ಕಾರು ಚಾಲನೆಯ ತರಬೇತಿ ನೀಡುವ ವೇಳೆ ಅಸಭ್ಯವಾಗಿ ವರ್ತಿಸಿದ್ದ ಆರೋಪ:ಅಣ್ಣಪ್ಪ ಮಾಲಕತ್ವದ ಮಾರುತಿ ಡ್ರೈವಿಂಗ್ ಸ್ಕೂಲ್‌ನ ಪರವಾನಗಿ ರದ್ದು

ಸುದ್ದಿಗಳು News

Posted by vidyamaana on 2024-07-23 21:09:49 |

Share: | | | | |


ಕಾರು ಚಾಲನೆಯ ತರಬೇತಿ ನೀಡುವ ವೇಳೆ ಅಸಭ್ಯವಾಗಿ ವರ್ತಿಸಿದ್ದ ಆರೋಪ:ಅಣ್ಣಪ್ಪ ಮಾಲಕತ್ವದ  ಮಾರುತಿ ಡ್ರೈವಿಂಗ್ ಸ್ಕೂಲ್‌ನ ಪರವಾನಗಿ ರದ್ದು

ಬೆಂಗಳೂರು : ಬಸವೇಶ್ವರನಗರದ ಮಾರುತಿ ಡ್ರೈವಿಂಗ್‌ ಸ್ಕೂಲ್‌ನ ಪರವಾನಗಿ ಹಾಗೂ ಅದೇ ಶಾಲೆಯ ತರಬೇತುದಾರನ ಚಾಲನಾ ಪರವಾನಗಿಯನ್ನು (ಡಿಎಲ್‌) ಸಾರಿಗೆ ಮತ್ತು ರಸ್ತೆ ಸುರಕ್ಷತಾ ಇಲಾಖೆ ರದ್ದುಗೊಳಿಸಿದೆ. 

ಯುವತಿಗೆ ಕಾರು ಚಾಲನೆಯ ತರಬೇತಿ ನೀಡುವ ವೇಳೆ ಅಸಭ್ಯವಾಗಿ ವರ್ತಿಸಿದ್ದ ಆರೋಪದ ಅಡಿ ಕಾರು ತರಬೇತಿದಾರನ ವಿರುದ್ಧ ಬಸವೇಶ್ವರನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಾದ ಬೆನ್ನಲ್ಲೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಸೂಚನೆಯಂತೆ ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ.

ನಗರದ ಯಾವುದೇ ಡ್ರೈವಿಂಗ್ ಶಾಲೆಯಲ್ಲೂ ಈ ರೀತಿಯ ಘಟನೆಗಳು ನಡೆಯಬಾರದು. ಈ ನಿಟ್ಟಿನಲ್ಲಿ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಹಾಲಕ್ಷ್ಮೀಪುರದ 18 ವರ್ಷದ ಯುವತಿ ನೀಡಿದ್ದ ದೂರು ಆಧರಿಸಿ, ಬಸವೇಶ್ವರನಗರದ ಮಾರುತಿ ಡ್ರೈವಿಂಗ್‌ ಸ್ಕೂಲ್‌ನ ತರಬೇತುದಾರ ಅಣ್ಣಪ್ಪ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಏನಿದು ಪ್ರಕರಣ?:‌

ದೂರು ನೀಡಿದ್ದ ಯುವತಿ ಕಾರು ಚಾಲನೆ ಕಲಿಯಲು ಮಾರುತಿ ಡ್ರೈವಿಂಗ್‌ ಸ್ಕೂಲ್‌ಗೆ ಸೇರಿದ್ದರು. ಅಣ್ಣಪ್ಪ ಎಂಬಾತ ಕಾರು ಚಾಲನೆ ಬಗ್ಗೆ ತರಬೇತಿ ನೀಡಿದ್ದರು. ಒಂದು ತಿಂಗಳ ಕೋರ್ಸ್‌ ಮುಕ್ತಾಯವಾದ ಮೇಲೆ ಅಣ್ಣಪ್ಪ, ನಿಮ್ಮ ಮನೆಯ ಕಾರಿನಲ್ಲೇ ಪರಿಪೂರ್ಣವಾಗಿ ಚಾಲನೆ ಬಗ್ಗೆ ಹೇಳಿಕೊಡುತ್ತೇನೆ. ಒಂದು ಗಂಟೆಯ ವಿಶೇಷ ಕ್ಲಾಸ್‌ಗೆ ₹750 ಕೊಡಬೇಕು ಎಂದು ಯುವತಿಯನ್ನು ಕೇಳಿಕೊಂಡಿದ್ದರು. ಯುವತಿ 15 ದಿನಗಳ ವಿಶೇಷ ಕ್ಲಾಸ್‌ಗೆ ಅಣ್ಣಪ್ಪ ಅವರಿಗೆ ₹10,500 ಪಾವತಿಸಿದ್ದರು. ಅದರಂತೆ ಅಣ್ಣಪ್ಪ ವಿಶೇಷ ತರಬೇತಿ ಆರಂಭಿಸಿದ್ದರು ಎಂದು ಪೊಲೀಸರು ಹೇಳಿದರು.

ಪ್ರತಿದಿನ ಯುವತಿಯ ಮನೆ ಬಳಿ ಬಂದು ಆಕೆಯ ಕಾರಿನಲ್ಲೇ ಅಣ್ಣಪ್ಪ ಚಾಲನೆ ತರಬೇತಿ ನೀಡುತ್ತಿದ್ದರು. ಜುಲೈ 7ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಯುವತಿ ಮನೆ ಬಳಿ ಬಂದಿದ್ದ ಅಣ್ಣಪ್ಪ, ಯುವತಿಯನ್ನು ಕಾರಿನಲ್ಲಿ ಕರೆದುಕೊಂಡು ಚಾಲನೆ ಬಗ್ಗೆ ಹೇಳಿಕೊಡಲು ಮುಂದಾಗಿದ್ದರು. ಬಸವೇಶ್ವರ ನಗರದ ನ್ಯಾಷನಲ್‌ ಶಾಲೆಯ ಮೇಲ್ಸೇತುವೆಯಲ್ಲಿ ತೆರಳುವಾಗ, ಯುವತಿ ಕಾರು ಚಾಲನೆ ಮಾಡುತ್ತಿದ್ದರು. ಆಗ ಅಣ್ಣಪ್ಪ ಅಸಭ್ಯವಾಗಿ ವರ್ತಿಸಿದ್ದರು ಎಂದು ಪೊಲೀಸರು ತಿಳಿಸಿದರು.

ತರಬೇತುದಾರನ ಅಸಭ್ಯ ವರ್ತನೆಯಿಂದ ಗಾಬರಿಗೊಂಡಿದ್ದ ಯುವತಿ ಕಾರನ್ನು ಮನೆಯತ್ತ ತಿರುಗಿಸಿದ್ದರು. ಅದಾದ ಮೇಲೆ ತರಬೇತುದಾರ ಸುಮ್ಮನಾಗಿದ್ದರು. ಅಣ್ಣಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಯುವತಿ ಪೊಲೀಸರಿಗೆ ದೂರು ನೀಡಿದ್ದರು.

 Share: | | | | |


BIGG NEWS : ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು KEA ಅನುಮತಿ

Posted by Vidyamaana on 2023-10-20 11:08:34 |

Share: | | | | |


BIGG NEWS : ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು KEA ಅನುಮತಿ

ಬೆಂಗಳೂರು : ಅಕ್ಟೋಬರ್ 28 ಮತ್ತು 29 ರಂದು ವಿವಿಧ ನಿಗಮ ಮಂಡಳಿಗಳ ಹುದ್ದೆಗಳ ಭರ್ತಿಗೆ ನಡೆಯಲಿರುವ ಪರೀಕ್ಷೆಗೆ ಹಿಜಾಬ್ ಧರಿಸಿ ಹಾಜರಾಗಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅನುಮತಿ ನೀಡಿದೆ. ಕೆಇಎ ವಿವಿಧ ನಿಗಮ ಮಂಡಳಿಗಳ ಹುದ್ದೆ ಪರೀಕ್ಷೆಗೆ ಹಿಜಾಬ್ ಧರಿಸಲು ಅವಕಾಶ ನೀಡಿದೆ. ಪರೀಕ್ಷೆಗೆ ಅಭ್ಯರ್ಥಿಗಳು ಒಂದು ಗಂಟೆ ಮೊದಲು ಪರೀಕ್ಷಾ ಕೇಂದ್ರದಲ್‌ಇ ಹಾಜರಿರಬೇಕು. ಅವರನ್ನು ಮಹಿಳಾ ಸಿಬ್ಬಂದಿ ತಪಾಸಣೆ ನಡೆಸಲಿದ್ದಾರೆ ಎಂದು ಕೆಇಎ ತಿಳಿಸಿದೆ.


ಪರೀಕ್ಷೆಗೆ ಹಾಜರಾಗುವವರು ಪ್ರವೇಶ ಪತ್ರ, ಇತ್ತೀಚಿನ ಪಾಸ್ ಪೋರ್ಟ್ ಅಳತೆಯ 2 ಫೋಟೋ, ಸರ್ಕಾರದ ಮಾನ್ಯ ಮಾಡಿರುವ ಗುರುತಿನ ಚೀಟಿ ತರಬೇಕು. ಪರೀಕ್ಷೆ ಮುಗಿಯುವವರೆಗೂ ಹೊರ ಹೋಗಲು ಅವಕಾಶವಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

FDA ಪರೀಕ್ಷಾ ಅಕ್ರಮ – ಗುಪ್ತಾಂಗದಲ್ಲಿಟ್ಟು ಬ್ಲೂಟೂತ್ ಸಾಗಿಸಿದ ಪರೀಕ್ಷಾರ್ಥಿಗಳು

Posted by Vidyamaana on 2023-10-30 14:59:50 |

Share: | | | | |


FDA ಪರೀಕ್ಷಾ ಅಕ್ರಮ – ಗುಪ್ತಾಂಗದಲ್ಲಿಟ್ಟು ಬ್ಲೂಟೂತ್ ಸಾಗಿಸಿದ ಪರೀಕ್ಷಾರ್ಥಿಗಳು

ಯಾದಗಿರಿ : ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾದ ಪ್ರಥಮ ದರ್ಜೆ ಸಹಾಯಕರ (ಎಫ್‌ಡಿಎ) ಹುದ್ದೆಯ ಪರೀಕ್ಷೆಯಲ್ಲಿ ಕೆಲವು ಪರೀಕ್ಷಾರ್ಥಿಗಳು ಬ್ಲೂಟೂತ್ ಡಿವೈಸ್‌ಅನ್ನು ಗುಪ್ತಾಂಗಗಳಲ್ಲಿ ಇಟ್ಟುಕೊಂಡು ಪರೀಕ್ಷಾ ಕೇಂದ್ರಕ್ಕೆ ಹೋಗುತ್ತಿದ್ದರು. ಅಲ್ಲಿ ಇಟ್ಟುಕೊಂಡ ಡಿವೈಸ್‌ಗಳನ್ನು ಮೆಟಲ್‌ ಡಿಟೆಕ್ಟರ್‌ನಿಂದಲೂ ಪತ್ತೆ ಮಾಡಲಾಗಿಲ್ಲ.ನಂತರ, ಶೌಚಗೃಹಕ್ಕೆ ಹೋಗಿ ಕಿವಿ, ಜನಿವಾರ, ಶರ್ಟ್‌ ಕಾಲರ್‌ನಲ್ಲಿ ಇಟ್ಟುಕೊಂಡು ಬರುತ್ತಿದ್ದರು ಎಂದು ಯಾದಗಿರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ. ಸಂಗೀತಾ ತಿಳಿಸಿದ್ದಾರೆ.


ಯಾದಗಿರಿಯಲ್ಲಿ ಎಫ್‌ಡಿಎ ಪರೀಕ್ಷಾ ವೇಳೆ ನಡೆದ ಅಕ್ರಮ ಪ್ರಕರಣದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆ ಬ್ಲೂಟೂತ್ ಡಿವೈಸ್ ಬಳಸಿ ಎಫ್‌ಡಿ ಎಕ್ಸಾಂ ಬರೆಯುತ್ತಿರುವ ಬಗ್ಗೆ ಬಲ್ಲ ಮೂಲಗಳಿಂದ ಮಾಹಿತಿ ಬಂತು. ತಕ್ಷಣ ನಾವು ಎರಡು ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಯಿತು. ಅಕ್ರಮವಾಗಿ ಪರೀಕ್ಷೆ ಬರೆಯಲು ಮುಂದಾಗಿದ್ದ 9 ಜನ ಪರೀಕ್ಷಾರ್ಥಿಗಳನ್ನ ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಂದ 4 ಬ್ಲೂಟೂತ್ ಡಿವೈಸ್, ಎರಡು ವಾಕಿ-ಟಾಕಿ, ಒಂಬತ್ತು ಮೊಬೈಲ್ ಸೇರಿ 9 ಜನರಿಂದ ವಿವಿಧ ಮಾದರಿಯ ಬಟ್ಟೆಗಳು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.ಇನ್ನು ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದ ಬಂಧಿತ ಆರೋಪಿಗಳೆಲ್ಲರೂ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನವರು. ಆದರೆ, ಅದರಲ್ಲಿ ಒಬ್ಬರು ಮಾತ್ರ ವಿಜಯಪುರದವರು. ಇವರೆಲ್ಲರೂ ತಮ್ಮ ಸಂಬಂಧಿಕರ ಮುಖಾಂತರ ಹಣ ನೀಡಿರುವುದಾಗಿ ಮಾಹಿತಿ ನೀಡಿದ್ದಾರೆ. ಆದರೆ, ಯಾರಿಗೆ ನೀಡಿದ್ದಾರೆ ಎಂಬ ಮಾಹಿತಿ ಇನ್ನೂ ತಿಳಿದಿಲ್ಲ. ಆರೋಪಿಗಳನ್ನು ಇಂದು ಸಂಜೆ ಅಡಿಶನಲ್ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರು ಪಡಿಸಲಾಗಿತ್ತು. ಪ್ರಕರಣದ ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಪೊಲೀಸ್ ಕಸ್ಟಡಿಗೆ ನಾವು ಕೇಳಿದ್ದೆವು. ಆದರೆ, ನ್ಯಾಯಾಧೀಶರು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ನೀಡಿದ್ದಾರೆ ಎಂದರು.ಪರೀಕ್ಷಾ ಕೇಂದ್ರ ಪ್ರವೇಶ ವೇಳೆ ಪೊಲೀಸ್ ಇಲಾಖೆ ವೈಫಲ್ಯ ವಿಚಾರದ ಬಗ್ಗೆ ಮಾತನಾಡಿ, ಪೊಲೀಸ್ ಇಲಾಖೆ ಎಲ್ಲಾ ಬಿಗಿ ಭದ್ರತೆ ವಹಿಸಿತ್ತು, ಆದಾಗ್ಯೂ ಈ ಘಟನೆ ನಡೆದಿದೆ. ಮೊದಲಿನ ಪರೀಕ್ಷೆಗೆ ಮೆಟಲ್ ಡಿಟೆಕ್ಟರ್ ನಿಂದ ತಪಾಸಣೆ ನಡೆಸಿರಲಿಲ್ಲ. ಈ ಪ್ರಕರಣ ಗಮನಕ್ಕೆ ಬಂದ ತಕ್ಷಣ ಮೆಟಲ್ ಡಿಟೆಕ್ಟರ್ ಬಳಸಿದ್ದೇವೆ. ಮೊದಲೇ ಮೆಟಲ್ ಡಿಟೆಕ್ಟರ್ ಬಳಸಿದ್ರೂ ಸಹ ಬ್ಲುಟ್ಯುತ್ ಡಿವೈಸ್ ಕ್ಯಾಚ್ ಮಾಡ್ತಿರಲಿಲ್ಲ. ಬ್ಲೂಟೂತ್ ಡಿವೈಸ್ ಅನ್ನು ಪರೀಕ್ಷಾರ್ಥಿಗಳು ಗುಪ್ತಾಂಗಗಳಲ್ಲಿ ಇಟ್ಟುಕೊಂಡು ಪರೀಕ್ಷಾ ಕೇಂದ್ರಕ್ಕೆ ಹೋಗುತ್ತಿದ್ದರು. ನಂತರ, ಪರೀಕ್ಷಾ ಕೇಂದ್ರದಲ್ಲಿ ಶೌಚಾಲಯ ಹೋಗಿ ಕಿವಿ, ಜನಿವಾರ, ಶರ್ಟ್ ಕಾಲರ್, ಬಟನ್, ಅಂಡರ್ ವೇರ್‌ಗಳಲ್ಲಿ ಇಟ್ಟುಕೊಳ್ಳುತ್ತಿದ್ದರು ಎಂಬುದಾಗಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಸಂಗೀತಾ ತಿಳಿಸಿದರು. ಕೆಇಎ ಪರಿಕ್ಷೆ ಅಕ್ರಮ ಪ್ರಕರಣಕ್ಕೆ ಅಕ್ಕನೇ ಸಾಥ್: ಕೆಇಎ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತಮ್ಮನ ಅಕ್ರಮಕ್ಕೆ ಸಪೋರ್ಟ ಮಾಡಿದ ತಪ್ಪಿಗೆ ಅಕ್ಕ ಅರೆಸ್ಟ್ ಆಗಿದ್ದಾಳೆ. ಕಲಬುರಗಿ ವಿವಿ ಪರೀಕ್ಷಾ ಕೇಂದ್ರದಲ್ಲಿ ಬ್ಲ್ಯೂಟೂತ್ ಮೂಲಕ ಅಕ್ರಮವಾಗಿ ಪರೀಕ್ಷೆ ಬರೆದಿದ್ದ ಲಕ್ಷ್ಮೀಕಾಂತ ಎನ್ನುವ ಅಭ್ಯರ್ಥಿ. ಈ ಲಕ್ಷ್ಮೀಕಾಂತಗೆ ಹೊರಗಡೆ ಕಾರನಲ್ಲಿ ಕುಳಿತು ಮೊಬೈಲ್ ಬಳಸಿ ಉತ್ತರ ಹೇಳುತ್ತಿದ್ದ ಆತನ ಅಕ್ಕ. ತಮ್ಮನ ಅಕ್ರಮಕ್ಕೆ ಸಪೋರ್ಟ ಮಾಡಿದ ತಪ್ಪಿಗೆ ಅಕ್ಕ ಶೈಲಶ್ರಿ ತಳವಾರ ಸಹ ಅರೆಸ್ಟ್ ಆಗಿದ್ದಾಳೆ. ಲಕ್ಷ್ಮೀಪುತ್ರ ಅಫಜಲಪೂರ ತಾಲೂಕಿನ ಸೊನ್ನ ಗ್ರಾಮದ ನಿವಾಸಿಯಾಗಿದ್ದಾನೆ. ಇನ್ನು ಅಕ್ಕ ಶೈಲಶ್ರೀ ಚಿಕ್ಕಬಳ್ಳಾಪುರ ದಲ್ಲಿ ನರ್ಸಿಂಗ್ ಓದುತ್ತಿದ್ದಾಳೆ. ಈಗ ಪೊಲೀಸರು ಆರೋಪಿಗಳನ್ನು ಬಂಧಿಸಿ ವೈದ್ಯಕೀಯ ತಪಾಸಣೆಗೆ ಕರೆದೊಯ್ದ ನಂತರ 14 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.

ಬಂಟ್ವಾಳ ; ಬೆಳ್ಳಂಬೆಳಗ್ಗೆ ಮನೆಗೆ ನುಗ್ಗಿ ತಾಯಿ, ಮಗಳನ್ನು ಬೆದರಿಸಿ ದರೋಡೆ, ಮುಸುಕುಧಾರಿಗಳ ಕೃತ್ಯ, ನಗ- ನಗದು ಲೂಟಿ

Posted by Vidyamaana on 2024-01-11 14:50:55 |

Share: | | | | |


ಬಂಟ್ವಾಳ ; ಬೆಳ್ಳಂಬೆಳಗ್ಗೆ ಮನೆಗೆ ನುಗ್ಗಿ ತಾಯಿ, ಮಗಳನ್ನು ಬೆದರಿಸಿ ದರೋಡೆ, ಮುಸುಕುಧಾರಿಗಳ ಕೃತ್ಯ, ನಗ- ನಗದು ಲೂಟಿ

ಬಂಟ್ವಾಳ, ಜ.11: ನಾಲ್ವರು ಮುಸುಕುಧಾರಿಗಳು  ಮನೆಯೊಂದಕ್ಕೆ ನುಗ್ಗಿ ತಾಯಿ, ಮಗಳಿಗೆ  ಚೂರಿ ತೋರಿಸಿ ಲಕ್ಷಾಂತರ ರೂಪಾಯಿ ನಗ- ನಗದನ್ನು ದರೋಡೆಗೈದ ಘಟನೆ ಬೆಳ್ಳಂಬೆಳಗ್ಗೆ ವಗ್ಗದಲ್ಲಿ ನಡೆದಿದೆ. 


ವಗ್ಗ ಸಮೀಪದ ಅಂಚಿಕಟ್ಟೆ ಸಾಲುಮರ ತಿಮ್ಮಕ್ಕನ ಟ್ರೀ ಪಾರ್ಕ್ ಮುಂಭಾಗದಲ್ಲಿರುವ ಫ್ಲೋರಿನ್ ಪಿಂಟೋ ಅವರ ಹೊಸ ಮನೆಯಿಂದ ದರೋಡೆ ಮಾಡಲಾಗಿದೆ. ಮನೆಯಲ್ಲಿ ತಾಯಿ ಫ್ಲೋರಿನ್ ಪಿಂಟೊ ಮತ್ತು ಅವರ ಮಗಳು ಮರಿನಾ ಪಿಂಟೋ ಇಬ್ಬರು ಮಾತ್ರ ಇದ್ದರು. ಮನೆಯಲ್ಲಿ ಬೇರೆ ಯಾರೂ ಇಲ್ಲವೆಂದು ತಿಳಿದಿದ್ದವರೇ ರಾಬರಿ ನಡೆಸಿದ್ದಾರೆ. ಕಪಾಟಿನಲ್ಲಿರಿಸಿದ್ದ ಸುಮಾರು ಅಂದಾಜು ರೂ 3,20,000/-ಮೌಲ್ಯದ ಒಟ್ಟು 82 ಗ್ರಾಂ ತೂಕದ ವಿವಿಧ ಮಾದರಿಯ ಚಿನ್ನಾಭರಣಗಳನ್ನು, ರೂ 11,000/- ಮೌಲ್ಯದ 2 ಮೊಬೈಲ್ ಫೋನ್ ಗಳನ್ನು ಸುಲಿಗೆ, 30 ಸಾವಿರ ರೂ. ನಗದು ಹಾಗೂ ಒಟ್ಟು ಮೂರುವರೆ ಲಕ್ಷಕ್ಕೂ ಅಧಿಕ ಮೌಲ್ಯದ ನಗ- ನಗದು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಬೆಳಗ್ಗೆ ಸುಮಾರು 6.30ರ ವೇಳೆಗೆ ಕಾಲಿಂಗ್ ಬೆಲ್ ಹಾಕಿದ್ದು ಬಾಗಿಲು ತೆಗದ ಕೂಡಲೇ ನಾಲ್ವರು ಮುಸುಕುಧಾರಿಗಳು ಮನೆಯೊಳಗೆ ನುಗ್ಗಿದ್ದಾರೆ. ಬಳಿಕ ಮನೆಯಲ್ಲಿರುವ ಚಿನ್ನ, ನಗದು ತೆಗೆದು ಕೊಡುವಂತೆ ಬೆದರಿಸಿದ್ದಾರೆ.


ಬೆದರಿಕೆಗೆ ಬಗ್ಗದಾಗ ನಾಲ್ವರು ಕೈಯಲ್ಲಿ ಚೂರಿ ತೋರಿಸಿ ಕೊಲ್ಲುವ ಬೆದರಿಕೆ ಒಡ್ಡಿದ್ದು ಕಪಾಟು ಬೀಗದ ಕೀ ಪಡೆದಿದ್ದಾರೆ. ಬಂಗಾರವನ್ನು ದೋಚುವ ವೇಳೆ ಅಡ್ಡ ಬಂದ ಮಗಳು ಮರೀನಾ ಪಿಂಟೋ ಅವರ ಕೈಗೆ ಗಾಯವಾಗಿದೆ ಎಂದು ಇವರ ಅಣ್ಣ ಆಸ್ಟಿನ್ ಪಿಂಟೋ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎರಡು ದಿನಗಳ ಹಿಂದೆ ಇದೇ ಪರಿಸರದಲ್ಲಿ ಅಂಗಡಿಯಿಂದ ಜ್ಯೂಸ್ ಮೆಷಿನ್ ಒಂದನ್ನು ಕಳವು ಮಾಡಲಾಗಿತ್ತು. ಸ್ಥಳಕ್ಕೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್.ಐ. ಹರೀಶ್ ಭೇಟಿ ನೀಡಿದ್ದಾರೆ. ಶ್ವಾನ ದಳ, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಬಂಟ್ವಾಳ : ವಗ್ಗ ಮನೆಯವರಿಗೆ ಬೆದರಿಸಿ ದರೋಡೆಗೈದ ಪ್ರಕರಣ

Posted by Vidyamaana on 2024-01-22 21:54:00 |

Share: | | | | |


ಬಂಟ್ವಾಳ : ವಗ್ಗ ಮನೆಯವರಿಗೆ ಬೆದರಿಸಿ ದರೋಡೆಗೈದ ಪ್ರಕರಣ

ಬಂಟ್ವಾಳ: ದರೋಡೆಕೋರರ ತಂಡವೊಂದು ಮಾರಾಕಾಸ್ತ್ರಗಳೊಂದಿಗೆ ನುಗ್ಗಿ ಮನೆಯವರನ್ನು ಬೆದರಿಸಿ ಸುಮಾರು ರೂ.3,15,000 ಮೌಲ್ಯದ ಚಿನ್ನಾಭರಣಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದ ಘಟನೆ ದ.ಕ.ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವಗ್ರ ಸಮೀಪದ ಮೇನಾಡು ಎಂಬಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಏಳು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


ಬಂಟ್ವಾಳದ ಮರಿಟಾ ಸಿಂಥಿಯಾ ಪಿಂಟೋ ಎಂಬವರ ವಾಸದ ಮನೆಗೆ ದಿನಾಂಕ 11-01-2024 ರಂದು ಮುಂಜಾನೆ 6-15 ಗಂಟೆಗೆ ದರೋಡೆಕೋರರ ತಂಡವೊಂದು ಮಾರಾಕಾಸ್ತ್ರಗಳೊಂದಿಗೆ ನುಗ್ಗಿ ಮನೆಯವರನ್ನು ಬೆದರಿಸಿ ಸುಮಾರು ರೂ.3,15,000 ಮೌಲ್ಯದ ಚಿನ್ನಾಭರಣಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದರು. ಈ ಕುರಿತಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ๒.:03/2024 : 395, 397, 411 ... ರಂತೆ ಪುಕರಣ ದಾಖಲಾಗಿತ್ತು.ಯಾವುದೇ ಸಣ್ಣ ಸುಳಿವುಗಳೇ ಇಲ್ಲದ ಈ ದರೋಡೆ ಪ್ರಕರಣವು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಗೆ ಒಂದು ಸವಾಲು ಆಗಿತ್ತು. ಪ್ರಕರಣದ ಗಂಭೀರತೆಯನ್ನು ಮನಗಂಡು ಶ್ರೀ ರಿಷ್ಯಂತ್, ಐಪಿಎಸ್. ಪೊಲೀಸ್ ಅಧೀಕ್ಷಕರು, ದ.ಕ.ಜಿಲ್ಲೆ ರವರು ಶ್ರೀ ಧರ್ಮಪ್ಪ, ಮತ್ತು ಶ್ರೀ ರಾಜೇಂದ್ರ, ಹೆಚ್ಚುವರಿ ಪೊಲೀಸ್ ಅಧೀಕ್ಷಕರವರುಗಳ ಸಹಭಾಗಿತ್ವದಲ್ಲಿ, ಶ್ರೀ. ಎಸ್. ವಿಜಯ ಪ್ರಸಾದ್, ಡಿ.ವೈ.ಎಸ್.ಪಿ. ಬಂಟ್ವಾಳ ರವರ ನೇತೃತ್ವದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್‌ ನಿರೀಕ್ಷಕರಾದ ಶ್ರೀ ಶಿವಕುಮಾರ ಬಿ, ಶ್ರೀ ನಂದಕುಮಾ‌ರ್, ಪಿ.ಎಸ್.ಐ. ಪುಂಜಾಲಕಟ್ಟೆ, ಶ್ರೀ ಹರೀಶ ಎಂ.ಆರ್. ಪಿ.ಎಸ್.ಐ. ಬಂಟ್ವಾಳ ಗ್ರಾಮಾಂತರ ಠಾಣೆರವರ 3 ವಿಶೇಷ ಪತ್ತೆ ತಂಡಗಳನ್ನು ರಚಿಸಿ ಸದ್ರಿ ತಂಡಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ, ನುರಿತ ಅಪರಾಧ ವಿಭಾಗದ ಸಿಬ್ಬಂದಿಗಳಾದ ಎ.ಎಸ್.ಐ. ಗಿರೀಶ್, ಹೆಚ್.ಸಿ. ಗಳಾದ ಸುಜು, ರಾಧಾಕೃಷ್ಣ, ಉದಯ ರೈ, ಅದ್ರಾಮ, ಪ್ರವೀಣ್ ರೈ, ಪ್ರವೀಣ್, ಸಂದೀಪ್, ರಾಹುಲ್, ಇರ್ಷಾದ್, ರಾಜೇಶ್, ಹರಿಶ್ಚಂದ್ರ, ಪಿ.ಸಿ.ಗಳಾದ ಪುನೀತ್, ರಮ್ಯಾನ್, ಯೋಗೇಶ್ ಡಿ.ಎಲ್, ಕುಮಾರ್ ಹೆಚ್. ಕೆ., ವಿನಾಯಕ ಬಾರ್ಕಿ, ಜಗದೀಶ ಅತ್ತಾಜೆ, ಜಮೀ‌ರ್ ಕಲಾರಿ, ಎ.ಹೆಚ್.ಸಿ.ಗಳಾದ ಕುಮಾ‌ರ್, ಮಹಾಂತೇಶ್‌, ಜಿಲ್ಲಾ ಪೊಲೀಸ್ ಕಚೇರಿಯ ಗಣಕಯಂತ್ರ ವಿಭಾಗದ ದಿವಾಕರ್, ಸಂಪತ್ ರವರನ್ನು ನೇಮಕ ಮಾಡಿದ್ದರು.ಇಲಾಖಾ ಮೇಲಾಧಿಕಾರಿಗಳ ಅತ್ಯಂತ ಅನುಭವಿ ಹಾಗು ಸಮಯೋಚಿತ ಮಾರ್ಗದರ್ಶನ, ಸಲಹೆ ಸೂಚನೆ ಮತ್ತು ನಿರಂತರ ನಿಗಾವಣೆಯಲ್ಲಿ ಸದ್ರಿ ವಿಶೇಷ ಪತ್ತೆ ತಂಡವು ತನ್ನ ನಿರಂತರ ಹಾಗು ಶ್ರಮಭರಿತ ಪ್ರಯತ್ನದಿಂದ ಸದ್ರಿ ದರೋಡೆ ಪ್ರಕರಣವನ್ನು ಭೇಧಿಸಿ ದರೋಡೆಕೋರರನ್ನು ಬಂಧಿಸಿ ದರೋಡೆಗೊಳಗಾದ ರೂ.3,15,000 ಮೌಲ್ಯದ ಚಿನ್ನಾಭರಣ ಹಾಗು ದರೋಡೆಗೆ ಬಳಸಿದ ಒಂದು ಇನ್ನೋವಾ ಕಾರು ಅಂದಾಜು ಮೌಲ್ಯ ರೂ.8 ಲಕ್ಷ ಹಾಗು ಟಾಟಾ ಇಂಡಿಕಾ ಕಾರು ಅಂದಾಜು ಮೌಲ್ಯ ರೂ.2 ಲಕ್ಷ ಇವುಗಳನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಯಶಸ್ವಿ ಆಗಿರುತ್ತಾರೆ.


ದರೋಡೆಕೋರರನ್ನು ಕಾರ್ಕಳ ತಾಲೂಕಿನ ಮಾಳ ಗ್ರಾಮದ ಸುರೇಶ ನಾಯ್ಕ ಅವರ ಮಗ ಗಣೇಶ ನಾಯ್ಕ (26) ದಿನೇಶ್ ನಾಯ್ಕ (22), ಮಂಗಳೂರು ತಾಲೂಕು, ಐಕಳ ಗ್ರಾಮದ ಜಯರಾಜ್ ಶೆಟ್ಟಿ ಅವರ ಮಗ ಸಾಗರ ಶೆಟ್ಟಿ (21), ಕಡಬ ತಾಲೂಕು, ಬೆಳಂದೂ ಗ್ರಾಮದ, ವಿನ್ಸಿ ಲ್ಯಾನ್ಸಿ ಪಿಂಟೋ ಅವರ ಮಗ ರಾಕೇಶ್ ಎಲ್. ಪಿಂಟೋ (29), ವಾಸು ಸಾಲ್ಯಾನ್ ಅವರ ಮಗ ಪ್ರವೀಣ್ (36), ಅಣ್ಣಿ ಪೂಜಾರಿ ಅವರ ಮಗ ಸುಧೀರ್ (29) ಎಂದು ಗುರುತಿಸಲಾಗಿದೆ.ಇನ್ನು ದರೋಡೆಗೈದ ಚಿನ್ನಾಭರಣವನ್ನು ಸ್ವೀಕರಿಸಿದಾತ


ಮೂಲತ: ಬಂಟ್ವಾಳ ತಾಲೂಕಿನ, ಇರಾ ಗ್ರಾಮದವನಾದ ಪ್ರಸ್ತುತ ಗೌರಿ ಕಾಲುವೆ, ಚಿಕ್ಕಮಗಳೂರು ಜಿಲ್ಲೆ ವಾಸಿ ಮಹಮ್ಮದ್ ಹನೀಫ್ (49). ಸದ್ರಿ ಆರೋಪಿಗಳ ಪೈಕಿ ಗಣೇಶ ನಾಯ್ಕ ಈತನು 2023ನೇ ಸಾಲಿನಲ್ಲಿ ಮಂಗಳೂರು 

ನಗರ ವ್ಯಾಪ್ತಿಯ ಮುಲ್ಕಿ, ಐಕಳ ಹರೀಶ್ ಶೆಟ್ಟಿರವರ ಮನೆಯಿಂದ ಅಪಾರ ಮೊತ್ತದ ನಗದು, ಚಿನ್ನಾಭರಣ, ವಜ್ರ ಕಳವು ಮಾಡಿದ ಮುಖ್ಯ ಆರೋಪಿಯಾಗಿದ್ದು, ಉಳಿದಂತೆ 

ಸೀತಾರಾಮ, ಪ್ರವೀಣ್, ಸುಧೀರ್ ಹಾಗು ಮಹಮ್ಮದ್ ಹನೀಫ್ ರವರ ವಿರುದ್ಧ ದ.ಕ.ಜಿಲ್ಲೆ ಹಾಗು ಇನ್ನಿತರ ಜಿಲ್ಲೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿರುತ್ತದೆ.


ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರ ಈ ಪತ್ತೆ ಕಾರ್ಯಕ್ಕೆ ಇಲಾಖಾ ಮೇಲಾಧಿಕಾರಿಗಳು ಮೆಚ್ಚುಗೆಯನ್ನು ಸೂಚಿಸಿ ಬಹುಮಾನವನ್ನು ಘೋಷಿಸಿರುತ್ತಾರೆ ಹಾಗು ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿರುತ್ತದೆ

ಕಲ್ಲಡ್ಕ ಮ್ಯೂಸಿಯಂ ವತಿಯಿಂದ ಅಂತಾರಾಷ್ಟ್ರೀಯ ಮಟ್ಟದ ಹ್ಯಾಂಡ್ ಬಾಲ್ ಸ್ಪರ್ಧೆಗೆ ಆಯ್ಕೆಯಾದ ಭಾರತ ತಂಡದ ಆಟಗಾರರಿಗೆ ಸನ್ಮಾನ

Posted by Vidyamaana on 2024-02-10 09:59:13 |

Share: | | | | |


ಕಲ್ಲಡ್ಕ ಮ್ಯೂಸಿಯಂ ವತಿಯಿಂದ ಅಂತಾರಾಷ್ಟ್ರೀಯ ಮಟ್ಟದ ಹ್ಯಾಂಡ್ ಬಾಲ್ ಸ್ಪರ್ಧೆಗೆ ಆಯ್ಕೆಯಾದ ಭಾರತ ತಂಡದ ಆಟಗಾರರಿಗೆ ಸನ್ಮಾನ

ಬಂಟ್ವಾಳ : ಕಲ್ಲಡ್ಕ ಮ್ಯೂಸಿಯಂ ವತಿಯಿಂದ ಜಪಾನಿನಲ್ಲಿ ನಡೆಯಲಿರುವ 17 ರ ವಯೋಮಾನದ ಅಂತಾರಾಷ್ಟ್ರೀಯ ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಕ್ರೀಡಾ ಪಟುಗಳಿಗೆ ಸನ್ಮಾನ ಕಾರ್ಯಕ್ರಮ ಕಲ್ಲಡ್ಕ ಮ್ಯೂಸಿಯಂ ಆವರಣದಲ್ಲಿ ನಡೆಯಿತು.


       2023-24 ನೇ ಸಾಲಿನಲ್ಲಿ ತಾಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ  ನಡೆದ ಹ್ಯಾಂಡ್ ಬಾಲ್ ಸ್ಪರ್ಧೆಗಳಲ್ಲಿ ವಿಜೇತರಾಗಿ ಇದೀಗ ಜಪಾನಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಬಂಟ್ವಾಳ ತಾಲೂಕಿನ ಅಮ್ಟೂರು ದೇವ ಮಾತಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಮೊಹಮ್ಮದ್ ಅಝೀಂ ಬಿ., ಮೊಹಮ್ಮದ್ ಮಸ್ಕೂರ್, ಸೃಜನ್, ಲಕ್ಷತ್ ಎಚ್, ಮೊಹಮ್ಮದ್ ಫಾಝ್ ಹಾಗೂ ಇವರಿಗೆ ತರಭೇತು ನೀಡಿದ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಮಹೇಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.


    ಸನ್ಮಾನ ಸಮಾರಂಭದಲ್ಲಿ ಮುಖ್ಯ ಭಾಷಣಗೈದ ಬಿ.ಮೂಡ ಸರಕಾರಿ ಪ.ಪೂ.ಕಾಲೇಜು ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಮಾತನಾಡಿ ಯಾವುದೇ ಸಾಧನೆ ಮಾಡಿದ ಸಾಧಕನಿಗೆ ತನ್ನ ಊರಿನಲ್ಲಿ ಸಿಗುವ ಸನ್ಮಾನ ಆತನಿಗೆ ದೊರಕುವ ಬಹು ದೊಡ್ಡ ಪಾರಿತೋಷಕವಾಗಿದೆ, ಪ್ರತಿಯೊಂದು ಮಕ್ಕಳಲ್ಲೂ ಹುದುಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಪೋಷಕರು ಹಾಗೂ ಶಿಕ್ಷಕರಿಂದ ಆಗಬೇಕಾಗಿದೆ ಎಂದರು.


    ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಶಾಸಕ ರುಕ್ಮಯ್ಯ ಪೂಜಾರಿ ಮಾತನಾಡಿ ಹ್ಯಾಂಡ್ ಬಾಲ್ ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ  ವಿದ್ಯಾರ್ಥಿಗಳು ಮತ್ತು ವಿಶೇಷ ವಸ್ತು ಸಂಗ್ರಹದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮೂರಿನ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ ಕಲ್ಲಡ್ಕ ಮ್ಯೂಸಿಯಂ ನ ಸಂಸ್ಥಾಪಕ ಹಾಜಿ ಮುಹಮ್ಮದ್ ಯಾಸಿರ್ ಅವರ ಸಾಧನೆಯ ಬಗ್ಗೆ ಕೊಂಡಾಡಿದರು.


     ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಮುದರ್ರಿಸ್ ಉಸ್ಮಾನ್ ದಾರಿಮಿ, ಕರಿಂಗಾನ ಚರ್ಚ್ ನ ಧರ್ಮಗುರು ರೆ.ಫಾ. ಕಿರಣ್ ಮ್ಯಾಕ್ಸಿಂ ಪಿಂಟೋ, ಬೋಳಂಗಡಿ ಹವ್ವಾ ಜುಮಾ ಮಸೀದಿ ಖತೀಬ್ ಯಹ್ಯಾ ತಂಙಳ್,  ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಕೆ.ಪದ್ಮನಾಭ ರೈ, ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲು ಮಾತನಾಡಿ ಶುಭ ಹಾರೈಸಿದರು.


     ಕಲ್ಲಡ್ಕ ಕೆ.ಟಿ.ಹೋಟೇಲ್ ಮಾಲಕ ರಾಜೇಂದ್ರ ಹೊಳ್ಳ,  ಗೋಳ್ತಮಜಲು ಗ್ರಾಮ ಪಂಚಾಯತ್ ಸದಸ್ಯ ಯೂಸುಫ್ ಹೈದರ್, ಹಜಾಜ್ ಸಮೂಹ ಸಂಸ್ಥೆಯ ಇಮ್ತಿಯಾಝ್ ಗೋಳ್ತಮಜಲು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಝಕರಿಯಾ ಕಲ್ಲಡ್ಕ, ಕಲ್ಲಡ್ಕದ ತ್ರಿವರ್ಣ ಸಂಗಮ ಹಾಗೂ ಝಮಾನ್ ಬಾಯ್ಸ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.


      ದೈಹಿಕ ಶಿಕ್ಷಣ ಶಿಕ್ಷಕ ಮಹೇಶ್ ಶೆಟ್ಟಿ ಹ್ಯಾಂಡ್ ಬಾಲ್ ಕ್ರೀಡೆ ಹಾಗೂ ಕ್ರೀಡಾಪಟುಗಳ ಸಾಧನೆಯ ಬಗ್ಗೆ ವಿವರಿಸಿದರು. ಕಲ್ಲಡ್ಕ ಮ್ಯೂಸಿಯಂ ಸಂಸ್ಥಾಪಕ   ಯಾಸಿರ್ ಕಲ್ಲಡ್ಕ ಸ್ವಾಗತಿಸಿ, ವಂದಿಸಿದರು. ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.

ಬಿ.ಆರ್. ಶೆಟ್ಟಿ ಎಂಬ ಬ್ಯಸಿನೆಸ್ ಟೈಕೂನ್ ರಾತ್ರೋರಾತ್ರಿ ಬೀದಿಗೆ ಬಂದಿದ್ದು ಹೇಗೆ?

Posted by Vidyamaana on 2023-10-05 08:28:34 |

Share: | | | | |


ಬಿ.ಆರ್. ಶೆಟ್ಟಿ ಎಂಬ ಬ್ಯಸಿನೆಸ್ ಟೈಕೂನ್ ರಾತ್ರೋರಾತ್ರಿ ಬೀದಿಗೆ ಬಂದಿದ್ದು ಹೇಗೆ?

ಸಾವಿರಾರು ಕೋಟಿ ಆಸ್ತಿ ಹೊಂದಿದ್ದ ವ್ಯಕ್ತಿ ರಾತ್ರೋರಾತ್ರಿ ಬೀದಿಗೆ ಬಂದಿದ್ದಾರೆ ಎಂದು ಯಾರಾದರೂ ಹೇಳಿದರೆ ನಂಬಲು ಸ್ವಲ್ಪ ಕಷ್ಟವಾಗುತ್ತದೆ. ಆದಾಗ್ಯೂ, ಒಂದು ಕಾಲದಲ್ಲಿ ಕೋಟ್ಯಾಧಿಪತಿಯಾಗಿದ್ದ ಬಿ.ಆರ್.ಶೆಟ್ಟಿ (ಬಾವಗುತ್ತು ರಘುರಾಮ ಶೆಟ್ಟಿ) ಅವರ ಬದುಕಲ್ಲೂ ಅಂತಹುದೇ ದುರಂತ ಸಂಭವಿಸಿದೆ.


ಶೆಟ್ಟಿಯವರ ಸಂಪತ್ತಿನ ನಿವ್ವಳ ಮೌಲ್ಯ 18,000 ಕೋಟಿ ರೂ. ಅವರು ಬುರ್ಜ್ ಖಲೀಫಾದಲ್ಲಿ 2 ಸಂಪೂರ್ಣ ಮಹಡಿಗಳನ್ನು ಹೊಂದಿದ್ದರು. ಅವರ ಬೆಲೆ 25 ಮಿಲಿಯನ್ ಡಾಲರ್ ಆಗಿತ್ತು. ಅಲ್ಲದೇ ಅವರು ಖಾಸಗಿ ಜೆಟ್, ಐಷಾರಾಮಿ ಕಾರು ಮತ್ತು ಪಾಮ್ ಜುಮೇರಾದಲ್ಲಿ ಆಸ್ತಿಯಂತಹ ಎಲ್ಲಾ ಐಷಾರಾಮಿ ಸೌಲಭ್ಯ ಹೊಂದಿದ್ದರು. ಆದರೀಗ ಅವರ ಒಂದು ಟ್ವೀಟ್ ಅವರ ಇಡೀ ಸಾಮ್ರಾಜ್ಯವನ್ನು ಮುಳುಗಿಸಿದೆ.

ಪಡೀಲ್ ಕೆಪುಳು ಬಳಿ ಬೈಕ್ ಸ್ಕೂಟರ್ ನಡುವೆ ನಡೆದ ಅಪಘಾತದ ಸಿ ಸಿ ಟಿವಿ ದೃಶ್ಯ!

ಹಿಂಡನ್ಬರ್ಗ್ ಪ್ರಕರಣದಲ್ಲಿ ಅದಾನಿ ಗ್ರೂಪ್ನಲ್ಲಿ ಸಂಭವಿಸಿದಂತೆ, ಬಿಆರ್ ಶೆಟ್ಟಿ ಪ್ರಕರಣದಲ್ಲಿ ಹಗರಣವು ಹಲವು ಪಟ್ಟು ದೊಡ್ಡದಾಗಿದೆ. ಇದರ ಪರಿಣಾಮವಾಗಿ 2 ಬಿಲಿಯನ್ ಡಾಲರ್ (16,650 ಕೋಟಿ) ಮೌಲ್ಯದ ಕಂಪನಿಯನ್ನ 74 ರೂಪಾಯಿಗೆ ಸಮನಾದ 1 ಡಾಲರ್ಗೆ ಮಾರಬೇಕಾಯ್ತು.

ನೀರಿನಂತೆ ಹಣ ವ್ಯಯಿಸಿದ್ದ ಉದ್ಯಮಿ

ಬಿ ಆರ್ ಶೆಟ್ಟಿ ಬುರ್ಜ್ ಖಲೀಫಾದಲ್ಲಿ 2 ಸಂಪೂರ್ಣ ಮಹಡಿಗಳನ್ನು ಹೊಂದಿದ್ದರು, ಇದು ವಿಶ್ವದ ಅತ್ಯಂತ ಪ್ರಸಿದ್ಧ ಕಟ್ಟಡಗಳಲ್ಲಿ ಒಂದಾಗಿದೆ. ಅವರು ಇಲ್ಲಿ ಐಷಾರಾಮಿ ಪಾರ್ಟಿಗಳನ್ನು ಆಯೋಜಿಸುತ್ತಿದ್ದರು. ಖಾಸಗಿ ಜೆಟ್ ನಲ್ಲಿ ದುಬೈಗೆ ಹೋಗುತ್ತಿದ್ದರು. ರೋಲ್ಸ್ ರಾಯ್ಸ್ ಮತ್ತು ಮೇಬ್ಯಾಕ್ ನಂತಹ ಐಷಾರಾಮಿ ಕಾರುಗಳನ್ನು ಹೊಂದಿದ್ದರು. ಅವರು ವಿಂಟೇಜ್ ಕಾರುಗಳ ಬಗ್ಗೆಯೂ ಒಲವು ಹೊಂದಿದ್ದರು.

ಮೋರಿಸ್ ಮೈನರ್ 1000 ವನ್ನೂ ಅವರ ಕಾರು ಬೆಂಗಾವಲು ಪಡೆಯಲ್ಲಿ ಸೇರಿಸಲಾಯಿತು. ಶೆಟ್ಟಿ ಪಾಮ್ ಜುಮೇರಾ ಮತ್ತು ದುಬೈನ ವರ್ಲ್ಡ್ ಸೆಂಟರ್ನಲ್ಲಿಯೂ ಆಸ್ತಿ ಹೊಂದಿದ್ದರು. ಖಾಸಗಿ ಜೆಟ್ನಲ್ಲಿ ಶೇ 50ರಷ್ಟು ಪಾಲನ್ನು ಹೊಂದಿದ್ದರು. ಅದನ್ನು ಅವರು ಇನ್ನೊಬ್ಬ ಬಿಲಿಯನೇರ್ನಿಂದ 42 ಲಕ್ಷ ಡಾಲರ್ಗೆ ಖರೀದಿಸಿದ್ದರು.

ಆ ಒಂದು ಟ್ವೀಟ್ ಮತ್ತು ಎಲ್ಲವೂ ಖತಂ

2019 ರಲ್ಲಿ, ಯುಕೆಯ ಮಡ್ಡಿ ವಾಟರ್ಸ್ ಅವರ ಕಂಪನಿ ಬಗ್ಗೆ ಒಂದು ಟ್ವೀಟ್ ಮಾಡಿತ್ತು. ನಾಲ್ಕು ತಿಂಗಳ ನಂತರ, ಇದೇ ಕಂಪನಿಯು ಸಂಪೂರ್ಣ ವರದಿ ಪ್ರಕಟಿಸಿತು, ಇದರಲ್ಲಿ ಎನ್ಎಂಸಿ ಹೆಲ್ತ್ನಲ್ಲಿನ ಹಣಕಾಸಿನ ಅಕ್ರಮಗಳ ಬಗ್ಗೆ ಕ್ಲೈಮ್ ಮಾಡಲಾಗಿದೆ. ಎನ್ಎಂಸಿ ಹೆಲ್ತ್ ಸಾಲವನ್ನು ಕಡಿಮೆ ಮಾಡುತ್ತಿದೆ ಮತ್ತು ನಗದು ಹರಿವನ್ನು ಅತಿಯಾಗಿ ತೋರಿಸುತ್ತಿದೆ ಎಂದು ವರದಿ ಹೇಳಿತ್ತು.

ಎನ್ ಎಂಸಿ ಹೆಲ್ತ್ ಬಿಆರ್ ಶೆಟ್ಟಿ ಅವರ ಕಂಪನಿಯಾಗಿತ್ತು. ಇದು ಯುಎಇಯಲ್ಲಿ ಅತಿ ದೊಡ್ಡ ಖಾಸಗಿ ಆರೋಗ್ಯ ಆಪರೇಟರ್ ಆಗಿತ್ತು. ಈ ಕಂಪನಿಯನ್ನು ಲಂಡನ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಪಟ್ಟಿ ಮಾಡಲಾಗಿದೆ. ಈ ಕಂಪನಿಯು ಮಡ್ಡಿ ವಾಟರ್ಸ್ನ ರಾಡಾರ್ಗೆ ಒಳಪಟ್ಟಿರುವುದು ಶೆಟ್ಟಿಯವರ ದುರಾದೃಷ್ಟ.

ಕಂಪನಿಯ ಹಣಕಾಸಿನ ಅಕ್ರಮಗಳ ಹಕ್ಕುಗಳು ಷೇರುಗಳಲ್ಲಿ ಮಾರಾಟವನ್ನು ಪ್ರಚೋದಿಸಿತು ಮತ್ತು ಸ್ವಲ್ಪ ಸಮಯದೊಳಗೆ ಶೆಟ್ಟಿ ಕುಟುಂಬದ ಸಂಪತ್ತು $ 1.5 ಶತಕೋಟಿಗಳಷ್ಟುಕುಸಿಯಿತು. ಹಿಂಡೆನ್ಬರ್ಗ್ನಂತೆಯೇ ಮಡ್ಡಿ ವಾಟರ್ಸ್ ಕೂಡ ಒಂದು ಸಣ್ಣ ಮಾರಾಟಗಾರ ಎಂಬುವುದು ಉಲ್ಲೇಖನೀಯ.

ಕಂಪನಿ 1 ಡಾಲರ್ಗೆ ಮಾರಾಟ

ಷೇರುಗಳ ಮಾರಾಟವು ಕಂಪನಿಯ ಮೌಲ್ಯವನ್ನು ಸಂಪೂರ್ಣವಾಗಿ ನಾಶಪಡಿಸಿತು. ಇದಲ್ಲದೆ, ಕಂಪನಿಯು $ 1 ಬಿಲಿಯನ್ ಸಾಲವನ್ನು ಹೊಂದಿದ್ದು ಅದು ವರದಿಯಾಗಿಲ್ಲ. ಒಂದು ಕಾಲದಲ್ಲಿ ಕಂಪನಿಯ ಶೇರುಗಳ ಗರಿಷ್ಠ ಮೌಲ್ಯ 10 ಬಿಲಿಯನ್ ಡಾಲರ್ ತಲುಪಿತ್ತು, ಆದರೆ ಒಂದರ ಹಿಂದೆ ಒಂದರಂತೆ ಬಹಿರಂಗಪಡಿಸಿದ ಶೆಟ್ಟಿ ಕಂಪನಿಯನ್ನು 1 ಡಾಲರ್ಗೆ ಮಾರಾಟ ಮಾಡಬೇಕಾದ ಪರಿಸ್ಥಿತಿಯನ್ನು ಸೃಷ್ಟಿಸಿತು.



Leave a Comment: