ಜೋಕಟ್ಟೆ: ಮನೆ ಮೇಲೆ ತಡೆಗೋಡೆ ಕುಸಿತ; ಬಾಲಕ ಮೃತ್ಯು

ಸುದ್ದಿಗಳು News

Posted by vidyamaana on 2024-07-25 12:27:06 |

Share: | | | | |


ಜೋಕಟ್ಟೆ: ಮನೆ ಮೇಲೆ ತಡೆಗೋಡೆ ಕುಸಿತ; ಬಾಲಕ ಮೃತ್ಯು

ಪಣಂಬೂರು: ಇಲ್ಲಿನ ಜೋಕಟ್ಟೆ ಗ್ರಾಮ ಪಂಚಾಯತ್ ಗುಡ್ಡೆ ಎಂಬಲ್ಲಿ ಮನೆಯ ಮೇಲೆ� ತಡೆಗೋಡೆ ಕುಸಿದು ಬಿದ್ದು ಯುವಕ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ‌.ಮುಲ್ಕಿ ಕೊಲ್ನಾಡು ನಿವಾಸಿ ಶಂಕರ ಎಂಬವರ ಪುತ್ರ ಶೈಲೇಶ್ (17) ಮೃತ ಯುವಕ. ಜೋಕಟ್ಟೆಯಲ್ಲಿರುವ ತನ್ನ ದೊಡಮ್ಮನ ಮಗಳ ಮನೆಗೆ ಬಂದಿದ್ದ ಶೈಲೇಶ್, ಇಲ್ಲಿಯೇ ಉಳಿದುಕೊಂಡಿದ್ದ.

ಮನೆಯಲ್ಲಿ ಶೈಲೇಶ್ ರವರ ದೊಡ್ಡಮನ ಮಗಳು ಸವಿತಾ, ಆಕೆಯ ಗಂಡ ಸುರೇಶ್ ಮತ್ತು ಮಗು ಸಾಕ್ಷಿ ಮನೆಯ ಒಂದು ಕೋಣೆಯಲ್ಲಿ ಮಲಗಿದ್ದು, ಶೈಲೇಶ್ ಇನ್ನೊಂದು ಕಡೆ ಮಲಗಿದ್ದ. ತಡೆಗೋಡೆ ಕುಸಿದು ಹಂಚಿನ ಮನೆಯ ಮೇಲೆ ಬಿದ್ದಿದ್ದರಿಂದ ಅಲ್ಲಿ ಮಲಗಿದ್ದ ಶೈಲೇಶ್ ತೀವ್ರ ಗಾಯಗೊಂಡು ಮೃತಪಟ್ಟಿದ್ದಾನೆ. ಇನ್ನೊಂದು ಕೋಣೆಯಲ್ಲಿ ಮಲಗಿದ್ದ ಇತರ ಮೂರು ಜನರಲ್ಲಿ ಸವಿತಾ ಅವರಿಗೆ ಸಣ್ಣ ಗಾಯವಾಗಿದ್ದು‌, ಚಿಕಿತ್ಸೆ ಪಡೆದಿದ್ದಾರೆ‌ ಎಂದು ತಿಳಿದು ಬಂದಿದೆ.

ಶೈಲೇಶ್ ಅವರ ಮೃತದೇಹವನ್ನು ನಗರದ ಎ.ಜೆ.ಆಸ್ಪತ್ರೆಯ ಶವಗಾರದಲ್ಲಿಡಲಾಗಿದ್ದು, ಸ್ಥಳಕ್ಕೆ ಪಣಂಬೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

 Share: | | | | |


ಅಳಿಯನಿಗೆ ಅನೈತಿಕ ಸಂಬಂಧ; ಬಿಯರ್‌ ಕುಡಿಸಿ ಚಾಕುವಿನಿಂದ ಇರಿದು ಕೊಂದ ಮಾವ ಹೈದರ್

Posted by Vidyamaana on 2024-02-24 13:19:36 |

Share: | | | | |


ಅಳಿಯನಿಗೆ ಅನೈತಿಕ ಸಂಬಂಧ; ಬಿಯರ್‌ ಕುಡಿಸಿ ಚಾಕುವಿನಿಂದ ಇರಿದು ಕೊಂದ ಮಾವ ಹೈದರ್

ಹಾವೇರಿ: ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಅಳಿಯನನ್ನೇ ಮಾವ ಕೊಲೆ ಮಾಡಿದ್ದಾನೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಘಟನೆ ನಡೆದಿದೆ. ಸಲೀಂ ದಾದಾಫೀರ್ ಒಲೆಕಾರ್ (29) ಕೊಲೆಯಾದ ವ್ಯಕ್ತಿ.

ಹೈದರ ಚಮನಸಾಬ್ ಹಲಗೇರಿ ಎಂಬುವವನು ಕೊಲೆ ಆರೋಪಿ ಆಗಿದ್ದಾನೆ. ನಗರದ ಹೊರವಲಯಕ್ಕೆ ಸಲೀಂ ಕರೆದು ಹೋದ ಹೈದರ್‌ ಚೆನ್ನಾಗಿ ಬಿಯರ್ ಕುಡಿಸಿದ್ದಾನೆ. ನಂತರ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.ಕೊಲೆ ಮಾಡಿ ಗದಗ-ಹೊನ್ನಾಳಿ ಹೆದ್ದಾರಿ ಪಕ್ಕದಲ್ಲಿ ಶವ ಎಸೆದು ಹೋಗಿದ್ದರು. ಆರೋಪಿ ಹಾಗೂ ಕೊಲೆಯಾದ ವ್ಯಕ್ತಿ ಇಬ್ಬರು ಮಾಗೋಡ ಗ್ರಾಮದವರು ಎಂದು ತಿಳಿದು ಬಂದಿದೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಸಿಗರೇಟ್ ಸೇದುತ್ತಿದ್ದ ಯುವತಿಯನ್ನ ಗುರಾಯಿಸಿದ್ದಕ್ಕೆ ಕಿರಿಕ್ ; 4 ಮಕ್ಕಳ ತಂದೆಯನ್ನ ಬರ್ಬರವಾಗಿ ಕೊಂದ ಡೆಡ್ಲಿ ಲೇಡಿ

Posted by Vidyamaana on 2024-04-09 04:43:22 |

Share: | | | | |


ಸಿಗರೇಟ್ ಸೇದುತ್ತಿದ್ದ ಯುವತಿಯನ್ನ  ಗುರಾಯಿಸಿದ್ದಕ್ಕೆ ಕಿರಿಕ್ ; 4 ಮಕ್ಕಳ ತಂದೆಯನ್ನ ಬರ್ಬರವಾಗಿ ಕೊಂದ ಡೆಡ್ಲಿ ಲೇಡಿ

ಮಹಾರಾಷ್ಟ್ರ, ಏ 08: ಆಕೆ ರಸ್ತೆ ಬದಿಯ ಬೀಡಾ ಅಂಗಡಿ ಬಳಿ ಸಿಗರೇಟ್ ಸೇದುತ್ತಾ ನಿಂತಿದ್ದಳು. ಆಕೆಯ ಜೊತೆ ಆಕೆಯ ಗೆಳತಿಯೂ ಇದ್ದರು. ಈ ವೇಳೆ ಅಂಗಡಿ ಬಳಿ ನಿಂತಿದ್ದ ವ್ಯಕ್ತಿಯೊಬ್ಬ ಸಿಗರೇಟ್ ಸೇದುತ್ತಿದ್ದ ಯುವತಿಯನ್ನೇ ಗುರಾಯಿಸುತ್ತಿದ್ದ. ಅಷ್ಟೇ.. ಯುವತಿ ಬುಲಾವ್ ಕೊಟ್ಟಿದ್ದೇ ತಡ ಸ್ಥಳಕ್ಕಾಗಮಿಸಿದ ಆಕೆಯ ಗೆಳೆಯರ ಜೊತೆ ಸೇರಿದ ಯುವತಿ ತನ್ನನ್ನು ಕೆಣಕಿದ ವ್ಯಕ್ತಿಯನ್ನು ಕೊಂದು ಮುಗಿಸಿದ್ದಾರೆ.


ಮಹಾರಾಷ್ಟ್ರ ರಾಜ್ಯದ ನಾಗಪುರ ಜಿಲ್ಲೆಯಲ್ಲಿ ನಡೆದ ಶಾಕಿಂಗ್ ಘಟನೆ ಇದು. 24 ವರ್ಷದ ಯುವತಿ ಪಾನ್ ಶಾಪ್ ಬಳಿ ಸಿಗರೇಟ್ ಸೇದುತ್ತಾ ನಿಂತಿದ್ದ ವೇಳೆ ಈ ಘಟನೆ ನಡೆದಿದೆ. ಆಕೆ ತನ್ನ ಇಬ್ಬರು ಪುರುಷ ಗೆಳೆಯರ ಜೊತೆ ಸೇರಿ 28 ವರ್ಷ ವಯಸ್ಸಿನ ರಂಜಿತ್ ರಾಥೋಡ್ ಎಂಬಾತನನ್ನ ಹತ್ಯೆ ಮಾಡಿದ್ದಾರೆ. ಮೃತ ವ್ಯಕ್ತಿ 4 ಹೆಣ್ಣು ಮಕ್ಕಳ ತಂದೆ ಎಂದು ತಿಳಿದು ಬಂದಿದೆ.


ಕಳೆದ ಶನಿವಾರ ತಡ ರಾತ್ರಿ ನಡೆದ ಈ ಘಟನೆಯ ಸಿಸಿಟಿವಿ ವಿಡಿಯೋ ಇದೀಗ ವೈರಲ್ ಆಗಿದೆ. ನಾಗಪುರದ ಮನೇವಾಡ ಸಿಮೆಂಟ್ ರಸ್ತೆಯ ಪಾನ್ ಶಾಪ್‌ ಬಳಿಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಈ ಗುದ್ದಾಟದ ದೃಶ್ಯ ದಾಖಲಾಗಿದೆ. ಈ ವಿಡಿಯೋ ನೋಡಿ ಸ್ಥಳೀಯರು ಆಘಾತಕ್ಕೀಡಾಗಿದ್ದಾರೆ.

ಸುಳ್ಯ : ಕುರುಂಜಿ ಮನೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಅವರಿಗೆ ಗೌರವ

Posted by Vidyamaana on 2024-03-30 19:29:56 |

Share: | | | | |


ಸುಳ್ಯ : ಕುರುಂಜಿ ಮನೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಅವರಿಗೆ ಗೌರವ

ಸುಳ್ಯ: ಕೆವಿಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಚಿದಾನಂದ ಅವರ ಮನೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರನ್ನು ಗೌರವಿಸಲಾಯಿತು.

ಡಾ. ಚಿದಾನಂದ ಹಾಗೂ ಮನೆಯವರು ಪದ್ಮರಾಜ್ ಅವರಿಗೆ ಶಾಲು ಹೊದಿಸಿ ಸನ್ಮಾನ ಮಾಡಿದರು .

ಸುಳ್ಯ :ಹೊಳೆಯಲ್ಲಿ ಮುಳುಗಿ ಪುತ್ತೂರು ಮೂಲದ ಪ್ರವೀಣ್ ಜಿತೀಶ್ ಮೃತ್ಯು.

Posted by Vidyamaana on 2023-02-11 14:36:46 |

Share: | | | | |


ಸುಳ್ಯ :ಹೊಳೆಯಲ್ಲಿ ಮುಳುಗಿ ಪುತ್ತೂರು ಮೂಲದ ಪ್ರವೀಣ್ ಜಿತೀಶ್ ಮೃತ್ಯು.

ಪುತ್ತೂರು:ಸುಳ್ಯದ ಪಯಸ್ವಿನಿ ನದಿಯಲ್ಲಿ ಸ್ನಾನಕ್ಕೆಂದು ಇಳಿದಿದ್ದ ಕೌಡಿಚ್ಚಾರ್ ಪರಿಸರದ ಆರು ಮಂದಿ ಯುವಕರಲ್ಲಿ ಈಜಲು ಬಾರದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ನಡೆದಿದೆ.

ಕೆಯ್ಯರು ಗ್ರಾಮದ ದೇರ್ಲ ನಾರಾಯಣ ಪಾಟಳಿ-ಗೀತಾ ದಂಪತಿಯ ಕಿರಿಯ ಮಗ ಜಿತೇಶ್(19ವ. ಮತ್ತು ಪಡುವನ್ನೂರು ಗ್ರಾಮದ ಅಂಬಟೆಮೂಲೆ ಕೃಷ್ಣ ನಾಯ್ಕ-ದೇವಕಿ ದಂಪತಿಯ ಏಕೈಕ ಪುತ್ರಪ್ರವೀಣ್(19ವ.)ಮೃತಪಟ್ಟವರು.ಫೆ.11ರಂದು ಸಂಜೆ ಈ ಘಟನೆ ನಡೆದಿದೆ.ಸಂತೋಷ್ ಅಂಬಟೆಮೂಲೆ, ಸತ್ಯಾನಂದ ಚಂದುಕೂಡು, ಯುವರಾಜ ಅಂಬಟೆಮೂಲೆ, ನಿತೀಶ್ ಬಳ್ಳಿಕಾನ, ಜಿತೇಶ್ ದೇರ್ಲ ಮತ್ತು ಪ್ರವೀಣ್ ಅಂಬಟೆಮೂಲೆ ಇವರೆಲ್ಲರೂ ಸೇರಿ ಜತೆಯಾಗಿ ಮೆಷಿನ್ ಮೂಲಕ ಹುಲ್ಲು ಹೆರೆಯುವ ಕೆಲಸಕ್ಕೆ ಹೋಗುವವರಾಗಿದ್ದು ಫೆ.11ರಂದು ಕೆಡ್ಡಸದ ಪ್ರಯುಕ್ತ ಕೆಲಸಕ್ಕೆ ರಜೆ ಮಾಡಿದ್ದರು.ತಾವು ಒಟ್ಟಿಗೆ ಕೆಲಸಕ್ಕೆ ಹೋಗುವ ಕಾರಿನಲ್ಲಿಯೇ ಅವರು ಮಧ್ಯಾಹ್ನ ಜತೆಯಾಗಿ ಕಾರಿನಲ್ಲಿ ಸುಳ್ಯಕ್ಕೆ ಹೋಗಿದ್ದರು.ಸುಳ್ಯದ ಓಡಬಾಯಿಯಲ್ಲಿ ಅಗ್ನಿಶಾಮಕ ಇಲಾಖೆಯ ಸಮೀಪ ಕಾರನ್ನು ನಿಲ್ಲಿಸಿ, ಪಕ್ಕದಲ್ಲೇ ಇರುವ ತೂಗು ಸೇತುವೆಯಿಂದಾಗಿ ದೊಡ್ಡರಿಗೆಹೋಗಿದ್ದರು.ಸತ್ಯಾನಂದ ಚಂದುಕೂಡ್ಲುರವರ ಸಂಬಂಧಿ ಗೋವಿಂದ ನಾಯ್ಕರ ಮನೆ ದೊಡೇರಿಯಲ್ಲಿದ್ದುಈ ಆರು ಜನ ಯುವಕರು ಕೂಡಾ ಅಲ್ಲಿಗೆ ಹೋಗಿ ಮನೆಯವರ ಜತೆ ಮಾತನಾಡಿ, ಅಲ್ಲಿ ಶರಬತ್ತು ಕುಡಿದು ಅಲ್ಲಿಂದ ಹೊರಟು ಬಂದಿದ್ದರು.ಹಾಗೆ ಹೊರಟು ಬಂದ ಅವರು ತೂಗು ಸೇತುವೆಯಲ್ಲಿ ಬಾರದೇ ಪಕ್ಕದಲ್ಲೇ ಇರುವ ಪಯಸ್ವಿನಿ ನದಿಗೆ ಇಳಿದು ಸ್ನಾನ ಮಾಡಲು ಮುಂದಾದರು.ಅವರಲ್ಲಿ ಈಜಲು ತಿಳಿದಿದ್ದ ನಿತೀಶ್‌ರವರು ನೀರಿಗಿಳಿದು ಮುಂದೆ ಹೋಗತೊಡಗಿದಾಗ ಪ್ರವೀಣ ಮತ್ತು ಜಿತೇಶ್ ಅವರೂ ನೀರಿಗಿಳಿದರು.ನಿತೀಶ್‌ರವರು ಹೊಳೆಯ ಬದಿಯಿಂದಾಗಿ ಹೋದರು.ಪ್ರವೀಣ್ ಮತ್ತು ಜಿತೇಶ್‌ರವರು ನೀರು ತುಂಬಿದ ಗುಂಡಿಯ ಮಧ್ಯದಿಂದಾಗಿ ಹೋಗುತ್ತಿದ್ದ ವೇಳೆ ಪ್ರವೀಣ್‌ರವರು ನೀರಿನಲ್ಲಿ ಮುಳುಗಿದರು.ಆತ ಬೊಬ್ಬೆ ಹೊಡೆದಾಗ ಜೊತೆಯಲ್ಲೇ ಇದ್ದ ಜಿತೇಶ್‌ರವರು ಪ್ರವೀಣ್‌ರವರನ್ನು ಎಳೆಯಲು ಮುಂದಾದಾಗ ಇಬ್ಬರೂ ನೀರಿನಲ್ಲಿ ಮುಳುಗಿದರು.ಜತೆಗಿದ್ದ ನಾಲ್ವರು ಯುವಕರೂ ಕೂಡಲೇ ನೀರಿಗೆ ಇಳಿದು ಜಿತೇಶ್ ಮತ್ತು ಪ್ರವೀಣ್ ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗದೆ ದಡದಲ್ಲಿ ನಿಂತು ಜೋರಾಗಿ ಬೊಬ್ಬೆ ಹೊಡೆದರು.ಈ ಬೊಬ್ಬೆ ಕೇಳಿ,ನದಿಯ ಪಕ್ಕದಲ್ಲಿ ಮನೆಯಿರುವ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಕಲಾವತಿ ದೊಡೇರಿಯವರ ಪುತ್ರ ಜಯಪ್ರಕಾಶರು ಓಡಿ ಬಂದರು.ಬೊಬ್ಬೆ ಹೊಡೆಯುತ್ತಿದ್ದ ಯುವಕರಿಂದ ವಿಷಯ ತಿಳಿದು ಜಯಪ್ರಕಾಶರು ನೀರಿಗೆ ಧುಮುಕಿದರು.ಆದರೆ ಆ ವೇಳೆಗಾಗಲೇ ಜಿತೇಶ್ ಮತ್ತು ಪ್ರವೀಣ್ ನೀರಲ್ಲಿ ಪೂರ್ಣವಾಗಿ ಮುಳುಗಿದ್ದು ಜಯಪ್ರಕಾಶರು ಅವರನ್ನು ನೀರಿನಿಂದಮೇಲಕ್ಕೆತ್ತಿದರು.ಆದರೆ ಆ ವೇಳೆಗಾಗಲೇ ಅವರಿಬ್ಬರ ಪ್ರಾಣ ಪಕ್ಷಿ ಹಾರಿಹೋಗಿತ್ತು.ಇಬ್ಬರೂ ಪರಸ್ಪರ ಹಿಡಿದುಕೊಂಡಿದ್ದ ಭಂಗಿಯಲ್ಲೇ ಕೊನೆಯುಸಿರೆಳೆದಿದ್ದರು.ಬಳಿಕ ಮೃತ ದೇಹಗಳನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ತರಲಾಯಿತು. ಪೊಲೀಸರು ಬಂದ ಬಳಿಕ ಪೋಸ್ಟ್ ಮಾರ್ಟಂ ನಡೆಸಿ ಮೃತದೇಹಗಳನ್ನು ಯುವಕರ ಮನೆಯವರಿಗೆ ಹಸ್ತಾಂತರಿಸಲಾಯಿತು.


ಮೃತ ಜಿತೇಶ್‌ರವರು ತಂದೆ, ತಾಯಿ, ಅಣ್ಣ ಹಾಗೂ ಸಹೋದರಿಯನ್ನು ಅಗಲಿದ್ದಾರೆ.ಮೃತ ಪ್ರವೀಣ ಅವರು ತಂದೆ,ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.ಈ ದುರ್ಘಟನೆಯಿಂದಾಗಿ ಎರಡೂ ಮನೆಗಳಲ್ಲಿ ಸ್ಮಶಾನ ಮೌನ ಆವರಿಸಿದೆ.

ಕಾರ್ಕಳ:ಪ್ರಥಮ ಪಿಯುಸಿ ವಿದ್ಯಾರ್ಥಿ ಕೌಶಿಕ್ ಆತ್ಮಹತ್ಯೆ

Posted by Vidyamaana on 2023-07-19 10:21:59 |

Share: | | | | |


ಕಾರ್ಕಳ:ಪ್ರಥಮ ಪಿಯುಸಿ ವಿದ್ಯಾರ್ಥಿ ಕೌಶಿಕ್ ಆತ್ಮಹತ್ಯೆ

ಕಾರ್ಕಳ:ಪ್ರಥಮ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ.ಮಾಳ ಮುಳ್ಳೂರು ನಿವಾಸಿ ಕೌಶಿಕ್(17) ಮೃತ ದುರ್ದೈವಿ.


ಕೌಶಿಕ್ ಬಜಗೋಳಿಯಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ. ಈತನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತ ಕೌಶಿಕ್ ತಂದೆ,ತಾಯಿ, ಇಬ್ಬರು ಸಹೋದರಿಯರು ಹಾಗೂ ಓರ್ವ ಸಹೋದರನನ್ನು ಅಗಲಿದ್ದಾನೆ

ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಡಿಕೆ ಮರ ಬಿದ್ದು ಮಹಿಳೆ ಮೃತ್ಯು

Posted by Vidyamaana on 2023-12-07 04:27:34 |

Share: | | | | |


ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಡಿಕೆ ಮರ ಬಿದ್ದು ಮಹಿಳೆ ಮೃತ್ಯು

ವಿಟ್ಲ: ಸಾಲೆತ್ತೂರಿನ ತೋಟವೊಂದರಲ್ಲಿ ಮಹಿಳೆಯೊಬ್ಬರು ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ಅಡಿಕೆ ಮರ ಮುರಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.


ಗುಲಾಬಿ(48) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.


ಇವರು ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಡಿಕೆ ಮರವೊಂದು ಆಕಸ್ಮಿಕವಾಗಿ ಮುರಿದು ಬಿದಿದ್ದು, ಇದರಿಂದ ತಲೆಗೆ ತೀವ್ರ ಪೆಟ್ಟಾಗಿದೆ. ಮಹಿಳೆಯನ್ನು ಕೂಡಲೇ ವಿಟ್ಲ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆಯೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.


ಪ್ರಕರಣದ ಕುರಿತು ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

Recent News


Leave a Comment: