ಪುತ್ತೂರು: ನೇಣು ಬಿಗಿದು ಅನ್ಸರ್ ಆತ್ಮಹತ್ಯೆ

ಸುದ್ದಿಗಳು News

Posted by vidyamaana on 2024-07-05 12:22:17 |

Share: | | | | |


ಪುತ್ತೂರು: ನೇಣು ಬಿಗಿದು  ಅನ್ಸರ್  ಆತ್ಮಹತ್ಯೆ

ಪುತ್ತೂರು : ವಿವಾಹಿತ ಯುವಕನೊಬ್ಬ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ವಳತ್ತಡ್ಕ ಸಮೀಪದ ಕೊಪ್ಪಳ ಎಂಬಲ್ಲಿ ಗುರುವಾರ ನಡೆದಿದೆ.

ಮೂಲತಃ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ರೆಂಜಲಾಡಿ ನಿವಾಸಿಯಾಗಿದ್ದು, ಪ್ರಸ್ತುತ ಆರ್ಯಾಪು ಗ್ರಾಮದ ವಳತ್ತಡ್ಕ ಸಮೀಪದ ಕೊಪ್ಪಳ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯವಿದ್ದ ಸಿದ್ದೀಕ್ ಅನ್ಸರ್(32) ಆತ್ಮಹತ್ಯೆ ಮಾಡಿಕೊಂಡವರು. ಗುರುವಾರ ಕೊಪ್ಪಳದಲ್ಲಿರುವ ತನ್ನ ಮಾವನ ಅಡಕೆ ತೋಟದ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಡಕೆ ಗಾರ್ಬಲ್‌ನಲ್ಲಿ ದುಡಿಯುತ್ತಿದ್ದ ಸಿದ್ದೀಕ್ ಅನ್ಸರ್ ಸರ್ವೆ ಗ್ರಾಮದ ಕಲ್ಪನೆಯಲ್ಲಿ 10 ಸೆಂಟ್ಸ್ ಜಾಗ ಖರೀದಿಸಿ ಮನೆ ನಿರ್ಮಿಸಲು ಅಡಿಪಾಯ ಹಾಕಿದ್ದರು. ಆರ್ಯಾಪು ಗ್ರಾಮದ ಕೊಪ್ಪಳದಲ್ಲಿ ಬಾಡಿಗೆ ಮನೆ ಮಾಡಿ ಅಲ್ಲಿ ತಂದೆ, ತಾಯಿ ಹಾಗೂ ಪತ್ನಿ ಮಕ್ಕಳ ಜತೆ ವಾಸ್ತವ್ಯವಿದ್ದರು. ಕಳೆದ ಒಂದೂವರೆ ತಿಂಗಳಿನಿಂದ ವಿಪರೀತ ಹೊಟ್ಟೆನೋವು ಮತ್ತು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಪುತ್ತೂರಿನ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರೂ ಗುಣಮುಖರಾಗದ ಅವರು ಗಾರ್ಬಲ್ ಕೆಲಸಕ್ಕೆ ಹೋಗದೆ ಮನೆಯಲ್ಲೇ ಉಳಿದುಕೊಂಡಿದ್ದರು. ಮನೆ ನಿರ್ಮಿಸುವ ಉದ್ದೇಶದಿಂದ ಸಾಲ ಪಡೆದಿದ್ದ ಅವರು ಸಾಲ ತೀರಿಸಲಾಗದೆ ಜೀವನದಲ್ಲಿ ಜಿಗುಪ್ಪೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

 Share: | | | | |


ನನ್ನ ಕ್ಷೇತ್ರದಲ್ಲಿ ಯಾರೂ ಹಸಿವಿನಿಂದ ಇರಬಾರದು ಸೂರು ನೀರು ಕರೆಂಟಿಲ್ಲದ ಮನೆಯೇ ಇರಬಾರದು: ಶಾಸಕ ಅಶೋಕ್ ಕುಮಾರ್ ರೈ

Posted by Vidyamaana on 2023-08-28 13:54:49 |

Share: | | | | |


ನನ್ನ ಕ್ಷೇತ್ರದಲ್ಲಿ ಯಾರೂ ಹಸಿವಿನಿಂದ ಇರಬಾರದು ಸೂರು ನೀರು ಕರೆಂಟಿಲ್ಲದ ಮನೆಯೇ ಇರಬಾರದು: ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು: ನಾನು ಬಡತನದಿಂದ ಮೇಲೆ ಬಂದವ, ಬಡತನ ಏನೆಂಬುದು ನನಗೆ ಗೊತ್ತಿದೆ ಈ ಕಾರಣ ನಾನು ಹಸಿವನ್ನು ಚೆನ್ನಗಿ ಬಲ್ಲೆ, ನಾನು ಈಗ ಶಾಸಕನಾಗಿದ್ದೇನೆ ನನ್ನ ಕ್ಷೇತ್ರದಲ್ಲಿ ಒಬ್ಬನೇ ಒಬ್ಬ ವ್ಯಕ್ತಿ ಹಸಿವಿನಿಂದ ಮಲಗಬಾರದು, ಸೂರು, ಕುಡಿಯುವ ನೀರು ಮತ್ತು ಕರೆಂಟ್ ಎಲ್ಲರಿಗೂ ಸಿಗುವಂತಾಗಬೇಕಂಬುದೇ ನನ್ನ ಉದ್ದೇಶವಾಗಿದೆ ನನ್ನ ಅಧಿಕಾರದ ಅವಧಿಯಲ್ಲಿ ಬಡವರಿಗೆ ಇವೆಲ್ಲವನ್ನೂ ನೀಡಿಯೇ ಸಿದ್ದ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

ಆ. ೨೮ ರಂದು ಪುತ್ತೂರಿನಲ್ಲಿ ತನ್ನ ನೂತನ ಕಚೇರಿಯನ್ನು ಉದ್ಘಾಟಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

೯೪ಸಿ ಮತ್ತು ೯೪ ಸಿಸಿ ಇದು ಇಲ್ಲಿನ ಬಡವರ ಹಕ್ಕು. ಯಾರೆಲ್ಲಾ ಸರಕಾರಿ ಜಾಗದಲ್ಲಿ ಮನೆ ಮಾಡಿಕೊಂಡಿದ್ದಾರೆ, ಅವರು ಮನೆ ಕಟ್ಟಿರುವ ಜಾಗ ಕಾನೂನು ಪ್ರಕಾರ ಸರಕಾರಕ್ಕೆ ಸೇರಿದ್ದೇ ಅದಲ್ಲಿ ಅವರಿಗೆ ಹಕ್ಕು ಪತ್ರ ಕೊಟ್ಟೇ ಕೊಡ್ತೇನೆ. ಅಕ್ರಮ ಸಕ್ರಮ ಅರ್ಜಿಗಳನ್ನು ಕೆಲವೇ ತಿಂಗಳಲ್ಲಿ ಪೂರ್ಣಗೊಳಿಸಲಿದ್ದು ನಯಾ ಪೈಸೆ ಲಂಚ ಕೊಡದೆ ಅಕ್ರಮಸಕ್ರಮ ಕಡತವನ್ನು ವಿಲೇವಾರಿ ಮಾಡಿಸುತ್ತೇನೆ. ಮನೆ ಕಟ್ಟಲು ಜಾಗವೇ ಇಲ್ಲದವರಿಗೆ ೩ ಸೆಂಟ್ಸ್ ಜಾಗವನ್ನು ನೀಡಿ ಅವರಿಗೆ ಸೂರು ಕಲ್ಪಿಸುವ ಯೋಜನೆ ಇದೆ ಇದಕ್ಕಾಗಿ ವಿಟ್ಲದಲ್ಲಿ ೭ ಎಕ್ರೆ ಜಾಗ ಮತ್ತು ಕುಂಬ್ರ ಸಮೀಪ ಸ್ವಂತ ಹಣದಿಂದ ಜಾಗವನ್ನು ಖರೀದಿ ಮಾಡಿದ್ದೇನೆ. ಈಗಾಗಲೇ ಜಾಗವೇ ಇಲ್ಲದ ೬೦೦ ಮಂದಿ ನಿವೇಶನಕ್ಕಾಗಿ ಅರ್ಜಿ ಕೊಟ್ಟಿದ್ದಾರೆ. ವಿಧವೆಯವರಿಗೆ , ಅನಾಥರಿಗೆ, ನಿರ್ಗತಿಕರಿಗೆ ಮೊದಲ ಆದ್ಯತೆ ಮೇರೆಗೆ ಜಾಗವನ್ನು ಕೊಡಲಿದ್ದೇನೆ ಮತ್ತು ಪ್ರತೀ ಗ್ರಾಮದಲ್ಲಿ ಸರಕಾರಿ ಜಾಗವನ್ನು ಗುರುತಿಸಿ ಅದನ್ನು ಕಾನೂನಾತ್ಮಕವಾಗಿ ಬಡವರಿಗೆ ಹಂಚುವ ಕೆಲಸವನ್ನು ಮಾಡುತ್ತೇನೆ. ನಾನು ಚುನಾವಣೆಗೆ ಮುಂಚೆ ನಿಮಗೆ ಕೊಟ್ಟ ಭರವಸೆಯನ್ನು ಮರೆತಿಲ್ಲ ಎಂದು ಹೇಳಿದ ಶಾಸಕರು ಕ್ಷೇತ್ರದ ಅಭಿವೃದ್ದಿಗೆ ಜನರ ಸಹಕಾರವನ್ನು ಕೋರಿದರು.

ವಿಟ್ಲ : ಮಹಿಳೆಯ ಜೊತೆ ಅಸಭ್ಯ ವರ್ತನೆ ಪ್ರಕರಣ : ಆರೋಪಿ ಅಬೂಬಕ್ಕರ್ ಬಂಧನ.

Posted by Vidyamaana on 2023-05-17 06:16:59 |

Share: | | | | |


ವಿಟ್ಲ : ಮಹಿಳೆಯ ಜೊತೆ ಅಸಭ್ಯ ವರ್ತನೆ ಪ್ರಕರಣ : ಆರೋಪಿ ಅಬೂಬಕ್ಕರ್ ಬಂಧನ.

ವಿಟ್ಲ : ಮಹಿಳೆಯ ಜೊತೆ ಅಸಭ್ಯ ರೀತಿಯಲ್ಲಿ ವರ್ತಿಸಿದ ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಕನ್ಯಾನದ ಅಬೂಬಕ್ಕರ್ (46) ಬಂಧಿತ ಆರೋಪಿಈತ ಮೋಟಾರ್ ಸೈಕಲ್ ನಲ್ಲಿ ಬಂದು ದಾರಿ ಕೇಳುವ ನೆಪದಲ್ಲಿ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದ.

ಆರೋಪಿ ಪತ್ತೆಯ ಕಾರ್ಯದಲ್ಲಿ ವಿಟ್ಲ ಠಾಣೆಯ ಪೊಲೀಸ್ ನಿರೀಕ್ಷಕರಾದ ನಾಗರಾಜ್‌ ಹೆಚ್ ಈ ರವರ ಮಾರ್ಗದರ್ಶನದಂತೆ ವಿಟ್ಲ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಕಾರ್ತಿಕ್ ಕಾತರಕಿ ಹಾಗೂ ಸಿಬ್ಬಂದಿಗಳಾದ ಹೆಚ್‌ಸಿ ರಕ್ಷಿತ್ ಮತ್ತು ಪಿಸಿ ಹೇಮರಾಜ ರವರು ಪಾಲ್ಗೊಂಡಿದ್ದರು.

ಮರದಿಂದ ಬಿದ್ದು ಬಿಜೆಪಿ ಮಾಜಿ ಶಾಸಕನ ಗನ್​ ಮ್ಯಾನ್ ಲೊಕೇಶ್ ಮೃತ್ಯು

Posted by Vidyamaana on 2023-08-06 12:10:06 |

Share: | | | | |


ಮರದಿಂದ ಬಿದ್ದು ಬಿಜೆಪಿ ಮಾಜಿ ಶಾಸಕನ ಗನ್​ ಮ್ಯಾನ್ ಲೊಕೇಶ್ ಮೃತ್ಯು

ಕೊಡಗು: ಮರದಿಂದ ಕೆಳಗೆ ಬಿದ್ದು ಬಿಜೆಪಿ ಮಾಜಿ ಶಾಸಕ ಅಪ್ಪಚ್ಚು ರಂಜನ್ ಗನ್​ ಮ್ಯಾನ್ ಆಗಿದ್ದ ಲೋಕೇಶ್ (40) ಮೃತಪಟ್ಟಿದ್ದಾರೆ.


ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕಾನ್​ ಬೈಲು ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಬರಬೇಕಿದೆ.

ಸೌದಿಯಿಂದ ಮಂಗಳೂರಿಗೆ ತೈಲ ಹೊತ್ತು ತರುತ್ತಿದ್ದ ಹಡಗಿಗೆ ಗುಜರಾತ್ ಬಳಿ ಡ್ರೋಣ್ ದಾಳಿ

Posted by Vidyamaana on 2023-12-23 20:43:52 |

Share: | | | | |


ಸೌದಿಯಿಂದ ಮಂಗಳೂರಿಗೆ ತೈಲ ಹೊತ್ತು ತರುತ್ತಿದ್ದ ಹಡಗಿಗೆ ಗುಜರಾತ್ ಬಳಿ ಡ್ರೋಣ್ ದಾಳಿ

ನವದೆಹಲಿ, ಡಿ.23: ಸೌದಿ ಅರೇಬಿಯಾದಿಂದ ಕರ್ನಾಟಕದ ಮಂಗಳೂರಿಗೆ ಕಚ್ಚಾ ತೈಲವನ್ನು ಹೊತ್ತುಕೊಂಡು ಬರುತ್ತಿದ್ದ ಹಡಗಿಗೆ ಗುಜರಾತ್ ಬಳಿಯ ಸಮುದ್ರ ಮಧ್ಯೆ ಡ್ರೋಣ್ ದಾಳಿಯಾಗಿದೆ. ಡ್ರೋಣ್ ದಾಳಿಯಿಂದ ಬೆಂಕಿ ಹತ್ತಿಕೊಂಡಿದ್ದು, ಹಡಗಿನಲ್ಲಿ ತಾಂತ್ರಿಕ ತೊಂದರೆ ಉಂಟಾಗಿದೆ. ಹಡಗನ್ನು ಸಮುದ್ರ ಮಧ್ಯದಲ್ಲೇ ನಿಲ್ಲಿಸಲಾಗಿದ್ದು ಅದರಲ್ಲಿ 20 ಮಂದಿ ಭಾರತೀಯ ಸಿಬಂದಿಯಿದ್ದಾರೆ ಎಂದು ನೌಕಾ ಸೇನೆಯ ಮೂಲಗಳು ತಿಳಿಸಿವೆ.  


ಗುಜರಾತಿನ ಪೋರ್ ಬಂದರಿನಿಂದ 217 ನಾಟಿಕಲ್ ಮೈಲು ದೂರದ ಸಮುದ್ರ ಮಧ್ಯದಲ್ಲಿ ಘಟನೆ ನಡೆದಿದೆ. ಇಸ್ರೇಲ್ ದೇಶಕ್ಕೆ ಸೇರಿದ ಎಂವಿ ಚೆಮ್ ಪ್ಲುಟೋ ಹೆಸರಿನ ಕಾರ್ಗೋ ಹಡಗಿನಲ್ಲಿ ಸೌದಿ ಅರೇಬಿಯಾದಿಂದ ಮಂಗಳೂರಿನ ಬಂದರಿಗೆ ಕಚ್ಚಾ ತೈಲವನ್ನು ಹೊತ್ತುಕೊಂಡು ಬರುತ್ತಿದ್ದಾಗ ಡ್ರೋಣ್ ದಾಳಿಯಾಗಿದೆ. ದಾಳಿಯಿಂದ ಹಡಗಿನಲ್ಲಿ ಬೆಂಕಿ ಹತ್ತಿಕೊಂಡಿದ್ದು, ಅದನ್ನು ಬಳಿಕ ನಂದಿಸಲಾಗಿದೆ. ಆದರೆ ಡ್ರೋಣ್ ದಾಳಿಯಿಂದಾಗಿ ಹಡಗಿನಲ್ಲಿ ತಾಂತ್ರಿಕ ತೊಂದರೆ ಉಂಟಾಗಿದ್ದು ಸಮುದ್ರ ಮಧ್ಯದಲ್ಲೇ ಹಡಗನ್ನು ನಿಲುಗಡೆ ಮಾಡಲಾಗಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.  


ಭಾರತದ ಸಮುದ್ರ ಆರ್ಥಿಕ ವಲಯದ ಗಡಿಯಲ್ಲೇ ಪೆಟ್ರೋಲಿಂಗ್ ಮಾಡುತ್ತಿದ್ದ ಕೋಸ್ಟ್ ಗಾರ್ಡ್ ಪಡೆಯ ಐಸಿಜಿಎಸ್ ವಿಕ್ರಮ್ ನೌಕೆಯನ್ನು ಕೂಡಲೇ ಸ್ಥಳಕ್ಕೆ ಕಳಿಸಲಾಗಿದ್ದು ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದೆ. ಇದಲ್ಲದೆ, ಕೋಸ್ಟ್ ಗಾರ್ಡ್ ಮತ್ತು ನೌಕಾ ಸೇನೆಯ ಹಡಗುಗಳನ್ನು ಕರಾವಳಿಯಲ್ಲಿ ಅಲರ್ಟ್ ಆಗಿರಲು ಸೂಚನೆ ನೀಡಲಾಗಿದೆ. ಹಡಗಿನಲ್ಲಿದ್ದ ಭಾರತೀಯ ಸಿಬಂದಿ ಸೇಫ್ ಆಗಿದ್ದಾರೆಂದು ಭಾರತೀಯ ನೌಕಾ ಪಡೆಯ ವಕ್ತಾರರು ಟ್ವೀಟ್ ಮಾಡಿದ್ದಾರೆ. ಆದರೆ ಈ ಕುರಿತು ಖಚಿತ ಮಾಹಿತಿಗಳು ಲಭ್ಯವಾಗಿಲ್ಲ. ಹಡಗಿನಲ್ಲಿ ಬೆಂಕಿ ಹತ್ತಿಕೊಂಡು ನೀರು ಒಳನುಗ್ಗಿದೆ, ಇದರಿಂದ ತಾಂತ್ರಿಕ ತೊಂದರೆ ಆಗಿದೆ ಎನ್ನುವ ವರದಿಗಳನ್ನು ರಾಷ್ಟ್ರೀಯ ಮಾಧ್ಯಮಗಳು ಹೇಳಿವೆ.


ಉಗ್ರರ ದಾಳಿ ಆಗಿರುವ ಶಂಕೆ


ಕಳೆದ ವಾರ ಸುಯೆಜ್ ಸಮುದ್ರದಲ್ಲಿ ಮಂಗಳೂರಿನಿಂದ ಜೆಟ್ ಇಂಧನ ಸಾಗಿಸುತ್ತಿದ್ದ ತೈಲ ಹಡಗಿನ ಮೇಲೆ ಹೌತಿ ಬಂಡುಕೋರರು ದಾಳಿ ನಡೆಸಿದ್ದರು. ಇದರ ನಡುವೆ, ಮೊನ್ನೆ ಗುರುವಾರ ಲಕ್ಷದ್ವೀಪ ಸಮುದ್ರದ ಬಳಿ ಮಾಲ್ಟಾ ದ್ಪೀಪ ಸಮೂಹಕ್ಕೆ ಸೇರಿದ ಹಡಗಿನ ಮೇಲೆ ದಾಳಿ ನಡೆದಿತ್ತು. ಅದರಿಂದ ರಕ್ಷಣೆಗೆ ಕರೆ ಬಂದ ಹಿನ್ನೆಲೆಯಲ್ಲಿ ಭಾರತದ ನೌಕಾಪಡೆಯು ಸ್ಪಂದಿಸಿದ್ದಲ್ಲದೆ, ತನ್ನ ಏರ್ ಕ್ರಾಫ್ಟ್ ಮತ್ತು ಯುದ್ಧ ಹಡಗನ್ನು ಕಳಿಸಿಕೊಟ್ಟಿತ್ತು. ಅದರಲ್ಲಿ 18 ಸಿಬಂದಿಯಿದ್ದು, ಆರು ಮಂದಿಯಿದ್ದ ಬಂಡುಕೋರರು ಮಾಲ್ಟಾ ಹಡಗನ್ನು ತಮ್ಮ ವಶಕ್ಕೆ ಪಡೆದಿದ್ದರು. ಸೋಮಾಲಿಯದತ್ತ ಚಲಿಸುತ್ತಿದ್ದ ಹಡಗಿಗೆ ಭಾರತೀಯ ನೌಕಾಪಡೆ ರಕ್ಷಣೆ ಕೊಟ್ಟಿತ್ತು. ಇದಕ್ಕೆ ಪ್ರತಿಯಾಗಿ ಈಗ ಡ್ರೋಣ್ ದಾಳಿ ಆಗಿದೆಯೇ ಎನ್ನುವುದು ಗೊತ್ತಾಗಿಲ್ಲ. ಅದಾಗಿ ಎರಡು ದಿನಗಳ ಬಳಿಕ ಶನಿವಾರ ಭಾರತದತ್ತ ಬರುತ್ತಿದ್ದ ಹಡಗಿನ ಮೇಲೆ ಡ್ರೋಣ್ ದಾಳಿ ನಡೆದಿದ್ದು, ಇದನ್ನು ಯಾರು ಮಾಡಿದ್ದಾರೆಂದು ಹೊಣೆ ಹೊತ್ತುಕೊಂಡಿಲ್ಲ. ಇಸ್ರೇಲ್ ಮೂಲದ ಹಡಗು ಅನ್ನುವ ಕಾರಣಕ್ಕೆ ಉಗ್ರ ಸಂಘಟನೆಗಳು ಈ ಕೆಲಸ ಮಾಡಿವೆಯೇ ಎನ್ನುವ ಶಂಕೆಯೂ ಇದೆ.

ಇಂದು ಬೆಳ್ತಂಗಡಿಗೆ ಸಿಎಂ ಸಿದ್ದರಾಮಯ್ಯ

Posted by Vidyamaana on 2024-05-21 04:51:01 |

Share: | | | | |


ಇಂದು ಬೆಳ್ತಂಗಡಿಗೆ ಸಿಎಂ ಸಿದ್ದರಾಮಯ್ಯ

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ 21ರಂದು ಬೆಳ್ತಂಗಡಿಗೆ ಆಗಮಿಸಲಿದ್ದಾರೆ.

ಬೆಳಿಗ್ಗೆ ಬೆಂಗಳೂರಿನಿಂದ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಲಿದ್ದಾರೆ.

ವಿದ್ಯಾಮಾತಾ ಅಕಾಡೆಮಿಯ ಮುಕುಟಕ್ಕೊಂದು ನೂತನ ಗರಿ

Posted by Vidyamaana on 2023-12-06 13:40:58 |

Share: | | | | |


ವಿದ್ಯಾಮಾತಾ ಅಕಾಡೆಮಿಯ ಮುಕುಟಕ್ಕೊಂದು ನೂತನ ಗರಿ

ಪುತ್ತೂರು : K.M.F ಬೆಂಗಳೂರು ನೇಮಕಾತಿಯಲ್ಲಿ ವಿದ್ಯಾ ಮಾತಾದಲ್ಲಿ ತರಬೇತಿ ಪಡೆದ ಶಿಲ್ಪಾ ಹೆಚ್.ಎಂ ಆಯ್ಕೆ.

ಕರ್ನಾಟಕ ಮಿಲ್ಕ್ ಫೆಡರೇಶನ್ (K.M.F) ಬೆಂಗಳೂರು ಕೇಂದ್ರ ಕಛೇರಿಗೆ ನಡೆಸಿದ ನೇಮಕಾತಿಯ ಪರೀಕ್ಷೆಯಲ್ಲಿ ಅತ್ಯುತ್ತಮ ಮೆರಿಟ್ ಅಂಕಗಳೊಂದಿಗೆ ಮೈಸೂರು ಜಿಲ್ಲೆಯ ವಿಜಯನಗರ ನಿವಾಸಿ ಶಿಲ್ಪಾ ಹೆಚ್.ಎಂ ರವರು ಆಯ್ಕೆ ಆಗಿದ್ದಾರೆ. ಈ ಮೂಲಕ ವಿದ್ಯಾಮಾತಾ ಅಕಾಡೆಮಿಯ ಸಾಧನೆಯ ಮುಕುಟಕ್ಕೆ ಇನ್ನೊಂದು ಗರಿ ಲಭಿಸಿದಂತಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯಲ್ಲಿ ಸಹಕಾರ ಸಂಘಗಳ ಬಗ್ಗೆ ವಿದ್ಯಾಮಾತ ಅಕಾಡೆಮಿಯಲ್ಲಿ ವಿಶೇಷ ತರಬೇತಿಯನ್ನು ನೀಡಲಾಗುತ್ತಿದ್ದು ರಾತ್ರಿ 8 ರಿಂದ 9 ಗಂಟೆವರೆಗಿನ ನಿತ್ಯ 1 ಗಂಟೆಗಳ ಆನ್ಲೈನ್ ತರಬೇತಿಯನ್ನು ಶಿಲ್ಪಾ ರವರಿಗೆ ನೀಡಲಾಗುತ್ತಿತ್ತು ಅತ್ಯಧಿಕ ಮೆರಿಟ್ ನೊಂದಿಗೆ  ಗ್ರೇಡ್ 2 ಹುದ್ದೆಗೆ ಆಗಿರುತ್ತಾರೆ.

       

                ಸಹಕಾರ ತತ್ವ, ಸಾಮಾನ್ಯ ಜ್ಞಾನ ಇತ್ಯಾದಿಗಳ ಬಗ್ಗೆ ವಿಶೇಷ ತರಬೇತಿಯನ್ನು ನೀಡುವುದರ ಮೂಲಕ ಸ್ಥಳೀಯ ಸಹಕಾರಿ ಬ್ಯಾಂಕ್, K.M.F  ಇತ್ಯಾದಿ ಪರೀಕ್ಷೆಗಳನ್ನು ಪಾಸ್ ಮಾಡಲು ಉತ್ತೇಜಿಸಲಾಗುತ್ತಿದೆ. ಈ ಕಾರಣದಿಂದ ಕಳೆದ K.M.F ನ ಮಂಗಳೂರು ವಿಭಾಗಕ್ಕೂ 3 ಜನ ಅಭ್ಯರ್ಥಿಗಳು ಅತ್ಯಧಿಕ ಅಂಕಗಳೊಂದಿಗೆ ಆಯ್ಕೆಯಾಗಿದ್ದರು, ಇದೀಗ ಬೆಂಗಳೂರು ವಿಭಾಗಕ್ಕೆ ಆಯ್ಕೆ ಆಗಿರುವುದು ಸಂತೋಷ ಕೊಟ್ಟಿದೆ.

                                          ಭಾಗ್ಯೇಶ್ ರೈ

                    ಆಡಳಿತ ನಿರ್ದೇಶಕರು ವಿದ್ಯಾಮಾತ ಅಕಾಡೆಮಿ

Recent News


Leave a Comment: