ಶಿರೂರು ಭೂಕುಸಿತ ದುರಂತ : ಪತ್ತೆಯಾಯ್ತು ಎಂಟನೇ ಮೃತದೇಹ

ಸುದ್ದಿಗಳು News

Posted by vidyamaana on 2024-07-23 18:35:28 |

Share: | | | | |


ಶಿರೂರು ಭೂಕುಸಿತ ದುರಂತ : ಪತ್ತೆಯಾಯ್ತು ಎಂಟನೇ ಮೃತದೇಹ

ಕಾರವಾರ: ಶಿರೂರು ಭೂಕುಸಿತ ಸ್ಥಳದಲ್ಲಿ 8 ದಿವಸದ ಬಳಿಕ ಮತ್ತೊಂದು ಮೃತದೇಹ ಪತ್ತೆಯಾಗಿದೆ. ಈ ಮೂಲಕ 8ನೇ ಮೃತದೇಹ ಸಿಕ್ಕಂತಾಗಿದೆ. ಈ ನಡುವೆ ಕೇರಳದ ಲಾರಿ ಚಾಲಕ ಅರ್ಜುನ್‌ ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. 

ಮಂಗಳವಾರ ಬೆಳಗ್ಗೆ ಗುಡ್ಡ ಕುಸಿತದಿಂದ ನಾಪತ್ತೆಯಾಗಿದ್ದ ಮಹಿಳೆ ಸಣ್ಣಿ ಹನ್ಮಂತ ಗೌಡ (57) ಸಾವನ್ನಪ್ಪಿದ್ದು, ಮೃತದೇಹ ದೊರೆತಿದೆ. ಗಂಗಾವಳಿ ನದಿಯ ಗಂಗೆಕೊಳ್ಳ ಸಮೀಪ ಅವರ ಶವ ಪತ್ತೆಯಾಗಿದೆ. ಶಿರೂರು ಗುಡ್ಡ ಕುಸಿತದಿಂದಾಗಿ ಉಳುವರೆ ಗ್ರಾಮದಲ್ಲಿ ಮನೆ ಕುಸಿತವಾಗಿ ಸಣ್ಣಿ ಹನ್ಮಂತ ಗೌಡ ಅವರು ಕಣ್ಮರೆಯಾಗಿದ್ದರು. ಇನ್ನೂ ಅರ್ಜುನ್‌ ಸಹಿತ ಮೂವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಸ್ಥಳದಲ್ಲಿ NDRF, SDRF, ಮಿಲಿಟರಿ ಕಾರ್ಯಪಡೆಯಿಂದ ಶೋಧ ಕಾರ್ಯ ಮುಂದುವರೆದಿದೆ. 

ಕೇರಳ ಮಾಧ್ಯಮಗಳ ಕವರೇಜ್‌ 

ಸದ್ಯ ಕರ್ನಾಟಕದ ಉತ್ತರ ಕನ್ನಡದಲ್ಲಾದ ಭೂಕುಸಿತ ವರದಿಯನ್ನ ಕನ್ನಡಿಗರು ಕೂಡಾ ಮಲಯಾಳಂ ಸುದ್ದಿವಾಹಿನಿಗಳಲ್ಲಿ ವೀಕ್ಷಿಸುವಂತಾಗಿದೆ. ಕೇರಳದ ಪ್ರಮುಖ ರಾಜ್ಯ ಮಟ್ಟದ ವಾಹಿನಿಗಳು ಕಳೆದ 4 ದಿನಗಳಿಂದಲೂ ಉತ್ತರ ಕನ್ನಡದಲ್ಲಿ ಬೀಡುಬಿಟ್ಟಿವೆ. ಅರ್ಜುನ್‌ ಶೋಧ ಕಾರ್ಯಾಚರಣೆಗೆ ಹೆಚ್ಚಿನ ಒತ್ತಡ ಏರುತ್ತಿದೆ. ಜೊತೆಗೆ ಕೇರಳದ ನಾಗರಿಕ ಸುರಕ್ಷತಾ ತಂಡಗಳು ಕೂಡಾ ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲಿ ಕೇರಳದಿಂದ ಶಿರೂರಿಗೆ ತಂಡವಾಗಿ ಆಗಮಿಸಿವೆ

 Share: | | | | |


ಪುತ್ತೂರು : ಸ್ವಾತಂತ್ರ್ಯೋತ್ಸವಕ್ಕೆ ಪ್ಲಾಸ್ಟಿಕ್ ನಿಂದ ತಯಾರಿಸಿದ ರಾಷ್ಟ್ರಧ್ವಜ ಬಳಕೆ ಮತ್ತು ಮಾರಾಟ ಮಾಡದಂತೆ ನಗರಸಭೆ ಆದೇಶ!

Posted by Vidyamaana on 2024-08-13 05:45:22 |

Share: | | | | |


ಪುತ್ತೂರು : ಸ್ವಾತಂತ್ರ್ಯೋತ್ಸವಕ್ಕೆ ಪ್ಲಾಸ್ಟಿಕ್ ನಿಂದ ತಯಾರಿಸಿದ ರಾಷ್ಟ್ರಧ್ವಜ ಬಳಕೆ ಮತ್ತು ಮಾರಾಟ ಮಾಡದಂತೆ ನಗರಸಭೆ ಆದೇಶ!

ಪುತ್ತೂರು : ಸ್ವಾತಂತ್ರ್ಯ ದಿನಾಚರಣೆಗೆ ಇನ್ನೇನು ಕೆಲ ದಿನಗಳಷ್ಟೇ ಬಾಕಿಯಿದ್ದು, ಪ್ಲಾಸ್ಟಿಕ್ ನಿಂದ ತಯಾರಿಸಲಾದ ರಾಷ್ಟ್ರಧ್ವಜ ಹಾಗೂ ಇತರೆ ಸಂಬಂಧಪಟ್ಟ ವಸ್ತುಗಳ ಬಳಕೆ ಮತ್ತು ಮಾರಾಟ ಮಾಡದಂತೆ ನಗರಸಭೆ ಆದೇಶಿಸಿದೆ.


ಸರ್ಕಾರದ ಆದೇಶದಂತೆ ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಪರಿಸರಕ್ಕೆ ಹಾನಿ ಹಾಗೂ ಮಾನವ ಮತ್ತಿತರ ಪ್ರಾಣಿಗಳ ಆರೋಗ್ಯಕ್ಕೆ ಅಪಾಯ ಉಂಟು ಮಾಡುತ್ತಿರುವ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ಭಿತ್ತಿಪತ್ರ, ಪ್ಲಾಸ್ಟಿಕ್ ತೋರಣ, ಪ್ಲೆಕ್ಸ್, ಬಾವುಟ, ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ಚಮಚ, ಕ್ಲಿಂಗ್ ಫಿಲ್ಮ್ಸ್ ಮತ್ತು ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆ ಹಾಗೂ ಥರ್ಮೊಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೋ ಬೀಡ್ಸ್ನಿಂದ ತಯಾರಾದಂತಹ ನಿಷೇಧಿತ ಉತ್ಪನ್ನಗಳ ಜೊತೆಗೆ ಏಕ ಬಳಕೆಯ ಪ್ಲಾಸ್ಟಿಕ್ (Single Use Plastic-SUP) ಉತ್ಪನ್ನ ವಸ್ತುಗಳ ತಯಾರಿಕೆ, ಸರಬರಾಜು ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ನಗರಸಭೆಯಿಂದ ಆದೇಶ ಹೊರಡಿಸಲಾಗಿದೆ.

ಪ್ರೀತಿಸುವಂತೆ ವಿವಾಹಿತೆಗೆ ಜೈಲಿನಿಂದಲೇ ಪಾಗಲ್‌ ಪ್ರೇಮಿ ಬ್ಲ್ಯಾಕ್‌ಮೇಲ್‌

Posted by Vidyamaana on 2023-09-11 19:33:40 |

Share: | | | | |


ಪ್ರೀತಿಸುವಂತೆ ವಿವಾಹಿತೆಗೆ ಜೈಲಿನಿಂದಲೇ ಪಾಗಲ್‌ ಪ್ರೇಮಿ ಬ್ಲ್ಯಾಕ್‌ಮೇಲ್‌

ಬೆಂಗಳೂರು: ಜೈಲಿನಿಂದಲೇ ಫೋನ್‌ ಮಾಡಿ ವಿವಾಹಿತೆಗೆ ಪ್ರೀತಿಸುವಂತೆ (Love Case) ಪ್ರೇಮಿಯೊಬ್ಬ ಕೊಲೆ ಬೆದರಿಕೆ (Blackmailing) ಹಾಕಿರುವ ಘಟನೆ ವರದಿ ಆಗಿದೆ. ಅಕ್ರಮಗಳ ಅಡ್ಡೆಯಾಗಿರುವ ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರೋಪಿಗಳಿಗೆ ಸಲೀಸಾಗಿ ಮೊಬೈಲ್ ಸಿಗುತ್ತಿದೆ.ಶ್ರೀನಿವಾಸ ಎಂಬಾತ ಜೈಲು ಸೇರಿದ್ದರೂ, ಅಲ್ಲಿಂದಲೇ ಅಮಲಾ ಎಂಬಾಕೆಗೆ ಕೊಲೆ ಬೆದರಿಕೆ (Blackmail Case) ಹಾಕುತ್ತಿದ್ದಾನೆ.


ಜೈಲಿಗೆ ಕಳಿಸಿದ್ದೀಯಾ ಈಗ ನನ್ನ ನೋಡಲು ಜೈಲಿಗೆ ಬಾ, ಬರದಿದ್ದರೆ ಹೊರಗೆ ಬಂದು ಹತ್ಯೆ ಮಾಡುವುದಾಗಿ ಅಮಲಾಗೆ ಧಮ್ಕಿ ಹಾಕಿದ್ದಾನೆ. ಜೈಲಿನಲ್ಲಿ ತನ್ನೊಟ್ಟಿಗೆ ಇರುವಂತೆ ಹೇಳುತ್ತಿದ್ದಾನೆ ಎಂದು ಸಂತ್ರಸ್ಥೆ ಆರೋಪಿ ಶ್ರೀನಿವಾಸ ವಿರುದ್ಧ ಮತ್ತೊಮ್ಮೆ ದೂರು ನೀಡಿದ್ದಾರೆ.ಬ್ಯಾಟರಾಯನಪುರ ನಿವಾಸಿಯಾದ ಅಮಲಾ ಮದುವೆಯಾಗಿ ಪತಿಯಿಂದ ದೂರವಾಗಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಈ ಶ್ರೀನಿವಾಸ ಅಮಲಾಳನ್ನು ಮೋಹಿಸಿದ್ದ. ಆಕೆ ಹಿಂದೆ ಬಿದ್ದು ಪ್ರೀತಿಸು ಇಲ್ಲದಿದ್ದರೆ ಆಯಸಿಡ್ ಹಾಕುವೆ, ಚಾಕುವಿನಿಂದ ಚುಚ್ಚಿ ಕೊಲೆ ಮಾಡುವುದಾಗಿ ಆವಾಜ್ ಹಾಕುತ್ತಿದ್ದ.


ಆತನ ಹುಚ್ಚುತನಕ್ಕೆ ಮನಸೋತು ಅಮಲಾ ಶ್ರೀನಿವಾಸ್ ಪ್ರೀತಿಗೆ ಸಮ್ಮತಿಸಿದ್ದರು. ಕೆಲಕಾಲ ಇಬ್ಬರು ಪ್ರೀತಿಯ ಗುಂಗಲ್ಲಿ ತೇಲಾಡಿದ್ದರು. ಈ ನಡುವೆ ಅಮಲಾ ಮದುವೆ ವಿಚಾರ ಪ್ರಸ್ತಾಪ ಮಾಡಿದಾಗ ಶ್ರೀನಿವಾಸ ಉಲ್ಟಾ ಹೊಡೆಡಿದ್ದ. ನಿನ್ನನ್ನು ಮದುವೆ ಆಗಲ್ಲ, ಜತೆಯಲ್ಲೇ ಇರು ಸಾಕು ಎಂದಿದ್ದ. ಅಲ್ಲದೇ ಇದೇ ವಿಚಾರಕ್ಕೆ ಶ್ರೀನಿವಾಸ ಮತ್ತು ಆತನ ತಾಯಿ ಸೇರಿ ಅಮಲಾ ಮೇಲೆ ಹಲ್ಲೆ ನಡೆಸಿದ್ದರು.ಹೀಗಾಗಿ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಅಮಲಾ ಈ ಸಂಬಂಧ ದೂರು ದಾಖಲಿಸಿದ್ದರು. ಆರೋಪಿ ಶ್ರೀನಿವಾಸನನ್ನು ಬಂಧಿಸಿ ಜೈಲಿಗಟ್ಟಿದ್ದರು. ಜೈಲು ಸೇರಿದರೂ ಬುದ್ಧಿ ಕಲಿಯದ ಶ್ರೀನಿವಾಸ, ಅಲ್ಲಿಂದಲೇ ಅಮಲಾಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾನೆ. ಹೀಗಾಗಿ ಸಂತ್ರಸ್ಥೆ ಮಹಿಳೆ ಶ್ರೀನಿವಾಸ್‌ ವಿರುದ್ಧ ಮತ್ತೊಂದು ದೂರು ದಾಖಲಿಸಿದ್ದಾರೆ.

ದೀಪಾವಳಿಗೆ ಮೈಸೂರು – ಮಂಗಳೂರು ನಡುವೆ ಓಡಲಿದೆ ವಿಶೇಷ ರೈಲು

Posted by Vidyamaana on 2023-11-10 07:26:53 |

Share: | | | | |


ದೀಪಾವಳಿಗೆ ಮೈಸೂರು – ಮಂಗಳೂರು ನಡುವೆ ಓಡಲಿದೆ ವಿಶೇಷ ರೈಲು

ಮಂಗಳೂರು: ದೀಪಾವಳಿ ಹಬ್ಬ ಸಮೀಪಿಸುತ್ತಿದೆ ಊರಿಗೆ ಬರಲು ಬಸ್ಸು, ರೈಲುಗಳಲ್ಲಿ ಟಿಕೆಟು ಸಿಗುತ್ತಿಲ್ಲ ಎಂದು ಟೆನ್ಷನ್ ಮಾಡುತ್ತಿರುವವರಿಗೆ ರೈಲ್ವೇ ಇಲಾಖೆ ಒಂದು ಗುಡ್ ನ್ಯೂಸ್ ನೀಡಿದೆ. ಹಬ್ಬದ ಪ್ರಯುಕ್ತ ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಮಂಗಳೂರಿಗೆ ವಿಶೇಷ ರೈಲೊಂದನ್ನು ಇಲಾಖೆ ಬಿಟ್ಟಿದ್ದು ಅದರ ವೇಳಾಪಟ್ಟಿ ಇಂತಿದೆ.


ಬೆಳಕಿನ ಹಬ್ಬದ ಈ ವಿಶೇಷ ರೈಲು ಓಡಾಟದ ವೇಳಾಪಟ್ಟಿ ಇಂತಿದೆ.

ದಿನಾಂಕ 10/11/2023 ಶುಕ್ರವಾರ ರೈಲು ಸಂಖ್ಯೆ 07303 ಮೈಸೂರು ಜಂಕ್ಷನ್-ಮಂಗಳೂರು ಜಂಕ್ಷನ್ ವಿಶೇಷ ಎಕ್ಸ್ಪ್ರೆಸ್ ರೈಲು ಮೈಸೂರಿನಿಂದ ರಾತ್ರಿ 8:30ಕ್ಕೆ ಹೊರಟು ರಾತ್ರಿ 11:25ಕ್ಕೆ ಬೆಂಗಳೂರು ತಲುಪಲಿದೆ. ಅಲ್ಲಿಂದ ರಾತ್ರಿ 11:30ಕ್ಕೆ ಹೊರಟು ಮರುದಿನ ಅಂದರೆ ದಿನಾಂಕ 11/11/2023 ಶನಿವಾರದಂದು ಬೆಳಗ್ಗೆ 9:40ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.


ದಿನಾಂಕ 14/11/2023 ಬುಧವಾರ ರೈಲು ಸಂಖ್ಯೆ 07304 ಮಂಗಳೂರು ಜಂಕ್ಷನ್-ಮೈಸೂರು ಜಂಕ್ಷನ್ ವಿಶೇಷ ಎಕ್ಸ್ಪ್ರೆಸ್ ರೈಲು ಮಂಗಳೂರು ಜಂಕ್ಷನ್ನಿಂದ ಸಂಜೆ 5:15ಕ್ಕೆ ಹೊರಟು ಮರುದಿನ ಬೆಳಗ್ಗೆ 3:45ಕ್ಕೆ ಬೆಂಗಳೂರು ತಲುಪಲಿದೆ. ಅಲ್ಲಿಂದ ಬೆಳಗ್ಗೆ 3:50ಕ್ಕೆ ಹೊರಡುವ ರೈಲು ಬೆಳಗ್ಗೆ 7:30ಕ್ಕೆ ಹುಬ್ಬಳ್ಳಿ ತಲುಪಲಿದೆ. 


ಈ ರೈಲಿಗೆ ಬಂಟ್ವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯರೋಡ್, ಸಕಲೇಶಪುರ, ಹಾಸನ ಜಂಕ್ಷನ್, ಚನ್ನರಾಯಪಟ್ಟಣ, ಶ್ರವಣಬೆಳಗೊಳ, ಕುಣಿಗಲ್, ನೆಲಮಂಗಲ, ಯಶವಂತಪುರ, ಬೆಂಗಳೂರು, ಕೆಂಗೇರಿ, ಮಂಡ್ಯ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಾಗಿದೆ.


ಈ ರೈಲಿನಲ್ಲಿ ಜನರಲ್, ಸ್ಲೀಪರ್ ಕ್ಲಾಸ್, 3 ಟೈರ್ ಎಸಿ, 2 ಟೈರ್ ಎಸಿ ಹಾಗೂ ಪ್ರಥಮ ದರ್ಜೆಯ ಕ್ಯಾಬಿನ್ ಕೋಚ್ಗಳು ಇರಲಿದೆ. ತಮ್ಮ ಕುಟುಂಬ ಸದಸ್ಯರೊಂದಿಗೆ ಹಬ್ಬದ ಸಂಭ್ರಮವನ್ನು ಆಚರಿಸಿಕೊಳ್ಳಲು ಬಯಸುವವರು ಈ ವಿಶೇಷ ರೈಲಿನ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿರುತ್ತದೆ.

ಜು9: ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಪದಸ್ವೀಕಾರ

Posted by Vidyamaana on 2023-07-08 15:04:02 |

Share: | | | | |


ಜು9: ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಪದಸ್ವೀಕಾರ

ಪುತ್ತೂರು: ರೋಟರಿ ಕ್ಲಬ್‌ ಪುತ್ತೂರು ಇದರ ಪ್ರಾಯೋಜಕತ್ವದ ಪುತ್ತೂರು ರೋಟರ್ಯಾಕ್ಟ್ ಕ್ಲಬ್ಬಿನ ಪದಸ್ವೀಕಾರ ಹಾಗೂ ಜಿಲ್ಲಾ ರೋಟರ್ಯಾಕ್ಟ್ ಪ್ರತಿನಿಧಿ ಪದಸ್ವೀಕಾರ ಸಮಾರಂಭ ಜುಲೈ 9ರಂದು ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಹಾಲಿನಲ್ಲಿ ನಡೆಯಲಿದೆ.

ರೋಟರ್ಯಾಕ್ಟ್ ಜಿಲ್ಲಾ ಪ್ರತಿನಿಧಿಯಾಗಿ ರಾಹುಲ್ ಆಚಾರ್ಯ ನೇಮಕಗೊಂಡಿದ್ದು, ಕಾರ್ಯದರ್ಶಿಯಾಗಿ ಶ್ರೇಯಸ್, ಖಜಾಂಚಿಯಾಗಿ ಮಹೇಶ್ಚಂದ್ರ ಮತ್ತು ಅವರ ತಂಡ ಪದಸ್ವೀಕಾರ ಮಾಡಲಿದ್ದಾರೆ.

ರೋಟರ್ಯಾಕ್ಟ್ ಕ್ಲಬ್ ಪದಸ್ವೀಕಾರ:

ಪುತ್ತೂರು ರೋಟರ್ಯಾಕ್ಟ್ ಕ್ಲಬ್ಬಿನ ಅಧ್ಯಕ್ಷರಾಗಿ ಜ್ಯೋತಿಕಾ, ಕಾರ್ಯದರ್ಶಿಯಾಗಿ ಧನುಷಾ, ಐಪಿಪಿಯಾಗಿ ಗಣೇಶ್ ಎನ್. ಕಲ್ಲರ್ಪೆ ನೇಮಕಗೊಂಡಿದ್ದಾರೆ. ಸಭಾಪತಿಯಾಗಿ ಪ್ರೇಮಾನಂದ್ ಕಾರ್ಯನಿರ್ವಹಿಸಲಿದ್ದಾರೆ.

ಉಪಾಧ್ಯಕ್ಷರಾಗಿ ವಿಶಾಲ್, ಜತೆ ಕಾರ್ಯದರ್ಶಿಯಾಗಿ ನವೀನ್ ಚಂದ್ರ, ಕೋಶಾಧಿಕಾರಿಯಾಗಿ ಸುಕನ್ಯಾ, ಸಮುದಾಯ ಸೇವಾ ನಿರ್ದೇಶಕರಾಗಿ ವಿಜಯ್, ವೃತ್ತಿ ಸೇವಾ ನಿರ್ದೇಶಕರಾಗಿ ಪುರುಷೋತ್ತಮ್, ಅಂತಾರಾಷ್ಟ್ರೀಯ ಸೇವಾ ನಿರ್ದೇಶಕರಾಗಿ ಮಹೇಶ್ಚಂದ್ರ, ಸಂಘ ಸೇವಾ ನಿರ್ದೇಶಕರಾಗಿ ಶಶಿಧರ್ ಕೆ. ಮಾವಿನಕಟ್ಟೆ, ಬುಲೆಟಿನ್ ಎಡಿಟರ್ ಆಗಿ ಶ್ರೀಕಾಂತ್ ಬಿರಾವು, ಕ್ರೀಡಾ ನಿರ್ದೇಶಕರಾಗಿ ಹಿಮಾಂಶು ಕುಮಾರ್, ಸಾಂಸ್ಕೃತಿಕ ನಿರ್ದೇಶಕರಾಗಿ ಸುಬ್ರಹ್ಮಣಿ, ಪಿ.ಆರ್.ಓ. ಆಗಿ ನವೀನ್ ಬನ್ನೂರು, ಸಾರ್ಜಂಟ್ ಆಗಿ ಮುರಳಿ ನೇಮಕಗೊಂಡಿದ್ದಾರೆ.

ಸುಳ್ಯ : ಅಯೋಧ್ಯೆ ರಾಮಮಂದಿರ ಬ್ಯಾನರ್ ಹರಿದ ಕಿಡಿಗೇಡಿಗಳು

Posted by Vidyamaana on 2024-01-06 15:01:18 |

Share: | | | | |


ಸುಳ್ಯ : ಅಯೋಧ್ಯೆ ರಾಮಮಂದಿರ ಬ್ಯಾನರ್ ಹರಿದ ಕಿಡಿಗೇಡಿಗಳು

ಸುಳ್ಯ : ಶ್ರೀರಾಮಚಂದ್ರನ ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಬ್ಯಾನರನ್ನು ಯಾರೋ ಕಿಡಿಗೇಡಿಗಳು ಹರಿದಿದ್ದು, ತಕ್ಷಣ ಬಂಧಿಸಬೇಕು ಎಂದು ಅರುಣ್ ಪುತ್ತಿಲ ಒತ್ತಾಯಿಸಿದ್ದಾರೆ.ಸುಳ್ಯದ ಮುಖ್ಯರಸ್ತೆಯಲ್ಲಿ ಸುಳ್ಯ ಜಾತ್ರೆ , ಅಯೋಧ್ಯೆ ರಾಮಮಂದಿರ ಹಾಗೂ ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ ಬಿಎಂಎಸ್ ನ ಬೆಳ್ಳಿಹಬ್ಬಕ್ಕೆ ಶುಭಕೋರಿ ಬೃಹತ್ ಬ್ಯಾನರ್ ಅಳವಡಿಕೆ ಮಾಡಲಾಗಿತ್ತು. ಅದರಲ್ಲಿ ನಡುವಿನಲ್ಲಿದ್ದ ಶ್ರೀರಾಮ ದೇವರ ಸಹಿತ ರಾಮಮಂದಿರ ಲೋಕಾರ್ಪಣೆ ವಿಷಯವನ್ನು ಯಾರೋ ಕಿಡಿಗೇಡಿಗಳು ರಾತ್ರಿ ಹರಿದು ಹಾಕಿದ್ದಾರೆ.


ಹಿಂದೂಗಳ ಭಾವನೆ ಜೊತೆ ಆಟವಾಡುವ ಇಂತಹ ರಾಮವಿರೋಧಿಗಳನ್ನು ತಕ್ಷಣ ಬಂಧಿಸಿ ಗಡಿಪಾರು ಮಾಡಬೇಕು ಇಲ್ಲದಿದ್ದರೆ ಹಿಂದೂ ಸಮಾಜ ಹೋರಾಟಕ್ಕಿಳಿಯಬೇಕಾದಿತು ಎಂಬ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಅರುಣ್ ಕುಮಾರ್ ಪುತ್ತಿಲ ಆಗ್ರಹಿಸಿದ್ದಾರೆ.

ನೋ ಬಾಲ್‌ ಕೊಟ್ಟ ಅಂಪೈರ್ ನನ್ನು ಚಾಕುವಿನಿಂದ ಇರಿದ ಆಟಗಾರ

Posted by Vidyamaana on 2023-04-03 08:48:19 |

Share: | | | | |


ನೋ ಬಾಲ್‌ ಕೊಟ್ಟ ಅಂಪೈರ್ ನನ್ನು ಚಾಕುವಿನಿಂದ ಇರಿದ ಆಟಗಾರ

ಭುವನೇಶ್ವರ್: ಕ್ರಿಕೆಟ್‌ ಆಡುವಾಗ ಸಣ್ಣಪುಟ್ಟ ವಿಚಾರಕ್ಕೆ ವಾಗ್ವಾದ ನಡೆಯುವುದು ಸಾಮಾನ್ಯ. ಆದರೆ ಇಲ್ಲೊಂದು ಘಟನೆ ಒಡಿಶಾ ರಾಜ್ಯವನ್ನು ಬೆಚ್ಚಿ ಬೀಳಿಸಿದೆಭಾನುವಾರ (ಏ. 2 ರಂದು) ಒಡಿಶಾದ ಕಟಕ್‌ ನಲ್ಲಿ ಬ್ರಹ್ಮಪುರ ಮತ್ತು ಶಂಕರಪುರ ಎಂಬ ಎರಡು ತಂಡಗಳ ನಡುವೆ ಕ್ರಿಕೆಟ್‌ ಮ್ಯಾವ್‌ ನಡೆಯುತ್ತಿತ್ತು. ಈ ಪಂದ್ಯಕ್ಕೆ 22 ವರ್ಷದ ಲಕ್ಕಿ ರಾವುತ್ ತೀರ್ಪುಗಾರನಾಗಿ ನಿಂತಿದ್ದರು. ಪಂದ್ಯ ನಡೆಯುತ್ತಿದ್ದ ವೇಳೆ ಎಸೆತವೊಂದಕ್ಕೆ ʼನೋ ಬಾಲ್‌ʼ ಎಂದು ಅಂಪೈರ್ ತೀರ್ಪು ನೀಡಿದ್ದಾರೆ. ಈ ವೇಳೆ ಇದು ನೋ ಬಾಲ್‌ ಅಲ್ಲ ಎಂದು ಸ್ಮೃತಿ ರಂಜನ್ ರೌತ್ ಎಂಬಾತ ಅಂಪೈರ್  ನೊಂದಿಗೆ ವಾದಕ್ಕೆ ಇಳಿದಿದ್ದಾನೆ.ವಾದ ಜಗಳಕ್ಕೆ ತಿರುಗಿ ಚೂರಿಯಿಂದ ತೀರ್ಪುಗಾರನಾಗಿ ನಿಂತಿದ್ದ ಲಕ್ಕಿ ರಾವುತ್ ಗೆ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಲಕ್ಕಿ ರಾವುತ್‌ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸುವಾಗಲೇ ಆತ ಮೃತಪಟ್ಟಿದ್ದಾನೆ ಎಂದು ವರದಿ ತಿಳಿಸಿದೆ.



Leave a Comment: