ಪುತ್ತೂರು ನಗರ ಠಾಣೆಯ ಎಎಸ್ ಐ ಸುಂದರ ಕಾನಾವು ನಿಧನ

ಸುದ್ದಿಗಳು News

Posted by vidyamaana on 2024-07-22 11:26:34 |

Share: | | | | |


ಪುತ್ತೂರು ನಗರ ಠಾಣೆಯ ಎಎಸ್ ಐ ಸುಂದರ ಕಾನಾವು ನಿಧನ

ಮುಕ್ಕೂರು : ಪೆರುವಾಜೆ ಗ್ರಾಮದ ಕಾನಾವು ನಿವಾಸಿ, ಪುತ್ತೂರು ನಗರ ಠಾಣೆಯ ಎಎಸ್ ಐ ಸುಂದರ ಕಾನಾವು ಜು.22 ರಂದು ಬೆಳಗ್ಗೆ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.



ಮೂರು ದಿನಗಳ ಮನೆಯಲ್ಲಿ ಬ್ರೈನ್ ಸ್ಟ್ರೋಕ್ ಗೆ ಒಳಗಾಗಿದ್ದ ಸುಂದರ ಕಾನಾವು ಅವರನ್ನು ಮಂಗಳೂರಿನ ಪಡೀಲು ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಎ.ಜೆ. ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸದ್ಯ ಮೃತರ ಪಾರ್ಥಿವ ಶರೀರ ಮಂಗಳೂರಿನಲ್ಲಿ ಇದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

 Share: | | | | |


ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಶಾಸಕರಿಂದ ರೂ.೫೦ ಸಾವಿರ ಸಹಾಯಧನ

Posted by Vidyamaana on 2024-07-03 19:23:39 |

Share: | | | | |


ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಶಾಸಕರಿಂದ ರೂ.೫೦ ಸಾವಿರ ಸಹಾಯಧನ

ಪುತ್ತೂರು: ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ರೂ. ೫೦ ಸಾವಿರ ಸಹಾಯಧನವನ್ನು ನೀಡಿದರು. ಮಂಗಳೂರು ಕೇಂದ್ರ ಕಚೇರಿಯನ್ನು ಹೊಂದಿರುವ ಈ ಟ್ರಸ್ಟ್ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಈ ಟ್ರಸ್ಟ್‌ನಲ್ಲಿ ಸದಸ್ಯರಾಗಿರುತ್ತಾರೆ.

ವಂದೇ ಭಾರತ್ ರೈಲಿನ ಟಾಯ್ಲೆಟ್ ನಲ್ಲಿ ವ್ಯಕ್ತಿಯ ಕಿತಾಪತಿ ತಂದ ಪಜೀತಿ

Posted by Vidyamaana on 2023-08-10 15:13:43 |

Share: | | | | |


ವಂದೇ ಭಾರತ್ ರೈಲಿನ ಟಾಯ್ಲೆಟ್ ನಲ್ಲಿ ವ್ಯಕ್ತಿಯ ಕಿತಾಪತಿ ತಂದ ಪಜೀತಿ

ವಿಜಯವಾಡ: ಟಿಕೆಟ್ ಇಲ್ಲದೆ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಟಿಕೆಟ್ ಕಲೆಕ್ಟರ್ ಗಳ ಕಣ್ತಪ್ಪಿಸಲು ಟಾಯ್ಲೆಟ್ ಸೇರಿಕೊಂಡು ಅಲ್ಲಿ ಬಳಿಕ ಸಿಗರೇಟ್ ಸೇದುವ ಮೂಲಕ ಅಧ್ವಾನ ಸೃಷ್ಟಿಸಿದ ಘಟನೆಯೊಂದು ವರದಿಯಾಗಿದೆ.


ತಿರುಪತಿ-ಸಿಕಂದರಾಬಾದ್ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದ್ದು, ರೈಲಿನ ಬೋಗಿಯ ಟಾಯ್ಲೆಟ್ ನಿಂದ ಹೊಗೆ ಬರುತ್ತಿದ್ದ ಕಾರಣ ಅಪಾಯದ ಕರೆಗಂಟೆ ಬಾರಿಸಿದ ಮತ್ತು ಆಟೋಮ್ಯಾಟಿಕ್ ಬೆಂಕಿ ನಿಯಂತ್ರಕ ವ್ಯವಸ್ಥೆ ಕಾರ್ಯಪ್ರವೃತ್ತಗೊಂಡ ಕಾರಣ ರೈಲು ನಿಲುಗಡೆಗೊಂಡ ಘಟನೆಯೂ ನಡೆದಿರುವುದನ್ನು ರೈಲ್ವೇ ಅಧಿಕಾರಿಗಳು ನೀಡಿರುವ ಮಾಹಿತಿಯಲ್ಲಿ ತಿಳಿಸಿದ್ದಾರೆ.


ರೈಲು ಸಂಖ್ಯೆ – 20702 ಆಂಧ್ರಪ್ರದೇಶದ ಗುಡೂರು ಮೂಲಕ ಸಾಗುತ್ತಿದ್ದಾಗ ಈ ಘಟನೆ ನಡೆದಿದ್ದು, ಸಿ-13 ಬೋಗಿಯಲ್ಲಿ ಇದು ನಡೆದಿದೆ. ಟಿಕೆಟ್ ಪಡೆದುಕೊಳ್ಳದ ವ್ಯಕ್ತಿಯೊಬ್ಬ ತಿರುಪತಿಯಲ್ಲಿ ರೈಲನ್ನು ಹತ್ತಿ ಸಿ-13 ಬೋಗಿಯಲ್ಲಿರುವ ಟಾಯ್ಲೆಟ್ ಒಳಹೊಕ್ಕು ಲಾಕ್ ಮಾಡಿಕೊಂಡಿದ್ದಾನೆ.


ಬಳಿಕ, ಅಲ್ಲಿ ಆ ವ್ಯಕ್ತಿ ಧೂಮಪಾನ ಮಾಡಿದ ಕಾರಣ ಟಾಯ್ಲೆಟ್ ಒಳಗಿದ್ದ ಸ್ವಯಂಚಾಲಿತ ಬೆಂಕಿ ನಿಯಂತ್ರಕ ವ್ಯವಸ್ಥೆ ಚಾಲನೆಗೊಂಡಿದೆ ಎಂಬ ಮಾಹಿತಿಯನ್ನು ದಕ್ಷಿಣ ಮಧ್ಯೆ ರೈಲ್ವೇ ವಲಯದ ವಿಜಯವಾಡ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.


ಮುನ್ನೆಚ್ಚರಿಕೆ ಗಂಟೆ ಬಾರಿಸುತ್ತಿದ್ದಂತೆ ಬೆಂಕಿ ನಿಯಂತ್ರಕದಿಂದ ಅಗ್ನಿ ಶಾಮಕ ಪೌಡರ್ ಬೋಗಿ ತುಂಬೆಲ್ಲಾ ಚಿಮುಕಲಾರಂಭಿಸಿದೆ, ಇದರಿಂದ ಗಾಬರಿಗೊಂಡ ಆ ಬೋಗಿಯಲ್ಲಿದ್ದ ಪ್ರಯಾಣಿಕರು ಕಂಗಾಲಾಗಿದ್ದಾರೆ. ಬಳಿಕ ಅಲ್ಲಿದ್ದ ಎಮರ್ಜೆನ್ಸಿ ಫೋನ್ ಮೂಲಕ ರೈಲಿನ ಗಾರ್ಡಿಗೆ ಮಾಹಿತಿ ನೀಡಿದ್ದಾರೆ. ಬಳಿಕ ರೈಲು ಮನುಬೋಲು ಎಂಬಲ್ಲಿ ನಿಂತಿದೆ.


ತಕ್ಷಣವೇ ಆ ಬೋಗಿಯ ಕಡೆಗೆ ಆಗಮಿಸಿದ ರೈಲ್ವೇ ಪೊಲೀಸರು ಬೆಂಕಿ ನಿಯಂತ್ರಕ ವ್ಯವಸ್ಥೆಯೊಂದಿಗೆ ಬಂದವರೇ ಟಾಯ್ಲೆಟ್ ನ ಕಿಟಕಿ ಮುರಿದು ಒಳನುಗ್ಗಿದಾಗ ಅಸಲೀ ವಿಷಯ ಬೆಳಕಿಗೆ ಬಂದಿದೆ. ಇದೀಗ ಆ ವ್ಯಕ್ತಿಯನ್ನು ರೈಲ್ವೇ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ರೈಲು ಅಲ್ಲಿಂದ ತನ್ನ ಪ್ರಯಾಣವನ್ನು ಮುಂದುವರೆಸಿದೆ.

ಶಾಸಕರ ಇಂದಿನ ಕಾರ್ಯಕ್ರಮ ಆ 9

Posted by Vidyamaana on 2023-08-08 23:09:12 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ ಆ 9

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಆಗಸ್ಟ್ 9 ರಂದು


ಬೆಳಿಗ್ಗೆ 10 ಗಂಟೆಗೆ ಅಜಲಡ್ಕದಲ್ಲಿ ಕೆರೆ ಉದ್ಘಾಟನೆ

11 ರಿಂದ ಅಧಿಕಾರಿಗಳ ಸಭೆ

ಸಂಜೆ 3ಕ್ಕೆ ನೆಟ್ಟಣಿಗೆ ಮುಡ್ನೂರು ಸರಕಾರಿ ಶಾಲೆಯಲ್ಲಿ ವಿವೇಕ ಕೊಠಡಿ ಉದ್ಘಾಟನೆ 

ಕಾರ್ಯಕ್ರಮದಲ್ಲಿ  ಭಾಗವಹಿಸಲಿದ್ದಾರೆ

ಪಕ್ಷದ ಪರ ಪ್ರಚಾರ ಮಾಡುತ್ತಿರುವ ಗ್ರಂಥ ಪಾಲಕರನ್ನು ಕೆಲಸದಿಂದ ವಜಾ ಮಾಡಿ: ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಆಗ್ರಹ.

Posted by Vidyamaana on 2023-05-31 07:40:17 |

Share: | | | | |


ಪಕ್ಷದ ಪರ ಪ್ರಚಾರ ಮಾಡುತ್ತಿರುವ ಗ್ರಂಥ ಪಾಲಕರನ್ನು ಕೆಲಸದಿಂದ ವಜಾ ಮಾಡಿ: ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಆಗ್ರಹ.

ಪುತ್ತೂರು: ಪುತ್ತೂರು ಸರಕಾರಿ ಪದವಿಪೂರ್ವ ಕಾಲೇಜಿನ ಗ್ರಂಥಪಾಲಕ ಪ್ರವೀಣ್ ವಗ್ಗ ಒಂದು ರಾಜಕೀಯ ಪಕ್ಷದ ಪರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿದ್ದು ತಕ್ಷಣ ಅವರನ್ನು ಕೆಲಸದಿಂದ ವಜಾ ಮಾಡಬೇಕು ಎಂದು ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಆಗ್ರಹಿಸಿದೆ.

ಸರಕಾರಿ ಒದ್ಯೋಗಿಯಾಗಿದ್ದ ಈ ರೀತಿಯಾಗಿ ಒಂದು ಪಕ್ಷದ ಪರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಪ್ಪು. ಯಾವುದೇ ಪಕ್ಷದ ಪರ ಇರುವಂತಿಲ್ಲ. ಬೇರೆ ಬೇರೆ ಧರ್ಮ ಜಾತಿಗಳ ವಿದ್ಯಾರ್ಥಿಗಳರುವ ಈ ಕಾಲೇಜನಲ್ಲಿ ಒಬ್ಬರು ಅಧ್ಯಾಪಕರು ಈ ರೀತಿ ನಡೆದುಕೊಂಡಿರುವುದು ತಪ್ಪು ಇದನ್ನು ಗಂಭಿರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒಕ್ಕೂಟ ಆಗ್ರಹಿಸಿದೆ.

ಈ ಕುರಿತು ಪುತ್ತೂರು ನಗರ ಠಾಣೆ ಹಾಗೂ ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಿಗೆ ಮನವಿ ಮಾಡಿದೆ.

ಕೇರಳ : 10 ಕೋಟಿ ರೂ. ಲಾಟರಿ ಗೆದ್ದು ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಕಣ್ಣೂರಿನ ಆಟೋ ಚಾಲಕ ನಾಸರ್

Posted by Vidyamaana on 2024-03-28 08:35:27 |

Share: | | | | |


ಕೇರಳ : 10 ಕೋಟಿ ರೂ. ಲಾಟರಿ ಗೆದ್ದು ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಕಣ್ಣೂರಿನ ಆಟೋ ಚಾಲಕ ನಾಸರ್

ಕೇರಳ:ಅದೃಷ್ಟ ಯಾವಾಗ, ಹೇಗೆ ಒಲಿಯುತ್ತೆ ಅಂತ ಹೇಳೋಕೆ ಆಗೊಲ್ಲ. ಈ ಅದೃಷ್ಟದ ಕಾರಣದಿಂದಲೇ ರಾತ್ರೋರಾತ್ರಿ ಶ್ರೀಮಂತರಾದವರನ್ನು ನೀವು ನೋಡಿರುತ್ತೀರಿ ಅಲ್ವಾ. ಅದೇ ರೀತಿ ಇದೀಗ ಕೇರಳದ ಆಟೋ ಚಾಲಕರೊಬ್ಬರಿಗೆ ಬಂಪರ್ ಅದೃಷ್ಟ ಒಳಿದಿದ್ದು, ನಿನ್ನೆ ರಾತ್ರಿಯಷ್ಟೇ ಅವರು ಲಾಟರಿ ಟಿಕೆಟ್ ಖರೀದಿಸಿದ್ದು, ಇಂದು 10 ಕೋಟಿ ಬಂಪರ್ ಲಾಟರಿ ಗೆಲ್ಲುವ ಮೂಲಕ ಕೋಟ್ಯಾಧಿಪತಿಯಾಗಿದ್ದಾರೆ.ಕೇರಳದ ಕಣ್ಣೂರಿನ ಆಳಕೋಡ್ ನಿವಾಸಿ ನಾಸರ್ ಅವರು 10 ಕೋಟಿ ರೂ. ಬಂಪರ್ ಲಾಟರಿ ಗೆದ್ದಿದವರು. ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿರುವ ನಾಸರ್ ಇದೀಗ ಬಂಪರ್ ಲಾಟರಿ ಗೆಲ್ಲುವ ಮೂಲಕ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ.


ಕೇರಳದ ಕಾರ್ತಿಕಪುರದ ರಾರರಾಜೇಶ್ವರಿ ಲಾಟರಿ ಏಜನ್ಸಿಯಿಂದ ನಾಸರ್ ಲಾಟರಿ ಟಿಕೆಟ್ ಖರೀಸಿದ್ದು, ಅವರ ಅದೃಷ್ಟ ಖುಲಾಯಿಸಿ ಈ ಲಾಟರಿಯಲ್ಲಿ ಪ್ರಥಮ ಬಹುಮಾನ 10 ಕೋಟಿ ರೂ. ಹಣವನ್ನು ಗೆದ್ದಿದ್ದಾರೆ.

ಕಾರ್ತಿಕಪುರದಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುವ ನಾಸರ್ ನಿನ್ನೆ ರಾತ್ರಿಯಷ್ಟೇ ಲಾಟರಿ ಟಿಕೆಟ್ ಖರೀದಿಸಿದ್ದರು ಎಂದು ಲಾಟರಿ ಏಜೆಂಟ್ ರಾಜು ಹೇಳಿದ್ದಾರೆ. ಇದೀಗ ಟಿಕೆಟ್ ಖರೀದಿ ಮಾಡಿದ ಮರು ದಿನವೇ ನಾಸರ್ ಅವರಿಗೆ 10. ಕೋಟಿ ರೂ. ಗಳ ಬಂಪರ್ ಲಾಟರಿ ಸಿಕ್ಕಿದ್ದು,  ಈ ಸುದ್ದಿಯನ್ನು ಕೇಳಿ ಅದೃಷ್ಟ ಅಂದ್ರೆ ಇದಪ್ಪಾ ಎಂದು ನೆಟ್ಟಿಗರು ಹೇಳಿದ್ದಾರೆ.

ಜನ್ಮ ಕೊಟ್ಟ ತಾಯಿಗೇ ಅತ್ಯಾಚಾರ ಯತ್ನ ವಿರೋಧಿಸಿದ್ದಕ್ಕೆ ಕುತ್ತಿಗೆ ಬಿಗಿದು ಕೊಲೆ

Posted by Vidyamaana on 2023-10-31 20:30:40 |

Share: | | | | |


ಜನ್ಮ ಕೊಟ್ಟ ತಾಯಿಗೇ ಅತ್ಯಾಚಾರ ಯತ್ನ  ವಿರೋಧಿಸಿದ್ದಕ್ಕೆ ಕುತ್ತಿಗೆ ಬಿಗಿದು ಕೊಲೆ

ಮಂಗಳೂರು, ಅ.31: ಹೆತ್ತ ತಾಯಿಯನ್ನೇ ಕೊಂದ ಪ್ರಕರಣದಲ್ಲಿ ಭಯಾನಕ ವಿಚಾರವನ್ನು ಪೊಲೀಸರು ಹೊರಗೆಡವಿದ್ದು ಕೊಲೆಗೂ ಮುನ್ನ ಮಗನೇ ತಾಯಿ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ ಕೃತ್ಯ ಬೆಳಕಿಗೆ ಬಂದಿದೆ.‌ ಕಟೀಲು ಬಳಿಯ ಗಿಡಿಗೆರೆ ಎಂಬಲ್ಲಿ ತಾಯಿಯನ್ನು ಕೊಲೆಗೈದ ಕೃತ್ಯದಲ್ಲಿ ಬಜ್ಪೆ ಪೊಲೀಸರು ಮಗನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆಯ ಹಿಂದಿನ ಕಾರಣ ತಿಳಿದುಬಂದಿದೆ. 


ಕಟೀಲು ಸಮೀಪದ ಗಿಡಿಗೆರೆ ನಿವಾಸಿ ರತ್ನಾ ಶೆಟ್ಟಿ (56) ಎಂಬವರನ್ನು ಅವರ ಸ್ವಂತ ಮಗ  ರವಿರಾಜ್ ಶೆಟ್ಟಿ (33) ಅ.26ರ ಗುರುವಾರ  ರಾತ್ರಿ ಕೊಲೆಗೈದು ಮನೆಗೆ ಬೀಗ ಹಾಕಿ ಕಿನ್ನಿಗೋಳಿಯ ವಸತಿಗೃಹದಲ್ಲಿ ಉಳಿದುಕೊಂಡಿದ್ದ. ಭಾನುವಾರ ಬೆಳಗ್ಗೆ ತಾಯಿ ನೆಲೆಸಿದ್ದ ಬಾಡಿಗೆ ಮನೆಯಲ್ಲಿ ನೊಣಗಳು ಮುತ್ತಿಕೊಂಡಿದ್ದು ಸ್ಥಳೀಯರು ನೋಡಿದಾಗ ರತ್ನಾ ಶೆಟ್ಟಿ ಸಾವನ್ನಪ್ಪಿದ್ದು ಕಂಡುಬಂದಿತ್ತು. 


ಬಜ್ಪೆ ಪೊಲೀಸರು ಕೊಲೆ ಶಂಕೆಯಲ್ಲಿ ತನಿಖೆ ನಡೆಸಿದ್ದರು. ಮಗ ರವಿರಾಜ್ ಮೇಲೆ ಶಂಕೆ ಉಂಟಾಗಿ ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ತಾನೇ ಕೊಂದಿರುವುದು ಎಂದು ಒಪ್ಪಿಕೊಂಡಿದ್ದಾನೆ. ರತ್ನಾ ಅವರ ಪತಿ ದಯಾನಂದ ಶೆಟ್ಟಿ ಅವರು 7 ವರ್ಷದ ಹಿಂದೆ ಮೃತಪಟ್ಟಿದ್ದರು. ಬಳಿಕ ತಾಯಿ, ಮಗ ಇಬ್ಬರೇ ಮನೆಯಲ್ಲಿ ವಾಸವಾಗಿದ್ದರು.  ಅರೋಪಿ ರವಿ ಗಾಂಜಾ ವ್ಯಸನಿಯಾಗಿದ್ದು ಗಾಂಜಾ ಅಮಲಿನಲ್ಲಿ ಅತ್ಯಾಚಾರ ಎಸಗಿರಬಹುದೆಂದು ಶಂಕಿಸಲಾಗಿದೆ. ಮುಖಕ್ಕೆ ಬಟ್ಟೆ ಕಟ್ಟಿ ಕೈಕಾಲುಗಳಿಗೆ ನೈಲಾನ್ ಹಗ್ಗದಿಂದ ಬಿಗಿದು ಅತ್ಯಾಚಾರವೆಸಗಿ ಕೊಲೆಗೈದಿರುವುದು ವಿಚಾರಣೆಯ ವೇಳೆ ದೃಢಪಟ್ಟಿದೆ. 


ಆರೋಪಿ ರವಿರಾಜ್ ಶೆಟ್ಟಿಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದೆ‌. ಡ್ರಗ್ಸ್ , ಗಾಂಜಾ ಸೇವನೆ ಹಾಗೂ ಅತ್ಯಾಚಾರ ಎಸಗಿರುವ ಬಗ್ಗೆ ವೈದ್ಯಕೀಯ ವರದಿ ಬಳಿಕವೇ ದೃಢಪಡಿಸಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇನ್ಸ್ ಪೆಕ್ಟರ್ ಸಂದೀಪ್ ಮತ್ತು ಅವರ ತಂಡ ಆರೋಪಿಯನ್ನು ಬಂಧಿಸಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.



Leave a Comment: