ಕಾರು ಚಾಲನೆಯ ತರಬೇತಿ ನೀಡುವ ವೇಳೆ ಅಸಭ್ಯವಾಗಿ ವರ್ತಿಸಿದ್ದ ಆರೋಪ:ಅಣ್ಣಪ್ಪ ಮಾಲಕತ್ವದ ಮಾರುತಿ ಡ್ರೈವಿಂಗ್ ಸ್ಕೂಲ್‌ನ ಪರವಾನಗಿ ರದ್ದು

ಸುದ್ದಿಗಳು News

Posted by vidyamaana on 2024-07-23 21:09:49 |

Share: | | | | |


ಕಾರು ಚಾಲನೆಯ ತರಬೇತಿ ನೀಡುವ ವೇಳೆ ಅಸಭ್ಯವಾಗಿ ವರ್ತಿಸಿದ್ದ ಆರೋಪ:ಅಣ್ಣಪ್ಪ ಮಾಲಕತ್ವದ  ಮಾರುತಿ ಡ್ರೈವಿಂಗ್ ಸ್ಕೂಲ್‌ನ ಪರವಾನಗಿ ರದ್ದು

ಬೆಂಗಳೂರು : ಬಸವೇಶ್ವರನಗರದ ಮಾರುತಿ ಡ್ರೈವಿಂಗ್‌ ಸ್ಕೂಲ್‌ನ ಪರವಾನಗಿ ಹಾಗೂ ಅದೇ ಶಾಲೆಯ ತರಬೇತುದಾರನ ಚಾಲನಾ ಪರವಾನಗಿಯನ್ನು (ಡಿಎಲ್‌) ಸಾರಿಗೆ ಮತ್ತು ರಸ್ತೆ ಸುರಕ್ಷತಾ ಇಲಾಖೆ ರದ್ದುಗೊಳಿಸಿದೆ. 

ಯುವತಿಗೆ ಕಾರು ಚಾಲನೆಯ ತರಬೇತಿ ನೀಡುವ ವೇಳೆ ಅಸಭ್ಯವಾಗಿ ವರ್ತಿಸಿದ್ದ ಆರೋಪದ ಅಡಿ ಕಾರು ತರಬೇತಿದಾರನ ವಿರುದ್ಧ ಬಸವೇಶ್ವರನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಾದ ಬೆನ್ನಲ್ಲೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಸೂಚನೆಯಂತೆ ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ.

ನಗರದ ಯಾವುದೇ ಡ್ರೈವಿಂಗ್ ಶಾಲೆಯಲ್ಲೂ ಈ ರೀತಿಯ ಘಟನೆಗಳು ನಡೆಯಬಾರದು. ಈ ನಿಟ್ಟಿನಲ್ಲಿ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಹಾಲಕ್ಷ್ಮೀಪುರದ 18 ವರ್ಷದ ಯುವತಿ ನೀಡಿದ್ದ ದೂರು ಆಧರಿಸಿ, ಬಸವೇಶ್ವರನಗರದ ಮಾರುತಿ ಡ್ರೈವಿಂಗ್‌ ಸ್ಕೂಲ್‌ನ ತರಬೇತುದಾರ ಅಣ್ಣಪ್ಪ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಏನಿದು ಪ್ರಕರಣ?:‌

ದೂರು ನೀಡಿದ್ದ ಯುವತಿ ಕಾರು ಚಾಲನೆ ಕಲಿಯಲು ಮಾರುತಿ ಡ್ರೈವಿಂಗ್‌ ಸ್ಕೂಲ್‌ಗೆ ಸೇರಿದ್ದರು. ಅಣ್ಣಪ್ಪ ಎಂಬಾತ ಕಾರು ಚಾಲನೆ ಬಗ್ಗೆ ತರಬೇತಿ ನೀಡಿದ್ದರು. ಒಂದು ತಿಂಗಳ ಕೋರ್ಸ್‌ ಮುಕ್ತಾಯವಾದ ಮೇಲೆ ಅಣ್ಣಪ್ಪ, ನಿಮ್ಮ ಮನೆಯ ಕಾರಿನಲ್ಲೇ ಪರಿಪೂರ್ಣವಾಗಿ ಚಾಲನೆ ಬಗ್ಗೆ ಹೇಳಿಕೊಡುತ್ತೇನೆ. ಒಂದು ಗಂಟೆಯ ವಿಶೇಷ ಕ್ಲಾಸ್‌ಗೆ ₹750 ಕೊಡಬೇಕು ಎಂದು ಯುವತಿಯನ್ನು ಕೇಳಿಕೊಂಡಿದ್ದರು. ಯುವತಿ 15 ದಿನಗಳ ವಿಶೇಷ ಕ್ಲಾಸ್‌ಗೆ ಅಣ್ಣಪ್ಪ ಅವರಿಗೆ ₹10,500 ಪಾವತಿಸಿದ್ದರು. ಅದರಂತೆ ಅಣ್ಣಪ್ಪ ವಿಶೇಷ ತರಬೇತಿ ಆರಂಭಿಸಿದ್ದರು ಎಂದು ಪೊಲೀಸರು ಹೇಳಿದರು.

ಪ್ರತಿದಿನ ಯುವತಿಯ ಮನೆ ಬಳಿ ಬಂದು ಆಕೆಯ ಕಾರಿನಲ್ಲೇ ಅಣ್ಣಪ್ಪ ಚಾಲನೆ ತರಬೇತಿ ನೀಡುತ್ತಿದ್ದರು. ಜುಲೈ 7ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಯುವತಿ ಮನೆ ಬಳಿ ಬಂದಿದ್ದ ಅಣ್ಣಪ್ಪ, ಯುವತಿಯನ್ನು ಕಾರಿನಲ್ಲಿ ಕರೆದುಕೊಂಡು ಚಾಲನೆ ಬಗ್ಗೆ ಹೇಳಿಕೊಡಲು ಮುಂದಾಗಿದ್ದರು. ಬಸವೇಶ್ವರ ನಗರದ ನ್ಯಾಷನಲ್‌ ಶಾಲೆಯ ಮೇಲ್ಸೇತುವೆಯಲ್ಲಿ ತೆರಳುವಾಗ, ಯುವತಿ ಕಾರು ಚಾಲನೆ ಮಾಡುತ್ತಿದ್ದರು. ಆಗ ಅಣ್ಣಪ್ಪ ಅಸಭ್ಯವಾಗಿ ವರ್ತಿಸಿದ್ದರು ಎಂದು ಪೊಲೀಸರು ತಿಳಿಸಿದರು.

ತರಬೇತುದಾರನ ಅಸಭ್ಯ ವರ್ತನೆಯಿಂದ ಗಾಬರಿಗೊಂಡಿದ್ದ ಯುವತಿ ಕಾರನ್ನು ಮನೆಯತ್ತ ತಿರುಗಿಸಿದ್ದರು. ಅದಾದ ಮೇಲೆ ತರಬೇತುದಾರ ಸುಮ್ಮನಾಗಿದ್ದರು. ಅಣ್ಣಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಯುವತಿ ಪೊಲೀಸರಿಗೆ ದೂರು ನೀಡಿದ್ದರು.

 Share: | | | | |


ನೇರಳಕಟ್ಟೆ: ಅಂಬುಲೆನ್ಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ

Posted by Vidyamaana on 2023-10-31 21:59:45 |

Share: | | | | |


ನೇರಳಕಟ್ಟೆ: ಅಂಬುಲೆನ್ಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ

ಬಂಟ್ವಾಳ : ಅಂಬುಲೆನ್ಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ ವಾಹನಗಳೆರಡು ಜಖಂಗೊಂಡ ಘಟನೆ ಮಾಣಿ - ಮೈಸೂರು ಹೆದ್ದಾರಿಯ ನೇರಳಕಟ್ಟೆ ಸಮೀಪದ ಭಗವಂತಕೋಡಿ ಎಂಬಲ್ಲಿ ಮಂಗಳವಾರ ರಾತ್ರಿ 8 ರ ವೇಳೆಗೆ ನಡೆದಿದೆ.


    ಪುತ್ತೂರಿನಿಂದ ಮಂಗಳೂರಿನ ಆಸ್ಪತ್ರೆಗೆ ರೋಗಿಯೋರ್ವರನ್ನು ಕರೆದುಕೊಂಡು ಹೋಗುತ್ತಿದ್ದ ಅಂಬುಲೆನ್ಸ್ ಹಾಗೂ ಮಾಣಿ ಕಡೆಯಿಂದ ಪುತ್ತೂರು ಕಡೆಗೆ ಸಂಚರಿಸುತ್ತಿದ್ದ ಇಂಡಿಕಾ ಕಾರು ಮುಖಾಮುಖಿ ಡಿಕ್ಕಿ ಹೊಡೆದಿದೆ.


    ಅಪಘಾತದಿಂದ ಯಾವುದೇ ಜೀವ ಹಾನಿಯಾಗಿಲ್ಲ, ವಾಹನಗಳೆರಡು ಜಖಂಗೊಂಡಿದೆ.

ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಬೇಟಿ ನೀಡಿದ್ದಾರೆ.

15 ಲಕ್ಷ ರೂ.ಗಾಗಿ ನಮ್ಮ ಮನೆಯಲ್ಲಿ 11 ಬ್ಯಾಂಕ್ ಖಾತೆ ತೆರೆದೆವು..!; ಲಾಲು

Posted by Vidyamaana on 2023-09-01 16:21:30 |

Share: | | | | |


15 ಲಕ್ಷ ರೂ.ಗಾಗಿ ನಮ್ಮ ಮನೆಯಲ್ಲಿ 11 ಬ್ಯಾಂಕ್ ಖಾತೆ ತೆರೆದೆವು..!; ಲಾಲು

ಮುಂಬಯಿ: ‘ನರೇಂದ್ರ ಮೋದಿ ಕೊಡುತ್ತೇನೆ ಎಂದು ಹೇಳಿದ 15 ಲಕ್ಷ ರೂ.ಗಾಗಿ ನಾನು, ನನ್ನ ಪತ್ನಿ,ಏಳು ಪುತ್ರಿಯರು ಸೇರಿ ಇಬ್ಬರು ಪುತ್ರರು 11 ಬ್ಯಾಂಕ್ ಖಾತೆಗಳನ್ನೂ ತೆರೆದೆವು’ ಎಂದು ಆರ್ ಜೆಡಿ ನಾಯಕ ಲಾಲು ಯಾದವ್ ತಮ್ಮ ಹಳೇ ಸ್ಟೈಲ್ ನಲ್ಲಿ ಹಾಸ್ಯ ಚಟಾಕಿ ಹಾರಿಸುವ ಮೂಲಕ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಗಮನ ಸೆಳೆದರು.



ಶುಕ್ರವಾರ ಇಂಡಿಯಾ ಮೈತ್ರಿಕೂಟದ ವೇದಿಕೆಯ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸರಕಾರ ಮತ್ತು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಮಾತನಾಡಿದರು. ಈ ವೇಳೆ ಅಲ್ಲಿದ್ದ ನಾಯಕರು ನಗುತ್ತಿರುವುದು ಕಂಡು ಬಂತು. ತಮ್ಮ ಭಾಷಣದಲ್ಲಿ, ಮೈತ್ರಿಯಲ್ಲಿ ಭಾಗಿಯಾಗಿರುವ ಎಲ್ಲಾ ಪಕ್ಷಗಳು ಒಟ್ಟಾಗಿ ಹೋರಾಡುವ ಬಗ್ಗೆಯೂ ಲಾಲು ಹೇಳಿದರು.


‘ನನ್ನ ಹಾಗೂ ದೇಶದ ಇತರ ನಾಯಕರ ಹಣ ಸ್ವಿಸ್ ಬ್ಯಾಂಕ್ ನಲ್ಲಿದೆ ಎಂದು ಪ್ರಚಾರ ಮಾಡಿದ್ದರು. ನಾವು ಬರುತ್ತೇವೆ ಸ್ವಿಸ್ ಬ್ಯಾಂಕಿನಿಂದ ಹಣ ತಂದು ದೇಶದ ಎಲ್ಲ ಜನರಿಗೂ ಖಾತೆ ತೆರೆದು 15 ಲಕ್ಷ ರೂ.ರೂ.ಗಳನ್ನು ಠೇವಣಿ ಇಡುವುದಾಗಿ ಹೇಳಿದರು. ನಾವೂ ಬಲೆಗೆ ಬಿದ್ದೆವು’ ಎಂದರು.


‘ವಿರೋಧ ಪಕ್ಷಗಳು ಒಟ್ಟಿಗೆ ಇರದಿರುವ ಲಾಭವನ್ನು ಪ್ರಧಾನಿ ಮೋದಿ ಬಳಸಿಕೊಂಡಿದ್ದಾರೆ  ಬೆಲೆಗಳು ನಿರಂತರವಾಗಿ ಏರುತ್ತಿವೆ’ ಎಂದು ಲಾಲು ಆರೋಪಿಸಿದರು

BIG NEWS : ಒಪ್ಪಿಗೆ ಇಲ್ಲದೇ ಪತ್ನಿಯೊಂದಿಗೆ ಪತಿ ನಡೆಸುವ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ : ಹೈಕೋರ್ಟ್‌ ಮಹತ್ವದ ತೀರ್ಪು

Posted by Vidyamaana on 2024-06-09 09:24:27 |

Share: | | | | |


BIG NEWS : ಒಪ್ಪಿಗೆ ಇಲ್ಲದೇ  ಪತ್ನಿಯೊಂದಿಗೆ ಪತಿ ನಡೆಸುವ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ : ಹೈಕೋರ್ಟ್‌ ಮಹತ್ವದ ತೀರ್ಪು

Endooru: ಹೆಂಡತಿಯೊಂದಿಗೆ ಒಪ್ಪಿಗೆ ಇಲ್ಲದೇ ಪತಿ ನಡೆಸುವ ಯಾವುದೇ ಲೈಂಗಿಕ ಸಂಭೋಗ ಅಥವಾ ಕೃತ್ಯವು ಮದುವೆಯ ಜೀವನೋಪಾಯದ ಸಮಯದಲ್ಲಿ ಅತ್ಯಾಚಾರವಲ್ಲ ಮತ್ತು ಆದ್ದರಿಂದ ಒಪ್ಪಿಗೆ ಮುಖ್ಯವಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಪುನರುಚ್ಚರಿಸಿದೆ.

ತನ್ನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂದು ಆರೋಪಿಸಿ ಪತ್ನಿ ದಾಖಲಿಸಿದ್ದ ಪತಿಯ ವಿರುದ್ಧ ಎಫ್‌ಐಆರ್ ರದ್ದುಗೊಳಿಸಿದ ನ್ಯಾಯಮೂರ್ತಿ ಪ್ರೇಮ್ ನಾರಾಯಣ್ ಸಿಂಗ್ ಅವರ ಏಕಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಪತಿ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದರಿಂದ ಸೋಂಕು ತಗುಲಿದೆ ಎಂದು ಪತ್ನಿ ಹೇಳಿದ್ದಾರೆ. ತನ್ನ ಪತಿ ತನ್ನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದಾನೆ, ಇದರ ಪರಿಣಾಮವಾಗಿ ತನಗೆ ಸೋಂಕು ತಗುಲಿದೆ ಎಂದು ಪತ್ನಿ ಆರೋಪಿಸಿದ್ದಾರೆ. 20 ಲಕ್ಷ ರೂ.ಗಳ ವರದಕ್ಷಿಣೆಗಾಗಿ ಪತಿ ಮತ್ತು ಅವನ ಕುಟುಂಬವು ತನ್ನನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸಿಸುತ್ತಿದೆ ಎಂದು ಪತ್ನಿ ಆರೋಪಿಸಿದ್ದರು.

BREAKING:ಚಂದನ್ ಶೆಟ್ಟಿ-ನಿವೇದಿತಾಗೆ ವಿಚ್ಚೇದನ ಮಂಜೂರು: 4 ವರ್ಷಗಳ ದಾಂಪತ್ಯ ಜೀವನ ಅಂತ್ಯ

Posted by Vidyamaana on 2024-06-07 19:33:50 |

Share: | | | | |


BREAKING:ಚಂದನ್ ಶೆಟ್ಟಿ-ನಿವೇದಿತಾಗೆ ವಿಚ್ಚೇದನ ಮಂಜೂರು: 4 ವರ್ಷಗಳ ದಾಂಪತ್ಯ ಜೀವನ ಅಂತ್ಯ

ಬೆಂಗಳೂರು : ರ್ಯಾಪ್ ಹಾಡುಗಾರ ಚೆಂದನ್ ಶೆಟ್ಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ. ಹೀಗಾಗಿಯೇ ಬೆಂಗಳೂರಿನ ಶಾಂತಿನಗರದಲ್ಲಿರುವಂತ ಕೌಟುಂಬಿಕ ನ್ಯಾಯಲಯಕ್ಕೆ ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಜೂನ್.6ರ ನಿನ್ನೆ ಸಲ್ಲಿಸಿದ್ದಂತ ವಿಚ್ಚೇದನ ಅರ್ಜಿಯ ವಿಚಾರಣೆಯನ್ನು ಇಂದು ವಿಚಾರಣೆ ನಡೆಸಿತು.

ಬಳಿಕ ಚೆಂದನ್ ಶೆಟ್ಟಿ ಹಾಗೂ ನಿವೇದಿತಾ ವಿವಾಹ ವಿಚ್ಚೇದನಕ್ಕೆ ಕೋರ್ಟ್ ಅನುಮತಿ ನೀಡಿದೆ. ಹೀಗಾಗಿ 4 ವರ್ಷದ ಚೆಂದನ್ ಶೆಟ್ಟಿ-ನಿವೇದಿತಾ ದಾಂಪತ್ಯ ಜೀವನ ಅಂತ್ಯಗೊಂಡಂತೆ ಆಗಿದೆ.ಜೂನ್.6ರ ನಿನ್ನಯಂದು ಚೆಂದನ್ ಶೆಟ್ಟಿ ಹಾಗೂ ನಿವೇದಿತಾ ವಿವಾಹ ವಿಚ್ಚೇದನಕ್ಕಾಗಿ ಕೌಟುಂಬಿಕ ನ್ಯಾಯಲಯಕ್ಕೆ ಸ್ವ ಇಚ್ಚೆಯಿಂದ ಪರಸ್ಪರ ಒಪ್ಪಿ ಇಬ್ಬರೂ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಶಾಂತಿನಗರದ ಫ್ಯಾಮಿಲಿ ನ್ಯಾಯಾಲಯದ ನ್ಯಾಯಮೂರ್ತಿಗಳು ನಡೆಸಿದರು. ಇಂದಿನ ವಿಚಾರಣೆಗಾಗಿ ಚೆಂದನ್ ಶೆಟ್ಟಿ ಹಾಗೂ ನಿವೇದಿತಾ ಖುದ್ದು ಕೋರ್ಟ್ ಗೆ ಹಾಜರಾಗಿದ್ದರು. ಇಬ್ಬರು ಪರಸ್ಪರ ನಗು ನಗುತ್ತಲೇ ಕೋರ್ಟ್ ಗೆ ಹಾಜರಾಗಿದ್ದರು

ಅಭಿರಾಮ್‌ ಫ್ರೆಂಡ್ಸ್‌ ವತಿಯಿಂದ ಚಿಕ್ಕಮುಡ್ನೂರು ಶಾಲೆಗೆ ಟೇಬಲ್‌ ಚಯರ್‌ ವಿತರಣೆ

Posted by Vidyamaana on 2023-08-19 14:25:24 |

Share: | | | | |


ಅಭಿರಾಮ್‌ ಫ್ರೆಂಡ್ಸ್‌ ವತಿಯಿಂದ ಚಿಕ್ಕಮುಡ್ನೂರು ಶಾಲೆಗೆ ಟೇಬಲ್‌ ಚಯರ್‌ ವಿತರಣೆ

ಪುತ್ತೂರು: ಅಭಿರಾಮ್‌ ಫ್ರೆಂಡ್ಸ್‌ (ರಿ.) ಪುತ್ತೂರು ಇದರ ವತಿಯಿಂದ ಹಿರಿಯ ಪ್ರಾ. ಶಾಲೆ ಕೃಷ್ಣನಗರ ಹಾಗೂ ಕೇಪುಳು, ನೆಲ್ಲಿಕಟ್ಟೆ, ರೋಟರಿಪುರ, ಕೆಮ್ಮಾಯಿ ಗುಂಡಿಜಾಲು, ಬೀರ್ನಹಿತ್ಲು ಅಂಗನವಾಡಿಯ ಮಕ್ಕಳಿಗೆ ಸ್ವಾತಂತ್ರ್ಯ ದಿನಾಚರಣೆಯಂದು ಸಿಹಿತಿಂಡಿ ವಿತರಿಸಿದರು.

ಚಿಕ್ಕಮುಡ್ನೂರು ಹಿ.ಪ್ರಾ ಶಾಲೆಗೆ ಚಯರ್‌, ಟೇಬಲ್‌ ವಿತರಣೆ:

ಚಿಕ್ಕಮುಡ್ನೂರು ಹಿ.ಪ್ರಾ ಶಾಲೆಯ ಮಕ್ಕಳಿಗೆ ನಲಿ-ಕಲಿಗೆ ಬೇಕಾದಂತಹ‌ ಮೂರು ಟೇಬಲ್‌ ಹಾಗೂ 15 ಚಯರ್ ಗಳನ್ನು ಅಭಿರಾಮ್‌ ಫ್ರೆಂಡ್ಸ್‌ (ರಿ.)ನ  ಅಧ್ಯಕ್ಷರು ಮತ್ತು ಸದಸ್ಯರು ಶಾಲಾ ಮುಖ್ಯೋಪಾಧ್ಯಾಯಿನಿ ಪುಷ್ಪಲತಾರವರಿಗೆ ಹಸ್ತಾಂತರಿಸಿದರು. ಅಭಿರಾಮ್‌ ಫ್ರೆಂಡ್ಸ್‌ (ರಿ.)ನ ಅಧ್ಯಕ್ಷ ತೇಜಕುಮಾರ್‌ ಕೆಮ್ಮಾಯಿ, ಕಾರ್ಯದರ್ಶಿ ಸನತ್‌ ಸುವರ್ಣ, ಉಪಾಧ್ಯಕ್ಷರಾದ ಪ್ರಜೀತ್ ಮಂಜಲ್ಪಡ್ಪು, ಹರ್ಷಿತ್‌ ರಾಮ್‌ ಬಳ್ಳಾಲ್‌, ಖಜಾಂಜಿ ಜಯೇಶ್‌ ಹಾಗೂ ಸದಸ್ಯರಾದ ಶರತ್‌ ಕೇಪುಳು, ರಮೇಶ್‌ ಬಂಡಾಜೆ, ಭರತ್‌, ಚಿದಾನಂದ ಕೇಪುಳು, ರಾಜೇಶ್‌ ಜಿಡೆಕಲ್ಲು, ಕಾರ್ತಿಕ್‌ ಊರಮಾಲು, ಕಿಶೋರ್‌ ತಾರಿಗುಡ್ಡೆ, ಪ್ರದೀಪ್‌ ಕೇಪುಳು, ಅವಿನಾಶ್‌ ಶೆಟ್ಟಿ, ಅಭಿಷೇಕ್‌ ಶೆಟ್ಟಿ, ಕಾರ್ತಿಕ್ ಚಿಕ್ಕಪುತ್ತೂರು, ಶಾಲಾ ಎಸ್‌ಡಿಎಂಸಿ ಸದಸ್ಯರು, ಬನ್ನೂರು ಗ್ರಾ, ಪಂ ತಿಮ್ಮಪ್ಪ ಪೂಜಾರಿ, ರಾಘವೇಂದ್ರ ಅಂದ್ರಟ ಮಕ್ಕಳ ಪೋಷಕರು, ಊರುವರು ಉಪಸ್ಥಿತರಿದ್ದರು.

ಸೂರಿಕುಮೇರು : ರಸ್ತೆ ಬದಿಯ ಚರಂಡಿಗೆ ಪಲ್ಟಿ ಹೊಡೆದ ಬಾಳೆಹಣ್ಣು ಸಾಗಾಟದ ಪಿಕಪ್

Posted by Vidyamaana on 2023-10-04 09:41:44 |

Share: | | | | |


ಸೂರಿಕುಮೇರು : ರಸ್ತೆ ಬದಿಯ ಚರಂಡಿಗೆ ಪಲ್ಟಿ ಹೊಡೆದ ಬಾಳೆಹಣ್ಣು ಸಾಗಾಟದ ಪಿಕಪ್

ವಿಟ್ಲ : ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ  ಸೂರಿಕುಮೇರಿನಲ್ಲಿ ಪಿಕಪ್ ವಾಹನವೊಂದು ಪಲ್ಟಿ ಹೊಡೆದು ರಸ್ತೆ ಬದಿಯ ಚರಂಡಿಯ ಮೇಲೆ ನಿಂತ ಘಟನೆ  ಅ 03 ರಂದು ಬುಧವಾರ ಮುಂಜಾನೆ ನಡೆದಿದೆ.


    ಸೂರಿಕುಮೇರ್ ಬದ್ರಿಯಾ ಜುಮಾ ಮಸೀದಿ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯ ಹೊಸ ರಸ್ತೆಯಲ್ಲಿ ತಮಿಳುನಾಡು ನೋಂದಾಯಿತ ಬಾಳೆಹಣ್ಣು ಸಾಗಾಟದ ಪಿಕಪ್ ವಾಹನವು ಪಲ್ಟಿ ಹೊಡೆದು ರಸ್ತೆ ಬದಿಯ ಚರಂಡಿಯೊಳಗೆ ನಿಂತಿದೆ, ನಿದ್ದೆಯ ಮಂಪರಿನಲ್ಲಿ ಬೆಳಗ್ಗಿನ ಜಾವ ಅಪಘಾತ ಸಂಭವಿಸಿದ್ದು ಚಾಲಕ ಸಣ್ಣ ಪುಟ್ಟ ಗಾಯದೊಂದಿಗೆ ಪಾರಾಗಿದ್ದಾನೆ.



Leave a Comment: