ಶಿರೂರು ಗುಡ್ಡ ಕುಸಿತ ಪ್ರಕರಣ : ನಾಪತ್ತೆಯಾಗಿದ್ದ ಲಾರಿ ಪತ್ತೆ, ಚಾಲಕ ಅರ್ಜುನನಿಗೆ ಮುಂದುವರೆದ ಶೋಧ ಕಾರ್ಯ!

ಸುದ್ದಿಗಳು News

Posted by vidyamaana on 2024-07-24 19:54:18 |

Share: | | | | |


ಶಿರೂರು ಗುಡ್ಡ ಕುಸಿತ ಪ್ರಕರಣ : ನಾಪತ್ತೆಯಾಗಿದ್ದ ಲಾರಿ ಪತ್ತೆ, ಚಾಲಕ ಅರ್ಜುನನಿಗೆ ಮುಂದುವರೆದ ಶೋಧ ಕಾರ್ಯ!

ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ 66ರ ಬಳಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಲಾರಿ ಇದೀಗ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಆದರೆ ಲಾರಿ ಚಾಲಕ ಅರ್ಜುನ ಇನ್ನೂ ಪತ್ತೆ ಆಗಿರದ ಕಾರಣ ಶೋಧ ಕಾರ್ಯ ಮುಂದುವರೆದಿದೆ.

ಕಳೆದ 8 ದಿನಗಳಿಂದ ಶಿರೂರು ಗುಡ್ಡ ಕುಸಿತ ಸ್ಥಳದಲ್ಲಿ ಎನ್ ಡಿ ಆರ್ ಎಫ್ ಎಚ್ ಡಿ ಆರ್ ಎಫ್ ತಂಡ ಸೇರಿದಂತೆ ಮಿಲ್ಟ್ರಿ ತಂಡ ಕೂಡ ಮಣ್ಣು ತೆರವು ಕಾರ್ಯಾಚರಣೆಗೆ ಆಗಮಿಸಿತ್ತು. ಈ ವೇಳೆ ನಿನ್ನೆಯವರೆಗೆ 8 ಮೃತದೇಹಗಳನ್ನು ಪತ್ತೆ ಮಾಡಲಾಗಿದ್ದು, ಇನ್ನೂ ಹಲವರು ಮಣ್ಣಿನ ಅಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆಇದೀಗ ಗಂಗಾವಳಿ ನದಿಯಲ್ಲಿ ನಾಪತ್ತೆಯಾಗಿದ್ದ ಲಾರಿ ಪತ್ತೆಯಾಗಿದೆ. ಟಿಂಬರ್ ಲಾರಿ ನದಿಯಲ್ಲಿ ಪತ್ತೆ ಆಗಿರುವ ಸ್ಥಿತಿಯಲ್ಲಿ ಇದೆ.ಕೇರಳ ಮೂಲದ ಲಾರಿ ನದಿಯಲ್ಲಿ ಇದೀಗ ಪತ್ತೆಯಾಗಿದೆ. ಲಾರಿ ಜೊತೆಗೆ ಚಾಲಕ ಅರ್ಜುನ್ ನಾಪತ್ತೆಯಾಗಿದ್ದರು. ಲಾರಿ ಪತ್ತೆಯಾದ ಸ್ಥಳಕ್ಕೆ ಡಿಸಿ ಲಕ್ಷ್ಮಿಪ್ರಿಯ ಭೇಟಿ ನೀಡಿದ್ದಾರೆ. ಕಾರವಾರದ ಶಿರೂರು ಬಳಿ ಗುಡ್ಡ ಕುಸಿತ ಪ್ರಕರಣದ ಬಗ್ಗೆ ಇದೀಗ ಗಂಗಾವಳಿ ನದಿಯಲ್ಲಿ ನಾಪತ್ತೆಯಾಗಿದ್ದ ಲಾರಿ ಪತ್ತೆಯಾಗಿದೆ

 Share: | | | | |


ಸುಳ್ಯ : ಕಾರು ಡಿಯೋ ನಡುವೆ ಮುಖಾಮುಖಿ ಡಿಕ್ಕಿ ನಜ್ಜು ಗುಜ್ಜಾದ ದ್ವಿಚಕ್ರ ವಾಹನ!

Posted by Vidyamaana on 2023-02-19 09:58:08 |

Share: | | | | |


ಸುಳ್ಯ : ಕಾರು ಡಿಯೋ ನಡುವೆ ಮುಖಾಮುಖಿ ಡಿಕ್ಕಿ ನಜ್ಜು ಗುಜ್ಜಾದ ದ್ವಿಚಕ್ರ ವಾಹನ!

 ಸುಳ್ಯ :ಕಾರು ಮತ್ತು ಡಿಯೋ ಮುಖಾಮುಖಿ ಡಿಕ್ಕಿಯಾದ ಘಟನೆ ಫೆ .19 ಭಾನುವಾರ ಸುಳ್ಯದ ಕೋಲ್ಚಾರ್ ಸಮೀಪ ಸಂಭವಿಸಿದ್ದು ಇಬ್ಬರಿಗೆ ಗಾಯವಾಗಿದೆ ಎಂದು ವರದಿಯಾಗಿದೆ.

ಕೋಲ್ಚಾರು ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಕಾರಿಗೆ ಸ್ಕೂಟರ್ ಡಿಕ್ಕಿಯಾದ ಪರಿಣಾಮ , ಸ್ಕೂಟರ್ ಸಂಪೂರ್ಣ ನಜ್ಜು-ಗುಜ್ಜಾಗಿದೆ. ಇಬ್ಬರು ದ್ವಿಚಕ್ರ ಸವಾರರಾದ ಜತೀನ್ ಮತ್ತು ಮೋಹನ್ ಇವರಿಗೆ ಗಾಯಗಳಾದ ಬಗ್ಗೆ ವರದಿಯಾಗಿದೆ.

ಗಾಯಾಳುಗಳನ್ನು ಕೊಲ್ಲಮೊಗ್ರದ ಸತೀಶ್ ಮತ್ತು ಸಹೋದರರು ಸುಳ್ಯದ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಮರ ಬಿದ್ದು ಮನೆ ಸಂಪೂರ್ಣ ಜಖಂ

Posted by Vidyamaana on 2023-07-06 08:04:52 |

Share: | | | | |


ಮರ ಬಿದ್ದು ಮನೆ ಸಂಪೂರ್ಣ ಜಖಂ

ಪುತ್ತೂರು: ಭಾರೀ ಮಳೆಗೆ ಮರ ಬಿದ್ದು ಸಂಪೂರ್ಣ ಹಾನಿಗೊಳಗಾಗಿದ್ದ ಮನೆಯನ್ನು ಶಾಸಕ ಅಶೋಕ್ ರೈ ಅಬಿಮಾನಿ ಬಳಗದವರು 24 ಗಂಟೆಯೊಳಗೆ ದುರಸ್ಥಿ ಮಾಡಿಸಿದ್ದಾರೆ.

ಮುಂಡೂರು ಗ್ರಾಮದ ಸಿಂಹವನ ನಿವಾಸಿ ಮಲ್ಲು ಎಂಬವರ ಮನೆಯ ಅಂಗಳದಲ್ಲಿದ್ದ ಭಾರೀ ಗಾತ್ರದ ಮರವೊಂದು ಮುರಿದು ಬಿದ್ದು ಮಲ್ಲು ಅವರ ಸಿಮೆಂಟ್ ಶೀಟ್ ಆಳವಡಿಸಲಾಗಿದ್ದ ಮನೆ ಸಂಪೂರ್ಣ ಜಂಖಂಗೊಂಡಿತ್ತು. ಮನೆ ವಾಸ್ತವ್ಯಕ್ಕೆ ಅಯೋಗ್ಯವಾಗಿತ್ತು. ರಾತ್ರೋ ರಾತ್ರಿ ಮರವನ್ನು ಅಬಿಮಾನಿ ಬಳಗದವರು ತೆರವು ಮಡಿದ ಬಳಿಕ ಮನೆಯನ್ನು ದುರಸ್ಥಿಮಾಡಿಸಿದ್ದಾರೆ. ಘಟನ ಸ್ಥಳಕ್ಕೆ ಪುತ್ತೂರು ತಹಶಿಲ್ದಾರ್ ಶಿವಶಂಕರ್ ಸೇರಿದಂತೆ ಅದಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಮಳೆಗೆ ಮನೆ ಹಾನಿಯಾದರೆ ತಕ್ಷಣ ಮನೆಯನ್ನು ದುರಸ್ಥಿ ಮಾಡುವಂತೆ ಈಗಾಗಲೇ ಅಧಿಕಾರಿಗಳಿಗೆ ಶಾಸಕರು ಸೂಚನೆಯನ್ನು ನೀಡಿದ್ದು ಅದರಂತೆ ಅಬಿಮಾನಿ ಬಳಗದವರು ಮನೆಯನ್ನು ದುರಸ್ಥಿ ಮಾಡಿದ್ದಾರೆ. ತಂಡದಲ್ಲಿ ಸಿಂಹವನ ಕಾಂಗ್ರೆಸ್ ಬೂತ್ ಅಧ್ಯಕ್ಷರಾದ ದೇವರಾಜ, ಆನಂದ ಸಿಂಹವನ, ಶಿವು ಸಿಂಹವನ, ರವಿ, ಪುಟ್ಟಪ್ಪ ನಾಯ್ಕ ಸುಂದರ ನಾಯ್ಕ ಮತ್ತಿತರರು ಮನೆ ದುರಸ್ಥಿ ಮಾಡುವಲ್ಲಿ ನೆರವಾದರು.

ಕರಾವಳಿಯಲ್ಲಿ ಮಳೆ ಅಬ್ಬರ: ಉಭಯ ಜಿಲ್ಲೆಗಳಲ್ಲಿ ಜುಲೈ 27 ರಂದು ಶಾಲೆಗಳಿಗೆ ರಜೆ

Posted by Vidyamaana on 2023-07-26 15:17:13 |

Share: | | | | |


ಕರಾವಳಿಯಲ್ಲಿ ಮಳೆ ಅಬ್ಬರ: ಉಭಯ ಜಿಲ್ಲೆಗಳಲ್ಲಿ ಜುಲೈ 27 ರಂದು ಶಾಲೆಗಳಿಗೆ ರಜೆ

ಮಂಗಳೂರು/ಉಡುಪಿ : ಕರಾವಳಿಯಲ್ಲಿ ಕಳೆದ ಕೆಲ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಮುಂದುವರಿದ ಕಾರಣ ಜುಲೈ 27 ರಂದು (ಗುರುವಾರ) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಿಸಲಾಗಿದೆ.



ಉಡುಪಿ ಜಿಲ್ಲೆಯಲ್ಲಿ ಅಂಗನವಾಡಿ, ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ. ದಕ್ಷಿಣ ಕನ್ನಡದಲ್ಲಿ ಪ್ರೌಢ ಶಾಲೆಗಳವರೆಗೆ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ.


ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಹೆಚ್ಚು ಮಳೆಯಾಗುತ್ತಿರುವುದರಿಂದ ಜುಲೈ 27 ರಂದು ದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.ಮಂಗಳೂರು/ಉಡುಪಿ : ಕರಾವಳಿಯಲ್ಲಿ ಕಳೆದ ಕೆಲ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಮುಂದುವರಿದ ಕಾರಣ ಜುಲೈ 27 ರಂದು (ಗುರುವಾರ) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಿಸಲಾಗಿದೆ.


ಉಡುಪಿ ಜಿಲ್ಲೆಯಲ್ಲಿ ಅಂಗನವಾಡಿ, ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ. ದಕ್ಷಿಣ ಕನ್ನಡದಲ್ಲಿ ಪ್ರೌಢ ಶಾಲೆಗಳವರೆಗೆ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ.


ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಹೆಚ್ಚು ಮಳೆಯಾಗುತ್ತಿರುವುದರಿಂದ ಜುಲೈ 27 ರಂದು ದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದ ಸ್ಥಳ ಪತ್ತೆಹಚ್ಚಿದ ಬೆಂಗಳೂರು ಪೊಲೀಸರು

Posted by Vidyamaana on 2023-11-26 22:18:38 |

Share: | | | | |


ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದ ಸ್ಥಳ ಪತ್ತೆಹಚ್ಚಿದ ಬೆಂಗಳೂರು ಪೊಲೀಸರು

ಮಂಡ್ಯ, ನ.26: ಬೆಂಗಳೂರು ನಗರದ ಬೈಯಪ್ಪನಹಳ್ಳಿ ಠಾಣಾ ಪೊಲೀಸರು ಮಂಡ್ಯ ತಾಲೂಕಿನ ಹುಲ್ಲೇನಹಳ್ಳಿ ಹಾಡ್ಯದಲ್ಲಿ ಪತ್ತೆಹಚ್ಚಿದ ಆಲೆಮನೆಯಲ್ಲಿ ಲಿಂಗ ಪತ್ತೆ ಮಾತ್ರವಲ್ಲ, ಅಲ್ಲಿ ಹೆಣ್ಣು ಭ್ರೂಣ ಹತ್ಯೆ(Female Feticide) ಕೂಡ ಮಾಡಲಾಗುತ್ತಿತ್ತು ಎಂಬ ವಿಚಾರ ಬಯಲಿಗೆ ಬಂದಿದೆ.


ಅಲೆಮನೆ ಸುತ್ತಲೂ ಕಬ್ಬಿನಗದ್ದೆಗಳು, ಓಡಾಡಲು ಬಂಡಿಜಾಡು. ಆರೋಪಿ ನವೀನ್​ಗೆ ಸಂಬಂಧಿ ಜಾಗ ಇದಾಗಿದೆ. ಕಬ್ಬಿನಗದ್ದರೆ ಒಳಭಾಗದ ಅಲೆಮನೆ ಪಕ್ಕಸಲ್ಲಿ ಭ್ರೂಣ ಪತ್ತೆ ಜೊತೆ ಹೆಣ್ಣು ಭ್ರೂಣ ಹತ್ಯೆ ಕೂಡ ನಡೆಯುತ್ತಿತ್ತು. ಸಣ್ಣ ಸುಳಿವೂ ಬಿಡದೆ ಆಲೆಮನೆಯಲ್ಲಿ ಕಳೆದ 2 ವರ್ಷಗಳಿಂದ ಭ್ರೂಣ ಲಿಂಗ ಪತ್ತೆ ದಂಧೆ ನಡೆಯುತ್ತಿತ್ತು.ಆರೋಪಿಗಳು ಮಧ್ಯವರ್ತಿಗಳಿಂದ ಗರ್ಭಿಣಿಯರ ಸಂಪರ್ಕ‌ ಮಾಡುತ್ತಿದ್ದರು. ಆಲೆಮನೆ ಕೊಠಡಿವೊಂದರಲ್ಲಿ ಸ್ಕ್ಯಾನಿಂಗ್ ಮಷಿನ್ ಇಡಲಾಗಿತ್ತು. ತಮ್ಮ ಸ್ವಂತ ವಾಹನದಲ್ಲಿ ಆಲೆಮನೆಗೆ ಕರೆತಂದು ಸ್ಕ್ಯಾನಿಂಗ್ ನಡೆಸುತ್ತಿದ್ದರು. ಸ್ಕ್ಯಾನಿಂಗ್ ವೇಳೆ ಹೆಣ್ಣು ಭ್ರೂಣ ಎಂದು ತಿಳಿದಾಕ್ಷಣವೇ ಅಬಾರ್ಷನ್ ಮಾಡಲಾಗುತ್ತದೆ.


ಈ ಬಗ್ಗೆ ಆರೋಪಿಗಳು ತನಿಖೆ ವೇಳೆ ಭಯಾನಕ ಸಂಗತಿ ಬಾಯಿ ಬಿಟ್ಟಿದ್ದಾರೆ. ಪೊಲೀಸರು ಈಗಾಗಲೇ ಮಂಡ್ಯದ‌ ನಯನ್, ನವೀನ್ ಹಾಗೂ ಶಿವನಂಜೇಗೌಡ, ವಿರೇಶ್ ಎಂಬವರನ್ನು ಬಂಧಿಸಿದ್ದು, ತನಿಖೆ ಮುಂದುವರಿದಂತೆ ಇಬ್ಬರು ವೈದ್ಯರು ಸೇರಿದಂತೆ ಐವರು ಅರೆಸ್ಟ್ ಆಗಿದ್ದಾರೆ. ಚೆನೈ ಮೂಲದ ಡಾ ತುಳಸಿರಾಮ್, ಮೈಸೂರಿನ ಡಾ. ಚಂದನ್ ಬಲ್ಲಾಳ್, ಚಂದನ್ ಪತ್ನಿ ಮೀನಾ, ಲ್ಯಾಬ್ ಟೆಕ್ನಿಶಿಯನ್ ನಿಸ್ಸಾರ್, ರಿಸಪ್ಷನಿಸ್ಟ್ ರಿಜ್ಮಾ ಬಂಧಿತರಾಗಿದ್ದಾರೆ.

ಅದ್ವೈತ್ ಜೆಸಿಬಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾ‌ನ

Posted by Vidyamaana on 2023-10-09 16:10:07 |

Share: | | | | |


ಅದ್ವೈತ್ ಜೆಸಿಬಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾ‌ನ


ಮಂಗಳೂರು: ಪ್ರತಿಷ್ಠಿತ ಕಂಪೆನಿಗಳಲ್ಲೊಂದಾದ ಅದ್ವೈತ್ ಜೆಸಿಬಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಸೇಲ್ಸ್ ಎಕ್ಸಿಕ್ಯೂಟಿವ್, ಸೀನಿಯರ್ ಸೇಲ್ಸ್ ಎಕ್ಸಿಕ್ಯೂಟಿವ್, ಸೇಲ್ಸ್ ಮ್ಯಾ‌ನೇಜರ್ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಮಂಗಳೂರು, ಮೈಸೂರು, ಹಾಸನ, ಶಿವಮೊಗ್ಗ, ಕುಮ್ಟ, ಕುಂದಾಪುರದಲ್ಲಿ ಖಾಲಿ ಹುದ್ದೆಗಳಿದ್ದು, ಆಸಕ್ತರು ಸ್ವವಿವರವನ್ನು ಕಳುಹಿಸಿಕೊಡಲು ಪ್ರಕಟಣೆ ತಿಳಿಸಿದೆ.


ಸಂಪರ್ಕಕ್ಕೆ :Mail ID:

non

minho@

non

vaithjcb.com/Call: 7349768734

ಪಕ್ಷದ ಸದಸ್ಯತ್ವ ಅಭಿಯಾನದ ಕಾರ್ಯಕ್ರಮದಡಿ ಕಾಪಿಕಾಡ್ ಮನೆಗೆ ಭೇಟಿ ನೀಡಿದ್ದು ನಿಜ : ಸತೀಶ್ ಕುಂಪಲ ಸ್ಪಷ್ಟನೆ

Posted by Vidyamaana on 2024-09-07 08:12:14 |

Share: | | | | |


ಪಕ್ಷದ ಸದಸ್ಯತ್ವ ಅಭಿಯಾನದ ಕಾರ್ಯಕ್ರಮದಡಿ ಕಾಪಿಕಾಡ್ ಮನೆಗೆ ಭೇಟಿ ನೀಡಿದ್ದು ನಿಜ : ಸತೀಶ್ ಕುಂಪಲ ಸ್ಪಷ್ಟನೆ

ಪುತ್ತೂರು  : ತುಳು ಚಿತ್ರನಟ,ನಿರ್ದೇಶಕ ದೇವದಾಸ್ ಕಾಪಿಕಾಡರ ಬಿಜೆಪಿ ಪಕ್ಷ ಸೇರ್ಪಡೆ ವಿವಾದ ಕುರಿತು ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಅವರು ಸ್ಪಷ್ಟನೆ ನೀಡಿದ್ದು ಪಕ್ಷದ ಸದಸ್ಯತ್ವ ಅಭಿಯಾನದ ಕಾರ್ಯಕ್ರಮದಡಿ ದೇವದಾಸ್ ಕಾಪಿಕಾಡ್ ಮನೆಗೆ ಭೇಟಿ ನೀಡಿದ್ದು ನಿಜ ಎಂದಿದ್ದಾರೆ.

ಮಾದ್ಯಮಗಳಿಗೆ ಈ ಬಗ್ಗೆ ಹೇಳಿಕೆ ನೀಡಿದ ಅವರು ಪಕ್ಷದ ಸದಸ್ಯತ್ವ ಅಭಿಯಾನದ ಕಾರ್ಯಕ್ರಮದಡಿ ದೇವದಾಸ್ ಕಾಪಿಕಾಡ್ ಮನೆಗೆ ಭೇಟಿ ನೀಡಿದ್ದು ನಿಜ. ಪಕ್ಷದ ಸದಸ್ಯನಾಗಿ ಮಾಡುವ ಉದ್ಧೇಶದಿಂದ ಅವರ ಮನೆಗೆ ಹಿರಿಯರು ಭೇಟಿ ನೀಡಿದ್ದರು. ಸದಸ್ಯತ್ವ ಅಭಿಯಾನದ ವಿಚಾರದಲ್ಲಿ ಅವರು ಪೂರಕವಾಗಿ ಸ್ಪಂದಿಸಿದ್ದರು. ಪಕ್ಷಾತೀತವಾಗಿರುವ ಸೆಲೆಬ್ರೆಟಿಗಳ ಮನೆಗೆ ಪಕ್ಷದ ಮುಖಂಡರು ಭೇಟಿಯಾಗೋದು ಸಾಮಾನ್ಯವಾಗಿದ್ದು ಅವರು ಪಕ್ಷದ ಕಾರ್ಯಚಟುವಟಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುತ್ತಾರೆ ಎಂದಲ್ಲ.

Recent News


Leave a Comment: