ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯ

ಸುದ್ದಿಗಳು News

Posted by vidyamaana on 2024-07-24 16:52:02 |

Share: | | | | |


ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯ

ವದೆಹಲಿ : ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯಿಸಿದರು.


ಈ ಹಿಂದೆ ಮಂಗಳೂರು- ಸುಬ್ರಹ್ಮಣ್ಯ ನಡುವೆ ಮೀಟರ್ ಗೇಜ್ ಹಳಿ ಇದ್ದಾಗ ಪ್ಯಾಸೆಂಜರ್ ರೈಲು ಓಡಾಟ ಇತ್ತು. ಬ್ರಾಡ್ ಗೇಜ್ ಹಳಿ ಮಾಡುವ ಸಲುವಾಗಿ 2005ರಲ್ಲಿ ಈ ರೈಲಿನ ಸಂಚಾರವನ್ನು ನಿಲ್ಲಿಸಲಾಗಿತ್ತು. ಆನಂತರ, ಬ್ರಾಡ್ ಗೇಜ್ ಹಳಿಯಾಗಿ ಪರಿವರ್ತನೆ ಮಾಡಲಾಗಿದೆ. ಅಂದು ಓಡುತ್ತಿದ್ದ ಪ್ಯಾಸೆಂಜರ್ ರೈಲು ಮಂಗಳೂರಿನಿಂದ ಕಬಕ- ಪುತ್ತೂರು ನಡುವೆ ಓಡಾಟ ನಡೆಸುತ್ತಿದ್ದು, ಅದನ್ನು ಸುಬ್ರಹ್ಮಣ್ಯದವರೆಗೆ ವಿಸ್ತರಣೆ ಮಾಡಬೇಕು.

ಮಂಗಳೂರು – ಸುಬ್ರಹ್ಮಣ್ಯ ಮಧ್ಯೆ ರೈಲು ಓಡಾಟವಾದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆ, ಕಾಲೇಜಿಗೆ ಹೋಗುವವರಿಗೆ ಉಪಯೋಗವಾಗಲಿದೆ. ಗ್ರಾಮಾಂತರ ಪ್ರದೇಶವಾದ ಸುಳ್ಯದಿಂದ ಮಂಗಳೂರಿಗೆ ಪ್ರತಿದಿನ ಓಡಾಟ ಮಾಡುವವರಿದ್ದಾರೆ. ಅವರಿಗೂ ಉಪಯುಕ್ತ ಆಗಲಿದೆ. ಇದು ಸೌತ್ ವೆಸ್ಟರ್ನ್ ರೈಲ್ವೇ ವಿಭಾಗದಲ್ಲಿದ್ದು, ನಮ್ಮ ಜಿಲ್ಲೆಯ ಒಳಗೆ ಸಂಚರಿಸುವ ಏಕೈಕ ಪ್ಯಾಸೆಂಜರ್ ರೈಲಾಗಿದೆ.


ಜನಸಾಮಾನ್ಯರ ಹಿತದೃಷ್ಟಿಯಿಂದ ಈ ರೈಲನ್ನು ಸುಬ್ರಹ್ಮಣ್ಯದವರೆಗೂ ವಿಸ್ತರಣೆ ಮಾಡಬೇಕು ಎಂದು ರೈಲ್ವೇ ಸಚಿವರನ್ನು ಮನವಿ ಮಾಡಿದ್ದಾರೆ. ಇದಕ್ಕುತ್ತರಿಸಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಸೇನೆಯಿಂದ ನಿವೃತ್ತಿ ಪಡೆದು ಸಂಸದರಾಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ಬಗ್ಗೆ ಗೌರವ ಹೊಂದಿದ್ದು, ರೈಲ್ವೇ ವಿಚಾರಗಳ ಬಗ್ಗೆ ಯಾವುದೇ ಮನವಿಯಿದ್ದರೂ ನನ್ನ ಕಚೇರಿಗೆ ಬಂದು ವೈಯಕ್ತಿಕವಾಗಿ ಚರ್ಚಿಸಬಹುದು. ಪರಿಹರಿಸಲು ಮುಕ್ತನಿದ್ದೇನೆ ಎಂದು ಹೇಳಿದರು.

 Share: | | | | |


ಸರಕಾರಿ ಬಸ್ ಮತ್ತು ಲಾರಿ ಮುಖಾಮುಖಿ: ಇಬ್ಬರ ದುರ್ಮರಣ

Posted by Vidyamaana on 2024-01-24 18:53:59 |

Share: | | | | |


ಸರಕಾರಿ ಬಸ್ ಮತ್ತು ಲಾರಿ ಮುಖಾಮುಖಿ: ಇಬ್ಬರ ದುರ್ಮರಣ

ಗದಗ: ಸಾರಿಗೆ ಸಂಸ್ಥೆಯ ಬಸ್ ಹಾಗೂ ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಕೊಪ್ಪಳ ರಸ್ತೆಯ ಹಳ್ಳಿಕೇರಿ- ಬನ್ನಿಕೊಪ್ಪ ನಡುವೆ ಜರುಗಿದೆ.


ಕೊಪ್ಪಳದಿಂದ ಗದಗ ಕಡೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಹಾಗೂ ಗದಗದಿಂದ ಕೊಪ್ಪಳಕ್ಕೆ ತೆರಳುತ್ತಿದ್ದ ತಮಿಳುನಾಡು ಮೂಲದ ಲಾರಿ ನಡುವೆ ಈ ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ಲಾರಿ ಚಾಲಕ ಹಾಗೂ ಬಸ್‌ನಲ್ಲಿದ್ದ ಮಹಿಳೆ ಸ್ಥಳದಲ್ಲೇ ಮೃತಪಟ್ಟ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತರನ್ನು ಲಾರಿ ಚಾಲಕ ವಿನೋದಕುಮಾರ್‌ ಹಾಗೂ ಕೊಪ್ಪಳ ಜಿಲ್ಲೆಯ ಭಾಗ್ಯನಗರ ನಿವಾಸಿ ಗೀತಾ ಎನ್ನಲಾಗಿದೆ. ಮೃತ ಮಹಿಳೆ ಸವದತ್ತಿ ತಾಲೂಕಿನ ಯಲ್ಲಮ್ಮನಗುಡ್ಡಕ್ಕೆ ಹೊರಟಿದ್ದರು ಎನ್ನಲಾಗಿದೆ.ಹದಿನೈದಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಅದರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡವರನ್ನು ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಪ್ರಭುಗೌಡ, ಇನ್ಸ್‌ಪೆಕ್ಟರ್ ಮಂಜುನಾಥ್ ಕುಸಗಲ್ ಹಾಗೂ ಸಿಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನೆಲ್ಯಾಡಿ : ಮದುವೆಗೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಕಂಟೈನರ್ ಮಧ್ಯೆ ಭೀಕರ ಅಪಘಾತ

Posted by Vidyamaana on 2024-04-03 20:41:13 |

Share: | | | | |


ನೆಲ್ಯಾಡಿ : ಮದುವೆಗೆ ತೆರಳುತ್ತಿದ್ದ  ಖಾಸಗಿ ಬಸ್ ಹಾಗೂ ಕಂಟೈನರ್ ಮಧ್ಯೆ ಭೀಕರ ಅಪಘಾತ

ನೆಲ್ಯಾಡಿ : ಖಾಸಗಿ ಬಸ್ ಹಾಗೂ ಕಂಟೈನ‌ರ್ ವಾಹನದ ನಡುವೆ ಅಪಘಾತ ಸಂಭವಿಸಿ ಹಲವರು ಗಂಭೀರ ಗಾಯಗೊಂಡ ಘಟನೆ ಏ.3 ರಂದು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಉದನೆ ಎಂಬಲ್ಲಿ ನಡೆದಿದೆ.

ಪುತ್ತೂರಿನಲ್ಲಿ ಮತ್ತೆ ಬಂದಿದೆ ಚರುಂಬುರಿ ಹಬ್ಬ

Posted by Vidyamaana on 2023-08-12 10:54:11 |

Share: | | | | |


ಪುತ್ತೂರಿನಲ್ಲಿ ಮತ್ತೆ ಬಂದಿದೆ ಚರುಂಬುರಿ ಹಬ್ಬ

ಪುತ್ತೂರು: ಚರುಂಬುರಿ ಪ್ರಿಯರೇ ಇತ್ತ ಕೇಳಿ, ಪುತ್ತೂರಿನಲ್ಲಿ ಮತ್ತೊಮ್ಮೆ ಚರುಂಬುರಿ ಹಬ್ಬ ಶುರುವಾಗಿದೆ.

ಇತಿಹಾಸದಲ್ಲೇ ಮೊದಲ ಬಾರಿಗೆ ಚರುಂಬುರಿ ಹಬ್ಬದ ಪರಿಕಲ್ಪನೆಯನ್ನು ಜನರ ಮುಂದಿಟ್ಟು ಯಶಸ್ವಿಯಾಗಿರುವ ಪ್ರಭು ಸ್ವೀಟ್ಸ್ & ಚರುಂಬುರಿ ಸಂಸ್ಥೆ ಇದೀಗ ಮತ್ತೊಮ್ಮೆ ಚರುಂಬುರಿ ಹಬ್ಬವನ್ನು ಕೈಗೊಂಡಿದೆ.

ಆ. 12ರಂದು ಸಂಜೆ 6.30ಕ್ಕೆ ಚರುಂಬುರಿ ಹಬ್ಬಕ್ಕೆ ಚಾಲನೆ ಸಿಗಲಿದೆ. ಬಳಿಕ ಆಗಸ್ಟ್ 15ರವರೆಗೆ ಪ್ರತಿದಿನ ಸಂಜೆ 4ರಿಂದ ರಾತ್ರಿ 11 ಗಂಟೆಯವರೆಗೆ ಚರುಂಬುರಿ ಹಬ್ಬ ನಡೆಯಲಿದೆ. ಕೊಂಬೆಟ್ಟು ರಸ್ತೆಯ ಜಿ.ಎಲ್. ಟ್ರೇಡ್ ಸೆಂಟರ್ ಬಿಲ್ಡಿಂಗಿನ ರೂಫ್ ಟಾಪಿನಲ್ಲಿ ಹಬ್ಬ ಮೂಡಿಬರಲಿದೆ.

ಉದ್ಘಾಟನಾ ಸಮಾರಂಭದಲ್ಲಿ ತುಳು ಚಿತ್ರರಂಗ ಹಾಗೂ ರಂಗಭೂಮಿ ನಟ ಸತೀಶ್ ಬಂದಳೆ ಅವರು ಚರುಂಬುರಿ ಹಬ್ಬ ಉದ್ಘಾಟಿಸಲಿದ್ದಾರೆ. ಭಟ್ ಆ್ಯಂಡ್ ಭಟ್ ಯೂಟ್ಯೂಬ್ ವಾಹಿನಿಯ ಸ್ಥಾಪಕ ಸುದರ್ಶನ್ ಭಟ್ ಮುಖ್ಯ ಅತಿಥಿಯಾಗಿರುವರು. ಪುತ್ತೂರಿನ ಡಾ. ಶಿವರಾಮ ಭಟ್ ಕ್ಲಿನಿಕಿನಲ್ಲಿ ಕಾಂಪೌಂಡರ್ ಆಗಿದ್ದು, ಇದೀಗ ತನ್ನ ವೃತ್ತಿಗೆ ನಿವೃತ್ತಿ ಘೋಷಿಸಿರುವ ನರಸಿಂಹ ಭಟ್ ಅವರಿಗೆ ಇದೇ ಸಂದರ್ಭ ಸನ್ಮಾನಿಸಲಾಗುವುದು. 

ಹಿಂದಿನ ಕಾಲದಲ್ಲಿ ಜಾತ್ರೆ ಎಂದರೆ ಚರುಂಬುರಿ. ಜಾತ್ರೆಯ ಗದ್ದೆಯಲ್ಲಿ ಚರುಂಬುರಿ ತಯಾರಿಸುವ ದೃಶ್ಯ ಇಂದಿಗೂ ಎಲ್ಲರ ಸ್ಮೃತಿಪಟಲದಲ್ಲಿ ಸದಾ ಹಸಿರು. ಇದೇ ಚಿತ್ರಣವನ್ನು ಮತ್ತೆ ನಿಮ್ಮ ಮನದಲ್ಲಿ ತುಂಬಿಕೊಡುವ ಪ್ರಯತ್ನ ಚರುಂಬುರಿ ಹಬ್ಬದಲ್ಲಿ ನಡೆಯಲಿದೆ. ಆಗ ಚರುಂಬುರಿ ಮಾಡುತ್ತಿದ್ದ ವಿಧಾನ ಹಾಗೂ ಆಗಿನ ರುಚಿಯ ಚರುಂಬುರಿಯನ್ನು ಈಗಿನ ಜನರಿಗೆ ಒದಗಿಸುವ ಪ್ರಯತ್ನ ಇಲ್ಲಿ ನಡೆಯಲಿದೆ. ನೆಲದ ಮೇಲೆ ಕುಳಿತು, ಗ್ಯಾಸ್ ಲೈಟ್ ಉರಿಸಿ, ಆಧುನಿಕ ರುಚಿವರ್ಧಕ ಬಳಸದೇ ಮಾಡುವ ಚರುಂಬುರಿ ಈ ಬಾರಿಯ ವಿಶೇಷ ಆಕರ್ಷಣೆ. ಇಷ್ಟಲ್ಲದೆ ರೂ. 20ರಿಂದ ರೂ. 50ರ ತನಕ ವಿವಿಧ ಬಗೆಯ ಚರುಂಬುರಿಗಳು ಈ ಹಬ್ಬದಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಮಾಲಕ ರಾಜೇಶ್ ಪ್ರಭು ತಿಳಿಸಿದ್ದಾರೆ.

ಬಂಟರ ಭವನದ ಪ್ರಾಂಗಣದಲ್ಲಿ ಚರುಂಬುರಿ ಹಬ್ಬಕ್ಕೆ ಆಗಮಿಸುವವರಿಗಾಗಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು 200 ಜನ ಕುಳಿತು ಚರುಂಬುರಿ ಸೇವಿಸುವ ವ್ಯವಸ್ಥೆಯನ್ನು ಜಿ.ಎಲ್. ಟ್ರೇಡ್ ಸೆಂಟರಿ ಮಾಳಿಗೆಯಲ್ಲಿ ಮಾಡಲಾಗಿದೆ.


ಹೊಸ ಪರಿಕಲ್ಪನೆ ಮುಂದಿಟ್ಟಿರುವ ಪ್ರಭು ಚರುಂಭುರಿ

ಈ ಚರುಂಬುರಿ ಹಬ್ಬ ಪರಿಕಲ್ಪನೆಯೇ ಹೊಸದು. ಕಳೆದ ಸುಮಾರು 25 ವರ್ಷಗಳಿಂದ ಚರುಂಬುರಿ ವ್ಯವಹಾರದಲ್ಲಿ ತೊಡಗಿಕೊಂಡಿರುವ ಪ್ರಭು ಚರುಂಬುರಿ, ಆರಂಭದಲ್ಲಿ ಬಂಟ್ವಾಳದ ಸುತ್ತಮುತ್ತ ಚರುಂಬುರಿ ವ್ಯವಹಾರ ಮಾಡಿಕೊಂಡಿದ್ದರು. ಬಳಿಕ ಪುತ್ತೂರಿನ ಶ್ರೀಧರ್ ಭಟ್ ಅವರ ಅಂಗಡಿ ಮುಂಭಾಗದಲ್ಲಿಯೂ ವ್ಯವಹಾರ ನಡೆಸಿಕೊಂಡಿದ್ದರು. ಇದೀಗ ಕಳೆದ ಮೂರು ವರ್ಷಗಳಿಂದ ಕೊಂಬೆಟ್ಟಿನ ಬಂಟರ ಭವನದ ಮುಂಭಾಗದ ಜಿ.ಎಲ್. ಟ್ರೇಡ್ ಸೆಂಟರಿನಲ್ಲಿ ಪ್ರಭು ಚರುಂಬುರಿ ಅಂಗಡಿ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಒಮ್ಮೆ ಚರುಂಬುರಿ ಹಬ್ಬವನ್ನು ಆಯೋಜಿಸಿದ್ದು, ಗ್ರಾಹಕರಿಂದ ಶಹಬ್ಬಾಸ್ ಗಿರಿ ದೊರಕಿತ್ತು. ಇದೀಗ ಎರಡನೇ ಬಾರಿ ಚರುಂಬುರಿ ಹಬ್ಬವನ್ನು ಪುತ್ತೂರಿನಲ್ಲಿ ಆಯೋಜಿಸಲಾಗುತ್ತಿದೆ.

ಇಂದು ರಂಜಾನ್ ಹಬ್ಬ ಹಿನ್ನೆಲೆ; ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ ಘೋಷಣೆ

Posted by Vidyamaana on 2024-04-10 10:27:49 |

Share: | | | | |


ಇಂದು ರಂಜಾನ್ ಹಬ್ಬ ಹಿನ್ನೆಲೆ; ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ ಘೋಷಣೆ

ಮಂಗಳೂರು: ಇಂದು ರಂಜಾನ್ ಹಬ್ಬ ಹಿನ್ನೆಲೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ.

ಏ.11ರಂದು ಇದ್ದ ಸಾರ್ವತ್ರಿಕ ರಜೆಯನ್ನು ಏ.10ರಂದು ನೀಡಿ ದ.ಕ. ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.

ಕರ್ನಾಟಕ ಸರಕಾರವು 2024ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ದಿನಾಂಕ: 11-04-2024 ರಂದು ರಂಜಾನ್ ಹಬ್ಬದ ಪ್ರಯುಕ್ತ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿತ್ತು

ದ.ಕ ಜಿಲ್ಲೆಯಲ್ಲಿ ಮುಂದಿನ 2 ದಿನ ಗುಡುಗು ಸಹಿತ ಆಲಿಕಲ್ಲು ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

Posted by Vidyamaana on 2023-03-20 02:58:57 |

Share: | | | | |


ದ.ಕ ಜಿಲ್ಲೆಯಲ್ಲಿ ಮುಂದಿನ 2 ದಿನ ಗುಡುಗು ಸಹಿತ ಆಲಿಕಲ್ಲು ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ಮಾರ್ಚ್ 21ರಿಂದ ಮತ್ತೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂಬುದಾಗಿ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಈ ಬಗ್ಗೆ ಮಾಹಿತಿ ನೀಡಿರುವಂತ ಹವಾಮಾನ ಇಲಾಖೆಯು, ಮೇಲೆ ಸುಳಿಗಾಳಿಯ ಪರಿಣಾಮದಿಂದಾಗಿ ರಾಜ್ಯದ ಕೊಡಗು, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ತುಮಕೂರು, ಉಡುಪಿ, ಬೀದರ್, ಬೆಳಗಾವಿ, ಬಾಗಲಕೋಟೆ, ಯಾದಗಿರಿ ಹಾಗೂ ಕಲಬುರ್ಗಿ ಜಿಲ್ಲೆಯಲ್ಲಿ ಮುಂದಿನ 2 ದಿನ ಗುಡುಗು ಸಹಿತ ಆಲಿಕಲ್ಲು ಮಳೆಯಾಗಲಿದೆ ಎಂಬುದಾಗಿ ಮುನ್ಸೂಚನೆ ನೀಡಿದೆ.ಅಂದಹಾಗೆ ಕಳೆದ ಭಾನುವಾರದಂದು ಮೈಸೂರಿನ ಹುಣಸೂರು, ತುಮಕೂರಿನ ಚಿಕ್ಕನಾಯಕನಹಳ್ಳಿ, ಉಡುಪಿಯ ಬ್ರಹ್ಮಾವರ, ಬಳ್ಳಾರಿಯ ಹಗರಿಬೊಮ್ಮನಹಳ್ಳಿ, ಚಾಮರಾಜನಗರದ ಹರದಹಳ್ಳಿ ಹಾಗೂ ವಿವಿಧೆಡೆ ಆಲಿಕಲ್ಲು ಸಹಿತ ಮಳೆಯಾಗಿತ್ತು. ಆಲಿಕಲ್ಲಿನ ಬೆಳ್ಳನೆಯ ರಾಶಿ ಕಂಡ ಜನರು ಕರ್ನಾಟಕ ಹಿಮಾಲಯವಾಗಿದೆ ಎಂಬುದಾಗಿ ಅಚ್ಚರಿಗೊಂಡಿದ್ದರು. ಈ ಬೆನ್ನಲ್ಲೆ ಮಾರ್ಚ್ 21ರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮತ್ತೆ ಆಲಿಕಲ್ಲು ಸಹಿತ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕನಿಕರವಿಲ್ಲದ ಸಾವೂ ಒಂದು ಕ್ಷಣ ಮರುಗಿರಲಾರದೇ

Posted by Vidyamaana on 2023-06-02 09:45:03 |

Share: | | | | |


ಕನಿಕರವಿಲ್ಲದ ಸಾವೂ ಒಂದು ಕ್ಷಣ ಮರುಗಿರಲಾರದೇ

ಕೈಚಾಚಿ ಕೇಳಿದವರಿಗೆ ಇಲ್ಲ ಎಂದಿದ್ದೇ ಇಲ್ಲ… ಅದೆಷ್ಟು ಹಣ ನೀಡಿದರೋ, ಅದೆಷ್ಟು ದಾನ ಮಾಡಿದರೋ, ಅದೆಷ್ಟು ಮಂದಿ ಇವರಿಂದ ಪ್ರಯೋಜನ ಪಡೆದುಕೊಂಡರೋ… ಪಡಕೊಂಡವರಿಗಷ್ಟೇ ಗೊತ್ತು...

ಬಡವರೆಂದರೆ ಮಮ್ಮಲ ಮರುಗುವ ಹಾರೀಸ್, ಸೌದಿಯಲ್ಲಿ ಕಂಪೆನಿಯೊಂದನ್ನು ನಡೆಸುತ್ತಿದ್ದರು. ತನಗೆ ಬರುತ್ತಿದ್ದ ವರಮಾನದಲ್ಲಿ ಅದೇಷ್ಟೋ ಪಾಲನ್ನು ಸಮಾಜಕ್ಕಾಗಿಯೇ ಮೀಸಲಿಟ್ಟವರು. ಕಷ್ಟದಲ್ಲಿದ್ದ ಅಸಹಾಯಕರಿಗೆ ಧರ್ಮ, ಜಾತಿ ನೋಡದೇ ನೆರವು ನೀಡಿದ್ದಾರೆ. ಧಾರ್ಮಿಕ ಕ್ಷೇತ್ರ, ಸಾಮಾಜಿಕ ಕ್ಷೇತ್ರಗಳಿಗೆ ಎಷ್ಟೋ ಹಣವನ್ನು ಲೆಕ್ಕವಿಲ್ಲದೇ ನೀಡಿದ್ದಾರೆ. ಆದರೆ ಈ ವಿಚಾರ ಪಡೆದುಕೊಂಡವರಿಗೆ ಬಿಟ್ಟು, ಬೇರಾರಿಗೂ ಗೊತ್ತೇ ಇಲ್ಲ. ‘ಬಲಗೈಯಲ್ಲಿ ನೀಡಿದ ದಾನ, ಎಡಗೈಗೂ ತಿಳಿಯಬಾರದು’ ಎಂಬ ಸಂತವಾಣಿಯನ್ನು ಚಾಚೂ ತಪ್ಪದೇ ಪಾಲಿಸಿದವರು. ಇದೇ ಕಾರಣಕ್ಕೆ ಹಾರೀಸ್ ಮೇಲ್ಮಟ್ಟದಲ್ಲಿ ನಿಲ್ಲುತ್ತಾರೆ. ಅವರ ಸಾವು ಸಾವಿರಾರು ಮಂದಿಯ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ. 

ದೂರದ ಸೌದಿಯಲ್ಲಿದ್ದರೂ, ಭಾರತದ ಅದರಲ್ಲೂ ಕರುನಾಡಿನ ಅನೇಕ ಯುವಕರಿಗೆ ಉದ್ಯೋಗ ನೀಡಿದ ಉದ್ಯೋಗದಾತ ಹಾರೀಸ್. ಇದರೊಂದಿಗೆ ತನ್ನ ದೇಶದ ಬಡವರ ಬಗ್ಗೆ ಕಳಕಳಿ. ತನ್ನ ಮನೆಯವರಿಂದ ಬಳುವಳಿಯಾಗಿ ಬಂದ ನಿಷ್ಕಲ್ಮಷ ನಗುವಿನ ಈ ಸರದಾರ, ತನ್ನ ಸಮಾಜ ಪ್ರೇಮವನ್ನು ಮೆರೆದ ಬಗೆ ಹೀಗಿದೆ ನೋಡಿ.

ಬದುಕಿದ್ದ ಅಷ್ಟೂ ದಿನ ಪರೋಪಕಾರಿಯಾಗಿ ಜೀವನ ಸಾಗಿಸಿದರು. ಧರ್ಮ ತೋರಿಸಿದ ಹಾದಿಯನ್ನು ತನ್ನ ಜೀವನದಲ್ಲಿ ಪಾಲಿಸಿಕೊಂಡು ಬಂದರು. ನಗುನಗುತ್ತಲೇ, ಇತರರ ಬಾಳಿನಲ್ಲೂ ನಗು ತರಿಸಲು ಪ್ರಯತ್ನಿಸಿದರು. ಸಾವು ಎದುರು ಬಂದು ನಿಂತಾಗಲೂ ಮುಖದ ನಗು ಮಾಸಲಿಲ್ಲ. ಆದರೆ ಇವರ ಸಾವನ್ನು ಕಂಡು ಅದೆಷ್ಟು ಮಂದಿ ಮರುಕ ಪಟ್ಟರೋ, ಅದೆಷ್ಟು ಮಂದಿಯ ಕಣ್ಣಂಚು ಒದ್ದೆಯಾಯಿತೋ, ಅದೆಷ್ಟು ಮಂದಿ ಭಿಕ್ಕಿ ಭಿಕ್ಕಿ ಅತ್ತರೋ…

ಮೇ 27ರಂದು ವಿಧಿಯ ಮುಂದೆ ಮಂಡಿಯೂರಿ ಕುಳಿತುಬಿಟ್ಟರು ಹಾರೀಸ್...!!

         ಸಾವಿಗೂ ಪ್ರಿಯವೆನ್ನಿಸಿರಬೇಕು ಇವರು. ಸಾವು ಬಂದು ಬಿಗಿದಪ್ಪಿಕೊಂಡೇ ಬಿಟ್ಟಿತು, ಹಾರೀಸ್ ದೇಹ ಬಿಟ್ಟು ಸಾವಿನ ನಂತರದ ಪಯಣ ಶುರು ಮಾಡಿದರು. ಜೂನ್ 1ರಂದು ಬೆಳಿಗ್ಗೆ ಹಾರೀಸ್ ಮೃತದೇಹ ಹುಟ್ಟೂರು ಪುತ್ತೂರಿಗೆ ಆಗಮಿಸಿತು. ಸೌದಿಯಿಂದ ಅವರ ಅಭಿಮಾನಿಗಳೇ ಅನೇಕ ಮಂದಿ ಮೃತದೇಹದ ಜೊತೆಗೆ ವಿಮಾನ ಏರಿ ಜೊತೆಯಲ್ಲೇ ಬಂದಿದ್ದರು. ಇದೇ ನೋಡಿ ಅವರು ಸಂಪಾದಿಸಿದ ಪ್ರೀತಿ, ಗೌರವ, ಸ್ನೇಹ.

ಹಾರೀಸ್ ತಂದೆ, ತಾಯಿ, ಪತ್ನಿ, ನಾಲ್ವರು ಮಕ್ಕಳು,ಸಹೋದರಿ,ಸಹೋದರನನ್ನು ಅಗಲಿದ್ದಾರೆ.

Recent News


Leave a Comment: