ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಶಾಸಕರಿಂದ ರೂ.೫೦ ಸಾವಿರ ಸಹಾಯಧನ

ಸುದ್ದಿಗಳು News

Posted by vidyamaana on 2024-07-03 19:23:39 |

Share: | | | | |


ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಶಾಸಕರಿಂದ ರೂ.೫೦ ಸಾವಿರ ಸಹಾಯಧನ

ಪುತ್ತೂರು: ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ರೂ. ೫೦ ಸಾವಿರ ಸಹಾಯಧನವನ್ನು ನೀಡಿದರು. ಮಂಗಳೂರು ಕೇಂದ್ರ ಕಚೇರಿಯನ್ನು ಹೊಂದಿರುವ ಈ ಟ್ರಸ್ಟ್ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಈ ಟ್ರಸ್ಟ್‌ನಲ್ಲಿ ಸದಸ್ಯರಾಗಿರುತ್ತಾರೆ.

ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಕ್ಷೇಮಾಭಿವೃದ್ದಿ ಟ್ರಸ್ಟ್ ಇದಾಗಿರುತ್ತದೆ. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಜಿಲ್ಲಾಧ್ಯಕ್ಷೆ ತಾರಾಬಲ್ಲಾಲ್, ಪುತ್ತೂರು ತಾಲೂಕು ಅಧ್ಯಕ್ಷೆ ಕಮಲ, ತಾಲೂಕು ಕಾರ್ಯದರ್ಶಿ ಪುಷ್ಪಾವತಿ, ಸೇವಾಂಜಲಿ ಟ್ರಸ್ಟ್ ಉಪಾಧ್ಯಕ್ಷೆ ಅರುಣಾ ಡಿ, ನಿರ್ದೇಶಕಿ ಮೀನಾಕ್ಷಿ ಉಪಸ್ಥಿತರಿದ್ದರು.

 Share: | | | | |


ಕಾಣಿಯೂರಿನ ಎಲುವೆಯಲ್ಲಿ ರಿಕ್ಷಾ ಚಾಲಕ ನೇಣಿಕೆ ಶರಣು

Posted by Vidyamaana on 2023-12-28 14:29:54 |

Share: | | | | |


ಕಾಣಿಯೂರಿನ ಎಲುವೆಯಲ್ಲಿ ರಿಕ್ಷಾ ಚಾಲಕ ನೇಣಿಕೆ ಶರಣು

ಕಾಣಿಯೂರು: ಕಾಣಿಯೂರಿನ ಎಲುವೆ ಎಂಬಲ್ಲಿ ರಿಕ್ಷಾ ಚಾಲಕರೋರ್ವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾಣಿಯೂರಿನ ಬೆದ್ರಾಜೆ ನಿವಾಸಿ ವಸಂತ (42) ಎಂಬವರ ರಿಕ್ಷಾ ಕಾಣಿಯೂರು ರಸ್ತೆಯ ಎಲುವೆ ಎಂಬಲ್ಲಿ ನಿಲ್ಲಿಸಿತ್ತು. ಅಲ್ಲೇ ಸಮೀಪದ ಕಾಡಿನಲ್ಲಿ ವಸಂತ ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೀಚ್ ನಲ್ಲಿ ಆಟವಾಡುತ್ತಿದ್ದ ವೇಳೆ ಮೂವರು ಮಕ್ಕಳ ಮೇಲೆ ಬಡಿದ ಸಿಡಿಲು; ಆಘಾತಕಾರಿ ವಿಡಿಯೋ ವೈರಲ್

Posted by Vidyamaana on 2024-06-02 18:29:49 |

Share: | | | | |


ಬೀಚ್ ನಲ್ಲಿ ಆಟವಾಡುತ್ತಿದ್ದ ವೇಳೆ ಮೂವರು ಮಕ್ಕಳ ಮೇಲೆ ಬಡಿದ ಸಿಡಿಲು; ಆಘಾತಕಾರಿ ವಿಡಿಯೋ ವೈರಲ್

ಕೆಲವೊಮ್ಮೆ ಪ್ರಾಕೃತಿಕವಾಗಿ ಎದುರಾಗುವ ಆಘಾತಕಾರಿ ಸನ್ನಿವೇಶಗಳು ಜೀವನವನ್ನೇ ಕಸಿದುಕೊಳ್ಳುತ್ತವೆ. ಇದೀಗ ಅದೇ ರೀತಿಯ ಘಟನೆಯೊಂದು ನಡೆದಿದ್ದು, ಬೀಚ್‌ನಲ್ಲಿ ಖುಷಿಖುಷಿಯಾಗಿ ಆಟವಾಡುತ್ತಿದ್ದ ಮೂವರು ಮಕ್ಕಳ ಮೇಲೆ ಸಿಡಿಲು ಬಡಿದಿದೆ. ಈ ಆಘಾತಕಾರಿ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.ಮಳೆಗಾಲದಲ್ಲಿ ಭಾರೀ ಮಳೆಯೊಂದಿಗೆ ಗುಡುಗು ಮಿಂಚುಗಳು ಬರುವುದು ಸಾಮಾನ್ಯ. ಆದರೆ ಗಾಳಿ ಮಳೆಯೊಂದಿಗೆ ಬರುವ ಭಯಾನಕ ಗುಡುಗು ಮಿಂಚುಗಳು ಎದೆಯಲ್ಲಿ ನಡುಕ ಹುಟ್ಟಿಸುವುದು ಮಾತ್ರವಲ್ಲದೆ, ಅನೇಕ ಪ್ರಾಣ ಹಾನಿಯನ್ನೂ ಕೂಡಾ ಉಂಟುಮಾಡುತ್ತದೆ. ಹೀಗೆ ಸಿಡಿಲು ಬಡಿದು ಪ್ರಾಣಿ-ಪಕ್ಷಿಗಳು, ಮನುಷ್ಯರು ಸಾವನ್ನಪ್ಪಿದ ಅನೇಕ ಘಟನೆಗಳು ಈ ಹಿಂದೆಯೂ ನಡೆದಿದೆ. ಇದೀಗ ಅಂತಹದೇ ಭೀಕರ ಘಟನೆಯೊಂದು ನಡೆದಿದ್ದು, ಬೀಚ್‌ನಲ್ಲಿ ಸಂತೋಷವಾಗಿ ಆಟವಾಡುತ್ತಿದ್ದ ಮೂವರ ಮಕ್ಕಳ ಮೇಲೆ ಇದ್ದಕ್ಕಿದ್ದಂತೆ ಸಿಡಿಲು ಬಡಿದಿದೆ. ಈ ಆಘಾತಕಾರಿ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ

ಆ. 27ರಂದು ಬಿಜೆಪಿಯಿಂದ ಬೃಹತ್ ಪ್ರತಿಭಟನೆ

Posted by Vidyamaana on 2023-08-12 15:13:00 |

Share: | | | | |


ಆ. 27ರಂದು ಬಿಜೆಪಿಯಿಂದ ಬೃಹತ್ ಪ್ರತಿಭಟನೆ

ಮಂಗಳೂರು: ಸೌಜನ್ಯ ಪರ ಹೋರಾಟಕ್ಕೆ ಬಿಜೆಪಿ ಧುಮುಕಿದೆ, ಆ.27 ರಂದು ಬಿಜೆಪಿ ಯಿಂದ ದ.ಕ,ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಶಾಸಕರನೊಳಗೊಂಡು ಬೃಹತ್ ಪ್ರತಿಭಟನೆ ನಡೆಸುವುದಾಗಿ ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾಹಿತಿ ನೀಡಿದ್ದಾರೆ.

ಹೋರಾಟದಲ್ಲಿ ದ.ಕ ಮತ್ತು ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರು ಹಾಗೂ ಪ್ರಮುಖರು ಭಾಗಿಯಾಗಲಿದ್ದಾರೆ. ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಎಸ್ ಡಿ ಎಂ ವಿದ್ಯಾರ್ಥಿನಿ ಸೌಜನ್ಯ ಪ್ರಕರಣ ಪೊಲೀಸ್ ತನಿಖೆ ಆಗಿದೆ, ಸಿಐಡಿ ಬಳಿಕ ಹೋರಾಟ ನಡೆದು ಸಿಬಿಐ ತನಿಖೆ ಕೂಡ ಆಗಿದೆ. ಕೊನೆಗೆ ಸಿಬಿಐ ಬಂಧಿತ ವ್ಯಕ್ತಿ ಆರೋಪಿ ಅಲ್ಲ ಅಂತ ಹೇಳಿದೆ. ಆವತ್ತು ಕೂಡ ಬಿಜೆಪಿ ಈ ವಿಚಾರದಲ್ಲಿ ಹೋರಾಟ ಮಾಡಿತ್ತು,ಇದೀಗ ಮತ್ತೆ ಬಿಜೆಪಿ ಇಡೀ ಪ್ರಕರಣದ ಮರು ತನಿಖೆಗೆ ಆಗ್ರಹಿಸುತ್ತದೆ.

ಘಟನೆಯ ಬಳಿಕದ ಹೋರಾಟಗಳು, ಕುಟುಂಬದ ಆಗ್ರಹಗಳ ತನಿಖೆ ಆಗಬೇಕು, ಹಂತಕರ ಪತ್ತೆ ಮೂಲಕ ಕುಟುಂಬಕ್ಕೆ ನ್ಯಾಯ ಸಿಗಬೇಕು. ಬಿಜೆಪಿ ಪ್ರಕರಣದ ಮರು ತನಿಖೆಗೆ ಸಿಎಂಗೆ ಒತ್ತಾಯ ಮಾಡಲಿದೆ, ಅ. 27ರಂದು ಬಿಜೆಪಿ ಬೃಹತ್ ಹೋರಾಟ ನಡೆಸಲಿದೆ. ಆ ಬಳಿಕ ಸಿಎಂ ಮತ್ತು ರಾಜ್ಯಪಾಲರಿಗೆ ಮನವಿ ಕೊಡಲಿದ್ದೇವೆ.

ಅ.27 ರಂದು ದ.ಕ ಮತ್ತು ಉಡುಪಿ ಜಿಲ್ಲೆಯ ಕಾರ್ಯಕರ್ತರ ಸೇರಿಸಿ ಬೃಹತ್ ಹೋರಾಟ ಮಾಡಲಿದ್ದು, ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗ ಬೃಹತ್ ಹೋರಾಟ ನಡೆಯಲಿದೆ. ಎರಡೂ ಜಿಲ್ಲೆಗಳ ಶಾಸಕರು, ನಾಯಕರು ಭಾಗಿಯಾಗಲಿದ್ದಾರೆ. ಪ್ರತಿಭಟನೆಯ ಮರು ದಿನ ಶಾಸಕರ ನಿಯೋಗ ಸಿಎಂ ಭೇಟಿಯಾಗಲಿದೆ.


ಸೌಜನ್ಯ ಕೇಸ್ ನಲ್ಲಿ ಸಿಬಿಐಗೆ ಹೋದರೂ ಆರೋಪಿಗಳು ಯಾರು ಅನ್ನೋದು ಆಗಿಲ್ಲ. ಇದರಲ್ಲಿ ಯಾರನ್ನೂ ಟಾರ್ಗೆಟ್ ಮಾಡುವ ವಿಷಯ ಇಲ್ಲ. ಸೌಜನ್ಯ ಕುಟುಂಬಕ್ಕೆ ನ್ಯಾಯ ಸಿಗಬೇಕು ಅನ್ನೋದು ನಮ್ಮ ಉದ್ದೇಶ. ಬೇರೆ ಬೇರೆ ರೀತಿಯ ಹೋರಾಟಗಾರರು ಬೇರೆ ಹೋರಾಟ ಮಾಡಬಹುದು ಎಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಮಾ. 7ರಂದು ನಯಾ ಚಪ್ಪಲ್ ಬಜಾರ್ ನ ನವೀಕೃತ ಮಳಿಗೆ ಶುಭಾರಂಭ

Posted by Vidyamaana on 2024-03-02 12:33:31 |

Share: | | | | |


ಮಾ. 7ರಂದು ನಯಾ ಚಪ್ಪಲ್ ಬಜಾರ್ ನ ನವೀಕೃತ ಮಳಿಗೆ ಶುಭಾರಂಭ

ಪುತ್ತೂರು: ನಯಾ ಚಪ್ಪಲ್ ಬಜಾರ್ನ ನವೀಕೃತ ಮಳಿಗೆಯ ಉದ್ಘಾಟನೆ ಮಾರ್ಚ್ 7ರಂದು ಬೆಳಿಗ್ಗೆ 10ಕ್ಕೆ ದರ್ಬೆ ಬುಶ್ರಾ ಟವರ್ನಲ್ಲಿ ನಡೆಯಲಿದೆ.

1998ರಲ್ಲಿ ಆಗಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಎದುರುಗಡೆ ಇದ್ದ ಎ.ಎಂ. ಕಾಂಪ್ಲೆಕ್ಸ್ನಲ್ಲಿ ನಯಾ ಚಪ್ಪಲ್ ಬಜಾರ್ ಕಾರ್ಯಾಚರಣೆ ಆರಂಭಿಸಿತು. ಬಳಿಕ ದರ್ಬೆಯ ಬುಶ್ರಾ ಟವರ್ಗೆ ಸ್ಥಳಾಂತರಗೊಂಡಿತು. ಸುಮಾರು 26 ವರ್ಷಗಳ ಸುದೀರ್ಘ ಪಯಣದಲ್ಲಿ  ಗ್ರಾಹಕರ ಮನಸೂರೆಗೊಂಡಿರುವ ರಫೀಕ್ ಎಂ.ಜಿ. ಮಾಲಕತ್ವದ ನಯಾ ಚಪ್ಪಲ್ ಬಜಾರ್ ಇದೀಗ ಆಧುನಿಕತೆಗೆ ತಕ್ಕಂತೆ ನವೀಕೃತಗೊಂಡು ಶುಭಾರಂಭಗೊಳ್ಳುತ್ತಿದೆ.


ನೂತನ ಸಂಸ್ಥೆಯನ್ನು ಪದ್ಮಶ್ರೀ ಪ್ರಶಸ್ತಿ ವಿಜೇತ ಹರೇಕಳ ಹಾಜಬ್ಬ ಅವರು ನವೀಕೃತ ಮಳಿಗೆಯನ್ನು ಉದ್ಘಾಟಿಸುವರು. ಶಾಸಕ ಅಶೋಕ್ ಕುಮಾರ್ ರೈ ಮುಖ್ಯ ಅತಿಥಿಯಾಗಿರುವರು. ದರ್ಬೆ ಬುಶ್ರಾ ಟವರ್ನ ಮಾಲಕ ಅಬ್ದುಲ್ ಅಜೀಜ್ ಅವರು ಪ್ರಥಮ ಗ್ರಾಹಕರಾಗಿ ಉಪಸ್ಥಿತರಿರುವರು.

ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ್ ಪೈ, ಪುತ್ತೂರು ಸಂಯುಕ್ತ ಜಮಾಅತ್ ಕಮಿಟಿ ಅಧ್ಯಕ್ಷ ಮೊಹಮ್ಮದ್ ಹಾಜಿ ಕೆ.ಪಿ., ಮಹಾವೀರ ಮೆಡಿಕಲ್ ಸೆಂಟರಿನ ಡಾ. ಅಶೋಕ್ ಪಡಿವಾಳ್,  ದರ್ಬೆ ಬಿಓಬಿಯ ಸೀನಿಯರ್ ಮ್ಯಾನೇಜರ್ ಸಾದೀಕ್ ಎಸ್.ಎಂ., ಲಿಯೋ ಜಿಲ್ಲಾ ಅಧ್ಯಕ್ಷೆ ಡಾ. ರಂಜಿತಾ ಎಚ್. ಶೆಟ್ಟಿ, ಕ್ರಿಸ್ಟೋಫರ್ ಕಾಂಪ್ಲೆಕ್ಸಿನ ವಲೇರಿಯನ್ ಡಯಾಸ್, ಡಾ. ಜಸ್ಪ್ರಿತ್ ಸಿಂಗ್ ದಿಲ್, ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಜಯರಾಜ್ ಭಂಡಾರಿ, ಪುತ್ತೂರು ಅಗ್ರಝೋನ್, ಸಿಝ್ಲರ್ನ ಪಿ.ಎನ್. ಪ್ರಸನ್ನ ಕುಮಾರ್ ಶೆಟ್ಟಿ, ಮದರ್ ಇಂಡಿಯಾದ ಎಂ.ಜಿ. ರಜಾಕ್ ಅತಿಥಿಗಳಾಗಿರುವರು ಎಂದು ಸಂಸ್ಥೆಯ ಮಾಲಕ ಎಂಜಿ ರಫೀಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

ಪುತ್ತೂರು : ನೆಹರುನಗರದಲ್ಲಿ ರೈಲ್ವೇ ಮೇಲ್ವೇತುವೆ ಪುನರ್‌ನಿರ್ಮಾಣ ಹಿನ್ನೆಲೆ

Posted by Vidyamaana on 2023-11-16 13:26:14 |

Share: | | | | |


ಪುತ್ತೂರು : ನೆಹರುನಗರದಲ್ಲಿ ರೈಲ್ವೇ ಮೇಲ್ವೇತುವೆ ಪುನರ್‌ನಿರ್ಮಾಣ ಹಿನ್ನೆಲೆ

ಪುತ್ತೂರು – ನೇರಳಕಟ್ಟೆ ರೈಲು ನಿಲ್ದಾಣಗಳ ನಡುವೆ ಇರುವ ಮೇಲ್ಲೇತುವೆ ಸಂಖ್ಯೆ 520 ಇದರ ಪುನರ್ ನಿರ್ಮಾಣಕ್ಕೆ ಸ೦ಬ೦ಧಿಸಿದ೦ತೆ ನೆಹರುನಗರ ವಿವೇಕಾನಂದ ಕಾಲೇಜು ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗುವುದು ಎಂದು ಸೌತ್ ವೆಸ್ಟರ್ನ್ ರೈಲ್ವೇ ಪ್ರಕಟಣೆಯಲ್ಲಿ ತಿಳಿಸಿದೆ.


ರೈಲ್ವೆ ಮೇಲೇತುವೆ ಪುನರ್ ನಿರ್ಮಾಣಕ್ಕೆ ಸಂಬಂಧಿಸಿ ನ.15ರಿಂದ ಕಾಮಗಾರಿ ಆರ೦ಭಿಸುವ ನಿಟ್ಟಿನಲ್ಲಿ ರಸ್ತೆ ಮುಚ್ಚಲು ಜಿಲ್ಲಾಧಿಕಾರಿಯವರು ಅನುಮತಿ ನೀಡಿದ್ದರು. ಆದರೆ ನ.16ರಂದು ಶಿಲಾನ್ಯಾಸ ಕಾರ್ಯಕ್ರಮ ನಡೆದ ಬಳಿಕ ನ.17ರಿಂದ ಮುಂದಿನ ಮೂರು ತಿಂಗಳು ನೆಹರುನಗರ ವಿವೇಕಾನಂದ ರಸ್ತೆಯನ್ನು ಮುಚ್ಚಲಾಗುವುದು ಎಂದು ರೈಲ್ವೇ ಸೌತ್ ವೆಸ್ಟರ್ನ್ ರೈಲ್ವೇಯ ಸಕಲೇಶಪುರ ವಿಭಾಗದ ಸಹಾಯಕ ವಿಭಾಗೀಯ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುರದಿಂದ ಪರ್ಯಾಯ ರಸ್ತೆ:

ನೆಹರುನಗರ ವಿವೇಕಾನಂದ ಕಾಲೇಜು ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಿದ ಬಳಿಕ ಲಘು ವಾಹನಗಳಿಗೆ ಪರ್ಯಾಯ ವ್ಯವಸ್ಥೆಯಾಗಿ ಮುರದಿಂದ ತೆರಳಲು ಅವಕಾಶವಿದೆ. ಉಳಿದಂತೆ ಹಾರಾಡಿ ಬನ್ನೂರು, ಪಡೀಲು ರಸ್ತೆಯಾಗಿಯೂ ಕಾಲೇಜು ರಸ್ತೆಯನ್ನು ಸಂಪರ್ಕಿಸಬಹುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ



ಕಾನೂನಿನ ಕಣ್ಣಿಗೆ ಮಣ್ಣೆರಚಿ ರಿಕ್ಷಾ ಗಾಜಿಗೆ ಟಿಂಟ್

Posted by Vidyamaana on 2023-07-27 03:25:10 |

Share: | | | | |


ಕಾನೂನಿನ ಕಣ್ಣಿಗೆ ಮಣ್ಣೆರಚಿ ರಿಕ್ಷಾ ಗಾಜಿಗೆ ಟಿಂಟ್

ಪುತ್ತೂರು: ರಿಕ್ಷಾ ಗಾಜಿಗೆ ಟಿಂಟ್ ಹಾಕಿ ಓಡಾಡುತ್ತಿರುವ ರಿಕ್ಷಾಗಳನ್ನು ನಿಲ್ಲಿಸಿ, ಅವುಗಳ ಟಿಂಟ್ ತೆಗೆಸುವ ಕಾರ್ಯಾಚರಣೆಗೆ ಪುತ್ತೂರು ಆರ್.ಟಿ.ಓ. ಅಧಿಕಾರಿಗಳು ಮುಂದಾಗುತ್ತಿದ್ದಾರೆ.

ರಿಕ್ಷಾದ ಮುಂಭಾಗದ ಗಾಜಿಗೆ ಟಿಂಟ್ ಹಾಕುವಂತಿಲ್ಲ ಎನ್ನುತ್ತದೆ ಕಾನೂನು. ಕಂಪೆನಿ ನಿರ್ಮಿಸಿಕೊಡುವ ರಿಕ್ಷಾವನ್ನು ಯಥಾವತ್ತಾಗಿ ಬಳಸಬೇಕು. ಗಾಜಿಗೆ ಟಿಂಟ್ ಹಾಕುವುದಕ್ಕಾಗಲಿ ಅಥವಾ ಗಾಜು ಮುಚ್ಚಿ ಹೋಗುವಂತೆ ಅಕ್ಷರಗಳನ್ನು ಬರೆಯುವುದಾಗಲಿ ಮಾಡುವಂತಿಲ್ಲ. ಹೀಗೆ ಮಾಡುವುದರಿಂದ ರಿಕ್ಷಾ ಚಾಲಕರಿಗೆ ಅಡ್ಡಿಯಾಗಿ, ಅಪಘಾತಕ್ಕೆ ಕಾರಣವಾಗುವ ಸಂದರ್ಭಗಳು ಇವೆ. ಇದಕ್ಕೆ ಹಲವು ನಿದರ್ಶನಗಳು ಇವೆ.

ಪುತ್ತೂರಿನಲ್ಲಿ ಓಡಾಡುವ ರಿಕ್ಷಾಗಳಲ್ಲಿ ಮುಂಭಾಗದ ಗಾಜಿನಲ್ಲಿ ಸ್ವಲ್ಪ ಭಾಗವನ್ನು ಮಾತ್ರ ಬಿಟ್ಟು, ಉಳಿದ ಭಾಗಗಳಿಗೆ ಪೂರ್ತಿಯಾಗಿ ಟಿಂಟ್ ಹಾಕಿರುವುದು ಇದೆ. ರಿಕ್ಷಾದ ಒಳಗಡೆ ತಂಪಿನ ವಾತಾವರಣ ಇರಲಿ ಎಂಬ ಕಾರಣಕ್ಕೆ, ಟಿಂಟ್ ಹಾಕಲಾಗುತ್ತದೆ. ಆದರೆ ಇದುವೇ ಅಪಘಾತಕ್ಕೆ ಕಾರಣವಾಗುವ ಸಂದರ್ಭ ಹೆಚ್ಚು. ಆದ್ದರಿಂದ ಆರ್.ಟಿ.ಓ. ಅಧಿಕಾರಿಗಳು ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಈಗಾಗಲೇ ಹಲವು ರಿಕ್ಷಾಗಳ ಟಿಂಟ್ ಗಳನ್ನು ತೆಗೆಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ರಿಕ್ಷಾಗಳು ಸ್ವಯಂಪ್ರೇರಿತರಾಗಿ ಇಂತಹ ಟಿಂಟ್ ಅಥವಾ ಬರಹಗಳನ್ನು ತೆಗೆಯಬೇಕು ಎನ್ನುವುದು ಕಾರ್ಯಾಚರಣೆಯ ಉದ್ದೇಶ.


ಸುರಕ್ಷಿತ ಚಾಲನೆ ನಿಮ್ಮದಾಗಲಿ:

ರಿಕ್ಷಾದ ಗಾಜಿಗೆ ಟಿಂಟ್ ಹಾಕುವುದು ಅಪಾಯಕಾರಿ. ಟಿಂಟ್ ಹಾಕುವುದು ತಪ್ಪು ಕೂಡ. ಆದ್ದರಿಂದ ದೃಷ್ಟಿಗೆ ಅಡ್ಡವಾಗುವಷ್ಟು ಗಾಜಿಗೆ ಟಿಂಟ್ ಹಾಕಿರುವ ರಿಕ್ಷಾಗಳಿಗೆ ದಂಡ ವಿಧಿಸಲು ಅವಕಾಶವಿದೆ. ಆದ್ದರಿಂದ ರಿಕ್ಷಾ ಚಾಲಕರು ಸ್ವಯಂಪ್ರೇರಿತರಾಗಿ ಇಂತಹ ಟಿಂಟ್ ಗಳನ್ನು ತೆಗೆದು, ಸುರಕ್ಷಿತ ಚಾಲನೆ ನಡೆಸಬೇಕು.

ವಿಶ್ವನಾಥ ಅಜಿಲ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಪುತ್ತೂರು



Leave a Comment: