ಜೋಕಟ್ಟೆ: ಮನೆ ಮೇಲೆ ತಡೆಗೋಡೆ ಕುಸಿತ; ಬಾಲಕ ಮೃತ್ಯು

ಸುದ್ದಿಗಳು News

Posted by vidyamaana on 2024-07-25 12:27:06 |

Share: | | | | |


ಜೋಕಟ್ಟೆ: ಮನೆ ಮೇಲೆ ತಡೆಗೋಡೆ ಕುಸಿತ; ಬಾಲಕ ಮೃತ್ಯು

ಪಣಂಬೂರು: ಇಲ್ಲಿನ ಜೋಕಟ್ಟೆ ಗ್ರಾಮ ಪಂಚಾಯತ್ ಗುಡ್ಡೆ ಎಂಬಲ್ಲಿ ಮನೆಯ ಮೇಲೆ� ತಡೆಗೋಡೆ ಕುಸಿದು ಬಿದ್ದು ಯುವಕ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ‌.ಮುಲ್ಕಿ ಕೊಲ್ನಾಡು ನಿವಾಸಿ ಶಂಕರ ಎಂಬವರ ಪುತ್ರ ಶೈಲೇಶ್ (17) ಮೃತ ಯುವಕ. ಜೋಕಟ್ಟೆಯಲ್ಲಿರುವ ತನ್ನ ದೊಡಮ್ಮನ ಮಗಳ ಮನೆಗೆ ಬಂದಿದ್ದ ಶೈಲೇಶ್, ಇಲ್ಲಿಯೇ ಉಳಿದುಕೊಂಡಿದ್ದ.

ಮನೆಯಲ್ಲಿ ಶೈಲೇಶ್ ರವರ ದೊಡ್ಡಮನ ಮಗಳು ಸವಿತಾ, ಆಕೆಯ ಗಂಡ ಸುರೇಶ್ ಮತ್ತು ಮಗು ಸಾಕ್ಷಿ ಮನೆಯ ಒಂದು ಕೋಣೆಯಲ್ಲಿ ಮಲಗಿದ್ದು, ಶೈಲೇಶ್ ಇನ್ನೊಂದು ಕಡೆ ಮಲಗಿದ್ದ. ತಡೆಗೋಡೆ ಕುಸಿದು ಹಂಚಿನ ಮನೆಯ ಮೇಲೆ ಬಿದ್ದಿದ್ದರಿಂದ ಅಲ್ಲಿ ಮಲಗಿದ್ದ ಶೈಲೇಶ್ ತೀವ್ರ ಗಾಯಗೊಂಡು ಮೃತಪಟ್ಟಿದ್ದಾನೆ. ಇನ್ನೊಂದು ಕೋಣೆಯಲ್ಲಿ ಮಲಗಿದ್ದ ಇತರ ಮೂರು ಜನರಲ್ಲಿ ಸವಿತಾ ಅವರಿಗೆ ಸಣ್ಣ ಗಾಯವಾಗಿದ್ದು‌, ಚಿಕಿತ್ಸೆ ಪಡೆದಿದ್ದಾರೆ‌ ಎಂದು ತಿಳಿದು ಬಂದಿದೆ.

ಶೈಲೇಶ್ ಅವರ ಮೃತದೇಹವನ್ನು ನಗರದ ಎ.ಜೆ.ಆಸ್ಪತ್ರೆಯ ಶವಗಾರದಲ್ಲಿಡಲಾಗಿದ್ದು, ಸ್ಥಳಕ್ಕೆ ಪಣಂಬೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

 Share: | | | | |


ಪ್ರೀತಿಸಿದ ಹುಡುಗಿ ಏಕಾಏಕಿ ಕೊಟ್ಲು ಕೈ, ನೊಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪಾಗಲ್ ಪ್ರೇಮಿ

Posted by Vidyamaana on 2023-12-08 04:20:03 |

Share: | | | | |


ಪ್ರೀತಿಸಿದ ಹುಡುಗಿ ಏಕಾಏಕಿ ಕೊಟ್ಲು ಕೈ, ನೊಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪಾಗಲ್ ಪ್ರೇಮಿ

ಬೆಂಗಳೂರು: ಪ್ರೀತಿಸಿದ ಹುಡುಗಿ ಏಕಾಏಕಿ ಪ್ರೀತಿಯನ್ನು ನಿರಾಕರಿಸಿ ಬಿಟ್ಟು ಹೋಗಿದ್ದಕ್ಕೆ ಮನನೊಂದ ಯುವಕನೊಬ್ಬ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಂಗಳೂರಿನ ಕೆಂಗೇರಿಯ ಕೊಡಿಗೆ ಪಾಳ್ಯದಲ್ಲಿ ಈ ಘಟನೆ ನಡೆದಿದೆ.


ಆನೇಕಲ್ ತಾಲೂಕಿನ ಜಿಗಣಿಯ ಕಲ್ಲುಬಾಳು ಗ್ರಾಮದ ರಾಕೇಶ್ ಮೃತ ದುರ್ದೈವಿ. ರಾಕೇಶ್‌ ಐದಾರು ವರ್ಷದಿಂದ‌ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದ. ಇಬ್ಬರು ಪಾರ್ಕ್‌, ಸಿನಿಮಾ ಎಂದು ಊರು ಊರು ತಿರುಗಿದ್ದರು. ಆದರೆ ಇತ್ತೀಚೆಗೆ ರಾಕೇಶ್‌ನನ್ನು ಯುವತಿ ಅವಾಯ್ಡ್‌ ಮಾಡಲು ಶುರು ಮಾಡಿದ್ದಳು.


ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದವಳು ಏಕಾಏಕಿ ದೂರಾಗಿದ್ದಳು. ಮಸೇಜ್‌, ಫೋನ್‌ ಕಾಲ್‌ಗೂ ರೆಸ್ಪಾನ್ಸ್‌ ಮಾಡುತ್ತಿರಲಿಲ್ಲ. ಈ ನಡುವೆ ಬೇರೆ ಯುವಕನ ಜತೆ ಮದುವೆಗೆ ಸಿದ್ಧತೆಯನ್ನು ನಡೆಸಿದ್ದಳು. ಈ ವಿಷಯ ತಿಳಿದು ನಿನ್ನೆ ಬುಧವಾರ ರಾಕೇಶ್ ನೇರ ಯುವತಿ ಮನೆಯ ಬಳಿ ಹೋಗಿ ಪ್ರಶ್ನೆ ಮಾಡಿದ್ದ. ಈ ವೇಳೆ ರಾಕೇಶ್ ಹಾಗೂ ಯುವತಿ ನಡುವೆ ಗಲಾಟೆ ಆಗಿತ್ತು.


ಪ್ರೀತಿಸಿದವಳು ಮೋಸ ಮಾಡಿಬಿಟ್ಟಳೆಂದು ಮನನೊಂದಿದ್ದ ರಾಕೇಶ್‌, ಮನೆಗೆ ಬಂದವನೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ. ಕೂಡಲೇ ಗಾಯಾಳು ರಾಕೇಶ್‌ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಬೆಂಕಿ ತೀವ್ರತೆಗೆ ದೇಹದ ಬಹುತೇಕ ಭಾಗ ಸುಟ್ಟು ಕರಕಲಾಗಿತ್ತು. ತೀವ್ರ ನೋವಿನಿಂದ ಬಳಲುತ್ತಿದ್ದ ರಾಕೇಶ್ ಬುಧವಾರ ರಾತ್ರಿಯೇ ಮೃತಪಟ್ಟಿದ್ದಾನೆ. ರಾಕೇಶ್ ಕುಟುಂಬಸ್ಥರು ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ

ಇಬ್ಬರು ಮಕ್ಕಳನ್ನು ಕೊಂದಿದ್ದ ತಾಯಿ ಜೈಲಲ್ಲೇ ಆತ್ಮಹತ್ಯೆ

Posted by Vidyamaana on 2024-04-14 08:23:42 |

Share: | | | | |


ಇಬ್ಬರು ಮಕ್ಕಳನ್ನು ಕೊಂದಿದ್ದ ತಾಯಿ ಜೈಲಲ್ಲೇ ಆತ್ಮಹತ್ಯೆ

ಬೆಂಗಳೂರು: ಜಾಲಹಳ್ಳಿಯಲ್ಲಿ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ್ದ ತಾಯಿ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಆತ್ಮಹತ್ಯೆ (Self Harming) ಮಾಡಿಕೊಂಡಿರುವುದು ನಡೆದಿದೆ. ಜೈಲಿಗೆ ಹೋದ ದಿನವೇ ಶೌಚಾಲಯದಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಗಂಗಾದೇವಿ ಆತ್ಮಹತ್ಯೆ ಮಾಡಿಕೊಂಡ ಆರೋಪಿ. ಮಂಗಳವಾರ ರಾತ್ರಿ ಇಬ್ಬರು ಮಕ್ಕಳನ್ನು ಸಾಯಿಸಿದ್ದ ಗಂಗಾದೇವಿ, ಬುಧವಾರ ಬೆಳಗ್ಗೆ 112 ಗೆ ಕರೆ ಮಾಡಿ, ತಾನು ಆತ್ಮಹತ್ಯೆ ‌ಮಾಡಿಕೊಳ್ಳುವುದಾಗಿ ಹೇಳಿದ್ದಳು. ತಕ್ಷಣ ಸ್ಥಳಕ್ಕೆ ಹೋಗಿ ಗಂಗಾದೇವಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ಬಳಿಕ ಗಂಗಾದೇವಿಯನ್ನು ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ, ಗುರುವಾರ ರಾತ್ರಿ ಜೈಲಿನಲ್ಲೇ ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನೆನ್ನೆ ಮರಣೋತ್ತರ ಪರೀಕ್ಷೆ ಮಾಡಿ ಸಂಬಂಧಿಕರಿಗೆ ಮೃತದೇಹ ಹಸ್ತಾಂತರ ಮಾಡಲಾಗಿದ್ದು, ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಗದ ವಿಚಾರದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ರಾಜಕೀಯ ಬಣ್ಣ – ಪುತ್ತಿಲ ಪರಿವಾರದಿಂದ ಖಂಡನೆ

Posted by Vidyamaana on 2024-01-16 20:47:54 |

Share: | | | | |


ಜಾಗದ ವಿಚಾರದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ರಾಜಕೀಯ ಬಣ್ಣ – ಪುತ್ತಿಲ ಪರಿವಾರದಿಂದ ಖಂಡನೆ

ಪುತ್ತೂರು : ಜಾಗದ ವಿಚಾರವಾಗಿ ನಡೆದ ತಕರಾರು ಹಲ್ಲೆ ವಿಚಾರದಲ್ಲಿ ಪುತ್ತಿಲ ಪರಿವಾರದ ಹೆಸರು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ಈ ವಿಚಾರವನ್ನು ಪುತ್ತಿಲ ಪರಿವಾರ ಖಂಡಿಸಿದೆ.


500 ವರ್ಷಗಳಿಂದ ಹಿಂದೂ ಸಮಾಜ ಕಾತರದಿಂದ ಕಾಯುತ್ತಿರುವ ಅಮೋಘ ಕ್ಷಣ ಜ.22ರ ಅಯೋಧ್ಯೆಯ ಶ್ರೀ ರಾಮಮಂದಿರ ಪ್ರತಿಷ್ಠಾಪನೆ. ಮಂತ್ರಾಕ್ಷತೆ ವಿತರಿಸುವುದು ಸಹಿತ ರಾಮಮಂದಿರಕ್ಕೆ ಶುಭಕೋರಿ ಪುತ್ತೂರಿನಲ್ಲಿ ಪ್ರಪ್ರಥಮ 3ಡಿ ಬ್ಯಾನರ್ ಅಳವಡಿಸಿ ರಾಷ್ಟ್ರೀಯ ಹಬ್ಬದಂತೆ ಮನೆ ಮನೆಗಳಲ್ಲಿ ರಾಮಮಂದಿರ ಪ್ರತಿಷ್ಠಾಪನೆಯನ್ನು ಆಚರಿಸಲು ಪುತ್ತಿಲ ಪರಿವಾರ ಕಾಯುತ್ತಿದೆ.


ಮುಂಡೂರು ಗ್ರಾಮದಲ್ಲಿ ನಡೆದ ಜಾಗದ ತಕರಾರಿಗೆ ಪುತ್ತಿಲ ಪರಿವಾರವನ್ನು ಅದರಲ್ಲೂ ರಾಮಮಂದಿರದ ಮಂತ್ರಾಕ್ಷತೆಯನ್ನು ಬಳಸಿಕೊಂಡು ಸುಳ್ಳು ಅಪವಾದ ಮಾಡಿರುವುದು ತೀರಾ ಖಂಡನೀಯ.


ಜಾಗದ ಗಲಾಟೆಗೆ ನಡೆದ ಘಟನೆ ಎಂದು ಪೊಲೀಸ್ ಎಫ್ಐಆರ್ ನಲ್ಲೇ ಉಲ್ಲೇಖ ಆಗಿದ್ದು, ಈ ಬಗ್ಗೆ ತಕ್ಷಣ ಸ್ಪಷ್ಟಿಕರಣ ಕೊಟ್ಟು ಗೊಂದಲ ನಿವಾರಿಸಿದ ದಕ್ಷಿಣ ಕನ್ನಡ ಎಸ್ಪಿ ರಿಷ್ಶಂತ್ ಅವರಿಗೆ ಧನ್ಯವಾದ ಎಂದು ಪುತ್ತಿಲ ಪರಿವಾರ ಹೇಳಿದೆ.


ದುರುದ್ದೇಶದಿಂದ ಸಮಾಜದಲ್ಲಿ ತಪ್ಪು ಅಭಿಪ್ರಾಯ, ತೇಜೋವಧೆ, ಧಾರ್ಮಿಕ ಭಾವನೆಗೆ ಧಕ್ಕೆ ತಂದು ಪ್ರಕರಣವನ್ನು ತಿರುಚಿದವರ ವಿರುದ್ದ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಪೊಲೀಸ್ ಇಲಾಖೆಯನ್ನು ಪುತ್ತಿಲ ಪರಿವಾರ ವಿನಂತಿಸಿದೆ.

ಪ್ರೀತಿ‌ ನಿರಾಕರಿಸಿದ ಮಂಗಳಮುಖಿಗೆ ಚಾಕು ಇರಿದ ಆದಿಲ್ !

Posted by Vidyamaana on 2024-08-29 15:00:45 |

Share: | | | | |


ಪ್ರೀತಿ‌ ನಿರಾಕರಿಸಿದ ಮಂಗಳಮುಖಿಗೆ ಚಾಕು ಇರಿದ ಆದಿಲ್ !

ತುಮಕೂರು: ಪ್ರೀತಿ‌ ನಿರಾಕರಿಸಿದ ಮಂಗಳಮುಖಿಗೆ ಯುವಕನೊರ್ವ ಚಾಕು (Attempt To murder) ಇರಿದಿದ್ದಾನೆ. ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದಾಗ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದ ಕೋಟೆ ಪ್ರದೇಶದಲ್ಲಿ ಘಟನೆ ನಡೆದಿದೆ.

ಹನೀಷಾ (21) ಚಾಕುವಿನಿಂದ ಇರಿತಕ್ಕೊಳಗಾದ ಮಂಗಳಮುಖಿಯಾಗಿದ್ದಾರೆ. ಮಂಡ್ಯದ ಆದಿಲ್‌ (23) ಚಾಕು ಇರಿದ ಆರೋಪಿಯಾಗಿದ್ದಾನೆ. ಇವರಿಬ್ಬರು ಕಳೆದ ಆರು ತಿಂಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಹನೀಷಾ ಲಿಂಗತ್ವ ಅಲ್ಪಸಂಖ್ಯಾತರ ಕಾರ್ಯಕ್ರಮಗಳ ನಿಮಿತ್ತ ಪರ ಊರುಗಳಿಗೆ ಆಗಾಗ ಹೋಗುತ್ತಿದ್ದರು.

ಮಂಗಳೂರು ಕದ್ರಿ ಪಾರ್ಕಿನಲ್ಲಿ ನೈತಿಕ ಗೂಂಡಾಗಿರಿ ಮೂವರ ಅರೆಸ್ಟ್

Posted by Vidyamaana on 2024-01-20 07:27:01 |

Share: | | | | |


ಮಂಗಳೂರು ಕದ್ರಿ ಪಾರ್ಕಿನಲ್ಲಿ ನೈತಿಕ ಗೂಂಡಾಗಿರಿ  ಮೂವರ ಅರೆಸ್ಟ್

ಮಂಗಳೂರು; ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿಗಳಾದ ಯುವಕ- ಯುವತಿ ಕದ್ರಿ ಪಾರ್ಕಿಗೆ ಬಂದಿದ್ದಾಗ, ಯುವಕರ ಗುಂಪು ಯುವ ಜೋಡಿಯನ್ನು ಹಿಂದು- ಮುಸ್ಲಿಂ ಅನ್ಕೊಂಡು ಹಲ್ಲೆಗೈದು ನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ನಡೆದಿದೆ.


ದೇರಳಕಟ್ಟೆಯ ಯೆನಪೋಯ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿ ಮತ್ತು ನಂತೂರಿನ ಜಿಎನ್ಎಂ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿ ಜೊತೆಗೆ ಶುಕ್ರವಾರ ಬೆಳಗ್ಗೆ ಕದ್ರಿ ಪಾರ್ಕಿಗೆ ಆಗಮಿಸಿದ್ದರು. ಅವರು ಬಸ್ಸಿನಲ್ಲಿ ಬರುತ್ತಿದ್ದಾಗಲೇ ಹಿಂಬಾಲಿಸಿದ್ದ ಇತರೇ ವಿದ್ಯಾರ್ಥಿಗಳ ತಂಡ ಕದ್ರಿ ಪಾರ್ಕ್ ಬರುತ್ತಲೇ ಅಡ್ಡಗಟ್ಟಿ ಪ್ರಶ್ನೆ ಮಾಡಿದ್ದಾರೆ. ಯುವಕ- ಯುವತಿ ಕೇರಳ ಮೂಲದವರಾಗಿದ್ದು ಮಲೆಯಾಳಂ ಮಾತನಾಡುತ್ತಿದ್ದರು. ಹಿಂದು ಯುವತಿ ಮತ್ತು ಮುಸ್ಲಿಂ ಯುವಕ ಅನ್ಕೊಂಡು ಪ್ರಶ್ನೆ ಮಾಡಿ, ಇಬ್ಬರ ಮೇಲೂ ಹಲ್ಲೆಗೆ ಯತ್ನಿಸಿದ್ದಾರೆ. ಅಲ್ಲದೆ, ಅವರ ವಿಡಿಯೋ, ಫೋಟೋ ರೆಕಾರ್ಡ್ ಮಾಡಿದ್ದಾರೆ.


ಅಷ್ಟರಲ್ಲಿ ಕದ್ರಿ ಪೊಲೀಸರು ಸ್ಥಳಕ್ಕೆ ಬಂದು ಯುವಕ- ಯುವತಿಯನ್ನು ರಕ್ಷಿಸಿದ್ದು, ಹಲ್ಲೆಗೆ ಮುಂದಾಗಿದ್ದ ಮೂವರು ಯುವಕರನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿತರನ್ನು ನಿತಿನ್(18) ಮತ್ತು ಹರ್ಷ (18) ಎಂದು ಗುರುತಿಸಿದ್ದು, ಇನ್ನೊಬ್ಬ 17 ವರ್ಷದವನು. ಈ ಮೂವರು ಕೂಡ ವಿದ್ಯಾರ್ಥಿಗಳಾಗಿದ್ದು, ಹಲ್ಲೆಗೆ ಯತ್ನಿಸಿ ಪೊಲೀಸ್ ಕೇಸು ಎದುರಿಸುತ್ತಿದ್ದಾರೆ. ಕದ್ರಿ ಠಾಣೆಯಲ್ಲಿ ಇವರ ವಿರುದ್ಧ 341, 504, 509, 354ಬಿ, 354ಡಿ ಸೆಕ್ಷನ್ ಅಡಿ ಕೇಸು ದಾಖಲಾಗಿದೆ.

ಮಂಗಳೂರಿನಲ್ಲಿ ವೇಶ್ಯಾವಾಟಿಕೆ ಜಾಲದಲ್ಲಿ ಮಂಡ್ಯ ಮೂಲದ ವ್ಯಕ್ತಿ ಲಕ್ಕಪ್ಪ ಅರೆಸ್ಟ್ ಮತ್ತೊಬ್ಬ ಪರಾರಿ

Posted by Vidyamaana on 2023-06-24 11:18:56 |

Share: | | | | |


ಮಂಗಳೂರಿನಲ್ಲಿ ವೇಶ್ಯಾವಾಟಿಕೆ ಜಾಲದಲ್ಲಿ ಮಂಡ್ಯ ಮೂಲದ ವ್ಯಕ್ತಿ ಲಕ್ಕಪ್ಪ ಅರೆಸ್ಟ್ ಮತ್ತೊಬ್ಬ ಪರಾರಿ

ಮಂಗಳೂರು : ಮಂಗಳೂರು ನಗರದ ಕುಲಶೇಖರದ ಕಾಂಪ್ಲೆಕ್ಸ್ ಒಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ಮಂಗಳೂರು ನಗರ ಪೊಲೀಸರು ದಾಳಿ ನಡೆಸಿದ್ದಾರೆ.

ಈ ಸಂದರ್ಭ ಅಲ್ಲಿದ್ದ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ.ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕುಲಶೇಖರದ ಬಳಿ ಇರುವ ಅಬ್ಬಿ ಕಾಂಪ್ಲೆಕ್ಸ್ ನಲ್ಲಿ ಕೃಷ್ಣ ಎಂಬಾತನು ಫ್ಲಾಟ್ ಬಾಡಿಗೆಗೆ ಪಡೆದು ಮಂಡ್ಯ ನಿವಾಸಿ ಲಕ್ಕಪ್ಪ ಎಂಬಾತನ ಜೊತೆ ಸೇರಿ ಈ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಎಂದು ಪೊಲಿಸರು ಮಾಹಿತಿ ನೀಡಿದ್ದಾರೆ.ಈ ಸಂದರ್ಭ ಅಲ್ಲಿದ್ದ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾದ ಮಂಡ್ಯ ಮೂಲದ ಲಕ್ಕಪ್ಪ(25 ವರ್ಷ),ಎಂಬಾತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Recent News


Leave a Comment: