ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯ

ಸುದ್ದಿಗಳು News

Posted by vidyamaana on 2024-07-24 16:52:02 |

Share: | | | | |


ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯ

ವದೆಹಲಿ : ಮಂಗಳೂರು- ಸುಬ್ರಹ್ಮಣ್ಯ ಮಧ್ಯೆ ಪ್ಯಾಸೆಂಜರ್ ರೈಲು ಆರಂಭಿಸಲು ಸಂಸತ್ತಿನಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯಿಸಿದರು.


ಈ ಹಿಂದೆ ಮಂಗಳೂರು- ಸುಬ್ರಹ್ಮಣ್ಯ ನಡುವೆ ಮೀಟರ್ ಗೇಜ್ ಹಳಿ ಇದ್ದಾಗ ಪ್ಯಾಸೆಂಜರ್ ರೈಲು ಓಡಾಟ ಇತ್ತು. ಬ್ರಾಡ್ ಗೇಜ್ ಹಳಿ ಮಾಡುವ ಸಲುವಾಗಿ 2005ರಲ್ಲಿ ಈ ರೈಲಿನ ಸಂಚಾರವನ್ನು ನಿಲ್ಲಿಸಲಾಗಿತ್ತು. ಆನಂತರ, ಬ್ರಾಡ್ ಗೇಜ್ ಹಳಿಯಾಗಿ ಪರಿವರ್ತನೆ ಮಾಡಲಾಗಿದೆ. ಅಂದು ಓಡುತ್ತಿದ್ದ ಪ್ಯಾಸೆಂಜರ್ ರೈಲು ಮಂಗಳೂರಿನಿಂದ ಕಬಕ- ಪುತ್ತೂರು ನಡುವೆ ಓಡಾಟ ನಡೆಸುತ್ತಿದ್ದು, ಅದನ್ನು ಸುಬ್ರಹ್ಮಣ್ಯದವರೆಗೆ ವಿಸ್ತರಣೆ ಮಾಡಬೇಕು.

ಮಂಗಳೂರು – ಸುಬ್ರಹ್ಮಣ್ಯ ಮಧ್ಯೆ ರೈಲು ಓಡಾಟವಾದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆ, ಕಾಲೇಜಿಗೆ ಹೋಗುವವರಿಗೆ ಉಪಯೋಗವಾಗಲಿದೆ. ಗ್ರಾಮಾಂತರ ಪ್ರದೇಶವಾದ ಸುಳ್ಯದಿಂದ ಮಂಗಳೂರಿಗೆ ಪ್ರತಿದಿನ ಓಡಾಟ ಮಾಡುವವರಿದ್ದಾರೆ. ಅವರಿಗೂ ಉಪಯುಕ್ತ ಆಗಲಿದೆ. ಇದು ಸೌತ್ ವೆಸ್ಟರ್ನ್ ರೈಲ್ವೇ ವಿಭಾಗದಲ್ಲಿದ್ದು, ನಮ್ಮ ಜಿಲ್ಲೆಯ ಒಳಗೆ ಸಂಚರಿಸುವ ಏಕೈಕ ಪ್ಯಾಸೆಂಜರ್ ರೈಲಾಗಿದೆ.


ಜನಸಾಮಾನ್ಯರ ಹಿತದೃಷ್ಟಿಯಿಂದ ಈ ರೈಲನ್ನು ಸುಬ್ರಹ್ಮಣ್ಯದವರೆಗೂ ವಿಸ್ತರಣೆ ಮಾಡಬೇಕು ಎಂದು ರೈಲ್ವೇ ಸಚಿವರನ್ನು ಮನವಿ ಮಾಡಿದ್ದಾರೆ. ಇದಕ್ಕುತ್ತರಿಸಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಸೇನೆಯಿಂದ ನಿವೃತ್ತಿ ಪಡೆದು ಸಂಸದರಾಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ಬಗ್ಗೆ ಗೌರವ ಹೊಂದಿದ್ದು, ರೈಲ್ವೇ ವಿಚಾರಗಳ ಬಗ್ಗೆ ಯಾವುದೇ ಮನವಿಯಿದ್ದರೂ ನನ್ನ ಕಚೇರಿಗೆ ಬಂದು ವೈಯಕ್ತಿಕವಾಗಿ ಚರ್ಚಿಸಬಹುದು. ಪರಿಹರಿಸಲು ಮುಕ್ತನಿದ್ದೇನೆ ಎಂದು ಹೇಳಿದರು.

 Share: | | | | |


ಗ್ರಾಪಂ ಉಪಚುನಾವಣೆಯ ಫಲಿತಾಂಶ ಪ್ರಕಟ

Posted by Vidyamaana on 2023-07-26 03:52:42 |

Share: | | | | |


ಗ್ರಾಪಂ ಉಪಚುನಾವಣೆಯ ಫಲಿತಾಂಶ ಪ್ರಕಟ

ಪುತ್ತೂರು: ವಿಧಾನಸಭೆ ಚುನಾವಣೆಯಲ್ಲಿ ವೀರೋಚಿತ ಸೋಲುಂಡು, ಗ್ರಾಮ ಪಂಚಾಯತ್ ಉಪಚುನಾವಣೆಯಲ್ಲಿ ಸತ್ವ ಪರೀಕ್ಷೆಗೆ ಇಳಿದ ಪುತ್ತಿಲ ಪರಿವಾರ ಜಯದ ಖಾತೆ ತೆರೆದಿದೆ. ಆರ್ಯಾಪು ಗ್ರಾಮ ಪಂಚಾಯತಿನ 2ನೇ ವಾರ್ಡಿಗೆ ನಡೆದ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಜಯಭೇರಿ ಬಾರಿಸುವ ಮೂಲಕ ಪುತ್ತಿಲ ಪರಿವಾರದ ರಾಜಕೀಯ ಆಟ ಶುರುವಾದಂತಾಗಿದೆ.

ಪುತ್ತಿಲ ಪರಿವಾರದ ಬೆಂಬಲಿತ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯ 499ಮತ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಗದೀಶ್ ಭಂಡಾರಿ ಗೆಣಸಿನಕುಮೇರು140 ಮತ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಿ. ಪುರುಷೋತ್ತಮ ಪ್ರಭು ಅಬ್ಬುಗದ್ದೆ.353. ಮತ ಪಡೆದುಕೊಂಡಿದ್ದಾರೆ. 1237 ಮತದಾರರನ್ನು ಹೊಂದಿರುವ ಆರ್ಯಾಪಿನ ವಾರ್ಡ್ 2ರಲ್ಲಿ 999 ಮತ ಚಲಾವಣೆಯಾಗಿತ್ತು.

ಆರ್ಯಾಪು ಗ್ರಾ.ಪಂ.ನ ಚುನಾವಣಾಧಿಕಾರಿಯಾಗಿದ್ದ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ ರಾವ್ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿದ್ದ ಪಿಡಿಓ ನಾಗೇಶ್ ಎಂ.ರವರ ನೇತೃತ್ವದಲ್ಲಿ ಮತ ಎಣಿಕೆ ಕಾರ್ಯ ನಡೆಯಿತು.

ಪಣಂಬೂರು ಎನ್ಎಂಪಿಟಿ ಬಂದರಿನಲ್ಲಿ ಸಿಐಎಸ್ಎಫ್ ವಿಭಾಗದ ಪಿಎಸ್ಐ ಜಾಕೀರ್ ಹುಸೇನ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

Posted by Vidyamaana on 2023-10-22 15:18:42 |

Share: | | | | |


ಪಣಂಬೂರು ಎನ್ಎಂಪಿಟಿ ಬಂದರಿನಲ್ಲಿ ಸಿಐಎಸ್ಎಫ್ ವಿಭಾಗದ ಪಿಎಸ್ಐ ಜಾಕೀರ್ ಹುಸೇನ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಮಂಗಳೂರು: ಪಣಂಬೂರು ಎನ್ಎಂಪಿಟಿ ಬಂದರಿನಲ್ಲಿ ಭದ್ರತೆ ನೋಡಿಕೊಳ್ಳುವ ಸಿಐಎಸ್ಎಫ್ ವಿಭಾಗದಲ್ಲಿ ಪಿಎಸ್ಐ ಆಗಿದ್ದ ಜಾಕೀರ್ ಹುಸೇನ್ (58) ತನ್ನ ಸರ್ವಿಸ್ ರಿವಾಲ್ವರ್ ನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಜಾಕೀರ್ ಹುಸೇನ್ ಮೂಲತಃ ರಾಯಚೂರು ಜಿಲ್ಲೆಯ ನಿವಾಸಿಯಾಗಿದ್ದು ನಿನ್ನೆ ರಾತ್ರಿ ಎನ್ಎಂಪಿಟಿ ಮೈನ್ ಗೇಟ್ ನಲ್ಲಿ ನೈಟ್ ಶಿಫ್ಟ್ ನಲ್ಲಿ ನಿಯೋಜಿತರಾಗಿದ್ದರು. ಇಂದು ಬೆಳಗ್ಗೆ 6.30ಕ್ಕೆ ತನ್ನ ನೈಟ್ ಶಿಫ್ಟ್ ಮುಗಿಸಿ ಬೇರೊಬ್ಬರಿಗೆ ಕೆಲಸ ವಹಿಸಿ ವಾಶ್ ರೂಮ್ ತೆರಳಿದ್ದರು. ಅಲ್ಲಿ ಇರುವಾಗಲೇ ತನ್ನ ಸರ್ವಿಸ್ ರಿವಾಲ್ವರ್ ನಲ್ಲಿ ತಲೆಗೆ ಗುರಿ ಇರಿಸಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಣಂಬೂರು ಠಾಣೆಯಲ್ಲಿ ಕೇಸು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಉಳ್ಳಾಲ : ಚೂರಿ ಇರಿದು ಯುವಕನ ಹತ್ಯೆ

Posted by Vidyamaana on 2023-12-14 09:45:19 |

Share: | | | | |


ಉಳ್ಳಾಲ : ಚೂರಿ ಇರಿದು ಯುವಕನ ಹತ್ಯೆ

ಉಳ್ಳಾಲ, ಡಿ.14: ನಡುರಾತ್ರಿ ಶಾಲೆ ಎದುರು ಬಿಯರ್ ಕುಡಿದು ಬಾಟಲಿಯನ್ನ ರಸ್ತೆಗೆ ಎಸೆದವರನ್ನ ಪ್ರಶ್ನಿಸಿದ ಯುವಕನನ್ನ ಇರಿದು ಕೊಲೆ ಮಾಡಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೊಲ್ಯ ಸಾರಸ್ವತ ಕಾಲನಿಯ ಜಾಯ್ ಲ್ಯಾಂಡ್ ಶಾಲೆ ಬಳಿ ಬುಧವಾರ ರಾತ್ರಿ ನಡೆದಿದೆ.


ಕೊಲ್ಯ ಸಾರಸ್ವತ ಕಾಲನಿ ಜಾಯ್ ಲ್ಯಾಂಡ್ ಶಾಲಾ ಬಳಿ ನಿವಾಸಿ ವರುಣ್ ಗಟ್ಟಿ(28)ಕೊಲೆಯಾದ ಯುವಕ. ಬುಧವಾರ ರಾತ್ರಿ 10.45ರ ವೇಳೆಗೆ ಜಾಯ್ ಲ್ಯಾಂಡ್ ಆಂಗ್ಲ ಮಾಧ್ಯಮ ಶಾಲೆಯ ಎದುರುಗಡೆಯ ಕಟ್ಟೆಯೊಂದರಲ್ಲಿ ಕುಳಿತು ಆರೋಪಿ ಸೂರಜ್ ಮತ್ತು ರವಿರಾಜ್ ಎಂಬವರು ಬಿಯರ್ ಕುಡಿದು ಬಾಟಲಿಯನ್ನ ರಸ್ತೆಗೆ ಎಸೆದಿದ್ದರೆನ್ನಲಾಗಿದೆ. ಈ ವೇಳೆ ತನ್ನ ಮನೆಯಲ್ಲಿದ್ದ ವರುಣ್ ಮತ್ತು ಆತನ ಸ್ನೇಹಿತ ಅಕ್ಷಯ್ ಶಾಲೆಯ ಮುಂದೆ ಬಿಯರ್ ಬಾಟಲಿ ಯಾಕೆ ಎಸೆಯುತ್ತೀರಾ ಎಂದು ಪ್ರಶ್ನಿಸಿದ್ದಾರೆ.  ವೇಳೆ ಇತ್ತಂಡಗಳ ನಡುವೆ ವಾಗ್ವಾದ, ತಳ್ಳಾಟ ನಡೆದಿದ್ದು ಸೂರಜ್, ವರುಣ್ ಬೆನ್ನಿಗೆ ಹರಿತವಾದ ಆಯುಧದಿಂದ ಇರಿದಿದ್ದಾನೆ. ಗಂಭೀರ ಗಾಯಗೊಂಡ ವರುಣ್ ಸಮೀಪದ ತನ್ನ ಮನೆ ಕಡೆ ನಡೆದು ಹೋಗಿದ್ದು ಆತನ ಸಹೋದರ ಶರಣ್ ಮತ್ತು ಸ್ನೇಹಿತರು ತಕ್ಷಣ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ವರುಣ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಘಟನಾ ಸ್ಥಳದ ರಸ್ತೆಯುದ್ದಕ್ಕೂ ವರಣ್ ರಕ್ತ ಹರಿದಿದೆ.

ಇರಿದು ಕೊಲೆ ಮಾಡಿದ ಸೂರಜ್ ಮತ್ತು ಆತನೊಂದಿಗಿದ್ದ ರವಿರಾಜ್ ಸಾರಸ್ವತ ಕಾಲೊನಿ ನಿವಾಸಿಗಳಾಗಿದ್ದು ಇಬ್ಬರನ್ನೂ ಕ್ಷಿಪ್ರವಾಗಿ ಉಳ್ಳಾಲ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರವಿರಾಜ್ ಸೋಮೇಶ್ವರ ಗ್ರಾಮ ಪಂಚಾಯತ್ ಮಾಜಿ ಸದಸ್ಯನಾಗಿದ್ದು ಸೂರಜ್ ಮರಳು ಸಾಗಿಸುವ ಲಾರಿ ಚಾಲಕನಾಗಿದ್ದಾನೆ.


ಮೃತ ವರುಣ್ ಮಂಗಳೂರು ಮೂಡಾದ ಕಮೀಷನರ್ ಅವರ ವಾಹನದ ಚಾಲಕನಾಗಿದ್ದರು. ಮೃತರು ತಂದೆ, ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ.

ಚಂದ್ರಯಾನ 3: ಮೊಬೈಲ್​​ನಲ್ಲೇ ಚಂದ್ರಯಾನ 3 ವೀಕ್ಷಿಸಲು ಇಲ್ಲಿದೆ ನೇರ ಲಿಂಕ್​

Posted by Vidyamaana on 2023-07-14 09:08:26 |

Share: | | | | |


ಚಂದ್ರಯಾನ 3: ಮೊಬೈಲ್​​ನಲ್ಲೇ ಚಂದ್ರಯಾನ 3 ವೀಕ್ಷಿಸಲು ಇಲ್ಲಿದೆ ನೇರ ಲಿಂಕ್​

Chandrayaan 3: ದೇಶದ ಜನತೆ ಕಾತುರದಿಂದ ಕಾಯುವ ಕ್ಷಣ ಇನ್ನಷ್ಟು ಸಮೀಪಿಸುತ್ತಿದೆ. ಚಂದ್ರನ ಅಂಗಳಲದಲ್ಲಿ ಅಧ್ಯಯನ ನಡೆಸುವ ಸಲುವಾಗಿ ಭಾರತವು ಮೂರನೇ ಬಾರಿಗೆ ಉಪಗ್ರಹಗಳನ್ನು ಕಳುಹಿಸಿಕೊಡ್ತಿದೆ. ಹೀಗಾಗಿ ಇಡೀ ವಿಶ್ವದ ಚಿತ್ತ ಆಂಧ್ರದ ಶ್ರೀಹರಿಕೋಟದ ಮೇಲೆ ನೆಟ್ಟಿದೆ.ಚಂದ್ರನ ಅಂಗಳಕ್ಕೆ ರಾಕೆಟ್​ ಉಡಾವಣೆ ಮಾಡುವ ಇಸ್ರೋದ ಪ್ರಯತ್ನ ವಿಫಲವಾಗಿತ್ತು. ಅಂದು ಇಸ್ರೋ ಮುಖ್ಯಸ್ಥ ಶಿವನ್​ ಜೊತೆಯಲ್ಲಿ ಇಡಿ ದೇಶವೇ ಭಾವುಕವಾಗಿತ್ತು. ಆದರೆ ಇಂದು ಚಂದ್ರಯಾನ 3 ಖಂಡಿತವಾಗಿಯೂ ಯಶಸ್ವಿಯಾಗುತ್ತೆ ಎಂಬ ನಂಬಿಕೆಯಲ್ಲಿ ಇಸ್ರೋ ಇದೆ.



ಇನ್ನು ಚಂದ್ರಯಾನ 3ರ ಉಡಾವಣೆಯನ್ನು ನೀವು ಮೊಬೈಲ್​ನಲ್ಲಿಯೇ ವೀಕ್ಷಿಸಬಹುದಾಗಿದೆ. The launch can be http://isro.gov.in ಹಾಗೂ https://facebook.com/ISRO ಮತ್ತು https://youtube.com/watch?v=q2ueCg9bvvQ ನಲ್ಲಿ ನೇರವಾಗಿ ಚಂದ್ರಯಾನವನ್ನು ವೀಕ್ಷಣೆ ಮಾಡಬಹುದಾಗಿದೆ .ಸರಿಯಾಗಿ 2:35ಕ್ಕೆ ಶ್ರೀಹರಿಕೋಟದಿಂದ ರಾಕೆಟ್ ಉಡಾವಣೆಯಾಗಲಿದೆ.

ಪುತ್ತೂರು : ಸೂತ್ರಬೆಟ್ಟು ಟ್ರಾನ್ಸ್ಫಾರ್ಮರ್ ಬಳಿ ಅಗ್ನಿ ಅವಘಡ

Posted by Vidyamaana on 2024-02-13 07:28:10 |

Share: | | | | |


ಪುತ್ತೂರು : ಸೂತ್ರಬೆಟ್ಟು ಟ್ರಾನ್ಸ್ಫಾರ್ಮರ್ ಬಳಿ ಅಗ್ನಿ ಅವಘಡ

ಪುತ್ತೂರು : ಟ್ರಾನ್ಸ್ಫಾರ್ಮರ್ ಬಳಿ ಬೆಂಕಿ ಅವಘಡ ಸಂಭವಿಸಿದ ಘಟನೆ ಸೂತ್ರಬೆಟ್ಟು ಬಳಿ ನಡೆದಿದೆ.ಸೂತ್ರಬೆಟ್ಟು ಬಳಿ ರಸ್ತೆ ಬದಿಯ ಟ್ರಾನ್ಸ್ಫಾರ್ಮರ್ ನ ಹತ್ತಿರ ಬೆಂಕಿ ಅವಘಡ ಸಂಭವಿಸಿದ್ದು, ಹುಲ್ಲುಗಾವಲು ಬೆಂಕಿಗಾಹುತಿಯಾಗಿದೆ.

ತಕ್ಷಣ ಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಿರ್ವಹಿಸಿದರು.

BGF ಬಪ್ಪಳಿಗೆ ಗ್ಲೋಬಲ್ ಫ್ರೆಂಡ್ಸ್ ವತಿಯಿಂದ ಯುವ ವಿದ್ವಾಂಸ ಬಪ್ಪಳಿಗೆ ಶಫೀಕ್ ಫೈಝಿರವರಿಗೆ ಹುಟ್ಟೂರ ಸನ್ಮಾನ

Posted by Vidyamaana on 2023-09-29 11:28:59 |

Share: | | | | |


BGF ಬಪ್ಪಳಿಗೆ ಗ್ಲೋಬಲ್ ಫ್ರೆಂಡ್ಸ್ ವತಿಯಿಂದ ಯುವ ವಿದ್ವಾಂಸ ಬಪ್ಪಳಿಗೆ ಶಫೀಕ್ ಫೈಝಿರವರಿಗೆ  ಹುಟ್ಟೂರ ಸನ್ಮಾನ

   ಪುತ್ತೂರು : ತೋಡಾರು ಶಂಸುಲ್ ಉಲಮಾ ಅರಬಿಕ್  ಕಾಲೇಜಿನ ಸಂತತಿ ಬಪ್ಪಳಿಗೆ ನೂರುಲ್ ಹುದಾ ಮದ್ರಸದ ಹಳೆ ವಿದ್ಯಾರ್ಥಿ ಪಟ್ಟಿಕ್ಕಾಡ್ ಜಾಮಿಆಃ ನೂರಿಯದಲ್ಲಿ 2022 ನೇ ಸಾಲಿನ ಫಿಕ್ಹ್ ವಿಭಾಗದಲ್ಲಿ ಪ್ರಥಮ  ಸ್ಥಾನ ಪಡೆದು ಫೈಝಿ ಅಲ್ ಮಅಬರಿ  ಪದವಿ ಪಡೆದ ಮುಹಮ್ಮದ್ ಶಫೀಕ್ ರನ್ನು   ಬಪ್ಪಳಿಗೆಯಲ್ಲಿ ನಡೆದ ಮೀಲಾದ್ ಸಮಾರಂಭದಲ್ಲಿ ಅದ್ದೂರಿಯಾಗಿ ಸನ್ಮಾನಿಸಲಾಯಿತು.

    ಸ್ಥಳೀಯ ಸಾಮಾಜಿಕ ಸೇವಾ ಸಂಘಟನೆಯಾದ  *BGF ಬಪ್ಪಳಿಗೆ ಗ್ಲೋಬಲ್ ಫ್ರೆಂಡ್ಸ್* ಈ ಸನ್ಮಾನವನ್ನು ಜಮಾಅತರ ಪರವಾಗಿ, ಮಸೀದಿ ವಠಾರದಲ್ಲಿ ನಡೆದ ಮೀಲಾದ್ ಕಾರ್ಯಕ್ರಮದಲ್ಲಿ ಹಮ್ಮಿಕೊಂಡಿತ್ತು.

ಶಾಲು ಹೊದಿಸಿ,ಐದು ಸಾವಿರ ರೂಪಾಯಿಯನ್ನೊಳಗೊಂಡ ನಗದು, ಸನ್ಮಾನ ಫಲಕ ಹಾಗೂ ಅಮೂಲ್ಯ ಗ್ರಂಥಗಳನ್ನು ನೀಡಿ ಯುವ ವಿದ್ವಾಂಸನನ್ನು ಸಂಘಟಕರು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಜಮಾಅತ್ ಸಮಿತಿ ಪದಾಧಿಕಾರಿಗಳು, ಅನ್ಸಾರುಲ್ ಇಸ್ಲಾಂ ಯುವಕ ಸಮಿತಿ ಕಾರ್ಯಕರ್ತರು, ಬಪ್ಪಳಿಗೆ ಈದ್ ಮಿಲಾದ್ ಸಮಿತಿಯ ಸಾರಥಿಗಳು, ಮಸೀದಿ ಮದ್ರಸದ ಉಸ್ತಾದರು ಹಾಗೂ ಜಮಾಅತ್ ಬಾಂಧವರು ಉಪಸ್ಥಿತರಿದ್ದರು.

      ಹಿರಿಯ ವಿದ್ವಾಂಸರಾಗಿದ್ದ ಮರ್ಹೂಂ ಅಬ್ದುಲ್ ಖಾದಿರ್ ಫೈಝಿ ಬಪ್ಪಳಿಗೆ ಹಾಗೂ ಝೈನಬ ದಂಪತಿಗಳ ಗಂಡು ಮಕ್ಕಳಲ್ಲಿ ಕಿರಿಯವರೇ ಮುಹಮ್ಮದ್ ಶಫೀಕ್.

     ಮಕ್ಕಳಿಗೆ ಬೇಕಾದ ಧಾರ್ಮಿಕ ಮತ್ತು ಲೌಕಿಕ ವಿದ್ಯಾಭ್ಯಾಸಗಳೆರಡನ್ನೂ ನೀಡಿ ಜೀವನದ ಉತ್ತಮ ದಾರಿಯನ್ನು ಕಂಡುಕೊಳ್ಳುವಲ್ಲಿ ಮಕ್ಕಳಿಗೆ ಸರಿಯಾದ ದಾರಿ ತೋರುವಲ್ಲಿ ಮರ್ಹೂಂ ಅಬ್ದುಲ್ ಖಾದರ್ ಫೈಝಿ ಉಸ್ತಾದರು ಯಶಸ್ವಿಯಾಗಿದ್ದಾರೆ.ಗಂಡು ಮಕ್ಕಳ ಪೈಕಿ ಮೂರು ಮಂದಿ ವಿದೇಶ ಉದ್ಯೋಗದಲ್ಲಿದ್ದು ಕಿರಿಯ ಮಗನಾದ ಶಫೀಕ್ ನನ್ನು ಓರ್ವ ಧಾರ್ಮಿಕ ವಿದ್ವಾಂಸ(ಆಲಿಂ)ನನ್ನಾಗಿ ಮಾಡಬೇಕೆಂದು ನನ್ನ ಆಸೆ ಎಂದು ಬಪ್ಪಳಿಗೆ ಮದ್ರಸದ ಒಂದನೇ ತರಗತಿಗೆ ದಾಖಲು ಮಾಡುವಾಗ ಹೇಳಿದ್ದರು.

   ಮದ್ರಸದ ಒಂದನೇ ತರಗತಿಯಲ್ಲಿ ಆತೂರು ಕುದ್ಲೂರಿನ  ನಝೀರ್ ಮದನಿ ಉಸ್ತಾದರು ಅಧ್ಯಾಪಕರಾಗಿದ್ದು, ಒಂದನೇ ತರಗತಿಯ ಅಂತಿಮ ಪರೀಕ್ಷೆಯಲ್ಲಿ 

 ತ್ರಪ್ತಿ ದಾಯಕ ಅಂಕಗಳು ಶಫೀಕ್ ಪಡೆದಿಲ್ಲ ಎಂಬ ಮಾಹಿತಿಯನ್ನು ಅವರು ಅಂದು  ಮದ್ರಸಾ ಮುಖ್ಯೋಪಾಧ್ಯಾಯರಾಗಿದ್ದ ನನ್ನ ಗಮನಕ್ಕೆ ತಂದಾಗ ಮರ್ಹೂಂ ಫೈಝಿ ಉಸ್ತಾದರಿಗೆ ಈ ಮಾಹಿತಿಯನ್ನು ನಾನು ತಿಳಿಸಿ,ಇನ್ನೊಂದು ವರ್ಷ ಒಂದನೇ ತರಗತಿಯಲ್ಲೇ ಕಲಿಯುವುದಾದರೆ ಮುಂದಿನ  ಭವಿಷ್ಯ ಒಳ್ಳೆಯ ದಾಗಲಿದೆ ಎಂದಾಗ ,ಅವನ ಹಿತಕ್ಕಾಗಿ ನೀವು ಕೈಗೊಳ್ಳುವ ಎಲ್ಲಾ ಕ್ರಮಗಳಿಗೆ ನಾನು ಬದ್ಧ ಎಂದರು.

   ಅಲ್ಲಿಂದ ಮತ್ತೆ ಪ್ರಾರಂಭವಾಯಿತು,ಶಫೀಕನ ಕಲಿಕೆಯ ಛಲ.ಮುಂದಿನ ಎಲ್ಲಾ ತರಗತಿಗಳಲ್ಲೂ ಪ್ರಥಮನಾಗಿ,ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ರೇಂಜ್ ಮಟ್ಟದಲ್ಲಿಯೇ ಉನ್ನತ ಸಾಧನೆಗೈದು, ಉತ್ತಮ ನಡವಳಿಕೆಯ ವಿದ್ಯಾರ್ಥಿ ಯಾಗಿ ಗುರುಹಿರಿಯರ ಸಂಪೂರ್ಣ ತೃಪ್ತಿ ಗಳಿಸಿದ್ದ.

    ಹತ್ತನೇ ತರಗತಿಯ ಬಳಿಕ ತಂದೆಯ ಅಭಿಲಾಷೆಯಂತೆ ಜಾಮಿಆಃ ನೂರಿಯಾದ ಸಂತತಿಯಾಗಿ ,ಧರ್ಮ ಪ್ರಬೋಧನೆಯ ಕುಡಿಯಾಗಬೇಕೆಂದು ಪ್ರತಿಷ್ಠಿತ ತೋಡಾರು ಶಂಸುಲ್ ಉಲಮಾ ಅರಬಿಕ್ ಕಾಲೇಜಿನಲ್ಲಿ ಪ್ರವೇಶಾತಿ ಪಡೆದ.(ವಿದ್ಯಾರ್ಥಿಯಾಗಿದ್ದ ಈ ಮಗನೇ ತಂದೆಯ ಜನಾಝ ನಮಾಝಿಗೆ ನೇತ್ರತ್ವವನ್ನು ನೀಡಿದ್ದರು.)ಕಾಲೇಜಿನ  ಅಧ್ಯಯನ ವರ್ಷಗಳನ್ನು 

ಪ್ರತಿಭಾನ್ವಿತನಾಗಿ ಪೂರೈಸಿ, ಜಾಮಿಆಃ ನೂರಿಯಾದಲ್ಲಿ ಸೇರಿ, ಅಧ್ಯಯನಕ್ಕೆ   ಫಿಖ್ಹ್ ವಿಭಾಗವನ್ನು ಆಯ್ಕೆ ಮಾಡಿ,ಅಂತಿಮ ಪರೀಕ್ಷೆಯಲ್ಲಿ ಘಟಾನುಘಟಿ ವಿದ್ಯಾರ್ಥಿ ಗಳೆಡೆಯಲ್ಲಿ  ಪ್ರಥಮ ಸ್ಥಾನವನ್ನು ಪಡೆದು ಮಹ್ಬರಿ ಫೈಝಿ ಪಟ್ಟ ಅಲಂಕರಿಸಿ ಬಪ್ಪಳಿಗೆಗೆ ಕೀರ್ತಿ ತಂದ ಶಫೀಕ ರನ್ನು ಅಭಿನಂದಿಸಿ ಈ ಸನ್ಮಾನವನ್ನು ನೀಡಲಾಯಿತು.

ಪ್ರಸ್ತುತ ಶಫೀಕ್ ಫೈಝಿಯವರು ಕಿನ್ಯದ ವಾದೀ ತೈಬ ಅಕಾಡೆಮಿಯಲ್ಲಿ ಮುದರ್ರಿಸರಾಗಿ ಸೇವೆ ಸಲ್ಲಿಸುತ್ತಿದ್ದು,ಮುಂದಿನ ಜೀವನ ಇನ್ನಷ್ಟು ಬೆಳಗಿ ಅವರ ವಿದ್ವತ್ ಸಂಪತ್ತು ಸಮುದಾಯಕ್ಕೆ ಬೆಳಕಾಗಲಿ...ಆಮೀನ್

Recent News


Leave a Comment: