ಅತಿ ವೇಗವಾಗಿ ಬಂದು ಮಹಿಳೆಗೆ ಡಿಕ್ಕಿ ಹೊಡೆದ ಟ್ಯಾಕ್ಸಿ; ವಿಡಿಯೊ ನೋಡಿ

ಸುದ್ದಿಗಳು News

Posted by vidyamaana on 2024-07-23 19:43:42 |

Share: | | | | |


ಅತಿ ವೇಗವಾಗಿ ಬಂದು ಮಹಿಳೆಗೆ ಡಿಕ್ಕಿ ಹೊಡೆದ ಟ್ಯಾಕ್ಸಿ; ವಿಡಿಯೊ ನೋಡಿ

ಪುಣೆ: ಅತಿ ವೇಗ ಅಪಘಾತಕ್ಕೆ ಕಾರಣವೆಂದು ತಿಳಿದರೂ ಕೂಡ ಕೆಲವು ಚಾಲಕರು ಅವಸರದಲ್ಲಿ ವೇಗವಾಗಿ ವಾಹನ ಚಲಾಯಿಸಿ ಜನರ ಜೀವಕ್ಕೆ ಆಪತ್ತು ತರುತ್ತಿದ್ದಾರೆ. ಎಲ್ಲೆಂದರಲ್ಲಿ ನಿಂತ ಜನರ ಮೇಲೂ ವಾಹನವನ್ನು ಹಾರಿಸಿಕೊಂಡು ಹೋಗುತ್ತಾರೆ. ಇದೀಗ ಅಂತಹದೊಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Hit and Run Case)ಆಗಿದೆ.ಪ್ರಿ-ಚಿಂಚ್ವಾಡ್‍ನಲ್ಲಿ ಅತಿವೇಗವಾಗಿ ಚಲಿಸುತ್ತಿದ್ದ ಟ್ಯಾಕ್ಸಿ ಮಹಿಳೆಗೆ ಡಿಕ್ಕಿ ಹೊಡೆದು ನಂತರ ಚಾಲಕ ಅಪಘಾತದ ಸ್ಥಳದಿಂದ ಓಡಿಹೋದ ಹೊಸ ಹಿಟ್ ಅಂಡ್ ರನ್ ಪ್ರಕರಣ ವರದಿಯಾಗಿದೆ. ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂಬುದಾಗಿ ತಿಳಿದುಬಂದಿದೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಪುಣೆಯಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಪಿಂಪ್ರಿ-ಚಿಂಚ್ವಾಡ್‍ನಲ್ಲಿ ಈ ಘಟನೆ ನಡೆದಿದೆ. ಈ ಹಿಟ್ ಅಂಡ್ ರನ್ ಪ್ರಕರಣ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೊದಲ್ಲಿ ಭಾನುವಾರ ಮಧ್ಯಾಹ್ನ 1:30ರ ಸುಮಾರಿಗೆ ರಸ್ತೆಯಲ್ಲಿ ಮಹಿಳೆ ನಡೆದುಕೊಂಡು ಹೋಗುತ್ತಿರುವಾಗ ಎದುರಿಗೆ ವೇಗವಾಗಿ ಬಂದ ಟ್ಯಾಕ್ಸಿ ಮಹಿಳಾ ಪಾದಚಾರಿಗೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದೆ. ರಸ್ತೆಯಲ್ಲಿದ್ದ ಇತರ ಜನರು ಆಕೆಯ ಸಹಾಯಕ್ಕಾಗಿ ಓಡಿ ಬರುತ್ತಿರುವುದು ಕಂಡುಬಂದಿದೆ. ಟ್ಯಾಕ್ಸಿಗೆ ಡಿಕ್ಕಿ ಹೊಡೆದ ಮಹಿಳೆ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದು, ಈ ಬಗ್ಗೆ ಪಿಂಪ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಈ ಪ್ರಕರಣದ ಬಗ್ಗೆ ಪಿಂಪ್ರಿ-ಚಿಂಚ್ವಾಡ್ ಡಿಸಿಪಿ ಶಿವಾಜಿ ಪವಾರ್ ಮಾತನಾಡಿ, ಈ ಅಪಘಾತದಲ್ಲಿ ಸಂತ್ರಸ್ತೆ ರೇಖಾ ಗಾಯಗೊಂಡಿದ್ದಾರೆ. ಈಗ ಅವರ ಆರೋಗ್ಯ ಸ್ಥಿರವಾಗಿದೆ. 24 ವರ್ಷದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಕಾರಿನ ಚಾಲಕ ಕುಡಿದಿರಲಿಲ್ಲ ಎಂದು ಪೊಲೀಸರು ದೃಢಪಡಿಸಿದ್ದಾರೆ. ಮೇಲ್ನೋಟಕ್ಕೆ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದು ಮಹಾರಾಷ್ಟ್ರದಲ್ಲಿ ವರದಿಯಾದ ಮೊದಲ ಹಿಟ್ ಅಂಡ್ ರನ್ ಪ್ರಕರಣವಲ್ಲ. ಈಗಾಗಲೇ ಹಿಟ್ ಅಂಡ್ ರನ್ ಪ್ರಕರಣ ಮತ್ತೊಂದು ಸುದ್ದಿಯಲ್ಲಿ, ವೇಗವಾಗಿ ಬಂದ ಆಡಿ ಕಾರು ಎರಡು ಆಟೋರಿಕ್ಷಾಗಳಿಗೆ ಡಿಕ್ಕಿ ಹೊಡೆದಿದೆ. ಒಂದು ಆಟೋರಿಕ್ಷಾ ಚಾಲಕನ ಸ್ಥಿತಿ ಚಿಂತಾಜನಕವಾಗಿದ್ದು, ಅದರಲ್ಲಿದ್ದ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಮುಲುಂಡ್ ಪೊಲೀಸರು ಆಡಿ ಕಾರನ್ನು ವಶಪಡಿಸಿಕೊಂಡಿದ್ದಾರೆ, ಆದರೆ ಅಪಘಾತದ ನಂತರ ಅದರ ಚಾಲಕ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

 Share: | | | | |


ತುಂಬಿದ ಸಭೆಯಲ್ಲಿ ಮಹಿಳೆಯ ತುಟಿಗೆ ಚುಂಬಿಸಲು ಯತ್ನಿಸಿದ ವಿದೇಶಾಂಗ ಸಚಿವ - ವೈರಲ್ ಆಯ್ತು ವಿಡಿಯೋ..

Posted by Vidyamaana on 2023-11-06 21:00:45 |

Share: | | | | |


ತುಂಬಿದ ಸಭೆಯಲ್ಲಿ ಮಹಿಳೆಯ ತುಟಿಗೆ ಚುಂಬಿಸಲು ಯತ್ನಿಸಿದ ವಿದೇಶಾಂಗ ಸಚಿವ - ವೈರಲ್ ಆಯ್ತು  ವಿಡಿಯೋ..

       ದೇಶ ಒಂದರ ವಿದೇಶಾಂಗ ಸಚಿವರು ಅಂದರೆ ಅದು ಅತ್ಯಂತ ಜವಾಬ್ದಾರಿಯುತ ಸ್ಥಾನ. ಆದರೆ ಇದೀಗ ಅಂತಹದ್ದೊಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ವಿದೇಶಾಂಗ ಸಚಿವರು ತುಂಬಿದ ಸಭೆಯಲ್ಲಿ ಮಹಿಳೆಯೊಬ್ಬರಿಗೆ ಕಿಸ್ ಮಾಡಲು ಪ್ರಯತ್ನಿಸಿದ್ದಾರೆ.ಈ ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ವೈರಲ್ ವಿಡಿಯೋ ನೋಡಲು ಕ್ಲಿಕ್ ಮಾಡಿ

ಜರ್ಮನಿಯಲ್ಲಿ ನಡೆದ ಯುರೋಪಿಯನ್ ಯೂನಿಯನ್ ಸಮ್ಮೇಳನದ ಗ್ರೂಪ್ ಫೋಟೋ ತೆಗೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.ತುಂಬಿದ ಸಭೆಯಲ್ಲಿ ಪೋಲಿ ಸಚಿವನ ಕಿಸ್ ಮಸ್‌!


ಹೌದು, ಜರ್ಮನಿಯಲ್ಲಿ ನಡೆದ ಯುರೋಪಿಯನ್ ಯೂನಿಯನ್ ಸಮ್ಮೇಳನದ ಗ್ರೂಪ್ ಫೋಟೋ

ಸೆಷನ್ ವೇಳೆ ಕ್ರೋವೆಷಿಯಾದ 65 ವರ್ಷದ ಪೋಲಿ ವಿದೇಶಾಂಗ ಸಚಿವ ಗೋರ್ಡನ್ ಗ್ರೀಕ್ ರಾಡ್ ಮನ್ತ ನ್ನ ಪಕ್ಕದಲ್ಲಿ ನಿಂತಿದ್ದ ಜರ್ಮನಿಯ ಮಹಿಳಾ ಪ್ರತಿನಿಧಿ ಅನ್ನಾಲೆನ್ ಬೇರ್ ಬಾಕ್ ಎಂಬವರಿಗೆ ಕಿಸ್ ಮಾಡಲು ಪ್ರಯತ್ನಿಸಿದ್ದಾರೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜಾಗತಿಕ ಮಟ್ಟದಲ್ಲಿ ಈ ವಿಚಾರ ಬಿಸಿಬಿಸಿ ಚರ್ಚೆಗೆ ಎಡೆ ಮಾಡಿ ಕೊಟ್ಟಿದೆ.

ಚೀನಾದ ರಕ್ಷಣಾ ಸಚಿವ ಜನರಲ್ ಲಿ ಶಾಂಗ್ ಫು ವಜಾ

Posted by Vidyamaana on 2023-10-24 20:27:34 |

Share: | | | | |


ಚೀನಾದ ರಕ್ಷಣಾ ಸಚಿವ ಜನರಲ್ ಲಿ ಶಾಂಗ್ ಫು ವಜಾ

ಬೀಜಿಂಗ್: ರಕ್ಷಣಾ ಸಚಿವ ಜನರಲ್ ಲಿ ಶಾಂಗ್ ಫು ಅವರನ್ನು ಚೀನಾ ಸರ್ಕಾರ ತೆಗೆದುಹಾಕಿದೆ. ಇದಕ್ಕೆ ಯಾವುದೇ ವಿವರಣೆಯನ್ನು ನೀಡಲಾಗಿಲ್ಲ. ಚೀನಾ ರಾಜ್ಯ ಪ್ರಸಾರಕ ಸಿಸಿಟಿವಿ ವರದಿ ಮಾಡಿದ್ದು, ಎರಡು ತಿಂಗಳಿಂದ ನಾಪತ್ತೆಯಾಗಿದ್ದ ಸಚಿವರನ್ನು ಸರಕಾರ ವಜಾ ಮಾಡಿದೆ ಎಂದಿದೆ.


ಯಾವುದೇ ವಿವರಣೆಯನ್ನು ನೀಡದೆ ಜುಲೈನಲ್ಲಿ ಅಧಿಕಾರದಿಂದ ತೆಗೆದುಹಾಕಲ್ಪಟ್ಟ ಮಾಜಿ ವಿದೇಶಾಂಗ ಸಚಿವ ಕಿನ್ ಗ್ಯಾಂಗ್ ಬಳಿಕ  ಅದೇ ರೀತಿಯ ಕ್ರಮ ಎದುರಿಸಿದ ಎರಡನೇ ವ್ಯಕ್ತಿ ಲಿ ಅವರಾಗಿದ್ದಾರೆ.


ಮಾರ್ಚ್‌ನಲ್ಲಿ ಕ್ಯಾಬಿನೆಟ್ ಪುನರ್ರಚನೆಯ ಸಮಯದಲ್ಲಿ ರಕ್ಷಣಾ ಸಚಿವ ಆದ ಲಿ  ಆಗಸ್ಟ್ 29 ರಂದು ಭಾಷಣವೊಂದನ್ನು ಮಾಡಿದ ನಂತರ ಜನರ ಜೊತೆ ಕಾಣಿಸಿಕೊಂಡಿರಲಿಲ್ಲ. ಆವರು ಕಾಣೆಯಾಗಿರುವ ಬಗ್ಗೆ ಊಹಾಪೋಹಗಳು ಹರಿದಾಡುತ್ತಿದ್ದು, ಅವರ ಎಲ್ಲಿದ್ದಾರೆ ಏನ್‌ ಮಾಡ್ತಿದಾರೆ ಅಂತ ತಿಳುದು ಬಂದಿರಲಿಲ್ಲ.ಅಧ್ಯಕ್ಷ ಮತ್ತು ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ನಾಯಕ ಕ್ಸಿ ಜಿನ್‌ಪಿಂಗ್ ಅವರ ಅಧಿಕಾರ ಮುಂದುವರಿಯುವ ಬಗ್ಗೆ ಪ್ರಶ್ನೆಗಳನ್ನು ಲಿ ಎತ್ತಿದ್ದರು. ಅಪಾರ ದೇಶ ನಿಷ್ಠೆ ತೋರುತ್ತಿದ್ದ ಆವರು ಸಾರ್ವಜನಿಕ ಮತ್ತು ಖಾಸಗಿ ಭ್ರಷ್ಟಾಚಾರದ ವಿರುದ್ಧ ಪಟ್ಟುಬಿಡದೆ ದನಿ ಎತ್ತುತ್ತಿದ್ದರು.


ಇದು ಜಿನ್‌ಪಿಂಗ್ ಅವರಿಗೆ ಮುಜುಗರ ತರುತ್ತಿತ್ತು. ರಾಜಕೀಯ ಪ್ರತಿಸ್ಪರ್ಧಿಗಳನ್ನು ಮಟ್ಟ ಹಾಕಬೇಕು, ಹದಗೆಡುತ್ತಿರುವ ಆರ್ಥಿಕತೆಯ ನಡುವೆ ಅಮೆರಿಕಾದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ತಮ್ಮ ಮಾತು ಕೇಳುವವರನ್ನು ಆ ಸ್ಥಾನಕ್ಕೆ ತರಬೇಕೆಂಬುದು ಅಧ್ಯಕ್ಷ ಜಿನ್‌ಪಿಂಗ್ ಯೋಚಿಸುತ್ತಿದ್ದರು ಎನ್ನಲಾಗಿದೆ.

ಸವಾದ್ ನ ಕೊಲೆಗೈದು ಪ್ರಕರಣ

Posted by Vidyamaana on 2023-06-22 06:15:32 |

Share: | | | | |


ಸವಾದ್ ನ ಕೊಲೆಗೈದು  ಪ್ರಕರಣ

ಮೂಡಿಗೆರೆ : ಬಂಟ್ವಾಳದ ಸವಾದ್ ಎಂಬಾತನನ್ನು ಕೊಲೆ ಮಾಡಿ ಮೂಡಿಗೆರೆ ಪ್ರವಾಸಿ ತಾಣ ದೇವರಮನೆ ಗಡ್ಡೆಯ ಬಳಿ ಸುಟ್ಟು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬಂಟ್ವಾಳ ಮೂಲದ ರಿಜ್ವಾನ್ ಮತ್ತು ಝನುಲ್ಲಾ ಎಂದು ಗುರುತಿಸಲಾಗಿದೆ. 

ಪ್ರಕರಣದಲ್ಲಿ ಆರೋಪಿಗಳು ತಲೆಮರೆಸಿಕೊಂಡಿದ್ದರು. ಮೃತದೇಹದ ಪತ್ತೆಯ ಬಳಿಕ ಪ್ರಕರಣದ ತನಿಖೆ ಕೈಗೊಂಡಿದ್ದ ಮೂಡಿಗೆರೆ ವೃತ್ತ ನಿರೀಕ್ಷಕ ಸೋಮಶೇಖರ್ ಮತ್ತು ಬಣಕಲ್ ಎಸ್.ಐ. ಜಂಜೂರಾಜ್ ಮಹಾಜನ್ ನೇತೃತ್ವದ ಪೊಲೀಸ್ ತಂಡವು ಆರೋಪಿಗಳನ್ನು ಗುರುವಾಯನಕೆರೆ ಎಂಬಲ್ಲಿ ಬಂಧಿಸಿ ಮೂಡಿಗೆರೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

 ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಗಾಂಜಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಗಲಾಟೆಯಾಗಿ ಸವಾದ್ ನನ್ನು ಬೆಂಗ್ರೆ ಎಂಬಲ್ಲಿ ಕೊಲೆ ಮಾಡಿ ಹೆಣವನ್ನು ತಂದು ದೇವರಮನೆ ಗುಡ್ಡದಲ್ಲಿ ಎಸೆದು ಹೋಗಿದ್ದರು ಎಂದು ತಿಳಿದು ಬಂದಿದೆ. ಜೂನ್ 8 ರಂದು ದೇವರಮನೆ ಸಮೀಪ ರಸ್ತೆಯಂಚಿನಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಆ ಬಳಿಕ ಬಂಟ್ವಾಳ ಮೂಲದ ಸವಾದ್ ಕುಟುಂಬ ಮಗನ ಮೃತದೇಹದ ಗುರುತು ಪತ್ತೆ ಮಾಡಿತ್ತು.

ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೆ ಕೋವಿಡ್ ಪಾಸಿಟಿವ್: ಎಲ್ಲಾ ಕಾರ್ಯಕ್ರಮಗಳು ರದ್ದು

Posted by Vidyamaana on 2024-01-09 21:01:47 |

Share: | | | | |


ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೆ ಕೋವಿಡ್ ಪಾಸಿಟಿವ್: ಎಲ್ಲಾ ಕಾರ್ಯಕ್ರಮಗಳು ರದ್ದು

ಬೆಂಗಳೂರು : ಕರ್ನಾಟಕ ರಾಜ್ಯಪಾಲರಾಗಿರುವಂತ ಥಾವರ್ ಚಂದ್ ಗೆಹ್ಲೋಟ್ ( Thawar Chand Gehlot ) ಅವರಿಗೆ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಮುಂದಿನ ದಿನಾಂಕದವರೆಗೆ ಅವರ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ.ಈ ಕುರಿತಂತೆ ರಾಜಭವನದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕೋವಿಡ್-19 ಪರೀಕ್ಷೆಗೆ ( Covid19 Test ) ಒಳಪಟ್ಟಿದ್ದರು. ಅವರ ಪರೀಕ್ಷೆ ವರದಿಯಲ್ಲಿ ಅವರಿಗೆ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ತಿಳಿದು ಬಂದಿದೆ ಎಂದಿದೆ.


ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕೋವಿಡ್-19 ಪಾಸಿಟಿವ್ ( Covid19 Positive ) ಎಂಬುದಾಗಿ ಪರೀಕ್ಷೆಯಲ್ಲಿ ದೃಢಪಟ್ಟ ಕಾರಣ, ಮುಂದಿನ ದಿನಾಂಕದವರೆಗೆ ಅವರ ಎಲ್ಲಾ ನಿಗದಿತ ಕಾರ್ಯಕ್ರಮಗಳನ್ನು ರ್ದದುಗೊಳಿಸಿರೋದಾಗಿ ತಿಳಿಸಿದೆ.


ಇನ್ನೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮುಂಜಾಗ್ರತಾ ಕ್ರಮವಾಗಿ ರಾಜಭವನದಲ್ಲೇ ಕ್ವಾರಂಟೈನ್ ಆಗಲಿದ್ದಾರೆ. ಅವರು ಕೊರೋನಾ ಸೌಮ್ಯ ಲಕ್ಷಣಗಳನ್ನು ಹೊಂದಿದ್ದು, ಆರೋಗ್ಯವಾಗಿದ್ದಾರೆ. ಅವರಿಗೆ ಕೋವಿಡ್ ಚಿಕಿತ್ಸೆಯು ಹೋಂ ಕ್ವಾರಂಟೈನ್ ನಲ್ಲಿ ಮುಂದುವರೆಯಲಿದೆ ಅಂತ ಹೇಳಿದೆ.

ಅಶ್ಲೀಲ ವಿಡಿಯೋ ಪ್ರಕರಣ :ದುಬೈನಲ್ಲಿ ಕೇರಳ ಮೂಲದ ವ್ಯಕ್ತಿಯ ಅಪಾರ್ಟ್ಮೆಂಟ್ ನಲ್ಲಿ ಪ್ರಜ್ವಲ್ ರೇವಣ್ಣ ವಾಸ್ತವ್ಯ!!!

Posted by Vidyamaana on 2024-05-05 10:27:50 |

Share: | | | | |


ಅಶ್ಲೀಲ ವಿಡಿಯೋ ಪ್ರಕರಣ :ದುಬೈನಲ್ಲಿ ಕೇರಳ ಮೂಲದ ವ್ಯಕ್ತಿಯ ಅಪಾರ್ಟ್ಮೆಂಟ್ ನಲ್ಲಿ ಪ್ರಜ್ವಲ್ ರೇವಣ್ಣ ವಾಸ್ತವ್ಯ!!!

ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ವಿದೇಶಕ್ಕೆ ಹಾರಿರುವ ಪ್ರಜ್ವಲ್ ರೇವಣ್ಣ ಅವರು ಸದ್ಯ ದುಬೈನ ಅಪಾರ್ಟ್ ಮೆಂಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.ಸದ್ಯ ದುಬೈನಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅಪಾರ್ಟ್ಮೆಂಟ್ ಒಂದರಲ್ಲಿ ವಾಸ್ತವ ಹೂಡಿದ್ದಾರೆ.ದುಬೈನಲ್ಲಿ ಕೇರಳ ಮೂಲದ ವ್ಯಕ್ತಿಯ ಅಪಾರ್ಟ್ಮೆಂಟ್ ನಲ್ಲಿ ಪ್ರಜ್ವಲ್ ರೇವಣ್ಣ ವಾಸ್ತವ್ಯ ಹೂಡಿದ್ದಾರೆ ಎಂದು ತಿಳಿದುಬಂದಿದೆ.ರಾತ್ರಿ ಬೆಂಗಳೂರಿಗೆ ಬಂದು ನಾಳೆ ಎಸ್‌ಐಟಿ ಮುಂದೆ ಹಾಜರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಚೂರಿ ಇರಿತದಿಂದ ಮೃತಪಟ್ಟ ಯುವತಿ ಮನೆಗೆ ಕೇಂದ್ರ ಸಚಿವ ಭಗವಂತ್ ಖೂಬಾ

Posted by Vidyamaana on 2023-08-25 11:22:35 |

Share: | | | | |


ಚೂರಿ ಇರಿತದಿಂದ ಮೃತಪಟ್ಟ ಯುವತಿ ಮನೆಗೆ ಕೇಂದ್ರ ಸಚಿವ ಭಗವಂತ್ ಖೂಬಾ

ವಿಟ್ಲ : ಯುವಕನೋರ್ವನಿಂದ ಆ 24ರಂದು ಹತ್ಯೆಯಾದ ವಿಟ್ಲ ಮೂಲದ ಯುವತಿ ಗೌರಿ ನಿವಾಸಕ್ಕೆ ಕೇಂದ್ರ ಸಚಿವರಾದ ಭಗವಂತ ಖೂಬಾ   ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭ ಮಾಜಿ ಶಾಸಕ ಸಂಜೀವ ಮಠಂದೂರು, ಪದ್ಮನಾಭ ಕೊಟ್ಟಾರಿ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಜಿಲ್ಲಾ ಕಾರ್ಯದರ್ಶಿ ರಂದಿಪ್, ವಿಟ್ಲ ಪಟ್ಟಣ ಪಂಚಾಯತ್‌ನ ಅರುಣ್ ವಿಟ್ಲ ಸಹಿತ ಹಲವಾರು ಮಂದಿ ಜೊತೆಗಿದ್ದರು.

ಪುತ್ತೂರಿನ ವಸ್ತ್ರ ಮಳಿಗೆಯೊಂದರಲ್ಲಿ ಕೆಲಸಕ್ಕಿದ್ದ ವಿಟ್ಲ ಮೂಲದ ಯುವತಿ ಗೌರಿಯನ್ನು ಪದ್ಮರಾಜ್ ಎಂಬಾತ ನಿನ್ನೆ ಚೂರಿಯಿಂದ ಇರಿದು ಹತ್ಯೆ ಮಾಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.



Leave a Comment: