ಉಪ್ಪಿನಂಗಡಿ : ಸ್ನಾನ ಮಾಡುತ್ತಿದ್ದ ಮಹಿಳೆಯ ವೀಡಿಯೋ ಚಿತ್ರೀಕರಣ :ಪೆರಿಯಡ್ಕ ನಿವಾಸಿ ರೆಹಮಾನ್ ಪೊಲೀಸ್ ವಶಕ್ಕೆ

ಸುದ್ದಿಗಳು News

Posted by vidyamaana on 2024-07-22 17:34:57 |

Share: | | | | |


ಉಪ್ಪಿನಂಗಡಿ : ಸ್ನಾನ ಮಾಡುತ್ತಿದ್ದ ಮಹಿಳೆಯ ವೀಡಿಯೋ ಚಿತ್ರೀಕರಣ :ಪೆರಿಯಡ್ಕ ನಿವಾಸಿ ರೆಹಮಾನ್ ಪೊಲೀಸ್ ವಶಕ್ಕೆ

ಉಪ್ಪಿನಂಗಡಿ: ಹಿಂದೂ ಯುವತಿ ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ ವಿಡಿಯೋ ಮಾಡಿದ ರಹಿಮಾನ್ ಎಂಬಾತನ ಸ್ಥಳೀಯರು ಪೊಲೀಸರಿಗೆ ಹಿಡಿದು ಕೊಟ್ಟ ಘಟನೆ ಜು.21ರಂದು ಉಪ್ಪಿನಂಗಡಿಯಲ್ಲಿ ನಡೆದಿದೆ.

ಉಪ್ಪಿನಂಗಡಿಯ ಪೆರಿಯಡ್ಕದಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ಮಾಡುತ್ತಿದ್ದ ರಹಿಮಾನ್ ನನ್ನು ಸ್ಥಳೀಯರು ಹಿಡಿದು ಉಪ್ಪಿನಂಗಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.ಉಪ್ಪಿನಂಗಡಿ ಪೊಲೀಸ್ ಠಾಣೆಗೆ ತೆರಳಿದ ಅರುಣ್ ಕುಮಾರ್ ಪುತ್ತಿಲ, ಆರೋಪಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಸಿಸಿಟಿವಿಗೆ ಒತ್ತಾಯ: ಈಗಾಗಲೇ ಉಪ್ಪಿನಂಗಡಿಯಲ್ಲಿ ಹಿಂದೂಗಳನ್ನು ಕೇಂದ್ರೀಕರಿಸಿ ಹಲವು ಘಟನೆಗಳು ನಡೆದಿದ್ದು, 2ವರ್ಷದ ಹಿಂದೆ ಮೀನು ಅಂಗಡಿಗೆ ಬೆಂಕಿ ಹಾಕಿದ್ದು ಇನ್ನೂ ಪತ್ತೆಯಾಗಿಲ್ಲ.

ಈ ಘಟನೆಯಲ್ಲಿ ಆರೋಪಿಯನ್ನು ಊರಾವರೇ ಹಿಡಿದುಕೊಟ್ಟಿದ್ದಾರೆ. ಪೆರಿಯಡ್ಕ ಜಂಕ್ವನ್ ನಲ್ಲಿ ಪೊಲೀಸ್ ಇಲಾಖೆಯ ಸಿಸಿಟಿವಿ ಅಗತ್ಯತೆ ಇದೆ ಎಂದು ಠಾಣಾಧಿಕಾರಿಯಲ್ಲಿ ಮನವಿ ಮಾಡಿದರು.

 Share: | | | | |


ಆನ್‌ಲೈನ್‌ ಪಾರ್ಟ್‌ ಟೈಮ್‌ ಜಾಬ್‌ ಹೆಸರಲ್ಲಿ ವಂಚನೆ ; 7.75 ಲಕ್ಷ ಕಳಕೊಂಡ ಜೆನಿಫ‌ರ್‌

Posted by Vidyamaana on 2024-05-14 07:19:38 |

Share: | | | | |


ಆನ್‌ಲೈನ್‌ ಪಾರ್ಟ್‌ ಟೈಮ್‌ ಜಾಬ್‌ ಹೆಸರಲ್ಲಿ ವಂಚನೆ ; 7.75 ಲಕ್ಷ ಕಳಕೊಂಡ ಜೆನಿಫ‌ರ್‌

ಉಡುಪಿ, ಮೇ 14: ಪಾರ್ಟ್‌ ಟೈಮ್‌ ಉದ್ಯೋಗದ ಆಮಿಷಕ್ಕೆ ಒಳಗಾದ ಮಹಿಳೆಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡ ಬಗ್ಗೆ ದೂರು ದಾಖಲಾಗಿದೆ. 


ಶಂಕರಪುರದ ಜೆನಿಫ‌ರ್‌ ಎಂಬ ಮಹಿಳೆಯ ಮೊಬೈಲ್‌ಗೆ ಆನ್‌ಲೈನ್‌ ಪಾರ್ಟ್‌ ಟೈಮ್‌ ಜಾಬ್‌ ಕುರಿತು ಸಂದೇಶ ಬಂದಿತ್ತು. ಆನಂತರ ಅಪರಿಚಿತ ವ್ಯಕ್ತಿ ವಾಟ್ಸಾಪ್‌ ಮೂಲಕ ಲಿಂಕ್‌ ಕಳಿಸಿದ್ದು ಟೆಲಿಗ್ರಾಮ್‌ ಆ್ಯಪ್ ನಲ್ಲಿರುವ ಓಯಸಿಸ್‌ ಫೈನಾನ್ಸ್‌ ಎಂಬ ಗ್ರೂಪ್‌ಗೆ ಜಾಯಿನ್‌ ಆಗುವಂತೆ ತಿಳಿಸಿದ್ದ. ಅದರಂತೆ ಜೆನಿಫ‌ರ್‌ ಜಾಯಿನ್‌ ವಾಟ್ಸಪ್ ಗ್ರೂಪ್ ಜಾಯಿನ್ ಆಗಿದ್ದರು. ಟೆಲಿಗ್ರಾಮ್‌ ಗ್ರೂಪ್‌ನಲ್ಲಿರುವ ಅಪರಿಚಿತ ವ್ಯಕ್ತಿಯು ವಿವಿಧ ರೀತಿಯ ಟಾಸ್ಕ್ ಗಳನ್ನು ನೀಡಿ ಅದನ್ನು ಪುರ್ಣಗೊಳಿಸಿದರೆ ನಿಮ್ಮ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡುವುದಾಗಿ ನಂಬಿಸಿ ಜೆನಿಫ‌ರ್‌ನ ಬ್ಯಾಂಕ್‌ ಖಾತೆ ವಿವರಗಳನ್ನು ಪಡೆದುಕೊಂಡಿದ್ದರು.

ವಿಧಾನಸೌಧದ ಆವರಣದಲ್ಲಿ ಪಾಕ್ ಪರ ಘೋಷಣೆ ಆರೋಪ ತನಿಖೆ ಚುರುಕು

Posted by Vidyamaana on 2024-02-28 19:43:09 |

Share: | | | | |


ವಿಧಾನಸೌಧದ ಆವರಣದಲ್ಲಿ ಪಾಕ್ ಪರ ಘೋಷಣೆ ಆರೋಪ ತನಿಖೆ ಚುರುಕು

ಬೆಂಗಳೂರು : ರಾಜ್ಯಸಭೆ ಚುನಾವಣೆಯ ಫಲಿತಾಂಶದ ನಂತರ ಸಂಭ್ರಮಾಚರಣೆ ನಡೆಸುತ್ತಿದ್ದ ವೇಳೆ ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ತಿಳಿಸಿದ್ದಾರೆ.


ಮಂಗಳವಾರ ತಡರಾತ್ರಿವರೆಗೂ ಠಾಣೆಯಲ್ಲೇ ಉಳಿದುಕೊಂಡಿದ್ದ ಅವರು ಪೊಲೀಸ್ ಸಿಬ್ಬಂದಿಯ ಜೊತೆ ಚರ್ಚೆ ನಡೆಸಿ ಮಾಹಿತಿ ಕಲೆ ಹಾಕಿದ್ದರು. ಪ್ರಕರಣದ ಮುಂದಿನ ಆಯಾಮ ಹಾಗೂ ತನಿಖೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿದ್ದರು.


ವಿಜೇತ ಅಭ್ಯರ್ಥಿ ನಾಸಿರ್ ಹುಸೇನ್ ಜೊತೆ ಬಂದವರ ಪಟ್ಟಿ ಸಂಗ್ರಹಿಸಲಾಗಿದ್ದು, ಟೆಕ್ನಿಕಲ್ ಅನಾಲಿಸಿಸ್ ಹಾಗೂ ವೀಡಿಯೋಗಳನ್ನು ಪರಿಗಣಿಸುವ ಕಾರ್ಯ ಮಾಡಲಾಗುತ್ತಿದೆ. ಸದ್ಯ ವಿಧಾನಸೌಧ ಪೊಲೀಸರು ಘೋಷಣೆ ಕೂಗಿದಾತನ ಶೋಧ ನಡೆಸುತ್ತಿದ್ದಾರೆ.


ಘೋಷಣೆ ಕೂಗಿದ ಸಂದರ್ಭದಲ್ಲಿ ನಾಸೀರ್ ಹುಸೇನ್ ಬಳಿ ಇದ್ದ ವ್ಯಕ್ತಿಗಳನ್ನು ಕರೆಸಿ ಇಂದು (ಬುಧವಾರ) ವಿಚಾರಣೆ ನಡೆಸುವ ಸಾಧ್ಯತೆ ಇದೆ.


ಈ ಮಧ್ಯೆ, ಪ್ರಕರಣಕ್ಕೆ ಸಂಬಂಧಿಸಿ ಗೃಹ ಸಚಿವ ಪರಮೇಶ್ವರ್ ಅವರಿಗೆ ಮಾಹಿತಿ ನೀಡಲು ಕಾನೂನು, ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಮುಂದಾಗಿದ್ದಾರೆ. ಬುಧವಾರ ಬೆಳಗ್ಗೆ ಅವರು ಗೃಹ ಸಚಿವರ ನಿವಾಸಕ್ಕೆ ತೆರಳಿದ್ದಾರೆ. ಸದಾಶಿವನಗರದಲ್ಲಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ನಿವಾಸಕ್ಕೆ ತೆರಳಿರುವ ಹಿತೇಂದ್ರ, ಮಂಗಳವಾರದ ಘಟನೆ, ಪ್ರಕರಣದ ಬೆಳವಣಿಗೆ ಬಗ್ಗೆ ಗೃಹ ಸಚಿವರಿಗೆ ಮಾಹಿತಿ ನೀಡಿದ್ದಾರೆ.


ಪೊಲೀಸರಿಂದ ವೀಡಿಯೋ ಸಂಗ್ರಹ


ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಆರೋಪಕ್ಕೆ ಸಂಬಂಧಿಸಿ ವಿಧಾನಸೌಧದಲ್ಲಿನ ವಿಡಿಯೋ ತುಣುಕುಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ. ವಾಸ್ತವಾಂಶ ತಿಳಿಯುವುದಕ್ಕಾಗಿ ಅವುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ತಯಾರಿ ಮಾಡಲಾಗುತ್ತಿದೆ.

ಬಿಜೆಪಿಯಿಂದ ರಾಜ್ಯಾದ್ಯಂತ ಪ್ರತಿಭಟನೆ

ಪಾಕಿಸ್ತಾನ ಪರ ಘೋಷಣೆ ಖಂಡಿಸಿ ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ. ಮಂಗಳವಾರ ರಾತ್ರಿ ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ನಾಯಕರು, ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಮತ್ತೊಂದೆಡೆ, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಸಿರ್ ಹುಸೇನ್ ಸ್ಪಷ್ಟನೆ ನೀಡಿದ್ದಾರೆ. ವಿಜಯೋತ್ಸವದ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ನನಗೆ ಕೇಳಿಸಿಲ್ಲ. ಒಂದು ವೇಳೆ ಯಾರಾದರೂ ಆ ರೀತಿ ಘೋಷಣೆ ಕೂಗಿದ್ದರೆ ಅಂಥವರ ವಿರುದ್ಧ ಕ್ರಮಕೈಗೊಳ್ಳಲಿ ಎಂದು ಹೇಳಿದ್ದಾರೆ.

ನಾನು ಎಲ್ಲರ ಸ್ಪೀಕರ್ : ಸಚಿವ ಝಮೀರ್ ಹೇಳಿಕೆಗೆ ಯು.ಟಿ. ಖಾದರ್ ಆಕ್ಷೇಪ

Posted by Vidyamaana on 2023-11-18 15:07:05 |

Share: | | | | |


ನಾನು ಎಲ್ಲರ ಸ್ಪೀಕರ್ : ಸಚಿವ ಝಮೀರ್ ಹೇಳಿಕೆಗೆ ಯು.ಟಿ. ಖಾದರ್ ಆಕ್ಷೇಪ

ಮಂಗಳೂರು: ನಾನು ಎಲ್ಲರ ಸ್ಪೀಕರ್. ಸ್ಪೀಕರ್ ಸ್ಥಾನವನ್ನು ರಾಜಕೀಯ, ಜಾತಿ ಧರ್ಮದಿಂದ ನೋಡುವಂತಿಲ್ಲ ಎಂದು ಹೇಳುವ ಮೂಲಕ ಸಚಿವ ಝಮೀರ್ ಅಹ್ಮದ್ ಹೇಳಿಕೆಗೆ ಸ್ಪೀಕರ್ ಯು.ಟಿ ಖಾದರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.



ಈ ಬಗ್ಗೆ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಎಲ್ಲವನ್ನು ಕೂಡ ಮೆಟ್ಟಿ ನಿಂತು ನೋಡಬೇಕಾದ ಸಂವಿಧಾನ ಬದ್ಧವಾದ ಸ್ಥಾನ ಇದಾಗಿದೆ. ನನಗೆ ಗೌರವ ಕೊಡುವುದು ಯು.ಟಿ ಖಾದರ್ ಗೆ ಗೌರವ ಕೊಡೋದು ಅಲ್ಲ. ಸಂವಿಧಾನ ಪೀಠಕ್ಕೆ ಮತ್ತು ಸಭಾಧ್ಯಕ್ಷ ಸ್ಥಾನಕ್ಕೆ ಹಾಗೂ ಅಲ್ಲಿ ಕೂರುವ ನಾವು ಗೌರವ ಉಳಿಸುವ ಕೆಲಸ ಮಾಡಬೇಕು ಎಂದರು.



ನಾನು ಯಾರ ಹೇಳಿಕೆಗೂ ಕಮೆಂಟ್ ಮಾಡೋದಿಲ್ಲ. ನನ್ನನ್ನು ಜಾತಿ, ಧರ್ಮದ ಆಧಾರದಲ್ಲಿ ಯಾರು ಸಹ ಆ ಪೀಠದಲ್ಲಿ ಕೂರಿಸಿಲ್ಲ. ಅರ್ಹತೆಗೆ ಅನುಗುಣವಾಗಿ ಸಂವಿಧಾನ ಬದ್ಧವಾಗಿ ಕೆಲಸ ನಿರ್ವಹಿಸುವ ವಿಶ್ವಾಸದಿಂದ ಕೂರಿಸಿದ್ದಾರೆ. ಸಂವಿಧಾನಕ್ಕೆ ಅನುಗುಣವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

8.30 ಕೋಟಿ ಮೌಲ್ಯದ ನೋಟುಗಳ ಮಳೆ!

Posted by Vidyamaana on 2023-10-27 08:42:15 |

Share: | | | | |


8.30 ಕೋಟಿ ಮೌಲ್ಯದ ನೋಟುಗಳ ಮಳೆ!

ಪ್ರೇಗ್‌: ನೋಡ ನೋಡುತ್ತಿದ್ದಂತೆಯೇ ಆಗಸದಲ್ಲಿ ನೋಟಿನ ಮಳೆಯಾದರೆ ಏನು ಮಾಡುತ್ತೀರಿ? ಆಗಲು ಸಾಧ್ಯವೇ ಇಲ್ಲ ಬಿಡಿ ಎಂದು ಯೋಚಿಸುತ್ತಿದ್ದೀರಾ? ಚೆಕ್‌ ಗಣರಾಜ್ಯದಲ್ಲಿ ಇಂಥ  ಘಟನೆ ನಡೆ ದೇಬಿಟ್ಟಿದೆ. ಕಮಿಲ್‌ ಬಟೋಶೆಕ್‌ (ಕಜ್ಮಾ) ಎಂಬ ಟಿ.ವಿ. ನಿರೂಪಕರೊಬ್ಬರು ಹೆಲಿಕಾಪ್ಟರ್‌ ಮೂಲಕ ನೋಟುಗಳ ಮಳೆಯನ್ನೇ ಸುರಿಸಿದ್ದಾರೆ!ಆರಂಭದಲ್ಲಿ ಕಜ್ಮಾ ತಮ್ಮ ಸಿನೆಮಾ “ಒನ್‌ ಮ್ಯಾನ್‌ ಶೋ: ದಿ ಮೂವಿ’ ಯಲ್ಲಿ ಅಡಗಿರುವ ಕೋಡ್‌ವೊಂದರ ಅರ್ಥ ವಿವರಿಸುವ ಸ್ಪರ್ಧೆ ಆಯೋಜಿಸಿದ್ದರು. ಅದರಲ್ಲಿ ಗೆದ್ದ ವ ರಿಗೆ 8.30 ಕೋಟಿ ರೂ. ಬಹು ಮಾನವನ್ನೂ ಘೋಷಿಸಿದ್ದರು. ಆದರೆ, ಸ್ಪರ್ಧ ಕಷ್ಟವಾಗಿದ್ದ ಕಾರಣ ನೋಂದಣಿ ಮಾಡಿಕೊಂಡವರಲ್ಲಿ ಯಾರಿ ಗೂ ಗೆಲ್ಲಲು ಆಗಲಿಲ್ಲ. ಹೀಗಾ ಗಿ, ಕಜ್ಮಾ ಬಹುಮಾನದ ಮೊತ್ತವನ್ನು ಸ್ಪರ್ಧಾಕಾಂಕ್ಷಿಗಳಿಗೇ ಹಂಚಲು ನಿರ್ಧರಿಸಿದ್ದಾರೆ.


ಅದರಂತೆ, ಅವರೆಲ್ಲರಿಗೂ ಇಮೇಲ್‌ ಕಳುಹಿಸಿ, ಹಣ ಪಡೆಯಲು ಲೈಸಾ ಮತ್ತು ಲ್ಯಾಬೆಮ್‌ ಪ್ರದೇಶದ ಸಮೀಪದ ಹೊಲಕ್ಕೆ ಬರುವಂತೆ ಸೂಚಿಸಿದ್ದಾರೆ. ಹೇಳಿದ ಸಮಯಕ್ಕೆ ಸರಿಯಾಗಿ ಹೆಲಿಕಾಪ್ಟರ್‌ನಲ್ಲಿ ಬಂದು ಕಜ್ಮಾ 8.30 ಕೋಟಿ ರೂ. ಮೊತ್ತದ ನೋಟುಗಳನ್ನು ಕೆಳಕ್ಕೆ ಎಸೆದಿದ್ದಾರೆ. ದೊಡ್ಡ ದೊಡ್ಡ ಚೀಲಗಳು, ಛತ್ರಿಗಳನ್ನು ಹಿಡಿದುಕೊಂಡು ಬಂದಿದ್ದ ಜನ, ನೋಟುಗಳ ಮಳೆಯಾಗುತ್ತಿದ್ದಂತೆ ಎಷ್ಟು ಸಾಧ್ಯವೋ ಅಷ್ಟನ್ನೂ ಬಾಚಿಕೊಂಡಿದ್ದಾರೆ!

BIGG NEWS : ಬಿಯರ್ ಬೆಲೆ ಹೆಚ್ಚಿಸಿದ್ದ ರಾಜ್ಯ ಸರಕಾರ ಕ್ಕೇ ಶಾಕ್‌ ಕೊಟ್ಟ ಮದ್ಯಪ್ರಿಯರು

Posted by Vidyamaana on 2024-02-12 22:10:33 |

Share: | | | | |


BIGG NEWS : ಬಿಯರ್ ಬೆಲೆ ಹೆಚ್ಚಿಸಿದ್ದ ರಾಜ್ಯ ಸರಕಾರ ಕ್ಕೇ ಶಾಕ್‌ ಕೊಟ್ಟ ಮದ್ಯಪ್ರಿಯರು

ಬೆಂಗಳೂರು : ರಾಜ್ಯ ಸರ್ಕಾರ ಫೆಬ್ರವರಿ 1ರಿಂದ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಶೇ 185ರಿಂದ 195ಕ್ಕೆ ಏರಿಸಿ ಮದ್ಯಪ್ರಿಯರ ಕಿಸಿಗೆ ಕೈ ಹಾಕಲು ಮಂದಾಗಿತ್ತು. ಆದರೆ ಈಗ ರಾಜ್ಯ ಸರ್ಕಾರಕ್ಕೆ ಮದ್ಯಪ್ರಿಯರೇ ಶಾಕ್‌ ಕೊಟ್ಟಿದ್ದಾರೆ.ಫೆಬ್ರವರಿ 1ರಂದು ಎಇಡಿ ಹೆಚ್ಚಳದ ನಂತರ ಬಿಯರ್ ಮಾರಾಟದಲ್ಲಿ ಕಡಿಮೆಯಾಗಿದೆ ಎನ್ನಲಾಗಿದೆ.ಈ ನಡುವೆ ಗಿ ಪ್ರತಿ ಬಾಟಲಿ ಬಿಯರ್‌ ದರವು ಕನಿಷ್ಠ 8 ರೂ.ಗಳಿಂದ ಗರಿಷ್ಠ 15 ರೂ.ವರೆಗೆ ಹೆಚ್ಚಳವಾಗಿದೆ. ಹೀಗಾಗಿ ಮದ್ಯಪ್ರಿಯರು ಬಿಯರ್‌ ಖರೀದಿಗೆ ನಿರಾಸಕ್ತಿ ತೋರಿದ್ದರಿಂದ ರಾಜ್ಯದೆಲ್ಲೆಡೆ ಫೆಬ್ರವರಿ 1ರಿಂದಲೂ ಬಿಯರ್‌ ಮಾರಾಟದಲ್ಲಿ ಕಡಿಮೆಯಾಗಿದೆ ಎನ್ನಲಾಗಿದೆ. ಹಲವು ಮದ್ಯ ಪ್ರಿಯರು ಕಡಿಮೆ ಬೆಲೆಯ ಬಿಯರ್‌ ಬ್ರ್ಯಾಂಡ್‌ಗಳತ್ತ ಮುಖ ಮಾಡುತ್ತಿದ್ದಾರೆ. ಮತ್ತೆ ಕೆಲ ಮದ್ಯಪ್ರಿಯರು ಬಿಯರ್‌ ಖರೀದಿ ಪ್ರಮಾಣ ಕಡಿಮೆ ಮಾಡಲು ಮುಂದಾಗುತ್ತಿದ್ದಾರೆ ಎನ್ನಲಾಗಿದೆ. ದುಬಾರಿ ಬ್ರ್ಯಾಂಡ್‌ಗಳ ಬಿಯರ್‌ಗಳಿಗೆ ಮೊದಲಿದ್ದಂತೆ ಬೇಡಿಕೆ ಇಲ್ಲ. ಬಹುತೇಕ ಕಡಿಮೆ ಬೆಲೆಯ ಬಿಯರ್‌ಗಳನ್ನು ಕೊಂಡುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಸಾಧ್ವಿ ಪ್ರಜ್ಞಾ ಸಿಂಗ್‌ಗೆ ಟಿಕೆಟ್ ನಿರಾಕರಿಸಿದ BJP! ಪಕ್ಷದ ನಿರ್ಧಾರಕ್ಕೆ ಭೋಪಾಲ್ ಸಂಸದೆ ಹೇಳಿದ್ದೇನು?

Posted by Vidyamaana on 2024-03-04 07:50:29 |

Share: | | | | |


ಸಾಧ್ವಿ ಪ್ರಜ್ಞಾ ಸಿಂಗ್‌ಗೆ ಟಿಕೆಟ್ ನಿರಾಕರಿಸಿದ BJP! ಪಕ್ಷದ ನಿರ್ಧಾರಕ್ಕೆ ಭೋಪಾಲ್ ಸಂಸದೆ ಹೇಳಿದ್ದೇನು?

ಬೊಪಾಲ್: ಭಾರತೀಯ ಜನತಾ ಪಕ್ಷ (BJP) ಲೋಕಸಭೆ ಚುನಾವಣೆ 2024 (Lok Sabha Election 2024)ರ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ.ಈ ಪಟ್ಟಿಯಲ್ಲಿ 195 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ, ಮಧ್ಯಪ್ರದೇಶದ 29 ಲೋಕಸಭಾ ಸ್ಥಾನಗಳ ಪೈಕಿ 24 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದ್ದು, 5 ಸ್ಥಾನಗಳನ್ನು ಇನ್ನೂ ತಡೆಹಿಡಿಯಲಾಗಿದೆ.ಈ ಅವಧಿಯಲ್ಲಿ, ಭೋಪಾಲ್ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನೂ ಒಳಗೊಂಡಂತೆ ಆರು ಸ್ಥಾನಗಳಲ್ಲಿ ಬಿಜೆಪಿಯ ಹಾಲಿ ಸಂಸದರ ಟಿಕೆಟ್‌ಗಳನ್ನು ರದ್ದುಗೊಳಿಸಲಾಗಿದೆ. ಟಿಕೆಟ್ ರದ್ದಾದ ಬೆನ್ನಲ್ಲೇ ಪ್ರಜ್ಞಾ ಸಿಂಗ್ ಠಾಕೂರ್ ಪ್ರತಿಕ್ರಿಯೆ ನೀಡಿದ್ದಾರೆ.


ತನಗೆ ಟಿಕೆಟ್ ನಿರಾಕರಣೆ ಮಾಡಿರುವ ಬಗ್ಗೆ ಸುದ್ದಿಗಾರರ ಜೊತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕಿ ಮತ್ತು ಭೋಪಾಲ್ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ನಾನು 2019 ರ ಲೋಕಸಭೆ ಚುನಾವಣೆಯಲ್ಲಿ ಯಾರಲ್ಲೂ ಟಿಕೆಟ್ ಕೇಳಿರಲಿಲ್ಲ. ನಾನು ಈಗಲೂ ಕೇಳುವುದಿಲ್ಲ, ಟಿಕೆಟ್ ರದ್ದುಗೊಳಿಸಿದ್ದಕ್ಕಾಗಿ ನನಗೇನು ಬೇಸರವಿಲ್ಲ. ಭಾರತವನ್ನು ವಿಶ್ವಗುರುವನ್ನಾಗಿ ಮಾಡುವುದೇ ನನ್ನ ಗುರಿ ಎಂದು ಹೇಳಿದ್ದಾರೆ.


ಈ ಬಾರಿ ಬಿಜೆಪಿಯು ಭೋಪಾಲ್‌ನಿಂದ ಸಾಧ್ವಿ ಪ್ರಜ್ಞಾ ಸಿಂಗ್ ಬದಲಿಗೆ ಅಲೋಕ್ ಶರ್ಮಾಗೆ ಟಿಕೆಟ್ ನೀಡಿದೆ. ಅಲೋಕ್ ಶರ್ಮಾಗೆ ಟಿಕೆಟ್ ನೀಡಿರುವ ಕ್ರಮವನ್ನು ಸ್ವಾಗತಿಸಿರುವ ಪ್ರಜ್ಞಾ ಸಿಂಗ್ ಠಾಕೂರ್,ನಾನು ಅವರು ಗೆಲುವು ಸಾಧಿಸಲಿ ಎಂದು ಆಶೀರ್ವದಿಸುತ್ತೇನೆ. ಭೋಪಾಲ್‌ನಲ್ಲಿ ಸಾಕಷ್ಟು ಕೆಲಸ ಮಾಡಬೇಕಿದೆ. ಸಂಘಟನೆ ಟಿಕೆಟ್ ನಿರ್ಧರಿಸುತ್ತದೆ, ಹೀಗಾಗಿ ಯಾವುದೇ ನಿರ್ಧಾರ ತೆಗೆದುಕೊಂಡರೂ ಬೇಸರವಿಲ್ಲ. 29 ಸ್ಥಾನಗಳನ್ನು ಗೆಲ್ಲುವುದು ಮುಖ್ಯ ಎಂದು ಹೇಳಿದರು.


ನಾನು ಚುನಾವಣೆಗೆ ಸ್ಪರ್ಧಿಸಿದಾಗ ಭೋಪಾಲ್ ಜನರು ಸಂಪೂರ್ಣ ಬೆಂಬಲವನ್ನು ನೀಡಿದರು ಎಂದ ಪ್ರಜ್ಞಾ ಸಿಂಗ್ ಠಾಕೂರ್, ಹಿಂದೆ ಕಾಂಗ್ರೆಸ್ ಸರ್ಕಾರ ಇತ್ತು. ಧರ್ಮದ್ರೋಹಿ (ದಿಗ್ವಿಜಯ್ ಸಿಂಗ್) ಕೇಸರಿ ಮತ್ತು ಹಿಂದುತ್ವ ಭಯೋತ್ಪಾದನೆ ಎಂದು ಕರೆದ ವ್ಯಕ್ತಿಯನ್ನು ನನ್ನಿಂದ ಸೋಲಿಸಲಾಯಿತು. ಇದು ದೇವರ ಇಚ್ಛೆಯಾಗಿತ್ತು. ಇಲ್ಲಿ ಧರ್ಮದ ಧ್ವಜ ಹಾರಿಸಲಾಯಿತು. ನಮ್ಮಂತಹವರು ವಿಶೇಷ ಉದ್ದೇಶಕ್ಕಾಗಿ ಬರುತ್ತಾರೆ. ದೇವರು ನಿಯೋಜಿಸುವ ಕೆಲಸವನ್ನು ನಾವು ಪೂರ್ಣಗೊಳಿಸುತ್ತೇವೆ. ಹೋರಾಟವೇ ನನ್ನ ಜೀವನ. ಹಿಂದುತ್ವದ ಗೌರವಕ್ಕಾಗಿ ನಾನು ಹೋರಾಡುತ್ತಲೇ ಇದ್ದೇನೆ ಎಂದರು.ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ನಾನು ಯಾವಾಗಲೂ ಶ್ರಮಿಸುತ್ತೇನೆ ಎಂದ ಪ್ರಜ್ಞಾ ಸಿಂಗ್ ಠಾಕೂರ್, ಭಾರತವನ್ನು ವಿಶ್ವಗುರುವನ್ನಾಗಿ ಮಾಡುವುದೇ ನನ್ನ ಗುರಿ. ನನಗೆ ರಾಜಕೀಯ ಸ್ವಭಾವ ಇಲ್ಲ. ನಾನು ಮೋಸ ಮಾಡುವುದಿಲ್ಲ, ಪಿತೂರಿ ಮಾಡುವುದಿಲ್ಲ ಅಥವಾ ನನ್ನ ತತ್ವಗಳೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ನಾನು ಭ್ರಷ್ಟಾಚಾರದಲ್ಲಿ ತೊಡಗುವುದಿಲ್ಲ ಎಂದಿದ್ದಾರೆ.

Recent News


Leave a Comment: