ಶಿರೂರು ಭೂಕುಸಿತ ದುರಂತ : ಪತ್ತೆಯಾಯ್ತು ಎಂಟನೇ ಮೃತದೇಹ

ಸುದ್ದಿಗಳು News

Posted by vidyamaana on 2024-07-23 18:35:28 |

Share: | | | | |


ಶಿರೂರು ಭೂಕುಸಿತ ದುರಂತ : ಪತ್ತೆಯಾಯ್ತು ಎಂಟನೇ ಮೃತದೇಹ

ಕಾರವಾರ: ಶಿರೂರು ಭೂಕುಸಿತ ಸ್ಥಳದಲ್ಲಿ 8 ದಿವಸದ ಬಳಿಕ ಮತ್ತೊಂದು ಮೃತದೇಹ ಪತ್ತೆಯಾಗಿದೆ. ಈ ಮೂಲಕ 8ನೇ ಮೃತದೇಹ ಸಿಕ್ಕಂತಾಗಿದೆ. ಈ ನಡುವೆ ಕೇರಳದ ಲಾರಿ ಚಾಲಕ ಅರ್ಜುನ್‌ ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. 

ಮಂಗಳವಾರ ಬೆಳಗ್ಗೆ ಗುಡ್ಡ ಕುಸಿತದಿಂದ ನಾಪತ್ತೆಯಾಗಿದ್ದ ಮಹಿಳೆ ಸಣ್ಣಿ ಹನ್ಮಂತ ಗೌಡ (57) ಸಾವನ್ನಪ್ಪಿದ್ದು, ಮೃತದೇಹ ದೊರೆತಿದೆ. ಗಂಗಾವಳಿ ನದಿಯ ಗಂಗೆಕೊಳ್ಳ ಸಮೀಪ ಅವರ ಶವ ಪತ್ತೆಯಾಗಿದೆ. ಶಿರೂರು ಗುಡ್ಡ ಕುಸಿತದಿಂದಾಗಿ ಉಳುವರೆ ಗ್ರಾಮದಲ್ಲಿ ಮನೆ ಕುಸಿತವಾಗಿ ಸಣ್ಣಿ ಹನ್ಮಂತ ಗೌಡ ಅವರು ಕಣ್ಮರೆಯಾಗಿದ್ದರು. ಇನ್ನೂ ಅರ್ಜುನ್‌ ಸಹಿತ ಮೂವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಸ್ಥಳದಲ್ಲಿ NDRF, SDRF, ಮಿಲಿಟರಿ ಕಾರ್ಯಪಡೆಯಿಂದ ಶೋಧ ಕಾರ್ಯ ಮುಂದುವರೆದಿದೆ. 

ಕೇರಳ ಮಾಧ್ಯಮಗಳ ಕವರೇಜ್‌ 

ಸದ್ಯ ಕರ್ನಾಟಕದ ಉತ್ತರ ಕನ್ನಡದಲ್ಲಾದ ಭೂಕುಸಿತ ವರದಿಯನ್ನ ಕನ್ನಡಿಗರು ಕೂಡಾ ಮಲಯಾಳಂ ಸುದ್ದಿವಾಹಿನಿಗಳಲ್ಲಿ ವೀಕ್ಷಿಸುವಂತಾಗಿದೆ. ಕೇರಳದ ಪ್ರಮುಖ ರಾಜ್ಯ ಮಟ್ಟದ ವಾಹಿನಿಗಳು ಕಳೆದ 4 ದಿನಗಳಿಂದಲೂ ಉತ್ತರ ಕನ್ನಡದಲ್ಲಿ ಬೀಡುಬಿಟ್ಟಿವೆ. ಅರ್ಜುನ್‌ ಶೋಧ ಕಾರ್ಯಾಚರಣೆಗೆ ಹೆಚ್ಚಿನ ಒತ್ತಡ ಏರುತ್ತಿದೆ. ಜೊತೆಗೆ ಕೇರಳದ ನಾಗರಿಕ ಸುರಕ್ಷತಾ ತಂಡಗಳು ಕೂಡಾ ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲಿ ಕೇರಳದಿಂದ ಶಿರೂರಿಗೆ ತಂಡವಾಗಿ ಆಗಮಿಸಿವೆ

 Share: | | | | |


ಮಂಗಳೂರು: ಬಕ್ರೀದ್ ಹಿನ್ನಲೆ

Posted by Vidyamaana on 2023-06-27 05:29:56 |

Share: | | | | |


ಮಂಗಳೂರು: ಬಕ್ರೀದ್ ಹಿನ್ನಲೆ

ದ.ಕ.ಜಿಲ್ಲೆಯಲ್ಲಿ ಜೂ.29ರಂದು ನಡೆಯುವ ಬಕ್ರೀದ್ ಹಬ್ಬದ ಆಚರಣೆಯ ಸಂದರ್ಭ ಜಾನುವಾರುಗಳನ್ನು ಅನಧಿಕೃತವಾಗಿ ವಧೆ ಮಾಡುವ ಮತ್ತು ಜಾನುವಾರುಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುವುದನ್ನು ತಡೆಗಟ್ಟುವ ಸಲುವಾಗಿ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿಯ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಸಮಿತಿ ಸಭೆ ನಡೆಯಿತು.ಎಲ್ಲಾ ಇಲಾಖೆಗಳ ಸಮನ್ವಯ ಸಾಧಿಸಿ ಮುಂಬರುವ ಬಕ್ರೀದ್ ಹಬ್ಬದ ಸಂಧರ್ಭದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿಗೆ ಭಂಗ ಬಾರದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಅನಧಿಕೃತ ಜಾನುವಾರು ಸಾಗಾಣಿಕೆ ಕಂಡುಬಂದಲ್ಲಿ ಸಾರ್ವಜನಿಕರು 112ಕ್ಕೆ ಕರೆ ಮಾಡಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲು ಮತ್ತು ಮಾಹಿತಿದಾರರ ವಿವರವನ್ನು ಗೌಪ್ಯವಾಗಿಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು


ಜಾನುವಾರು ಸಾಗಾಣಿಕೆ ಪರವಾನಿಗೆ ಅನ್ ಲೈನ್ ತಂತ್ರಾಂಶದ ಮಾಹಿತಿಯನ್ನು ಪೊಲೀಸ್ ಇಲಾಖೆಯೊಂದಿಗೆ ಹಂಚಿಕೊಂಡು ಅನಧಿಕೃತ ಜಾನುವಾರು ಸಾಗಾಣಿಕೆ ತಡೆಗಟ್ಟಲು ಸೂಚಿಸಿದರು.


ಸಭೆಯಲ್ಲಿ ಪೊಲೀಸ್ ಉಪಾಯುಕ್ತ ಅಂಶುಕುಮಾರ್, ಜಿಲ್ಲಾ ಎಸ್ಪಿ ಸಿಬಿ ರಿಷ್ಯಂತ್, ಮಹಾನಗರ ಪಾಲಿಕೆ ಆಯುಕ್ತ ರವಿಕುಮಾರ್ ಎಂ, ದ.ಕ.ಜಿಪಂ ಉಪ ಕಾರ್ಯದರ್ಶಿ ಕೆ. ಆನಂದ ಕುಮಾರ್, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ. ಅರುಣ್ ಕುಮಾರ್ ಶೆಟ್ಟಿ ಎನ್., ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಡಾ. ರವಿ ಡಿ.ಆರ್ ಮತ್ತಿತರರು ಉಪಸ್ಥಿತರಿದ್ದರು.

ಪುತ್ತೂರು ಖಾಸಗಿ ಶಾಲಾ ಬಸ್‌ನಿಂದ ಸರಣಿ ಅಪಘಾತ

Posted by Vidyamaana on 2023-12-07 09:32:53 |

Share: | | | | |


ಪುತ್ತೂರು ಖಾಸಗಿ ಶಾಲಾ ಬಸ್‌ನಿಂದ ಸರಣಿ ಅಪಘಾತ

ಪುತ್ತೂರು: ಪುತ್ತೂರು ನಗರದ ಬೈಪಾಸ್ ನಲ್ಲಿರುವ ಖಾಸಗಿ ಶಾಲೆ ಬಳಿ ಪಾನಮತ್ತ ಚಾಲಕನೊಬ್ಬ ಶಾಲಾ ಬಸ್ಸನ್ನು ಯದ್ವಾತದ್ವಾ ಚಲಾಯಿಸಿ ಸರಣಿ ಅಪಘಾತ ನಡೆಸಿದ ಘಟನೆ ಡಿ. 06 ಬುಧವಾರ ಮಧ್ಯಾಹ್ನ ನಡೆದಿದೆ.


 ಅಪಘಾತದಲ್ಲಿ ಒಟ್ಟು 3 ವಾಹನಗಳಿಗೆ ಹಾನಿಯಾಗಿರುವುದಾಗಿ ತಿಳಿದು ಬಂದಿದ್ದು ಇದರಲ್ಲಿ ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿಯವರ ಪುತ್ರ ಬಿಪಿನ್ ರವರ  ಕಾರು,ತಾಲೂಕು ಪಂಚಾಯತ್ ಮಾಜಿ ಸದಸ್ಯ ಲಕ್ಷ್ಮಣ್ ಗೌಡ ಬೆಳ್ಳಿಪ್ಪಾಡಿಯವರ ಅಲ್ಲೋ ಕಾರು ಸೇರಿದೆ.


  ಬಸ್ ನ್ನು ಬೆಳ್ತಂಗಡಿ ಮೊಗ್ರು ಮೂಲದ ಜನಾರ್ದನ ಎಂಬವರು ಚಲಾಯಿಸುತ್ತಿದ್ದರು. ಬಸ್ಸಿನಲ್ಲಿ ಹಲವು ಮಕ್ಕಳು ಪ್ರಯಾಣಿಸುತ್ತಿದ್ದು ಅದೇ ಬಸ್ಸಿನ ಮಾಲಕ ಪಾನಮತ್ತನಾಗಿದದ್ದು ಆತಂಕಕಾರಿ ವಿಚಾರವಾಗಿದೆ.


ಸರಿ ಸುಮಾರು 4 ಗಂಟೆಯ ಸುಮಾರಿಗೆ ಅಪಘಾತ ನಡೆದಿದೆ. ಕಾರುಗಳು  ಜಖಂ ಆಗಿದೆ.ಅದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ತನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಲು ಅವರು ರಸ್ತೆಗಿಂತ ತುಸು ದೂರದಲ್ಲಿ ಶಾಲೆಯ ಸಮೀಪ ಕಾರು ನಿಲ್ಲಿಸಿದ್ದರು. ಮಕ್ಕಳು ಕಾರಿಗೆ ಹತ್ತಿದ ಕೆಲವೇ ಕ್ಷಣದಲ್ಲಿ ಶಾಲಾ ಬಸ್ಸು ಬಂದು ಕಾರಿನ ಹಿಬ್ಬಂದಿಗೆ ಢಿಕ್ಕಿ ಹೊಡೆದಿದೆ. ಮಕ್ಕಳು ಕಾರಿಗೆ ಹತ್ತಲು ಬಂದ ದಾರಿಯಲ್ಲೆ ಬಂದ ಬಸ್ಸು ಢಿಕ್ಕಿ ಹೊಡೆದಿದ್ದು, ಬಸ್ಸು ಕೆಲವೇ ಸೆಕೆಂಡ್ ಲೇಟಾಗಿ ಬಂದಿದರಿಂದ ಮಕ್ಕಳು ಆಪಾಯದಿಂದ ಪಾರಾದರು ಎಂದು ಸ್ಥಳೀಯರು ತಿಳಿಸಿದ್ದಾರೆ.ಅಪಘಾತ ನಡೆದ ಬಳಿಕವು ಬಸ್ಸನ್ನು ನಿಲ್ಲಿಸದ ಚಾಲಕ ಯದ್ವಾತದ್ವಾ ಬಸ್ಸು ಚಲಾಯಿಸಿದ್ದು, ಆಶ್ಮಿ ಕಂಫರ್ಟ್ಸ್ ನಿಂದ ಬರುತ್ತಿದ್ದ ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿಯವರ ಪುತ್ರ ಬಿಪಿನ್ ಚಲಾಯಿಸುತ್ತಿದ್ದ ಹೋಂಡಾ ಸಿಟಿ ಕಾರಿಗೆ ಢಿಕ್ಕಿ ಹೊಡೆದಿದ್ದಾನೆ.  ಬಸ್ಸು ಮುರದ ಸಮೀಪವು ವಾಹನವೊಂದಕ್ಕೆ ಢಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದು ಈ ವೇಳೆ ಸ್ಥಳೀಯರು ಬಸ್ಸನ್ನು ತಡೆದು ಚಾಲಕನನ್ನು ಹಿಡಿದು ಸಂಚಾರಿಗೆ ಪೊಲೀಸರಿಗೆ ಒಪ್ಪಿಸಿದ್ದಾರೆ.ಬಸ್ ನಲ್ಲಿ ಮಕ್ಕಳಿದ್ದ ಕಾರಣ ಅವರನ್ನು ಮನೆಗೆ ಬಿಡುವ ನಿಟ್ಟಿನಲ್ಲಿ ಪೊಲೀಸರು ಬಸ್ಸನ್ನು ಅದೇ ವಿದ್ಯಾಸಂಸ್ಥೆಯ ಬೇರೆ ಚಾಲಕನ ಕೈಯಲ್ಲಿ ಕೊಟ್ಟು ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.  ಅಪಘಾತಕ್ಕಿಡಾದ ಅಲ್ಲೋ ಕಾರು ಹಾಗೂ ಹೋಂಡಾ ಸಿಟಿ ಕಾರನ್ನು ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. .ಶಕುಂತಳಾ ಶೆಟ್ಟಿಯವರ ಪುತ್ರ ಬಿಪಿನ್ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೇರಳದಲ್ಲಿ ನಿಫಾ ಕಾಟ – ಆರೋಗ್ಯ ಇಲಾಖೆಯಿಂದ ಕಟ್ಟೆಚ್ಚರ

Posted by Vidyamaana on 2023-09-12 21:35:12 |

Share: | | | | |


ಕೇರಳದಲ್ಲಿ ನಿಫಾ ಕಾಟ – ಆರೋಗ್ಯ ಇಲಾಖೆಯಿಂದ ಕಟ್ಟೆಚ್ಚರ

 ಕೋಝಿಕ್ಕೋಡ್: ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಜ್ವರಕ್ಕೆ ಸಂಬಂಧಿಸಿದ ಎರಡು ಅಸ್ವಾಭಾವಿಕ ಸಾವುಗಳು ದಾಖಲಾದ ನಂತರ, ಕೇರಳ ಆರೋಗ್ಯ ಇಲಾಖೆ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಎಚ್ಚರಿಕೆ ನೀಡಿದೆ.ಎರಡು ಸಾವುಗಳು ನಿಪಾ ವೈರಸ್‌ನಿಂದ ಸಂಭವಿಸಿರಬಹುದು ಎಂದು ಶಂಕಿಸಲಾಗಿದ್ದು, ಮೃತರೊಬ್ಬರ ಸಂಬಂಧಿಕರು ತೀವ್ರ ನಿಗಾ ಘಟಕದಲ್ಲಿ(ಐಸಿಯು) ಇದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.ಕೇರಳದಲ್ಲಿ ನಿಪಾ ಹಾವಳಿ


ಈ ನಿಟ್ಟಿನಲ್ಲಿ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಈ ಹಿಂದೆ 2018 ರಲ್ಲಿ ಕೋಝಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ನಿಪಾ ಏಕಾಏಕಿ ಸಂಭವಿಸಿತ್ತು. ನಂತರ 2021 ರಲ್ಲಿ ಸಹ ಕೋಝಿಕೋಡ್ನಲ್ಲಿ ನಿಪಾ ಪ್ರಕರಣ ವರದಿಯಾಗಿತ್ತು. ದಕ್ಷಿಣ ಭಾರತದಲ್ಲಿ ಮೊದಲ ನಿಪಾ ವೈರಸ್ ಹರಡುವಿಕೆಯು ಮೇ 19, 2018 ರಂದು ಕೋಝಿಕ್ಕೋಡ್‌ನಲ್ಲಿ ವರದಿಯಾಗಿದೆ.

ವಿವಿಧ ಕಾಯಿಲೆಗಳಿಗೆ ಕಾರಣವಾಗುತ್ತೆ ನಿಪಾ

ವಿಶ್ವ ಆರೋಗ್ಯ ಸಂಸ್ಥೆ(WHO) ಪ್ರಕಾರ, ನಿಪಾ ವೈರಸ್ ಸೋಂಕು ಪ್ರಾಣಿಗಳಿಂದ ಜನರಿಗೆ ಹರಡುವ ಝೂನೋಟಿಕ್ ಕಾಯಿಲೆಯಾಗಿದೆ ಮತ್ತು ಕಲುಷಿತ ಆಹಾರದ ಮೂಲಕ ಅಥವಾ ನೇರವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಸೋಂಕಿತ ಜನರಲ್ಲಿ, ಇದು ಲಕ್ಷಣರಹಿತ(ಸಬ್‌ಕ್ಲಿನಿಕಲ್) ಸೋಂಕಿನಿಂದ ತೀವ್ರವಾದ ಉಸಿರಾಟದ ಕಾಯಿಲೆ ಮತ್ತು ಮಾರಣಾಂತಿಕ ಎನ್ಸೆಫಾಲಿಟಿಸ್ವರೆಗೆ ಹಲವಾರು ಕಾಯಿಲೆಗಳನ್ನು ಉಂಟುಮಾಡುತ್ತದೆ.

ನಿಪಾ ವೈರಸ್ ಬಗ್ಗೆ ಮಾಹಿತಿ

ತಜ್ಞರ ಪ್ರಕಾರ ನಿಪಾ ಒಂದು ಪ್ಯಾರಾಮಿಕ್ಸೊವೈರಸ್. ಇದು ಸಾಮಾನ್ಯ ಶೀತವನ್ನು ಉಂಟುಮಾಡುವ ಬೆರಳೆಣಿಕೆಯ ವೈರಸ್‌ಗಳಲ್ಲಿ ಒಂದಾದ ಹ್ಯೂಮನ್ ಪ್ಯಾರೆನ್‌ಫ್ಲುಯೆಂಜಾ ವೈರಸ್‌ಗೆ ಸಂಬಂಧಿಸಿದೆ. ಇದರ ನೈಸರ್ಗಿಕ ಆತಿಥೇಯವೆಂದರೆ ಹಣ್ಣಿನ ಬಾವಲಿ, ದೊಡ್ಡ ಮತ್ತು ಸಣ್ಣ ಹಾರುವ ನರಿಗಳು ದಕ್ಷಿಣ ಮತ್ತು ಆಗ್ನೇಯ ಏಷ್ಯಾದಾದ್ಯಂತ ವಿತರಿಸಲ್ಪಡುತ್ತವೆ. ಇಲ್ಲಿಯವರೆಗೆ ನಿಪಾ ವೈರಸ್‌ನ ಮಾನವ ಸೋಂಕಿನ ಎಲ್ಲಾ ಪ್ರಕರಣಗಳು ಸೋಂಕಿತ ಬಾವಲಿಗಳೊಂದಿಗೆ ನೇರ ಅಥವಾ ಪರೋಕ್ಷ ಸಂಪರ್ಕದ ಕಾರಣದಿಂದಾಗಿವೆ.ಬಾವಲಿ ಮೂತ್ರದಿಂದ ಕಲುಷಿತಗೊಂಡ ಹಣ್ಣು ಅಥವಾ ಹಣ್ಣಿನ ರಸವು ಜನರಿಗೆ ವೈರಸ್ ಹರಡುವ ಪ್ರಮುಖ ಮಾರ್ಗವಾಗಿದೆ. ಮಾನವ ಸೋಂಕಿನ ಪ್ರಕರಣಗಳಲ್ಲಿ, ಇಲ್ಲಿಯವರೆಗೆ, ಪ್ರಾಥಮಿಕ ಸೋಂಕಿತ ವ್ಯಕ್ತಿಯ ನಿಕಟ ಸಂಪರ್ಕಗಳಾದ ಕುಟುಂಬ ಸದಸ್ಯರು ಅಥವಾ ವ್ಯಕ್ತಿಯು ಆಸ್ಪತ್ರೆಗೆ ದಾಖಲಾಗಿದ್ದರೆ, ಆಸ್ಪತ್ರೆಯ ಸಿಬ್ಬಂದಿಗೆ ಮಾತ್ರ ಸೀಮಿತವಾಗಿ ಹರಡಿದೆ.


ಮುಖ್ಯವಾಗಿ ನಿಪಾ ವೈರಸ್ ಜೀವಕೋಶಗಳನ್ನು ಪ್ರವೇಶಿಸಲು ಬಳಸುವ ಪ್ರೋಟೀನ್ಗಳು, ಮೆದುಳು ಮತ್ತು ಕೇಂದ್ರ ನರ ಅಂಗಾಂಶಗಳಲ್ಲಿ ಕೇಂದ್ರೀಕೃತವಾಗಿರುತ್ತವೆ. ನಿಪಾ ಸೋಂಕು ಹೆಚ್ಚಿನ ಸಂದರ್ಭಗಳಲ್ಲಿ ತೀವ್ರವಾದ ಎನ್ಸೆಫಾಲಿಟಿಸ್ನಿಂದ ಸಾವಿಗೆ ಕಾರಣವಾಗುತ್ತದೆ, ಏಕೆಂದರೆ ವೈರಸ್ ಜೀವಕೋಶಗಳಿಗೆ ಪ್ರವೇಶಿಸಲು ಸುಲಭವಾದ ಅಂಗಾಂಶಗಳಲ್ಲಿ ವೈರಸ್ ಉತ್ತಮವಾಗಿ ಪುನರಾವರ್ತಿಸುತ್ತದೆ.

ಪುತ್ತೂರು : ಪತ್ರಕರ್ತ ನಿಶಾಂತ್ ಬಿಲ್ಲಂಪದವು ಮೊಬೈಲ್ ಒಡೆದು ಹಾನಿ : ದೂರು ದಾಖಲು

Posted by Vidyamaana on 2023-07-16 15:35:23 |

Share: | | | | |


ಪುತ್ತೂರು : ಪತ್ರಕರ್ತ ನಿಶಾಂತ್ ಬಿಲ್ಲಂಪದವು ಮೊಬೈಲ್ ಒಡೆದು ಹಾನಿ : ದೂರು ದಾಖಲು

ಪುತ್ತೂರು : ಬಪ್ಪಳಿಕೆ ಎಂಬಲ್ಲಿ ಪತ್ರಕರ್ತ ನಿಶಾಂತ್ ಬಿಲ್ಲಂಪದವು ಎಂಬವರ ಮೊಬೈಲ್ ಅನ್ನು ಒಡೆದು ಹಾಕಿರುವ ಘಟನೆಗೆ ಸಂಬಂಧಿಸಿದಂತೆ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.


ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕಲಂ 427 ಐಪಿಸಿ ರನ್ವಯ ದಾಖಲಿಸಿಕೊಂಡು ಸದ್ರಿ ದೂರಿನಲ್ಲಿ ಸಲ್ಲಿಸಿರುವ ವಿಚಾರಗಳ ಕುರಿತು ಸೂಕ್ತ ಕಾನೂನು ಮತ್ತು ನಿಯಮಗಳ ಅನ್ವಯ ಕ್ರಮ ಕೈಗೊಳ್ಳಲಾಗಿದೆ ಮತ್ತು ಘಟನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲು ನ್ಯಾಯಾಲಯದಲ್ಲಿ ವರದಿ ಸಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ.

ಯೂಟ್ಯೂಬ್ ನೋಡಿ ನಕಲಿ ನೋಟು ಮುದ್ರಣ: ಚಲಾವಣೆಗೆ ಯತ್ನಿಸುತ್ತಿದ್ದ ಕಡಬ ಮೂಲದ ಆಯೂಬ್ ಖಾನ್‌ ಸಹಿತ ನಾಲ್ವರ ಬಂಧನ

Posted by Vidyamaana on 2024-08-20 00:23:32 |

Share: | | | | |


ಯೂಟ್ಯೂಬ್ ನೋಡಿ ನಕಲಿ ನೋಟು ಮುದ್ರಣ:  ಚಲಾವಣೆಗೆ ಯತ್ನಿಸುತ್ತಿದ್ದ ಕಡಬ ಮೂಲದ ಆಯೂಬ್ ಖಾನ್‌ ಸಹಿತ ನಾಲ್ವರ ಬಂಧನ

ಮಂಗಳೂರು, ಆಗಸ್ಟ್‌ 19: ಯೂಟ್ಯೂಬ್ ನೋಡಿ ಖೋಟಾ ನೋಟು ಪ್ರಿಂಟ್ ಮಾಡುವುದನ್ನು ಕಲಿತು 500 ರೂ. ಮುಖಬೆಲೆಯ ಖೋಟಾ ನೋಟುಗಳನ್ನು ಮುದ್ರಿಸಿ ಅದನ್ನು ಮಂಗಳೂರು ನಗರದಲ್ಲಿ ಚಲಾವಣೆಗೆ ಯತ್ನಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 2.13 ಲಕ್ಷ ಮೌಲ್ಯದ 427 ಖೋಟಾ ನೋಟುಗಳನ್ನು ವಶಪಡಿಸಿದ್ದಾರೆ.

ಬಂಧಿತರನ್ನು ಕೇರಳದ ಕಾಸರಗೋಡು ಜಿಲ್ಲೆಯ ಕೊಳತ್ತೂರಿನ ವಿ.ಪ್ರಿಯೇಶ್ (38), ಕಾಸರಗೋಡು ಜಿಲ್ಲೆಯ ಮಲ್ಲ ಗ್ರಾಮದ ‌ಮುಳಿಯಾರಿನ ವಿನೋದ್ ಕುಮಾರ್‌ ಕೆ. (33), ಪೆರಿಯಾದ ಕುನಿಯಾ ವಡಂಕುರದ ಅಬ್ದುಲ್ ಖಾದರ್ ಎಸ್.ಎ (58) ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಬೆಳಿಯೂರು ಕಟ್ಟೆಯ ಆಯೂಬ್ ಖಾನ್‌ (51) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಸುಮಾರು 2.13 ಲಕ್ಷ ಮೌಲ್ಯದ 500 ಮುಖಬೆಲೆಯ ಖೋಟಾ ನೋಟುಗಳನ್ನು ವಶಪಡಿಸಲಾಗಿದೆ. ಇವರು ಕಾಸರಗೋಡಿನಲ್ಲಿ ನಕಲಿ ನೋಟುಗಳನ್ನು ಮುದ್ರಿಸಿ ತಂದು ಮಂಗಳೂರು ನಗರದ ಕ್ಲಾಕ್ ಟವರ್ ವೃತ್ತದ ಬಳಿಯ ಲಾಡ್ಜ್ ಒಂದರಲ್ಲಿದ್ದು ಚಲಾವಣೆಗೆ ಯತ್ನಿಸುತ್ತಿದ್ದರು. ಎಷ್ಟು ಮೊತ್ತದ ನಕಲಿ ನೋಟು ಚಲಾವಣೆ ಆಗಿದೆ ಮತ್ತು ಎಷ್ಟು ಸಮಯದಿಂದ ಮೋಸದ ಕೃತ್ಯ ನಡೆಯುತ್ತಿದೆ ಎನ್ನುವ ಬಗ್ಗೆ ತನಿಖೆ ನಡೆಯಬೇಕಷ್ಟೆ

ಖಾಸಗಿ‌ ಬಸ್- ಬೈಕ್ ಡಿಕ್ಕಿ; ಗೋಳ್ತಮಜಲು ನಿವಾಸಿ ಲತೀಶ್ ಮೃತ್ಯು

Posted by Vidyamaana on 2023-07-30 15:16:23 |

Share: | | | | |


ಖಾಸಗಿ‌ ಬಸ್- ಬೈಕ್ ಡಿಕ್ಕಿ;  ಗೋಳ್ತಮಜಲು ನಿವಾಸಿ ಲತೀಶ್ ಮೃತ್ಯು

ಬಂಟ್ವಾಳ: ಖಾಸಗಿ‌ ಬಸ್ ಡಿಕ್ಕಿಯಾಗಿ ಯುವಕನೋರ್ವ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಸಂಜೆ ವೇಳೆ ಮೃತಪಟ್ಟ ಘಟನೆ ಕಲ್ಲಡ್ಕದಲ್ಲಿ ನಡೆದಿದೆ.ಕಲ್ಲಡ್ಕ ಗೋಳ್ತಮಜಲು ಮುರಬೈಲು ನಿವಾಸಿ ಲತೀಶ್ ( 28) ಮೃತಪಟ್ಟ ಯುವಕ .


ಮಂಗಳೂರಿನಲ್ಲಿ ಮ್ಯಾಕನಿಕ್ ಕೆಲಸ ಮಾಡುತ್ತಿದ್ದ ಈತ, ಇಂದು ರವಿವಾರ ರಜಾದಿನವಾದ ಕಾರಣ ಬೆಳಿಗ್ಗೆ ಪಣೋಲಿಬೈಲು ದೇವಸ್ಥಾನಕ್ಕೆ ಹೋಗಿ ವಾಪಸು ಮನೆಗೆ ಬರುವ ವೇಳೆ ಕಲ್ಲಡ್ಕ ದಲ್ಲಿ ಅಪಘಾತ ನಡೆದಿದೆ .


ಕಲ್ಲಡ್ಕದಿಂದ ವಿಟ್ಲ ರಸ್ತೆಯಲ್ಲಿ ಹೋಗುವ ವೇಳೆ ವಿಟ್ಲದಿಂದ ಅತೀ ವೇಗದಿಂದ ಬರುತ್ತಿದ್ದ ಖಾಸಗಿ‌ ಬಸ್ ಬೈಕ್ ಗೆ ಡಿಕ್ಕಿ ಯಾಗಿದೆ.ಡಿಕ್ಕಿಯ ರಭಸಕ್ಕೆ ಲತೀಶ್ ಗೆ ಗಂಭೀರವಾಗಿ ಗಾಯವಾಗಿತ್ತು.ಈತನನ್ನು ಕೂಡಲೇ ಮಂಗಳೂರು ‌ಖಾಸಗಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು.


ಚಿಂತಾಜನಕ ಸ್ಥಿತಿಯಲ್ಲಿದ್ದ ಈತ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಆದರೆ ಗಂಭೀರ ಸ್ಥಿತಿಯಲ್ಲಿದ್ದ ಲತೀಶ್ ಸಂಜೆ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದ್ದಾರೆ.


ಟ್ರಾಫಿಕ್ ಎಸ್. ಐ.ಸುತೇಶ್ ಸ್ಥಳಕ್ಕೆ ಬೇಟಿ ನೀಡಿದ್ದು,ಪ್ರಕರಣ ದಾಖಲಾಗಿದೆ.

Recent News


Leave a Comment: