ಅತಿ ವೇಗವಾಗಿ ಬಂದು ಮಹಿಳೆಗೆ ಡಿಕ್ಕಿ ಹೊಡೆದ ಟ್ಯಾಕ್ಸಿ; ವಿಡಿಯೊ ನೋಡಿ

ಸುದ್ದಿಗಳು News

Posted by vidyamaana on 2024-07-23 19:43:42 |

Share: | | | | |


ಅತಿ ವೇಗವಾಗಿ ಬಂದು ಮಹಿಳೆಗೆ ಡಿಕ್ಕಿ ಹೊಡೆದ ಟ್ಯಾಕ್ಸಿ; ವಿಡಿಯೊ ನೋಡಿ

ಪುಣೆ: ಅತಿ ವೇಗ ಅಪಘಾತಕ್ಕೆ ಕಾರಣವೆಂದು ತಿಳಿದರೂ ಕೂಡ ಕೆಲವು ಚಾಲಕರು ಅವಸರದಲ್ಲಿ ವೇಗವಾಗಿ ವಾಹನ ಚಲಾಯಿಸಿ ಜನರ ಜೀವಕ್ಕೆ ಆಪತ್ತು ತರುತ್ತಿದ್ದಾರೆ. ಎಲ್ಲೆಂದರಲ್ಲಿ ನಿಂತ ಜನರ ಮೇಲೂ ವಾಹನವನ್ನು ಹಾರಿಸಿಕೊಂಡು ಹೋಗುತ್ತಾರೆ. ಇದೀಗ ಅಂತಹದೊಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Hit and Run Case)ಆಗಿದೆ.ಪ್ರಿ-ಚಿಂಚ್ವಾಡ್‍ನಲ್ಲಿ ಅತಿವೇಗವಾಗಿ ಚಲಿಸುತ್ತಿದ್ದ ಟ್ಯಾಕ್ಸಿ ಮಹಿಳೆಗೆ ಡಿಕ್ಕಿ ಹೊಡೆದು ನಂತರ ಚಾಲಕ ಅಪಘಾತದ ಸ್ಥಳದಿಂದ ಓಡಿಹೋದ ಹೊಸ ಹಿಟ್ ಅಂಡ್ ರನ್ ಪ್ರಕರಣ ವರದಿಯಾಗಿದೆ. ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂಬುದಾಗಿ ತಿಳಿದುಬಂದಿದೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಪುಣೆಯಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಪಿಂಪ್ರಿ-ಚಿಂಚ್ವಾಡ್‍ನಲ್ಲಿ ಈ ಘಟನೆ ನಡೆದಿದೆ. ಈ ಹಿಟ್ ಅಂಡ್ ರನ್ ಪ್ರಕರಣ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೊದಲ್ಲಿ ಭಾನುವಾರ ಮಧ್ಯಾಹ್ನ 1:30ರ ಸುಮಾರಿಗೆ ರಸ್ತೆಯಲ್ಲಿ ಮಹಿಳೆ ನಡೆದುಕೊಂಡು ಹೋಗುತ್ತಿರುವಾಗ ಎದುರಿಗೆ ವೇಗವಾಗಿ ಬಂದ ಟ್ಯಾಕ್ಸಿ ಮಹಿಳಾ ಪಾದಚಾರಿಗೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದೆ. ರಸ್ತೆಯಲ್ಲಿದ್ದ ಇತರ ಜನರು ಆಕೆಯ ಸಹಾಯಕ್ಕಾಗಿ ಓಡಿ ಬರುತ್ತಿರುವುದು ಕಂಡುಬಂದಿದೆ. ಟ್ಯಾಕ್ಸಿಗೆ ಡಿಕ್ಕಿ ಹೊಡೆದ ಮಹಿಳೆ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದು, ಈ ಬಗ್ಗೆ ಪಿಂಪ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಈ ಪ್ರಕರಣದ ಬಗ್ಗೆ ಪಿಂಪ್ರಿ-ಚಿಂಚ್ವಾಡ್ ಡಿಸಿಪಿ ಶಿವಾಜಿ ಪವಾರ್ ಮಾತನಾಡಿ, ಈ ಅಪಘಾತದಲ್ಲಿ ಸಂತ್ರಸ್ತೆ ರೇಖಾ ಗಾಯಗೊಂಡಿದ್ದಾರೆ. ಈಗ ಅವರ ಆರೋಗ್ಯ ಸ್ಥಿರವಾಗಿದೆ. 24 ವರ್ಷದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಕಾರಿನ ಚಾಲಕ ಕುಡಿದಿರಲಿಲ್ಲ ಎಂದು ಪೊಲೀಸರು ದೃಢಪಡಿಸಿದ್ದಾರೆ. ಮೇಲ್ನೋಟಕ್ಕೆ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದು ಮಹಾರಾಷ್ಟ್ರದಲ್ಲಿ ವರದಿಯಾದ ಮೊದಲ ಹಿಟ್ ಅಂಡ್ ರನ್ ಪ್ರಕರಣವಲ್ಲ. ಈಗಾಗಲೇ ಹಿಟ್ ಅಂಡ್ ರನ್ ಪ್ರಕರಣ ಮತ್ತೊಂದು ಸುದ್ದಿಯಲ್ಲಿ, ವೇಗವಾಗಿ ಬಂದ ಆಡಿ ಕಾರು ಎರಡು ಆಟೋರಿಕ್ಷಾಗಳಿಗೆ ಡಿಕ್ಕಿ ಹೊಡೆದಿದೆ. ಒಂದು ಆಟೋರಿಕ್ಷಾ ಚಾಲಕನ ಸ್ಥಿತಿ ಚಿಂತಾಜನಕವಾಗಿದ್ದು, ಅದರಲ್ಲಿದ್ದ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಮುಲುಂಡ್ ಪೊಲೀಸರು ಆಡಿ ಕಾರನ್ನು ವಶಪಡಿಸಿಕೊಂಡಿದ್ದಾರೆ, ಆದರೆ ಅಪಘಾತದ ನಂತರ ಅದರ ಚಾಲಕ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

 Share: | | | | |


ಗಮನಿಸಿ : ಉಚಿತ ಆಧಾರ್ ಕಾರ್ಡ್ ನವೀಕರಣಕ್ಕೆ ನಾಳೆಯೇ ಕೊನೆಯ ದಿನ, ಈ ರೀತಿ ಅಪ್ ಡೇಟ್ ಮಾಡಿಕೊಳ್ಳಿ

Posted by Vidyamaana on 2024-06-13 08:07:37 |

Share: | | | | |


ಗಮನಿಸಿ : ಉಚಿತ ಆಧಾರ್ ಕಾರ್ಡ್ ನವೀಕರಣಕ್ಕೆ ನಾಳೆಯೇ ಕೊನೆಯ ದಿನ, ಈ ರೀತಿ ಅಪ್ ಡೇಟ್ ಮಾಡಿಕೊಳ್ಳಿ

ನವದೆಹಲಿ : ಆಧಾರ್ ಕಾರ್ಡ್ ಉಚಿತ ಅಪ್‌ ಡೇಟ್‌ ಗೆ ನಾಳೆಯ ಒಂದೇ ದಿನ ಮಾತ್ರ ಬಾಕಿ ಇದ್ದು, ಆಧಾರ್‌ ಕಾರ್ಡ್‌ ಉಚಿತ ನವೀಕರಣಕ್ಕೆ ಜೂನ್ 14 ರವರೆಗೆ ಅವಕಾಶ ನೀಡಲಾಗಿದೆ. 

ಯುಐಡಿಎಐ ಕೆಲವು ವಿವರಗಳನ್ನು ಉಚಿತವಾಗಿ ಬದಲಾಯಿಸಲು ಅನುಮತಿಸಿದೆ, ಒಬ್ಬ ವ್ಯಕ್ತಿಯು ಅಪ್‌ ಡೇಟ್ ಆನ್ಲೈನ್ನಲ್ಲಿ ಮಾಡುತ್ತಿದ್ದರೆ, ಆಧಾರ್ ಕೇಂದ್ರಗಳಲ್ಲಿ ಆಫ್ಲೈನ್ನಲ್ಲಿ ಮಾಡಿದ ಯಾವುದೇ ನವೀಕರಣಕ್ಕಾಗಿ, ಶುಲ್ಕಗಳು ಅನ್ವಯವಾಗುತ್ತವೆ.

ಆಧಾರ್: ಏನನ್ನು ಉಚಿತವಾಗಿ ನವೀಕರಿಸಬಹುದು

ಮೈ ಆಧಾರ್ ಪೋರ್ಟಲ್ ಸಹಾಯದಿಂದ, ಆಧಾರ್ ವಿವರಗಳನ್ನು ನವೀಕರಿಸಬಹುದು, ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕವೂ ಇದನ್ನು ಮಾಡಬಹುದು. ಆಧಾರ್ನಲ್ಲಿ ಬದಲಾವಣೆಗಳನ್ನು ಮಾಡಲು ಗ್ರಾಹಕರ ಜನಸಂಖ್ಯಾ ಡೇಟಾ, ವಿಳಾಸ, ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ ಮುಂತಾದ ಪ್ರಮುಖ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಆಧಾರ್ನ ಜನಸಂಖ್ಯಾ ಡೇಟಾವನ್ನು ಆನ್ಲೈನ್ನಲ್ಲಿ ನವೀಕರಿಸಬಹುದು, ಆದರೆ ಆಧಾರ್ ಕೇಂದ್ರಕ್ಕೆ ಹೋಗುವ ಮೂಲಕ ಮಾತ್ರ ಹಲವಾರು ಕೆಲಸಗಳನ್ನು ಮಾಡಬಹುದು. ಉದಾಹರಣೆಗೆ, ಐರಿಸ್ ಅಥವಾ ಬಯೋಮೆಟ್ರಿಕ್ ಡೇಟಾದ ನವೀಕರಣವು ಆಧಾರ್ ಕೇಂದ್ರದಲ್ಲಿ ಮಾತ್ರ ಸಾಧ್ಯ.‌

ಕಂಬಳ ಪರ ಸುಪ್ರಿಂ ತೀರ್ಪು: ಪೇಟಾಗೆ ಭಾರೀ ಹಿನ್ನೆಡೆ

Posted by Vidyamaana on 2023-05-18 08:51:49 |

Share: | | | | |


ಕಂಬಳ ಪರ ಸುಪ್ರಿಂ ತೀರ್ಪು: ಪೇಟಾಗೆ ಭಾರೀ ಹಿನ್ನೆಡೆ

ಪುತ್ತೂರು:ಕಂಬಳ ಪರ ಸುಪ್ರಿಂಕೋರ್ಟು ತೀರ್ಪು ನೀಡಿದ್ದು ಉಪ್ಪಿನಂಗಡಿ ವಿಜಯವಿಕ್ರಮ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷರಾದ ಪ್ರಸ್ತುತ ಶಾಸಕರಾಗಿರುವ ಅಶೋಕ್ ಕುಮಾರ್ ರೈಯವರ ಸುದೀರ್ಘ ೧೨ ವರ್ಷಗಳ ಹೋರಾಟಕ್ಕೆ ಕೊನೆಗೂ ಜಯಸಿಕ್ಕಂತಾಗಿದೆ.

ಕಂಬಳ ತುಳುನಾಡಿನ ಜಾನಪದ ಕ್ರೀಡೆಯಾಗಿದ್ದು , ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಲ್ಲಿ ಈ ಕ್ರೀಡೆನಡೆಯುತ್ತಿದ್ದು ಕರಾವಳಿಯ ರೈತಾಪಿ ಜನರು ಭತ್ತದ ಕೊಯ್ಲಿನ ಜನರು ತಮ್ಮ ಮನರಂಜನೆಗೋಸ್ಕರ ಏರ್ಪಡಿಸುತ್ತಿದ್ದ ಈ ಕಂಬಳ ಕ್ರೀಡೆಯು ಕ್ರಮೇಣಸಾಂಪ್ರದಾಯಿಕ ಕ್ರೀಡೆಯಾಗಿ ಬೆಳೆದು ಬಂತು.

ಕಂಬಳಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಹಿಂದಿನ ಕಾಲದಲ್ಲಿ ರಾಜರುಗಳ ಬೆಂಬಲ ಮತ್ತು ಪ್ರೋತ್ಸಾಹದಿಂದ ಈ ಕ್ರೀಡೆ ನಡೆಯುತ್ತಿತ್ತು. ಹೆಚ್ಚಾಗಿ ನವೆಂಬರ್ ಬಳಿಕ ಮಾರ್ಚ್ ತನಕ ಕರಾವಳಿ ಜಿಲ್ಲೆಗಳಲ್ಲಿ ಈ ಕ್ರೀಡೆ ನಡೆಯುತ್ತದೆ. ಕಂಬಳದಲ್ಲಿ ಎರಡು ಬಲಿಷ್ಟ ಕೋಣಗಳ ಕುತ್ತಿಗೆಗೆ ನೊಗ ಕಟ್ಟಿ ಅವುಗಳನ್ನು ಓಡಿಸಲಾಗುತ್ತದೆ. ಈ ಸಮಯದಲ್ಲಿ ಕೋಣಗಳು ಅತೀ ವೇಗವಾಗಿ ಓಡಲಿಕ್ಕಾಗಿ ಓಡಿಸುವ ವ್ಯಕ್ತಿ ಕೋಣಗಳಿಗೆ ಹಿಂಸಾತ್ಮ ರೀತಿಯಲ್ಲಿ ಪೆಟ್ಟು ಕೊಡುತ್ತಾನೆ ಎಂಂದು ಪ್ರಾಣಿದಯಾಸಂಘ (ಪೇಟಾ) ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿ ಕಂಬಳವನ್ನು ನಿಷೇಧಿಸುವಂತೆ ಆಗ್ರಹಿಸಿತ್ತು. ಪೇಟಾ ನ್ಯಾಯಾಲಯದಲ್ಲಿ ಮಾಡಿರುವ ಆರೋಪಗಳಲ್ಲಿ ಕೋಣಗಳನ್ನು ಹಿಂಸಾತ್ಮಕ ರೀತಿಯಲ್ಲಿ ಎಳೆಯುವಿಕೆ, ಕುಣಿಯುವಿಕೆ ಮತ್ತು ಮೂಗಿನ ಹಗ್ಗಗಳ ಒರಟು ನಿರ್ವಹಣೆ ಮೂಲಕ ಪ್ರಾಣಿಗಳಿಗೆ ಹಿಂಸಾತ್ಮಕ ರೀತಿಯಲ್ಲಿ ಕೌರ್ಯವನ್ನು ಮೆರೆಯಲಾಗಿತ್ತು ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ದಾವೆಯಲ್ಲಿ ತಿಳಿಸಿತ್ತು. ಕಂಬಳದ ಜೊತೆ ತಮಿಳುನಾಡಿನಲ್ಲಿ ಸುಗ್ಗಿಯ ಹಬ್ಬ ಪೊಂಗಲ್ ಬಳಿಕ ಗೂಳಿಯನ್ನು ಪಳಗಿಸುವ ಜಲ್ಲಿಕಟ್ಟು ವಿರುದ್ದವೂ ಪೇಟಾ ದಾವೆಯನ್ನು ಹೋಡಿತ್ತು. ಎರಡೂ ಪ್ರಕರಣಗಳು ಸುಪ್ರಿಂ ಅಗಳದಲ್ಲಿತ್ತು.

೧೨ ವರ್ಷಗಳ ಬಳಿಕ ನ್ಯಾಯ

ಪೇಟಾ ಹೂಡಿರುವ ದಾವೆಯ ವಿರುದ್ದ ಕಂಬಳದ ಪರವಾಗಿ ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕರೆ ಕಂಬಲ ಸಮಿತಿ ಅಧ್ಯಕ್ಷರಾದ , ಪ್ರಸ್ತುತ ಪುತ್ತೂರು ಶಾಸಕರಾಗಿರುವ ಅಶೋಕ್‌ಕುಮಾರ್ ರೈಯವರು ಪೇಟಾ ವಿರುದ್ದ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿ ಕಂಬಳ ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಾಗಿದ್ದು ಇದರಲ್ಲಿ ಯಾವುದೇ ರೀತಿಯ ಪ್ರಾಣಿ ಹಿಂಸೆಯಾಗುತ್ತಿಲ್ಲ. ಕಂಬಳದ ಬಗ್ಗೆ ಪೇಟಾ ಮಾಡಿರುವ ಆರೋಪಗಳು ನ್ಯಾಯಬದ್ದತೆಯಿಂದ ಕೂಡಿಲ್ಲ ಎಂದು ಕಂಬಳ ಪರ ವಕೀಲರು ನ್ಯಾಯಾಲಯದಲ್ಲಿ ವಾದಮಂಡಿಸುವ ಮೂಲಕ ಕಂಬಳದಲ್ಲಿ ಪ್ರಾಣಿ ಹಿಂಸೆಯಿಲ್ಲ ಎಂಬುದನ್ನು ಸಾಭೀತುಪಡಿಸುವಲ್ಲಿ ಯಸಶ್ವಿಯಾಗಿದ್ದರು. ಇದೀಗ ಕಂಬಳ ಸಮಿತಿ ಅಧ್ಯಕ್ಷರಾದ ಅಶೋಕ್ ರೈಯವರ ಏಕಾಂಗಿ ಹೋರಾಟಕ್ಕೆ ಜಯ ದೊರಕಿದ್ದು ಕಂಬಳ ಪರವಾಗಿ ದೇಶದ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ. ಮುಂದಿನ ದಿನಗಳಲ್ಲಿ ಕಂಬಳ ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಡೆಸಬಹುದಾಗಿದೆ.

ಹೋರಾಟಕ್ಕೆ ಸಂದ ಜಯ: ಅಶೋಕ್ ರೈ

ಕಂಬಳದ ವಿರುದ್ದ ಪೇಟಾ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿದಾಗ ಅದರ ವಿರುದ್ದ ನಾನು ಸುಪ್ರಿಂ ಕೋರ್ಟಿನಲ್ಲಿ ಕಾನೂನು ಹೋರಾಟವನ್ನು ನಡೆಸಿದ್ದೆ. ಕಂಬಳ ಸಮಿತಿಗಳ ಪರವಾಗಿ ತಾನು ಸುಪ್ರಿಂ ಕೋರ್ಟಿಗೆ ಸುಪ್ರಿಂ ಕೋರ್ಟಿಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದು ಕಂಬಳ ಕೂಟಕ್ಕೆ ಪ್ರಾಚೀನ ಇತಿಹಾಸವಿದೆ. ಧಾರ್ಮಿಕ ಪರಂಪರೆ ಇದೆ, ಕಂಬಳದಲ್ಲಿ ಕೋಣಗಳಿಗೆ ಹಿಂಸೆಯಾಗುವುದಿಲ್ಲ, ಮಕ್ಕಳಂತೆ ಕೋಣಗಳನ್ನು ಸಾಕಿ ಸಲಹಲಾಗುತ್ತಿದೆ ಆದ್ದರಿಂದ ಕಂಬಳ ಕೂಟಕ್ಕೆ ನಿಷೇಧ ಹೇರಬಾರದು ಎಂದಿನಂತೆ ಕಂಬಳ ಕೂಟ ಆಯೋಜನೆಗೆ ಅವಕಾಶ ಮಾಡಿಕೊಡಬೇಕು ಎಂದು ನ್ಯಾಯಾಲಯದ ಮೂಲಕ ಮನವಿಯನ್ನು ಮಾಡಿದ್ದೆ. ನನ್ನ ಸತತ ೧೨ ವರ್ಷಗಳ ಹೋರಾಟಕ್ಕೆ ಜಯಗಳಿಸಿದ್ದು ತೀರ್ಪು ನಮ್ಮ ಪರ ಬಂದಿದೆ. ಇದು ತನಗೆ ಅತೀವ ಸಂತಸವನ್ನು ತಂದಿದೆ ಎಂದು  ಉಪ್ಪಿನಂಗಡಿ ವಿಜಯವಿಕ್ರಮ ಕಂಬಳ ಸಮಿತಿ ಅಧ್ಯಕ್ಷರೂ , ಶಾಸಕರೂ ಆಗಿರುವ ಅಶೋಕ್ ಕುಮಾರ್ ರೈ ಕೋಡಿಂಬಾಡಿ ತಿಳಿಸಿದ್ದಾರೆ.

ಪ್ರೇಮಿಗಳ ಬೆಡ್ ರೂಂ ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್ ಮೇಲ್ - ಮಂಗಳೂರು ಶೆಟ್ಟಿ ಲಂಚ್ ಹೋಂ ನ ಪಾರ್ಟ್ನರ್ಸ್ ಬಂಧನ.

Posted by Vidyamaana on 2023-09-15 16:11:05 |

Share: | | | | |


ಪ್ರೇಮಿಗಳ ಬೆಡ್ ರೂಂ ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್ ಮೇಲ್ - ಮಂಗಳೂರು ಶೆಟ್ಟಿ ಲಂಚ್ ಹೋಂ ನ ಪಾರ್ಟ್ನರ್ಸ್ ಬಂಧನ.

ಬೆಂಗಳೂರು : ಪ್ರೇಮಿಗಳ ಖಾಸಗಿ ವಿಡಿಯೊ ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡಿದ ಜೋಡಿಯನ್ನು ಬಂಧಿಸಲಾಗಿದೆ.


ಎಂಬಿಎ ಪದವೀಧರೆ ವಿದ್ಯಾರ್ಥಿನಿಯೊಬ್ಬರಿಗೆ ಇವರೇ ರೂಮ್‌ ನೀಡಿ ಬ್ಲಾಕ್‌ಮೇಲ್ ಮಾಡಿರುವುದು ಪತ್ತೆಯಾಗಿದೆ.ನಯನಾ ಹಾಗೂ ಕಿರಣ್ ಬಂಧಿತರು. ಇವರಿಬ್ಬರೂ ಕೆಂಚನಾಪುರದಲ್ಲಿ ಶೆಟ್ಟಿ ಲಂಚ್ ಹೋಮ್ ಎಂಬ ಹೋಟೆಲ್ ನಡೆಸುತ್ತಿದ್ದರು.ಕೆಂಗೇರಿ ಮುಖ್ಯರಸ್ತೆಯಲ್ಲಿರುವ ಶೆಟ್ಟಿ ಲಂಚ್ ಹೋಮ್ ಹೋಟೆಲ್ ನಲ್ಲಿ ಪ್ರೇಮಿಗಳಿಗೆ ರೂಮ್​ ನೀಡಲಾಗಿತ್ತು. ಆದ್ರೆ, ರೂಮ್​ನಲ್ಲಿ ರಹಸ್ಯವಾಗಿ‌ ಕ್ಯಾಮೆರಾ ಅಡಗಿಸಿ ಇಟ್ಟಿದ್ದರು. ಬಳಿಕ ನಯನಾ ಹಾಗೂ ಪಾರ್ಟರ್ ಕಿರಣ್ ಎನ್ನುವರು ಯುವತಿಗೆ ಬ್ಲ್ಯಾಕ್​ ಮೇಲ್ ಮಾಡಿ ಹಣಕ್ಕೆ ಪೀಡಿಸುತ್ತಿದ್ದರು.ಒಂದು ಲಕ್ಷ ಹಣಕ್ಕೆ ನೀಡಬೇಕು. ಹಣ ಕೊಡದಿದ್ರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡ್ತೀನಿ. ನಿಮ್ಮ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಕಳುಹಿಸುತ್ತೇನೆ ಎಂದು ಕಿರಣ್ ಬೆದರಿಕೆ ಹಾಕಿದ್ದ.


ನಯನಾ ಹಾಗೂ ಕಿರಣ್ ಜೊತೆಯಾಗಿ ಕೆಂಗೇರಿ ಮುಖ್ಯರಸ್ತೆಯಲ್ಲಿರುವ ಕೆಂಚನಾಪುರದಲ್ಲಿ ಶೆಟ್ಟಿ ಲಂಚ್ ಹೋಮ್ ಹೋಟೆಲ್ ಆರಂಭಿಸಿದ್ದರು. ಅದೇ ಹೋಟೆಲ್​ಗೆ ನಯನಾ ಸಂಬಂಧಿ ಯುವತಿ(ಬ್ಲ್ಯಾಕ್​ ಮೇಲ್​ ಪ್ರಕರಣದ ಸಂತ್ರಸ್ಥೆ) ಆಗಾಗ ತನ್ನ ಪ್ರಿಯಕರ ಜೊತೆ ಬರುತ್ತಿದ್ದಳು. ವೇಳೆ ಹೋಟೆಲ್ ರೂಮ್ ನಲ್ಲಿ ಇರುವಂತೆ ಹೇಳಿದ್ದ ನಯನಾ, ಬಳಿಕ ಇಬ್ಬರ ಖಾಸಗಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಳು. ನಂತರ ಅವರೇ ರೂಮ್ ಕೊಟ್ಟು ಅವರೆ ಬೀಸಿದ್ದು, ಅಶ್ಲೀಲವಾಗಿ ಎಡಿಟ್ ಮಾಡಿ‌ ಯುವತಿಗೆ ಆರೋಪಿ ಕಿರಣ್, ವಾಟ್ಸಪ್​ ಮಾಡಿ ಒಂದು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಹಣ ಕೊಡದಿದ್ದರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಾಕೋದಾಗಿ ಬೆದರಿಸುತ್ತಿದ್ದ.ಇದರಿಂದ ಯುವತಿ ಹೆದರಿಕೊಂಡು ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

ಇದೀಗ ಈ ದೂರಿನ ಆಧಾರ ಮೇಲೆ ಪೊಲೀಸರು ನಯನಾ ಹಾಗೂ ಕಿರಣ್​ನನ್ನು ಬಂಧಿಸಿದ್ದಾರೆ. ಅಲ್ಲದೇ ಮೊಬೈಲ್ ವಶಕ್ಕೆ ಪಡೆದು ಯುವತಿಯ ವಿಡಿಯೋ ಡಿಲೀಟ್ ಮಾಡಿದ್ದಾರೆ.

ಎಲಾನ್ ಮಸ್ಕ್ ಜೊತೆ ಅಕ್ರಮ ಸಂಬಂಧ ಪತ್ನಿಗೆ ಡಿವೋರ್ಸ್ ಕೊಟ್ಟ ಗೂಗಲ್ ಸಹ ಸಂಸ್ಥಾಪಕ!

Posted by Vidyamaana on 2023-09-16 21:42:32 |

Share: | | | | |


ಎಲಾನ್ ಮಸ್ಕ್ ಜೊತೆ ಅಕ್ರಮ ಸಂಬಂಧ ಪತ್ನಿಗೆ ಡಿವೋರ್ಸ್ ಕೊಟ್ಟ ಗೂಗಲ್ ಸಹ ಸಂಸ್ಥಾಪಕ!

ನ್ಯೂಯಾರ್ಕ್: ಉದ್ಯಮಿ ಎಲಾನ್ ಮಸ್ಕ್ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಟ್ವಿಟರ್ ನಿಯಮ ಬದಲಾವಣೆ, ಶ್ರೀಮಂತರ ಪಟ್ಟಿ, ಉದ್ಯಮ ಸೇರಿದ ಕಾರಣವಲ್ಲ. ಇದೀಗ ಸುಂದರ ಸಂಸಾರದ ನಡುವೆ ಬಿರುಗಾಳಿ ಎಬ್ಬಿಸಿದ ಕಾರಣಕ್ಕೆ ಎಲಾನ್ ಮಸ್ಕ್ ಮತ್ತೆ ಟ್ರೆಂಡ್ ಆಗಿದ್ದಾರೆತನ್ನ ಪತ್ನಿಗೆ ಎಲಾನ್ ಮಸ್ಕ್ ಜೊತೆ ಅಫೇರ್ ಇದೆ ಅನ್ನೋ ಕಾರಣಕ್ಕೆ ಗೂಗಲ್ ಸಹ ಸಂಸ್ಥಾಪಕ ಸರ್ಗೆ ಬ್ರಿನ್ ದಾಂಪತ್ಯ ಜೀವನಕ್ಕೆ ವಿಚ್ಛೇದನ ನೀಡಿದ್ದಾರೆ. ಕೋರ್ಟ್ ಸರ್ಗೆ ಬ್ರಿನ್ ಹಾಗೂ ನಿಕೋಲ್ ಶನಹಾನ್ ಡಿವಿರೋಸ್‌ಗೆ ಅಂಕಿತ ಹಾಕಿದೆ.


2022ರಲ್ಲೇ ಎಲಾನ್ ಮಸ್ಕ್ ಹಾಗೂ ನಿಕೋಲ್ ಶಹನಾನ್ ನಡುವೆ ಗಾಢವಾದ ಸಂಬಂಧವಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ನಿಕೋಲ್ ಹಾಗೂ ಮಸ್ಕ್ ಗೆಳೆಯರಾಗಿದ್ದರು. ಆದರೆ ಈ ಗೆಳೆತನ ಅಕ್ರಮ ಸಂಬಂಧವಾಗಿ ಮಾರ್ಪಟ್ಟಿತ್ತು ಅನ್ನೋದು ಮಾಜಿ ಪತಿ ಸರ್ಗೆ ಬ್ರಿನ್ ಆರೋಪ. ಇದಕ್ಕೆ ಪುಷ್ಠಿ ನೀಡುವ ಹಲವು ದಾಖಲೆಗಳನ್ನು ಸರ್ಗೆ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಮಾಧ್ಯಮಗಳಲ್ಲೂ ಮಸ್ಕ್ ಹಾಗೂ ನಿಕೋಲ್ ನಡುವಿನ ಅಫೇರ್ ಸುದ್ದಿಯಾಗಿತ್ತು.ಗೆಳೆಯರಾಗಿದ್ದ ಸರ್ಗೆ ಹಾಗೂ ಮಸ್ಕ್ ಹಲವು ಬಾರಿ ಸುದ್ದಿಯಾಗಿದ್ದಾರೆ. ಎಲಾನ್ ಮಸ್ಕ್ ಸಂಕಷ್ಟದಲ್ಲಿದ್ದಾರೆ ಹಲವು ಬಾರಿ ಸರ್ಗೆ ಬ್ರಿನ್ ನೆರವು ನೀಡಿದ್ದರು. 2021ರಿಂದ ನಿಕೋಲ್ ಪತಿ ಸರ್ಗೆಗಿಂತ ಹೆಚ್ಚು ಮಸ್ಕ್ ಜೊತೆ ಆತ್ಮೀಯವಾಗಿದ್ದರು. ಹಲವು ಸುತ್ತಿನ ಮಾತುಕತೆ ಬಳಿಕ ಇಬ್ಬರು ಪರಸ್ಪರ ಬೇರ್ಪಟ್ಟಿದ್ದಾರೆ. 2018 ನವೆಂಬರ್ 11 ರಂದು ಗೂಗಲ್ ಸಹ ಸಂಸ್ಥಾಪಕ ಸರ್ಗೆ ಬ್ರಿನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನಿಕೋಲ್ ಶನಹಾನ್ ಕೈಹಿಡಿದ ಸರ್ಗೆ ಕಳೆದ ಮೂರು ವರ್ಷ ಜೊತೆಯಾಗಿದ್ದರು. ಇವರಿಗೆ ಹೆಣ್ಣು ಮಗುವಿದೆ. 2015ರ ಯೋಗ ಕಾರ್ಯಕ್ರಮದಲ್ಲಿ ಇವರಿಬ್ಬರು ಭೇಟಿಯಾಗಿದ್ದರು.


ಮಸ್ಕ್ ತಂದೆ ಕಳವಳ: ಜಗತ್ತಿನ ಶ್ರೀಮಂತ ವ್ಯಕ್ತಿಯಾಗಿರುವ ನನ್ನ ಪುತ್ರನನ್ನು ಯಾವುದೇ ಸಮಯದಲ್ಲಿ ಹತ್ಯೆ ಮಾಡಬಹುದು ಎಂದು ಎಲಾನ್‌ ಮಸ್‌್ಕರ ತಂದೆ ಎರ್ರಾಲ್‌ ಮಸ್‌್ಕ ಕಳವಳ ವ್ಯಕ್ತಪಡಿಸಿದ್ದಾರೆ. ಅಮೆರಿಕ ಸರ್ಕಾರ ನಿರ್ಧಾರಗಳಲ್ಲಿ ಎಲಾನ್‌ ಮಸ್‌್ಕ ಪಾತ್ರದ ಕುರಿತು ಇತ್ತೀಚೆಗೆ ಪ್ರಕಟವಾದ ವರದಿಯೊಂದರ ಹಿನ್ನೆಲೆಯಲ್ಲಿ ಎರ್ರಾಲ್‌ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉಕ್ರೇನ್‌ ಯುದ್ದದ ವಿಷಯದಲ್ಲಿ ಈಗಾಗಲೇ ಮಸ್‌್ಕ ರಷ್ಯಾದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜೊತೆಗೆ ಸರ್ಕಾರದ ಮೇಲೆ ಅವರ ಪ್ರಭಾವದ ವಿಷಯದ ಕೂಡಾ ಹತ್ಯೆಗೆ ಕಾರಣವಾಗಬಹುದು ಎಂದು ಎರ್ರಾಲ್‌ ಹೇಳಿದ್ದಾರೆ. ರಷ್ಯಾ ಯುದ್ಧದ ವೇಳೆ ಮಸ್‌್ಕ ಉಕ್ರೇನ್‌ಗೆ ಉಚಿತ ಇಂಟರ್ನೆಟ್‌ ಒದಗಿಸಿದ್ದರು.

ಮನೆಯಿಂದ ಕಳವು: ಸೊತ್ತು ಸಹಿತ ಆರೋಪಿ ಸೆರೆ

Posted by Vidyamaana on 2024-09-03 06:52:35 |

Share: | | | | |


ಮನೆಯಿಂದ ಕಳವು: ಸೊತ್ತು ಸಹಿತ ಆರೋಪಿ ಸೆರೆ

ಕಾರ್ಕಳ: ಮುಡಾರು ಗ್ರಾಮದ ಗುರ್ಗಾಲ್‌ ಗುಡ್ಡೆ ಎಂಬಲ್ಲಿ ಆ. 30ರಂದು ಮನೆಯೊಂದರಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂದಿಸಿ ಮಾಳ ಗ್ರಾಮದ ಸಂತೋಷ್‌ ಟಿ.(32) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ವಾಸ್ತವ್ಯದ ಮನೆಯ ಬೀಗವನ್ನು ಮನೆಯ ಹೊರಗಡೆ ಡಬ್ಬದಲ್ಲಿ ಇರಿಸಿದ್ದ ಬೀಗದ ಕೀಯನ್ನು ಬಳಸಿ ಬಾಗಿಲು ತೆರೆದು, ಮನೆಯ ಒಳಗಡೆ ಪ್ರವೇಶಿಸಿ ಮನೆಯ ಬೆಡ್‌ ರೂಮ್‌ನಲ್ಲಿದ್ದ ಗೋದ್ರೆಜ್‌ ಲಾಕರ್‌ ಅನ್ನು ಅಲ್ಲೇ ಇರಿಸಿದ್ದ ಕೀ ಸಹಾಯದಿಂದ ತೆರೆದು ಲಾಕರ್‌ನಲ್ಲಿರಿಸಿದ್ದ ಚಿನ್ನಾಭರಣಗಳ ಪೈಕಿ ಸುಮಾರು 33 ಪವನ್‌ ತೂಕದ 10.05 ಲಕ್ಷ ರೂ.

ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಪಾರ್ಥ ಪುರುಷರಿಗಾಗಿ ವೈವಿಧ್ಯಮಯ ಕಲೆಕ್ಷನ್ಸ್ ಪ್ರದರ್ಶನ

Posted by Vidyamaana on 2023-10-27 09:20:11 |

Share: | | | | |


ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಪಾರ್ಥ ಪುರುಷರಿಗಾಗಿ ವೈವಿಧ್ಯಮಯ ಕಲೆಕ್ಷನ್ಸ್ ಪ್ರದರ್ಶನ

ಪುತ್ತೂರು: ಚಿನ್ನಾಭರಣ ಮಾರಾಟ ಕ್ಷೇತ್ರದಲ್ಲಿ ಪ್ರಮುಖ ಹೆಸರಾಗಿರುವ ಜಿ.ಎಲ್‌.ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಪುರುಷರಿಗಾಗಿ ಪಾರ್ಥ ಹೆಸರಿನಲ್ಲಿ ವಿಶೇಷ ಕಲೆಕ್ಷನ್‌ಗಳ ಪ್ರದರ್ಶನ ಮತ್ತು ಮಾರಾಟ ಶುಭಾರಂಭಗೊಂಡಿದೆ.


ಪುರುಷರ ಆಭರಣಗಳ ಅತೀ ದೊಡ್ಡ ಹಾಗೂ ವಿಶೇಷ ಸ೦ಗ್ರಹ


ಪಾರ್ಥವನ್ನು ಅ.25ರಂದು ನಾಯರ್ ಕನ್ ಸ್ಟಕ್ಷನ್ ಮಾಲಕರಾದ ಸೂರಜ್ ನಾಯ‌ರ್ ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅವರು ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಅತ್ಯುತ್ತಮ ಸೇವೆ ಮತ್ತು ವಿಫುಲವಾದ ಸಂಗ್ರಹವಿದೆ. ನಾನು ಇಲ್ಲಿನ ಸಂತೃಪ್ತ ಗ್ರಾಹಕನಾಗಿದ್ದು, ಈ ಪಾರ್ಥ ಸಂಗ್ರಹದಿಂದ ಸಂಸ್ಥೆಯ ಖ್ಯಾತಿ ಇನ್ನಷ್ಟು ಉತ್ತುಂಗಕ್ಕೇರಲಿ ಎಂದು ಶುಭ ಹಾರೈಸಿದರು.


ಪಾರ್ಥ ಪುರುಷರಿಗಾಗಿನ ಅಪೂರ್ವ ಸಂಗ್ರಹದಲ್ಲಿ ಕರ್ಟಿಯರ್ ಕಡ, ಲೇಸರ್ ಕಟ್ಟಿಂಗ್ ಕಡ, ಹೊಸ ವಿನ್ಯಾಸದ ಕ್ಯೂಬನ್ ಚೈನ್ಸ್, ಇಂಡೋ ಇಟಲಿಯನ್ ಚೈನ್ಸ್, ನವರತ್ನ ಉಂಗುರ, ವಿವಿಧ ವಿನ್ಯಾಸದ ಆಂಟಿಕ್ ಫಿಶ್ ಪದಕ, ಕಾಸ್ಟಿಂಗ್ ಪದಕ, ಹೊಸ ವಿನ್ಯಾಸದ ವಾಚ್ ಚೈನ್ಸ್ ಸೇರಿದಂತೆ ಇನ್ನಷ್ಟು ವಿನೂತನ ವಿನ್ಯಾಸದ ವಿಶಿಷ್ಟ ಚಿನ್ನಾಭರಣಗಳ ಸಂಗ್ರಹ ಇಲ್ಲಿ ಅನಾವರಣಗೊಂಡಿದೆ.


ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಬಲರಾಮ ಆಚಾರ್ಯ, ಲಕ್ಷ್ಮೀಕಾಂತ್ ಆಚಾರ್ಯ, ಸುಧನ್ವ ಆಚಾರ್ಯ, ಮ್ಯಾನೇಜರ್ ಶಂಕರ್ ಮೋಹನ್, ಸ್ಟೋರ್ ಮ್ಯಾನೇಜರ್ ಶೇಖರ್ ಗೌಡ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Recent News


Leave a Comment: