ಶಿರೂರಿನ ಭೂಕುಸಿತದಲ್ಲಿ ಕಾಣೆಯಾದ ಲಾರಿ ನೀರಿನ ಅಡಿಯಲ್ಲಿ ಪತ್ತೆ; ಮಾಹಿತಿ ನೀಡಿದ ಸಚಿವ

ಸುದ್ದಿಗಳು News

Posted by vidyamaana on 2024-07-24 18:06:21 | Last Updated by Vidyamaana on 2024-07-24 18:06:21

Share: | | | | |


ಶಿರೂರಿನ ಭೂಕುಸಿತದಲ್ಲಿ ಕಾಣೆಯಾದ ಲಾರಿ ನೀರಿನ ಅಡಿಯಲ್ಲಿ ಪತ್ತೆ; ಮಾಹಿತಿ ನೀಡಿದ ಸಚಿವ

ಕಾರವಾರ: ಉತ್ತರ ಕನ್ನಡದ ಶಿರೂರಿನ ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಕೋಝಿಕ್ಕೋಡ್ ಮೂಲದ ಅರ್ಜುನ್ ಅವರ ಲಾರಿ ಎಂದು ನಂಬಲಾದ ಟ್ರಕ್ ನದಿಯ ಆಳದಲ್ಲಿ ಇರುವ ಸುಳಿವು ಲಭ್ಯವಾಗಿದೆ. ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಇದನ್ನು ಖಚಿತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಸಚಿವರು ಮಾಹಿತಿ ನೀಡಿದ್ದಾರೆ.

ನದಿಯ ಕೆಳಭಾಗದಲ್ಲಿ ಟ್ರಕ್ ಪತ್ತೆಯಾಗಿದೆ ಎಂದು ತಿಳಿದು ಬಂದಿದ್ದು ಅದಕ್ಕಾಗಿ ಶೋಧ ನಡೆಯುತ್ತಿದೆ.

ಶಿರೂರಿನಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯ ಒಂಬತ್ತನೇ ದಿನದಂದು, ಲಾರಿಯ ಬಗ್ಗೆ ನಿರ್ಣಾಯಕ ಮಾಹಿತಿಯನ್ನು ಪಡೆಯಲಾಗಿದೆ. ಇಂದು ಬೆಳಗ್ಗೆ ಬೂಮ್ ಲೆಂಗ್ತ್ ಕ್ರೇನ್ ಬಂದಿದ್ದು, ತಪಾಸಣೆ ಪುನರಾರಂಭವಾಗಿದೆ. ಈ ಯಂತ್ರವು 60 ಅಡಿ ಆಳದವರೆಗೆ ಹುಡುಕಬಲ್ಲ ಸಾಮರ್ಥ್ಯ ಹೊಂದಿದೆ. ಪೊಲೀಸ್ ವಾಹನದೊಂದಿಗೆ ವಾಹನವನ್ನು ಸ್ಥಳಕ್ಕೆ ತರಲಾಗಿದೆ.

ಈ ಕುರಿತು ಕೃಷ್ಣ ಬೈರೇಗೌಡ Xನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ X ಖಾತೆಯಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.ಜುಲೈ 16 ರಂದು ಬೆಳಿಗ್ಗೆ ಕೋಝಿಕ್ಕೋಡ್‌ನ ಕಂಡ್ಯಕ್ಕಲ್ ಮೂಲದ ಅರ್ಜುನ್ (30) ಕರ್ನಾಟಕ-ಗೋವಾ ಗಡಿಯಲ್ಲಿ ಹಾದು ಹೋಗುವ ಪನ್ವೇಲ್-ಕನ್ಯಾಕುಮಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದ್ದರು. ಭೂಕುಸಿತದಲ್ಲಿ ಟೀ ಅಂಗಡಿ ಮಾಲೀಕ ಸೇರಿದಂತೆ 10 ಜನರು ಸಾವನ್ನಪ್ಪಿದ ಸ್ಥಳದಲ್ಲಿ ಲಾರಿಯ ಜಿಪಿಎಸ್ ಸ್ಥಳವನ್ನು ಕೊನೆಯದಾಗಿ ಪತ್ತೆ ಹಚ್ಚಲಾಯಿತು.

 Share: | | | | |


ರಾಜ್ಯದ 34 ಸಾವಿರ ಬಡ ದೇವಸ್ಥಾನಗಳಿಗೂ ಶೀಘ್ರವೇ ಸಿಗಲಿದೆ ಗೃಹಜ್ಯೋತಿ ಉಚಿತ ವಿದ್ಯುತ್ ಸೌಲಭ್ಯ!

Posted by Vidyamaana on 2023-10-26 11:44:20 |

Share: | | | | |


ರಾಜ್ಯದ 34 ಸಾವಿರ ಬಡ ದೇವಸ್ಥಾನಗಳಿಗೂ ಶೀಘ್ರವೇ ಸಿಗಲಿದೆ ಗೃಹಜ್ಯೋತಿ ಉಚಿತ ವಿದ್ಯುತ್ ಸೌಲಭ್ಯ!

ಬೆಂಗಳೂರು : ಸರಕಾರದ ಹೊಸ ಯೋಜನೆ ಅನ್ವಯ ರಾಜ್ಯದಲ್ಲಿ ಈಗಾಗಲೇ ಫಲಾನುಭವಿಗಳಿಗೆ ಉಚಿತವಾಗಿ ದೊರೆಯುತ್ತಿರುವ 200 ಯುನಿಟ್ ವಿದ್ಯುತ್, ಮುಂದಿನ ದಿನಗಳಲ್ಲಿ ಸಿ ಗ್ರೇಡ್ ನ ಬಡ ದೇವಸ್ಥಾನಗಳಿಗೂ ವಿಸ್ತರಣೆಯಾಗಲಿದೆ ಎಂದು ಮುಜುರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.


ಯಾವ ದೇವಾಲಯವು 5 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯ ಪಡೆಯುತ್ತಿದೆಯೋ, ಆ ದೇವಾಲಯವು ಈ ಯೋಜನೆಗೆ ಒಳಗಾಗುತ್ತದೆ. ಅಂದಾಜಿನಂತೆ 34,700 ದೇಗುಲಗಳು ಇದರ ಪ್ರಯೋಜನ ಪಡೆದುಕೊಳ್ಳಲಿದೆ ಎನ್ನಲಾಗಿದೆ. ಇಲಾಖೆಯ ವ್ಯಾಪ್ತಿಯಲ್ಲಿ ಎ ಗ್ರೇಡ್‌ನ 175, ಬಿ ಗ್ರೇಡ್‌ನ 330 ಮತ್ತು ಸಿ ಗ್ರೇಡ್‌ನ 34,700 ದೇವಸ್ಥಾನಗಳಿವೆ. ವಾರ್ಷಿಕವಾಗಿ ದೇವಾಲಯದ ಆದಾಯ 25 ಲಕ್ಷ ರೂಪಾಯಿಗೂ ಅಧಿಕವಾಗಿದ್ದರೆ, ಮೂಲಸೌಕರ್ಯ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸ್ಥಳೀಯ ಹಂತದಲ್ಲೇ ಅವಕಾಶಗಳಿವೆ. ಆದರೆ, 1 ರಿಂದ 5 ಲಕ್ಷ ರೂ. ಒಳಗೆ ಆದಾಯ ಪಡೆಯುವ ಸಿ ಗ್ರೇಡ್ ದೇಗುಲಗಳಿಗೆ ಮಾತ್ರ ಯಾವುದೇ ಸೌಕರ್ಯಗಳಿಲ್ಲದೆ ಅಭಿವೃದ್ಧಿ ಕುಂಠಿತಗೊಂಡಿದೆ ಎನ್ನಲಾಗಿದೆ.ಇನ್ನು ರಾಜ್ಯದಲ್ಲಿ ಸಿ ಗ್ರೇಡ್ ದೇವಾಲಯಗಳು ಮಾಸಿಕ ವಿದ್ಯುತ್, ನೀರಿನ ವೆಚ್ಚ ಭರಿಸಲೂ ಪರದಾಡುವ ಸನ್ನಿವೇಶವಿದೆ. ಆದ್ದರಿಂದ ಪ್ರಸ್ತುತ ಚಾಲ್ತಿಯಲ್ಲಿರುವ ಗೃಹಜ್ಯೋತಿ ಯೋಜನೆ ದೇವಸ್ಥಾನಗಳಿಗು ವಿಸ್ತರಣೆಯಾಗಲಿದೆ.


ರಾಜ್ಯದಲ್ಲಿ ಈ ಹಿಂದಿನ ಸರಕಾರಗಳು ಎ ಗ್ರೇಡ್ ದೇವಸ್ಥಾನಗಳ ಆದಾಯದ ಶೇ.20ರಷ್ಟು ಪಾಲನ್ನು ಸಿ ಗ್ರೇಡ್ ದೇಗುಲಗಳ ಅಭಿವೃದ್ಧಿಗೆ ನೀಡಬೇಕೆಂಬ ಯೋಜನೆಯನ್ನು ರೂಪಿಸಿದ್ದವು. ಅವರ ಯಾವ ಯೋಜನೆಯು ಬರಲಿಲ್ಲ. ದೇವಸ್ಥಾನಕ್ಕೆ ಉಪಯೋಗವಾಗುವ ನಿಟ್ಟಿನಲ್ಲಿ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ಸಿ ಗ್ರೇಡ್ ದೇವಸ್ಥಾನಗಳಿಗೂ ಉಚಿತ ವಿದ್ಯುತ್ ಪೂರೈಸಲು ರಾಜ್ಯ ಸರಕಾರ ಮುಂದಾಗಿದೆ.


ಈ ಯೋಜನೆಯ ಕುರಿತು ಶೀಘ್ರವೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗರೆಡ್ಡಿ ತಿಳಿಸಿದ್ದಾರೆ

ಕಾಸರಗೋಡು : ಯುವಕನ ಕಿರುಕುಳದಿಂದ ಬೇಸತ್ತು ವಿದ್ಯಾರ್ಥಿನಿ ರೆನಾ ನೇಣಿಗೆ ಶರಣು

Posted by Vidyamaana on 2024-01-03 10:29:17 |

Share: | | | | |


ಕಾಸರಗೋಡು : ಯುವಕನ ಕಿರುಕುಳದಿಂದ ಬೇಸತ್ತು ವಿದ್ಯಾರ್ಥಿನಿ ರೆನಾ ನೇಣಿಗೆ ಶರಣು

ಕಾಸರಗೋಡು : ಯುವಕನ ಕಿರುಕುಳದಿಂದ ಬೇಸತ್ತು ವಿದ್ಯಾರ್ಥಿನಿ ನೇಣಿಗೆ ಶರಣಾಗಿರುವ ಘಟನೆ ಕಾಸರಗೋಡಿನ ಬಂದ್ಯೋಡು ಸಮೀಪದ ಆಡ್ಕ ಎಂಬಲ್ಲಿ ನಡೆದಿದೆ.ಅಡ್ಕದ ಫ್ಲ್ಯಾಟ್ ವೊಂದರಲ್ಲಿ ವಾಸವಾಗಿರುವ ಬದ್ರುದ್ದೀನ್ ರವರ ಪುತ್ರಿ ರೆನಾ ಫಾತಿಮಾ (19) ಮೃತ ವಿದ್ಯಾರ್ಥಿನಿ.

ರಾತ್ರಿ ಊಟ ಮಾಡಿ ಅಮ್ಮನ ಜೊತೆ ಮಲಗಿದ್ದ ಈಕೆ ನಿನ್ನೆ ಬೆಳಿಗ್ಗೆ ಏಳು ಗಂಟೆಗೆ ಅಮ್ಮ ಎದ್ದಾಗ ಕಾಣಿಸಿಲ್ಲ. ಹುಡುಕಾಡಿದಾಗ ಇನ್ನೊಂದು ಬೆಡ್ ರೂಂಗೆ ಚಿಲಕ ಹಾಕಿರುವುದು ಕಂಡಿದೆ. ಬಾಗಿಲು ಒಡೆದು ನೋಡಿದಾಗ ರಾಣಾ ಫಾತಿಮಾ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದೆ. ಇನ್ನು ಈಕೆಗೆ ಯುವಕನೊಬ್ಬ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಫಾತಿಮಾ ಫೋನ್ ಅನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಪುತ್ತೂರು ಬಿಜೆಪಿ ಕಚೇರಿಗೆ ಭೇಟಿ ನೀಡಿದ ಅರುಣ್ ಕುಮಾ‌ರ್ ಪುತ್ತಿಲ

Posted by Vidyamaana on 2024-03-17 09:58:27 |

Share: | | | | |


ಪುತ್ತೂರು ಬಿಜೆಪಿ ಕಚೇರಿಗೆ ಭೇಟಿ ನೀಡಿದ ಅರುಣ್ ಕುಮಾ‌ರ್ ಪುತ್ತಿಲ

ಪುತ್ತೂರು: ಪುತ್ತಿಲ ಪರಿವಾರ ಬಿಜೆಪಿಯೊಂದಿಗೆ ವಿಲೀನವಾದ ಬಳಿಕ ಅರುಣ್ ಕುಮಾರ್ ಪುತ್ತಿಲ ಅವರು ಪುತ್ತೂರು ಬಿಜೆಪಿ ಕಚೇರಿಗೆ ಮಾ 17 ರಂದು ಭೇಟಿ ನೀಡಿದರು.

ಪುತ್ತೂರು ಬಿಜೆಪಿ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಅಳ್ವ, ನಗರ ಮಂಡಲದ ಅಧ್ಯಕ್ಷ ಪಿ ಜಿ ಜಗನ್ನಿವಾಸ ರಾವ್ ಸಹಿತ ಪ್ರಮುಖರು ಅವರನ್ನು ಸ್ವಾಗತಿಸಿದರು. ಪ್ರಸನ್ನ ಕುಮಾರ್ ಮಾರ್ತ, ಉಮೇಶ್ ಕೋಡಿಬೈಲು, ರವಿ ಕುಮಾರ್, ಅನಿಲ್ ತೆಂಕಿಲ ಸಹಿತ ಹಲವಾರು ಮಂದಿ ಅರುಣ್ ಕುಮಾ‌ರ್ ಪುತ್ತಿಲ ಜೊತೆಗಿದ್ದರು.

ಸಂದರ್ಭ ಬಿಜೆಪಿ ರಾಜ್ಯ ಹಿಂದುಳಿದ ಮೋರ್ಚದ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ಯುವರಾಜ್ ಪೆರಿಯತ್ತೋಡಿ, ಹರಿಪ್ರಸಾದ್ ಯಾದವ್, ಜಿಲ್ಲಾ ಬಿಜೆಪಿ ಪ್ರಮುಖರಾದ ಬುಡಿಯಾರು ರಾಧಾಕೃಷ್ಣ ರೈ, ವಿದ್ಯಾ ಆರ್ ಗೌರಿ,ಆರ್ ಸಿ ನಾರಾಯಣ್ ಸಹಜ್ ರೈ,ಸುರೇಶ್ ಕಣ್ಣರಾಯ, ಸುಧೀ‌ರ್ ಶೆಟ್ಟಿ, ಜ್ಯೋತಿ ಆರ್ ನಾಯಕ್, ರಾಧಾಕೃಷ್ಣ ನಂದಿಲ, ಇಂದುಶೇಖ‌ರ್, ಲೋಹಿತ್ ಅಮ್ಮಿನಡ್ಕ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ಶಾಸಕರ ಇಂದಿನ ಕಾರ್ಯಕ್ರಮ ಜು 25

Posted by Vidyamaana on 2023-07-24 23:14:15 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ ಜು 25


ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಜುಲೈ 25 ರಂದು.

ಬೆಳಿಗ್ಗೆ 10 ಗಂಟೆಗೆ ರೈ ಎಜುಕೇಶನಲ್ ಟ್ರಸ್ಟ್ ನಲ್ಲಿ ಕೆಎಸ್ಆರ್ಟಿಸಿ ಚಾಲಕ ತರಬೇತಿ ಹುದ್ದೆ ಕಾರ್ಯಾಗಾರ


11 ಗಂಟೆಗೆ ಸಾಮೆತ್ತಡ್ಕ ಸರಕಾರಿ ಶಾಲೆಯಲ್ಲಿ ಕೊಠಡಿ ಉದ್ಘಾಟನೆ


12 ಗಂಟೆಗೆ ಸರಕಾರಿ ನೌಕರರ ಸಂಘದ ಮಹಾಸಭೆ ,ಸನ್ಮಾನ


12.30 ಕ್ಕೆ ಎಂ ಆರ್ ಪಿ ಎಲ್ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಲಿದ್ದಾರೆ

ಮತದಾರರ ಪಟ್ಟಿಸೇರ್ಪಡೆಗೆ ನಾಳೆ ಕೊನೆಯ ದಿನ

Posted by Vidyamaana on 2023-04-10 02:59:30 |

Share: | | | | |


ಮತದಾರರ ಪಟ್ಟಿಸೇರ್ಪಡೆಗೆ ನಾಳೆ ಕೊನೆಯ ದಿನ

ಮಂಗಳೂರು: ರಾಜ್ಯ ವಿಧಾನಸಭೆಗೆ ಮೇ 10ರಂದು ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು ಅನುಕೂಲವಾಗುವಂತೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಎ.11 ಕೊನೆಯ ದಿನವಾಗಿದೆ. 2004ರಲ್ಲಿ ಜನಿಸಿ, 2023ರ ಎ.1ರಂದು 18 ವರ್ಷ ತುಂಬಿದವರು ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಚುನಾವಣಾಧಿಕಾರಿಯ ಪ್ರಕಟನೆ ತಿಳಿಸಿದೆ.

ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟ ಹಿರಿಯರಿಗೆ ಹಾಗೂ ವಿಕಲಚೇತನರಿಗೆ ಮನೆಯಿಂದಲೇ ಮತ ಚಲಾಯಿಸುವ ಅವಕಾಶವನ್ನು ಕೂಡ ಕಲ್ಪಿಸಲಾಗಿದೆ. ದ.ಕ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 46,967 ಹಿರಿಯ ನಾಗರಿಕರು ಹಾಗೂ 14,007 ಮಂದಿ ವಿಶೇಷ ಚೇತನ ಮತ ದಾರರಿದ್ದಾರೆ. ಎ.11ರ ನಂತರ ಹಿರಿಯ ನಾಗರಿಕರ ಹಾಗೂ ವಿಕಲಚೇತನರ ಮನೆಗಳಿಗೆ ಸೆಕ್ಟರ್ ಆಫೀಸರ್ ಹಾಗೂ ಬಿಎಲ್‌ ಒಗಳು ಭೇಟಿ ನೀಡಿ 12ಆ ಫಾರ್ಮ್ ವಿತರಿಸಿದ 5 ದಿನಗಳ ಬಳಿಕ ಪೂರ್ಣ ವಿವರವನ್ನು ತುಂಬಿಸಿ ಅರ್ಜಿಯನ್ನು ಹಿಂದಿರುಗಿ ಸಬೇಕು. ನಂತರ ಚುನಾವಣಾಧಿಕಾರಿಗಳು ಅದನ್ನು ದೃಢೀಕರಿಸಿ ಎಷ್ಟು ಮಂದಿ ಮನೆಯಿಂದಲೇ ಮತದಾನ ಮಾಡಲು ಇಚ್ಛಿಸಿದ್ದಾರೆ ಎಂದು ಗುರುತು ಮಾಡುತ್ತಾರೆ.

ಸ್ಟೀಫ್ ಸಮಿತಿ ನಾಮಪತ್ರ ಸಲ್ಲಿಕೆ, ಪರಿಶೀಲನೆ, ಹಿಂಪಡೆಯುವಿಕೆ ಹೀಗೆ ಎಲ್ಲ ಪ್ರಕ್ರಿಯೆಗಳು ಮುಗಿದ ಬಳಿಕ ಅಗತ್ಯಕ್ಕೆ ಅನು ಗುಣವಾಗಿ ಮತದಾನಕ್ಕೆ ಸಂಬಂ ಧಿಸಿದ ಬ್ಯಾಲೆಟ್ ಪೇಪರ್ ಸಿದ್ಧಪಡಿಸಿ, ಕ್ಷೇತ್ರ ವ್ಯಾಪ್ತಿಗೆ ಅಗತ್ಯ ವಿರುವ ಅಧಿಕಾರಿಗಳ ತಂಡಗಳನ್ನು ರಚಿಸಿ ಸಕಲ ಭದ್ರತೆಯೊಂದಿಗೆ ಗೌಪ್ಯವಾಗಿ ಮನೆಯಿಂದಲೇ ಮತದಾನ ಪ್ರಕ್ರಿಯೆ ನಡೆಯುತ್ತದೆ. ಈ ಮತದಾನದ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವೀಡಿಯೊ ಚಿತ್ರೀಕರಣ ಮಾಡ ಲಾಗುತ್ತದೆ. ಮತಪತ್ರವನ್ನು ಮತಪೆಟ್ಟಿಗೆಯಲ್ಲಿ ಹಾಕಿ ಭದ್ರ ಕೊಠಡಿಯಲ್ಲಿ ಇಡಲಾಗುತ್ತದೆ. ಅಲ್ಲದೆ, ಮತ ಎಣಿಕೆಯ ದಿನ ಇದರ ಎಣಿಕೆ ನಡೆಯುತ್ತದೆ. ಮನೆಯಿಂದ ಮತದಾನ ಮಾಡುವ ವ್ಯಕ್ತಿಗೆ ಮತದಾನ ಕೇಂದ್ರದಲ್ಲಿ ಮತ ಹಾಕಲು ಅವಕಾಶ ಇರುವುದಿಲ್ಲಎಂದು ಚುನಾವಣಾ ಅಧಿಕಾರಿ ಸ್ಪಷ್ಟಪಡಿ ಸಿದ್ದಾರೆ.

• ನೋಂದಣಿ ವಿಧಾನ: https://ceo.Kar- nataka.gov.in/en ವೆಬ್‌ಸೈಟ್ ಅಥವಾ ಆ್ಯಪ್ ಅಥವಾ ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್  ಮೂಲಕವೂ ಮತದಾರರು ನೋಂದಾಯಿಸಿಕೊಳ್ಳ ಬಹುದು. ಅಲ್ಲದೆ ಬೂತ್ ಮಟ್ಟದ ಮತಗಟ್ಟೆ ಅಧಿ ಕಾರಿಯನ್ನು ಭೇಟಿ ಮಾಡಿ(ಆಫ್‌ ಲೈನ್) ನೇರವಾಗಿ ಕೂಡ ನೋಂದಣಿ ಮಾಡಬಹುದು. ವೋಟ‌ ಹೆಲ್ತ್‌ಲೈನ್‌ ಮೊಬೈಲ್ ಆ್ಯಪ್ ನ ಉಚಿತ ಸಹಾಯ ವಾಣಿ ಸಂಖ್ಯೆ 1950ಗೆ ಕರೆ ಮಾಡಿ ಅಗತ್ಯ ಮಾಹಿತಿ ನೀಡಿ ಹೆಸರು ಸೇರಿಸಿಕೊಳ್ಳಬಹುದು.

• ನೋಂದಣಿಗೆ ಬೇಕಾದ ಅಗತ್ಯ ದಾಖಲೆಗಳು: ಮತದಾರರ ಹೆಸರು ಸೇರ್ಪಡೆಗೊಳಿಸಲು ಜನನ ದಾಖಲೆಯಾಗಿ ಪಾಸ್‌ ಪೋರ್ಟ್ ಅಳತೆಯ ಭಾವಚಿತ್ರದ ಜೊತೆ ಜನನ ಪ್ರಮಾಣ ಪತ್ರ, ಡೈವಿಂಗ್ ಲೈಸೆನ್ಸ್‌, ಆಧಾರ್ ಕಾರ್ಡ್ ಅಥವಾ ಪಾನ್ ಕಾರ್ಡ್, ಶಾಲಾ-ಕಾಲೇಜಿನಲ್ಲಿ ನೀಡಿರುವ ಜನ್ಮ ದಿನಾಂಕವನ್ನು ಹೊಂದಿರುವ ಪ್ರಮಾಣ ಪತ್ರದಲ್ಲಿ ಯಾವುದಾದರೂ ಒಂದು ದಾಖಲೆ ಮತ್ತು ವಿಳಾಸದ ದೃಢೀಕರಣ ದಾಖಲೆಗಾಗಿ ಇಂಡಿಯನ್ ಪಾಸ್‌ಪೋರ್ಟ್, ಅಂಚೆ ಕಚೇರಿ ಪಾಸ್‌ ಪುಸ್ತಕ ಅಥವಾ ವಿದ್ಯುತ್, ನೀರು, ಗ್ಯಾಸ್‌ ಬಿಲ್‌ ಪ್ರತಿಗಳನ್ನು (ಕನಿಷ್ಠ ಒಂದು ವರ್ಷದ ಪ್ರತಿ) ಯಾವುದಾದರೂ ಕನಿಷ್ಠ ಒಂದು ದಾಖಲೆಯನ್ನು ಹಾಜರುಪಡಿಸಬಹುದು.

ಹೀಗೆ ಜನನ ಮತ್ತು ವಾಸ ಸ್ಥಳದ ವಿಳಾಸದ ಎರಡು ದಾಖಲೆಗಳನ್ನು ಜೊತೆಗೆ ಕಲರ್ ಭಾವಚಿತ್ರ ಪ್ರತಿಯನ್ನು ನೋಂದಣಿ ಸಂದರ್ಭದಲ್ಲಿ ಒದಗಿಸಬೇಕು ಎಂದು ಪ್ರಕಟನೆ ತಿಳಿಸಿದೆ.

ರಾಜ್ಯದಲ್ಲಿ ಆ.3 ರವರೆಗೆ ಭಾರಿ ಮಳೆ : 5 ಜಿಲ್ಲೆಗಳಿಗೆ ರೆಡ್ ಅಲರ್ಟ್‌ ಘೋಷಣೆ

Posted by Vidyamaana on 2024-07-30 19:21:35 |

Share: | | | | |


ರಾಜ್ಯದಲ್ಲಿ ಆ.3 ರವರೆಗೆ ಭಾರಿ ಮಳೆ : 5 ಜಿಲ್ಲೆಗಳಿಗೆ ರೆಡ್ ಅಲರ್ಟ್‌ ಘೋಷಣೆ

ಬೆಂಗಳೂರು : ರಾಜ್ಯದಲ್ಲಿ ಇಂದಿನಿಂದ ಆಗಸ್ಟ್ 3 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಹಲವು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ರಾಜ್ಯದಕರಾವಳಿಜಿಲ್ಲೆಗಳಲ್ಲಿಆಗಸ್ಟ್ 3ರವರೆಗೆಭಾರೀ ಮಳೆಯಾಗುವ ಸಾಧ್ಯತೆ ಇದ್ದು, 5 ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ

Recent News


Leave a Comment: