ಪುತ್ತೂರು ನಗರ ಠಾಣೆಯ ಎಎಸ್ ಐ ಸುಂದರ ಕಾನಾವು ನಿಧನ

ಸುದ್ದಿಗಳು News

Posted by vidyamaana on 2024-07-22 11:26:34 |

Share: | | | | |


ಪುತ್ತೂರು ನಗರ ಠಾಣೆಯ ಎಎಸ್ ಐ ಸುಂದರ ಕಾನಾವು ನಿಧನ

ಮುಕ್ಕೂರು : ಪೆರುವಾಜೆ ಗ್ರಾಮದ ಕಾನಾವು ನಿವಾಸಿ, ಪುತ್ತೂರು ನಗರ ಠಾಣೆಯ ಎಎಸ್ ಐ ಸುಂದರ ಕಾನಾವು ಜು.22 ರಂದು ಬೆಳಗ್ಗೆ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.



ಮೂರು ದಿನಗಳ ಮನೆಯಲ್ಲಿ ಬ್ರೈನ್ ಸ್ಟ್ರೋಕ್ ಗೆ ಒಳಗಾಗಿದ್ದ ಸುಂದರ ಕಾನಾವು ಅವರನ್ನು ಮಂಗಳೂರಿನ ಪಡೀಲು ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಎ.ಜೆ. ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸದ್ಯ ಮೃತರ ಪಾರ್ಥಿವ ಶರೀರ ಮಂಗಳೂರಿನಲ್ಲಿ ಇದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

 Share: | | | | |


T20 World Cup 2024 :ಒಂದೇ ಒಂದು ಸೋಲು ಕಾಣದೆ ವಿಶ್ವ ಕಪ್ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತ ತಂಡ

Posted by Vidyamaana on 2024-06-30 09:17:37 |

Share: | | | | |


T20 World Cup 2024 :ಒಂದೇ ಒಂದು ಸೋಲು ಕಾಣದೆ ವಿಶ್ವ ಕಪ್ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತ ತಂಡ

 ವೆಸ್ಟ್​ಇಂಡೀಸ್​ನ ಬಾರ್ಬಡೋಸ್​ನಲ್ಲಿ ಜೂನ್ 29 ರಂದು ನಡೆದ ಐಸಿಸಿ ಪುರುಷರ ವಿಶ್ವಕಪ್ 2024 ರ (T20 World Cup 2024) ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಏಡೆನ್ ಮಾರ್ಕ್ರಮ್ ನೇತೃತ್ವದ ದಕ್ಷಿಣ ಆಫ್ರಿಕಾವನ್ನು ಏಳು ರನ್​ಗಳಿಂದ ಸೋಲಿಸಿ ಚಾಂಪಿಯನ್ ಆಯಿತು.

ಇದರೊಂದಿಗೆ ಭಾರತವು 13 ವರ್ಷಗಳ ವಿಶ್ವ ಕಪ್ ಹಾಗೂ 17 ವರ್ಷಗಳ ಟಿ20 ವಿಶ್ವ ಕಪ್​ ಕೊರತೆಯನ್ನು ನೀಗಿಸಿತು. ಅಂದ ಹಾಗೆ ಭಾರತ ತಂಡ ಈ ಬಾರಿಯ ಟ್ರೋಫಿಯನ್ನು ಅಜೇಯವಾಗಿ ಗೆದ್ದಿದೆ. ಟೂರ್ನಿಯುದ್ದಕ್ಕೂ ಪಂದ್ಯಾವಳಿಯುದ್ದಕ್ಕೂ ಎಲ್ಲಾ ಪಂದ್ಯಗಳನ್ನು ಗೆದ್ದು ಟ್ರೋಫಿ ಗೆದ್ದ ಮೊದಲ ತಂಡ ಎಂಬ ಇತಿಹಾಸ ಬರೆದಿದೆ.ಗುಂಪು ಹಂತದಲ್ಲಿ ಭಾರತ ಆಡಿದ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದು ಅಜೇಯವಾಗಿ ಉಳಿದಿತ್ತು. ಒಂದು ಪಂದ್ಯ ಮಳೆಯಿಂದಾಗಿ ಕೊಚ್ಚಿಹೋಗಿತ್ತು. ಗಯಾನಾದಲ್ಲಿ ನಡೆದ ಸೆಮಿಫೈನಲ್​​ನಲ್ಲಿ ಗೆಲ್ಲುವ ಮೊದಲು ಭಾರತವು ಸೂಪರ್ ಎಂಟರ ಹಂತದ ಎಲ್ಲಾ ಪಂದ್ಯಗಳನ್ನು ಗೆದ್ದಿತ್ತು. ಸೆಮಿಯಲ್ಲಿ ಇಂಗ್ಲೆಂಡ್ ಅನ್ನು 68 ರನ್​ಗಳಿಂದ ಸೋಲಿಸಿತ್ತು.

ಹಿಂದಾರು ಜಯಗುರು ಆಚಾರ್‌ಗೆ ದ.ಕ.ಸ. ಹಾಲು ಒಕ್ಕೂಟದಿಂದ ಪ್ರಥಮ ಉತ್ತಮ ಹೈನುಗಾರ ಪ್ರಶಸ್ತಿ

Posted by Vidyamaana on 2023-09-07 21:13:24 |

Share: | | | | |


ಹಿಂದಾರು ಜಯಗುರು ಆಚಾರ್‌ಗೆ ದ.ಕ.ಸ. ಹಾಲು ಒಕ್ಕೂಟದಿಂದ ಪ್ರಥಮ ಉತ್ತಮ ಹೈನುಗಾರ ಪ್ರಶಸ್ತಿ

ಪುತ್ತೂರು: ಮುಂಡೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯ ಹಿಂದಾರು ಜಯಗುರು ಆಚಾರ್, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ 2022-23ನೇ ಸಾಲಿನ ಉತ್ತಮ ಹೈನುಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸೆ.5ರಂದು ನಡೆದ ಒಕ್ಕೂಟದ ಮಹಾಸಭೆಯಲ್ಲಿ ಜಯಗುರು ಆಚಾರ್ ಅವರಿಗೆ ಪ್ರಥಮ ಉತ್ತಮ ಹೈನುಗಾರ ಪ್ರಶಸ್ತಿ ನೀಡಿ, ಸನ್ಮಾನಿಸಿ ಗೌರವಿಸಲಾಯಿತು. ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ಉಪಾಧ್ಯಕ್ಷ ಎಸ್‌.ಬಿ. ಜಯರಾಮ ರೈ, ನಿರ್ದೇಶಕ ನಾರಾಯಣಪ್ರಕಾಶ್ ಪಾಣಾಜೆ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು. ಮುಂಡೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶ್ರೀಕಾಂತ್ ಆಚಾರ್ ಹಿಂದಾರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ನರಿಮೊಗರು ಸಾಂದೀಪನಿ ಶಾಲೆಯ ಸಂಚಾಲಕ ಹಿ೦ದಾರು ಭಾಗ್ಯ‌ ಆಚಾರ್ ಮತ್ತು ಸುಜಾತ ಆಚಾರ್‌ ಪುತ್ರರಾಗಿರುವ ಜಯಗುರು ಆಚಾರ್ ಇಂಜಿನಿಯರಿಂಗ್ ಪದವೀಧರರು. ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಲ್ಲಿ ಸಿವಿಲ್‌ ಇಂಜಿನಿಯರ್ ಪದವಿ ಪಡೆದು, ಖಾಸಗಿ ಸಂಸ್ಥೆಯಲ್ಲಿ ವರ್ಷಗಳ ಕಾಲ ಇಂಜಿನಿಯರ್ ಆಗಿ ಉದ್ಯೋಗದಲ್ಲಿದ್ದರೂ ಕೃಷಿಯ ಕಡೆಗೆ ಆಕರ್ಷಿತರಾಗಿ ಉದ್ಯೋಗ ತೊರೆದು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು.


ರೋಟರಿ ಮತ್ತು ಇತರ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವ ಜಯಗುರು ಆಚಾರ್ ರವರು ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಪ್ರಥಮ ಉತ್ತಮ ಹೈನುಗಾರ ಪ್ರಶಸ್ತಿ ಪಡೆದ ಸಾಧಕರಾಗಿದ್ದಾರೆ.

ಸಂತೋಷ್ ಪಿ ಕೋಟ್ಯಾನ್ ಬಳಂಜ ರವರಿಗೆ ಪ್ರತಿಷ್ಠಿತ ಸಾಧನಾಶ್ರೀ ಪುರಸ್ಕಾರ

Posted by Vidyamaana on 2024-07-30 06:10:00 |

Share: | | | | |


ಸಂತೋಷ್ ಪಿ ಕೋಟ್ಯಾನ್ ಬಳಂಜ ರವರಿಗೆ ಪ್ರತಿಷ್ಠಿತ ಸಾಧನಾಶ್ರೀ ಪುರಸ್ಕಾರ

ಬೆಳ್ತಂಗಡಿ:ಮಂಗಳೂರಿನಲ್ಲಿ ನಡೆದ ಜೆಸಿಐ ಅಭಿವೃದ್ಧಿ ಮತ್ತು ಬೆಳವಣಿಗೆ ಹಾಗೂ ವ್ಯವಹಾರ ವಿಭಾಗದ ಸಮ್ಮೇಳನ ವೈಭವ - 2024 ಕಾರ್ಯಕ್ರಮದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಪೂರ್ವಾಧ್ಯಕ್ಷ,ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಬಳಂಜ ಅವರಿಗೆ ವೃತ್ತಿ ಮತ್ತು ಸಮಾಜಸೇವಾ ಕಾರ್ಯಸಾಧನೆಗಾಗಿ ಸಾಧನಾಶ್ರೀ- 2024 ಪ್ರಶಸ್ತಿ ನೀಡಿ ಜುಲೈ 28 ರಂದು ಗೌರವಿಸಲಾಯಿತು.

ನರಿಮೊಗರು ಕಾಂಗ್ರೆಸ್ ವಲಯಾಧ್ಯಕ್ಷ ಪ್ರಕಾಶ್ ನಿಧನ

Posted by Vidyamaana on 2024-06-11 20:34:39 |

Share: | | | | |


ನರಿಮೊಗರು ಕಾಂಗ್ರೆಸ್ ವಲಯಾಧ್ಯಕ್ಷ ಪ್ರಕಾಶ್ ನಿಧನ

ಪುತ್ತೂರು: ನರಿಮೊಗರು ಕಾಂಗ್ರೆಸ್ ವಲಯ ಅಧ್ಯಕ್ಷ ಪ್ರಕಾಶ್ ಪುರುಷರಕಟ್ಟೆ (40 ವ.) ಮಂಗಳವಾರ ಸಂಜೆ ಹೃದಯಾಘಾತದಿಂದ ನಿಧನರಾದರು.

ಸಂಜೆ ಮನೆಯಲ್ಲಿದ್ದಾಗ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಶ್ರೀ ಅನಂತಪುರದಲ್ಲಿ ಪೂರ್ಣ ದರ್ಶನ ತೋರಿದ ಬಬಿಯಾ

Posted by Vidyamaana on 2024-06-16 08:13:42 |

Share: | | | | |


ಶ್ರೀ ಅನಂತಪುರದಲ್ಲಿ ಪೂರ್ಣ ದರ್ಶನ ತೋರಿದ ಬಬಿಯಾ

ಕುಂಬಳೆ : ಸರೋವರ ಕ್ಷೇತ್ರವೆಂದೇ ಖ್ಯಾತಿ ಪಡೆದ ಶ್ರೀ ಅನಂತಪುರದಲ್ಲಿ ತಿಂಗಳುಗಳ ಹಿಂದೆ ಪ್ರತ್ಯಕ್ಷಗೊಂಡ ನೂತನ ಮೊಸಳೆ ಮರಿ (ಬಬಿಯಾ – 3) ಇದೇ ಮೊದಲ ಬಾರಿಗೆ ಶುಕ್ರವಾರ ಸಂಜೆ ಕ್ಷೇತ್ರ ಪ್ರಾಂಗಣ ಏರುವ ಮೂಲಕ ತನ್ನ ಪೂರ್ಣ ದರ್ಶನ ತೋರಿದೆ.

ಸುಮಾರು 80 ವರ್ಷಗಳಿಂದ ಕ್ಷೇತ್ರದ ಕೊಳದಲ್ಲಿ ನೆಲೆಸಿದ್ದ ಮೊಸಳೆಯು 2022ರ ಅಕ್ಟೋಬರ್‌ 9ರಂದು ರಾತ್ರಿ ಈ ಹಿಂದೆ ಇದ್ದ ಮೊಸಳೆ (ಬಬಿಯಾ) ಮೃತಪಟ್ಟಿತ್ತು

ಪುತ್ತೂರು : ಬಿಜೆಪಿ ಯುವ ಮೋರ್ಚ ಪುತ್ತೂರು ವತಿಯಿಂದ ಪ್ರತಿಭಟನೆ

Posted by Vidyamaana on 2024-08-29 05:52:22 |

Share: | | | | |


ಪುತ್ತೂರು : ಬಿಜೆಪಿ ಯುವ ಮೋರ್ಚ ಪುತ್ತೂರು ವತಿಯಿಂದ ಪ್ರತಿಭಟನೆ

ಪುತ್ತೂರು: ಭ್ರಷ್ಟಾಚಾರ, ಅಧಿಕಾರ ದುರ್ಬಳಕೆಯಂತಹ ಕೆಟ್ಟ ಆಡಳಿತವನ್ನು ನೀಡುತ್ತಿರುವ ಕಾಂಗ್ರೆಸ್ ಸರಕಾರಕ್ಕೆ ಮುಂದಿನ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಸಂಘರ್ಷದಿಂದಲೇ ಹುಟ್ಟಿದ ಬಿಜೆಪಿ ಪಕ್ಷ ಸಂಘರ್ಷಕ್ಕೆ ಇಳಿದರೆ ಏನಾಗಬಹುದು ಎನ್ನುವುದನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಲಿ ಎಂದು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಹೇಳಿದರು.


ಭ್ರಷ್ಟ ರಾಜ್ಯ ಸರಕಾರ ಹಾಗೂ ರಾಜಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಪುತ್ತೂರು ಬಿಜೆಪಿ ನಗರ, ಪುತ್ತೂರು ಬಿಜೆಪಿ ಯುವ ಮೋರ್ಚಾ ಹಾಗೂ ಗ್ರಾಮಾಂತರ ಮಂಡಲದ ನೇತೃತ್ವದಲ್ಲಿ ದರ್ಬೆ ವೃತ್ತದಲ್ಲಿ ನಡೆದ ಬೃಹತ್ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು.


ನಮ್ಮ ಪ್ರತಿಭಟನೆ ಕಾಂಗ್ರೆಸ್ ನ ಅಧಿಕಾರ ದುರುಪಯೋಗ, ದರ್ಪದ ವಿರುದ್ಧ. ಮೂಡದಲ್ಲಿ ಸೈಟ್ ಸಿದ್ದಣ್ಣಬಹು ದೊಡ್ಡ ಭ್ರಷ್ಟಾಚಾರ ಮಾಡಿದ್ದಾರೆ. ನಾವು ಏನು ಮಾಡಿದ್ರು ನಡೀತದೆ ಎನ್ನುವ ಮನೋಸ್ಥಿತಿ ಇವರದು. ಐವನ್, ಜಮೀರ್, ಕ್ರಷ್ಣ ಬೈರೇಗೌಡ ಅವರು ರಾಜ್ಯಪಾಲರ ವಿರುದ್ಧ ಕೆಟ್ಟ ಭಾಷೆ ಬಳಕೆ ಮಾಡಿರುವುದನ್ನು ನಾವು ಖಂಡಿಸುತ್ತೇವೆ ಎಂದರು.

ಯಡಿಯೂರಪ್ಪ ನಿರಪರಾಧಿತನ ಸಾಬೀತಾದ ಬಳಿಕ ಅಧಿಕಾರ ವಹಿಸಿಕೊಂಡಿ ದ್ದರು. ತಾಕತ್ತಿದ್ದಾರೆ ಅಧಿವೇಶನದಲ್ಲಿ ಮಾತನಾಡಿ ಎಂದು ಸಿದ್ದರಾಮಯ್ಯಗೆ ನಾವು ಚಾಲೆಂಜ್ ಮಾಡಿದ್ದೆವು. ಆದರೆ ಅವರು ಪಲಾಯನ ಮಾಡಿದರು ಎಂದು ವ್ಯಂಗ್ಯವಾಡಿದರು.

ಅಧಿಕಾರ ದುರ್ಬಳಕೆಗೆ ಸರಕಾರ ತಕ್ಕ ಪಾಠ ಎದುರಿಸಲಿದೆ. ಪುನಃ ನಮ್ಮ ಸರಕಾರ ಬರ್ತದೆ. ಅಧಿಕಾರಿಗಳು ಯೋಚನೆ ಮಾಡಿ. ಈ ರೀತಿಯ ವರ್ತನೆಗೆ ಅರ್ಥ ಆಗುವ ಹಾಗೆ ಉತ್ತರ ಕೊಡ್ತೇವೆ ಎಂದರು.


 ಸಿದ್ದರಾಮಯ್ಯ ಬಳಿ ಭಿಕ್ಷೆ ಪಾತ್ರೆ ಹಿಡಿದು ಐವನ್ಗೆ ಸ್ಥಾನ ಲಭಿಸಿದೆ. ರಾಜ್ಯಪಾಲರ ವಿರುದ್ಧ ಮಾತನಾಡಿದ ಐವನ್ ಮೇಲೆ ಪ್ರಕರಣ ದಾಖಲಿಸಲು ನಾನೇ ಪೊಲೀಸ್ ಕಮಿಷನರಿಗೆ 

 ಸೆಕ್ಷನ್ ಕಳುಹಿಸಿದ್ದೆ. ಹಿಂದೆ ನಾನು ಸ್ಥಳದಲ್ಲಿ ಇಲ್ಲದಿದ್ದರೂ ಕೇಸ್ ಹಾಕಿದ್ರು. ನಿಮ್ಮ ಕೇಸ್ ನಮಗೆ ಲೆಕ್ಕ ಅಲ್ಲ. ಇದು ಟ್ರೈಲರ್ ಹೋರಾಟ ಮಾತ್ರ. ಮುಂದೆ ತೀವ್ರ ಹೋರಾಟ ಮಾಡಲು ನಾವು ಸಿದ್ದರಿದ್ದೇವೆ ಎಂದರು.



Leave a Comment: