ಶಿರೂರಿನ ಭೂಕುಸಿತದಲ್ಲಿ ಕಾಣೆಯಾದ ಲಾರಿ ನೀರಿನ ಅಡಿಯಲ್ಲಿ ಪತ್ತೆ; ಮಾಹಿತಿ ನೀಡಿದ ಸಚಿವ

ಸುದ್ದಿಗಳು News

Posted by vidyamaana on 2024-07-24 18:06:21 | Last Updated by Vidyamaana on 2024-07-24 18:06:21

Share: | | | | |


ಶಿರೂರಿನ ಭೂಕುಸಿತದಲ್ಲಿ ಕಾಣೆಯಾದ ಲಾರಿ ನೀರಿನ ಅಡಿಯಲ್ಲಿ ಪತ್ತೆ; ಮಾಹಿತಿ ನೀಡಿದ ಸಚಿವ

ಕಾರವಾರ: ಉತ್ತರ ಕನ್ನಡದ ಶಿರೂರಿನ ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಕೋಝಿಕ್ಕೋಡ್ ಮೂಲದ ಅರ್ಜುನ್ ಅವರ ಲಾರಿ ಎಂದು ನಂಬಲಾದ ಟ್ರಕ್ ನದಿಯ ಆಳದಲ್ಲಿ ಇರುವ ಸುಳಿವು ಲಭ್ಯವಾಗಿದೆ. ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಇದನ್ನು ಖಚಿತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಸಚಿವರು ಮಾಹಿತಿ ನೀಡಿದ್ದಾರೆ.

ನದಿಯ ಕೆಳಭಾಗದಲ್ಲಿ ಟ್ರಕ್ ಪತ್ತೆಯಾಗಿದೆ ಎಂದು ತಿಳಿದು ಬಂದಿದ್ದು ಅದಕ್ಕಾಗಿ ಶೋಧ ನಡೆಯುತ್ತಿದೆ.

ಶಿರೂರಿನಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯ ಒಂಬತ್ತನೇ ದಿನದಂದು, ಲಾರಿಯ ಬಗ್ಗೆ ನಿರ್ಣಾಯಕ ಮಾಹಿತಿಯನ್ನು ಪಡೆಯಲಾಗಿದೆ. ಇಂದು ಬೆಳಗ್ಗೆ ಬೂಮ್ ಲೆಂಗ್ತ್ ಕ್ರೇನ್ ಬಂದಿದ್ದು, ತಪಾಸಣೆ ಪುನರಾರಂಭವಾಗಿದೆ. ಈ ಯಂತ್ರವು 60 ಅಡಿ ಆಳದವರೆಗೆ ಹುಡುಕಬಲ್ಲ ಸಾಮರ್ಥ್ಯ ಹೊಂದಿದೆ. ಪೊಲೀಸ್ ವಾಹನದೊಂದಿಗೆ ವಾಹನವನ್ನು ಸ್ಥಳಕ್ಕೆ ತರಲಾಗಿದೆ.

ಈ ಕುರಿತು ಕೃಷ್ಣ ಬೈರೇಗೌಡ Xನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ X ಖಾತೆಯಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.ಜುಲೈ 16 ರಂದು ಬೆಳಿಗ್ಗೆ ಕೋಝಿಕ್ಕೋಡ್‌ನ ಕಂಡ್ಯಕ್ಕಲ್ ಮೂಲದ ಅರ್ಜುನ್ (30) ಕರ್ನಾಟಕ-ಗೋವಾ ಗಡಿಯಲ್ಲಿ ಹಾದು ಹೋಗುವ ಪನ್ವೇಲ್-ಕನ್ಯಾಕುಮಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದ್ದರು. ಭೂಕುಸಿತದಲ್ಲಿ ಟೀ ಅಂಗಡಿ ಮಾಲೀಕ ಸೇರಿದಂತೆ 10 ಜನರು ಸಾವನ್ನಪ್ಪಿದ ಸ್ಥಳದಲ್ಲಿ ಲಾರಿಯ ಜಿಪಿಎಸ್ ಸ್ಥಳವನ್ನು ಕೊನೆಯದಾಗಿ ಪತ್ತೆ ಹಚ್ಚಲಾಯಿತು.

 Share: | | | | |


ಬಂಟ್ವಾಳ ಸಂಬಂಧಿ ಯುವತಿಯ ಮೇಲೆ ಅತ್ಯಾಚಾರ: ಆರೋಪಿ ಬಂಧನ

Posted by Vidyamaana on 2024-07-27 07:09:23 |

Share: | | | | |


ಬಂಟ್ವಾಳ ಸಂಬಂಧಿ ಯುವತಿಯ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಬಂಟ್ವಾಳ : ಸಂಬಂಧಿ ಯುವತಿಯನ್ನು ಅತ್ಯಾಚಾರ ಮಾಡಿ ಗರ್ಭವತಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿವಾಹಿತನಾಗಿರುವ ಗುರುಪ್ರಸಾದ್‌ ಬಂಧಿತ ಆರೋಪಿಯಾಗಿದ್ದು, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಏಕರೂಪ ನಾಗರಿಕ ಸಂಹಿತೆ ಜಾರಿಗೆ ಮಹತ್ವದ ಹೆಜ್ಜೆ

Posted by Vidyamaana on 2023-06-14 15:44:21 |

Share: | | | | |


ಏಕರೂಪ ನಾಗರಿಕ ಸಂಹಿತೆ ಜಾರಿಗೆ ಮಹತ್ವದ ಹೆಜ್ಜೆ

ನವದೆಹಲಿ: ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತಂತೆ (Uniform Civil Code) ಕೇಂದ್ರ ಸರ್ಕಾರವು ಮಹತ್ವದ ಹೆಜ್ಜೆ ಇರಿಸಿದೆ.ಏಕರೂಪ ನಾಗರಿಕ ನೀತಿ ಸಂಹಿತೆ ಜಾರಿ ಕುರಿತು 22ನೇ ಭಾರತೀಯ ಕಾನೂನು ಆಯೋಗವು ಜನರಿಂದ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ. ದೇಶದ ನಾಗರಿಕರು, ಪ್ರಮುಖ ಧಾರ್ಮಿಕ ಸಂಸ್ಥೆಗಳು ಏಕರೂಪ ನಾಗರಿಕ ಸಂಹಿತೆ ಕುರಿತು 30 ದಿನಗಳಲ್ಲಿ ಅಭಿಪ್ರಾಯ ಸಲ್ಲಿಸಬೇಕು ಎಂದು ಕಾನೂನು ಆಯೋಗ ಸೂಚಿಸಿದೆ.


ದೇಶದ ನ್ಯಾಯಾಲಯಗಳು ಕೂಡ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿವೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಕೂಡ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಿಯೇ ಸಿದ್ಧ ಎಂದು ಈಗಾಗಲೇ ಹೇಳಿದ್ದಾರೆ. ಇದರ ಬೆನ್ನಲ್ಲೇ, ಕಾನೂನು ಆಯೋಗವು ಸಾರ್ವಜನಿಕರಿಂದ, ಧಾರ್ಮಿಕ ಸಂಸ್ಥೆಗಳಿಂದ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿರುವುದು ಪ್ರಮುಖ ವಿಷಯವಾಗಿದೆ. ಜನ ಹಾಗೂ ಧಾರ್ಮಿಕ ಸಂಸ್ಥೆಗಳ ಸಹಮತದೊಂದಿಗೆ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಆಯೋಗ ಮುಂದಾಗಿದೆ.

ಏನಿದು ಏಕರೂಪ ನಾಗರಿಕ ಸಂಹಿತೆ?

ಜಾತಿ, ಧರ್ಮ, ಪಂಥಗಳ ಭೇದ-ಭಾವ ಇಲ್ಲದೆ, ದೇಶದ ಎಲ್ಲರಿಗೂ ಒಂದೇ ಕಾನೂನು ಇರಬೇಕು ಎಂಬುದೇ ಏಕರೂಪ ನಾಗರಿಕ ಸಂಹಿತೆಯಾಗಿದೆ. ಸಂವಿಧಾನದ 44ನೇ ವಿಧಿಯು ಕೂಡ ಏಕರೂಪ ನಾಗರಿಕ ಸಂಹಿತೆ ಇರಬೇಕು ಎಂದು ಹೇಳುತ್ತದೆ. ಹಾಗಾಗಿ, ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಬೇಕು ಎಂದು 2019ರಲ್ಲಿಯೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಎಲ್ಲರಿಗೂ ಒಂದೇ ಕಾನೂನು ಜಾರಿಗೆ ಬರುತ್ತದೆ. ಇದಕ್ಕಾಗಿ, ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಬಾರದು ಎಂದು ಹಲವು ಧಾರ್ಮಿಕ ಸಂಸ್ಥೆಗಳು, ರಾಜಕಾರಣಿಗಳ ಒತ್ತಾಯವಾಗಿದೆ.ಜನರು ಹಾಗೂ ಧಾರ್ಮಿಕ ಸಂಸ್ಥೆಗಳ ಅಭಿಪ್ರಾಯ ಪಡೆದುಕೊಂಡೇ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ತೀರ್ಮಾನಿಸಿದ ಕಾರಣ ಸಾಮಾನ್ಯ ಜನರು ಕೂಡ ಸಂಹಿತೆ ಜಾರಿ ಕುರಿತಂತೆ ಅಭಿಪ್ರಾಯ ಸಲ್ಲಿಸಬಹುದಾಗಿದೆ. ಭಾರತೀಯ ಕಾನೂನು ಆಯೋಗದ membersecretary-lci@gov.inಗೆ ಇ-ಮೇಲ್‌ ಮಾಡುವ ಮೂಲಕ ನಿಮ್ಮ ಅಭಿಪ್ರಾಯವನ್ನೂ ದಾಖಲಿಸಬಹುದು. ಅಂದಹಾಗೆ, ನೀವು ಅಭಿಪ್ರಾಯ ತಿಳಿಸಲು 30 ದಿನ ಮಾತ್ರ ಕಾಲಾವಕಾಶವಿದೆ. ಅಧಿಸೂಚನೆ ಹೊರಡಿಸಲಾದ 30 ದಿನಗಳೊಳಗೆ ಅಭಿಪ್ರಾಯ ಸಲ್ಲಿಸಬಹುದು.

ಬೆಳ್ತಂಗಡಿ : ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯ ಬಂಧನ

Posted by Vidyamaana on 2023-12-22 11:45:46 |

Share: | | | | |


ಬೆಳ್ತಂಗಡಿ : ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯ ಬಂಧನ

ಬೆಳ್ತಂಗಡಿ : ವೇಣೂರು ಪೊಲೀಸ್ ಠಾಣೆಯಲ್ಲಿ 2016 ರಲ್ಲಿ ದಾಖಲಾದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ಯ Addl Civil Judge & JMFC ಬೆಳ್ತಂಗಡಿ ನ್ಯಾಯಲಯದಲ್ಲಿ‌ ದಾಖಲಾದ ಸಿ.ಸಿ ನಂಬ್ರ 535/2016 ಮತ್ತು ಸಿ.ಸಿ ನಂಬ್ರ 871/2017 ರಲ್ಲಿ ಸುಮಾರು 6 ರಿಂದ 7 ವರ್ಷಗಳಿಂದ ತನ್ನ ಸ್ವಂತ ವಿಳಾಸದಲ್ಲಿ ವಾಸ ಮಾಡದೆ ವಿವಿಧ ಕಡೆಗಳಲ್ಲಿ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯಾದ ಸುಳ್ಯ ತಾಲೂಕಿನ ಐವತ್ತೋಕ್ಲು ಗ್ರಾಮದ ಪಂಜದ,ನೆಲ್ಲಿಕಟ್ಟೆ ನಿವಾಸಿ ದಿ.ಆದಂ ಮಗನಾದ ಶರೀಫ್ @ ಮಹಮ್ಮದ್  ಶರೀಫ್ (43) ಎಂಬಾತನನ್ನು ಬೆಳ್ತಂಗಡಿ ಸರ್ಕಲ್‌ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ನಿರ್ದೇಶನದಂತೆ ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀ ಶೈಲಾ ಮತ್ತು ಸಬ್ ಇನ್ಸ್ಪೆಕ್ಟರ್ ಆನಂದ್ ಎಮ್ ನೇತೃತ್ವದ ಸಿಬ್ಬಂದಿ ಪ್ರವೀಣ್ ಎಂ ಮತ್ತು ಸಚಿನ್ ರವರು ಡಿ.21 ರಂದು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ವಿಟ್ಲದ ಸಾರಡ್ಕ ಎಂಬಲ್ಲಿ ವಶಕ್ಕೆ ಪಡೆದುಕೊಂಡು ನಂತರ ಬಂಧಿಸಿ ಮಾನ್ಯ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು  ಮಾನ್ಯ ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಸಂಪ್ಯದಲ್ಲಿ ವಿಜೃಂಭಿಸಿದ ನವಚೇತನಾ ಯುವಕ ಮಂಡಲದ 41ನೇ ವರ್ಷದ ಗಣೇಶೋತ್ಸವ

Posted by Vidyamaana on 2023-09-21 11:30:57 |

Share: | | | | |


ಸಂಪ್ಯದಲ್ಲಿ ವಿಜೃಂಭಿಸಿದ ನವಚೇತನಾ ಯುವಕ ಮಂಡಲದ 41ನೇ ವರ್ಷದ ಗಣೇಶೋತ್ಸವ

ಪುತ್ತೂರು: ಸಂಪ್ಯ ನವಚೇತನಾ ಯುವಕ ಮಂಡಲದ ವತಿಯಿಂದ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಎರಡು ದಿನಗಳ ಕಾಲ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ 41ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಭ್ರಮದಿಂದ ನಡೆಯಿತು.

ವೇ.ಮೂ ಸಂದೀಪ್ ಕಾರಂತರವರ ನೇತೃತ್ವದಲ್ಲಿ ನಡೆದ ಗಣೇಶೋತ್ಸವದಲ್ಲಿ ಬೆಳಿಗ್ಗೆ ಶ್ರೀಗಣೇಶನ ವಿಗ್ರಹದ ಆಗಮನದ ಬಳಿಕ ಗಣೇಶ ವಿಗ್ರಹ ಪ್ರತಿಷ್ಠೆ, ಗಣಹೋಮ ನಡೆದ ಬಳಿಕ ವಿವಿಧ ಭಜನಾ ಮಂಡಳಿಯವರಿಂದ ಭಜನೆ ನಡೆದ ಬಳಿಕ ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗೆ ವಿವಿಧ ಸ್ಪರ್ಧೆಗಳು ನೆರವೇರಿತು.

ಮಧ್ಯಾಹ್ನ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ದೈವ ನರ್ತಕ ಡಾ. ರವೀಶ್ ಪಡುಮಲೆ ಮಾತನಾಡಿ, ಸನಾತನ ಧರ್ಮವಾಗಿರುವ ಹಿಂದು ಧರ್ಮವನ್ನು ಸರ್ವ ನಾಶ ಮಾಡಬೇಕು ಎಂದು ಹೇಳಿಕೆ ನೀಡಿರುವುದನ್ನು ನಾವೆಲ್ಲ ಖಂಡಿಸಬೇಕು. ತಮಿಳುನಾಡಿನಲ್ಲಿ ಉದಯನಿಧಿ ನೀಡಿರುವ ಹೇಳಿಕೆಯನ್ನು ಉತ್ತರ ಪ್ರದೇಶದಲ್ಲಿ ಮುಸ್ಲಿಂ ಸಮುದಾಯ ವಿರೋಧಿಸಿದ್ದು, ಹಿಂದು ಸಮಾಜದ ಶಕ್ತಿಯನ್ನು  ತೋರಿಸುತ್ತದೆ. ಹಿಂದು ಸಮಾಜಕ್ಕೆ ಮುಸ್ಲಿಂರಿಂದ ಹೊಡೆತವಲ್ಲ. ಸಮಾಜದ ಒಳಗಿನವರಿಂದಲೇ ತೊಂದರೆಯಾಗಿದೆ ಎಂದ ಅವರು, ನವಚೇತನ ಯುವಕ ಮಂಡಲವು ಸಂಘಟನೆ ಮಾತ್ರವಲ್ಲ. ಹಿಂದು ಸಮಾಜ ಒಗ್ಗೂಡಿಸುವ ಪ್ರಯತ್ನ ನಡೆಯುತ್ತದೆ. ನಮ್ಮ ಸಂಸ್ಕೃತಿ ಉಳಿಸಲು ಸಮಾಜ ಒಂದಾಗಬೇಕು ಎಂದು ಹೇಳಿದರು.

ರೋಟರಿ ಕ್ಲಬ್ ಸಹಾಯಕ ಗವರ್ನರ್ ಪುರಂದರ ರೈ ಮಿತ್ರಂಪಾಡಿ ಮಾತನಾಡಿ, ಯುವಕ ಮಂಡಲ ನಮ್ಮ ಊರಿನ ಸ್ವತ್ತು. ಯುವಕರ ಉತ್ತಮ ಕೆಲಸಗಳಿಗೆ ಪ್ರೋತ್ಸಾಹ ನೀಡಿ, ಅವರು ದಾರಿ ತಪ್ಪಿದಾದ ಸರಿದಾರಿಗೆ ತರುವ ಕೆಲಸ ಹಿರಿಯರಿಂದ ಆಗಬೇಕು ಎಂದರು.

ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ಆದಿಪೂಜಿತ ಎಂದು ಹೆಸರಿರುವ ಗಣಪತಿ ವಿಶ್ವವ್ಯಾಪಿಯಾಗಿದೆ. ಗಣಪತಿ ಸ್ನೇಹ, ಒಗ್ಗಟ್ಟು, ಪ್ರೀತಿಯ ಸಂಕೇತ. ಭಕ್ತಿಯಿಂದ ಆಚರಿಸಿದರೆ ಇಷ್ಟಾರ್ಥ ಸಿದ್ದಿಯಾಗುತ್ತದೆ ಎಂದರು. 

ಸನ್ಮಾನ ಸ್ವೀಕರಿಸಿದ ವಿದ್ಯಾಮಾತ ಅಕಾಡೆಮಿಯ ಭಾಗ್ಯೇಶ್ ರೈ ಮಾತನಾಡಿ, ಮಕ್ಕಳಿಗೆ ಸಂಸ್ಕಾರ ನೀಡುವುದು ಶಿಕ್ಷಣ ಸಂಸ್ಥೆಗಳಲ್ಲ. ಸಂಸ್ಕಾರ ನೀಡುವುದು ಪೋಷಕರ ಜವಾಬ್ದಾರಿಯಾಗಿದೆ. ನವಚೇತನಾ ಯುವಕ ಮಂಡಲದಿಂದ ನೀಡಲಾಗುವ ಪ್ರತಿಭಾ ಪುರಸ್ಕಾರಕ್ಕೆ ವಿದ್ಯಾಮಾತಾ ಅಕಾಡೆಮಿಯಿಂದಲೂ ಸಹಕಾರ ನೀಡುವುದಾಗಿ ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಪ್ರಾರಂಭಗೊಂಡಿರುವ ಗಣೇಶೋತ್ಸವವು ಹಿಂದು ಸಮಾಜವನ್ನು ಒಟ್ಟುಗೂಡಿಸಿ, ಸಂಘಟಿಸುವ ನಿಟ್ಟಿನಲ್ಲಿ ಇಂದಿಗೂ ಪ್ರಸ್ತುತವಾಗಿದೆ. ಎಲ್ಲರ ಭಾಗವಹಿಸುವವಿಕೆಯೊಂದಿಗೆ ಮಾದರಿಯಾಗಿ ನಡೆಯುತ್ತಿದೆ. ಯುವಕ ಮಂಡಲವು ಗಣೇಶೋತ್ಸವಕ್ಕೆ ಸೀಮಿತವಾಗಿರದೆ ದೇವಸ್ಥಾನದ ಎಲ್ಲಾ ಕಾರ್ಯಕ್ರಮಗಳಲ್ಲಿ ಬೆನ್ನೆಲುಬಾಗಿ ಸಹಕರಿಸುತ್ತಿದ್ದಾರೆ ಎಂದರು.

ಕಾರ್ಯಕ್ರಮವನ್ನು ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಗೀತಾ ದೀಪ ಬೆಳಗಿಸಿ ಉದ್ಘಾಟಿಸಿ, ಶುಭಹಾರೈಸಿದರು. ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಸುಳ್ಯ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯ ಡಾ.ವೇಣುಗೋಪಾಲ, ಪ್ರಗತಿಪರ ಕೃಷಿ ದಯಾನಂದ ಗೌಡ ಕುಂಟ್ಯಾನ ಬಾರಿಕೆ ಹಾಗೂ ಆರ್ಯಾಪು ನೇರಳಕಟ್ಟೆ ಶ್ರೀ ಅಮ್ಮನವರ ದೇವಸ್ಥಾನದ ಸುರೇಶ ಪಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಲಾಂಛನ ಬಿಡುಗಡೆ:

ಸುಮಾರು 41 ವರ್ಷಗಳ ಇತಿಹಾಸವಿರುವ ನವಚೇತನಾ ಯುವಕ ಮಂಡಲದ ನೂತನ ಲಾಂಛನವನ್ನು ಕಾರ್ಯಕ್ರಮದಲ್ಲಿ ದೇವಸ್ಥಾನದ ಆರೋಗ್ಯ ರಕ್ಷಾ ಸಮಿತಿಯ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಬಿಡುಗಡೆಗೊಳಿಸಿದರು.

ಸನ್ಮಾನ:

ಈ ಸಾಲಿನ ಜಿಲ್ಲಾ ಅತ್ಯುತ್ತಮ ಪ್ರಶಸ್ತಿ ಪುರಸ್ಕöÈತರಾದ ದೇವಸ್ಥಾನದ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿರುವ ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲಾ ಶಿಕ್ಷಕ ಉದಯ ಕುಮಾರ್ ರೈ ಸಂಪ್ಯ, ರಾಜ್ಯ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ಪುರಸ್ಕöÈತರಾದ ವಿದ್ಯಾಮಾತ ಅಕಾಡೆಮಿಯ ನಿರ್ದೇಶಕ ಭಾಗ್ಯೇಶ್ ರೈಯವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಸೀತಾರಾಮ ಪ್ರತಿಭಾ ಪುರಸ್ಕಾರ;

ಕ್ರೀಡೆ, ಶೈಕ್ಷಣಿಕ ಕ್ಷೇತ್ರದ ಸಾಧಕ ವಿದ್ಯಾರ್ಥಿಗಳಿಗೆ ಯುವಕ ಮಂಡಲದಿಂದ ಪ್ರತಿ ವರ್ಷ ನೀಡುವ ಪ್ರತಿಭಾ ಪುರಸ್ಕಾರವನ್ನು ಈ ವರ್ಷದಿಂದ `ಸೀತಾರಾಮ ಪ್ರತಿಭಾ ಪುರಸ್ಕಾರ ಎಂದು ನಾಮಕರಣ ಮಾಡಿಕೊಂಡು ಯುವಕ ಮಂಡಲ ವ್ಯಾಪ್ತಿಯ ವಿದ್ಯಾರ್ಥಿಗಳಾದ ಶುಭಲಕ್ಷ್ಮೀ, ಅಂಕಿತ್ ಪಿ., ಗಗನ್ ಗೌಡ ಬೈಲಾಡಿ, ಮೇಘಾ ಎಸ್.ಎನ್., ಸುದರ್ಶನ್ ಹೆಬ್ಬಾರ್,  ರೇಷ್ಮಾ, ರವರಿಗೆ ನೀಡಿ ಗೌರವಿಸಲಾಯಿತು. ಗಣೇಶೋತ್ಸವದ ಅನ್ನದಾನ ಪ್ರಾಯೋಜಕರಾದ ಐತ್ತಪ್ಪ ರೈ, ಆದರ್ಶ ನಾಯ್ಕ್ ಸಂಪ್ಯ , ಪಾಂಡುರಂಗ ಭಟ್ ಕಲ್ಲರ್ಪೆಯವರನ್ನು ಗೌರವಿಸಲಾಯಿತು.

ಮೈಥಿಲಿ ಹಾಗೂ ಶಾಲ್ಮಿಲಿ ಪ್ರಾರ್ಥಿಸಿದರು. ನವಚೇತನಾ ಯುವಕ ಮಂಡಲದ ಅಧ್ಯಕ್ಷ ವಿಜಯ ಬಿ.ಎಸ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ಉಮೇಶ್ ಎಸ್.ಕೆ ವರದಿ ವಾಚಿಸಿ, ವಂದಿಸಿದರು. ಯುವಕ ಮಂಡಲದ ನಾಗೇಶ್ ಸಂಪ್ಯ, ಲಕ್ಷ್ಮಿರಮಣ ಬೈಲಾಡಿ, ರವಿನಾಥ ಗೌಡ ಬೈಲಾಡಿ, ರವಿ ಗೌಡ, ಸುರೇಶ್ ಉದಯಗಿರಿ, ಕುಂಞಣ್ಣ, ಸುರೇಶ್ ಪೂಜಾರಿ, ಸುರೇಶ್ ಬೈಲಾಡಿ, ಜಯಂತ ಶೆಟ್ಟಿ ಕಂಬಳತ್ತಡ್ಡ, ಶೀನಪ್ಪ, ದಿನೇಶ್ ಅತಿಥಿಗಳನ್ನು ಶಾಲು, ಸ್ಮರಣಿಕೆ ನೀಡಿ ಸ್ವಾಗತಿಸಿದರು. ತೇಜಸ್ ಗೌಡ ಪ್ರತಿಭಾ ಪುರಸ್ಕಾರದ ಪಟ್ಟಿ ವಾಚಿಸಿದರು. ಉದಯ ಕುಮಾರ್ ರೈ ಹಾಗೂ ಹರಿಣಿ ಪುತ್ತೂರಾಯ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ, ಸಂಜೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ನಂತರ ಅಮ್ಮ ಕಲಾವಿದೆರ್ ಕುಡ್ಲ ಇವರಿಂದ `ಅಲೇ ಬುಡಿಯೆರ್ಗೆ ತುಳು ಹಾಸ್ಯಮಯ ನಾಟಕ ನಡೆದ ಬಳಿಕ ರಾತ್ರಿ ಅನ್ನಸಂತರ್ಪಣೆ ನಡೆಯಿತು.

ಗಮನಿಸಿ : ವಾಟ್ಸಪ್ ನಲ್ಲಿ ಆಧಾರ್ ಕಾರ್ಡ್ ಡೌಗ್ಲೋಡ್ ಮಾಡಲು ಜಸ್ಟ್ ಈ ಸಂಖ್ಯೆಗೆ ಮೆಸೇಜ್ ಮಾಡಿ

Posted by Vidyamaana on 2024-08-18 08:44:18 |

Share: | | | | |


ಗಮನಿಸಿ : ವಾಟ್ಸಪ್ ನಲ್ಲಿ ಆಧಾರ್ ಕಾರ್ಡ್ ಡೌಗ್ಲೋಡ್ ಮಾಡಲು ಜಸ್ಟ್ ಈ ಸಂಖ್ಯೆಗೆ ಮೆಸೇಜ್ ಮಾಡಿ

ಬೆಂಗಳೂರು : ನಮ್ಮ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಕಳೆದುಹೋದರೆ ಅಥವಾ ತುರ್ತು ಸಂದರ್ಭದಲ್ಲಿ ನಮ್ಮ ಬಳಿ ಇಲ್ಲದಿದ್ದರೆ, ನಾವು ತಕ್ಷಣ ಇಂಟರ್ನೆಟ್ ಕೇಂದ್ರಗಳಿಗೆ ಧಾವಿಸಿದ್ದೇವೆ. ನಿರ್ವಾಹಕರು ಕೇಳಿದಷ್ಟು ಹಣವನ್ನು ನಾವು ಡೌನ್ ಲೋಡ್ ಮಾಡುತ್ತೇವೆ.ಆದರೆ ಈಗ ಅದರ ಅಗತ್ಯವಿಲ್ಲ.

ನೀವು ಅಂತಹ ಪ್ರಮುಖ ದಾಖಲೆಗಳನ್ನು ಮರೆತರೆ, ನೀವು ಅವುಗಳನ್ನು ಸುಲಭವಾಗಿ ಡೌನ್ಲೋಡ್ ಮಾಡಬಹುದು. ಅದೂ ನಮ್ಮ ಸ್ಮಾರ್ಟ್ಫೋನ್ನಲ್ಲಿ ವಾಟ್ಸಾಪ್ ಅಪ್ಲಿಕೇಶನ್ ಮೂಲಕ.

ಹೌದು, ಇದಕ್ಕಾಗಿ ನೀವು ಕೆಲವು ಹಂತಗಳನ್ನು ಅನುಸರಿಸುವ ಮೂಲಕ ಆಧಾರ್ ಅನ್ನು ಡೌನ್ಲೋಡ್ ಮಾಡಬಹುದು. ನಮ್ಮ ದೈನಂದಿನ ವ್ಯವಹಾರಗಳಲ್ಲಿ ಅವು ಎಲ್ಲೆಡೆ ಅವಶ್ಯಕ. ಹಣದ ಜೊತೆಗೆ ಈ ಎರಡು ಕಾರ್ಡ್ ಗಳು ನಮ್ಮ ವ್ಯಾಲೆಟ್ ನಲ್ಲಿ ಸ್ಥಾನ ಹೊಂದಿರಬೇಕು. ಆಧಾರ್ ಕಾರ್ಡ್ ನಮಗೆ ದೇಶದ ಪ್ರಜೆಯಾಗಿ ಮಾನ್ಯತೆ ನೀಡುತ್ತದೆ. ಯೋಜನೆಗಳನ್ನು ಪಡೆಯಲು ಸರ್ಕಾರ ಅನುಮತಿ ನೀಡಿದೆ. ಪ್ಯಾನ್ ಕಾರ್ಡ್ ನಮ್ಮ ಹಣಕಾಸಿನ ವ್ಯವಹಾರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಸಾಮಾನ್ಯವಾಗಿ, ನಾವು ನಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್ಗಳನ್ನು ನಮ್ಮೊಂದಿಗೆ ಇಟ್ಟುಕೊಳ್ಳುತ್ತೇವೆ.

ಕೆಲವೊಮ್ಮೆ ಅದು ಬದಲಾದರೆ, ನಾವು ತಕ್ಷಣ ನೆಟ್ ಕೇಂದ್ರಗಳಿಗೆ ಹೋಗಿ ಅದನ್ನು ಡೌನ್ಲೋಡ್ ಮಾಡುತ್ತೇವೆ. ಈ ವಿಧಾನ ಎಲ್ಲರಿಗೂ ತಿಳಿದಿದೆ. ಆದಾಗ್ಯೂ, ಈ ಎರಡೂ ದಾಖಲೆಗಳನ್ನು ವಾಟ್ಸಾಪ್ನಿಂದ ಡೌನ್ಲೋಡ್ ಮಾಡಬಹುದು. ಇದು ಸರ್ಕಾರದ ನಿಯಮಗಳ ಪ್ರಕಾರ ಈ ಕಾರ್ಯವನ್ನು ಬಹಳ ಸುಲಭವಾಗಿ ಪೂರ್ಣಗೊಳಿಸಬಹುದು.


ವಾಟ್ಸಾಪ್ ನಲ್ಲಿ ಡೌನ್ಲೋಡ್ ಮಾಡುವುದು ಹೇಗೆ?

ಈ ಸೇವೆಗಳನ್ನು ಪಡೆಯುವ ಮೊದಲು ನೀವು ಮೈ ಗವರ್ನಮೆಂಟ್  ವಾಟ್ಸಾಪ್ ಸಹಾಯವಾಣಿ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಉಳಿಸಬೇಕು. ಅದಕ್ಕಾಗಿ, ಫೋನ್ ಡಯಲರ್ ಅಪ್ಲಿಕೇಶನ್ಗೆ ಹೋಗಿ ಮತ್ತು 9013151515 ಸಂಖ್ಯೆಯನ್ನು ಮೈ ಗವರ್ನಮೆಂಟ್  ಅಥವಾ ಡಿಜಿಲಾಕರ್ ಎಂದು ನಮೂದಿಸಿ. ಅದರ ನಂತರ ಈ ಸಂಖ್ಯೆ ನಿಮ್ಮ ವಾಟ್ಸಾಪ್ನಲ್ಲಿ ಕಾಣಿಸಿಕೊಳ್ಳುತ್ತದೆ.

ರಾಜ್ಯದ ಜನತೆಗೆ ಭರ್ಜರಿ ಗುಡ್ ನ್ಯೂಸ್: ಜುಲೈನಿಂದ 200 ಯೂನಿಟ್ ವರೆಗೆ ಉಚಿತ ವಿದ್ಯುತ್

Posted by Vidyamaana on 2023-06-02 10:11:01 |

Share: | | | | |


ರಾಜ್ಯದ ಜನತೆಗೆ ಭರ್ಜರಿ ಗುಡ್ ನ್ಯೂಸ್: ಜುಲೈನಿಂದ 200 ಯೂನಿಟ್ ವರೆಗೆ ಉಚಿತ ವಿದ್ಯುತ್

ಬೆಂಗಳೂರು : ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಣೆ ಮಾಡಿದರು.

ಸಚಿವ ಸಂಪುಟದಲ್ಲಿ ಬಳಿಕ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಗೃಹಲಕ್ಷ್ಮೀ, ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿ, ಮಹಿಳೆಯರಿಗೆ ಉಚಿತ ಬಸ್​ ಯೋಜನೆಯ ಸಂಪೂರ್ಣ ವಿವರ ನೀಡಿದರು.


ಮೊದಲ ಗ್ಯಾರಂಟಿ ಗೃಹಜ್ಯೋತಿ ಜಾರಿಗೆ ಸಂಪುಟ ಸಭೆ ನಿರ್ಧರಿಸಿದ್ದು, ಎಲ್ಲರಿಗೂ 200 ಯುನಿಟ್​ ವರೆಗೂ ಉಚಿತವಾಗಿ ವಿದ್ಯುತ್ ನೀಡಲಾಗುವುದು.  12 ತಿಂಗಳ ಸರಾಸರಿ ಆಧಾರದಲ್ಲಿ ವಿದ್ಯುತ್​ ಬಿಲ್​ ಪರಿಗಣೆ ಮಾಡಲಾಗುತ್ತಿದ್ದು,  12 ತಿಂಗಳಲ್ಲಿ ಎಷ್ಟು ಬಳಸುತ್ತಾರೋ ಅದರ ಸರಾಸರಿ ಪಡೆದುಕೊಂಡು 10% ಹೆಚ್ಚು ವಿದ್ಯುತ್ ನೀಡುತ್ತೇವೆ. 12 ತಿಂಗಳ ಆವರೇಜ್​ ವಿದ್ಯುತ್ ಬಳಕೆ ಮೇಲೆ 10% ನೀಡುತ್ತೇವೆ. ಸರಾಸರಿ ಬಳಕೆಗೆ 10% ಸೇರಿಸಿ ಹೆಚ್ಚುವರಿ ವಿದ್ಯುತ್​ ನೀಡುತ್ತೇವೆ. 200 ಯೂನಿಟ್​ ವಿದ್ಯುತ್​ ಬಳಕೆಗೆ ಯಾವುದೇ ಶುಲ್ಕ ಇರುವುದಿಲ್ಲ. ಜುಲೈ 1ರಿಂದ ಆಗಸ್ಟ್​ 1ರವರೆಗೆ ಬಳಸುವ ವಿದ್ಯುತ್​ ಬಳಕೆಗೆ ಬಿಲ್​  ಎಂದು ತಿಳಿಸಿದರು.

Recent News


Leave a Comment: