ಶಿರೂರು ಭೂಕುಸಿತ ದುರಂತ : ಪತ್ತೆಯಾಯ್ತು ಎಂಟನೇ ಮೃತದೇಹ

ಸುದ್ದಿಗಳು News

Posted by vidyamaana on 2024-07-23 18:35:28 |

Share: | | | | |


ಶಿರೂರು ಭೂಕುಸಿತ ದುರಂತ : ಪತ್ತೆಯಾಯ್ತು ಎಂಟನೇ ಮೃತದೇಹ

ಕಾರವಾರ: ಶಿರೂರು ಭೂಕುಸಿತ ಸ್ಥಳದಲ್ಲಿ 8 ದಿವಸದ ಬಳಿಕ ಮತ್ತೊಂದು ಮೃತದೇಹ ಪತ್ತೆಯಾಗಿದೆ. ಈ ಮೂಲಕ 8ನೇ ಮೃತದೇಹ ಸಿಕ್ಕಂತಾಗಿದೆ. ಈ ನಡುವೆ ಕೇರಳದ ಲಾರಿ ಚಾಲಕ ಅರ್ಜುನ್‌ ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. 

ಮಂಗಳವಾರ ಬೆಳಗ್ಗೆ ಗುಡ್ಡ ಕುಸಿತದಿಂದ ನಾಪತ್ತೆಯಾಗಿದ್ದ ಮಹಿಳೆ ಸಣ್ಣಿ ಹನ್ಮಂತ ಗೌಡ (57) ಸಾವನ್ನಪ್ಪಿದ್ದು, ಮೃತದೇಹ ದೊರೆತಿದೆ. ಗಂಗಾವಳಿ ನದಿಯ ಗಂಗೆಕೊಳ್ಳ ಸಮೀಪ ಅವರ ಶವ ಪತ್ತೆಯಾಗಿದೆ. ಶಿರೂರು ಗುಡ್ಡ ಕುಸಿತದಿಂದಾಗಿ ಉಳುವರೆ ಗ್ರಾಮದಲ್ಲಿ ಮನೆ ಕುಸಿತವಾಗಿ ಸಣ್ಣಿ ಹನ್ಮಂತ ಗೌಡ ಅವರು ಕಣ್ಮರೆಯಾಗಿದ್ದರು. ಇನ್ನೂ ಅರ್ಜುನ್‌ ಸಹಿತ ಮೂವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಸ್ಥಳದಲ್ಲಿ NDRF, SDRF, ಮಿಲಿಟರಿ ಕಾರ್ಯಪಡೆಯಿಂದ ಶೋಧ ಕಾರ್ಯ ಮುಂದುವರೆದಿದೆ. 

ಕೇರಳ ಮಾಧ್ಯಮಗಳ ಕವರೇಜ್‌ 

ಸದ್ಯ ಕರ್ನಾಟಕದ ಉತ್ತರ ಕನ್ನಡದಲ್ಲಾದ ಭೂಕುಸಿತ ವರದಿಯನ್ನ ಕನ್ನಡಿಗರು ಕೂಡಾ ಮಲಯಾಳಂ ಸುದ್ದಿವಾಹಿನಿಗಳಲ್ಲಿ ವೀಕ್ಷಿಸುವಂತಾಗಿದೆ. ಕೇರಳದ ಪ್ರಮುಖ ರಾಜ್ಯ ಮಟ್ಟದ ವಾಹಿನಿಗಳು ಕಳೆದ 4 ದಿನಗಳಿಂದಲೂ ಉತ್ತರ ಕನ್ನಡದಲ್ಲಿ ಬೀಡುಬಿಟ್ಟಿವೆ. ಅರ್ಜುನ್‌ ಶೋಧ ಕಾರ್ಯಾಚರಣೆಗೆ ಹೆಚ್ಚಿನ ಒತ್ತಡ ಏರುತ್ತಿದೆ. ಜೊತೆಗೆ ಕೇರಳದ ನಾಗರಿಕ ಸುರಕ್ಷತಾ ತಂಡಗಳು ಕೂಡಾ ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲಿ ಕೇರಳದಿಂದ ಶಿರೂರಿಗೆ ತಂಡವಾಗಿ ಆಗಮಿಸಿವೆ

 Share: | | | | |


ಪುತ್ತೂರು ಶಾಸಕರ ಜನಪರ ಕಾಳಜಿ - ಎ.23ರ ಪದ್ಮರಾಜ್ ಚುನಾವಣಾ ರೋಡ್ ಶೋ ರದ್ದು

Posted by Vidyamaana on 2024-04-22 17:13:52 |

Share: | | | | |


ಪುತ್ತೂರು ಶಾಸಕರ ಜನಪರ ಕಾಳಜಿ - ಎ.23ರ ಪದ್ಮರಾಜ್ ಚುನಾವಣಾ ರೋಡ್ ಶೋ ರದ್ದು

ಪುತ್ತೂರು: ಏ.23ರಂದು ಕಾಂಗ್ರೆಸ್ ನ ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಪರ ಪುತ್ತೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ರೋಡ್ ಶೋ ಚುನಾವಣಾ ರ್ಯಾಲಿಯನ್ನು ಸಾರ್ವಜನಿಕರ ಹಿತದೃಷ್ಠಿಯಿಂದ ರದ್ದುಗೊಳಿಸಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರೋಡ್ ಶೋ ನಡೆಸುವುದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ. ಇದರಿಂದ ವಾಹನಗಳಲ್ಲಿ ವಿವಿಧ ಕಡೆ ತೆರಳುವ ಜನರಿಗೆ ತೊಂದರೆಯಾಗಲಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತೆರಳಲು ತೊಂದರೆಯಾಗಲಿದ್ದು, ದೈನಂದಿನ ವ್ಯವಹಾರಕ್ಕಾಗಿ ನಗರಕ್ಕೆ ಬರುವ ಜನಸಾಮಾನ್ಯರಿಗೂ ತೊಂದರೆಯಾಗಲಿದೆ ಎಂದು ಏ.23ರಂದು ನಡೆಸಲು ಉದ್ದೇಶಿಸಿದ್ದ ರೋಡ್ ಶೋ ಪ್ಯಾಲಿಯನ್ನು ರದ್ದುಗೊಳಿಸಲಾಗಿದೆ.

ಪುತ್ತೂರು : ಸುಲ್ತಾನ್ ಡೈಮಂಡ್ಸ್ - ಗೋಲ್ಡ್ ಮಳಿಗೆಗೆ ಶಾಸಕ ಅಶೋಕ್‌ ಕುಮಾ‌ರ್ ರೈ ಭೇಟಿ

Posted by Vidyamaana on 2024-03-21 09:50:58 |

Share: | | | | |


ಪುತ್ತೂರು : ಸುಲ್ತಾನ್ ಡೈಮಂಡ್ಸ್ - ಗೋಲ್ಡ್ ಮಳಿಗೆಗೆ ಶಾಸಕ ಅಶೋಕ್‌ ಕುಮಾ‌ರ್ ರೈ ಭೇಟಿ

ಪುತ್ತೂರು: ಬಹುಭಾಷಾ ತಾರೆ ಪ್ರಿಯಾಮಣಿ ಅವರನ್ನು ಪುತ್ತೂರಿಗೆ ಕರೆಸಿಕೊಂಡು ಅದ್ದೂರಿಯಾಗಿ ಪುತ್ತೂರಿನ ಜನರ ಸೇವೆಗೆ ತೆರೆದುಕೊಂಡ ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಮಳಿಗೆಗೆ ಶಾಸಕ ಅಶೋಕ್‌ ಕುಮಾ‌ರ್ ರೈ ಭೇಟಿ ನೀಡಿದರು.

ಉದ್ಘಾಟನೆ ಸಂದರ್ಭ ಅಧಿವೇಶನ ನಡೆಯುತ್ತಿದ್ದ ಕಾರಣ ಭಾಗವಹಿಸಲು ಅಸಾಧ್ಯವಾಗಿತ್ತು. ಆದ್ದರಿಂದ ಇದೀಗ ಮಳಿಗೆಗೆ ಭೇಟಿ ನೀಡಿದರು.

ವಜ್ರ ಮತ್ತು ಚಿನ್ನದ ಆಭರಣಗಳ ವಿವಿಧ ವಿನ್ಯಾಸಗಳನ್ನು ಕಂಡ ಶಾಸಕ ಅಶೋಕ್ ಕುಮಾರ್ ರೈ ಅವರು ಮಳಿಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬ್ರಾಂಚ್ ಮ್ಯಾನೇಜರ್ ಕೆ.ಎಸ್ ಮುಸ್ತಫಾ ಕಕ್ಕಿಂಜೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಹಮ್ರಾಝ್, ಪವನ್, ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕೈಗೆ ರೈ ಫಿಕ್ಸ್ | ಪುತ್ತೂರು ಮಹಿಳಾ ಕಾಂಗ್ರೆಸಿನ ನಿಗೂಢ ನಡೆ

Posted by Vidyamaana on 2023-03-21 16:40:15 |

Share: | | | | |


ಕೈಗೆ ರೈ ಫಿಕ್ಸ್ | ಪುತ್ತೂರು ಮಹಿಳಾ ಕಾಂಗ್ರೆಸಿನ ನಿಗೂಢ ನಡೆ

ಪುತ್ತೂರು: ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಪುತ್ತೂರು ಕಾಂಗ್ರೆಸ್ ಅಭ್ಯರ್ಥಿಯಾಗಿ ಅಶೋಕ್ ಕುಮಾರ್ ರೈ ಅವರ ಹೆಸರನ್ನು ಎಐಸಿಸಿ ಅಂತಿಮಗೊಳಿಸಿದೆ ಎಂಬ ಸುದ್ದಿ ಲಭ್ಯವಾಗಿದೆ.

ಇದರ ನಡುವೆ ಪುತ್ತೂರು ಮಹಿಳಾ ಕಾಂಗ್ರೆಸ್ ಘಟಕ ಪತ್ರಿಕಾಗೋಷ್ಠಿ ನಡೆಸಿದ್ದು, ನಿಗೂಢ ಹೆಜ್ಜೆಯೊಂದನ್ನು ಮುಂದಿಟ್ಟಿದೆ. ಇದು ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿಗೆ ಎಡೆ ನೀಡಿದೆ.

ಅಶೋಕ್ ಕುಮಾರ್ ರೈ ಅವರು ಕಾಂಗ್ರೆಸ್ ಸೇರ್ಪಡೆಯ ಬಳಿಕ ವಿಧಾನಸಭಾ ಕ್ಷೇತ್ರದ ತುಂಬಾ ಓಡಾಡುತ್ತಿದ್ದಾರೆ. ಇದಕ್ಕಾಗಿ ಸಾಕಷ್ಟು ಸಮಯವನ್ನು ನೀಡುತ್ತಿದ್ದಾರೆ. ಇದರ ಹಿಂದಿನ ಮರ್ಮ ಪಕ್ಷದ ಆಕಾಂಕ್ಷಿ ಅಭ್ಯರ್ಥಿಗಳಿಗೆ ತಿಳಿಯದ ವಿಚಾರವೇನಲ್ಲ. ಈ ನಡುವೆ ಮಂಗಳವಾರ ಪುತ್ತೂರು ಮಹಿಳಾ ಕಾಂಗ್ರೆಸ್ ಘಟಕ ಪತ್ರಿಕಾಗೋಷ್ಠಿ ನಡೆಸಿ, ಶಕುಂತಳಾ ಶೆಟ್ಟಿ ಅವರನ್ನೇ ಶಾಸಕ ಅಭ್ಯರ್ಥಿಯಾಗಿ ಘೋಷಿಸಿ ಎಂದು ಆಗ್ರಹಿಸಿದೆ. ಅಶೋಕ್ ಕುಮಾರ್ ರೈ ಅಭ್ಯರ್ಥಿಯಾಗಿ ಆಯ್ಕೆ ಅಂತಿಮ ಎಂಬ ಸುದ್ದಿ ಅದರ ಬೆನ್ನಲ್ಲೇ ಹೊರಬಿದ್ದಿರುವ ಕಾರಣ, ಮಹಿಳಾ ಕಾಂಗ್ರೆಸಿನ ಆಗ್ರಹದ ಹಿಂದಿನ ನಿಗೂಢ ನಡೆ ಬೇರೆಯೇ ಹೊಳಹನ್ನು ತೋರಿಸುವಂತಿದೆ.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ಅರಸ್, ಉಪಾಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ಖಜಾಂಜಿ ಶುಭ ಮಾಲಿನಿ ಮಲ್ಲಿ, ಕೆಪಿಸಿಸಿ ಕಾರ್ಯದರ್ಶಿ ಸಾಹಿರಾ ಬಾನು, ವಿಲ್ಮಾ ಗೋನ್ಸಾಲ್ವಿಸ್ ಅವರು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಪರ ಬ್ಯಾಟಿಂಗ್ ಬೀಸಿದ್ದಾರೆ.

ಶಕುಂತಳಾ ಶೆಟ್ಟಿ ಅವರಿಗೆ ಮುಂದೆ ಅವಕಾಶ ಸಿಗಬಹುದು ಎನ್ನುವ ನಿರೀಕ್ಷೆ ಇಲ್ಲ. ಆದ್ದರಿಂದ ಈ ಬಾರಿ ಟಿಕೇಟ್ ನೀಡುವಂತೆ ಕೇಳಿಕೊಳ್ಳುತ್ತಿದ್ದೇವೆ. ಮಹಿಳಾ ಮತದಾರರ ಒಲವು ಶಕುಂತಳಾ ಶೆಟ್ಟಿ ಅವರ ಪರವಾಗಿ ಇರುವುದರಿಂದ, ಗೆಲುವು ನಿಶ್ಚಿತ ಎಂದಿದ್ದಾರೆ.

ಎರಡು ಬಾರಿ ಶಾಸಕರಾಗಿದ್ದ ಶಕುಂತಳಾ ಶೆಟ್ಟಿ ಅವರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದವರು. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿಯೂ ಗುರುತಿಸಿಕೊಂಡವರು. ಜನರ ಸಮಸ್ಯೆಗಳನ್ನು ಬಹಳ ಹತ್ತಿರದಿಂದ ಕಂಡು, ಅದನ್ನು ಬಗೆಹರಿಸಿದವರು. ಆದ್ದರಿಂದ ಅವರು ಮತ್ತೊಮ್ಮೆ ಶಾಸಕರಾಗಿ ಆಯ್ಕೆ ಆಗಬೇಕು. ಅವರು ಶಾಸಕ ಅಭ್ಯರ್ಥಿಯಾದರೆ ಖಂಡಿತಾ ಜಯ ದೊರಕುತ್ತದೆ. ಆದ್ದರಿಂದ ಅವರನ್ನು ಅಭ್ಯರ್ಥಿಯಾಗಿ ಘೋಷಿಸುವಂತೆ ಆಗ್ರಹಿಸಿದ್ದಾರೆ.





ಲೋಕಸಭೆ ಚುನಾವಣೆ | ನಾನು ಈಗಲೂ ಟಿಕೆಟ್‌ ಆಕಾಂಕ್ಷಿ: ಸದಾನಂದ ಗೌಡ

Posted by Vidyamaana on 2024-03-10 07:29:27 |

Share: | | | | |


ಲೋಕಸಭೆ ಚುನಾವಣೆ | ನಾನು ಈಗಲೂ ಟಿಕೆಟ್‌ ಆಕಾಂಕ್ಷಿ: ಸದಾನಂದ ಗೌಡ

ಬೆಂಗಳೂರು: ನಾನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್‌ ಆಕಾಂಕ್ಷಿಯಾಗಿದ್ದೇನೆ. ನನಗೇ ಟಿಕೆಟ್‌ ಸಿಗುವ ವಿಶ್ವಾಸವಿದೆ ಎಂದು ಈ ಕ್ಷೇತ್ರದ ಹಾಲಿ ಸಂಸದ ಡಿ.ವಿ. ಸದಾನಂದ ಗೌಡ ಹೇಳಿದರು.


ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ಬೇರೆಯವರಿಗೆ ಟಿಕೆಟ್‌ ಕೊಡಿ ಎಂದು ಹಿಂದೆ ಹೇಳಿದ್ದೆ.ಕ್ಷೇತ್ರದ ಎಲ್ಲ ಶಾಸಕರು ಮತ್ತು ಮುಖಂಡರು ನೀವೇ ಅಭ್ಯರ್ಥಿಯಾಗಬೇಕು ಎಂದು ಒತ್ತಾಯ ಮಾಡಿದ್ದರು. ಆ ಕಾರಣದಿಂದ ಟಿಕೆಟ್‌ ಬಯಸಿದ್ದೇನೆ ಎಂದರು.


ಬಿಜೆಪಿ ನನಗೆ ಎಲ್ಲವನ್ನೂ ಕೊಟ್ಟಿದೆ. ಬಿ.ಎಸ್‌. ಯಡಿಯೂರಪ್ಪ ಅವರ ನಂತರದಲ್ಲಿ ನನಗೆ ಹೆಚ್ಚು ಅವಕಾಶಗಳನ್ನು ನೀಡಿದೆ. ಆದರೆ, ಈಗ ಟಿಕೆಟ್‌ ಕೊಡದೇ ಇದ್ದರೆ ಸ್ವಲ್ಪ ನೋವಾಗುತ್ತದೆ ಎಂದು ಹೇಳಿದರು.

ಕದ್ದ ಮೊಬೈಲ್‌ಗಳಿಗೆ ಫ್ಲ್ಯಾಶ್ ಮಾಡಿಕೊಡಲು ನಿರಾಕರಿಸಿದ ಯುವಕನಿಗೆ ಹಲ್ಲೆ: ಸಾದಿಯ ಯ ಗ್ಯಾಂಗ್ ಅರೆಸ್ಟ್

Posted by Vidyamaana on 2023-10-04 15:48:47 |

Share: | | | | |


ಕದ್ದ ಮೊಬೈಲ್‌ಗಳಿಗೆ ಫ್ಲ್ಯಾಶ್ ಮಾಡಿಕೊಡಲು ನಿರಾಕರಿಸಿದ ಯುವಕನಿಗೆ ಹಲ್ಲೆ: ಸಾದಿಯ ಯ ಗ್ಯಾಂಗ್ ಅರೆಸ್ಟ್

ಬೆಂಗಳೂರು: ಕದ್ದ ಮೊಬೈಲ್​​ಗಳಿಗೆ ಫ್ಲ್ಯಾಶ್ ಮಾಡಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆಗೈದ ಆರೋಪದಡಿ ಯುವತಿ ಸೇರಿದಂತೆ ಮೂವರು ಆರೋಪಿಗಳನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೆಗ್ಗಡೆ ನಗರದ ನಿವಾಸಿ ಇಮ್ರಾನ್ ಉಲ್ಲಾಖಾನ್ ಎಂಬಾತ ಹಲ್ಲೆಗೊಳಗಾಗಿದ್ದಾನೆ. ಈತ ನೀಡಿದ ದೂರಿನ ಮೇರೆಗೆ ಸಾದಿಯಾ, ಸೊಹೈಲ್ ಹಾಗೂ ಉಮರ್ ಎಂಬ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ‌.‌ ಈತನ ಪತ್ತೆ ಕೆಲಸ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಹಲ್ಲೆಗೊಳಗಾದ ಇಮ್ರಾನ್, ಫೋನ್ ಪೇ ಕ್ಯೂ ಆರ್ ಕೋಡ್ ಬೋರ್ಡ್ ಹಾಕುವ ಕೆಲಸ ಮಾಡಿಕೊಂಡಿದ್ದರು. ಮೊಬೈಲ್ ಫ್ಲ್ಯಾಶ್ ಮಾಡುವ ಬಗ್ಗೆ ಅರಿತುಕೊಂಡಿದ್ದರು. ಈ ಮಧ್ಯೆ ತಲೆಮರೆಸಿಕೊಂಡಿರುವ ಶಾಹಿದ್​​​ಗೆ‌ ಇಮ್ರಾನ್ ಪರಿಚಯವಾಗಿತ್ತು. ಫ್ಲ್ಯಾಶ್ ಮಾಡುವ ಕಲೆ ಅರಿತಿದ್ದ ಇಮ್ರಾನ್​ಗೆ ಶಾಹಿದ್ ಕದ್ದ ಮೊಬೈಲ್‌ ನೀಡಿ ಪ್ಲ್ಯಾಶ್ಮಾಡಿಸಿಕೊಂಡಿದ್ದರು. ಅದೇ ರೀತಿ ಸಾದಿಯಾ ಸಹ ತಮ್ಮ ಮೊಬೈಲ್ ನೀಡಿ ರೀ ಸೆಟ್​ ಮಾಡಿಸಿಕೊಂಡಿದ್ದಳು.


ಪ್ರತಿನಿತ್ಯ ಮೊಬೈಲ್ ಫ್ಲ್ಯಾಶ್ ಮಾಡಿಸಿಕೊಳ್ಳುವಂತೆ ಆರೋಪಿಗಳು ನೀಡುತ್ತಿರುವುದನ್ನು ಇಮ್ರಾನ್ ಕಂಡು ಅನುಮಾನಗೊಂಡಿದ್ದನು.‌ ಕಳ್ಳತನ ಮಾಡಿದ ಮೊಬೈಲ್‌ಗಳನ್ನು ನೀಡುತ್ತಿರುವ ಬಗ್ಗೆ ಅರಿತು ಮೊಬೈಲ್‌ಗಳನ್ನ ಪ್ಲ್ಯಾಶ್ ಮಾಡಿಸಲು ನಿರಾಕರಿಸಿದ್ದನು. ಅಲ್ಲದೇ ಆರೋಪಿಗಳ ಮೊಬೈಲ್ ‌ಕರೆ ಸ್ವೀಕರಿಸುವುದನ್ನೇ ಬಿಟ್ಟಿದ್ದ. ಇದರಿಂದ ಕೆಂಡಾಮಂಡಲವಾದ ಆರೋಪಿ ಸಾದಿಯಾ ನಿರಂತರ ಪೋನ್ ಮಾಡಿ ಕೊನೆಗೆ ಇಮ್ರಾನ್​ನನ್ನು ಸಂಪರ್ಕಿಸಿ ಭೇಟಿಯಾಗುವಂತೆ ಹೇಳಿದ್ದಳು.


ಹೆಗಡೆನಗರದ ಟೀ ಅಂಗಡಿ ಬಳಿ ಬರುವಂತೆ ಇಮ್ರಾನ್ ಹೇಳಿದ್ದರು. ಕೆಲ ಹೊತ್ತಿನ ಬಳಿಕ ಸಾದಿಯಾ ತನ್ನ ಜೊತೆಗಿದ್ದ‌ ಸಹಚರರನ್ನು ಕಳುಹಿಸಿದ್ದಾಳೆ. ಭೇಟಿಯಾದ ಇಮ್ರಾನ್‌ನನ್ನು ನೋಡುತ್ತಿದ್ದಂತೆ ಲಾಂಗ್​ಗಳಿಂದ ಹಲ್ಲೆಗೆ ಮುಂದಾಗಿದ್ದಾರೆ. ತಪ್ಪಿಸಿಕೊಳ್ಳುಲು ಯತ್ನಿಸಿದ್ದಇಮ್ರಾನ್‌ನ ಬೆನ್ನು, ಬಲಗೈ ಮಣಿಕಟ್ಟಿಗೆ ಗಂಭೀರವಾಗಿ ಗಾಯಗೊಳಿಸಿದ್ದಾರೆ. ಖಾಸಗಿ‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇಮ್ರಾನ್ ನೀಡಿದ ದೂರಿನ ಮೇರೆಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ತಿಳಿಸಿದರು.


ಆರೋಪಿ ಸಾದಿಯಾ ಹುಡುಗರನ್ನು ಸಂಘಟಿಸಿ ಮೊಬೈಲ್ ಕಳ್ಳತನ ಮಾಡಿಸುತ್ತಿದ್ದಳು. ಈ ಹಿಂದೆ ಜಾಮೀನುಸಹಿತ ಪ್ರಕರಣಗಳಲ್ಲಿ ಭಾಗಿಯಾಗಿದ್ದಳು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಂಟ್ವಾಳ ಜಮೀಯ್ಯತುಲ್ ಫಲಾಹ್ ರೋಟರಿ ಕ್ಲಬ್ ನಿಂದ ಮೆಹ್ ಫಿಲೇ ಈದ್

Posted by Vidyamaana on 2024-05-15 19:42:42 |

Share: | | | | |


ಬಂಟ್ವಾಳ ಜಮೀಯ್ಯತುಲ್ ಫಲಾಹ್ ರೋಟರಿ ಕ್ಲಬ್ ನಿಂದ ಮೆಹ್ ಫಿಲೇ ಈದ್

ಬಂಟ್ವಾಳ ; ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕ, ರೋಟರಿ ಕ್ಲಬ್ ಬಂಟ್ವಾಳ, ಉಪ್ಪಿನಂಗಡಿ, ಬಂಟ್ವಾಳ ಟೌನ್ ಹಾಗೂ ವಿಟ್ಲ ಘಟಕದ ಸಹಯೋಗದಲ್ಲಿ ಮೆಹ್ ಫಿಲೇ ಈದ್ ಕಾರ್ಯಕ್ರಮವು ಮೇ 17 ಶುಕ್ರವಾರ ಸಂಜೆ 5.30ಕ್ಕೆ ಮಾಣಿ ಸಮೀಪದ ನೇರಳಕಟ್ಟೆ ಜನಪ್ರಿಯ ಗಾರ್ಡನ್ಸ್ ನಲ್ಲಿ ನಡೆಯಲಿದೆ.

   ಎನ್ನಾರೈ ಉದ್ಯಮಿ, ಸಂಘಟಕ ಝಕರಿಯಾ ಜೋಕಟ್ಟೆ ಅಲ್ ಮುಝೈನ್, ಶಿಕ್ಷಣ ಹರಿಕಾರ, ಸಾಂಸ್ಕೃತಿಕ ಸಂಘಟಕ ಡಾ. ಎಂ. ಮೋಹನ್ ಆಳ್ವ, ಮಂಗಳೂರು ಉದ್ಯಮಿ, ಸೇವಾಕರ್ತೃ ರೋಹನ್ ಮೊಂತೇರೋ ಅವರಿಗೆ ಈದ್ ಅವಾರ್ಡ್ ನೀಡಿ ಗೌರವಿಸಲಾಗುವುದು.



Leave a Comment: