ನೇರಳಕಟ್ಟೆ : ಪಂತಡ್ಕ ನಿವಾಸಿ ಬಾತಿಷಾ ನಿಧನ

ಸುದ್ದಿಗಳು News

Posted by vidyamaana on 2024-07-25 19:32:58 | Last Updated by Vidyamaana on 2024-07-25 19:32:58

Share: | | | | |


ನೇರಳಕಟ್ಟೆ : ಪಂತಡ್ಕ ನಿವಾಸಿ ಬಾತಿಷಾ ನಿಧನ

ಬಂಟ್ವಾಳ : ಜ್ವರದಿಂದ ಬಳಲುತ್ತಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ಮೃತಪಟ್ಟಿದ್ದಾರೆ. 

 ನೇರಳಕಟ್ಟೆ ಸಮೀಪದ ಪಂತಡ್ಕ ನಿವಾಸಿ ಅಟೋ ರಿಕ್ಷಾ ಮೆಕೇನಿಕ್ ಸಿ.ಎಚ್. ಹನೀಫ್ ಅವರ ಪುತ್ರ

ಬಾತಿಷಾ( 22) ಮೃತಪಟ್ಟವರು.ಮಂಗಳೂರಿನ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಮೇನ್ ಆಗಿ ಕೆಲಸ ಮಾಡುತ್ತಿದ್ದ ಈತನಿಗೆ ವಾರದ ಹಿಂದೆ ಜ್ವರ ಬಂದಿದ್ದು ಚಿಕಿತ್ಸೆ ಪಡೆಯುತ್ತಿದ್ದ, ಗುರುವಾರ ಬೆಳಿಗ್ಗೆ ಜ್ವರ ಉಲ್ಬಣಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆಗೆ ಮೃತಪಟ್ಟಿದ್ದಾರೆ.

 Share: | | | | |


ಕೇಂದ್ರ ಗೃಹ ಸಚಿವ ಅಮಿತ್‌ ಶಾ ಒಟ್ಟು ಆಸ್ತಿ ಎಷ್ಟು ಗೊತ್ತಾ?

Posted by Vidyamaana on 2024-04-21 15:46:43 |

Share: | | | | |


ಕೇಂದ್ರ ಗೃಹ ಸಚಿವ ಅಮಿತ್‌ ಶಾ ಒಟ್ಟು ಆಸ್ತಿ ಎಷ್ಟು ಗೊತ್ತಾ?

ನವದೆಹಲಿ: ಗುಜರಾತ್‌ನ ಗಾಂಧಿನಗರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ ಕೇಂದ್ರ ಗೃಹ ಸಚಿವ ಅಮಿತ್ ಶಾ. ಈ ನಡುವೆ ಅವರ ಈ ವೇಳೆ ಸಲ್ಲಿಸಿದ ಅಫಿಡವಿಟ್‌ನಲ್ಲಿ 36 ಕೋಟಿ ರೂ. ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಯನ್ನು ಹೊಂದಿದ್ದಾರೆ.

ಇದೇ ವೇಳೆ ಅವರು ತಮ್ಮ ಬಳಿಯಲ್ಲಿ ಯಾವುದೇ ಕಾರಿಲ್ಲ ಎಂದು ಹೇಳಿರುವ ಶಾ, ಅವರ ಪತ್ನಿ ಬಳಿ ಇದೆ 31 ಕೋಟಿ ರೂ. ಮೌಲ್ಯದ ಆಸ್ತಿ ಇರುವುದಾಗಿ ತಿಳಿಸಿದ್ದಾರೆ. 

ಅಫಿಡವಿಟ್ ಪ್ರಕಾರ, ಶಾ ಮತ್ತು ಅವರ ಪತ್ನಿ ಒಟ್ಟು 65.67 ಕೋಟಿ ರೂ. ಗಮನಾರ್ಹವಾಗಿ, ಇದು 2019 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ವರದಿಯಾದ 30.49 ಕೋಟಿ ರೂ.ಗಿಂತ ಗಮನಾರ್ಹ ಹೆಚ್ಚಳವನ್ನು ಸೂಚಿಸುತ್ತದೆ, ಕಳೆದ ಐದು ವರ್ಷಗಳಲ್ಲಿ ಶೇಕಡಾ 100 ಕ್ಕಿಂತ ಹೆಚ್ಚು ಬೆಳವಣಿಗೆಯನ್ನು ತೋರಿಸುತ್ತದೆ.

ಗೃಹಲಕ್ಷ್ಮಿ ಅರ್ಜಿಗೆ ಹೆಚ್ಚು ಹಣ ಪಡೆದಕ್ಕೆ 3 ಗ್ರಾಮ್ ಒನ್ ಕೇಂದ್ರಗಳ ಐಡಿ ರದ್ದು

Posted by Vidyamaana on 2023-07-24 00:56:58 |

Share: | | | | |


ಗೃಹಲಕ್ಷ್ಮಿ ಅರ್ಜಿಗೆ ಹೆಚ್ಚು ಹಣ ಪಡೆದಕ್ಕೆ 3 ಗ್ರಾಮ್ ಒನ್ ಕೇಂದ್ರಗಳ ಐಡಿ ರದ್ದು

ಬಾಗಲಕೋಟೆ, : ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಶೂರ್ಪಾಲಿ ಗ್ರಾಮದಲ್ಲಿ ಗ್ರಾಮ ಒನ್ ಕೇಂದ್ರದ ಸಿಬ್ಬಂದಿ ಗೃಹಲಕ್ಷ್ಮಿಯೋಜನೆಗೆ ಅರ್ಜಿ ಸಲ್ಲಿಕೆಗೆ ಹಣ ಪಡೆದಿದ್ದಾರೆ ಎಂದು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಗ್ರಾಮ ಒನ್ ಸಿಬ್ಬಂದಿಯ ಲಾಗಿನ್ ಐಡಿ ರದ್ದುಗೊಳಿಸಲಾಗಿದೆ.


ಈ ಸಂಬಂಧ ಟ್ವಿಟ್ ಮಾಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ‌, "ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಗೃಹಲಕ್ಷ್ಮಿ ಯೋಜನೆಯಲ್ಲಿ ಯಾವುದೇ ರೀತಿಯ ಅವ್ಯವಹಾರ, ಅಕ್ರಮವನ್ನು ಸರಕಾರ ಸಹಿಸುವುದಿಲ್ಲ. ಅಂತವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಕ್ಕೂ ಹಿಂಜರಿಯುವುದಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ

ರಾಜ್ಯದ ಜನತೆ ಗಮನಕ್ಕೆ: ಇಂದು ಗೃಹಜ್ಯೋತಿ ನೋಂದಣಿ ಗೆ ಕೊನೇ ದಿನ

Posted by Vidyamaana on 2023-07-25 06:36:06 |

Share: | | | | |


ರಾಜ್ಯದ ಜನತೆ ಗಮನಕ್ಕೆ: ಇಂದು ಗೃಹಜ್ಯೋತಿ ನೋಂದಣಿ ಗೆ ಕೊನೇ ದಿನ

ಬೆಂಗಳೂರು :ರಾಜ್ಯ ಸರ್ಕಾರದ ( Karnataka Government ) ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದು ಗೃಹಜ್ಯೋತಿ ಯೋಜನೆಯ ( Gruha Jyoti Scheme ) ಕೂಡ. ಈ ಯೋಜನೆಯ ಅಡಿಯಲ್ಲಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ( Free Electricity ) ಪ್ರಯೋಜನ ಪಡೆಯಲು ನೋಂದಾಯಿಸಿಕೊಳ್ಳಲು ಇಂದು ಕೊನೆಯ ದಿನವಾಗಿದೆ.ಇಂದು ನೋಂದಾಯಿಸಿಕೊಂಡವರಿಗೆ ಮಾತ್ರವೇ ಆಗಸ್ಟ್ ತಿಂಗಳ ಬಿಲ್ ಮೊತ್ತ 00 ಬರಲಿದೆ.


ಗೃಹಜ್ಯೋತಿ ಯೋಜನೆಗೆ ನೋಂದಣಿ ( Gruha Jyoti Registration ) ಆರಂಭಗೊಂಡ ನಂತ್ರ, ರಾಜ್ಯದಲ್ಲಿ ಈವರೆಗೆ ಇರುವಂತ ಫಲಾನುಭವಿಗಳಲ್ಲಿ ಶೇ.60ರಷ್ಟು ಗ್ರಾಹಕರು ಮಾತ್ರವೇ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಇನ್ನೂ ಶೇ.40ರಷ್ಟು ವಿದ್ಯುತ್ ಗ್ರಾಹಕರು ನೋಂದಣಿ ಮಾಡುವುದು ಬಾಕಿ ಉಳಿದಿದೆ ಎನ್ನಲಾಗುತ್ತಿದೆ.


ವಿದ್ಯುತ್ ಸರಬರಾಜು ಕಂಪನಿ ನೀಡಿರುವ ಮಾಹಿತಿ ಪ್ರಕಾರ 1.92 ಕೋಟಿ ಗೃಹ ಬಳಕೆದಾರರಿದ್ದು, ಇವರಲ್ಲಿ ಶೇ.90ಕ್ಕೂ ಅಧಿಕ ಜನರು ಮಾಸಿಕ 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುತ್ತಿದ್ದಾರಂತೆ. ಇವರಲ್ಲಿ 1.18 ರಿಂದ 1.20 ಕೋಟಿ ಮಂದಿ ಮಾತ್ರವೇ ನೋಂದಣಿ ಮಾಡಿಕೊಂಡಿದ್ದು, ಉಳಿದವರು ಇನ್ನೂ ನೋಂದಣಿ ಮಾಡಿಕೊಳ್ಳಬೇಕಿದೆ.ಇಂದೇ ನೋಂದಣಿಗೆ ಕೊನೆಯ ದಿನ


ಅಂದಹಾಗೇ ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಮೊದಲ ತಿಂಗಳಲ್ಲಿ 200 ಯೂನಿಟ್ ಉಚಿತ ವಿದ್ಯುತ್ ಪ್ರಯೋಜನ ಪಡೆಯಲು ಜುಲೈ.25ರ ಇಂದೇ ನೋಂದಣಿಗೆ ಕೊನೆಯ ದಿನವಾಗಿದೆ.


ಇಂದು ಯಾರೆಲ್ಲಾ ಗೃಹ ಜ್ಯೋತಿಗೆ ನೋಂದಣಿ ಮಾಡಿಕೊಳ್ಳಲಿದ್ದಾರೋ ಅವರಿಗೆಲ್ಲ ಆಗಸ್ಟ್ ತಿಂಗಳಿನಲ್ಲಿ ಶೂನ್ಯ ವಿದ್ಯುತ್ ಬಿಲ್ ಬರಲಿದೆ. ಒಂದು ವೇಳೆ ನೋಂದಾಯಿಸಿಕೊಳ್ಳದಿದ್ದರೇ ಆಗಸ್ಟ್ ನಂತ್ರದ ತಿಂಗಳಿನ ಬಿಲ್ ಶೂನ್ಯ ಬರಲಿದೆ.


ಗೃಹಜ್ಯೋತಿ ಯೋಜನೆಗೆ ಅಂತಿಮ ಗಡುವು ನಿಗದಿ ಪಡಿಸಿಲ್ಲ. ಸೆಪ್ಟೆಂಬರ್ ನಲ್ಲಿ ಇದರ ಲಾಭ ಪಡಿಯಲು ಅವಕಾಶ ಇದೆ. ಆದ್ರೇ ಆಗಸ್ಟ್ ತಿಂಗಳಿನಲ್ಲಿ ಉಚಿತ 200 ಯೂನಿಟ್ ವಿದ್ಯುತ್ ಪ್ರಯೋಜನ ಪಡೆಯಲು ಇಂದು ನೋಂದಣಿ ಮಾಡಿಸಬೇಕಿದೆ

ಚಾಕೋಲೇಟ್‌ ಎಂದು ಭಾವಿಸಿ ಮಾತ್ರೆ ತಿಂದಿದ್ದ 4 ವರ್ಷದ ಮಗು ಸಾವು

Posted by Vidyamaana on 2024-03-08 07:22:23 |

Share: | | | | |


ಚಾಕೋಲೇಟ್‌ ಎಂದು ಭಾವಿಸಿ ಮಾತ್ರೆ ತಿಂದಿದ್ದ 4 ವರ್ಷದ ಮಗು ಸಾವು

ಪೋಷಕರೇ ಎಚ್ಚರ: ಮಕ್ಕಳ ಎದುರು ಮಾತ್ರೆಗಳನ್ನ ಇಟ್ಟು ಎಲ್ಲೂ ಹೋಗ್ಬೇಡಿ, ಅಪಾಯ ಕಟ್ಟಿಟ್ಟ ಬುತ್ತಿ


ಚಿತ್ರದುರ್ಗ: ಚಾಕೋಲೇಟ್‌ ಎಂದುಕೊಂಡು ಮನೆಯಲ್ಲಿದ್ದ ಮಾತ್ರೆ ಸೇವಿಸಿದ್ದ 4 ವರ್ಷದ ಗಂಡು ಮಗು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದೆ.ಚಿತ್ರದುರ್ಗ ತಾಲೂಕು ಕಡಬನಕಟ್ಟೆ ನಿವಾಸಿ ವಸಂತಕುಮಾರ್‌ ಹಾಗೂ ಪವಿತ್ರಾ ದಂಪತಿ ಪುತ್ರ ಹೃತ್ವಿಕ್‌ ಮೃತಪಟ್ಟ ಮಗು.ಮಾ.2ರಂದು ಮಧ್ಯಾಹ್ನ 12:30ರ ಸುಮಾರಿಗೆ ಮನೆಯಲ್ಲಿ ಯಾರೂ ಯಾರೂ ಇಲ್ಲದ ವೇಳೆ ಕಪಾಟಿನಲ್ಲಿದ್ದ ಮಾತ್ರೆಗಳನ್ನು ಮಗು ತಿಂದಿದೆ. ನಂತರ ಸುಸ್ತಾಗಿದ್ದು, ತಾಯಿಗೆ ಸನ್ನೆಯ ಮೂಲಕ ಮಾತ್ರೆ ತಿಂದಿರುವುದನ್ನು ತಿಳಿಸಿದೆ.


ತಕ್ಷಣ ಮಗುವನ್ನು ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ಸೇರಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಾ.3ರಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾ.6ರಂದು ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.


ಈ ಕುರಿತು ಮೃತ ಮಗುವಿನ ತಂದೆ ವಸಂತಕುಮಾರ್‌ ತುರುವನೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಫೆ.18 : ಒರುಂಬಾಲು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ

Posted by Vidyamaana on 2023-02-17 05:34:28 |

Share: | | | | |


ಫೆ.18 : ಒರುಂಬಾಲು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ

ಕಡಬ : ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಒರುಂಬಾಲು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ ಫೆ.18 ಶನಿವಾರ ವಿವಿಧ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ನಡೆಯಲಿದೆ.

ಮಹಾಶಿವರಾತ್ರಿ ಪ್ರಯುಕ್ತ ದೇವಸ್ಥಾನದಲ್ಲಿ ವಿವಿಧ ಭಜನಾ ತಂಡಗಳಿಂದ ಸಂಜೆ 6 ಕ್ಕೆ ಕುಣಿತ ಭಜನೆ,  ಮಹಾಪೂಜೆ  ಮತ್ತು ರಾತ್ರಿ 9ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 12 ಕ್ಕೆ ಮಹಾಶಿವರಾತ್ರಿಯ ವಿಶೇಷ ಪೂಜೆ ನಡೆಯಲಿದೆ.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನ ಪ್ರಕಟಣೆಯಲ್ಲಿ ತಿಳಿಸಿದೆ.

ರೀಲ್ಸ್‌ಗಾಗಿ ರಸ್ತೆಯಲ್ಲಿ ಶಾಲಾ ಬಾಲಕಿಯರ ಸ್ಟಂಟ್, ಮುಂದೇನಾಯ್ತು ನೋಡಿ!

Posted by Vidyamaana on 2024-06-25 17:16:35 |

Share: | | | | |


ರೀಲ್ಸ್‌ಗಾಗಿ ರಸ್ತೆಯಲ್ಲಿ ಶಾಲಾ ಬಾಲಕಿಯರ ಸ್ಟಂಟ್, ಮುಂದೇನಾಯ್ತು ನೋಡಿ!

ರೀಲ್ಸ್ ಇಲ್ಲದೆ ದಿನವೇ ಮುಂದೆ ಸಾಗದ ಪರಿಸ್ಥಿತಿ ಎದುರಾಗಿದೆ. ರೀಲ್ಸ್‌ಗಾಗಿ ಜನರು ಅಪಾಯಕಾರಿ ಸ್ಟಂಟ್ ಮಾಡಿ ಗಮನಸೆಳೆಯುವ ಪ್ರಯತ್ನ ಮಾಡುತ್ತಾರೆ. ಆದರೆ ಈ ರೀತಿಯ ಸ್ಟಂಟ್ ದುರಂತದಲ್ಲಿ ಅಂತ್ಯವಾಗಿದೆ. ಶಾಲಾ ಬಾಲಕಿಯರಿಬ್ಬರು ರೀಲ್ಸ್‌ಗಾಗಿ ಸ್ಟಂಟ್ ಮಾಡಿದ್ದಾರೆ. ಒರ್ವ ಬಾಲಕಿಯ ಭುಜದ ಮೇಲೆ ಹತ್ತಿ ಬ್ಯಾಕ್ ಫ್ಲಿಪ್ ಪ್ರಯತ್ನಿಸಿದ್ದಾಳೆ. ಆದರೆ ಲ್ಯಾಂಡಿಂಗ್ ವೇಳೆ ಸಮಸ್ಯೆಯಾಗಿದೆ. ಪರಿಣಾಮ ಬಾಲಕಿ ಇದೀಗ ಎದ್ದು ನಿಲ್ಲದ ಪರಿಸ್ಥಿತಿಯಲ್ಲಿದ್ದಾಳೆ.ಶಾಲಾ ಸಮವಸ್ತ್ರದಲ್ಲಿರುವ ಇಬ್ಬರು ಬಾಲಕಿಯರು ಹೆದ್ದಾರಿಯಲ್ಲಿ ಸ್ಟಂಟ್ ಮಾಡಲು ಮುಂದಾಗಿದ್ದಾರೆ. ಬಾಲಕಿಯರ ಸ್ಟಂಟ್ ಮತ್ತಷ್ಟು  ವೈರಲ್ ಆಗಲಿದೆ ಎಂದು ಸಾಹಸ ಪ್ರದರ್ಶನ ಮಾಡಿದ್ದಾರೆ. ರಸ್ತೆಯಲ್ಲಿ ಬಾಲಕಿ ಮತ್ತೊಬ್ಬ ಬಾಲಕಿಯ ಭುಜದ ಮೇಲೆ ಹತ್ತಿ ಬ್ಯಾಕ್ ಫ್ಲಿಪ್ ಮಾಡಿದ್ದಾಳೆ. ಎತ್ತರದಿಂದ ಬ್ಯಾಕ್ ಫ್ಲಿಪ್ ಪ್ರಯತ್ನಿಸಿದ ಬಾಲಕಿ ನೆಲಕ್ಕೆ ಲ್ಯಾಂಡಿಂಗ್ ಆಗವಾಗ ಕಾಲು ಜಾರಿದೆ. ಪರಿಣಾಮ ದೊಪ್ಪನೆ ಬಿದ್ದಿದ್ದಾಳೆ.

Recent News


Leave a Comment: