ಪುತ್ತೂರು: ಲಾರಿ ಟಯರ್ ಜೋಡಣೆ ವೇಳೆ ಅಪಘಾತ- ಟಯರ್‌ ಸಮೇತ ಎಸೆಯಲ್ಪಟ್ಟ ಕರಾಯ ಜನತಾ ಕಾಲೋನಿ ರಶೀದ್ ಗಂಭೀರ

ಸುದ್ದಿಗಳು News

Posted by vidyamaana on 2024-07-22 23:30:36 |

Share: | | | | |


ಪುತ್ತೂರು: ಲಾರಿ ಟಯರ್ ಜೋಡಣೆ ವೇಳೆ ಅಪಘಾತ- ಟಯರ್‌ ಸಮೇತ ಎಸೆಯಲ್ಪಟ್ಟ   ಕರಾಯ ಜನತಾ ಕಾಲೋನಿ ರಶೀದ್ ಗಂಭೀರ

ಪುತ್ತೂರು: ಲಾರಿಯೊಂದರ ಟಯರ್ ಜೋಡಣೆ ವೇಳೆ ಟಯ‌ರ್ ರಿಂಗ್ ಚಿಮ್ಮಿ ಟಯರ್ ಸಮೇತ ಎಸೆಯಲ್ಪಟ್ಟ ಕಾರ್ಮಿಕರೊಬ್ಬರು ಗಂಭೀರ ಗಾಯಗೊಂಡ ಘಟನೆ ಪುತ್ತೂರು ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ಜು.22ರಂದು ರಾತ್ರಿ ನಡೆದಿದೆ.

ಲಾರಿಯೊಂದು ಟಯರ್ ಪಂಚರ್ ಆಗಿ ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ನಿಲ್ಲಿಸಲಾಗಿತ್ತು. ಅದರ ಚಾಲಕ ಕರಾಯಕ್ಕೆ ಹೋಗಿ ಟಯರ್ ಪಂಚರ್ ಮಾಡಿಸಿಕೊಂಡು ಆಟೋ ರಿಕ್ಷಾದಲ್ಲಿ ಟಯ‌ರ್ ತಂದಿದ್ದರು. ಟಯರ್ ಜೋಡಣೆ ಮಾಡಲು ಕರಾಯದಿಂದಲೇ ಬಂದ ಟಯರ್ ಕಾರ್ಮಿಕ ಜೋಡಣೆ ವೇಳೆ ಟಯರ್‌ನ ರಿಂಗ್ ಹೊರಚಿಮ್ಮಿದ ರಭಸಕ್ಕೆ ಟಯರ್‌ ಸಮೇತ  ಕರಾಯ ಜನತಾ ಕಾಲೋನಿ ಕರೀಂ ರವರ ಮಗ ರಶೀದ್ ತುಸು ದೂರ ಎಸೆಯಲ್ಪಟ್ಟಿದ್ದಾರೆ. ತಕ್ಷಣ ತೀವ್ರ ಗಾಯಗೊಂಡ ಕಾರ್ಮಿಕನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

 Share: | | | | |


ಭಾರತದಲ್ಲಿ ಭಾನುವಾರದ ರಜೆ ರದ್ದು ? ಮಹತ್ವದ ಮುನ್ಸೂಚನೆ ನೀಡಿದ ಪ್ರಧಾನಿ ನರೇಂದ್ರ ಮೋದಿ

Posted by Vidyamaana on 2024-05-28 20:39:20 |

Share: | | | | |


ಭಾರತದಲ್ಲಿ ಭಾನುವಾರದ ರಜೆ ರದ್ದು ? ಮಹತ್ವದ ಮುನ್ಸೂಚನೆ ನೀಡಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ವಾರದ ರಜಾದಿನವನ್ನು ಭಾನುವಾರದಿಂದ ಶುಕ್ರವಾರಕ್ಕೆ ಬದಲಾಯಿಸುವ ಜಾರ್ಖಂಡ್ ಜಿಲ್ಲೆಯ ಪ್ರಯತ್ನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮಾತನಾಡಿದ್ದಾರೆ. ದುಮ್ಕಾದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಭಾರತದಲ್ಲಿ ಭಾನುವಾರದ ರಜಾದಿನವು ಬ್ರಿಟಿಷ್ ವಸಾಹತುಶಾಹಿ ಅವಧಿಯಲ್ಲಿ ಬೇರುಗಳನ್ನು ಹೊಂದಿದೆ ಮತ್ತು ಕ್ರಿಶ್ಚಿಯನ್ ಸಮುದಾಯದೊಂದಿಗೆ ಸಂಬಂಧ ಹೊಂದಿದೆ ಎಂದು ಹೇಳಿದರು.

ಪೋಷಕರೇ ಎಚ್ಚರ : ಮನೆ ಮುಂದೆ ಆಟವಾಡ್ತಿದ್ದ ಪುಟ್ಟ ಬಾಲಕಿ ಮೇಲೆ ಕಾರು ಹರಿದು ಸಾವು ಆಘಾತಕಾರಿ ವಿಡಿಯೋ ನೋಡಿ

Posted by Vidyamaana on 2023-10-02 10:45:59 |

Share: | | | | |


ಪೋಷಕರೇ ಎಚ್ಚರ : ಮನೆ ಮುಂದೆ ಆಟವಾಡ್ತಿದ್ದ ಪುಟ್ಟ ಬಾಲಕಿ ಮೇಲೆ ಕಾರು ಹರಿದು ಸಾವು ಆಘಾತಕಾರಿ ವಿಡಿಯೋ ನೋಡಿ

ಲಕ್ನೋದ ಠಾಕೂರ್ಗಂಜ್ನಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಮನೆಯ ಹೊರಗೆ ಆಟವಾಡುತ್ತಿದ್ದ ಮಗುವಿನ ಮೇಲೆ ಕಾರು ಹರಿದ ಪರಿಣಾಮ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.ಅಪಘಾತದ ಆತಂಕಕಾರಿ ವೀಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವೀಡಿಯೊದಲ್ಲಿ, ಮಗು ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ ಕಾರು ಬಂದು ಮಗುವಿನ ಮೇಲೆ ಹರಿಯುವುದನ್ನ ಕಾಣಬಹುದು.


ಸಧ್ಯ ಈ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.


ಮಗುವಿನ ಪೋಷಕರು ಪೊಲೀಸರು ದೂರು ದಾಖಲಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನ ಸ್ಕ್ಯಾನ್ ಮಾಡಿದ ನಂತರ ಆರೋಪಿಗಳನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ.

ಆಘಾತಕಾರಿ ವಿಡಿಯೋ ನೋಡಿ.!

ಸುಳ್ಯ: ನೇಣು ಬಿಗಿದು ಮಹೇಶ್ ಆತ್ಮಹತ್ಯೆ

Posted by Vidyamaana on 2024-04-09 16:18:28 |

Share: | | | | |


ಸುಳ್ಯ:  ನೇಣು ಬಿಗಿದು ಮಹೇಶ್ ಆತ್ಮಹತ್ಯೆ

ಸುಳ್ಯ; ನೇಣು ಬಿಗಿದು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪೆರುವಾಜೆಯಲ್ಲಿ ನಡೆದಿದೆ.

ಬಿಜೆಪಿ ಸದಸ್ಯತ್ವ ಪಡೆದ ದೇವದಾಸ್ ಕಾಪಿಕಾಡ್

Posted by Vidyamaana on 2024-09-04 22:02:50 |

Share: | | | | |


ಬಿಜೆಪಿ ಸದಸ್ಯತ್ವ ಪಡೆದ ದೇವದಾಸ್ ಕಾಪಿಕಾಡ್

ಮಂಗಳೂರು: ದೇಶಾದ್ಯಂತ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದು ತುಳು ಕಲಾವಿದ ದೇವದಾಸ್ ಕಾಪಿಕಾಡ್ ಬಿಜೆಪಿ ಸದಸ್ಯತ್ವ ಪಡೆದರು.

ಮಂಗಳೂರಿನಲ್ಲಿ ದೇವದಾಸ್ ಕಾಪಿಕಾಡ್ ರವರ ನಿವಾಸದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮತ್ತು ಶಾಸಕ ವೇದವ್ಯಾಸ ಕಾಮತ್ ಉಪಸ್ಥಿತಿಯಲ್ಲಿ ಸದಸ್ಯತ್ವ ಪಡೆದರು.

ವೈರಲ್ ವಿಡಿಯೋ : ಸಿಂಹದಂಥ ಮಗನಿಗೆ ಜನ್ಮ ನೀಡಿದ್ದೀರಿ..ಕೆಎಲ್ ಶರ್ಮ ಪತ್ನಿ ಹೇಳಿದ ಮಾತಿಗೆ ಸೋನಿಯಾ ಗಾಂಧಿ ಏನಂದ್ರು ಗೊತ್ತಾ ?

Posted by Vidyamaana on 2024-06-08 19:54:44 |

Share: | | | | |


ವೈರಲ್ ವಿಡಿಯೋ : ಸಿಂಹದಂಥ ಮಗನಿಗೆ ಜನ್ಮ ನೀಡಿದ್ದೀರಿ..ಕೆಎಲ್ ಶರ್ಮ ಪತ್ನಿ ಹೇಳಿದ ಮಾತಿಗೆ ಸೋನಿಯಾ ಗಾಂಧಿ ಏನಂದ್ರು ಗೊತ್ತಾ ?

ನವದೆಹಲಿ (ಜೂ.8): 2019ರ ಲೋಕಸಭಾ ಚುನಾವಣೆಯಲ್ಲಿ ಅಮೇಥಿಯಲ್ಲಿ ರಾಹುಲ್‌ ಗಾಂಧಿಯನ್ನು ಮಣಿಸುವ ಮೂಲಕ ಸ್ಮೃತಿ ಇರಾನಿ ದೈತ್ಯ ಸಂಹಾರಿಯಾಗಿ ಗುರುತಿಸಿಕೊಂಡಿದ್ದರು. ಈ ಬಾರಿ ಅಮೇಥಿ ಕ್ಷೇತ್ರದಲ್ಲಿ ಸ್ಮೃತಿ ಇರಾನಿಯನ್ನು ಮಣಿಸಲೇಬೇಕು ಎಂದು ಪಣ ತೊಟ್ಟಿದ್ದ ಕಾಂಗ್ರೆಸ್‌ ಅದರಲ್ಲಿ ಯಶಸ್ವಿಯಾಗಿದೆ.

ಆದರೆ, ಈ ಭಾರಿ ರಾಹುಲ್‌ ಗಾಂಧಿಯ ಬದಲು, ಈ ಕ್ಷೇತ್ರಕ್ಕೆ ತಮ್ಮ ಕುಟುಂಬಕ್ಕೆ ಅತ್ಯಂತ ಆಪ್ತರಾಗಿದ್ದ ಕಿಶೋರಿ ಲಾಲ್‌ ಶರ್ಮ ಅಂದರೆ ಕೆಎಲ್‌ ಶರ್ಮ ಅವರಿಗೆ ಟಿಕೆಟ್‌ ನೀಡಿತ್ತು. ನಿರೀಕ್ಷೆಯಂತೆಯೇ ಅವರು ಭಾರೀ ಮತಗಳ ಅಂತರದಲ್ಲಿ ಅಮೇಥಿಯಲ್ಲಿ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿಯನ್ನು ಸೋಲಿಸಿದ್ದರು. ಇದರ ಬೆನ್ನಲ್ಲಿಯೇ ಅವರು ಶುಕ್ರವಾರ ನವದೆಹಲಿಗೆ ಆಗಮಿಸಿ ಗಾಂಧಿ ಕುಟುಂಬವನ್ನು ಭೇಟಿ ಮಾಡಿದರು. ಈ ವೇಳೆ ತಮ್ಮ ಪತ್ನಿಯನ್ನು ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್‌ ಗಾಂಧಿಗೆ ಪರಿಚಯ ಮಾಡಿಕೊಟ್ಟರು. ಇದರ ವಿಡಿಯೋವನ್ನು ಕಾಂಗ್ರೆಸ್‌ ಹಂಚಿಕೊಂಡಿದೆ.

2.30 ನಿಮಿಷದ ವಿಡಿಯೋವನ್ನು ಕಾಂಗ್ರೆಸ್‌ ಎಕ್ಸ್‌ನಲ್ಲಿ ಕಂಚಿಕೊಂಡಿದೆ. ಈ ವೇಳೆ ರಾಹುಲ್‌ ಗಾಂದಿ ಅಮೇಥಿಯ ಭಾರಿ ಬಿಸಲಿನಲ್ಲಿ ಮಾಡಿದ ಪ್ರಚಾರದ ದಿನಗಳನ್ನು ಕೂಡ ನೆನಪಿಸಿಕೊಂಡಿದ್ದಾರೆ. ಪ್ರಚಾರದ ಕೊನೆಯ ದಿನ ಅಮೇಥಿಯಲ್ಲಿ ಭಾರೀ ಬಿಸಿಲಿತ್ತು. ಪ್ರಚಾರದ ಸಮಯದಲ್ಲಿ ರಾಹುಲ್‌ ಗಾಂಧಿ ಧರಿಸಿದ್ದ ಬಟ್ಟೆ ಸಂಪೂರ್ಣ ಒದ್ದೆಯಾಗಿತ್ತು ಎಂದು ಕೆಎಲ್‌ ಶರ್ಮ ಹೇಳಿದ್ದಾರೆ. ಇನ್ನು ರಾಹುಲ್‌ ಗಾಂಧಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ನಿರ್ವಹಣೆ ಹೇಗಿದೆ ಎಂದು ಕೆಎಲ್‌ ಶರ್ಮ ಅವರನ್ನೇ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಬಹಳ ಅದ್ಭುತವಾಗಿ ನಿರ್ವಹಣೆ ತೋರಿದಿದ್ದೇವೆ ಎಂದಿದ್ದಾರೆ. ಇನ್ನು ಸೋನಿಯಾ ಗಾಂಧಿಯವರನ್ನು ತಬ್ಬಿಕೊಂಡು ಕೆಎಲ್‌ ಶರ್ಮ ಪತ್ನಿ ಕಣ್ಣೀರಿದ್ದಾರೆ. ವಿಡಿಯೋದ ಕೊನೆಯಲ್ಲಿ ಕೆಎಲ್‌ ಶರ್ಮ ಅವರ ಪತ್ನಿ ಸೋನಿಯಾ ಗಾಂಧಿ ಅವರನ್ನು ಉದ್ದೇಶಿಸಿ ನೀವು ಸಿಂಹದಂತ ಮಗನಿಗೆ ಜನ್ಮ ನೀಡಿದ್ದೀರಿ ಎಂದು ಹೇಳಿದ್ದಾರೆ. ಇದಕ್ಕೆ ಉತ್ತರ ನೀಡುವ ಸೋನಿಯಾ ಗಾಂಧಿ, ಯಾಕೆಂದರೆ, ನಾನು ಸಿಂಹಿಣಿ ಎಂದು ಹೇಳಿದ್ದಾರೆ. ಈ ವಿಡಿಯೋವಿಗ ಸೋಶಿಯಲ್‌ ಮೀಡಿಯಾ ಸೈಟ್‌ನಲ್ಲಿ ಭಾರೀ ವೈರಲ್‌ ಆಗಿದೆ.

ನಿಮ್ಮ ಫ್ರೀ ಯುನಿಟ್ ಲೆಕ್ಕಾಚಾರ ಹೇಗೆ? – ಇಲ್ಲಿದೆ ಮಾಹಿತಿ

Posted by Vidyamaana on 2023-06-03 06:25:59 |

Share: | | | | |


ನಿಮ್ಮ ಫ್ರೀ ಯುನಿಟ್ ಲೆಕ್ಕಾಚಾರ ಹೇಗೆ? – ಇಲ್ಲಿದೆ ಮಾಹಿತಿ

ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಇದೀಗ ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ನೀಡಿದ್ದ ‘ಗ್ಯಾರಂಟಿ’ ಆಶ್ವಾಸನೆಗಳನ್ನು ಹಂತಹಂತವಾಗಿ ಜಾರಿಗೊಳಿಸುವ ನಿರ್ಧಾರವನ್ನು ಮಾಡಿದೆ. ಈ ಐದು ಗ್ಯಾರಂಟಿಗಳ ಪೈಕಿ ಇದೀಗ ಹೆಚ್ಚು ಚರ್ಚೆಗೆ ಒಳಗಾಗಿರುವುದು 200 ಯುನಿಟ್ ಉಚಿತ ವಿದ್ಯುತ್ ಸೌಲಭ್ಯ. ಇದರ ಲೆಕ್ಕಾಚಾರ ಇನ್ನೂ ಸ್ಪಷ್ಟವಾಗಿಲ್ಲದ ಕಾರಣ ಈ ವಿಚಾರದಲ್ಲಿ ಜನಸಾಮಾನ್ಯರಲ್ಲಿ ಗೊಂದಲ ಮುಂದುವರೆದಿದೆ.


ಆದರೆ ನಿನ್ನೆ (ಜೂ.03) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿರುವ ಪ್ರಕಾರ, ಪ್ರತೀ ತಿಂಗಳು ವಿದ್ಯುತ್ ಬಳಕೆದಾರರು 200 ಯುನಿಟ್ ವರೆಗೆ ಬಳಸುವ ವಿದ್ಯುತ್ ಗೆ ಬಿಲ್ ಕಟ್ಟಬೇಕಾಗಿಲ್ಲ ಎನ್ನುವುದು ಸಂಪೂರ್ಣ ಸತ್ಯವಲ್ಲ! ಆದರೆ ಇದು ಪೂರ್ತಿ ಸುಳ್ಳೂ ಅಲ್ಲ! ಇಲ್ಲಿ ಸರಕಾರ ಒಂದು ಬುದ್ದಿವಂತಿಕೆಯನ್ನು ಬಳಸಿದೆ. ಒಂದು ಕುಟುಂಬ ಕಳೆದ 12 ತಿಂಗಳಿನಲ್ಲಿ ಎಷ್ಟು ವಿದ್ಯುತ್ ಬಳಸಿದೆ ಎಂದು ಸರಾಸರಿ ಲೆಕ್ಕ ತೆಗೆದು ಅವರ ಮೇಲೆ 10% ಯುನಿಟ್ ಸೇರಿಸಿ ಆ ಕುಟುಂಬದ ಕಟ್ ಆಫ್ ಯುನಿಟನ್ನು ಫಿಕ್ಸ್ ಮಾಡಲಾಗುತ್ತದೆ. ಆ ಯುನಿಟ್ ಆಧಾರದಲ್ಲಿ ಆ ಕುಟುಂಬಕ್ಕೆ ಜುಲೈ ತಿಂಗಳ ಬಿಲ್ಲಿನಿಂದ ಪ್ರಾರಂಭಗೊಳ್ಳುವಂತೆ ಆಗಸ್ಟ್ ತಿಂಗಳಿನಿಂದ ಉಚಿತ ವಿದ್ಯುತ್ ಸೌಲಭ್ಯವನ್ನು ನೀಡಲಾಗುತ್ತದೆ.

*ಇದಕ್ಕೊಂದು ಉದಾಹರಣೆ ಲೆಕ್ಕ ಇಲ್ಲಿದೆ ನೋಡಿ..*

ಈ ಹಿಂದಿನ 12 ತಿಂಗಳ ವಿದ್ಯುತ್ ಬಳಕೆಯ ಯೂನಿಟ್ ಗಳನ್ನು ಒಟ್ಟಾಗಿ ಕೂಡಿಸಿ, ಅದನ್ನು 12 ರಿಂದ ಬಾಗಿಸಿ ಮತ್ತೆ 1.1 ರಿಂದ ಗುಣಿಸಿದಾಗ ಬರುವ ಮೊತ್ತದ ಒಳಗೆ ಈಗಿನ ನಿಮ್ಮ ಉಚಿತ ವಿದ್ಯುತ್ ಬಳಕೆಯ ಯೂನಿಟ್ ಇರತಕ್ಕದ್ದು. ಮತ್ತೆ ಅದು 200 ಯೂನಿಟ್ ಗಳನ್ನು ಮೀರಿರಬಾರದು.


*ಇದನ್ನು ಈ ಕೆಳಗಿನ ಉದಾಹರಣೆ ಮೂಲಕ ವಿವರಿಸಲಾಗಿದೆ:*

 ಸಾಮಾನ್ಯ ಮಧ್ಯಮ ಕುಟುಂಬದ ಉದಾಹರಣೆ 

ತಿಂಗಳು 1 -  180 ಯೂನಿಟ್ 

ತಿಂಗಳು 2 -  185 ಯೂನಿಟ್

ತಿಂಗಳು 3 -  185 ಯೂನಿಟ್

ತಿಂಗಳು 4 -  180 ಯೂನಿಟ್

ತಿಂಗಳು 5 -  185 ಯೂನಿಟ್

ತಿಂಗಳು 6 -  175 ಯೂನಿಟ್

ತಿಂಗಳು 7 -  180 ಯೂನಿಟ್ 

ತಿಂಗಳು 8 -  185 ಯೂನಿಟ್

ತಿಂಗಳು 9 -  185 ಯೂನಿಟ್

ತಿಂಗಳು 10 - 178 ಯೂನಿಟ್

ತಿಂಗಳು 11 - 180 ಯೂನಿಟ್

ತಿಂಗಳು 12 - 175 ಯೂನಿಟ್

ಒಟ್ಟು 2173 ಯೂನಿಟ್ಗಳು.

ಸರಾಸರಿ ಅಂದರೆ 2173/12= 181 ಯೂನಿಟ್ಗಳು. 10% ಹೆಚ್ಚವರಿ ಅಂದರೆ 181*1.1= 191 ಯೂನಿಟ್ಗಳು. ಹೀಗಿದ್ದಲ್ಲಿ ನೀವು 200 ಯೂನಿಟ್ ಉಚಿತ ವಿದ್ಯುತ್ ಬಳಸಲು ಅರ್ಹರು..

ಬಡ ಕುಟುಂಬದ ಉದಾಹರಣೆ

ತಿಂಗಳು 1 -  70 ಯೂನಿಟ್ 

ತಿಂಗಳು 2 -  80 ಯೂನಿಟ್

ತಿಂಗಳು 3 -  60 ಯೂನಿಟ್

ತಿಂಗಳು 4 -  55 ಯೂನಿಟ್

ತಿಂಗಳು 5 -  65 ಯೂನಿಟ್

ತಿಂಗಳು 6 -  70 ಯೂನಿಟ್

ತಿಂಗಳು 7 -  85 ಯೂನಿಟ್ 

ತಿಂಗಳು 8 -  55 ಯೂನಿಟ್

ತಿಂಗಳು 9 -  70 ಯೂನಿಟ್

ತಿಂಗಳು 10 - 75 ಯೂನಿಟ್

ತಿಂಗಳು 11 - 80 ಯೂನಿಟ್

ತಿಂಗಳು 12 - 55 ಯೂನಿಟ್

ಒಟ್ಟು 820 ಯೂನಿಟ್ಗಳು.

ಸರಾಸರಿ ಅಂದರೆ 820/12= 68.3 ಯೂನಿಟ್ಗಳು. 10% ಹೆಚ್ಚವರಿ ಅಂದರೆ 68.3*1.1= 75 ಯೂನಿಟ್ಗಳು. ಹೀಗಿದ್ದಲ್ಲಿ ನೀವು 75 ಯೂನಿಟ್ ಉಚಿತ ವಿದ್ಯುತ್ ಬಳಸಲು ಮಾತ್ರ ಅರ್ಹರು. ನೀವು 200 ಯೂನಿಟ್ ಬಳಸುವಂತಿಲ್ಲ. 75 ಯೂನಿಟ್ ಗಿಂತ ಜಾಸ್ತಿ ಬಳಸಿದ್ದಲ್ಲಿ ಬಿಲ್ ಕಟ್ಟತಕ್ಕದ್ದು.

ಇದನ್ನು ಕ್ರಿಕೆಟ್ ನಲ್ಲಿ ಬಳಸುವ ಡಕ್ ವರ್ತ್ ಲೂಯಿಸ್ ನಿಯಮಕ್ಕೆ ಅನ್ವಯಿಸಿಕೊಳ್ಳಬಹುದೇನೋ. ಒಟ್ಟಿನಲ್ಲಿ ಈ ಲೆಕ್ಕಾಚಾರವವನ್ನು ಅರ್ಥಮಾಡಿಕೊಳ್ಳದೇ, ನಮಗೆ 200 ಯುನಿಟ್ ಫ್ರೀ ಎಂದು ಒಟ್ರಾಶಿ ಕರೆಂಟ್ ಯೂಸ್ ಮಾಡಿದ್ರೆ ನಿಮ್ಗೆ ‘ಶಾಕ್’ ಹೊಡೆಯೋದಂತೂ ಗ್ಯಾರಂಟಿ!



Leave a Comment: