ಪಿಜಿ ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಟ್ವಿಸ್ಟ್

ಸುದ್ದಿಗಳು News

Posted by vidyamaana on 2024-07-25 09:34:49 |

Share: | | | | |


ಪಿಜಿ ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಟ್ವಿಸ್ಟ್

ಬೆಂಗಳೂರು : ಕೋರಮಂಗಲದ ಲೇಡಿಸ್ ಪಿಜಿ ಒಳಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದ್ದು, ಈ ಬಗ್ಗೆ ಪೊಲೀಸರು ಮಹತ್ವದ ಮಾಹಿತಿ ನೀಡಿದ್ದಾರೆ. ಮೃತ ಯುವತಿಯನ್ನು ಬಿಹಾರದ ಕೃತಿ ಕುಮಾರಿ‌ (24) ಎಂದು ಗುರುತಿಸಲಾಗಿದ್ದು, ಆಕೆಯ ಪ್ರಿಯತಮನೇ ಕೊಲೆಗಾರ ಎಂದು ಪೊಲೀಸರು ತಿಳಿಸಿದ್ದಾರೆ .

ಕೃತಿ ಕುಮಾರಿ ತಾನು ಪ್ರೀತಿಸುತ್ತಿದ್ದ ಯುವಕನಿಂದಲೇ ಕೊಲೆಯಾಗಿದ್ದಾರೆ. ರಾತ್ರಿ 11:30ಕ್ಕೆ ಕೃತಿ ಕುಮಾರಿಯೇ ಯುವಕನನ್ನು ಕರೆದುಕೊಂಡು ಬಂದಿರುವ ಬಗ್ಗೆ ಮೇಲ್ನೋಟಕ್ಕೆ ಮಾಹಿತಿ ಸಿಕ್ಕಿದೆ. ಪಿಜಿಯಿಂದ ಹೊರ ಬಂದ ಕೃತಿ ತನ್ನ ಪ್ರಿಯತಮನ ಜತೆ ರಾತ್ರಿ ಊಟ ಮಾಡಿದ್ದರು. ಊಟ ಮುಗಿಸಿದ ಕೃತಿ ತನ್ನೊಂದಿಗೆ ಯುವಕನ್ನು ಪಿಜಿಗೆ ಕರೆತಂದಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೃತಿಯ ರೂಂಗೆ ಆಗಮಿಸಿದ್ದ ವೇಳೆ ಇಬ್ಬರ ಮಧ್ಯೆ ಗಲಾಟೆಯಾಗಿ ಕೊಲೆಯಾಗಿರುವ ಶಂಕೆ ಇದೆ.

ಪಿಜಿಯ ಸಿಸಿಟಿವಿ ಎಲ್ಲವನ್ನು ಕೂಡ ಪರಿಶೀಲನೆ ನಡೆಸಿದ್ದೇವೆ. ಪಿಜಿಯ ನಿರ್ಲಕ್ಷ್ಯತನದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿ ಪತ್ತೆಗಾಗಿ ಪೊಲೀಸರ ವಿಶೇಷ ತಂಡವನ್ನ ರಚನೆ ಮಾಡಲಾಗಿದೆ ಎಂದಿದ್ದಾರೆ

 Share: | | | | |


ಚಾರ್ವಾಕ ನಿವಾಸಿ ತಾರಾನಾಥ್ ಬೆಂಗಳೂರಿನಲ್ಲಿ ಆತ್ಮಹತ್ಯೆ

Posted by Vidyamaana on 2023-11-05 11:07:32 |

Share: | | | | |


ಚಾರ್ವಾಕ ನಿವಾಸಿ ತಾರಾನಾಥ್  ಬೆಂಗಳೂರಿನಲ್ಲಿ ಆತ್ಮಹತ್ಯೆ

ಬೆಂಗಳೂರು: ಕಡಬ ತಾಲೂಕಿನ ಚಾರ್ವಾಕ ನಿವಾಸಿ ತಾರಾನಾಥ ಎನ್ನುವವರು ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 


ಕಡಬ ತಾಲೂಕಿನ ಬೊಮ್ಮಳಿಕೆ ಪದ್ಮನಾಭ ಗೌಡ ಎನ್ನುವವರ ಪುತ್ರ ತಾರಾನಾಥ (39ವ.) ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು,  ತನ್ನ ರೂಮ್ ನಲ್ಲೇ ನ.3ರಂದು ರಾತ್ರಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.  ಈ ಬಗ್ಗೆ ಪ್ರಕರಣ ದಾಖಲಾಗಿದೆ. 


ಮೃತರು ತಂದೆ ತಾಯಿ ಪತ್ನಿ ಪುತ್ರನನ್ನು ಅಗಲಿದ್ದಾರೆ.  ನ.5 ರಂದು ಮೃತದೇಹ ತವರೂರಿಗೆ ಆಗಮಿಸಲಿದೆ.

Viral Video : ಬೀದಿಯಲ್ಲಿ ಶುರುವಾಗಿ ಚರಂಡಿಗೆ ತಲುಪಿದ ದಂಪತಿ ಜಗಳ, ಗಂಡನ ಸ್ಥಿತಿ ನೋಡಿ ಅಯ್ಯೋ ಎಂದ ನೆಟ್ಟಿಗರು

Posted by Vidyamaana on 2024-02-24 21:48:55 |

Share: | | | | |


Viral Video : ಬೀದಿಯಲ್ಲಿ ಶುರುವಾಗಿ ಚರಂಡಿಗೆ ತಲುಪಿದ ದಂಪತಿ ಜಗಳ, ಗಂಡನ ಸ್ಥಿತಿ ನೋಡಿ ಅಯ್ಯೋ ಎಂದ ನೆಟ್ಟಿಗರು

ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುವ ಗಾದೆ ಮಾತಿದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಗಂಡ ಹೆಂಡಿರ ಜಗಳ ಬೀದಿಗೆ ಬರುವುದೇ ಹೆಚ್ಚು. ನಾಲ್ಕು ಗೋಡೆಗಳ ಮಧ್ಯೆ ಇರಬೇಕಾದ ಮುನಿಸು, ಮನಸ್ತಾಪಗಳು ಬಗೆಹರಿಸಲು ಸಾಧ್ಯವಿಲ್ಲ ಎನ್ನುವ ಮಟ್ಟಿಗೆ ಬೆಳೆದು ಕೆಲವೊಮ್ಮೆ ಡೈವೋರ್ಸ್ ನೀಡುವ ಹಂತದವರೆಗೂ ತಲುಪುತ್ತದೆ.ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಗಂಡ ಹೆಂಡಿರ ಜಗಳವು ಬೀದಿಗೆ ಬಂದಿದ್ದು, ರಸ್ತೆಯಲ್ಲಿ ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ಕೊನೆಗೆ ಈ ಜೋಡಿಯು ಜಗಳವಾಡುತ್ತಾ ಚರಂಡಿಗೆ ಬಿದ್ದಿದ್ದು, ಅಲ್ಲಿಯೂ ಇಬ್ಬರೂ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಮಾತ್ರ ಶಾಕ್ ಆಗಿದ್ದಾರೆ.

ಯಾವ ಸಂಸಾರದಲ್ಲಿ ಜಗಳವಿರುವುದಿಲ್ಲ ಹೇಳಿ. ಜಗಳವಿದ್ದ ಕಡೆಯಲ್ಲಿ ಪ್ರೀತಿ ಹೆಚ್ಚಿರುತ್ತದೆ ಎನ್ನುವ ಮಾತಿದೆ. ಅತಿಯಾದ ಪ್ರೀತಿ, ಸಣ್ಣ ಪುಟ್ಟ ಮುನಿಸು ಜಗಳವಿದ್ದರೆ ಸಂಸಾರವೆನ್ನುವುದು ನೋಡಲು ಚಂದ. ಆದರೆ ಈ ಜಗಳವನ್ನೇ ದೊಡ್ಡದು ಮಾಡಿದರೆ ನಾಲ್ಕು ಗೋಡೆಗೆ ಸೀಮಿತವಾಗಿರಬೇಕಾದ ಜಗಳವು ಬೀದಿಗೆ ಬರುವುದಂತೂ ಪಕ್ಕಾ. ಇಲ್ಲೊಂದು ಜೋಡಿಯೂ ಸಂಸಾರದಲ್ಲಿನ ಜಗಳವನ್ನು ಮನೆಯಿಂದ ರಸ್ತೆಗೆ ತಂದಿದ್ದು, ಅಷ್ಟೇ ಆಗಿದ್ದರೆ ಏನು ಆಗುತ್ತಿರಲಿಲ್ಲ. ಕೊನೆಗೆ ಇವರಿಬ್ಬರ ಜಗಳವು ಚರಂಡಿಯವರೆಗೂ ತಲುಪಿದೆ. ಗಂಡ ಹೆಂಡಿರ ಜಗಳದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಇವರಿಬ್ಬರೂ ಹೊಡೆದಾಡುವ ರೀತಿ ಕಂಡು ಇದೇನಪ್ಪಾ ಹೀಗೆ ಎನ್ನುತ್ತಿದ್ದಾರೆ.ವಿಡಿಯೋದಲ್ಲಿ ಪತಿ ಪತ್ನಿಯರಿಬ್ಬರೂ ಮನೆಯಿಂದ ಹೊರಗಡೆ ರಸ್ತೆಯಲ್ಲಿ ಜಗಳವನ್ನು ಶುರು ಮಾಡಿದ್ದಾರೆ. ಬೈಕ್‌ನಲ್ಲಿ ತೆರಳುವಾಗ ಬೈಕ್ ಹಾಳಾಗಿದ್ದು, ಇದೇ ಇವರಿಬ್ಬರ ನಡುವಿನ ಜಗಳಕ್ಕೆ ಕಾರಣವಾಗಿರುವಂತೆ ಕಾಣುತ್ತಿದೆ. ಈ ವಿಡಿಯೋದ ಪ್ರಾರಂಭದಲ್ಲಿ ಗಂಡ ಬೈಕ್‌ ಅನ್ನು ತಳ್ಳಿಕೊಂಡು ಹೋಗುತ್ತಿದ್ದಾನೆ. ಹೀಗಿರುವಾಗ ಹೆಂಡತಿಯು ಗಂಡದ ಬೆನ್ನಿಗೆ ಜೋರಾಗಿ ಗುದ್ದುತ್ತಾಳೆ. ಅಲ್ಲಿಂದ ಜಗಳವು ಶುರುವಾಗಿದ್ದು, ಇಬ್ಬರೂ ಕಿತ್ತಾಡಿಕೊಳ್ಳಲು ಶುರು ಮಾಡಿದ್ದಾರೆ. ಹೀಗೆ ಜೋರಾಗಿ ಹೊಡೆದಾಡುತ್ತಲೇ ಇಬ್ಬರೂ ಚರಂಡಿಗೆ ಬಿದ್ದಿದ್ದಾರೆ. ಆದರೆ ಅಲ್ಲಿಯೂ ಜಗಳವೇನು ನಿಂತಿಲ್ಲ. ನಾರುತ್ತಿರುವ ಚರಂಡಿಯ ನೀರಿನಲ್ಲಿಯೂ ಈ ದಂಪತಿಗಳು ಹೊಡೆದಾಡಿಕೊಂಡಿದ್ದಾರೆ.


ವಿಡಿಯೋ ಇಲ್ಲಿದೆ ನೋಡಿ

Viral Video : ಬೀದಿಯಲ್ಲಿ ಶುರುವಾಗಿ ಚರಂಡಿಗೆ ತಲುಪಿದ ದಂಪತಿ ಜಗಳ, ಗಂಡನ ಸ್ಥಿತಿ ನೋಡಿ ಅಯ್ಯೋ ಎಂದ ನೆಟ್ಟಿಗರು


ಸೌದಿ ಅರೇಬಿಯಾ ಭೀಕರ ಬಸ್ ಅಪಘಾತ, ಕರ್ನಾಟಕದ ಐವರು ಮೃತ್ಯು

Posted by Vidyamaana on 2023-02-22 09:55:30 |

Share: | | | | |


ಸೌದಿ ಅರೇಬಿಯಾ ಭೀಕರ ಬಸ್ ಅಪಘಾತ, ಕರ್ನಾಟಕದ ಐವರು ಮೃತ್ಯು

ಬೆಂಗಳೂರು: ಸೌದಿ ಅರೇಬಿಯಾದ ಮಕ್ಕಾದಲ್ಲಿ ಉಮ್ರಾ ನಿರ್ವಹಿಸಿ ಮದೀನಾಕ್ಕೆ ತೆರಳುತ್ತಿದ್ದವರನ್ನು ಕರೆದೊಯ್ಯುತ್ತಿದ್ದ ಬಸ್ಸೊಂದು ಅಪಘಾತಕ್ಕೀಡಾಗಿ ಕರ್ನಾಟಕ ಮೂಲದ ಐವರು ಮೃತಪಟ್ಟಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.

ಕಲಬುರಗಿಯ ನೂರ್ ಬಾಗ್ ನಿವಾಸಿ ಶಫೀದ್ ಹುಸೈನ್ ಸುಲ್ಲದ್, ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ಝೈನುದ್ದೀನ್ ಸಾಹೇಬ್, ರೆಹನಾ ಬೇಗಮ್, ಬಡೇಜಾನ್ ಸುಲ್ಲದ್, ಸಿರಾಜ್ ಬೇಗಮ್ ಸುಲ್ಲದ್, ಸಮೀರ್ ಸುಲ್ಲದ್ ಮೃತಪಟ್ಟವರು ಎಂದು ತಿಳಿದುಬಂದಿದೆ.ಇವರು ಸಾಲಿಹೀನ್ ಎಂಬ ಹಜ್ ಮತ್ತು ಉಮ್ರಾ ಟೂರ್ ಆ್ಯಂಡ್ ಟ್ರಾವೆಲ್ಸ್ ಕಂಪನಿಯ ಮೂಲಕ ಪವಿತ್ರ ಮಕ್ಕಾ ಮತ್ತು ಮದೀನಾ ಪ್ರವಾಸ ಕೈಗೊಂಡಿದ್ದರು. ಉಮ್ರಾ ನಿರ್ವಹಿಸಿ ನಿನ್ನೆ ರಾತ್ರಿ ಬಸ್ ಮೂಲಕ ಮದೀನಾಕ್ಕೆ ತೆರಳುತ್ತಿದ್ದಾಗ ಇವರು ಪ್ರಯಾಣಿಸುತ್ತಿದ್ದ ಬಸ್ ಮಕ್ಕಾದಿಂದ 250 ಕಿ.ಮೀ.ದೂರದಲ್ಲಿ ಮುಂದೆ ಚಲಿಸುತ್ತಿದ್ದ ಟ್ರಕ್’ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕಾರ್ಯಕ್ರಮಕ್ಕೆ ಗೈರು ಅನಂತ್ ನಾಗ್ ಬಿಜೆಪಿ ಸೇರ್ಪಡೆ ಮುಂದೂಡಿಕೆ

Posted by Vidyamaana on 2023-02-22 16:50:25 |

Share: | | | | |


ಕಾರ್ಯಕ್ರಮಕ್ಕೆ ಗೈರು ಅನಂತ್ ನಾಗ್ ಬಿಜೆಪಿ ಸೇರ್ಪಡೆ  ಮುಂದೂಡಿಕೆ

ಬೆಂಗಳೂರು : ಸ್ಯಾಂಡಲ್ ವುಡ್ ಹಿರಿಯ ನಟ ಮತ್ತು ಮಾಜಿ ಸಚಿವ ಅನಂತ್ ನಾಗ್ ಅವರು ಇಂದು ಸಂಜೆ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗಿತ್ತು, ಆದರೆ ಅವು ಬಿಜೆಪಿ ಸೇರ್ಪಡೆ ಕಾರ್ಯಕ್ರಮ ಮುಂದೂಡಿಕೆಯಾಗಿದೆ.

ಇಂದು ಸಂಜೆ 4.30ಕ್ಕೆ ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಪಕ್ಷಕ್ಕೆ ಸೇರಲಿದ್ದಾರೆ . ಆದರೆ ನಟ ಅನಂತ್ ನಾಗ್ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಬಿಜೆಪಿ ಸೇರ್ಪಡೆಯನ್ನು ಸದ್ಯಕ್ಕೆ ಮುಂದೂಡಿದ್ದಾರೆ ಎನ್ನಲಾಗಿದೆ. ಕೊನೇ ಕ್ಷಣದಲ್ಲಿ ನಟ ಅನಂತ್ ನಾಗ್ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.

ಆಪಲ್‌ ಹಿಂದಿಕ್ಕಿ ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿ ಎನಿಸಿಕೊಂಡ ಮೈಕ್ರೋಸಾಫ್ಟ್‌!

Posted by Vidyamaana on 2024-01-12 06:20:00 |

Share: | | | | |


ಆಪಲ್‌ ಹಿಂದಿಕ್ಕಿ ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿ ಎನಿಸಿಕೊಂಡ ಮೈಕ್ರೋಸಾಫ್ಟ್‌!

ನವದೆಹಲಿ (ಜ.12): ಭಾರತದ ಸತ್ಯ ನಾದೆಳ್ಳೆ ಮುಖ್ಯ ವ್ಯವಸ್ಥಾಪಕ ಅಧಿಕಾರಿಯಾಗಿ ಮೈಕ್ರೋಸಾಫ್ಟ್‌ನ ಅಧಿಕಾರ ವಹಿಸಿಕೊಂಡ ಬಳಿಕ ಮೈಕ್ರೋಸಾಫ್ಟ್‌ ಕಂಪನಿಯ ಚಹರೆಯೇ ಬದಲಾಗಿದೆ ಎನ್ನುವ ಸೂಚನೆಗಳು ಸಿಗುತ್ತಿವೆ. ಗುರುವಾರ ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿಗಳ ಪೈಕಿ ಮೈಕ್ರೋಸಾಫ್ಟ್‌, ಐಫೋನ್‌ ಮೇಕರ್‌ ಕಂಪನಿಯಾಗಿರುವ ಆಪಲ್‌ಅನ್ನು ಹಿಂದಿಕ್ಕಿದೆ.2024ರಲ್ಲಿ ಆಪಲ್‌ ಉತ್ಪನ್ನಗಳಿಗೆ ಬೇಡಿಕೆ ಕುಸಿಯಲಿರುವ ಅಂದಾಜಿನಲ್ಲಿ ಈ ವಾರ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಆಪಲ್‌ ಕಂಪನಿಯ ಷೇರುಗಳು ಕುಸಿಯಲಾರಂಭಿಸಿದೆ. ಇನ್ನೊಂದೆಡೆ ಮೈಕ್ರೋಸಾಫ್ಟ್‌ ಷೇರು ಬೆಲೆಯಲ್ಲಿ ಏರಿಕೆಯಾಗಿದ್ದು, ಗುರುವಾರ ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿ ಎನ್ನುವ ಶ್ರೇಯ ಸಂಪಾದಿಸಿದೆ. ವಾಷಿಂಗ್ಟನ್‌ ಮೂಲಕ ಮೈಕ್ರೋಸಾಫ್ಟ್‌ ಕಂಪನಿಯ ಷೇರು ಬೆಲೆಗಳಲ್ಲಿ ಶೇ. 1.6ರಷ್ಟು ಏರಿಕೆ ಆಗಿದ್ದರಿಂದ ಈ ಕಂಪನಿಯ ಮಾರುಕಟ್ಟೆ ಮೌಲ್ಯ 2.875 ಟ್ರಿಲಿಯನ್‌ ಯುಎಸ್‌ ಡಾಲರ್‌ ದಾಟಿತು. ಅರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಮೂಲಕ ಹಣ ಸಂಪಾದಿಸುವ ಕಂಪನಿಗಳ ರೇಸ್‌ನಲ್ಲಿ ಮೈಕ್ರೋಸಾಫ್ಟ್‌ ಮುಂದಿದೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಕಂಪನಿಯ ಷೇರುಗಳಲ್ಲಿ ಏರಿಕೆಯಾಗಿದೆ.ಇನ್ನು ಆಪಲ್‌ ಕಂಪನಿಯ ಷೇರುಗಳು ಶೇ. 0.9ರಷ್ಟು ಕುಸಿದು ಅದರ ಮಾರುಕಟ್ಟೆ ಮೌಲ್ಯ 2.871 ಟ್ರಿಲಿಯನ್‌ ಯುಎಸ್‌ ಡಾಲರ್‌ ಎನಿಸಿಕೊಂಡಿತು. 2021ರ ಬಳಿಕ ಇದೇ ಮೊದಲ ಬಾರಿಗೆ ಮಾರುಕಟ್ಟೆ ಮೌಲ್ಯದಲ್ಲಿ ಆಪಲ್‌ ಕಂಪನಿ ಮೈಕ್ರೋಸಾಫ್ಟ್‌ಗಿಂತ ಕೆಳಗೆ ಇಳಿದಿದೆ. ಜನವರಿಯಲ್ಲಿ ಈವರೆಗೆ ಕ್ಯಾಲಿಫೋರ್ನಿಯಾ ಮೂಲದ ಆಪಲ್‌ ಕಂಪನಿಯ ಷೇರುಗಳು ಶೇ. 3.3ರಷ್ಟು ಕುಸಿದಿದ್ದರೆ, ಮೈಕ್ರೋಸಾಫ್ಟ್‌ ಕಂಪನಿಯ ಷೇರುಗಳು ಶೇ. 1.8ರಷ್ಟು ಏರಿಕೆ ಕಂಡಿದೆ.


"ಮೈಕ್ರೋಸಾಫ್ಟ್ ವೇಗವಾಗಿ ಬೆಳೆಯುತ್ತಿರುವ ಕಾರಣ ಮೈಕ್ರೋಸಾಫ್ಟ್ ಆಪಲ್ ಅನ್ನು ಹಿಂದಿಕ್ಕುವುದು ಅನಿವಾರ್ಯವಾಗಿತ್ತು ಮತ್ತು ಈಗಾಗಲೇ AI ಕ್ರಾಂತಿಯಿಂದ ಹೆಚ್ಚಿನ ಪ್ರಯೋಜನವನ್ನು ಹೊಂದಿದೆ" ಎಂದು ಗಿಲ್ ಲೂರಿಯಾದ ವಿಶ್ಲೇಷಕ ಡಿ.ಎ. ಡೇವಿಡ್ಸನ್ ಹೇಳಿದ್ದಾರೆ.ಆಪಲ್‌ ಕಂಪನಿಯ ಪಾಲಿಗೆ ಅತಿದೊಡ್ಡ ಲಾಭ ಬರುವುದು ಐಫೋನ್‌ ಮಾರಾಟದಿಂದ. ಆದರೆ, ಇತ್ತೀಚಿನ ದಿನಗಳಲ್ಲಿ ಐಫೋನ್‌ ಮಾರಾಟ ಕಡಿಮೆಯಾಗಬಹುದು ಎನ್ನುವ ಅಂದಾಜು ಬಂದಿರುವ ಕಾರಣ ಆಪಲ್‌ ಷೇರುಗಳು ಕುಸಿತ ಕಂಡಿವೆ. ಅದರಲ್ಲೂ ಚೀನಾದಂಥ ಪ್ರಮುಖ ಮಾರುಕಟ್ಟೆಯಲ್ಲಿ ಆಪಲ್‌ ಮಾರಾಟ ಇನ್ನಷ್ಟು ಕುಸಿತವಾಗಿದೆ.ಮುಂದಿನ ದಿನಗಳಲ್ಲಿ ಆಪಲ್‌ ಮಾರುಕಟ್ಟೆ ಮೌಲ್ಯದ ಕುಸಿತಕ್ಕೆ ಚೀನಾ ಕಾರಣವಾಗಲಿದೆ. ಚೀನಾ ಹಾಗೂ ಅಮೆರಿಕ ನಡುವಿನ ಕೆಟ್ಟ ಸಂಬಂಧ ಆಪಲ್‌ನ ಮೇಲೆ ಇನ್ನಷ್ಟು ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ. ಕಳೆದ ವರ್ಷದ ಡಿಸೆಂಬರ್‌ 14 ರಂದು ಆಪಲ್‌ ಕಂಪನಿಯ ಮಾರುಕಟ್ಟೆ ಮೌಲ್ಯ 3.081 ಟ್ರಿಲಿಯನ್‌ ಯುಎಸ್‌ ಡಾಲರ್‌ ಆಗಿತ್ತು. ಒಂದೇ ವರ್ಷದಲ್ಲಿ ಆಪಲ್‌ ಶೇ. 48ರಷ್ಟು ಮೌಲ್ಯ ಏರಿಸಿಕೊಂಡಿತ್ತು.2018 ಹಾಗೂ ತೀರಾ ಇತ್ತೀಚೆಗೆ 2021ರಲ್ಲಿ ಆಪಲ್‌ ಕಂಪನಿಯಲ್ಲಿ ಹಿಂದಿಕ್ಕಿ ಮೈಕ್ರೋಸಾಫ್ಟ್‌ ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿ ಎನಿಸಿಕೊಂಡಿತ್ತು. ಆದರೆ, ಪ್ರಸ್ತುತ ವಾಲ್‌ ಸ್ಟ್ರೀಟ್‌ ಮೈಕ್ರೋಸಾಫ್ಟ್‌ ಬಗ್ಗೆ ಧನಾತ್ಕವಾಗಿದ್ದಾರೆ. ಶೇ. 90ರಷ್ಟು ಬ್ರೋಕರೇಜ್‌ಗಳು ಮೈಕ್ರೋಸಾಫ್ಟ್‌ ಕಂಪನಿಯ ಷೇರುಗಳನ್ನು ಖರೀದಿ ಮಾಡಿ ಎನ್ನುವ ಸಲಹೆ ನೀಡಿದ್ದಾರೆ.

ಬೆಳ್ತಂಗಡಿ, ಕಬಡ್ಡಿ ಪಂದ್ಯಾವಳಿಯಲ್ಲಿ ಅಂಪೈರ್ ತೀರ್ಪಿನ ವಿರುದ್ಧ ಅಸಮಾಧಾನ; ರೊಚ್ಚಿಗೆದ್ದ ಆಟಗಾರರಿಂದ ಮೈದಾನದಲ್ಲೇ ಫೈಟಿಂಗ್

Posted by Vidyamaana on 2023-02-22 04:33:01 |

Share: | | | | |


ಬೆಳ್ತಂಗಡಿ, ಕಬಡ್ಡಿ ಪಂದ್ಯಾವಳಿಯಲ್ಲಿ ಅಂಪೈರ್ ತೀರ್ಪಿನ ವಿರುದ್ಧ ಅಸಮಾಧಾನ; ರೊಚ್ಚಿಗೆದ್ದ ಆಟಗಾರರಿಂದ ಮೈದಾನದಲ್ಲೇ ಫೈಟಿಂಗ್

ಬೆಳ್ತಂಗಡಿ: ಕಬಡ್ಡಿ ಪಂದ್ಯಾವಳಿಯಲ್ಲಿ ಅಂಪೈರ್ ತೀರ್ಪಿನ ವಿರುದ್ಧ ಅಸಮಾಧಾನಗೊಂಡ ಆಟಗಾರರು ಮೈದಾನದಲ್ಲಿ ಹೊಡೆದಾಡಿಕೊಂಡ ಘಟನೆ ಮುಂಡಾಜೆಯಲ್ಲಿ ನಡೆದಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅಭಿಮಾನಿಗಳು ಅಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಆಟಗಾರರ ಮಧ್ಯೆ ಗಲಾಟೆ ನಡೆದಿದ್ದು, ಸದ್ಯ ಹೊಡೆದಾಟದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಸೋಮಂತಡ್ಕದ ಆಡೂರು ಮೈದಾನದಲ್ಲಿ ಫೆ. 19ರಂದು . ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅಭಿಮಾನಿಗಳು ಕಬಡ್ಡಿ ವಂದ್ಯಾವಳಿ ಆಯೋಜಿಸಿದ್ದರು. ಇದರಲ್ಲಿ ಶಾಸಕ ಹರೀಶ್ ಪೂಂಜ ಅಭಿಮಾನಿಗಳು ಹಾಗೂ ಆಟಗಾರರ ಮಧ್ಯೆ ನಡೆದ ಹೊಡೆದಾಟವಾಗಿದೆ.

Recent News


Leave a Comment: