ಶಿರೂರಿನ ಭೂಕುಸಿತದಲ್ಲಿ ಕಾಣೆಯಾದ ಲಾರಿ ನೀರಿನ ಅಡಿಯಲ್ಲಿ ಪತ್ತೆ; ಮಾಹಿತಿ ನೀಡಿದ ಸಚಿವ

ಸುದ್ದಿಗಳು News

Posted by vidyamaana on 2024-07-24 18:06:21 | Last Updated by Vidyamaana on 2024-07-24 18:06:21

Share: | | | | |


ಶಿರೂರಿನ ಭೂಕುಸಿತದಲ್ಲಿ ಕಾಣೆಯಾದ ಲಾರಿ ನೀರಿನ ಅಡಿಯಲ್ಲಿ ಪತ್ತೆ; ಮಾಹಿತಿ ನೀಡಿದ ಸಚಿವ

ಕಾರವಾರ: ಉತ್ತರ ಕನ್ನಡದ ಶಿರೂರಿನ ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಕೋಝಿಕ್ಕೋಡ್ ಮೂಲದ ಅರ್ಜುನ್ ಅವರ ಲಾರಿ ಎಂದು ನಂಬಲಾದ ಟ್ರಕ್ ನದಿಯ ಆಳದಲ್ಲಿ ಇರುವ ಸುಳಿವು ಲಭ್ಯವಾಗಿದೆ. ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಇದನ್ನು ಖಚಿತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಸಚಿವರು ಮಾಹಿತಿ ನೀಡಿದ್ದಾರೆ.

ನದಿಯ ಕೆಳಭಾಗದಲ್ಲಿ ಟ್ರಕ್ ಪತ್ತೆಯಾಗಿದೆ ಎಂದು ತಿಳಿದು ಬಂದಿದ್ದು ಅದಕ್ಕಾಗಿ ಶೋಧ ನಡೆಯುತ್ತಿದೆ.

ಶಿರೂರಿನಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯ ಒಂಬತ್ತನೇ ದಿನದಂದು, ಲಾರಿಯ ಬಗ್ಗೆ ನಿರ್ಣಾಯಕ ಮಾಹಿತಿಯನ್ನು ಪಡೆಯಲಾಗಿದೆ. ಇಂದು ಬೆಳಗ್ಗೆ ಬೂಮ್ ಲೆಂಗ್ತ್ ಕ್ರೇನ್ ಬಂದಿದ್ದು, ತಪಾಸಣೆ ಪುನರಾರಂಭವಾಗಿದೆ. ಈ ಯಂತ್ರವು 60 ಅಡಿ ಆಳದವರೆಗೆ ಹುಡುಕಬಲ್ಲ ಸಾಮರ್ಥ್ಯ ಹೊಂದಿದೆ. ಪೊಲೀಸ್ ವಾಹನದೊಂದಿಗೆ ವಾಹನವನ್ನು ಸ್ಥಳಕ್ಕೆ ತರಲಾಗಿದೆ.

ಈ ಕುರಿತು ಕೃಷ್ಣ ಬೈರೇಗೌಡ Xನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ X ಖಾತೆಯಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.ಜುಲೈ 16 ರಂದು ಬೆಳಿಗ್ಗೆ ಕೋಝಿಕ್ಕೋಡ್‌ನ ಕಂಡ್ಯಕ್ಕಲ್ ಮೂಲದ ಅರ್ಜುನ್ (30) ಕರ್ನಾಟಕ-ಗೋವಾ ಗಡಿಯಲ್ಲಿ ಹಾದು ಹೋಗುವ ಪನ್ವೇಲ್-ಕನ್ಯಾಕುಮಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದ್ದರು. ಭೂಕುಸಿತದಲ್ಲಿ ಟೀ ಅಂಗಡಿ ಮಾಲೀಕ ಸೇರಿದಂತೆ 10 ಜನರು ಸಾವನ್ನಪ್ಪಿದ ಸ್ಥಳದಲ್ಲಿ ಲಾರಿಯ ಜಿಪಿಎಸ್ ಸ್ಥಳವನ್ನು ಕೊನೆಯದಾಗಿ ಪತ್ತೆ ಹಚ್ಚಲಾಯಿತು.

 Share: | | | | |


BIG UPDATE: ವಯನಾಡ್ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 143ಕ್ಕೆ ಏರಿಕೆ, ಸಾವಿರಾರು ಜನರನ್ನು ರಕ್ಷಿಸಿದ ಸೇನೆ

Posted by Vidyamaana on 2024-07-31 08:05:36 |

Share: | | | | |


BIG UPDATE: ವಯನಾಡ್ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 143ಕ್ಕೆ ಏರಿಕೆ, ಸಾವಿರಾರು ಜನರನ್ನು ರಕ್ಷಿಸಿದ ಸೇನೆ

ವಯನಾಡ್: ವಯನಾಡ್ನ ಮೆಪ್ಪಾಡಿ ಬಳಿಯ ಗುಡ್ಡಗಾಡು ಪ್ರದೇಶಗಳಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, ಕನಿಷ್ಠ 143 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 130 ಜನರು ಗಾಯಗೊಂಡಿದ್ದಾರೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.ಮಂಗಳವಾರ ನಾಲ್ಕು ಗಂಟೆಗಳ ಅವಧಿಯಲ್ಲಿ ವಯನಾಡ್ನಲ್ಲಿ ಮೂರು ಭೂಕುಸಿತಗಳು ಸಂಭವಿಸಿದ ಕಾರಣ ಎನ್ಡಿಆರ್‌ಎಫ್ ಮತ್ತು ಸೇನೆ ಸೇರಿದಂತೆ ಅನೇಕ ಏಜೆನ್ಸಿಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.

ಪುತ್ತೂರು: ಅಕ್ರಮ ಗೋಸಾಟ – ತಡೆದ ಹಿಂದೂ ಸಂಘಟನೆಯ ಕಾರ್ಯಕರ್ತರು. ನೂತನ ಕಾಯ್ದೆಯಂತೆ ಮೂವರ ವಿರುದ್ಧ ಪ್ರಕರಣ ದಾಖಲು

Posted by Vidyamaana on 2023-02-13 02:54:01 |

Share: | | | | |


ಪುತ್ತೂರು: ಅಕ್ರಮ ಗೋಸಾಟ – ತಡೆದ ಹಿಂದೂ ಸಂಘಟನೆಯ ಕಾರ್ಯಕರ್ತರು.  ನೂತನ ಕಾಯ್ದೆಯಂತೆ ಮೂವರ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ಅಕ್ರಮ ಗೋ ಸಾಗಾಟವನ್ನು ತಡೆದ ಹಿಂದೂ ಕಾರ್ಯಕರ್ತರು ಜಾನುವಾರುಗಳನ್ನು ಪೊಲೀಸರಿಗೊಪ್ಪಿಸಿದ ಘಟನೆ ಕರ್ನಾಟಕ ಕೇರಳ ಗಡಿಭಾಗದ ಆರ್ಲಪದವಿನಲ್ಲಿ ನಡೆದಿದೆ. ಕೂಡಲೇ ಸ್ಥಳಕ್ಕೆ ತೆರಳಿದ ಹಿಂದೂ ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ (Arun Kumar Putthila) ನೂತನ ಕಾಯ್ದೆಯಂತೆ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ನೂತನ ಗೋಹತ್ಯೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.ಕೇರಳ ನೊಂದಾಣಿಯ ವಾಹನದಲ್ಲಿ ದನ ಹಾಗೂ ಗಂಡು ಕರುವನ್ನು ಅಕ್ರಮವಾಗಿ ಕೇರಳಕ್ಕೆ ಸಾಗಾಟ ಮಾಡುತ್ತಿದ್ದು, ಈ ಬಗ್ಗೆ ತಿಳಿದ ಹಿಂದೂ ಸಂಘಟನೆ ಕಾರ್ಯಕರ್ತರು ವಾಹನವನ್ನು ತಡೆದಿದ್ದಾರೆ.

ಕಾರ್ಯಕರ್ತರು ಈ ಬಗ್ಗೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ರವರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಪಂದಿಸಿದ ಅರುಣ್ ಕುಮಾರ್ ಪುತ್ತಿಲ ರವರು ಸ್ಥಳಕ್ಕೆ ಆಗಮಿಸಿ ಪೊಲೀಸರೊಂದಿಗೆ ಮಾತುಕತೆ ನಡೆಸಿ, ದನಗಳನ್ನು ಪೊಲೀಸರಿಗೊಪ್ಪಿಸಿದ್ದು, ಮುಂದೆ ಈ ಸ್ಥಳದಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.ದನ ಸಾಗಾಟದ ಬಗ್ಗೆ ನರಿಮೊಗರು ಹಾಲು ಉತ್ಪಾದಕರ ಸಹಕಾರಿ ಸಂಘದಿಂದ ನೀಡಲಾದ ಒಪ್ಪಿಗೆ ಪತ್ರವೊಂದಿದ್ದು ಜಾನುವಾರುಗಳನ್ನು ಸಾಕಲು ತೆಗೆದುಕೊಂಡು ಹೋಗುವುದಾದರೆ ಪಶು ವೈದ್ಯರ ಸಹಿ ಆಗಬೇಕಿತ್ತು. ಆದರೇ ಅಕ್ರಮ ಗೋ ಸಾಗಾಟಕ್ಕೆ ಕುಮ್ಮಕ್ಕು ನೀಡಲು ನರಿಮೊಗರು ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಕೃಷ್ಣರಾಜ್ ಎಂಬವರು ಪರ್ಮಿಷನ್ ಕೊಟ್ಟು ಅಧಿಕಾರದ ದುರುಪಯೋಗ ಮಾಡಿರುವುದಾಗಿ ಹಾಗೂ ಗೋ ಹತ್ಯೆಗೆ ಪ್ರಚೋದನೆ ಕೊಟ್ಟದಕ್ಕಾಗಿ ಅವರ ಮೇಲೆ ಎಫ್.ಐ.ಆರ್ ಮಾಡಬೇಕು ಎಂದು ಸಾರ್ವಜನಿಕರು ಮತ್ತು ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಪ್ರಕರಣ ದಾಖಲು: ಪುತ್ತೂರು ತಾಲೂಕು ಪಾಣಾಜೆ ಗ್ರಾಮದ ನೆಲ್ಲಿತ್ತಿಮಾರ್ ಎಂಬಲ್ಲಿ ಅಶೋಕ್‌ ಲೇಲ್ಯಾಂಡ್‌ ಮಿನಿ ಗೂಡ್ಸ್‌ ವಾಹನವೊಂದರಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದಾಗ ಪುತ್ತೂರು ಗ್ರಾಮಾಂತರ ಠಾಣಾ ಸಬ್ ಇನ್ಸ್ ಪೆಕ್ಟರ್ ಶ್ರೀನಾಥ ರೆಡ್ಡಿ ನೇತೃತ್ವದ ತಂಡ ಪರಿಶೀಲಿಸಲಾಗಿ ಜಾನುವಾರು ಸಾಗಾಟಕ್ಕೆ ಯಾವುದೇ ಪರವಾನಿಗೆ ಅಥವಾ ಪಶು ವೈದ್ಯಾಧಿಕಾರಿಯವರ ಪ್ರಮಾಣಪತ್ರ ಇಲ್ಲದೇ ಒಂದು ಹಸು ಮತ್ತು ಒಂದು ಗಂಡು ಕರುವನ್ನು ಸಾಗಿಸುತ್ತಿರುವುದು ಕಂಡುಬಂದಿದೆ.

ಈ ಬಗ್ಗೆ ಕೃತ್ಯದಲ್ಲಿ ತೊಡಗಿದ್ದ ವಿಲ್ಲಿ ಲೂಯಿಸ್ ಡಿ ಸೋಜಾ, ಸಂತೋಷ್ ಡಿ ಸೋಜಾ, ಸಿಲ್ವೆಸ್ಟರ್ ಡಿ ಸೋಜಾ ಎಂಬವರುಗಳನ್ನು ದಸ್ತಗಿರಿ ಮಾಡಿ, ಸದ್ರಿ ವಾಹನ ಹಾಗೂ ಜಾನುವಾರುಗಳನ್ನು ವಶಕ್ಕೆ ಪಡೆಯಲಾಗಿದೆ.

ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 013-2023 ಕಲಂ:- 5, 7, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020ಯಂತೆ ಪ್ರಕರಣ ದಾಖಲಿಸಲಾಗಿದೆ.

ಪುತ್ತೂರು : ಸುಲ್ತಾನ್ ಡೈಮಂಡ್ಸ್ - ಗೋಲ್ಡ್ ಮಳಿಗೆಗೆ ಶಾಸಕ ಅಶೋಕ್‌ ಕುಮಾ‌ರ್ ರೈ ಭೇಟಿ

Posted by Vidyamaana on 2024-03-21 09:50:58 |

Share: | | | | |


ಪುತ್ತೂರು : ಸುಲ್ತಾನ್ ಡೈಮಂಡ್ಸ್ - ಗೋಲ್ಡ್ ಮಳಿಗೆಗೆ ಶಾಸಕ ಅಶೋಕ್‌ ಕುಮಾ‌ರ್ ರೈ ಭೇಟಿ

ಪುತ್ತೂರು: ಬಹುಭಾಷಾ ತಾರೆ ಪ್ರಿಯಾಮಣಿ ಅವರನ್ನು ಪುತ್ತೂರಿಗೆ ಕರೆಸಿಕೊಂಡು ಅದ್ದೂರಿಯಾಗಿ ಪುತ್ತೂರಿನ ಜನರ ಸೇವೆಗೆ ತೆರೆದುಕೊಂಡ ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಮಳಿಗೆಗೆ ಶಾಸಕ ಅಶೋಕ್‌ ಕುಮಾ‌ರ್ ರೈ ಭೇಟಿ ನೀಡಿದರು.

ಉದ್ಘಾಟನೆ ಸಂದರ್ಭ ಅಧಿವೇಶನ ನಡೆಯುತ್ತಿದ್ದ ಕಾರಣ ಭಾಗವಹಿಸಲು ಅಸಾಧ್ಯವಾಗಿತ್ತು. ಆದ್ದರಿಂದ ಇದೀಗ ಮಳಿಗೆಗೆ ಭೇಟಿ ನೀಡಿದರು.

ವಜ್ರ ಮತ್ತು ಚಿನ್ನದ ಆಭರಣಗಳ ವಿವಿಧ ವಿನ್ಯಾಸಗಳನ್ನು ಕಂಡ ಶಾಸಕ ಅಶೋಕ್ ಕುಮಾರ್ ರೈ ಅವರು ಮಳಿಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬ್ರಾಂಚ್ ಮ್ಯಾನೇಜರ್ ಕೆ.ಎಸ್ ಮುಸ್ತಫಾ ಕಕ್ಕಿಂಜೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಹಮ್ರಾಝ್, ಪವನ್, ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Viral Video: ಮರಾಠಿ ಚಿತ್ರ ನಿರ್ದೇಶಕಿ ಮನೆಗೆ ನುಗ್ಗಿದ ಕಳ್ಳ; ಆರನೇ ಮಹಡಿಯಲ್ಲಿದ್ದ ಮನೆಗೆ ಕಳ್ಳ ಬಂದು, ಹೋಗಿದ್ದು ಹೇಗೆ ವಿಡಿಯೋ ನೋಡಿ

Posted by Vidyamaana on 2024-08-29 06:12:29 |

Share: | | | | |


Viral Video: ಮರಾಠಿ ಚಿತ್ರ ನಿರ್ದೇಶಕಿ ಮನೆಗೆ ನುಗ್ಗಿದ ಕಳ್ಳ; ಆರನೇ ಮಹಡಿಯಲ್ಲಿದ್ದ ಮನೆಗೆ ಕಳ್ಳ ಬಂದು, ಹೋಗಿದ್ದು ಹೇಗೆ ವಿಡಿಯೋ ನೋಡಿ

ಮರಾಠಿ ಚಲನಚಿತ್ರ (Marathi film) ಮತ್ತು ದೂರದರ್ಶನ ನಿರ್ದೇಶಕಿ (TV director) ಸ್ವಪ್ನಾ ವಾಘಮಾರೆ ಜೋಶಿ (Swapna Waghmare Joshi) ಅವರ ಮನೆಗೆ ಕಳ್ಳನೊಬ್ಬ ಪ್ರವೇಶಿಸಿದ್ದು, ಸಾಕುನಾಯಿ ನೀಡಿದ ಎಚ್ಚರಿಕೆಯಿಂದ ಕಳ್ಳ ಓಡಿ ಹೋಗುವಂತಾಯಿತು ಎಂಬುದಾಗಿ ಸ್ವಪ್ನಾ ವಾಘಮಾರೆ ಅವರ ಆಪ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ (Viral Video) ಸಹಿತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಮನೆಯಲ್ಲಿ ಸಾಕು ಪ್ರಾಣಿಗಳಿರುವುದು ಯಾಕೆ ಅಗತ್ಯ ಎಂಬುದನ್ನೂ ಅವರು ಈ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಇನ್ ಸ್ಟಾ ಗ್ರಾಮ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲು ವಾಘಮಾರೆ ಅವರು ಚಲನಚಿತ್ರ ನಿರ್ಮಾಪಕ ಅಶೋಕ್ ಪಂಡಿತ್ ಅವರಿಗೆ ಕರೆ ಮಾಡಿ ರಾತ್ರಿ 3 ಗಂಟೆಯ ಸುಮಾರಿಗೆ ತಮ್ಮ ಮನೆಯೊಳಗೆ ನಡೆದ ಘಟನೆಗಳ ಬಗ್ಗೆ ಹೇಳಿಕೊಂಡಿದ್ದಾರೆ ಎಂಬುದನ್ನು ಅಶೋಕ್ ವಿವರಿಸಿದ್ದಾರೆ.

ಪೋಸ್ಟ್‌ನ ಪ್ರಕಾರ ನಿರ್ದೇಶಕರು ಲಿವಿಂಗ್ ರೂಮ್‌ನಲ್ಲಿ ಅಳವಡಿಸಲಾದ ಸಿಸಿಟಿವಿ ದೃಶ್ಯಗಳಲ್ಲಿ ಸಂಪೂರ್ಣ ವಿಡಿಯೋ ಸೆರೆಯಾಗಿದೆ. ಕಳ್ಳನೊಬ್ಬ ಪೈಪ್ ಮೂಲಕ ಹತ್ತಿಕೊಂಡು ಬಂದು ಆರನೇ ಮಹಡಿಯಲ್ಲಿರುವ ಅಪಾರ್ಟ್ ಮೆಂಟ್ ನೊಳಗೆ ತೆರೆದ ಕಿಟಕಿಯ ಮೂಲಕ ಪ್ರವೇಶಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಅವನು ಕದಿಯಲು ದುಬಾರಿ ವಸ್ತುಗಳನ್ನು ಹುಡುಕುತ್ತಾ ಮನೆಯೊಳಗೇ ಮುಕ್ತವಾಗಿ ತಿರುಗಾಡುತ್ತಿದ್ದ. ಸ್ವಪ್ನಾ ಮತ್ತು ಅವರ ತಾಯಿ ಮಲಗಿದ್ದ ಕೋಣೆಗೆ ಪ್ರವೇಶಿಸಲು ಪ್ರಯತ್ನಿಸಿದನು. ಅಲ್ಲಿದ್ದವರು ಕೊಂಚ ಎಚ್ಚರಗೊಂಡಂತೆ ಆಗಿದ್ದರಿಂದ ಒಳಗೆ ಹೋಗಲಿಲ್ಲ. ನಿರ್ದೇಶಕರ ಮಗಳ ಪರ್ಸ್‌ನಿಂದ 6,000 ರೂಪಾಯಿ ಕದ್ದಿದ್ದಾನೆ.

ಇನ್ಫೋಸಿಸ್ ಅಧ್ಯಕ್ಷ ಮೋಹಿತ್ ಜೋಶಿ ರಾಜೀನಾಮೆ : ಟೆಕ್ ಮಹೀಂದ್ರಾ ಎಂ ಡಿ , ಸಿ ಇ ಓ ಆಗಿ ಸೇರ್ಪಡೆ

Posted by Vidyamaana on 2023-03-11 09:56:11 |

Share: | | | | |


ಇನ್ಫೋಸಿಸ್ ಅಧ್ಯಕ್ಷ ಮೋಹಿತ್ ಜೋಶಿ ರಾಜೀನಾಮೆ : ಟೆಕ್ ಮಹೀಂದ್ರಾ ಎಂ ಡಿ , ಸಿ ಇ ಓ ಆಗಿ ಸೇರ್ಪಡೆ

 ನವದೆಹಲಿ :ಇನ್ಫೋಸಿಸ್‌ನ ಅಧ್ಯಕ್ಷ ಮೋಹಿತ್ ಜೋಶಿ (Infosys President Mohit Joshi) ಅವರು ಪ್ರತಿಸ್ಪರ್ಧಿ ಟೆಕ್ ಮಹೀಂದ್ರಾಗೆ ಸೇರಲು ಸಂಸ್ಥೆಗೆ ರಾಜೀನಾಮೆ ನೀಡಿದ್ದಾರೆ. 2000 ರಿಂದ ಇನ್ಫೋಸಿಸ್‌ನಲ್ಲಿ ಉದ್ಯೋಗಿಯಾಗಿರುವ ಮೋಹಿತ್ ಜೋಶಿ ಅವರನ್ನು ಟೆಕ್ ಮಹೀಂದ್ರಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಎಂದು ಹೆಸರಿಸಲಾಗಿದೆ.ಡಿಸೆಂಬರ್ 20 ರಿಂದ ಜೋಶಿ ಹೊಸ ಪಾತ್ರವನ್ನು ವಹಿಸಿಕೊಳ್ಳಲಿದ್ದಾರೆ.

ಭಾರತೀಯ ಐಟಿ ವಲಯದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಲ್ಲಿ ಒಬ್ಬರಾಗಿರುವ ಗುರ್ನಾನಿ ಅವರ ಸ್ಥಾನವನ್ನು ಮೋಹಿತ್ ಜೋಶಿ ಅವರು ವಹಿಸಲಿದ್ದಾರೆ. “ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ (ನಿಯೋಜಿತ) ಶ್ರೀ ಮೋಹಿತ್ ಜೋಶಿ ಅವರ ನೇಮಕಾತಿಯು ಕಂಪನಿಗೆ ಸೇರುವ ದಿನಾಂಕ 19 ಡಿಸೆಂಬರ್, 2023 ರವರೆಗೆ ಜಾರಿಯಲ್ಲಿರುತ್ತದೆ” ಎಂದು ಕಂಪನಿಯ ಹೇಳಿಕೆಯೊಂದು ತಿಳಿಸಿದೆ. ಮೋಹಿತ್ ಜೋಶಿ ಅವರು ಮಾರ್ಚ್ 11 ರಿಂದ ರಜೆಯಲ್ಲಿರುತ್ತಾರೆ ಮತ್ತು ಕಂಪನಿಯಲ್ಲಿ ಕೆಲಸ ಮಾಡುವ ಕೊನೆಯ ದಿನ ಜೂನ್ 9, 2023 ಎಂದು ಇನ್ಫೋಸಿಸ್ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ಗೆ ಹೇಳಿಕೆಯಲ್ಲಿ ತಿಳಿಸಿದೆ.ಮುಂದಿನ ಪೀಳಿಗೆಯ ಡಿಜಿಟಲ್ ಸೇವೆಗಳು ಮತ್ತು ಸಲಹಾ ಕ್ಷೇತ್ರದಲ್ಲಿ ಜಾಗತಿಕ ಮುಂಚೂಣಿಯಲ್ಲಿರುವ ಇನ್ಫೋಸಿಸ್ ಇಂದು ಅಧ್ಯಕ್ಷ ಮೋಹಿತ್ ಜೋಶಿ ಅವರ ರಾಜೀನಾಮೆಯನ್ನು ಪ್ರಕಟಿಸಿದೆ. ಮಾರ್ಚ್ 11, 2023 ರಿಂದ ಅವರು ರಜೆಯಲ್ಲಿರುತ್ತಾರೆ ಮತ್ತು ಕಂಪನಿಯೊಂದಿಗೆ ಅವರ ಕೊನೆಯ ದಿನಾಂಕ ಜೂನ್ 09, 2023 ಆಗಿರುತ್ತದೆ. ನಿರ್ದೇಶಕರ ಮಂಡಳಿಯು ಮೋಹಿತ್ ಜೋಷಿ ಅವರು ಸಲ್ಲಿಸಿದ ಸೇವೆಗಳಿಗೆ ಮತ್ತು ಕಂಪನಿಗೆ ಅವರು ನೀಡಿದ ಕೊಡುಗೆಗಳಿಗಾಗಿ ತಮ್ಮ ಆಳವಾದ ಮೆಚ್ಚುಗೆಯನ್ನು ದಾಖಲಿಸಿದ್ದಾರೆ. . ಇದು ನಿಮ್ಮ ಮಾಹಿತಿ ಮತ್ತು ದಾಖಲೆಗಳಿಗಾಗಿ, "ಎಂದು ಅದು ಪ್ರಕಟಣೆಯಲ್ಲಿ ತಿಳಿಸಿದೆ.

ಪುತ್ತೂರು - ಸುಳ್ಯ ಹೆದ್ದಾರಿ ಸಂಚಾರಕ್ಕೆ ಮುಕ್ತ

Posted by Vidyamaana on 2024-07-30 16:01:16 |

Share: | | | | |


ಪುತ್ತೂರು - ಸುಳ್ಯ ಹೆದ್ದಾರಿ ಸಂಚಾರಕ್ಕೆ ಮುಕ್ತ

ಪುತ್ತೂರು: ಕುಂಬ್ರದ ಮೂಲಕ ಹಾದುಹೋಗುವ ಮಾಣಿ – ಮೈಸೂರು ಹೆದ್ದಾರಿ ವಾಹನ ಸಂಚಾರಕ್ಕೆ ತೆರೆದುಕೊಂಡಿದೆ.ಶೇಖಮಲೆಯಲ್ಲಿ ಗುಡ್ಡ ಕುಸಿತಗೊಂಡ ಬಳಿಕ, ಕೆಲ ಸಮಯಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು.

Recent News


Leave a Comment: