ಜುಂಬಾ ಡ್ಯಾನ್ಸ್‌ ಮಾಡುತ್ತಲೇ ಹೃದಯಾಘಾತಕ್ಕೆ ಖ್ಯಾತ ಉದ್ಯಮಿ ಬಲಿ,ಸಾವಿನ ಕೊನೆ ಕ್ಷಣ ಸೆರೆ!

ಸುದ್ದಿಗಳು News

Posted by vidyamaana on 2024-07-23 06:33:29 | Last Updated by Vidyamaana on 2024-07-23 06:33:29

Share: | | | | |


ಜುಂಬಾ ಡ್ಯಾನ್ಸ್‌ ಮಾಡುತ್ತಲೇ ಹೃದಯಾಘಾತಕ್ಕೆ ಖ್ಯಾತ ಉದ್ಯಮಿ ಬಲಿ,ಸಾವಿನ ಕೊನೆ ಕ್ಷಣ ಸೆರೆ!

ಮುಂಬೈ :ಫಿಟ್ನೆಸ್ ಕಾಪಾಡಿಕೊಳ್ಳಲು ಹಲವರು ಜುಂಬಾ ಡ್ಯಾನ್ಸ್ ಮೊರೆ ಹೋಗುತ್ತಾರೆ. ಪ್ರತಿ ದಿನ ಜುಂಬಾ ಡ್ಯಾನ್ಸ್ ಕ್ಲಾಸ್‌ಗೆ ತೆರಳಿ ಬೆವರು ಹರಿಸುತ್ತಾರೆ. ಹೀಗೆ ಮಹಾರಾಷ್ಟ್ರದ ಉದ್ಯಮಿ ಕವಲ್ಜಿತ್ ಸಿಂಗ್ ಬಗ್ಗಾ ಫಿಟ್ನೆಸ್‌ಗಾಗಿ ಪ್ರತಿ ದಿನ ಜುಂಬಾ ಕ್ಲಾಸ್‌ಗೆ ತೆರಳಿ ಡ್ಯಾನ್ಸ್ ಮಾಡುತ್ತಾ ಬೆವರು ಹರಿಸುತ್ತಾರೆ.

ಇಂದು ಬೆಳಗ್ಗೆ ಜುಂಬಾ ಡ್ಯಾನ್ಸ್ ಮಾಡುತ್ತಿದ್ದಂತೆ ಉದ್ಯಮಿ ಕವಲ್ಜಿತ್ ಸಿಂಗ್ ಬಗ್ಗಾ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆ ದಾಖಲಿಸಿದರೂ ಉದ್ಯಮಿ ಬದುಕುಳಿಯಲಿಲ್ಲ.


ಛತ್ರಪತಿ ಸಂಭಾಜಿನಗರದ ನಿವಾಸಿಯಾಗಿರುವ ಅವಲ್ಜಿತ್ ಸಿಂಗ್ ಬಾಗ್ಗಾ ಪ್ರತಿದಿನ ಜುಂಬಾ ಡ್ಯಾನ್ಸ್ ಮಾಡುತ್ತಾರೆ. ಎಂದಿನಂತೆ ಇಂದೂ ಕೂಡ ಅವಲ್ಜಿತ್ ಸಿಂಗ್ ಬಾಗ್ಗಾ ಜುಂಬಾ ಡ್ಯಾನ್ಸ್‌ಗೆ ತೆರಳಿದ್ದಾರೆ. ಅವಲ್ಜಿತ್ ಸಿಂಗ್ ರೀತಿಯಲ್ಲಿ ಇತರ ಕೆಲವರು ಜುಂಬಾ ಡ್ಯಾನ್ಸ್ ಮಾಡುತ್ತಿದ್ದಾರೆ. ಜುಂಬಾ ಕ್ಲಾಸ್ ತೆರಳಿ 15 ನಿಮಿಷಗಳ ಕಾಲ ಡ್ಯಾನ್ಸ್ ಮಾಡಿದ್ದಾರೆ. ಹಲವರು ಇದೇ ಕ್ಲಾಸ್‌ನಲ್ಲಿ ಅವಲ್ಜಿತ್ ಸಿಂಗ್ ಜೊತೆ ಡ್ಯಾನ್ಸ್ ಮಾಡಿದ್ದಾರೆ.

ಕೊನೆಯ ಸಾಲಿನ ಬದಿಯಲ್ಲಿದ್ದ ಅವಲ್ಜಿತ್ ಸಿಂಗ್ ಡ್ಯಾನ್ಸ್ ಮಾಡುತ್ತಿದ್ದಂತೆ ಹೃದಯಾಘಾತವಾಗಿದೆ. ಡ್ಯಾನ್ಸ್ ಮಾಡಲು ಸಾಧ್ಯವಾಗದೆ ನಿಂತಿದ್ದಾರೆ. ಚೇತರಿಸಿಕೊಳ್ಳಲು ಕೆಲ ಕ್ಷಣ ನಿಂತಿದ್ದಾರೆ. ಇತರರು ಡ್ಯಾನ್ಸ್‌ನಲ್ಲಿ ತಲ್ಲೀನರಾಗಿದ್ದರು. ಆದರೆ ಅವಲ್ಜಿತ್ ಸಿಂಗ್ ಚೇತರಿಸಿಕೊಳ್ಳಲಿಲ್ಲ. ಕಾರಣ ತೀವ್ರ ಹೃದಯಾಘಾತದಿಂದ ಅವಲ್ಜಿತ್ ಕುಸಿದಿದ್ದಾರೆ. ಈ ವೇಳೆ ಮೆಲ್ಲನೆ ಕುಳಿತುಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಅವಲ್ಜಿತ್ ಸಿಂಗ್ ಕುಸಿದು ಬೀಳುತ್ತಿದ್ದಂತೆ ಇತರರು ತಕ್ಷಣವೇ ನೆರವಿಗೆ ಧಾವಿಸಿದ್ದಾರೆ. ನೀರು ತಂದು ಕುಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಯಾವುದಕ್ಕೂ ಅವಲ್ಜಿತ್ ಸಿಂಗ್ ಸ್ಪಂದಿಸಿಲ್ಲ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಅವಲ್ಜಿತ್ ಎತ್ತಿಕೊಂಡು ವಾಹನದ ಮೂಲಕ ಆಸ್ಪತ್ರೆ ದಾಖಲಿಸಿದ್ದಾರೆ. ಆಸ್ಪತ್ರೆ ದಾಖಲಿಸುವ ಮೊದಲೇ ಅವಲ್ಜಿತ್ ಸಿಂಗ್ ಬಾಗ್ಗಾ ಪ್ರಾಣ ಪಕ್ಷಿ ಹಾರಿಹೋಗಿದೆ. ತಪಾಸಣೆ ನಡೆಸಿದ ವೈದ್ಯರು ಅವಲ್ಜಿತ್ ಸಿಂಗ್ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ.

ಜಿಮ್ ಅಭ್ಯಾಸದ ವೇಳೆ ಈ ರೀತಿ ಹೃದಯಾಘಾತಕ್ಕೆ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಇತ್ತೀಚಗೆ ಹೃದಯಾಘಾತದ ಪ್ರಮಾಣ ಹೆಚ್ಚಾಗುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಈ ಬೆಳವಣಿಗೆ ನಡುವೆ ಇದೀಗ ಉದ್ಯಮಿ ಅವಲ್ಜಿತ್ ಸಿಂಗ್ ಬಾಗ್ಗಾ ನಿಧನ ಸುದ್ದಿ ಆತಂಕ ಹೆಚ್ಚಿಸಿದೆ. ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದ ಕವಲ್ಜಿತ್ ಸಿಂಗ್ ದಿಢೀರ್ ನಿಧನ ಇದೀಗ ಮತ್ತೆ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.

 Share: | | | | |


ವೈರಲ್ ವಿಡಿಯೋ : ಸಿಂಹದಂಥ ಮಗನಿಗೆ ಜನ್ಮ ನೀಡಿದ್ದೀರಿ..ಕೆಎಲ್ ಶರ್ಮ ಪತ್ನಿ ಹೇಳಿದ ಮಾತಿಗೆ ಸೋನಿಯಾ ಗಾಂಧಿ ಏನಂದ್ರು ಗೊತ್ತಾ ?

Posted by Vidyamaana on 2024-06-08 19:54:44 |

Share: | | | | |


ವೈರಲ್ ವಿಡಿಯೋ : ಸಿಂಹದಂಥ ಮಗನಿಗೆ ಜನ್ಮ ನೀಡಿದ್ದೀರಿ..ಕೆಎಲ್ ಶರ್ಮ ಪತ್ನಿ ಹೇಳಿದ ಮಾತಿಗೆ ಸೋನಿಯಾ ಗಾಂಧಿ ಏನಂದ್ರು ಗೊತ್ತಾ ?

ನವದೆಹಲಿ (ಜೂ.8): 2019ರ ಲೋಕಸಭಾ ಚುನಾವಣೆಯಲ್ಲಿ ಅಮೇಥಿಯಲ್ಲಿ ರಾಹುಲ್‌ ಗಾಂಧಿಯನ್ನು ಮಣಿಸುವ ಮೂಲಕ ಸ್ಮೃತಿ ಇರಾನಿ ದೈತ್ಯ ಸಂಹಾರಿಯಾಗಿ ಗುರುತಿಸಿಕೊಂಡಿದ್ದರು. ಈ ಬಾರಿ ಅಮೇಥಿ ಕ್ಷೇತ್ರದಲ್ಲಿ ಸ್ಮೃತಿ ಇರಾನಿಯನ್ನು ಮಣಿಸಲೇಬೇಕು ಎಂದು ಪಣ ತೊಟ್ಟಿದ್ದ ಕಾಂಗ್ರೆಸ್‌ ಅದರಲ್ಲಿ ಯಶಸ್ವಿಯಾಗಿದೆ.

ಆದರೆ, ಈ ಭಾರಿ ರಾಹುಲ್‌ ಗಾಂಧಿಯ ಬದಲು, ಈ ಕ್ಷೇತ್ರಕ್ಕೆ ತಮ್ಮ ಕುಟುಂಬಕ್ಕೆ ಅತ್ಯಂತ ಆಪ್ತರಾಗಿದ್ದ ಕಿಶೋರಿ ಲಾಲ್‌ ಶರ್ಮ ಅಂದರೆ ಕೆಎಲ್‌ ಶರ್ಮ ಅವರಿಗೆ ಟಿಕೆಟ್‌ ನೀಡಿತ್ತು. ನಿರೀಕ್ಷೆಯಂತೆಯೇ ಅವರು ಭಾರೀ ಮತಗಳ ಅಂತರದಲ್ಲಿ ಅಮೇಥಿಯಲ್ಲಿ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿಯನ್ನು ಸೋಲಿಸಿದ್ದರು. ಇದರ ಬೆನ್ನಲ್ಲಿಯೇ ಅವರು ಶುಕ್ರವಾರ ನವದೆಹಲಿಗೆ ಆಗಮಿಸಿ ಗಾಂಧಿ ಕುಟುಂಬವನ್ನು ಭೇಟಿ ಮಾಡಿದರು. ಈ ವೇಳೆ ತಮ್ಮ ಪತ್ನಿಯನ್ನು ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್‌ ಗಾಂಧಿಗೆ ಪರಿಚಯ ಮಾಡಿಕೊಟ್ಟರು. ಇದರ ವಿಡಿಯೋವನ್ನು ಕಾಂಗ್ರೆಸ್‌ ಹಂಚಿಕೊಂಡಿದೆ.

2.30 ನಿಮಿಷದ ವಿಡಿಯೋವನ್ನು ಕಾಂಗ್ರೆಸ್‌ ಎಕ್ಸ್‌ನಲ್ಲಿ ಕಂಚಿಕೊಂಡಿದೆ. ಈ ವೇಳೆ ರಾಹುಲ್‌ ಗಾಂದಿ ಅಮೇಥಿಯ ಭಾರಿ ಬಿಸಲಿನಲ್ಲಿ ಮಾಡಿದ ಪ್ರಚಾರದ ದಿನಗಳನ್ನು ಕೂಡ ನೆನಪಿಸಿಕೊಂಡಿದ್ದಾರೆ. ಪ್ರಚಾರದ ಕೊನೆಯ ದಿನ ಅಮೇಥಿಯಲ್ಲಿ ಭಾರೀ ಬಿಸಿಲಿತ್ತು. ಪ್ರಚಾರದ ಸಮಯದಲ್ಲಿ ರಾಹುಲ್‌ ಗಾಂಧಿ ಧರಿಸಿದ್ದ ಬಟ್ಟೆ ಸಂಪೂರ್ಣ ಒದ್ದೆಯಾಗಿತ್ತು ಎಂದು ಕೆಎಲ್‌ ಶರ್ಮ ಹೇಳಿದ್ದಾರೆ. ಇನ್ನು ರಾಹುಲ್‌ ಗಾಂಧಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ನಿರ್ವಹಣೆ ಹೇಗಿದೆ ಎಂದು ಕೆಎಲ್‌ ಶರ್ಮ ಅವರನ್ನೇ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಬಹಳ ಅದ್ಭುತವಾಗಿ ನಿರ್ವಹಣೆ ತೋರಿದಿದ್ದೇವೆ ಎಂದಿದ್ದಾರೆ. ಇನ್ನು ಸೋನಿಯಾ ಗಾಂಧಿಯವರನ್ನು ತಬ್ಬಿಕೊಂಡು ಕೆಎಲ್‌ ಶರ್ಮ ಪತ್ನಿ ಕಣ್ಣೀರಿದ್ದಾರೆ. ವಿಡಿಯೋದ ಕೊನೆಯಲ್ಲಿ ಕೆಎಲ್‌ ಶರ್ಮ ಅವರ ಪತ್ನಿ ಸೋನಿಯಾ ಗಾಂಧಿ ಅವರನ್ನು ಉದ್ದೇಶಿಸಿ ನೀವು ಸಿಂಹದಂತ ಮಗನಿಗೆ ಜನ್ಮ ನೀಡಿದ್ದೀರಿ ಎಂದು ಹೇಳಿದ್ದಾರೆ. ಇದಕ್ಕೆ ಉತ್ತರ ನೀಡುವ ಸೋನಿಯಾ ಗಾಂಧಿ, ಯಾಕೆಂದರೆ, ನಾನು ಸಿಂಹಿಣಿ ಎಂದು ಹೇಳಿದ್ದಾರೆ. ಈ ವಿಡಿಯೋವಿಗ ಸೋಶಿಯಲ್‌ ಮೀಡಿಯಾ ಸೈಟ್‌ನಲ್ಲಿ ಭಾರೀ ವೈರಲ್‌ ಆಗಿದೆ.

ಮದ್ರಸ ಚಟುವಟಿಕೆಗೆ ಶಕ್ತಿ ತುಂಬಿದ ತಕ್ವಿಯಸದರ್ ಮುಹಲ್ಲಿಂ ಸಂಗಮ

Posted by Vidyamaana on 2023-06-12 15:19:08 |

Share: | | | | |


ಮದ್ರಸ ಚಟುವಟಿಕೆಗೆ ಶಕ್ತಿ ತುಂಬಿದ ತಕ್ವಿಯಸದರ್ ಮುಹಲ್ಲಿಂ ಸಂಗಮ

ಉಪ್ಪಿನಂಗಡಿ;ಧಾರ್ಮಿಕ ಶಿಕ್ಷಣ ಕ್ಷೇತ್ರದಲ್ಲಿ ಜಾಗತಿಕ ಮನ್ನಣೆ ಪಡೆದ ಸಮಸ್ತ ಇಸ್ಲಾಮಿಕ್ ಮತ ವಿಧ್ಯಾಬ್ಯಾಸ ಬೋರ್ಡ್ ಅಧೀನದ ಜಂಹಿಯ್ಯತ್ತುಲ್ ಮುಹಲ್ಲಿಮೀನ್ ದಕ ಜಿಲ್ಲಾ ಸಮಿತಿಯ ಆಶ್ರಯಲ್ಲಿ ಮದ್ರಸ ಕ್ಷೇತ್ರಕ್ಕೆ ಶಕ್ತಿ ತುಂಬುವ ಸಲುವಾಗಿ ಸದರ್ ಮುಹಲ್ಲಿಂ ಸಂಗಮ ಜೂನ್ ಹನ್ನೆರಡು ಸೋಮವಾರ ಉಪ್ಪಿನಂಗಡಿಯ ಎಚ್ ಎಂ ಹಾಲ್ ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದುಹಾಶಿರ್ವಚನದ ಮೂಲಕ ಬೆಳ್ತಂಗಡಿ ಜಿಪ್ರಿ ತಂಙಲ್ ಉದ್ಘಾಟಿಸಿ ಮುಹಲ್ಲಿಮರು ಮಾದರಿ ಯೋಗ್ಯರಾಗಿ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.

ಕೇಂದ್ರೀಯ ಸಂಪನ್ನೂಲ ವ್ಯಕ್ತಿಗಳಾಗಿ ವಿಚಾರ ಮಂಡಿಸಿ ಮಾತನಾಡಿದ  ಕೊಡಗು ಅಬ್ದುರ್ಹ್ಮಾನ್ ಮುಸ್ಲಿಯಾರ್ ಮುಹಲ್ಲಿಮರ ಜವಾಬ್ದಾರಿ ಯನ್ನು ನೆನಪಿಸಿದರು.ಇನ್ನೋರ್ವ ಭಾಷಣಗಾರ ಅಸ್ಲಮ್ ಅಝ್ಹರಿ ಮಾತನಾಡಿ ತಮ್ಮ ಸ್ವಂತ ಜೀವನ ಬದಲಾದರೆ ಸಮಾಜವನ್ನು ಬದಲಾಯಿಸಲು ಸಾಧ್ಯ ಎಂದರು.ಸಮಸ್ತ ಮುಶಾವರ ಸದಸ್ಯ ಉಸ್ಮಾನುಲ್ ಪೈಝಿ ಮಾತನಾಡಿ ಉಲಮಾಗಳು ವಸ್ತ್ರ ಸಂಹಿತೆಯಲ್ಲಿ ಕೂಡಾ ಇತರರಿಗೆ ಮಾದರಿಯಾಗ ಬೇಕು  ಎಂದರು.

 ರಾಜ್ಯ ದಾರಿಮಿ ಒಕ್ಕೂಟದ ಎಸ್ ಬಿ ದಾರಿಮಿ ಯವರು ಆಗಲೇ ಆಗಮಿಸಿದ ಸ್ಪೀಕರ್ ಯುಟಿ ಖಾದರ್ ರನ್ನು ಸ್ವಾಗತಿಸಿ ಮಾತನಾಡಿ ಮುಹಲ್ಲಿಮರ ಭವಣೆ ನೀಗಿಸಲು ಸಮಾಜ ಮತ್ತು ಸರಕಾರ ಮುಂದೆ ಬರಬೇಕು.ಲಕ್ಷಾಂತರ ಮಹಿಳೆಯರಿಗೆ ಎರಡು ಸಾವಿರ ರೂಪಾಯಿ ಕೊಡುವಾಗ ಕೆಲವೊಂದಿಷ್ಟು ಮದ್ರಸ ಅಧ್ಯಾಪಕರಿಗೆ ವಕಫ್ ಬೊರ್ಡ್ ಮೂಲಕ ಅನುದಾನ ಬಿಡುಗಡೆ ಗೊಳಿಸಿದರೆ ಅದು ದೊಡ್ಡ ಹೊರೆಯಾಗದು ಎಂದರು.

ಜಿಲ್ಲೆಯ ಬಹುತೇಕ ಮದ್ರಸ ಗಳು ಸಮಸ್ತದ ಆದರ್ಶದಂತೆ ನಡೆಯುತ್ತಿದೆ.ಆದರೆ ವಕಫ್ ಹಜ್ ಮೊದಲಾದ ಧಾರ್ಮಿಕ ಮಂಡಳಿಗೆ ಆಯ್ಕೆ ಮಾಡುವಾಗ ಸಮಸ್ತದ ಪ್ರತಿನಿಧಿಗಳನ್ನು ಕಡೆಗಣಿಸುವುದು ಇನ್ನು ಮುಂದೆ ಸಹಿಸಲಾಗದು ಎಂದರಲ್ಲದೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟ ಪಕ್ಷದ ಬೆನ್ನೆಲುಬಾಗಿ ನಿಲ್ಲಲು ಸಮಸ್ತದ ಅಭಿಮಾನಿಗಳು ಸದಾ ಮುಂಚೂಣಿಯಲ್ಲಿದ್ದರು.

ಕೋಮುವಾದಿ ಪಕ್ಷದ ಜೊತೆ ಹೊಂದಾಣಿಕೆ ಮಾಡಿದ ಇತಿಹಾಸ ಸಮಸ್ತದ ಕಾರ್ಯಕರ್ತರಿಗೆ ಇಲ್ಲ ಎಂದು ನೆನಪಿಸಿದರು.

ಇದೇ ಸಂಧರ್ಭದಲ್ಲಿ ಸರಕಾರದ ನೂತನ ಸ್ಪೀಕರ್ ಯುಟಿ ಖಾದರ್ ನ್ನು ಸನ್ಮಾನಿಸಲಾಯಿತು.

ನಂತರ ಭಾಷಣ ಮಾಡಿದ ಸ್ಪೀಕರ್ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ನಾನು ಸದಾ ಬದ್ದನಾಗಿದ್ದೇನೆ.ಸಮುದಾಯದ ರಾಯಬಾರಿಗಳೆಂದರೆ ಅದು ಉಲಮಾಗಳು ಮಾತ್ರ.ಅವರ ಮಾರ್ಗದರ್ಶನ ಪಡೆದು ಮುಂದೆ ಸಾಗಿದರೆ ಇಲ್ಲಿ ಅಶಾಂತಿ ಅವ್ಯವಸ್ಥೆ ಉಂಟಾಗುವುದಿಲ್ಲ.ನನ್ನ ಇತಿಮಿತಿಯಲ್ಲಿ ಸಮಸ್ತದ ಕಾರ್ಯಕರ್ತ ರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಸಮಾರೋಪ ಭಾಷಣ ಮಾಡಿದ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಮಾತನಾಡಿ ಕುರ್ಅನ್ ಕಲಿಕೆಯಲ್ಲಿ ಉಂಟಾಗುವ ಲೋಪದೋಷಗಳನ್ನು ಸರಿಪಡಿಸಲು ಅಧ್ಯಾಪಕರು ಶೃದ್ದೆ ವಹಿಸ ಬೇಕೆಂದು ಕರೆ ನೀಡಿದರು.ಹಾಜಿ ಕೆಂಪಿ ಮುಸ್ತಪ ಶುಭ ಹಾರೈಸಿದರು.ಜಿಲ್ಲಾ ಜಂಯಿತ್ತುಲ್ ಮುಹಲ್ಲಿಮೀನ್ ಅಧ್ಯಕ್ಷ ಹಾಜಿ ಶಂಸುದ್ದಿನ್ ದಾರಿಮಿ ಅಧ್ಯಕ್ಷತೆ ವಹಿಸಿದ್ದರು.ಕಡಬ ಇಬ್ರಾಹಿಂ ದಾರಿಮಿ ಕಿರಾಅತ್ ಪಠಿಸಿದರು.

ಸಿದ್ದೀಖ್ ಪೈಝಿ ಕರಾಯ ಸ್ವಾಗತಿಸಿ ರೆಂಜಾಡಿ ದಾರಿಮಿ ವಂದಿಸಿದರು.

ಬೆಳಗ್ಗೆ ನಡೆದ ಸರಳ ಸಮಾರಂಭದಲ್ಲಿ ಕೇಂದ್ರಿಯ ಘಟಕದ ವತಿಯಿಂದ ಪ್ರತೀ ಜಿಲ್ಲೆಗೆ ಒಂದರಂತೆ ನೀಡಲಾಗುವ ಎಂಟು ಲಕ್ಷ ವೆಚ್ಚದ ಮುಹಲ್ಲಿಂ ಮಂಝಿಲ್ ಗೆ ಸಯ್ಯಿದ್ ಅನಸ್ ತಂಙಳ್ ಶಿಲಾನ್ಯಾಸ ಗೈದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ಮನವಿ ವಾಚಿಸಿದರು.

BREAKING : ಕೊಲೆ ಪ್ರಕರಣದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್

Posted by Vidyamaana on 2024-06-11 10:45:52 |

Share: | | | | |


BREAKING : ಕೊಲೆ ಪ್ರಕರಣದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್

ಮೈಸೂರು; ಬೆಳ್ಳಂಬೆಳಗ್ಗೆ ನಟ ದರ್ಶನ್ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯುಂ ಹೊರ ಬಿದ್ದಿದೆ. ನಟ ದರ್ಶನ್ ಅವರು ಕೊಲೆ ಪ್ರಕರಣದಲ್ಲಿ ಮೈಸೂರಿನ ಅವರ ಫಾರ್ಮ್ ಹೌಸ್ ನಿಂದಲೇ ಅರೆಸ್ಟ್ ಮಾಡಲಾಗಿದೆ.

ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದಕ್ಕೆ ರೇಣುಕಾ ಸ್ವಾಮಿ ಎಂಬುವವರನ್ನು ದರ್ಶನ್ ಸೂಚನೆ ಮೇರೆಗೆ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ದರ್ಶನ್ ಸೇರಿ ಒಟ್ಟು 10 ಜನರನ್ನು ಪ್ರಕರಣಕ್ಕೆ

ಛೆ.. ಎಂಥಾ ಅವಸ್ಥೆ.. ನಿಮ್ಮ ಜೊತೆ- ನಿಮ್ಮ ಕಷ್ಟಕ್ಕೆ ನಾನಿದ್ದೇನೆ

Posted by Vidyamaana on 2023-08-26 16:08:11 |

Share: | | | | |


ಛೆ.. ಎಂಥಾ ಅವಸ್ಥೆ.. ನಿಮ್ಮ ಜೊತೆ- ನಿಮ್ಮ ಕಷ್ಟಕ್ಕೆ ನಾನಿದ್ದೇನೆ

ಪುತ್ತೂರು:ದುಷ್ಕರ್ಮಿಯಿಂದ ಕೊಲೆಯಾದ ಅಳಿಕೆ ಕುದ್ದುಪದವು ನಿವಾಸಿ ಗೌರಿ ಮನೆಗೆ ಆ. ೨೬ ರಂದು ಶಾಸಕರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅತ್ಯಂತ ಕಡುಬಡತನದಲ್ಲಿ ಕಾಲ ಕಳೆಯುತ್ತಿರುವ ಮೃತ ಗೌರಿ ತಾಯಿಯ ಕಷ್ಟ ಕಂಡು ಶಾಸಕರು ಮರುಗಿದರು. ಗೌರಿ ತಾಯಿಯ ಜೊತೆ ಮಾತನಾಡುವ ವೇಳೆ ಶಾಸಕರಲ್ಲಿ ತನ್ನ ಕುಟುಂಬದ ಸಂಕಷ್ಟವನ್ನು ವಿವರಿಸುವ ವೇಳೆ ನನ್ನ ಸಹೋದರಿ ಅಂಗವಿಕಲೆ ಆಕೆಗೆ ಯಾವುದೇ ಪಿಂಚಣಿ ನೀಡುತ್ತಿಲ್ಲ, ಆಧಾರ್ ಕಾರ್ಡು ಇಲ್ಲ ಎಂದು ಅಧಿಕಾರಿಗಳು ಆಕೆಗೆ ಯಾವುದೇ ಸವಲತ್ತನ್ನು ನೀಡಿಲ್ಲ ಎಂದು ಶಾಸಕರಲ್ಲಿ ಹೇಳಿದರು. ತಕ್ಷಣವೇ ವಿಕಲಚೇತನ ಯುವತಿ ಮಲಗಿದ್ದ ಸ್ಥಳಕ್ಕೆ ತೆರಳಿದ ಶಾಸಕರು ಒಮ್ಮೆಲೆ ಅಚ್ಚರಿಗೊಂಡದ್ದು ಮಾತ್ರವಲ್ಲದೆ ಪಿಂಚನಿ ಕೊಡದೇ ಇರುವ ವಿಚಾರ ಕೇಳಿ ಆಕ್ರೋಶಗೊಂಡರು.

ಛೇ.. ಎಂಥಾ ಅವಸ್ಥೆ.... ವಿಕಲ ಚೇತನಳಾದರೂ ಪಿಂಛಣಿ ಕೊಡ್ಲಿಕ್ಕೆ ಆಗ್ಲಿಲ್ವ ಇಲ್ಲಿನ ವ್ಯವಸ್ಥೆಗೆ? ಎಷ್ಟು ವರ್ಷದಿಂದ ಯುವತಿ ಮಲಗಿದ್ದಲ್ಲೇ ಇದ್ದಾರೆ? ನಿಮ್ಮ ಮನೆಗೆ ಓಟು ಕೇಳಲು ರಾಜಕೀಯದವರು ಬರುವುದಿಲ್ಲವೇ ತಾಯಿ ಎಂದು ಗೌರಿ ತಾಯಿಯನ್ನು ಪ್ರಶ್ನಿಸಿದರು. ಈ ವೇಳೆ ಉತ್ತರಿಸಿದ ಗೌರಿ ತಾಯಿ ನನ್ನ ಸಹೋದರಿ ಶಾರದಾ ಅನೇಕ ವರ್ಷಗಳಿಂದ ಮಲಗಿದ್ದಲ್ಲೇ ಇದ್ದಾಳೆ, ನಾನು ಕೂಲಿ ಕೆಲಸಕ್ಕೆ ತೆರಳಿ ಮಕ್ಕಳನ್ನು ಸಾಕುತ್ತಿದ್ದೇನೆ, ವಿಕಲ ಚೇತನ ನನ್ನ ಸಹೋದರಿಗೆ ಆಧಾರ್ ಕಾರ್ಡು ಇಲ್ಲದ ಕಾರಣ ಸರಕಾರದಿಂದ ಏನೂ ಸಿಗುತ್ತಿಲ್ಲ ಎಂದು ಹೇಳಿದರು.

ನಾಳೆ ನಿಮ್ಮ ಮನೆಗೆ ನನ್ನ ಕಚೇರಿಯಿಂದ ಜನ ಬರುತ್ತಾರೆ ಅವರು ನಿಮ್ಮ ಸಹೋದರಿಗೆ ಬೇಕಾದ ಎಲ್ಲಾ ದಾಖಲೆಗಳನ್ನು ಸಿದ್ದಪಡಿಸಿ ಮುಂದಿನ ತಿಂಗಳು ಅವರಿಗೆ ವಿಕಲಚೇತನ ಪಿಂಚಣಿ ಬರುತ್ತದೆ ಏನೂ ಹೆದರಬೇಡಿ, ನಿಮ್ಮ ಜೊತೆ ನಾನಿದ್ದೇನೆ, ನಿಮ್ಮ ಕಷ್ಟದ ಜೊತೆ ನಾನಿದ್ದೇನೆ, ಧೈರ್ಯವಾಗಿ ಇರಿ ಎಂದು ಗೌರಿ ತಾಯಿಗೆ ಸಾಂತ್ವನ ಹೇಳಿದರು. ಗೌರಿ ಕುಟುಂಬದ ಬಡತನವನ್ನು ಕಂಡು ಶಾಸಕರ ಕಣ್ಣುಗಳು ತೇವಗೊಂಡವು...

ಪುತ್ತೂರು ಶಾಸಕರ ಇಂದಿನ ಕಾರ್ಯಕ್ರಮ

Posted by Vidyamaana on 2023-05-31 23:25:52 |

Share: | | | | |


ಪುತ್ತೂರು ಶಾಸಕರ ಇಂದಿನ ಕಾರ್ಯಕ್ರಮ

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರು ಗುರುವಾರ ಅಂದರೆ ಜೂನ್ 1ರಂದು ಸಂಜೆ 4.30ರಿಂದ ಸಾರ್ವಜನಿಕ ಅಹವಾಲು ಸ್ವೀಕಾರ ಮಾಡಲಿದ್ದಾರೆ.

*ಬೆಳಿಗ್ಗೆ 10 ಗಂಟೆಗೆ ಪುತ್ತೂರಿನಲ್ಲಿ‌ ಕ್ಲಿನಿಕ್ ಉದ್ಘಾಟನೆ*

*10.30ರಿಂದ ಸಂಜೆ 4 ಖಾಸಗಿ ಕಾರ್ಯಕ್ರಮದಲ್ಲಿ ಭಾಗಿ*

*ಸಂಜೆ 4.30ರಿಂದ ಕಚೇರಿಯಲ್ಲಿ ಸಾರ್ವಜನಿಕರ ಭೇಟಿ ಅಹವಾಲು ಸ್ವೀಕಾರ ಮಾಡಲಿದ್ದಾರೆ*

ಕಾರ್ಕಳ ; ಸಾಫ್ಟ್‌ವೇರ್ ಉದ್ಯೋಗಿ ಚಾರ್ವಿ ನೇಣಿಗೆ ಶರಣು

Posted by Vidyamaana on 2023-10-17 12:52:23 |

Share: | | | | |


ಕಾರ್ಕಳ ; ಸಾಫ್ಟ್‌ವೇರ್ ಉದ್ಯೋಗಿ ಚಾರ್ವಿ ನೇಣಿಗೆ ಶರಣು

ಕಾರ್ಕಳ, ಅ.17: ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ ಯುವತಿಯೋರ್ವಳು ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳಲ್ಲಿ ನಡೆದಿದೆ. 


ಕಾರ್ಕಳ ತಾಲೂಕಿನ ಕಲ್ಲೊಟ್ಟೆಯ ಸಂಪತ್ ಕುಮಾರ್ ಎಂಬವರ ಪುತ್ರಿ ಚಾರ್ವಿ (23) ಆತ್ಮಹತ್ಯೆಗೆ ಶರಣಾದ ಯುವತಿ. ಸೋಮವಾರ ಮನೆಯಲ್ಲೇ ಇದ್ದ ಚಾರ್ವಿ ಸಂಜೆ ವೇಳೆಗೆ ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದ ಚಾರ್ವಿ ಕೆಲವು ತಿಂಗಳಿನಿಂದ ಮನೆಯಿಂದಲೇ ಕೆಲಸ ಮಾಡುತ್ತಿದ್ದಳು. 


ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Recent News


Leave a Comment: