ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯ

ಸುದ್ದಿಗಳು News

Posted by vidyamaana on 2024-07-24 16:52:02 |

Share: | | | | |


ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯ

ವದೆಹಲಿ : ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯಿಸಿದರು.


ಈ ಹಿಂದೆ ಮಂಗಳೂರು- ಸುಬ್ರಹ್ಮಣ್ಯ ನಡುವೆ ಮೀಟರ್ ಗೇಜ್ ಹಳಿ ಇದ್ದಾಗ ಪ್ಯಾಸೆಂಜರ್ ರೈಲು ಓಡಾಟ ಇತ್ತು. ಬ್ರಾಡ್ ಗೇಜ್ ಹಳಿ ಮಾಡುವ ಸಲುವಾಗಿ 2005ರಲ್ಲಿ ಈ ರೈಲಿನ ಸಂಚಾರವನ್ನು ನಿಲ್ಲಿಸಲಾಗಿತ್ತು. ಆನಂತರ, ಬ್ರಾಡ್ ಗೇಜ್ ಹಳಿಯಾಗಿ ಪರಿವರ್ತನೆ ಮಾಡಲಾಗಿದೆ. ಅಂದು ಓಡುತ್ತಿದ್ದ ಪ್ಯಾಸೆಂಜರ್ ರೈಲು ಮಂಗಳೂರಿನಿಂದ ಕಬಕ- ಪುತ್ತೂರು ನಡುವೆ ಓಡಾಟ ನಡೆಸುತ್ತಿದ್ದು, ಅದನ್ನು ಸುಬ್ರಹ್ಮಣ್ಯದವರೆಗೆ ವಿಸ್ತರಣೆ ಮಾಡಬೇಕು.

ಮಂಗಳೂರು – ಸುಬ್ರಹ್ಮಣ್ಯ ಮಧ್ಯೆ ರೈಲು ಓಡಾಟವಾದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆ, ಕಾಲೇಜಿಗೆ ಹೋಗುವವರಿಗೆ ಉಪಯೋಗವಾಗಲಿದೆ. ಗ್ರಾಮಾಂತರ ಪ್ರದೇಶವಾದ ಸುಳ್ಯದಿಂದ ಮಂಗಳೂರಿಗೆ ಪ್ರತಿದಿನ ಓಡಾಟ ಮಾಡುವವರಿದ್ದಾರೆ. ಅವರಿಗೂ ಉಪಯುಕ್ತ ಆಗಲಿದೆ. ಇದು ಸೌತ್ ವೆಸ್ಟರ್ನ್ ರೈಲ್ವೇ ವಿಭಾಗದಲ್ಲಿದ್ದು, ನಮ್ಮ ಜಿಲ್ಲೆಯ ಒಳಗೆ ಸಂಚರಿಸುವ ಏಕೈಕ ಪ್ಯಾಸೆಂಜರ್ ರೈಲಾಗಿದೆ.


ಜನಸಾಮಾನ್ಯರ ಹಿತದೃಷ್ಟಿಯಿಂದ ಈ ರೈಲನ್ನು ಸುಬ್ರಹ್ಮಣ್ಯದವರೆಗೂ ವಿಸ್ತರಣೆ ಮಾಡಬೇಕು ಎಂದು ರೈಲ್ವೇ ಸಚಿವರನ್ನು ಮನವಿ ಮಾಡಿದ್ದಾರೆ. ಇದಕ್ಕುತ್ತರಿಸಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಸೇನೆಯಿಂದ ನಿವೃತ್ತಿ ಪಡೆದು ಸಂಸದರಾಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ಬಗ್ಗೆ ಗೌರವ ಹೊಂದಿದ್ದು, ರೈಲ್ವೇ ವಿಚಾರಗಳ ಬಗ್ಗೆ ಯಾವುದೇ ಮನವಿಯಿದ್ದರೂ ನನ್ನ ಕಚೇರಿಗೆ ಬಂದು ವೈಯಕ್ತಿಕವಾಗಿ ಚರ್ಚಿಸಬಹುದು. ಪರಿಹರಿಸಲು ಮುಕ್ತನಿದ್ದೇನೆ ಎಂದು ಹೇಳಿದರು.

 Share: | | | | |


ಮಹಿಳಾ ಪೊಲೀಸ್ ಪೇದೆ ಮಂಜುಶ್ರೀ ಆತ್ಮಹತ್ಯೆ , ಕಾರಣ ನಿಗೂಢ

Posted by Vidyamaana on 2024-02-17 21:19:17 |

Share: | | | | |


ಮಹಿಳಾ ಪೊಲೀಸ್ ಪೇದೆ ಮಂಜುಶ್ರೀ ಆತ್ಮಹತ್ಯೆ , ಕಾರಣ ನಿಗೂಢ

ರಾಮನಗರ, ಫೆ 17: ಮಹಿಳಾ ಪೊಲೀಸ್ ಕಾನ್ ಸ್ಟೇಬಲ್ ಮನೆಯಲ್ಲೇ ನೇಣಿಗೆ ಶರಣಾದ ಘಟನೆ ಹಾರೋಹಳ್ಳಿ ತಾಲೂಕಿನ ದ್ಯಾವಸಂದ್ರ ಗ್ರಾಮದಲ್ಲಿ ನಡೆದಿದೆ.


ದ್ಯಾವಸಂದ್ರ ಗ್ರಾಮದ ಮಂಜುಶ್ರೀ ( 29) ಆತ್ಮಹತ್ಯೆ ಮಾಡಿಕೊಂಡ ಕಾನ್ ಸ್ಟೇಬಲ್.


ಮಂಜುಶ್ರೀ ಅವರು ಬೆಂಗಳೂರಿನ ಮೈಕೋ ಲೆಔಟ್ ಪೋಲಿಸ್ ಠಾಣೆಯಲ್ಲಿ ಕಾನ್ ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದು ಇತ್ತೀಚೆಗೆ ನಿಯೋಜನೆಯಡಿ ಶಿವಾಜಿನಗರ ಪೋಲಿಸ್ ಠಾಣೆಗೆ ವರ್ಗಾವಣೆಗೊಂಡಿದ್ದರು ಎನ್ನಲಾಗಿದೆ.

ಶುಕ್ರವಾರ ತಡರಾತ್ರಿ ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಹಾರೋಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ


ಹಾರೋಹಳ್ಳಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆತ್ಮಹತ್ಯೆಗೆ ಕಾರಣ ಇನ್ನಷ್ಟೇ ತಿಳಿದುಬರಬೇಕಾಗಿದೆ.

ಹಾಲಿ ಶಾಸಕರು ಮಾಜಿ ಶಾಸಕರ ಬಗ್ಗೆ ಅವಹೇಳನಕಾರಿಯಾಗಿ ಮಾತಾನಾಡುವುದು, ಜನತೆಗೆ ಸುಳ್ಳು ಮಾಹಿತಿ ನೀಡುವುದು ಘನತೆಗೆ ತಕ್ಕುದಲ್ಲ’ – ರಾಧಾಕೃಷ್ಣ ಆಳ್ವ

Posted by Vidyamaana on 2024-01-13 21:27:38 |

Share: | | | | |


ಹಾಲಿ ಶಾಸಕರು ಮಾಜಿ ಶಾಸಕರ ಬಗ್ಗೆ ಅವಹೇಳನಕಾರಿಯಾಗಿ ಮಾತಾನಾಡುವುದು, ಜನತೆಗೆ ಸುಳ್ಳು ಮಾಹಿತಿ ನೀಡುವುದು ಘನತೆಗೆ ತಕ್ಕುದಲ್ಲ’ – ರಾಧಾಕೃಷ್ಣ ಆಳ್ವ

ಪುತ್ತೂರು : ಆರಂಭದ ಒಂದು ಮಳೆಗೆ ಕೊಡೆ ಹರಿದಂತೆ ಎಂಬ ಗಾದೆಯಂತೆ ಶಾಸಕರಾಗಿ ಮೊದಲ ಅರ್ಧ ವರ್ಷದಲ್ಲಿಯೇ ಈ ಹಿಂದಿನ ಶಾಸಕರು ತಂದಿರುವ ಅನುದಾನದ ಕಾಮಗಾರಿಯು ಶಿಲಾನ್ಯಾಸವಾಗಿ ಕೆಲಸ ಪ್ರಗತಿಯಲ್ಲಿರುವಾಗಲೇ ಹಾಲಿ ಶಾಸಕರು ಮತ್ತೊಮ್ಮೆ ಶಂಕುಸ್ಥಾಪನೆ ಮಾಡುತ್ತಾ ಇರುವುದು ಜನಸಾಮಾನ್ಯರ ನಡುವಿನಲ್ಲಿ ನಗೆಪಾಟಲಿಗೀಡಾಗಿರುವುದಂತು ಸತ್ಯ ಎಂದು ಪುತ್ತೂರು ಗ್ರಾಮಾಂತರ ಮಂಡಲದ ಪದಾಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷರಾದ ರಾಧಕೃಷ್ಣ ಆಳ್ವ ಹೇಳಿದರು.


ಪುತ್ತೂರು ಕ್ಷೇತ್ರಾದ್ಯಂತ ಈಗ ನಡೆಯುತ್ತಿರುವ ಎಲ್ಲಾ ಕಾಮಗಾರಿಗಳು ಅದರಲ್ಲಿಯೂ ಉಪ್ಪಿನಂಗಡಿಯ ದ್ವಿಪದ ರಸ್ತೆಯಾಗಿರಲಿ., ಬಿಳಿಯೂರುಕಟ್ಟೆ-ಸಾಜ-ಕುದ್ದುಪದವು ರಸ್ತೆಯ ಕಾಮಗಾರಿಯಾಗಿರಲಿ.., ಎಲ್ಲವೂ ಕೂಡ ಬಿಜೆಪಿ ಸರಕಾರ ಇರುವಾಗ ಬಂದಿರುವಂತ ಅನುದಾನಗಳು ಆದರೆ ಹಾಲಿ ಶಾಸಕರು ಹೋದಲ್ಲಿ ಎಲ್ಲಾ ಮಾಜಿ ಶಾಸಕರನ್ನು ಅವಹೇಳನಕಾರಿಯಾಗಿ ಮಾತಾನಾಡುವುದು ಮತ್ತು ಜನರಿಗೆ ಸುಳ್ಳು ಮಾಹಿತಿಯನ್ನು ನೀಡುವುದು ಘನತೆಗೆ ತಕ್ಕುದಲ್ಲ ಎಂದು ಹೇಳಿದರು.ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಅಂಗವಾಗಿ ಜನವರಿ14ರಿಂದ 21ರವರೆಗೆ ದೇವಸ್ಥಾನ, ದೈವಸ್ಥಾನ, ಮಠ ಮಂದಿರಗಳ ಸ್ವಚ್ಛತೆಯಲ್ಲಿ ಕಾರ್ಯಕರ್ತರು ,ಪದಾಧಿಕಾರಿಗಳು ಭಾಗವಹಿಸಬೇಕು ಮತ್ತು ಜ.22 ಪ್ರತಿಷ್ಠಾ ದಿನದಂದು ಎಲ್ಲಾ ಹಿಂದೂ ಮನೆಗಳಲ್ಲಿ ಪ್ರಧಾನಿಯವರ ಆಶಯದಂತೆ ದೀಪ ಬೆಳಗಿಸುವಂತೆ ಈ ಸಂದರ್ಭದಲ್ಲಿ ವಿನಂತಿಸಿದರು.


ಮಂಡಲದ ಪ್ರ.ಕಾರ್ಯದರ್ಶಿ ನಿತೀಶ್ ಶಾಂತಿವನ ಸ್ವಾಗತಿಸಿದರು.


ಮಂಡಲ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್ , ಮುಕುಂದ ಬಜತ್ತೂರು, ಅರುಣ್ ವಿಟ್ಲ, ಮೀನಾಕ್ಷಿ ಮಂಜುನಾಥ್,ಉಷಾ ಮುಳಿಯ,ವಿಜಯ ಕೋರಂಗ, ಖಜಾಂಜಿ ರಮೇಶ್ ಭಟ್, ಕಾರ್ಯದರ್ಶಿ ರಮಣಿ ಗಾಣಿಗ, ಲೋಹಿತ್ ಅಮ್ಚಿನಡ್ಕ, ವಿವಿಧ ಮೋರ್ಚಾ ಅಧ್ಯಕ್ಷ ಕಾರ್ಯದರ್ಶಿಗಳಾದ ಯಶಸ್ವಿನಿ ಶಾಸ್ತ್ರಿ, ಯಶೋಧ ಗೌಡ, ಸುರೇಶ್ ಕಣ್ಣರಾಯ, ಪುನೀತ್ ಮಾಡತ್ತಾರು, ನವೀನ್ ಪಡ್ನೂರು,ಸುನೀಲ್ ದಡ್ಡು, ಮಹಾಶಕ್ತಿ ಕಾರ್ಯದರ್ಶಿಗಳಾದ ಸುರೇಶ್ ಅತ್ರಮಜಲು, ದಯಾನಂದ ಶೆಟ್ಟಿ ಉಜ್ರೆಮಾರು ಮೊದಲಾದವರು ಉಪಸ್ಥಿತರಿದ್ದರು.ಮಂಡಲ ಪ್ರ.ಕಾರ್ಯದರ್ಶಿ ಪುರುಷೋತ್ತಮ ಮಂಗ್ಲಿಮನೆ ಧನ್ಯವಾದ ಸಲ್ಲಿಸಿದರು.

ಅಡಕೆ ಬೆಳೆಗಾರರಿಗೆ ಶಾಕ್ : ಶ್ರೀಲಂಕಾದಿಂದ 5 ಲಕ್ಷ ಟನ್‌ ಆಮದಿಗೆ ಕಂಪನಿ ಒಪ್ಪಂದ

Posted by Vidyamaana on 2024-03-09 14:40:53 |

Share: | | | | |


ಅಡಕೆ ಬೆಳೆಗಾರರಿಗೆ ಶಾಕ್ : ಶ್ರೀಲಂಕಾದಿಂದ 5 ಲಕ್ಷ ಟನ್‌ ಆಮದಿಗೆ ಕಂಪನಿ ಒಪ್ಪಂದ

ನವದೆಹಲಿ: ಅಡಕೆ ಮಾರಾಟ ಹಂಗಾಮು ಆರಂಭವಾಗಿರುವ ಸಂದರ್ಭದಲ್ಲೇ ಶ್ರೀಲಂಕಾದಿಂದ ಭರ್ಜರಿ 5 ಲಕ್ಷ ಟನ್‌ ಅಡಕೆಯನ್ನು ಆಮದು ಮಾಡಿಕೊಳ್ಳಲು ಕಂಪನಿಯೊಂದು ಮುಂದಾಗಿದೆ. ಇದರಿಂದಾಗಿ ಅಡಕೆ ಬೆಳೆಗಾರರಿಗೆ ದರ ಕುಸಿತದ ಆತಂಕ ಎದುರಾಗಿದೆ. ಶ್ರೀಲಂಕಾದಿಂದ ಅಡಕೆ ಆಮದು ಸಂಬಂಧ ಬ್ರಿಟನ್‌ ಮೂಲದ ಎಸ್‌ರಾಂ ಅಂಡ್‌ ಎಂರಾಂ ಗ್ರೂಪ್‌ ಒಪ್ಪಂದ ಮಾಡಿಕೊಂಡಿದೆ.ಶ್ರೀಲಂಕಾ ಮೂಲದ ವ್ಯಾಪಾರಿ ಸಂಸ್ಥೆ ಪ್ರೈಮ್‌ ಸ್ಟಾರ್ ಪ್ರೈವೇಟ್‌ ಲಿಮಿಟೆಡ್‌ ಜತೆ ಅಡಕೆ ಆಮದು ಒಪ್ಪಂದ ಮಾಡಿಕೊಂಡಿರುವುದಾಗಿ ಎಸ್‌ರಾಂ ಅಂಡ್‌ ಎಂರಾಂ ಗ್ರೂಪ್‌ ಶುಕ್ರವಾರ ತಿಳಿಸಿದೆ.


2022ರ ಏಪ್ರಿಲ್‌-ಡಿಸೆಂಬರ್‌ ಅವಧಿಯಲ್ಲಿ ಭಾರತ 53.71 ಕೋಟಿ ರು. ಮೌಲ್ಯದ ಅಡಕೆ ಆಮದು ಮಾಡಿಕೊಂಡಿತ್ತು. ಆದರೆ 2023ರ ಏಪ್ರಿಲ್‌-ಡಿಸೆಂಬರ್‌ ಅವಧಿಯಲ್ಲಿ ಇದು 4.04 ಕೋಟಿ ರು.ಗೆ ಕುಸಿದಿತ್ತು. ಇದೀಗ ಲಂಕಾದಿಂದ ಭಾರಿ ಪ್ರಮಾಣದಲ್ಲಿ ಆಮದಿಗೆ ಬ್ರಿಟನ್‌ ಕಂಪನಿ ಮುಂದಾಗಿರುವುದರಿಂದ ಸಹಜವಾಗಿಯೇ ಅಡಕೆ ಬೆಳೆಗಾರರುಕಂಗಾಲಾಗುವಂತಾಗಿದೆ. ದೇಶದಲ್ಲಿ ಅಡಕೆ ಸಾಂಸ್ಕೃತಿಕ ಮಹತ್ವ ಹೊಂದಿದ್ದು, ದೇಶದ ಹಲವು ಸಂಪ್ರದಾಯ ಹಾಗೂ ಸಮಾರಂಭಗಳಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ..ಇಂಡೋನೇಷ್ಯಾ, ಬಾಂಗ್ಲಾದೇಶ ಹಾಗೂ ಶ್ರೀಲಂಕಾದಿಂದ ಭಾರತ ಅಡಕೆ ಆಮದು ಮಾಡಿಕೊಳ್ಳುತ್ತದೆ. ಗುಣಮಟ್ಟ ಕಾಯ್ದುಕೊಳ್ಳುವ ಸಲುವಾಗಿ ಕೇಜಿಗೆ 351 ರು.ಗಿಂತ ಕಡಿಮೆ ಇಲ್ಲದ ಅಡಕೆ (ಸುಪಾರಿ) ಆಮದಿಗೆ ಮಾತ್ರವೇ ಅವಕಾಶವಿದೆ ಎಂದುದು ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ ತಿಳಿಸಿದೆ.

ಚುನಾವಣೆಯ ಸಂದರ್ಭ ವರ್ಗಾವಣೆಗೊಂಡಿದ್ದ ಎಸ್ಯೆಗಳನ್ನು ಪೂರ್ವದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಠಾಣೆಗಳಿಗೆ ಮತ್ತೆ ನಿಯುಕ್ತಿಗೊಳಿಸಿ ಆದೇಶ

Posted by Vidyamaana on 2024-06-20 20:32:19 |

Share: | | | | |


ಚುನಾವಣೆಯ ಸಂದರ್ಭ ವರ್ಗಾವಣೆಗೊಂಡಿದ್ದ ಎಸ್ಯೆಗಳನ್ನು ಪೂರ್ವದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಠಾಣೆಗಳಿಗೆ ಮತ್ತೆ ನಿಯುಕ್ತಿಗೊಳಿಸಿ ಆದೇಶ

ಮಂಗಳೂರು : ಲೋಕಸಭಾ ಚುನಾವಣೆಯ ಸಂದರ್ಭ ವರ್ಗಾವಣೆಗೊಂಡಿದ್ದ ಎಸ್ಸೈಗಳನ್ನು ಚುನಾವಣಾ ಪೂರ್ವದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಠಾಣೆಗಳಿಗೆ ಮತ್ತೆ ನಿಯುಕ್ತಿಗೊಳಿಸಿ ಆದೇಶ ಹೊರಡಿಸಲಾಗಿದೆ.

ಆಂಜನೇಯ ರೆಡ್ಡಿ ಪುತ್ತೂರು ಠಾಣೆಗೆ, ಉದಯರವಿ ವೈ.ಎಂ. ಪುತ್ತೂರು ಸಂಚಾರ ಠಾಣೆಗೆ, ನಂದಕುಮಾರ್ ಎಂ. ಪುಂಜಾಲಕಟ್ಟೆ ಠಾಣೆಗೆ, ಸಂಜೀವ ಕೆ.ಬಂಟ್ವಾಳ ಸಂಚಾರ ಠಾಣೆಗೆ, ಸೇಸಮ್ಮ ಕೆ.ಎಸ್. ಪುತ್ತೂರು ನಗರ ಠಾಣೆಗೆ, ಕುಟ್ಟಿ ಮೇರ ಪುತ್ತೂರು ಸಂಚಾರ ಠಾಣೆಗೆ, ಎನ್.ಕೆ. ಓಮನ ಪುಂಜಾಲಕಟ್ಟೆ ಠಾಣೆಗೆ, ರುಕ್ಮ ನಾಯ್ಕ್ ಉಪ್ಪಿನಂಗಡಿ ಠಾಣೆಗೆ, ಭಾರತಿ ಬಂಟ್ವಾಳ ಗ್ರಾಮಾಂತರ ಠಾಣೆಗೆ, ಲೋಲಾಕ್ಷ ಕೆ. ಬಂಟ್ವಾಳ ಗ್ರಾಮಾಂತರ ಠಾಣೆಗೆ, ಕಲೈಮಾರ್ ಬಂಟ್ವಾಳ ನಗರ ಠಾಣೆಗೆ, ರತ್ನಕುಮಾರ್ ಎಂ. ವಿಟ್ಲಕ್ಕೆ, ಕೃಷ್ಣ ಬಿ.

ಪುತ್ತೂರಿನ ಎಲ್ ಟಿ.ಮುಹಮ್ಮದ್ (ಬಾವು) ಹೃದಯಾಘಾತದಿಂದ ನಿಧನ

Posted by Vidyamaana on 2023-06-15 08:25:21 |

Share: | | | | |


ಪುತ್ತೂರಿನ ಎಲ್ ಟಿ.ಮುಹಮ್ಮದ್ (ಬಾವು) ಹೃದಯಾಘಾತದಿಂದ ನಿಧನ

ಪುತ್ತೂರು: ಮೂಲತಃ ಚಿಕ್ಕಪುತ್ತೂರು ರೈಲ್ವೇ ನಿಲ್ದಾಣ ಬಳಿಯ ನಿವಾಸಿ ಎಲ್.ಟಿ. ಮುಹಮ್ಮದ್ (ಬಾವು) ಜೂನ್ 15ರಂದು ಸೌದಿ ಅರೇಬಿಯಾದ ರಿಯಾದಿನಲ್ಲಿ ಹೃದಯಾಘಾತದಿಂದ ನಿಧನರಾದರು.

ಇವರು ಪುತ್ತೂರಿನ ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಅಧ್ಯಕ್ಷ ಎಲ್.ಟಿ. ಅಬ್ದುಲ್ ರಝಾಕ್ ಹಾಜಿ ಅವರ ಸಹೋದರ.

ಪುತ್ತೂರು : ಪೊಲೀಸ್ ದೌರ್ಜನ್ಯದಿಂದ ಹಲ್ಲೆಗೊಳಗಾದ ಯುವಕರ ಆರೋಗ್ಯ ವಿಚಾರಿಸಿದ ಆಶಾ ತಿಮ್ಮಪ್ಪ ಗೌಡ

Posted by Vidyamaana on 2023-05-18 10:43:00 |

Share: | | | | |


ಪುತ್ತೂರು : ಪೊಲೀಸ್ ದೌರ್ಜನ್ಯದಿಂದ ಹಲ್ಲೆಗೊಳಗಾದ ಯುವಕರ ಆರೋಗ್ಯ ವಿಚಾರಿಸಿದ ಆಶಾ ತಿಮ್ಮಪ್ಪ ಗೌಡ

ಪುತ್ತೂರು : ಬ್ಯಾನರ್ ಪ್ರಕರಣದಲ್ಲಿ ಪೊಲೀಸ್ ದೌರ್ಜನ್ಯಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾದ ಯುವಕರ ಆರೋಗ್ಯವನ್ನು ಪುತ್ತೂರು ವಿಧಾನ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಆಶಾ ತಿಮ್ಮಪ್ಪ ಗೌಡ ರವರು ವಿಚಾರಿಸಿದರು.ಆಸ್ಪತ್ರೆಗೆ ಭೇಟಿ ನೀಡಿದ ಆಶಾ ತಿಮ್ಮಪ್ಪ ಗೌಡ ರವರು ಯುವಕರ ಆರೋಗ್ಯ ವಿಚಾರಿಸಿದರು.ಈ ವೇಳೆ ಹಲವು ಪ್ರಮುಖರು ಉಪಸ್ಥಿತರಿದ್ದರು.

Recent News


Leave a Comment: