ಪೊಲೀಸರಿಂದ ಎಸ್ಕೆಪ್ ಆಗಲು ಹೋಗಿ ನೀರುಪಾಲಾದ ಇಬ್ಬರ ರಕ್ಷಣೆ : ಐವರು ನಾಪತ್ತೆ

ಸುದ್ದಿಗಳು News

Posted by vidyamaana on 2024-07-03 10:25:40 |

Share: | | | | |


ಪೊಲೀಸರಿಂದ ಎಸ್ಕೆಪ್ ಆಗಲು ಹೋಗಿ ನೀರುಪಾಲಾದ ಇಬ್ಬರ ರಕ್ಷಣೆ : ಐವರು ನಾಪತ್ತೆ

ವಿಜಯಪುರ: ಇಸ್ಪೀಟ್ ಆಡುವಾಗ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಎಸ್ಕೇಪ್ ಆಗಲು ಹೋಗಿ ತೆಪ್ಪ ಮಗುಚಿದ ಘಟನೆ ನಿನ್ನೆ ಬಳೂತಿ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ. ಅಲ್ಲಿನ ಆಲಮಟ್ಟಿ ಜಲಾಶಯದ ಕೊಲ್ಹಾರ ಬಳಿಯ ಕೃಷ್ಣಾ ನದಿ ಹಿನ್ನೀರು ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಎಂಟು ಜನ ತೆಪ್ಪದಲ್ಲಿ ಕೃಷ್ಣಾ ನದಿಯ ಮೂಲಕ ಎಸ್ಕೇಪ್ ಆಗುವ ವೇಳೆ ದುರಂತ ನಡೆದಿದೆ. ಇನ್ನು, ಮೀನುಗಾರರು ಹಾಗೂ ಸ್ಥಳೀಯರ ನೆರವಿನೊಂದಿಗೆ ಇಬ್ಬರ ರಕ್ಷಣೆ ಮಾಡಲಾಗಿದ್ದು ಇಬ್ಬರ ಇಬ್ಬರ ಮೃತದೇಹ ಸಿಕ್ಕಿದೆ.

ಪುಂಡಲೀಕ ಯಂಕಂಚಿ (35), ಮಹಮ್ಮದ್ ತೈಹದ್ ಚೌಧರಿ(45) ಸಾವನ್ನಪ್ಪಿದ್ದಾರೆ. ಸಚಿನ್ ಕಟಬರ್, ಫಾರೂಕ್ ಅಮದ ರಕ್ಷಣೆ ಮಾಡಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಎಂಟು ಜನ ಕೊಲ್ಹಾರ ಪಟ್ಟಣದವರಾಗಿದ್ದು, ನೀರುಪಾಲಾದವರು ದಶರಥ( 58),ಮೈಬೂಬ್ ವಾಲಿಕಾರ (35), ರಫೀಕ್ ಬಾಂಬೆ ,(40), ರಫೀಕ ಜಾಲಗಾರರಿಗಾಗಿ(48) ಹುಡುಕಾಟ ನಡೆಯುತ್ತಿದೆ.

 Share: | | | | |


ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ:ಪುತ್ತೂರು ಸೇರಿದಂತೆ ಕರಾವಳಿಯಲ್ಲಿ ತುಂತುರು ಮಳೆ

Posted by Vidyamaana on 2024-01-03 10:45:33 |

Share: | | | | |


ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ:ಪುತ್ತೂರು ಸೇರಿದಂತೆ ಕರಾವಳಿಯಲ್ಲಿ ತುಂತುರು ಮಳೆ

ಪುತ್ತೂರು : ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ ಪುತ್ತೂರು ನಗರ ಸೇರಿದಂತೆ ಕರಾವಳಿಯಲ್ಲಿ ತುಂತುರು ಮಳೆಯಾಗುತ್ತಿದೆ.


ಇನ್ನು ಮುಂದಿನ 3-4 ದಿನ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ ದಕ್ಷಿಣ ತಮಿಳುನಾಡು, ಕೇರಳ, ಕರ್ನಾಟಕದ ಕರಾವಳಿ ಮತ್ತು ಲಕ್ಷದ್ವೀಪದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯಿದೆ ಎಂದು ತಿಳಿಸಿದೆ.


ಅಲ್ಲದೆ, ಅರಬ್ಬಿ ಸಮುದ್ರದಲ್ಲಿ ಗಂಟೆ ಕರಾವಳಿಯಲ್ಲಿ 40-55ಕಿಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.

ಪುತ್ತೂರು : ಶಾಸಕರ ಇಂದಿನ ಕಾರ್ಯಕ್ರಮ ಸೆ 5

Posted by Vidyamaana on 2023-09-05 01:36:36 |

Share: | | | | |


ಪುತ್ತೂರು : ಶಾಸಕರ ಇಂದಿನ ಕಾರ್ಯಕ್ರಮ ಸೆ 5

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಸೆ 5 ರಂದು


ಬೆಳಿಗ್ಗೆ 10 ಗಂಟೆಗೆ ಬಂಟರ ಭವನದಲ್ಲಿ ಶಿಕ್ಷಕರ ದಿನಾಚರಣೆ

12.30 ಕ್ಕೆ ಮಿತ್ತೂರು ದಾರುಲ್ ಇರ್ಷಾದ್ ಸ್ಕೂಲ್ ಗೆ ಸಚಿವರ ಭೇಟಿ, ಸಭಾ ಕಾರ್ಯಕ್ರಮ

2 ಗಂಟೆಗೆ ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ 

ಸಭೆಯಲ್ಲಿ  ಭಾಗವಹಿಸಲಿದ್ದಾರೆ

ಪುತ್ತೂರು ನಗರ ಮಂಡಲದ‌ ಮನೆ ಸಂಪರ್ಕ ಅಭಿಯಾನಕ್ಕೆ ಚಾಲನೆ

Posted by Vidyamaana on 2024-03-31 11:00:28 |

Share: | | | | |


ಪುತ್ತೂರು ನಗರ ಮಂಡಲದ‌ ಮನೆ ಸಂಪರ್ಕ ಅಭಿಯಾನಕ್ಕೆ ಚಾಲನೆ

ಪುತ್ತೂರು :ಭಾರತೀಯ ಜನತಾ ಪಾರ್ಟಿಯ ಪುತ್ತೂರು ವಿಧಾನಸಭಾ ಕ್ಷೇತ್ರದ ಪುತ್ತೂರು ನಗರ ಮಂಡಲದ‌ ಮನೆ ಸಂಪರ್ಕ ಅಭಿಯಾನಕ್ಕೆ ಮಾ 31ರಂದು ನೆಲಪ್ಪಾಲಿನ ಬೂತ್ ಸಂಖ್ಯೆ 63 ರಲ್ಲಿ ಚಾಲನೆ ನೀಡಲಾಯಿತು , ಈ ಸಂಧರ್ಭದಲ್ಲಿ ಎಪ್ರಿಲ್ 2ರಂದು ನಡೆಯುವ ಕಾರ್ಯಕರ್ತರ ಸಮಾವೇಶದ ಮಾಹಿತಿ ನೀಡಲಾಯಿತು .

ಅಕ್ಷಯ ಕಾಲೇಜಿನಲ್ಲಿ ಶಿಕ್ಷಕ ಹಾಗೂ ಹೆತ್ತವರ ಸಂಘದ ವತಿಯಿಂದ ನೂತನವಾಗಿ ದಾಖಲಾದ ವಿದ್ಯಾರ್ಥಿಗಳಿಗೆ-ಹೆತ್ತವರಿಗೆ ಮಾಹಿತಿ ಕಾರ್ಯಾಗಾರ

Posted by Vidyamaana on 2023-08-29 02:30:08 |

Share: | | | | |


ಅಕ್ಷಯ ಕಾಲೇಜಿನಲ್ಲಿ ಶಿಕ್ಷಕ ಹಾಗೂ ಹೆತ್ತವರ ಸಂಘದ ವತಿಯಿಂದ ನೂತನವಾಗಿ ದಾಖಲಾದ ವಿದ್ಯಾರ್ಥಿಗಳಿಗೆ-ಹೆತ್ತವರಿಗೆ ಮಾಹಿತಿ ಕಾರ್ಯಾಗಾರ

ಪುತ್ತೂರು : ಅಕ್ಷಯ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಶಿಕ್ಷಕ ಹಾಗೂ ಹೆತ್ತವರ ಸಂಘದ ವತಿಯಿಂದ ನೂತನವಾಗಿ ದಾಖಲಾದ ವಿದ್ಯಾರ್ಥಿಗಳಿಗೆ ಹಾಗೂ ಅವರ ಹೆತ್ತವರಿಗೆ ಮಾಹಿತಿ ಕಾರ್ಯಾಗಾರವನ್ನು ನಡೆಸಲಾಯಿತು.


ಕಾರ್ಯಕ್ರಮವನ್ನು ಅಕ್ಷಯ ಕಾಲೇಜಿನ ಆಡಳಿತ ನಿರ್ದೇಶಕಿ ಕಲಾವತಿ ನಡುಬೈಲು ದೀಪ ಪ್ರಜ್ವಲಿಸಿ ಕಾಲೇಜನ್ನು ಆಯ್ಕೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಕೋರಿ, ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು.

ಕಾಲೇಜಿನ ಪ್ರಾಂಶುಪಾಲ ಸಂಪತ್ ಪಕ್ಕಳ  ಪ್ರಾಸ್ತಾವಿಕ ನುಡಿಯನ್ನಾಡುತ್ತಾ ವಿದ್ಯಾರ್ಥಿಗಳಿಗೆ ಕಾಲೇಜಿನ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.


ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಂಗಳೂರು ಮಿಫ್ಟ್ ಕಾಲೇಜು ನ ಸ್ಥಾಪಕಾಧ್ಯಕ್ಷ ಎಂ.ಜಿ ಹೆಗ್ಡೆ  ಮಾತನಾಡಿ ವಿದ್ಯಾರ್ಥಿಗಳು ಶೈಕ್ಷಣಿಕ ಸಾಲಿನಲ್ಲಿ ಯಾವುದೇ ಸಾಧನೆಯನ್ನು ಮಾಡಲು ಏಕಾಗ್ರತೆ ಮುಖ್ಯವಾಗಿದ್ದು, ಛಲದಿಂದ ವಿದ್ಯಾಭ್ಯಾಸ ಮಾಡಿ ಕಾಲೇಜು ಹಾಗೂ ಪೋಷಕರಿಗೆ ಕೀರ್ತಿ ತಂದು ಕೊಡುವ ಜವಾಬ್ದಾರಿ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿರುತ್ತೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಅರ್ಪಿತ್ ಟಿ.ಎ. ಕಾಲೇಜಿನ ನಿಯಮಾವಳಿಗಳ ಬಗ್ಗೆ ವಿಸ್ತಾರವಾಗಿ ವಿವರಿಸಿದರು.

ಕಾರ್ಯಕ್ರಮವನ್ನು ಉಪನ್ಯಾಸಕರಾದ ರಶ್ಮಿ ಕೆ ಸ್ವಾಗತಿಸಿ, ರಕ್ಷಣ್ ಟಿ ಆರ್ ವಂದಿಸಿದರು. ಉಪನ್ಯಾಸಕಿ ಆಶಿಕಾ ಫರ್ಝಾನ ಕಾರ್ಯಕ್ರಮ ನಿರೂಪಿಸಿದರು.

ಒಂದು ವರದಿಗೆ ಅಲುಗಾಡಿದ ಅದಾನಿ ಸಾಮ್ರಾಜ್ಯ- ನಂ.1 ಶ್ರೀಮಂತ ಪಟ್ಟದಿಂದ 16 ನೇ ಸ್ಥಾನಕ್ಕೆ ಇಳಿದ ಗೌತಮ್ ಅದಾನಿ : 8 ಲಕ್ಷ 19 ಸಾವಿರದ 134 ಕೋಟಿ ನಷ್ಟ

Posted by Vidyamaana on 2023-02-02 15:09:34 |

Share: | | | | |


ಒಂದು ವರದಿಗೆ ಅಲುಗಾಡಿದ ಅದಾನಿ ಸಾಮ್ರಾಜ್ಯ- ನಂ.1 ಶ್ರೀಮಂತ ಪಟ್ಟದಿಂದ 16 ನೇ ಸ್ಥಾನಕ್ಕೆ ಇಳಿದ ಗೌತಮ್ ಅದಾನಿ : 8 ಲಕ್ಷ 19 ಸಾವಿರದ 134 ಕೋಟಿ ನಷ್ಟ

ನವದೆಹಲಿ (ಫೆ.2): ಕಳೆದ ವಾರ ಅದಾನಿ (Adani) ಗ್ರೂಪ್‌ ಕಂಪನಿಗಳ ಮೇಲೆ ಅಮೆರಿಕದ ಶಾರ್ಟ್‌ ಸೆಲ್ಲರ್ ಹಾಗೂ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್‌ ವಂಚನೆ ಹಾಗೂ ಮೋಸದ ಆರೋಪ ಮಾಡಿತ್ತು. ಅಲ್ಲಿಂದ ಇಲ್ಲಿಯವರೆಗೂ ಷೇರುಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ನಷ್ಟಗಳನ್ನು ಕಂಡಿತ್ತು.ಷೇರು ಮಾರುಕಟ್ಟೆಯಲ್ಲಿ ಕಂಪನಿಯ ಷೇರುಗಳು ಕುಸಿತ ಕಾಣುತ್ತಿರುವ ಹಿನ್ನಲೆಯಲ್ಲಿ 20 ಸಾವಿರ ಕೋಟಿಗೂ ಹೆಚ್ಚಿನ ಫಾಲೋಆನ್‌ ಪಬ್ಲಿಕ್‌ ಆಫರ್‌ (ಎಫ್‌ಪಿಓ) ಜೊತೆ ಮುಂದುವರಿಯುವುದು ಸರಿಯಲ್ಲ ಎಂದಿದ್ದ ಅದಾನಿ ಗ್ರೂಪ್‌, ಇದನ್ನು ರದ್ದು ಮಾಡಿತ್ತು. ಸಂಪೂರ್ಣವಾಗಿ ಎಫ್‌ಪಿಓ ಮಾರಾಟವಾಗಿದ್ದರಿಂದ 20 ಸಾವಿರ ಕೋಟಿ ರೂಪಾಯಿಯನ್ನು ಹೂಡಿಕೆದಾರರಿಗೆ ವಾಪಸ್‌ ಮಾಡುವುದಾಗಿ ತಿಳಿಸಿತ್ತು.ಷೇರು ಕುಸಿತ ಕಾಣುತ್ತಿರುವ ಹಂತದಲ್ಲಿ ಎಫ್‌ಪಿಒ ಜೊತೆ ಮುಂದುವರಿಯುವುದು ನೈತಿಕವಾಗಿ ಸರಿಯಲ್ಲ ಎಂದು ಗೌತಮ್‌ ಅದಾನಿ ಕೂಡ ಹೇಳಿದ್ದಾರೆ.

ಈ ನಡುವೆ ಕಂಪನಿಯ ಒಟ್ಟು ಷೇರುಗಳಿಂದಾದ ನಷ್ಟ 100 ಬಿಲಿಯನ್‌ ಡಾಲರ್‌ ಎಂದು ಹೇಳಲಾಗಿದೆ. ಭಾರತೀಯ ರೂಪಾಯಿಯಲ್ಲಿ 8 ಲಕ್ಷದ 19 ಸಾವಿರದ 134 ಕೋಟಿ ರೂ ನಷ್ಟ ಎಂದು ಹೇಳಲಾಗಿದೆ. ಇದರೊಂದಿಗೆ ಏಷ್ಯಾದ ಮೊದಲ ಶ್ರೀಮಂತ ಎಂಬ ಫೋರ್ಬ್ಸ್ ಪಟ್ಟಿಯಲ್ಲಿದ್ದ ಅದಾನಿ ಏಕಾಏಕಿ 16 ನೇ ಸ್ಥಾನಕ್ಕೆ ಕುಸಿದಿದ್ದಾರೆ.ಅದಾನಿ ಸಮೂಹದ ಷೇರುಗಳು ಭಾರಿ ಕುಸಿತ ಕಾಣುತ್ತಿರುವುದು ಹೂಡಿಕೆದಾರರಲ್ಲಿ ತೀವ್ರ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹೂಡಿಕೆದಾರರಿಗೆ ಎದುರಾಗಿರುವ ಅಪಾಯದ ಬಗ್ಗೆ ಚರ್ಚಿಸಲು ದೈನಂದಿನ ಸಂಸದೀಯ ಕಲಾಪವನ್ನು ಮೊಟಕುಗೊಳಿಸಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿದವು.

ಈ ನಡುವೆ ಅದಾನಿ ಸಮೂಹ ಸಂಸ್ಥೆಗಳಿಗೆ ನೀಡಿದ ಸಾಲಗಳ ಕುರಿತಂತೆ ಭಾರತೀಯ ಬ್ಯಾಂಕ್‌ಗಳಿಂದ ರಿಸರ್ವ್‌ ಬ್ಯಾಂಕ್‌ ಮಾಹಿತಿ ಕೇಳಿದೆ ಎಂದು ವರದಿಯಾಗಿದೆ.

ಈ ನಡುವೆ ಸಂಸತ್‌ ಅಧಿವೇಶನದಲ್ಲಿ ಹಿಂಡೆನ್‌ಬರ್ಗ್‌ ಮಾಡಿರುವ ಆರೋಪಗಳ ಬಗ್ಗೆ ಚರ್ಚೆ ನಡೆಸಲು ಸಮಯ ಮೀಸಲಿಡುವಂತೆ ಭಾರತದ ಸಂಸದರು ಆಗ್ರಹಿಸಿದ್ದಾರೆ. ಅದಾನಿ ಗ್ರೂಪ್‌ನಲ್ಲಿ ಸರ್ಕಾರಿ ಮಾಲೀಕತ್ವದ ಭಾರತೀಯ ಜೀವ ವಿಮಾ ನಿಗಮ ಹಾಗೂ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಕೂಡ ದೊಡ್ಡ ಹೂಡಿಕೆದಾರರಾಗಿದ್ದಾರೆ. LIC ಶೇರ್ ಮೌಲ್ಯ ಕುಸಿತವಾಗಿದೆ.ಗುರುವಾರ ಮುಂಬೈನ ಬಿಎಸ್‌ಇ ಆರಂಭಿಕ ವಹಿವಾಟಿನಲ್ಲಿ ಅದಾನಿ ಸಮೂಹದ ಎಲ್ಲಾ 10 ಷೇರುಗಳು ಕೂಡ ಕುಸಿದವು. ಅದಾನಿ ಎಂಟರ್‌ಪ್ರೈಸಸ್‌, ಅದಾನಿ ಟ್ರಾನ್ಸ್‌ಮಿಷನ್‌ ಮತ್ತು ಅದಾನಿ ಪೋರ್ಟ್ಸ್‌ ನಷ್ಟವನ್ನು ಶೇ.10ರಷ್ಟು ಕಂಡಿದೆ. ಹಿಂಡೆನ್‌ಬರ್ಗ್‌ ವರದಿಯಿಂದ ಅದಾನಿ ಕಂಪನಿ ಷೇರುಗಳ ಮಾರಾಟ ವಿಪರೀತವಾಗಿ ಹೆಚ್ಚಾಗಿದೆ.

ಗುರುವಾರ ಮಾರುಕಟ್ಟೆಗಳು ಪ್ರಾರಂಭವಾಗುವ ಸ್ವಲ್ಪ ಸಮಯದ ಮೊದಲು ಬಿಡುಗಡೆಯಾದ ವೀಡಿಯೊದಲ್ಲಿ ಸಂಸ್ಥಾಪಕ ಗೌತಮ್ ಅದಾನಿ, ತಮ್ಮ ಕಂಪನಿಗಳ ಆರ್ಥಿಕ ಸ್ಥಿತಿಗತಿ ಬಗ್ಗೆ ಇರುವ ಕಳವಳಗಳನ್ನು ತಳ್ಳಿಹಾಕಿದರು. ಎಫ್‌ಪಿಓ ರದ್ದು ಮಾಡಿದ್ದರಿಂದ ಈಗಾಗಲೇ ನಡೆಯುತ್ತಿರುವ ಯೋಜನೆಗಳು ಹಾಗೂ ಭವಿಷ್ಯದ ಯೋಜನೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.

ಹೂಡಿಕೆದಾರರನ್ನು ರಕ್ಷಣೆ ಮಾಡುವ ಕಾರಣದಿಂದ ಎಫ್‌ಪಿಓ ಮಾರಾಟವನ್ನು ರದ್ದು ಮಾಡಿದ್ದೇವೆ. ಯಾಕೆಂದರೆ, ಪ್ರಸ್ತುತ ಮಾರುಕಟ್ಟೆಯಲ್ಲಿ ನಮ್ಮ ಷೇರುಗಳು ದೊಡ್ಡ ಮಟ್ಟದಲ್ಲಿ ಇಳಿಕೆ ಕಾಣುತ್ತಿವೆ. ಎಫ್‌ಪಿಓಗೆ ಈಗ ತಾನೆ ಸಹಿ ಹಾಕಿರುವ ಈ ಹೂಡಿಕೆದಾರರು ಇದರಿಂದ ದೊಡ್ಡ ಮಟ್ಟದ ನಷ್ಟ ಕಾಣುತ್ತಾರೆ. ಆ ಕಾರಣದಿಂದ ಎಫ್‌ಪಿಓ ರದ್ದು ಮಾಡಿದ್ದಾಗಿ ಹೇಳಿದ್ದಾರೆ.ನನಗೆ ನನ್ನ ಹೂಡಿಕೆದಾರರ ಹಿತವೇ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಮತ್ತೆಲ್ಲವೂ ನಂತರದ ಸ್ಥಾನದಲ್ಲಿರುತ್ತದೆ ಎಂದು ವಿಡಿಯೋದಲ್ಲಿ ಅದಾನಿ ಹೇಳಿದ್ದಾರೆ. ಹೂಡಿಕೆದಾರರಿಗೆ ಆಗಬಹುದಾದ ನಷ್ಟವನ್ನು ಗಮನದಲ್ಲಿಟ್ಟುಕೊಂಡು ಮಾರಾಟವನ್ನು ಹಿಂಪಡೆದುಕೊಳ್ಳಲಾಗಿದೆ ಎಂದಿದ್ದಾರೆ.

ಅದಾನಿ ಗ್ರೂಪ್‌ ಈವರೆಗೂ 8.4 ಟ್ರಿಲಿಯನ್‌ ರೂಪಾಯಿ ಅಂದರೆ, 102 ಬಿಲಿಯನ್‌ ಯುಎಸ್‌ ಡಾಲರ್‌ ಹಣವನ್ನು ಷೇರುಮಾರುಕಟ್ಟೆಯಿಂದ ಕಳೆದುಕೊಂಡಿದೆ. ಅದಾನಿ ಗ್ರೂಪ್‌ನ ಒಟ್ಟು 10 ಲಿಸ್ಟೆಡ್ ಕಂಪನಿಗಳಿದ್ದು, ಮುಂಬೈ ಮಾರುಕಟ್ಟೆಯಲ್ಲಿ ಎಲ್ಲಾ 10 ಷೇರುಗಳು ಆರಂಭದಲ್ಲಿ ಕುಸಿದರೂ ಬಳಿಕ ಚೇತರಿಕೆ ಕಂಡಿದ್ದವು. ಅದಾನಿ ಎಂಟರ್‌ಪ್ರೈಸಸ್‌ ಕಂಪನಿಯ ಷೇರುಗಳು ಗುರುವಾರ ಒಂದೇ ದಿನ ಶೇ. 18ರಷ್ಟು ಕುಸಿದಿದೆ

ದಕ್ಷಿಣ ಕನ್ನಡದ ನೂತನ ಜಿಲ್ಲಾಧಿಕಾರಿಯಾಗಿ ಮುಲ್ಲೈ ಮುಹಿಲನ್ ನೇಮಕ

Posted by Vidyamaana on 2023-06-16 10:05:32 |

Share: | | | | |


ದಕ್ಷಿಣ ಕನ್ನಡದ ನೂತನ ಜಿಲ್ಲಾಧಿಕಾರಿಯಾಗಿ ಮುಲ್ಲೈ ಮುಹಿಲನ್ ನೇಮಕ

ಮಂಗಳೂರು: ದ.ಕ.ಜಿಲ್ಲಾಧಿಕಾರಿ ರವಿ ಕುಮಾರ್ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಶುಕ್ರವಾರ ಆದೇಶ ಹೊರಡಿಸಿದೆ. ನೂತನ ಜಿಲ್ಲಾಧಿಕಾರಿಯಾಗಿ ಸ್ಮಾರ್ಟ್ ಗವರ್ನೆನ್ಸ್ ಬೆಂಗಳೂರು ಇದರ ಕಾರ್ಯನಿರ್ವಾಹಕ ನಿರ್ದೇಶಕ ಮುಲೈ ಮುಹಿಲನ್ ನೇಮಕಗೊಂಡಿದ್ದಾರೆ.

ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಯಾಗಿದ್ದ ಡಾ. ಕುಮಾರ ಅವರು ಮಂಡ್ಯ ಜಿಲ್ಲಾಧಿಕಾರಿಯಾಗಿ ನೇಮಕಗೊಳಿಸಲಾಗಿದೆ.



Leave a Comment: