ದುಬೈಯಲ್ಲಿ ಪುತ್ತೂರಿಗರನ್ನು ಭೇಟಿಯಾದ ಶಾಸಕ ಅಶೋಕ್ ರೈ

ಸುದ್ದಿಗಳು News

Posted by vidyamaana on 2023-09-16 08:21:20 | Last Updated by Vidyamaana on 2023-09-16 08:21:20

Share: | | | | |


ದುಬೈಯಲ್ಲಿ ಪುತ್ತೂರಿಗರನ್ನು ಭೇಟಿಯಾದ ಶಾಸಕ ಅಶೋಕ್ ರೈ

ದುಬೈ: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಸೆ 15 ರಂದು ದುಬೈಗೆ ಭೇಟಿ ನೀಡಿದ್ದು, ಈ ಸಂದರ್ಭ ಅಲ್ಲಿರುವ ಪುತ್ತೂರಿನವರನ್ನು ಭೇಟಿಯಾದರು.

ದುಬೈಯ ಜುಮೈರಾ ತಾಜ್ ಹೊಟೇಲಿನಲ್ಲಿ ಶಾಸಕರಿಗೆ ಆತ್ಮೀಯ ಸ್ವಾಗತ ನೀಡಿ, ಅಭಿನಂದಿಸಿದರು.

ಬಳಿಕ ನಡೆದ ಸೌಹಾರ್ದ ಭೇಟಿಯಲ್ಲಿ ಮಾತನಾಡಿದ ಅಶೋಕ್ ರೈ, ಚುನಾವಣೆ ಸಂದರ್ಭ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ದುಬೈನಲ್ಲಿ ನೆಲೆಸಿರುವ ನಮ್ಮೂರಿನ ಯುವಕರ ಸಹಕಾರ ಅವಿಸ್ಮರಣೀಯ. ನಮ್ಮೂರಿನ ಜನಪರ ಕೆಲಸಗಳಿಗೆ ಸದಾ ನಿಮ್ಮ ಬೆಂಬಲ ಮುಂದೆಯೂ ಬೇಕು ಎಂದ ಅವರು, ದುಬೈಯ ಪುತ್ತೂರಿಗರಿಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಸ್ತಾಫಾ ಕೋಡಿಂಬಾಡಿ, ಖಲೀಲ್ ಬಿ.ಎಚ್., ಅಜಿತ್ ಕೋಡಿಂಬಾಡಿ, ಅನ್ಸಾರ್ ಬಿ.ಎಚ್., ಸಿನಾನ್ ಮೊದಲಾದವರು ಉಪಸ್ಥಿತರಿದ್ದರು.

 Share: | | | | |


ಪುತ್ತೂರು :ಇಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ

Posted by Vidyamaana on 2024-04-28 07:20:40 |

Share: | | | | |


ಪುತ್ತೂರು :ಇಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ

ಪುತ್ತೂರು : ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ವರ್ಷಾವಧಿ ನೇಮ ನಡಾವಳಿಯು ಏ.28 ರಂದು ನಡೆಯಲಿದೆ.

ಏ.28 ರಂದು ಬೆಳಿಗ್ಗೆ 6 ಗಂಟೆಯಿಂದ ಶ್ರೀ ದಂಡನಾಯಕ ದೈವದ ವಾಲಸರಿ ನೇಮ ನಡೆಯಲಿದೆ.

ಇ ಫೌಂಡೇಶನ್ (ರಿ.) (ಇ ಫ್ರೆಂಡ್ಸ್ )ವತಿಯಿಂದ ಸ್ಕೂಲ್ ಚಲೋ ಕಾರ್ಯಕ್ರಮ..!

Posted by Vidyamaana on 2024-06-15 20:09:54 |

Share: | | | | |


ಇ ಫೌಂಡೇಶನ್ (ರಿ.) (ಇ ಫ್ರೆಂಡ್ಸ್ )ವತಿಯಿಂದ ಸ್ಕೂಲ್ ಚಲೋ ಕಾರ್ಯಕ್ರಮ..!

ಪುತ್ತೂರು:- ಶೈಕ್ಷಣಿಕ ಅಭಿವೃದ್ಧಿಗಾಗಿ ಸದಾ ಪ್ರೋತ್ಸಾಹ ನೀಡುತ್ತಾ ಬಂದಿರುವ ಇ ಫೌಂಡೇಶನ್ ಇಂಡಿಯಾ (ರಿ.) ವತಿಯಿಂದ ಸ್ಕೂಲ್ ಚಲೋ ಕಾರ್ಯಕ್ರಮವು ಸಂಸ್ಥೆಯ ಕಾರುಣ್ಯ ಕಛೇರಿಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಯಮಿಗಳಾದ ಯುನಿಟಿ ಶಮೀರ್ ಹಾಜಿ ಇವರು ಸಾಂಕೇತಿಕವಾಗಿ ಪುಸ್ತಕ ಹಾಗೂ ಬ್ಯಾಗ್ ಗಳನ್ನು ವಿತರಿಸುವುದರೊಂದಿಗೆ ಉದ್ಘಾಟಿಸಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಇಮ್ತಿಯಾಝ್ ಪಾರ್ಲೆ ಇವರು ಶಿಕ್ಷಣಕ್ಕೆ ಇ ಫ್ರೆಂಡ್ಸ್ ಪುತ್ತೂರು ನೀಡುತ್ತಿರುವ ಕೊಡುಗೆ ಮತ್ತು ಶೈಕ್ಷಣಿಕ ಪ್ರಗತಿ ಸಾಮುದಾಯಿಕ ಅನಿವಾರ್ಯ ಕೂಡ ಆಗಿದೆ ಎಂದು ತಿಳಿಸಿದರು.

ಮಣಿಪಾಲ ; ಪರೀಕ್ಷೆ ಭಯದಲ್ಲಿ ಕಾಲೇಜು ಕಟ್ಟಡದಿಂದ ಜಿಗಿದು ವಿದ್ಯಾರ್ಥಿ ಸುಮನ್ ಆತ್ಮಹತ್ಯೆ

Posted by Vidyamaana on 2024-02-17 21:20:23 |

Share: | | | | |


ಮಣಿಪಾಲ ; ಪರೀಕ್ಷೆ ಭಯದಲ್ಲಿ ಕಾಲೇಜು ಕಟ್ಟಡದಿಂದ ಜಿಗಿದು ವಿದ್ಯಾರ್ಥಿ ಸುಮನ್ ಆತ್ಮಹತ್ಯೆ

ಉಡುಪಿ, ಫೆ.17: ಪರೀಕ್ಷೆ ನಡೆಯುತ್ತಿದ್ದಾಗಲೇ ಫಲಿತಾಂಶದ ಬಗ್ಗೆ ಭೀತಿಗೊಳಗಾಗಿ ಕಾಲೇಜು ಕಟ್ಟಡದಿಂದ ಹೊರಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪಾಲದಲ್ಲಿ ನಡೆದಿದೆ. 


ಮಣಿಪಾಲ್ ಯುನಿವರ್ಸಿಟಿಯ ಎಂಸಿಎಚ್ ಪಿ ವಿಭಾಗದಲ್ಲಿ ಕಲಿಯುತ್ತಿದ್ದ ಬಿಹಾರ ಮೂಲದ ವಿದ್ಯಾರ್ಥಿ ಸತ್ಯಂ ಸುಮನ್ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಇತರೇ ವಿದ್ಯಾರ್ಥಿಗಳು ನೋಡುತ್ತಿದ್ದಂತೆಯೇ ಸುಮನ್ ಕಟ್ಟಡದಿಂದ ಹೊರಕ್ಕೆ ಹಾರಿದ್ದಾನೆ. ಆನಂತರ, ವಿದ್ಯಾರ್ಥಿಯ ರಕ್ಷಣೆಗಾಗಿ ಪರೀಕ್ಷೆ ಬಿಟ್ಟು ಅತ್ತಿತ್ತ ಓಡಾಡಿದ್ದಾರೆ. 


ಯುವಕ ಪರೀಕ್ಷೆ ಬರೆಯಲೆಂದು ಕೋಣೆಗೆ ಬಂದಿದ್ದ. ಆದರೆ ಪ್ರಶ್ನೆ ಪತ್ರಿಕೆ ನೋಡಿದ ಮೇಲೆ ಆತಂಕಗೊಂಡವನಂತೆ ಕಂಡಿದ್ದು ಹೊರಗೆ ಬಂದು ಕಟ್ಟಡದಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದಾರೆ. ಆತ ಕಟ್ಟಡದಿಂದ ಜಿಗಿಯುತ್ತಿದ್ದಂತೆಯೇ ಇತರ ವಿದ್ಯಾರ್ಥಿಗಳು ಗಾಬರಿಯಾಗಿ ಓಡುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

BREAKING : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ದಕ್ಷಿಣ ಕನ್ನಡ ಫಸ್ಟ್, ಗದಗ ಲಾಸ್ಟ್!

Posted by Vidyamaana on 2024-04-10 11:00:26 |

Share: | | | | |


BREAKING : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ದಕ್ಷಿಣ ಕನ್ನಡ ಫಸ್ಟ್, ಗದಗ ಲಾಸ್ಟ್!

ಬೆಂಗಳೂರು : ಬಹುನಿರೀಕ್ಷಿತ 2024 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ವಿದ್ಯಾರ್ಥಿಗಳು karresults.nic.in ನಲ್ಲಿ ಫಲಿತಾಂಶ ನೋಡಬಹುದು. ಈ ಬಾರಿ ರಾಜ್ಯದಾದ್ಯಂತ ಸುಮಾರು 1,124 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆದಿತ್ತು.

ಪ್ರತ್ತೂರು ನ್ಯೂ ಮಾನಕದಲ್ಲಿ ದೀಪಾವಳಿ ಬಿಗ್ ಆಫರ್

Posted by Vidyamaana on 2023-11-13 07:45:09 |

Share: | | | | |


ಪ್ರತ್ತೂರು ನ್ಯೂ ಮಾನಕದಲ್ಲಿ ದೀಪಾವಳಿ ಬಿಗ್ ಆಫರ್

ಪುತ್ತೂರು; ಪುತ್ತೂರಿನ ಜನರ ಮನಗೆದ್ದಿರುವ ಮಾನಕ ಜುವೆಲ್ಲರ್‌ನ ಸಹ ಸಂಸ್ಥೆ ಸಿಪಿಸಿ ಪ್ಲಾಝಾದ ಎದುರಿನ ಎಂ.ಎಸ್.ಕಾಂಪ್ಲೆಕ್ಸ್‌ ನಲ್ಲಿ ನೂತನವಾಗಿ ಆರಂಭವಾಗಿರುವ ನ್ಯೂ ಮಾನಕ ಜುವೆಲ್ಲರ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಬಿಗ್ ಆಫರ್ ನೊಂದಿಗೆ ಆಕರ್ಷಕ ಕರಿಮಣಿ

ಮೇಳ ನಡೆಯಲಿದೆ. ನ.13 ರಂದು ಈ ಮೇಳ ಆರಂಭಗೊಳ್ಳಲಿದ್ದು ನ.14 ರ ತನಕ ಇರಲಿದೆ, ವಿವಿಧ ವಿನ್ಯಾಸದ ಆಕರ್ಷಕ ಕರಿಮಣಿಗಾಗಿ ಈಗಾಗಲೇ ಹೆಸರುವಾಸಿಯಾಗಿರುವ ಮಾನಕ ಜ್ಯುವೆಲ್ಲರ್ ಈ ವರ್ಷದ ದೀಪಾವಳಿಗೆ ಗ್ರಾಹಕರ ಮನದಿಚ್ಛೆಯಂತೆ ನವನವೀನ ಕರಿಮಣಿ ಸರಗಳನ್ನು ಮೇಳದಲ್ಲಿ ಪ್ರದರ್ಶನ ಮಾಡಲಿದೆ. ಗ್ರಾಹಕರ ಅನುಕೂಲಕ್ಕಾಗಿ ಕರಿಮಣಿ ಖರೀದಿಗೆ ಪ್ರತಿ ಗ್ರಾಂ ಮೇಲೆ  ರೂ.100 ರಿಯಾಯಿತಿ ಕೂಡ ದೊರೆಯಲಿದೆ. ಇದರ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳುವ ಮೂಲಕ ಈ ವರ್ಷದ ದೀಪಾವಳಿಯನ್ನು ಮಾನಕದ ವಜ್ರಾಭರಣಗಳ ಜೊತೆಯಲ್ಲಿ ಸಂಭ್ರಮಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಸಂಪ್ಯ ಕಂಬಳತ್ತಡ್ಡ ಸೀತಾರಾಮ ಶೆಟ್ಟಿಯರಿಗೆ ಬಂಟರ ಭವನದಲ್ಲಿ ಶ್ರದ್ಧಾಂಜಲಿ ಸಭೆ

Posted by Vidyamaana on 2023-09-03 11:03:06 |

Share: | | | | |


ಸಂಪ್ಯ ಕಂಬಳತ್ತಡ್ಡ ಸೀತಾರಾಮ ಶೆಟ್ಟಿಯರಿಗೆ ಬಂಟರ ಭವನದಲ್ಲಿ ಶ್ರದ್ಧಾಂಜಲಿ ಸಭೆ

ಪುತ್ತೂರು:ಇತ್ತೀಚೆಗೆ ನಿಧನರಾದ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ, ಸಂಪ್ಯ ಕಂಬಳತ್ತಡ್ಡ ಸೀತಾರಾಮ ಶೆಟ್ಟಿಯರಿಗೆ ಶ್ರದ್ಧಾಂಜಲಿ ಸಭೆಯು ಸೆ.೨ರಂದು ಕೊಂಬೆಟ್ಟು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಿತು.

ನುಡಿ ನಮನದ ಸಲ್ಲಿಸಿದ ಪುತ್ತೂರಿನ ಖ್ಯಾತ ವೈದ್ಯರು, ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿರುವ ಡಾ. ಸುರೇಶ್ ಪುತ್ತೂರಾಯ ಮಾತನಾಡಿ, ಹುಟ್ಟಿದ ಮನುಷ್ಯನಿಗೆ ಮರಣ ನಿಶ್ವಿತ. ಆದರೂ ಸೀತಾರಾಮ ಶೆಟ್ಟಿಯವರಿಗೆ ಸಣ್ಣ ವಯಸ್ಸಿನಲ್ಲಿಯೇ ವೇಗವಾಗಿ ಬಂದೊದಗಿದೆ. ಸದಾ ಸಮಾಜ ಮುಖಿ ವ್ಯಕ್ತಿತ್ವದ ಸೀತಾರಾಮ ಶೆಟ್ಟಿಯವರು ಸೀತಣ್ಣ ಎಂದೇ ಎಲ್ಲರೊಂದಿಗೆ ಗುರುತಿಸಿಕೊಂಡವರು. ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಎಲ್ಲಾ ಸಂದರ್ಭಗಳಲ್ಲಿಯೂ ಮುಂಚೂಣಿಯಲ್ಲಿ ನಿಂತು ಬಹಳಷ್ಟು ಉತ್ತಮ ಕೆಲಸ ಮಾಡಿದವರು. ಒಡನಾಡಿಯಾಗಿ ಸಂಪ್ಯದ ಜನತೆಯೊಂದಿಗೆ ಅನ್ಯೋನ್ಯತೆಯಿಂದಿದ್ದವರು ಎಂದರು.

ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಸದಾ ನಗುಮೊಗದಿಂದ ಎಲ್ಲರೊಂದಿಗೆ ಬೆರೆಯುತ್ತಿದ್ದ ಸೀತಾರಾಮ ಶೆಟ್ಟಿಯವರ ಮರಣ ವಾರ್ತೆ ಯಾರಿಗೂ ನಂಬಲು ಸಾಧ್ಯವಾಗಿಲ್ಲ. ಹಲವಾರು ಸಾಮಾಜಿಕ, ಧಾರ್ಮಿಕ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಎಲ್ಲರೊಂದಿಗೆ ಪ್ರೀತಿಯಿಂದ ಇದ್ದವರು. ಯುವ ಬಂಟರ ಸಂಘದ ಅಧ್ಯಕ್ಷರಾಗಿಯೂ ಯಶಸ್ವಿಯಾಗಿ ನಿರ್ವಹಿಸಿದವರು. ತಾನು ಬಾಳಿ ಬೆಳಗಿನ ಅಲ್ಪ ಅವಧಿಯಲ್ಲಿಯೇ ಉತ್ತಮ ಸೇವೆ ನೀಡಿದವರು. ಸಹೋದರರು ಪರಸ್ಪರ ಅನ್ಯೋನ್ಯತೆಯಿಂದ ಇದ್ದ ಅವರ ಬದುಕು ನಾವು ಯಾವ ರೀತಿ ಬದುಕಬೇಕೆಂಬುದಕ್ಕೆ ಆದರ್ಶವಾಗಿದ್ದ ಅವರು ಸಮಾಜದ ಪ್ರೀತಿ ಗಳಿಸಿದವರು ಎಂದರು.

ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಮಾತನಾಡಿ, ಹಲವು ಸಮಾಜಮುಖಿ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದ ಸೀತಾರಾಮ ಶೆಟ್ಟಿಯವರು ಎಲ್ಲರೊಂದಿಗೆ ಸಹೋದರೆತೆಯಿಂದ ಬೆರೆಯುತ್ತಿದ್ದವರು. ಎಲ್ಲರೊಂದಿಗೂ ಆದರದಿಂದ ಮಾತನಾಡಿಸುವವರು. ಸಂಪ್ಯ ನವಚೇತನ ಯುವಕ ಮಂಡಲ, ಕಂಬಳತ್ತಡ್ಡ ಶ್ರೀಕೃಷ್ಣ ಯುವಕ ಮಂಡಲ, ಜೇಸಿಐ, ಯುವ ಬಂಟರ ಸಂಘಗಳಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಸಮಾಜಮುಖಿಯಾಗಿ ಸೇವೆ ಸಲ್ಲಿಸಿದ ಅವರು ಯುವಕರಿಗೆ ಅದರ್ಶಪ್ರಾಯರಾಗಿದ್ದರು ಎಂದರು.

ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ, ಸವಣೂರು ವಿದ್ಯಾರಶ್ಮೀ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸೀತಾರಾಮ ರೈ ಸವಣೂರು, ಎಪಿಎಂಸಿ ಮಾಜಿ ಸದಸ್ಯ ಬೂಡಿಯಾರ್ ರಾಧಾಕೃಷ್ಣ ರೈ, ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಇಳಂತಾಜೆ, ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರವೀಂದ್ರ ನಾಥ ಶೆಟ್ಟಿ, ಮಾಜಿ ಸದಸ್ಯ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಅಕ್ಷಯ ಗ್ರೂಪ್‌ನ ಮ್ಹಾಲಕ ಜಯಂತ ನಡುಬೈಲು, ಉದ್ಯಮಿ ಪುರಂದರ ರೈ ಮಿತ್ರಂಪಾಡಿ, ಬಂಟರ ಸಂಘದ ಕೋಶಾಧಿಕಾರಿ ಕೃಷ್ಣ ಪ್ರಸಾದ್ ಆಳ್ವ, ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲು, ಪುರಸಭಾ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು, ರಾಕೇಶ್ ರೈ ಕೆಡೆಂಜಿ, ಬಿರುಮಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎ.ಜೆ ರೈ, ಗಣೇಶ್ ರೈ ಮೂಲೆ, ವಸಂತ ರೈ ದುಗ್ಗಳ, ಜಯರಾಮ ರೈ ನುಳಿಯಾಲು, ಮಹಾಬಲ ರೈ ವಳತ್ತಡ್ಕ, ಸೀತಾರಾಮ ಶೆಟ್ಟಿಯವರ ಸಹೋದರರಾದ ಜಯಂತ ಶೆಟ್ಟಿ, ರವೀಂದ್ರ ಶೆಟ್ಟಿ, ಕುಟುಂಬಸ್ಥರು ಸೇರಿದಂತೆ ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Recent News


Leave a Comment: