಭೋಜೇಗೌಡ ಆರೋಪ

ಮಂಗಳೂರು : ಪ್ರತಿವರ್ಷ ನಡೆಯುವ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತರ ಕರ್ನಾಟಕದ ಭಾಗದ ಎಲ್ಲಾ ವಿದ್ಯಾರ್ಥಿಗಳು ಮಾಸ್ ಕಾಪಿ ಮಾಡುತ್ತಿದ್ದರು ಎಂದು ಎಂಎಲ್ಸಿ ಬೋಜೆ ಗೌಡ ಗಂಭೀರವಾದಂತ ಆರೋಪವನ್ನು ಮಾಡಿದ್ದಾರೆ.ಮಂಗಳೂರಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಇದು ವಿದ್ಯಾರ್ಥಿಗಳ ಭವಿಷ್ಯದ ವಿದ್ಯಾಭ್ಯಾಸಕ್ಕೆ ಮಾರಕವಾಗುತ್ತಿತ್ತು.ಈ ಹಿನ್ನಲೆ ನೈರುತ್ಯ ಕ್ಷೇತ್ರಗಳಿಗೆ ಪರೀಕ್ಷೆ ಸಮಯ ಅನ್ಯಾಯ ಆಗುತ್ತಿರುವ ಬಗ್ಗೆ ವಿಧಾನ ಪರಿಷತ್‌ನಲ್ಲಿ ಹೇಳಿದ್ದೆ. ಜೊತೆಗೆ ಪರೀಕ್ಷೆ ವೇಳೆ ಸಿಸಿಟಿವಿ ಅಳವಡಿಕೆ ಕುರಿತು ಪರಿಷತ್​​ನಲ್ಲಿ ಆಗ್ರಹಿಸಿದ್ದೆ ಎಂದರು.

ರಿಕ್ಷಾ ಚಾಲಕ ಇಕ್ಬಾಲ್ ಹೃದಯಾಘಾತದಿಂದ ನಿಧನ

Posted by Vidyamaana on 2024-09-03 17:21:30 |

Share: | | | | |


ರಿಕ್ಷಾ ಚಾಲಕ ಇಕ್ಬಾಲ್ ಹೃದಯಾಘಾತದಿಂದ ನಿಧನ

ಮಂಗಳೂರು :: ನಗರದ ಸೆಂಟ್ರಲ್ ರೈಲ್ವೇ ಸ್ಟೇಷನ್ ರಿಕ್ಷಾ ಪಾರ್ಕ್ ನಲ್ಲಿ ಕ್ಯೂ ನಲ್ಲಿರುವಾಗಲೇ ರಿಕ್ಷಾ ಚಾಲಕರೊಬ್ಬರು ಹೃದಯಘಾತದಿಂದ ಮೃತಪಟ್ಟಿರುವ ಘಟನೆ ಸೆ 03 ಮಂಗಳವಾರ ವರದಿಯಾಗಿದೆ.ಮೂಲತಃ ಬಜಾಲ್ ವಿದ್ಯಾ ನಗರದ ನಿವಾಸಿ ಇಕ್ಬಾಲ್ (47) ಮೃತ ಚಾಲಕ. ಪ್ರಸ್ತುತ ಅಡ್ಯಾರ್ ಕಣ್ಣೂರಿನ ಬೋರುಗುಡ್ಡೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು

ಮುಂದಿನ ಪ್ರಧಾನಿ ಆಗುವ ಅವಕಾಶ ಮಹಿಳೆಯ ಪಾಲಿಗೆ – ಕಾಲಜ್ಞಾನ ಭವಿಷ್ಯದಲ್ಲೇನಿದೆ

Posted by Vidyamaana on 2023-08-09 12:50:25 |

Share: | | | | |


ಮುಂದಿನ ಪ್ರಧಾನಿ ಆಗುವ ಅವಕಾಶ ಮಹಿಳೆಯ ಪಾಲಿಗೆ – ಕಾಲಜ್ಞಾನ ಭವಿಷ್ಯದಲ್ಲೇನಿದೆ

     ರಾಷ್ಟ್ರ ರಾಜಕಾರಣಕ್ಕೆ ಸಂಬಂಧಿಸಿದಂತೆ ಸ್ಪೋಟಕ ಭವಿಷ್ಯವೊಂದು ಹೊರಬಿದ್ದಿದ್ದು ದೇಶದ ಮುಂದಿನ ಪ್ರಧಾನಿ ಆಗುವ ಯೋಗ ಒಬ್ಬ ಮಹಿಳೆಯ ಪಾಲಾಗಿದೆಯಂತೆ. ಹೌದು, ನೊಣವಿನಕೆರೆಯಲ್ಲಿ ಕಾಲಜ್ಞಾನಿ ಡಾ. ಯಶ್ವಂತ ಗುರೂಜಿ ಅವರು ಈ ಸ್ಪೋಟಕ ಭವಿಷ್ಯ ನುಡಿದಿದ್ದು, ಮುಂದಿನ ಬಾರಿ ಒಂದು ‘ಸ್ತ್ರೀ ಶಕ್ತಿ’ ಅಂದರೆ ಮಹಿಳೆಯೊಬ್ಬರಿಗೆ ದೇಶದ ಪ್ರಧಾನಿ ಆಗುವ ಯೋಗ ಒದಗಿ ಬರಲಿದೆಯಂತೆ.


ಈ ಭವಿಷ್ಯ ನಿಜವೇ ಆದಲ್ಲಿ ರಾಷ್ಟ್ರರಾಜಕಾರಣದಲ್ಲಿ ಇಂದಿರಾ ಗಾಂಧಿ ಬಳಿಕ ಸದ್ಯದಲ್ಲೇ ಮತ್ತೊಬ್ಬ ಮಹಿಳೆಗೆ ಪ್ರಧಾನಿ ಹುದ್ದೆಗೇರುವ ಆಗುವ ಯೋಗ ಒದಗಿಬರಲಿದೆ.


ಕಾಲಜ್ಞಾನಿ ಡಾ. ಯಶ್ವಂತ ಗುರೂಜಿ ನುಡಿದಿರುವ ಭವಿಷ್ಯದ ಪ್ರಕಾರ, ಮುಂದಿನ ಮಹಾಶಿವರಾತ್ರಿ ಬಳಿಕ ಒಬ್ಬಾಕೆ ಮಹಿಳೆ ಈ ದೇಶವನ್ನು ಆಳ್ತಾರೆ. ಮಹಾಶಿವರಾತ್ರಿ ಬಳಿಕ ರಾಷ್ಟ್ರರಾಜಕಾರಣದಲ್ಲಿ ಬಹುದೊಡ್ಡ ಬದಲಾವಣೆ ನಿಶ್ಚಿತ ಎನ್ನಲಾಗಿದೆ.


ಕಾಲಜ್ಞಾನ ಭವಿಷ್ಯದ ಪ್ರಕಾರ ಮುಂದಿನ ಬಾರಿ ಕೇಂದ್ರದಲ್ಲಿ ಒಂದೇ ಪಕ್ಷ ಅಧಿಕಾರಕ್ಕೇರಲು ಸಾಧ್ಯವಿಲ್ಲವಂತೆ. ಆದರೆ ಮಹಾಶಿವರಾತ್ರಿ ಒಳಗೆ ಲೋಕಸಭೆ ಚುನಾವಣೆ ನಡೆದಲ್ಲಿ ಪ್ರಧಾನಿ ಮೋದಿಗೆ ಮತ್ತೆ ಅಧಿಕಾರಕ್ಕೇರುವ ಯೋಗ ಇದೆ ಎಂದು ಇದೇ ಸಂದರ್ಭದಲ್ಲಿ ಗುರೂಜಿ ತಿಳಿಸಿದ್ದಾರೆ.


ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರಲಿದೆ ಎಂದು ಈ ಹಿಂದೆ ಡಾ. ಯಶ್ವಂತ ಗುರೂಜಿ ನುಡಿದಿದ್ದ ಭವಿಷ್ಯ ನಿಜವಾಗಿತ್ತು.


ಪ್ರಧಾನಿ ಹುದ್ದೆಗೇರಲಿರುವ ಆ ಮಹಿಳೆ ಯಾರು ಮತ್ತು ಅವರು ಯಾವ ಪಕ್ಷಕ್ಕೆ ಸೇರಿದವರು ಎಂಬ ಗುಟ್ಟನ್ನು ಮಕರ ಸಂಕ್ರಮಣದ ಪರ್ವಕಾಲದಲ್ಲಿ ಹೇಳಲಾಗುತ್ತದೆ ಎಂದು ಗುರೂಜಿ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

Recent News


Leave a Comment: