ಪುತ್ತೂರು: ನೇಣು ಬಿಗಿದು ಅನ್ಸರ್ ಆತ್ಮಹತ್ಯೆ

ಸುದ್ದಿಗಳು News

Posted by vidyamaana on 2024-07-05 12:22:17 |

Share: | | | | |


ಪುತ್ತೂರು: ನೇಣು ಬಿಗಿದು  ಅನ್ಸರ್  ಆತ್ಮಹತ್ಯೆ

ಪುತ್ತೂರು : ವಿವಾಹಿತ ಯುವಕನೊಬ್ಬ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ವಳತ್ತಡ್ಕ ಸಮೀಪದ ಕೊಪ್ಪಳ ಎಂಬಲ್ಲಿ ಗುರುವಾರ ನಡೆದಿದೆ.

ಮೂಲತಃ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ರೆಂಜಲಾಡಿ ನಿವಾಸಿಯಾಗಿದ್ದು, ಪ್ರಸ್ತುತ ಆರ್ಯಾಪು ಗ್ರಾಮದ ವಳತ್ತಡ್ಕ ಸಮೀಪದ ಕೊಪ್ಪಳ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯವಿದ್ದ ಸಿದ್ದೀಕ್ ಅನ್ಸರ್(32) ಆತ್ಮಹತ್ಯೆ ಮಾಡಿಕೊಂಡವರು. ಗುರುವಾರ ಕೊಪ್ಪಳದಲ್ಲಿರುವ ತನ್ನ ಮಾವನ ಅಡಕೆ ತೋಟದ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಡಕೆ ಗಾರ್ಬಲ್‌ನಲ್ಲಿ ದುಡಿಯುತ್ತಿದ್ದ ಸಿದ್ದೀಕ್ ಅನ್ಸರ್ ಸರ್ವೆ ಗ್ರಾಮದ ಕಲ್ಪನೆಯಲ್ಲಿ 10 ಸೆಂಟ್ಸ್ ಜಾಗ ಖರೀದಿಸಿ ಮನೆ ನಿರ್ಮಿಸಲು ಅಡಿಪಾಯ ಹಾಕಿದ್ದರು. ಆರ್ಯಾಪು ಗ್ರಾಮದ ಕೊಪ್ಪಳದಲ್ಲಿ ಬಾಡಿಗೆ ಮನೆ ಮಾಡಿ ಅಲ್ಲಿ ತಂದೆ, ತಾಯಿ ಹಾಗೂ ಪತ್ನಿ ಮಕ್ಕಳ ಜತೆ ವಾಸ್ತವ್ಯವಿದ್ದರು. ಕಳೆದ ಒಂದೂವರೆ ತಿಂಗಳಿನಿಂದ ವಿಪರೀತ ಹೊಟ್ಟೆನೋವು ಮತ್ತು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಪುತ್ತೂರಿನ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರೂ ಗುಣಮುಖರಾಗದ ಅವರು ಗಾರ್ಬಲ್ ಕೆಲಸಕ್ಕೆ ಹೋಗದೆ ಮನೆಯಲ್ಲೇ ಉಳಿದುಕೊಂಡಿದ್ದರು. ಮನೆ ನಿರ್ಮಿಸುವ ಉದ್ದೇಶದಿಂದ ಸಾಲ ಪಡೆದಿದ್ದ ಅವರು ಸಾಲ ತೀರಿಸಲಾಗದೆ ಜೀವನದಲ್ಲಿ ಜಿಗುಪ್ಪೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

 Share: | | | | |


ಕ್ರೈಸ್ತ ಬಾಂಧವರಿಂದ ಚರ್ಚ್ ಗಳಲ್ಲಿ ಶ್ರದ್ಧಾ ಭಕ್ತಿಯ ಗುಡ್ ಫ್ರೈಡೇ ಆಚರಣೆ

Posted by Vidyamaana on 2023-04-08 06:51:01 |

Share: | | | | |


ಕ್ರೈಸ್ತ ಬಾಂಧವರಿಂದ ಚರ್ಚ್ ಗಳಲ್ಲಿ ಶ್ರದ್ಧಾ ಭಕ್ತಿಯ ಗುಡ್ ಫ್ರೈಡೇ ಆಚರಣೆ

ಪುತ್ತೂರು:ಏ .7 ರಂದು ಪ್ರಭು ಯೇಸುಕ್ರಿಸ್ತರನ್ನು ಶಿಲುಬೆಗೇರಿಸುವ ದಿನವಾದ ಗುಡ್‌ ಫ್ರೈಡೇ(ಶುಭ ಶುಕ್ರವಾರ) ದಿನವನ್ನು ವಿಶ್ವದಾದ್ಯಂತ ಕ್ರೈಸ್ತ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದು, ಪುತ್ತೂರು ತಾಲೂಕಿನ ಚರ್ಚ್ಗಳಲ್ಲಿಯೂ ಗುಡ್‌ ಫ್ರೈಡೇ ದಿನವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಅದರಂತೆ ಪುತ್ತೂರಿನ ಮಾಯಿದೆ ದೇವುಸ್ ಚರ್ಚ್, ಮರೀಲಿನ ಸೆಕ್ರೇಡ್ ಹಾರ್ಟ್ ಚರ್ಚ್, ಬನ್ನೂರಿನ ಸಂತ ಅಂತೋನಿ ಚರ್ಚ್, ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯ, ಬೆಳ್ಳಾರೆ ಚರ್ಚ್ ಸಹಿತಿ ಇನ್ನಿತರ ಚರ್ಚ್ ಗಳಲ್ಲಿ ಗುಡ್‌ ಫ್ರೈಡೇ ದಿನವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಆಯಾ ಚರ್ಚ್‌ ನ ಪಾಲನಾ ಸಮಿತಿಯ ಉಪಾಧ್ಯಕ್ಷ, ಕಾರ್ಯದರ್ಶಿ, ಚರ್ಚ್ ಪಾಲನಾ ಸಮಿತಿ ಸದಸ್ಯರು, ಸ್ಯಾಕ್ರಿಸ್ಟಿಯನ್, ಗುರಿಕಾರರು, ಧರ್ಮಭಗಿನಿಯರು, ವೇದಿ ಸೇವಕರು, ಗಾಯನ ಮಂಡಳಿ ಸದಸ್ಯರು ಸಹಕರಿಸಿದರು. ನೂರಾರು ಸಂಖ್ಯೆಯಲ್ಲಿ ಭಕ್ತರು ಧಾರ್ಮಿಕ ವಿಽವಿಧಾನಗಳಲ್ಲಿ ಪಾಲ್ಗೊಂಡರು.

ಮಾಯಿದೆ ದೇವುಸ್ ಚರ್ಚ್ನಲ್ಲಿ ಗುಡ್‌ ಫ್ರೈಡೇ ದಿನದ ಅಂಗವಾಗಿ ಯೇಸುಕ್ರಿಸ್ತರ ಪೂಜ್ಯ ಶರೀರದೊಂದಿಗೆ ಕ್ರೈಸ್ತ ವಿಶ್ವಾಸಿ ಭಕ್ತರು ಚರ್ಚ್-ಕೋರ್ಟ್ರೋಡ್-ಎಂ.ಟಿರೋಡ್ ಮುಖೇನ ಯೇಸುಕ್ರಿಸ್ತರ ಸ್ಮರಣಾ ಮೆರವಣಿಗೆಯನ್ನು ಶ್ರದ್ಧಾ ಭಕ್ತಿಯಿಂದ ಹಮ್ಮಿಕೊಳ್ಳಲಾಯಿತು. ಬನ್ನೂರು ಚರ್ಚ್ನಲ್ಲಿ ಚರ್ಚ್ನಿಂದ ಆನೆಮಜಲು ಕೋರ್ಟ್ ಮುಖೇನ ಸಾಗಿ ಪುನಹ ಚರ್ಚ್ಗೆ ಆಗಮಿಸುವ ಹಾದಿಯಲ್ಲಿ ಯೇಸುಕ್ರಿಸ್ತರ ಶಿಲುಬೆಯ ಹಾದಿಯ 14 ಸ್ಥಳಗಳನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಮಾಯಿದೆ ದೇವುಸ್ ಚರ್ಚ್ನಲ್ಲಿ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ವಂ|ಕೆವಿನ್ ಲಾರೆನ್ಸ್ ಡಿ ಸೋಜ, ವಂ|‌ಸ್ಟ್ಯಾನಿ ಪಿಂಟೋ, ವಂ|ಅಶೋಕ್ ರಾಯನ್ ಕ್ರಾಸ್ತಾ, ಬನ್ನೂರು ಚರ್ಚ್ ನಲ್ಲಿ ವಂ|ಬಾಲ್ತಜಾರ್ ಪಿಂಟೋ, ಹಿರಿಯ ಧರ್ಮಗುರು ವಂ|ಆಲ್ಪೋನ್ಸ್ ಮೊರಾಸ್, ಮರೀಲು ಚರ್ಚ್ ನಲ್ಲಿ ವಂ|ವಲೇರಿಯನ್ ಫ್ರ್ಯಾಂಕ್, ವಂ|ಡೆನ್ಜಿಲ್ ಲೋಬೊ, ಉಪ್ಪಿನಂಗಡಿ ಚರ್ಚ್‌ ನ ಲ್ಲಿ ವಂ|ಅಬೆಲ್ ಲೋಬೊ ನೇತೃತ್ವದಲ್ಲಿ ನಡೆಯಿತು.

ಶಿಲುಬೆಯ ಮೇಲೆ ಯೇಸುಕ್ರಿಸ್ತರು ಪ್ರಾಣ ಬಿಟ್ಟ ದಿನ ಇಡೀ ವಿಶ್ವಕ್ಕೆ ಬೇಸರದ ದಿನ(ಕಪ್ಪು ದಿನ)ವಾಗಿ ಪರಿಣಮಿಸಿದರೂ, ತನ್ನನ್ನು ತಾನು ಸಮರ್ಪಿಸಿಕೊಂಡು ಜನರಲ್ಲಿ ಪರಸ್ಪರ ಸೌಹಾರ್ದತೆ, ಮಾನವೀಯತೆ, ಪ್ರೀತಿ, ಕ್ಷಮಾಪಣಾ ಗುಣವನ್ನು ಬೋಽಸಿದ್ದು ಕ್ರೈಸ್ತ ಬಾಂಧವರಿಗೆ ಶುಭ ಶುಕ್ರವಾರವಾಗಿ ಪರಿಣಮಿಸಿದೆ. ಯೇಸುಕ್ರಿಸ್ತರ ಶಿಲುಬೆಯು ನಮ್ಮಲ್ಲಿ ಹೊಸ ಜೀವನ, ಸಾಂತ್ವನವುಳ್ಳ, ಸಮಾಧಾನದ ಪ್ರತೀಕವಾಗಿದೆ ಮಾತ್ರವಲ್ಲದೆ ಕುಟುಂಬದ ಪಾವಿತ್ರ‍್ಯತೆಯನ್ನು ಹೆಚ್ಚಿಸುತ್ತದೆ. ಯೇಸುಕ್ರಿಸ್ತರು ಸಾವಿಗೆ ಶರಣಾಗಲಿಲ್ಲ. ಸಾವನ್ನು ಲೆಕ್ಕಿಸದೆ ತಾವು ನಂಬಿದ ಮೌಲ್ಯಗಳಿಗಾಗಿ ನಿಂತರು. ಆತನ ಹಿಂಬಾಲಕರಾದ ನಾವು ಸಹ ನಿಲ್ಲಬೇಕಾದ್ದು ಅವರ ಮೌಲ್ಯಗಳಿಗಾಗಿ, ಸಾಗಬೇಕಾದ್ದು ಅವರದೇ ಗುರಿಯತ್ತ. ಶಿಲುಬೆಯ ಮೇಲೆ ಪ್ರಾಣ ಬಿಟ್ಟ ಪ್ರಭು ಯೇಸುಕ್ರಿಸ್ತರು ನಮ್ಮಲ್ಲಿ ಪರಸ್ಪರ ಕ್ಷಮೆ, ಬೆಳಕು ಚೆಲ್ಲುವ ಮತ್ತು ಅರ್ಪಣಾ ಭಾವದ ಮೌಲ್ಯಗಳನ್ನು ಎತ್ತಿ ತೋರಿಸುತ್ತದೆ. ಆದ್ದರಿಂದ ಯೇಸುಕ್ರಿಸ್ತರ ಶಿಲುಬೆಯ ಮುಖಾಂತರದ ಪ್ರಾಣ ತ್ಯಾಗ ಮನುಜನ ಪಾಪ ಪರಿಹಾರಕ್ಕಾಗಿದೆ ಎಂಬುದು ಗುಡ್‌ ಫ್ರೈಡೇ ದಿನದ ಸಂದೇಶವಾಗಿದೆ.

ಮಂಗಳೂರು | ಬೈಕ್ ಅಪಘಾತ: ಸವಾರ ಕೋಟೆಕಾರ್ ನಿವಾಸಿ ಅಝ್ವೀನ್ ಮೃತ್ಯು

Posted by Vidyamaana on 2023-10-11 14:18:27 |

Share: | | | | |


ಮಂಗಳೂರು | ಬೈಕ್ ಅಪಘಾತ: ಸವಾರ ಕೋಟೆಕಾರ್ ನಿವಾಸಿ ಅಝ್ವೀನ್  ಮೃತ್ಯು

ಉಳ್ಳಾಲ: ಮುಂಭಾಗದಲ್ಲಿ ಸಂಚರಿಸುತ್ತಿದ್ದ ವಾಹನವೊಂದು ಹಠಾತ್ ಬ್ರೇಕ್ ಹಾಕಿದ ಪರಿಣಾಮ ಹಿಂದಿನಲ್ಲಿದ್ದ ದ್ವಿಚಕ್ರ ವಾಹನವು ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿ ಸವಾರ ಮೃತಪಟ್ಟ ಘಟನೆ ನೇತ್ರಾವತಿ ಸೇತುವೆಯಲ್ಲಿ ಇಂದು ಮುಂಜಾನೆ ನಡೆದಿದೆ.



ಮೃತ ಸವಾರನನ್ನು ಮೂಲತಃ ಉಳ್ಳಾಲದ ಪ್ರಸ್ತುತ ಕೋಟೆಕಾರ್ ನಲ್ಲಿ ನಿವಾಸಿ ಅಝ್ವೀನ್ (21)ಎಂದು ಗುರುತಿಸಲಾಗಿದೆ.


ಮೀನುಗಾರಿಕೆಯ ಕೆಲಸಕ್ಕೆಂದು ತೆರಳುತ್ತಿದ್ದ ಅಝ್ವೀನ್ 3:30ರ ವೇಳೆಗೆ ತೊಕ್ಕೊಟ್ಟಿನಿಂದ ಮಂಗಳೂರು ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ

ತೇಜಾ ರಾಮಕೃಷ್ಣ ಭಟ್ ನಾಪತ್ತೆ

Posted by Vidyamaana on 2024-03-13 16:47:16 |

Share: | | | | |


ತೇಜಾ ರಾಮಕೃಷ್ಣ ಭಟ್ ನಾಪತ್ತೆ

ಯಲ್ಲಾಪುರ :ಯುವತಿಯೊಬ್ಬಳು ಕಾಣೆಯಾದ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಲ್ಲಾಪುರ ತಾಲೂಕಿನ ಚಂದ್ಗುಳಿಯ ದೇಸಾಯಿಮನೆ ತೇಜಾ ರಾಮಕೃಷ್ಣ ಭಟ್ಟ (26)ಕಾಣೆಯಾದ ಯುವತಿ.ಹುಬ್ಬಳ್ಳಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈಕೆ, ಕಳೆದ ಡಿಸೆಂಬರ್ 20 ರಂದು ಹುಬ್ಬಳ್ಳಿಗೆ ಹೋಗುವುದಾಗಿ ಮನೆಯಿಂದ ಹೊರಟಿದ್ದು, ಅಲ್ಲಿಗೂ ಹೋಗದೇ ಸಂಬಂಧಿಕರ ಮನೆಗೂ ಹೋಗದೇ ಈವರೆಗೂ ಮರಳಿ ಬಂದಿಲ್ಲ. ಈ ಕುರಿತು ತಂದೆ ರಾಮಕೃಷ್ಣ ಎಸ್ ಭಟ್ಟ ದೇಸಾಯಿಮನೆ ಪೋಲಿಸ್ ದೂರು ನೀಡಿದ್ದಾರೆ.

ಸಾಧಾರಣ ಮೈಕಟ್ಟು, ಗೋಧಿ ಬಣ್ಣ, ಕಪ್ಪು ಕೂದಲು ಹೊಂದಿದ್ದು, ಕನ್ನಡ, ಇಂಗ್ಲಿಷ್ ಮಾತನಾಡುತ್ತಾಳೆ. ಈಕೆ ಎಲ್ಲಿಯಾದರೂ ಕಂಡು ಬಂದಲ್ಲಿ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಕೋರಿದ್ದಾರೆ.

ಬೆಳ್ತಂಗಡಿ: ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಮೃತ್ಯು

Posted by Vidyamaana on 2023-09-22 21:09:47 |

Share: | | | | |


ಬೆಳ್ತಂಗಡಿ: ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಮೃತ್ಯು

ಬೆಳ್ತಂಗಡಿ: ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ತಾಲೂಕಿನ ಸೋಣಂದೂರಿನಲ್ಲಿ ನಡೆದಿದೆ.


ಸೋಣಂದೂರು ಮುಂಡಾಡಿ ಮನೆ ನಿವಾಸಿಯಾಗಿರುವ ಪ್ರಶಾಂತ್‌ ಮೃತಪಟ್ಟವರು.


ಪ್ರಶಾಂತ್‌ ಸೆ.18 ರಂದು ರಾತ್ರಿಯ ವೇಳೆ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕೂಡಲೇ ಮನೆಯವರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.


ಘಟನೆಯ ಬಗ್ಗೆ ಮೃತನ ಸಂಬಂಧಿಯಾಗಿರುವ ಪ್ರತೀಕ್‌ ನೀಡಿರುವ ದೂರಿನಂತೆ ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬೆದ್ರಾಳ: ಕಾವು ಹೇಮನಾಥ ಶೆಟ್ಟಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ; ಅಪಾಯದಿಂದ ಪಾರು

Posted by Vidyamaana on 2024-02-26 07:06:34 |

Share: | | | | |


ಬೆದ್ರಾಳ: ಕಾವು ಹೇಮನಾಥ ಶೆಟ್ಟಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ; ಅಪಾಯದಿಂದ ಪಾರು

ಪುತ್ತೂರು:  ಬೆದ್ರಾಳ  ಸಮೀಪ ಕಾವು ಹೇಮಾನಾಥ ಶೆಟ್ಟಿ ಪ್ರಯಾಣಿಸುತಿದ್ದ  ಇನ್ನೋವಾ ಕಾರು  ಅಪಘಾತ ಸಂಭವಿಸಿದ ಘಟನೆ ಫೆ 24 ರ ತಡ ರಾತ್ರಿ ನಡೆದಿದೆ.

   ಪುರುಷರಕಟ್ಟೆ ಕಡೆಯಿಂದ ಪುತ್ತೂರಿಗೆ ಬರುತ್ತಿದ್ದ ಇನ್ನೋವಾ ಕಾರಿಗೆ ಮುಂಬಾಗದಿಂದ  ಅಡ್ಡಾದಿಡ್ಡಿಯಾಗಿ ಚಲಿಸುತ್ತಾ ಬಂದ ಕಾರನ್ನು ಗಮನಿಸಿ ಅಪಘಾತ ತಪ್ಪಿಸಲು ಇನ್ನೋವಾ ಕಾರು ಚಾಲಕ  ರಸ್ತೆ ಬದಿಯಲ್ಲಿರುವ ಸೇಫ್ ರೂಟಿಗೆ ಚಲಾಯಿಸುವ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿರುವ  ಕಲ್ಲಿನ ಕಟ್ಟೆಗೆ ಇನ್ನೋವಾ ಕಾರು ಬಡಿದಿದ್ದು ಈ ರಭಸಕ್ಕೆ ಇನ್ನೋವಾ ಕಾರು ಸಂಪೂರ್ಣ ಜಖಂಗೊಂಡಿದ್ದು ಎದುರಿಂದ ಬಂದ ಫೋರ್ಡ್ ಕಾರು ಕೂಡ ಅಲ್ಪ ಸ್ವಲ್ಪ ಜಖಂಗೊಂಡಿದೆ ಎನ್ನಲಾಗಿದೆ.

ಇನ್ನೋವಾ ಕಾರಿನಲ್ಲಿಪ್ರಯಾಣಿಸುತಿದ್ದ ಹೇಮನಾಥ ಶೆಟ್ಟಿ ಹಾಗೂ ಅವರ ಬಳಗದವರಿಗೆ  ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ದಿಢೀರ್ ಅಂತ ಕುಸಿದ ವೇದಿಕೆ; ರಾಹುಲ್ ಗಾಂಧಿ ಬಚಾವ್, ವಿಡಿಯೋ ನೋಡಿ

Posted by Vidyamaana on 2024-05-28 08:00:50 |

Share: | | | | |


ದಿಢೀರ್ ಅಂತ ಕುಸಿದ ವೇದಿಕೆ; ರಾಹುಲ್ ಗಾಂಧಿ ಬಚಾವ್, ವಿಡಿಯೋ ನೋಡಿ

ಬಿಹಾರ: ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿದ್ದ ವೇದಿಕೆ ಕುಸಿದು ಬಿದ್ದ ಪರಿಣಾಮ ಸ್ಥಳದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.ಪಾಟಲಿಪುತ್ರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಅವರ ಪುತ್ರಿ ಮಿಸಾ ಭಾರತಿ ಪರ ಮತಯಾಚನೆ ಮಾಡಲು ರಾಹುಲ್‌ ಗಾಂಧಿ ಪಟ್ನಾಕ್ಕೆ ಬಂದಿದ್ದರು.



Leave a Comment: