ಪುತ್ತೂರು: ಲಾರಿ - ಸ್ಕೂಟರ್ ನಡುವೆ ಭೀಕರ ಅಪಘಾತ :ಮಿತ್ತೂರು ನಿವಾಸಿ ಶಿವರಾಮ ನಾಯ್ಕ ಮೃತ್ಯು

ಸುದ್ದಿಗಳು News

Posted by vidyamaana on 2024-07-24 08:25:31 | Last Updated by Vidyamaana on 2024-07-24 08:25:31

Share: | | | | |


ಪುತ್ತೂರು: ಲಾರಿ - ಸ್ಕೂಟರ್ ನಡುವೆ ಭೀಕರ ಅಪಘಾತ :ಮಿತ್ತೂರು ನಿವಾಸಿ ಶಿವರಾಮ ನಾಯ್ಕ ಮೃತ್ಯು

ಪುತ್ತೂರು: ನೆಹರುನಗರ ಮಂಜಲ್ಪಡ್ಪು ಬಳಿಯ ಮಂಗಲ ಸ್ಟೋರ್ಸ್ ಮುಂಭಾಗ ಜು.23 ರಂದು  ಲಾರಿ ಮತ್ತು ತ್ರಿವೀಲ್ಡರ್ ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಮಿತ್ತೂರು ಏಮಾಜೆಯ ವಿಕಲಚೇತನ ಶಿವರಾಮ ನಾಯ್ಕ (50ವ) ಎಂಬವರು ಮೃತಪಟ್ಟ ಬಗ್ಗೆ ವರದಿಯಾಗಿದೆ

ಮಂಗಳೂರು ಕಡೆ ಹೋಗುತ್ತಿದ್ದ ಲಾರಿ ವೊಂದು ವಿಕಲಚೇತನ ಶಿವರಾಮ ಅವರು ಚಲಾಯಿಸುತ್ತಿದ್ದ ತ್ರಿವೀಲ್ಡ‌ರ್ ಸ್ಕೂಟರ್ ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ತೀವ್ರ ಗಾಯಗೊಂಡ ಸವಾರ ಮೃತ ಪಟ್ಟಿದ್ದಾರೆಂದು ತಿಳಿದು ಬಂದಿದೆ.

 Share: | | | | |


ಯು.ಟಿ ಖಾದರ್ ನೂತನ ಸ್ಪೀಕರ್

Posted by Vidyamaana on 2023-05-22 23:27:47 |

Share: | | | | |


ಯು.ಟಿ ಖಾದರ್ ನೂತನ ಸ್ಪೀಕರ್

ಬೆಂಗಳೂರು: ರಾಜ್ಯ ವಿಧಾನಸಭೆಯ ನೂತನ ಸ್ಪೀಕರ್ ಹುದ್ದೆಗೆ ಅಚ್ಚರಿಯ ಆಯ್ಕೆಯಾಗಿ ಮಾಜಿ ಸಚಿವ ಯು ಟಿ ಖಾದರ್ ಅವರನ್ನು ಕಾಂಗ್ರೆಸ್ ಅಂತಿಮಗೊಳಿಸಿದೆ ಎಂದು ತಿಳಿದು ಬಂದಿದೆ. 

ಸ್ಪೀಕರ್ ಸ್ಥಾನಕ್ಕೆ ಆರ್ ವಿ ದೇಶಪಾಂಡೆ, ಟಿ ಬಿ ಜಯಚಂದ್ರ ಹಾಗು ಎಚ್ ಕೆ ಪಾಟೀಲ್ ಅವರ ಹೆಸರು ಕೇಳಿಬರುತ್ತಿತ್ತು. ಆದರೆ ಇದೀಗ ಕೊನೆ ಗಳಿಗೆಯಲ್ಲಿ ಯು ಟಿ ಖಾದರ್ ಅವರನ್ನು ವಿಧಾನ ಸಭೆಯ ಸ್ಪೀಕರ್ ಹುದ್ದೆಗೆ ಕಾಂಗ್ರೆಸ್ ಆಯ್ಕೆ ಮಾಡಿದೆ ಎಂದು ತಿಳಿದು ಬಂದಿದೆ. 


ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ರಾಷ್ಟ್ರೀಯ ಪ್ರಧಾನ್ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರು ಖಾದರ್ ಅವರನ್ನು ಕರೆದು ಮಾತನಾಡಿದ್ದು ಅಲ್ಪಸಂಖ್ಯಾತರಿಗೆ ಪ್ರಮುಖ ಹುದ್ದೆ ನೀಡಬೇಕು ಎಂದು ರಾಹುಲ್ ಗಾಂಧಿ ತೀರ್ಮಾನಿಸಿದ್ದು ಸ್ಪೀಕರ್ ರಂತಹ ಪ್ರತಿಷ್ಠಿತ ಹಾಗು ಅತ್ಯಂತ ಜವಾಬ್ದಾರಿಯುತ ಹುದ್ದೆಗೆ ನೀವೇ ಸೂಕ್ತ ಎಂದು ಪಕ್ಷ ತೀರ್ಮಾನಿಸಿದೆ. ನೀವು ಇದನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದಾರೆ. ಇದಕ್ಕೆ ಖಾದರ್ ಒಪ್ಪಿಗೆ ಸೂಚಿಸಿದ್ದು ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು  ಕೆಪಿಸಿಸಿ ಅಧ್ಯಕ್ಷ , ಡಿಸಿಎಂ  ಡಿ ಕೆ ಶಿವಕುಮಾರ್  ಅವರ ಜೊತೆಗೂ ಖಾದರ್ ಮಾತುಕತೆ ನಡೆದಿದೆ ಎಂದು ಹೇಳಲಾಗಿದೆ. 

ಮಂಗಳವಾರ 11. 30ಕ್ಕೆ ಯು ಟಿ  ಖಾದರ್ ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಡಿಸಿಎಂ  ಡಿ ಕೆ ಶಿವಕುಮಾರ್  ಅವರು ನಾಮಪತ್ರಕ್ಕೆ ಸಹಿ ಹಾಕಲಿದ್ದಾರೆ ಎಂದು ತಿಳಿದು ಬಂದಿದೆ. 

ಎರಡು ವರ್ಷಗಳ ಬಳಿಕ ಸಂಪುಟ ಪುನಾರಚನೆಯಲ್ಲಿ  ಖಾದರ್ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆಯೂ ಪಕ್ಷ ಭರವಸೆ ನೀಡಿದೆ ಎಂದು ತಿಳಿದು ಬಂದಿದೆ.

ಮಂಗಳೂರು ಕ್ಷೇತ್ರದಿಂದ ಸತತ 5 ನೇ ಬಾರಿ ಗೆಲುವು ಸಾಧಿಸಿ ಈ ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ. ಅವರು ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಆರೋಗ್ಯ, ಆಹಾರ ಹಾಗೂ  ಕುಮಾರಸ್ವಾಮಿ ಸರಕಾರದಲ್ಲಿ ವಸತಿ, ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ನಂತರ ರಾಜ್ಯ ವಿಧಾನಸಭೆಯ ಪ್ರತಿಪಕ್ಷ ಉಪನಾಯಕರಾಗಿ ಕಾರ್ಯನಿರ್ವಹಿಸಿದ್ದರು.

ರಾಜ್ಯದಲ್ಲಿ ಇನ್ಮುಂದೆ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸಿಗರೇಟ್ ಸೇದುವಂತಿಲ್ಲ ; ನಿಯಮ ಮೀರಿದ್ರೆ ಭಾರೀ ದಂಡ

Posted by Vidyamaana on 2024-02-21 17:42:45 |

Share: | | | | |


ರಾಜ್ಯದಲ್ಲಿ ಇನ್ಮುಂದೆ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸಿಗರೇಟ್ ಸೇದುವಂತಿಲ್ಲ ; ನಿಯಮ ಮೀರಿದ್ರೆ ಭಾರೀ ದಂಡ

ಬೆಂಗಳೂರು : ರಾಜ್ಯಾದ್ಯಂತ ಹುಕ್ಕಾ ಬಾರ್ಗಳನ್ನು ನಿಷೇಧಿಸುವ ಮಸೂದೆಯನ್ನ ರಾಜ್ಯ ಸರ್ಕಾರ ಬುಧವಾರ ಅಂಗೀಕರಿಸಿದ್ದು, ನಿಷೇಧವನ್ನ ಉಲ್ಲಂಘಿಸುವವರಿಗೆ ಒಂದರಿಂದ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ.ಗಳವರೆಗೆ ದಂಡ ಸೇರಿದಂತೆ ಕಠಿಣ ದಂಡ ವಿಧಿಸಲಾಗುವುದು.ಅಧಿಸೂಚನೆಯ ಪ್ರಕಾರ, ತನ್ನ ನಾಗರಿಕರ ಆರೋಗ್ಯವನ್ನು ರಕ್ಷಿಸಲು ಮತ್ತು ತಂಬಾಕು ಸಂಬಂಧಿತ ರೋಗಗಳ ಉಬ್ಬರವಿಳಿತವನ್ನ ತಡೆಗಟ್ಟುವ ಸಲುವಾಗಿ ಅಸ್ತಿತ್ವದಲ್ಲಿರುವ ಸಿಗರೇಟುಗಳು ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ (COTPA)ಗೆ ತಿದ್ದುಪಡಿ ಮಾಡಿದ ನಂತರ ನಿಷೇಧವನ್ನ ವಿಧಿಸಲಾಗಿದೆ.


ಹೆಚ್ಚುವರಿಯಾಗಿ, 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಿಗರೇಟುಗಳು ಮತ್ತು ಇತರ ತಂಬಾಕು ಉತ್ಪನ್ನಗಳ ಮಾರಾಟವನ್ನ ಸಹ ರಾಜ್ಯವು ನಿಷೇಧಿಸಿದೆ.


ತಿದ್ದುಪಡಿ ಮಾಡಿದ ಮಸೂದೆಯು ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆಯ ಮೇಲೆ ಸಂಪೂರ್ಣ ನಿಷೇಧವನ್ನು ಜಾರಿಗೊಳಿಸುತ್ತದೆ, ಹೊಗೆ ಮುಕ್ತ ವಾತಾವರಣವನ್ನ ಸೃಷ್ಟಿಸುವ ಬದ್ಧತೆಯನ್ನ ಒತ್ತಿಹೇಳುತ್ತದೆ.ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಯಾವುದೇ ಶಿಕ್ಷಣ ಸಂಸ್ಥೆಯ 100 ಮೀಟರ್ ವ್ಯಾಪ್ತಿಯಲ್ಲಿ ಸಿಗರೇಟುಗಳು ಮತ್ತು ಇತರ ತಂಬಾಕು ಉತ್ಪನ್ನಗಳ ಮಾರಾಟವನ್ನ ನಿಷೇಧಿಸಿದೆ. ನಿಯಮವನ್ನು ಉಲ್ಲಂಘಿಸಿದರೆ 1,000 ರೂ.ಗಳ ದಂಡ ವಿಧಿಸಬಹುದು.

ಕೊಯಿಲ ಯುವಕ ಸಂದೇಶ್ ಮಾಸ್ಕತ್ ನಲ್ಲಿ ಆತ್ಮಹತ್ಯೆ

Posted by Vidyamaana on 2023-05-30 01:47:06 |

Share: | | | | |


ಕೊಯಿಲ ಯುವಕ ಸಂದೇಶ್ ಮಾಸ್ಕತ್ ನಲ್ಲಿ ಆತ್ಮಹತ್ಯೆ

ರಾಮಕುಂಜ: ವಿದೇಶದಲ್ಲಿ ಉದ್ಯೋಗದಲ್ಲಿರುವ ಕಡಬ ತಾಲೂಕಿನ ಕೊಯಿಲ ಗ್ರಾಮದ ಯುವಕನೋರ್ವ ಅಲ್ಲಿ ತನ್ನ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನ ಮೇ 28ರಂದು ನಡೆದಿದೆ.

ಕೊಯಿಲ ಗ್ರಾಮದ ಸುಣ್ಣಾಡಿ ನಿವಾಸಿ ದಿ.ಮೋನಪ್ಪ ಪೂಜಾರಿಯವರ ಪುತ್ರ ಸಂದೇಶ್ (32ವ.) ಆತ್ಮಹತ್ಯೆ ಮಾಡಿಕೊಂಡವರು. ಇವರು ಓಮನ್ ದೇಶದ ಮಸ್ಕತ್‌ನಲ್ಲಿ ಕಂಪನಿಯೊಂದರಲ್ಲಿ ಲೈನ್ ಸೇಲ್ ಉದ್ಯೋಗ ಮಾಡುತ್ತಿದ್ದು, ಎಂಟು ತಿಂಗಳ ಹಿಂದೆಯಷ್ಟೆ ಕೆಲಸಕ್ಕೆ ಸೇರಿದ್ದರು. ಇವರ ಸಹೋದರ ಸಂತೋಷ್ ಕೂಡಾ ಮಸ್ಕತ್‌ನಲ್ಲೇ ಉದ್ಯೋಗದಲ್ಲಿದ್ದು ಇಬ್ಬರು ಒಂದೇ ಕೊಠಡಿಯಲ್ಲಿ ವಾಸವಾಗಿದ್ದರು. ಇವರ ಸಂಬಂಧಿ ಯುವಕ ಕೊಯಿಲ ಗ್ರಾಮದ ಅಂಬಾ ನಿವಾಸಿ ಚರಣ್ ಎಂಬವರು ಸಹ ಮಸ್ಕತ್‌ನಲ್ಲಿ ಉದ್ಯೋಗದಲ್ಲಿದ್ದು ಇವರು ಇನ್ನೊಂದು ಕೊಠಡಿಯಲ್ಲಿ ವಾಸವಾಗಿದ್ದರು. ಮೇ 29ರಂದು ಸಂದೇಶ್ ಅವರು ಬೇಗ ಕೆಲಸ ಮುಗಿಸಿ ಕೊಠಡಿಗೆ ಬಂದವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇದಾದ ಕೆಲ ಹೊತ್ತಿನ ಬಳಿಕ ಚರಣ್‌ ಅವರು ಸಂದೇಶ ಇರುವ ಕೊಠಡಿಗೆ ಬಂದು ನೋಡಿದಾಗ ಕೊಠಡಿ ಬಾಗಿಲು ಬಂದ್ ಆಗಿತ್ತು. ಕರೆದರೂ ಯಾವುದೇ ಉತ್ತರ ಬಾರದೇ ಇದ್ದಾಗ ಸಂಶಯಗೊಂಡು ಗಾಬರಿಯಿಂದ ಸಂದೇಶರವರ ಸಹೋದರ ಸಂತೋಷ್‌ ಕರೆ ಮಾಡಿ ಕರೆಸಿಕೊಂಡಿದ್ದಾರೆ. ಸಂತೋಷ್ ತನ್ನಲ್ಲಿದ್ದ ಕೀಯಿಂದ ಕೊಠಡಿಯ ಬಾಗಿಲು ತೆರೆದು ನೋಡಿದಾಗ ಸಂದೇಶ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮಸ್ಕತ್‌ನಲ್ಲೇ ಮೃತದೇಹದ ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ಮುಗಿದು ಮ೦ಗಳವಾರ ಅಥವಾ ಬುಧವಾರ ಮೃತದೇಹ ಊರಿಗೆ ಆಗಮಿಸುವ ನಿರೀಕ್ಷೆ ಇದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

8 ತಿಂಗಳ ಹಿಂದೆಯಷ್ಟೇ ಉದ್ಯೋಗಕ್ಕೆ ತೆರಳಿದ್ದರು: ಸಂದೇಶ್ ಸಹೋದರ ಸಂತೋಷರವರು 7 ವರ್ಷಗಳಿಂದ ಮಸ್ಕತ್‌ನಲ್ಲಿ ಉದ್ಯೋಗದಲ್ಲಿದ್ದಾರೆ. ಆದರೆ ಮೃತ ಸಂದೇಶ ಕಳೆದ ಕೆಲವು ವರ್ಷಗಳಿಂದ ಚೆನ್ನೈನಲ್ಲಿ ಹೋಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದವರು 8 ತಿಂಗಳ ಹಿಂದೆಯಷ್ಟೇ ಮತ್‌ಗೆ ತೆರಳಿದ್ದರು. ಆರಂಭದಲ್ಲಿ ವಿಸಿಟಿಂಗ್ ವೀಸಾದಲ್ಲಿ ಮಸ್ಕತ್‌ಗೆ ತೆರಳಿದ್ದ ಸಂದೇಶ್ ಬಳಿಕ ಅಲ್ಲಿನ ಕೆಲಸದ ವೀಸಾ ಪಡೆದು ಕರ್ತವ್ಯ ನಿರ್ವಹಿಸುತ್ತಿದ್ದರು. ಸಂಸ್ಥೆಯಲ್ಲಿ ಉತ್ತಮ ವೇತನ ಹಾಗೂ ಯಾವುದೇ ಕಿರಿಕಿರಿ ಇಲ್ಲದ ಉದ್ಯೋಗ ಇದ್ದು ಯಾವುದೇ ಸಮಸ್ಯೆಗಳೂ ಇರಲಿಲ್ಲ. ಅಣ್ಣ ತಮ್ಮ ಜೊತೆಯಾಗಿಯೇ ಇದ್ದು ಸಂತೋಷವಾಗಿಯೇ ಇದ್ದರು. ಕೇವಲ ಒಂದು ಲೈನ್ ಸಾರಿ ಅಣ್ಣ ಎಂದು ಬರೆದಿಟ್ಟು ಸಂದೇಶ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತ ಸಂದೇಶ್‌ ತಾಯಿ ವಿಮಲ, ಸಹೋದರರಾದ ಮಸ್ಕತ್‌ನಲ್ಲಿ ಉದ್ಯೋಗದಲ್ಲಿರುವ ಸಂತೋಷ್ ಹಾಗೂ ಊರಿನಲ್ಲಿ ಆಟೋ ಚಾಲಕನಾಗಿರುವ ಸತೀಶ್ ಅವರನ್ನು ಅಗಲಿದ್ದಾರೆ.

ಭೂತಾನ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋ ಸ್ವೀಕರಿಸಿದ ಪ್ರಧಾನಿ ಮೋದಿ

Posted by Vidyamaana on 2024-03-22 22:08:17 |

Share: | | | | |


ಭೂತಾನ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋ ಸ್ವೀಕರಿಸಿದ ಪ್ರಧಾನಿ ಮೋದಿ

ಥಿಂಪು ಮಾರ್ಚ್ 22: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶುಕ್ರವಾರ ಭೂತಾನ್‌ನ (Bhutan) ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋವನ್ನು (Order of the Druk Gyalpo) ಸ್ವೀಕರಿಸಿದ್ದು, ಈ ಗೌರವವನ್ನು ಪಡೆದ ಮೊದಲ ಭೂತನ್ ದೇಶದ ಹೊರಗಿನ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಧಾನಿ ಮೋದಿ ಭೂತಾನ್‌ನ ಪ್ರತಿಷ್ಠಿತ ನಾಗರಿಕ ಗೌರವವನ್ನು ಪಡೆದ ಮೊದಲ ವಿದೇಶಿ ಸರ್ಕಾರದ ಮುಖ್ಯಸ್ಥರಾಗಿದ್ದಾರೆ. ಉಭಯ ನಾಯಕರು ರಾಜಧಾನಿಯಲ್ಲಿ ಭೇಟಿಯಾದ ನಂತರ ಭೂತಾನ್‌ನ ರಾಜ ಜಿಗ್ಮೆ ಅವರು ಪಿಎಂ ಮೋದಿಯವರಿಗೆ ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋ ಪ್ರಶಸ್ತಿಯನ್ನು ನೀಡಿದರು. ಸ್ಥಾಪಿತವಾದ ಶ್ರೇಯಾಂಕ ಮತ್ತು ಪ್ರಾಶಸ್ತ್ಯದ ಪ್ರಕಾರ, ಆರ್ಡರ್ ಆಫ್ ದ ಡ್ರುಕ್ ಗ್ಯಾಲ್ಪೋ ಅನ್ನು ಜೀವಮಾನದ ಸಾಧನೆಗಾಗಿ ನೀಡುವ ಪ್ರಶಸ್ತಿಯಾಗಿ ಸ್ಥಾಪಿಸಲಾಯಿತು. ಇದು ಭೂತಾನ್‌ನಲ್ಲಿ ಅತ್ಯುನ್ನತ ಗೌರವವಾಗಿದೆ.

ಮುಕ್ಕೂರು : ಎಎಸ್ ಐ ದಿ.ಸುಂದರ ಕಾನಾವುಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ

Posted by Vidyamaana on 2024-08-03 17:31:29 |

Share: | | | | |


ಮುಕ್ಕೂರು : ಎಎಸ್ ಐ ದಿ.ಸುಂದರ ಕಾನಾವುಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ

ಮುಕ್ಕೂರು: ಕಡು ಬಡತನದ ನಡುವೆ ಕೂಲಿ ಕೆಲಸ ನಿರ್ವಹಿಸುತ್ತಿದ್ದ ಸುಂದರ ಕಾನಾವು ತನ್ನ ಪರಿಶ್ರಮದಿಂದಲೇ ಪೊಲೀಸ್ ಇಲಾಖೆಗೆ ಸೇರಿ ವೃತ್ತಿ ನಿಷ್ಠೆಯಿಂದ ಎಎಸ್‍ಐ ಹಂತಕ್ಕೆ ತಲುಪಿದ್ದರು. ಅವರು ವೃತ್ತಿ, ವೈಯಕ್ತಿಕ ಬದುಕಿನಲ್ಲಿ ಇನ್ನಷ್ಟು ಉನ್ನತ್ತಿ ಕಾಣುವ ಹೊತ್ತಲ್ಲಿ ಅಕಾಲಿಕವಾಗಿ ನಮ್ಮನ್ನಗಳಿರುವುದು ದುಃಖಕರ ಸಂಗತಿ ಎಂದು ಕಾನಾವು ಕ್ಲಿನಿಕ್ ವೈದ್ಯ, ಪುತ್ತೂರು ಐಎಂಎ ಘಟಕದ ಅಧ್ಯಕ್ಷ ಡಾ| ನರಸಿಂಹ ಶರ್ಮಾ ಕಾನಾವು ಹೇಳಿದರು.

ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮುಕ್ಕೂರು ನ್ಯಾಯಬೆಲೆ ಅಂಗಡಿಯ ಸಭಾಂಗಣದಲ್ಲಿ ಆ.3 ರಂದು ನಡೆದ ಪುತ್ತೂರು ನಗರ ಠಾಣಾ ಎಎಸ್‍ಐ ಆಗಿದ್ದ ದಿ.ಸುಂದರ ಕಾನಾವು ಅವರ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ನುಡಿನಮನ ಸಲ್ಲಿಸಿದರು. ಕಷ್ಟಗಳು ದೂರವಾಗಿ ಬದುಕು ಅರಳುತ್ತಿದ್ದ ಹೊತ್ತಲ್ಲಿ ಸುಂದರ ಅವರು ಅಗಲಿ ಹೋದರು. ಸಣ್ಣ ವಯಸ್ಸಿನಲ್ಲಿ ಅವರ ಹಠಾತ್ ನಿರ್ಗಮನ ಇಡೀ ಕುಟುಂಬಕ್ಕೆ, ಊರಿಗೆ ಆಘಾತವನ್ನು ಉಂಟು ಮಾಡಿದೆ. ಆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡುವ ಜತೆಗೆ ಸುಂದರ ಅವರ ನೆನಪು ಶಾಶ್ವತವಾಗಿರಲಿ ಎಂದರು.

ಪೆರುವಾಜೆ ಗ್ರಾ.ಪಂ. ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಸುಂದರ ಕಾನಾವು ಅವರು ಕೂಲಿ ಕೆಲಸ ಮಾಡುತ್ತಿದ್ದ ಹೊತ್ತಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಲು ಸಾಕಷ್ಟು ಪ್ರಯತ್ನ ನಡೆಸಿದ್ದರು. ದಿ. ಕಾನಾವು ಗೋಪಾಲಕೃಷ್ಣ ಭಟ್ ಅವರು ಇದಕ್ಕೆ ಪ್ರೋತ್ಸಾಹ ನೀಡಿದ್ದರು. ಸತತ ಪ್ರಯತ್ನದ ಫಲವಾಗಿ ಅವರಿಗೆ ಸರಕಾರಿ ಕೆಲಸ ಸಿಕ್ಕಿತ್ತು. ಆದರೆ ಬದುಕಿನ ಸುಖ ಅನುಭವಿಸುವ ಹೊತ್ತಿಗೆ ಅವರ ನಿರ್ಗಮನ ಎಲ್ಲರನ್ನೂ ಶೂನ್ಯವನ್ನಾಗಿಸಿದೆ ಎಂದರು.

ಸಿಂಹ, ಶ್ರೀವತ್ಸ ಮನೆಗೆ ಬಂದರೂ ಭೇಟಿ ಮಾಡದ ರಾಮದಾಸ್ ಬಂಡಾಯ?

Posted by Vidyamaana on 2023-04-17 19:03:28 |

Share: | | | | |


ಸಿಂಹ, ಶ್ರೀವತ್ಸ ಮನೆಗೆ ಬಂದರೂ ಭೇಟಿ ಮಾಡದ ರಾಮದಾಸ್ ಬಂಡಾಯ?

ಮೈಸೂರು: ಕೆ.ಆರ್. ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪಿರುವ ಕಾರಣ ಮಾಜಿ ಸಚಿವ, ಹಾಲಿ ಬಿಜೆಪಿ ಶಾಸಕ ಎಸ್.ಎ. ರಾಮದಾಸ್ ಆಕ್ರೋಶಗೊಂಡಿದ್ದು ಸೋಮವಾರ ರಾತ್ರಿ ಮನೆಗೆ ಭೇಟಿ ನೀಡಿದ ಸಂಸದ ಪ್ರತಾಪ್ ಸಿಂಹ ಮತ್ತು ಅಭ್ಯರ್ಥಿ ಶ್ರೀವತ್ಸ ಅವರ ಭೇಟಿ ನಿರಾಕರಿಸಿ ಆಕ್ರೋಶ ಹೊರ ಹಾಕಿದ್ದಾರೆ.ಟಿಕೆಟ್ ಕೈ ತಪ್ಪಿದ ಬಳಿಕ ಮನೆಯ ಒಂದು ಹಾಲ್ ನಲ್ಲಿ ಕಾರ್ಯಕರ್ತರ ಸಭೆ ನಡೆಸುತ್ತಿದ್ದ ರಾಮದಾಸ್ ಅವರು ಇಬ್ಬರನ್ನು ಭೇಟಿಯಾಗಲು ನಿರಾಕರಿಸಿದ್ದಾರೆ. ಮನೆಯ ಮತ್ತೊಂದು ಬಾಗಿಲಿನಿಂದ ಹೊರನಡೆದಿದ್ದಾರೆ.ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರಾಮದಾಸ್, 30 ವರ್ಷಗಳಿಂದ ಇದ್ದ ತಾಯಿ ಮನೆಯಿಂದ ಓಡಿಸಿದ್ದಾರೆ. ಈಗ ಆ ಮನೆಯಲ್ಲಿ ಇರಬೇಕೋ ಬೇಡವೋ ಎಂಬುದುನ್ನು ನಾಳೆ ಸಂಜೆ ತಿಳಿಸುತ್ತೇನೆ.ಯಾವ ನಿರ್ಧಾರ ಮಾಡಬೇಕು ಅಂತ ನಾಳೆ ಹೇಳುತ್ತೇನೆ.ನಾನು ಯಾರನ್ನೂ ಭೇಟಿ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಸಂಸದ ಪ್ರತಾಪ್ ಸಿಂಹ ಮಾತನಾಡಿ, ಆಶೀರ್ವಾದ ಪಡೆಯಲು ಮನೆಗೆ ಬಂದಿದ್ದೇವು. ಟಿಕೆಟ್ ತಪ್ಪಿರುವ ಕಾರಣ ರಾಮದಾಸ್ ಅವರಿಗೆ ನೋವಾಗಿದೆ.30 ವರ್ಷಗಳಿಂದ ಇದ್ದ ಅವಕಾಶ ಕೈ ತಪ್ಪಿದ ಕಾರಣ ರಾಮದಾಸ್ ಅವರಿಗೆ ಬೇಸರ ಆಗಿರೋದು ಸಹಜ. ನಾಳೆ ನಿಮ್ಮನ್ನು ಭೇಟಿ ಮಾಡುತ್ತೇನೆ. ಪಕ್ಷದ ಜೊತೆ ಇರುತ್ತೇನೆ ಎಂದು ದೂರವಾಣಿಯಲ್ಲಿ ಮಾಹಿತಿ ನೀಡಿದ್ದಾರೆ ಎಂದಿದ್ದಾರೆ.ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಮಾತನಾಡಿ, ಪಕ್ಷವನ್ನು ತಾಯಿ ಎಂದು ಭಾವಿಸಿರುವವರು ತಾಯಿಯನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ. 30 ವರ್ಷದಿಂದ ಜತೆ ಇದ್ದೇವು. ಅವರು ನನ್ನ ವಿರುದ್ದ ಕೆಲಸ ಮಾಡಲ್ಲ.ಆ ವಿಶ್ವಾಸ ನನಗೆ ಇದೆ ಎಂದರು.

Recent News


Leave a Comment: