ಲಿಂಗನಮಕ್ಕಿ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು

ಸುದ್ದಿಗಳು News

Posted by vidyamaana on 2024-07-25 16:34:52 |

Share: | | | | |


ಲಿಂಗನಮಕ್ಕಿ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು

ಶಿವಮೊಗ್ಗ: ಲಿಂಗನಮಕ್ಕಿ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು ಹರಿಸಲಾಗುತ್ತದೆ. ಹೀಗಾಗಿ ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕರ್ನಾಟಕ ವಿದ್ಯುತ್ ನಿಗಮದ ಕಾರ್ಯ ನಿರ್ವಾಹಕ ಎಂಜಿನಿಯರ್ ಬುಧವಾರ ಮುನ್ನೆಚ್ಚರಿಕೆ ನೀಡಿದ್ದಾರೆ

ಕಾರ್ಗಲ್ ನ ಲಿಂಗನಮಕ್ಕಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಜಲಾಶಯಕ್ಕೆ ಸದ್ಯ 60 ಸಾವಿರ ಕ್ಯುಸೆಕ್ ಒಳಹರಿವು ಇದೆ.

Additional Image


ಜಲಾಶಯದ ಗರಿಷ್ಠ ಮಟ್ಟ 1819 ಅಡಿಗಳು ಇದ್ದು, ಜಲಾಶಯದಲ್ಲಿ ಈಗ 1801. 20 ಅಡಿ ನೀರಿನ ಸಂಗ್ರಹ ಇದೆ. ಮಳೆ ಹೆಚ್ಚಿರುವುದರಿಂದ ಜಲಾಶಯದ ಮಟ್ಟ ಶೀಘ್ರವೇ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದೆ.


ಅಣೆಕಟ್ಟೆಯ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು ಹರಿಸಬಹುದು ಎಂದು ಕೆಪಿಸಿಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

 Share: | | | | |


ಮಾ:17 ರಿಂದ 19 ಪಡುಮಲೆ ಪಮ್ಮಲ ಜುಮ್ಮಾ ಮಸ್ಜಿದ್ ನಲ್ಲಿ ಆಂಡ್ ನೇರ್ಚೆ ಧಾರ್ಮಿಕ ಉಪನ್ಯಾಸ

Posted by Vidyamaana on 2023-03-15 14:45:51 |

Share: | | | | |


ಮಾ:17 ರಿಂದ 19 ಪಡುಮಲೆ ಪಮ್ಮಲ ಜುಮ್ಮಾ ಮಸ್ಜಿದ್ ನಲ್ಲಿ ಆಂಡ್ ನೇರ್ಚೆ ಧಾರ್ಮಿಕ ಉಪನ್ಯಾಸ

ಪುತ್ತೂರು: ಪಡುಮಲೆ (ಪಮ್ಮಲ) ಜುಮ್ಮಾ ಮಸ್ಜಿದ್ ವಠಾರದಲ್ಲಿ ಅಂತ್ಯ ವಿಶ್ರಮ ಹೊಂದಿರುವ ಮಹಾನುಭಾವದ ಹೆಸರಲ್ಲಿ ನಡೆದುಕೊಂಡು ಬರುತ್ತಿರುವ ಆಂಡ್ ನೇರ್ಚೆ ಮೂರು ದಿನಗಳ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ಮಾ.17, 18 ಹಾಗೂ 19 ರಂದು ಮೂರು ದಿನಗಳ ಕಾಲ ನಡೆಯಲಿದೆ ಎಂದು ಜಮಾಅತ್ ಕಮಿಟಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ತಿಳಿಸಿದ್ದಾರೆ.

ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಡುಮಲೆ ಪ್ರದೇಶ ಮಸೀದಿ, ದೇವಸ್ಥಾನ, ದೈವಸ್ಥಾನಗಗಳನ್ನೊಳಗೊಂಡು ಸೌಹಾರ್ದತೆಯಿಂದ ಕಳೆದ ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ ಎಂದರು.

ಮಾ.17 ರಂದು ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಪುತ್ತೂರು ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಅಸ್ಸಯ್ಯದ್ ಅಹ್ಮದ್ ಪೊಕೋಯ ತಂಙಳ್ ಉದ್ಘಾಟಿಸಿ ಆಶೀರ್ವಚನ ನೀಡುವರು. ಬಹು | ಸಿರಾಜುದ್ದೀನ್ ದಾರಿಮಿ ಕಕ್ಕಾಡ್ ಮುಖ್ಯ ಪ್ರಭಾಷಣ ಮಾಡುವರು. ಮಾ.18 ರಂದು ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಮ್ಮಲ ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಮಹಮ್ಮದ್ ಬಡಗನ್ನೂರು ವಹಿಸಲಿದ್ದು, ಲುಕ್ಮಾನುಲ್ ಹಕೀಂ ಸಖಾಫಿ ಪುಲ್ಲಾರ ಮುಖ್ಯ ಪ್ರಭಾಷಣ ಮಾಡುವರು. ಮಾ.19 ರಂದು ಸಂಜೆ 5 ಗಂಟೆಗೆ ಸೌಹಾರ್ದ ಸಂಗಮ ನಡೆಯಲಿದ್ದು, ಮಾಜಿ ಸಚಿವ ಬಿ.ರಮಾನಾಥ ರೈ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಉಪನಾಯಕ ಯು.ಟಿ.ಖಾದರ್, ಸದಸ್ಯರಾದ ಕೆ.ಹರೀಶ್ ಕುಮಾರ್, ಮಂಜುನಾಥ ಭಂಡಾರಿ, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಮತ್ತಿತರ ಧಾರ್ಮಿಕ, ರಾಜಕೀಯ ನಾಯಕರು ಪಾಲ್ಗೊಳ್ಳಲಿದ್ದಾರೆ. 

ರಾತ್ರಿ 8.30 ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಯ್ಯದ್ ರಶೀದ್ ಅಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಮಹಾಶೀರ್ವಚನ ನೀಡಲಿದ್ದು, ಪಮ್ಮಲ ಮಸೀದಿ ಖತೀಬ ಶಂಸುದ್ದೀನ್ ದಾರಿಮಿ ಉದ್ಘಾಟಿಸುವರು. ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಅಧ್ಯಕ್ಷತೆ ವಹಿಸುವರು. ಇ.ಪಿ.ಅಬೂಬಕ್ಕರ್ ಅಲ್ ಖಾಸಿಮಿ ಪತ್ತನಾಪುರಂ ಮುಖ್ಯ ಪ್ರಭಾಷಣ ಮಾಡುವರು. ಸಮಾರೋಪದ ಬಳಿಕ ಅನ್ನದಾನ ಸೇವೆ ನಡೆಯಲಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಮಾಅತ್ ಕಮಿಟಿ ಉಪಾಧ್ಯಕ್ಷ ಪಕ್ರುದ್ದೀನ್ ಹಾಜಿ, ಖತೀಬ ಶಂದುದ್ದೀನ್ ದಾರಿಮಿ, ಕಾರ್ಯದರ್ಶಿ ಅಲಿಕುಂಞಿ ಹಾಜಿ, ಮಾಜಿ ಖಜಾಂಚಿ ಆದಂ ಹಾಜಿ ಉಪಸ್ಥಿತರಿದ್ದರು.

ವಿಧಾನ ಪರಿಷತ್ ನೂತನ ಸದಸ್ಯರ ಪ್ರಮಾಣ ವಚನ

Posted by Vidyamaana on 2024-06-24 14:11:13 |

Share: | | | | |


ವಿಧಾನ ಪರಿಷತ್ ನೂತನ ಸದಸ್ಯರ ಪ್ರಮಾಣ ವಚನ

ಪ್ರಮಾಣ ವಚನ ಸ್ವೀಕರಿಸಿ ಸಿದ್ದರಾಮಯ್ಯ ಕಾಲಿಗೆ ನಮಸ್ಕರಿಸಿದ ಸಿಟಿ ರವಿ, ಕಿವಿ ಹಿಂಡಿ ಅಭಿನಂದಿಸಿದ ಸಿಎಂ!

ಬೆಂಗಳೂರು : ಕರ್ನಾಟಕದ ವಿಧಾನ ಪರಿಷತ್‌ಗೆ ನೂತನವಾಗಿ ಆಯ್ಕೆಯಾಗಿ ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಇಂದು ವಿಧಾನಸೌಧಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಿತು. ನೂತನ ಪರಿಷತ್ ಸದಸ್ಯರಿಗೆ ಸಭಾಪತಿ ಬಸವರಾಜ್ ಹೊರಟ್ಟಿ (Basavaraj Horatti) ಪ್ರಮಾಣ ವಚನ (MLC Oath Ceremony) ಬೋಧಿಸಿದರು

ವಿಧಾನಸಭೆ, ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ನೂತನ 17 ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಸಿಎಂ ಸಿದ್ದರಾಮಯ್ಯ, ಕಾನೂನು ಹಾಗೂ ಸಂಸದೀಯ ಸಚಿವ ಎಚ್‌ಕೆ ಪಾಟೀಲ್ ಸೇರಿ ಹಲವರು ಭಾಗಿಯಾದರು. ಇದರೊಂದಿಗೆ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ 11 ಸದಸ್ಯರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವೂ ನಡೆಯಿತು.

ಅಖಿಲ ಭಾರತ ಶಾಸಕಾಂಗ ಸಮ್ಮೇಳನದಲ್ಲಿ ಭಾಗಿಯಾದ ಪುತ್ತೂರು ಶಾಸಕ ಅಶೋಕ್ ರೈ

Posted by Vidyamaana on 2023-06-16 09:01:27 |

Share: | | | | |


ಅಖಿಲ ಭಾರತ ಶಾಸಕಾಂಗ ಸಮ್ಮೇಳನದಲ್ಲಿ ಭಾಗಿಯಾದ ಪುತ್ತೂರು ಶಾಸಕ ಅಶೋಕ್ ರೈ

ಪುತ್ತೂರು: ಮುಂಬಯಿಯ ಜಿಯೋ ಕನ್ವೆನ್ಸ್ಯನ್ ಸೆಂಟರ್ ನಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಅಖಿಲ ಭಾರತ ಶಾಸಕಾಂಗ ಸಮ್ಮೇಳನಲ್ಲಿ ಪುತ್ತೂರು ಶಾಸಕರಾದ ಅಶೋಕ್ ರೈ ಭಾಗವಹಿಸಿದರು. ಶಾಸಕರಿಗೆ ತರಬೇತಿ ಸೇರಿದಂತೆ ಶಾಸಕಾಂಗ ವಿಚಾರದಲ್ಲಿ ಮಾಹಿತಿ ಕಾರ್ಯಾಗಾರವೂ ಇಲ್ಲಿ ನಡೆಯುತ್ತದೆ. ದೇಶಾಧ್ಯಂತ ಸುಮಾರು‌2000 ಮಂದಿ ವಿವಿಧ ರಾಜ್ಯಗಳ ಶಾಸಕರು ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ. ನಾಳೆ ಶನಿವಾರ ಸಮಾವೇಶ ಕೊನೆಗೊಳ್ಳಲಿದೆ.

ಅಕ್ರಮ ಮದ್ಯ ಮಾರಾಟ ಪ್ರಕರಣದ ಆರೋಪಿಗೆ ಸಿಕ್ತು ನಿರೀಕ್ಷಣಾ ಜಾಮೀನು

Posted by Vidyamaana on 2023-06-28 17:47:21 |

Share: | | | | |


ಅಕ್ರಮ ಮದ್ಯ ಮಾರಾಟ ಪ್ರಕರಣದ ಆರೋಪಿಗೆ ಸಿಕ್ತು ನಿರೀಕ್ಷಣಾ ಜಾಮೀನು

ಪುತ್ತೂರು :ಅಕ್ರಮ ಮದ್ಯ ಮಾರಾಟ ಪ್ರಕರಣದ ಆರೋಪಿಯೆ ನ್ನಲಾಗಿದ್ದ ವಿನೋದ್ ಕುಮಾರ್ ರೈ ಯವರಿಗೆ ನಿರೀಕ್ಷಣಾ ಜಾಮೀನನ್ನು ಪುತ್ತೂರು ಐದನೇ ಹೆಚ್ಚುವರಿ  ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

ಪುತ್ತೂರು ತಾಲೂಕು ಒಳಮೋಗ್ರು ಗ್ರಾಮದ ಕೈಕಾರ ಪನಡ್ಕ ಎಂಬಲ್ಲಿ  ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ, ಗೋಣಿಚೀಲದಲ್ಲಿ ಮದ್ಯವನ್ನು ಮಾರಾಟ ಮಾಡಿ, ಹಣ ಪಡೆದಿರುವುದಾಗಿ ಆರೋಪಿಯೆನ್ನಲಾಗಿದ್ದ ವಿನೋದ್ ಕುಮಾರ್ ರೈ ಯವರ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ಕರ್ನಾಟಕ ಅಬಕಾರಿ ಕಾಯಿದೆಯನ್ವಯ ಪ್ರಕರಣ ದಾಖಲಿಲಾಗಿತ್ತು.

ಹೀಗಿರುವಾಗ,ಈ ವಿಚಾರ ತಿಳಿದ ವಿನೋದ್ ಕುಮಾರ್ ರೈ ಯವರು ಅವರ ಪರ ವಕೀಲರಾದ ಮಹೇಶ್ ಕಜೆ ಯವರ  ಮುಖಾಂತರ ಪುತ್ತೂರಿನ ಮಾನ್ಯ ಐದನೇ ಹೆಚ್ಚುವರಿ  ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿಯನ್ನು  ಸಲ್ಲಿಸಿದ್ದರು.ಈ ಮೇಲೆ ತಿಳಿಸಿದ ಆರೋಪಿಯು ಕೃತ್ಯವನ್ನು ಮಾಡಿದ್ದಾರೆ ಎಂಬುವುದಕ್ಕೆ ಸಂಬಂಧಿಸಿದಂತೆ ಯಾವುದೇ ಪೂರಕವಾದ ಸಾಕ್ಷ್ಯಧಾರಗಳು ಕಂಡು ಬಂದಿರುವುದಿಲ್ಲ. ಎಂಬಿತ್ಯಾದಿ ಅಂಶಗಳನ್ನು ವಾದಿಸಿದ್ದರು. ಸರಕಾರಿ ಅಭಿಯೋಜಕರು ಆರೋಪಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪವನ್ನು ಸಲ್ಲಿಸಿದ್ದರು. ವಾದ -ವಿವಾದವನ್ನು ಆಲಿಸಿದ 

ಪುತ್ತೂರಿನ ಮಾನ್ಯ ಐದನೇ ಹೆಚ್ಚುವರಿ  ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸರಿತಾ. ಡಿ ಯವರು ಆರೋಪಿಗೆ ಶರತ್ತು ಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುತ್ತಾರೆ.

ಪುತ್ತೂರು ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಕರಣ : ಚಿಕಿತ್ಸೆ ಫಲಿಸದೆ ಕಟ್ಟತ್ತಾರು ನಿವಾಸಿ ನಾಸೀರ್ ಮೃತ್ಯು

Posted by Vidyamaana on 2023-08-28 01:50:29 |

Share: | | | | |


ಪುತ್ತೂರು ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಕರಣ : ಚಿಕಿತ್ಸೆ ಫಲಿಸದೆ ಕಟ್ಟತ್ತಾರು ನಿವಾಸಿ ನಾಸೀರ್ ಮೃತ್ಯು

ಪುತ್ತೂರು: ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಕಟ್ಟತ್ತಾರು ನಿವಾಸಿ ಅಬ್ದುಲ್ ನಾಸಿರ್ ಮೃತ ಯುವಕನಾಗಿದ್ದು, ಅವರು ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದರು.


ಮೃತ ಅಬ್ದುಲ್ ನಾಸಿರ್ ವಿಡಿಯೋ ಮೂಲಕ ಬೆಳ್ಳಾರೆ ಸಮೀಪದ ಅದ್ರಾಮ ಎಂಬವರ ವಿರುದ್ಧ ಗಂಭೀರ ಆರೋಪ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ.


“ನಾನು ಅದ್ರಾಮ ಎಂಬವರ ಮನೆಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದು ಅದ್ರಾಮ ಮತ್ತು ಕುಟುಂಬದವರು ಸೇರಿ ಹಲ್ಲೆ ನಡೆಸಿದ್ದಾರೆ” ಎಂದು ನಾಸೀರ್ ವಿಡಿಯೋ ಮಾಡಿ ಆರೋಪಿಸಿ ನಂತರ ಆತ್ಮಹತ್ಯೆಗೆ ಯತ್ನಿಸಿದ್ದರು.


ನಂತರ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನಿನ್ನೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ

ಶಿಲ್ಪಾ ಶೆಟ್ಟಿ ಪತಿಯು ಬ್ರೇಕ್ ಹೇಳಿದ್ದು ಪತ್ನಿಗಲ್ಲ: ಅಸಲಿ ವಿಷಯ ಬಹಿರಂಗ

Posted by Vidyamaana on 2023-10-20 20:47:53 |

Share: | | | | |


ಶಿಲ್ಪಾ ಶೆಟ್ಟಿ ಪತಿಯು ಬ್ರೇಕ್ ಹೇಳಿದ್ದು ಪತ್ನಿಗಲ್ಲ: ಅಸಲಿ ವಿಷಯ ಬಹಿರಂಗ

ಮಂಗಳೂರು ಮೂಲದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ನಿರ್ಮಾಪಕ ರಾಜ್ ಕುಂದ್ರಾ ಸೋಷಿಯಲ್ ಮೀಡಿಯಾದಲ್ಲಿ ಬ್ರೇಕ್ ಸ್ಟೋರಿ ಹಾಕುವುದರ ಮೂಲಕ ಶಾಕ್ ನೀಡಿದ್ದರು. ‘ನಾವು ಬೇರ್ಪಟ್ಟಿದ್ದೇವೆ. ಕಷ್ಟದ ಈ ಸಮಯದಲ್ಲಿ ನೀವು ನಮಗಷ್ಟು ಸಮಯ ಕೊಡಿ’ ಎಂದು ಬರೆದುಕೊಂಡಿದ್ದರು. ಶಿಲ್ಪಾ ಶೆಟ್ಟಿ ಜೊತೆ ಡಿವೋರ್ಸ್ (Divorce) ಏನಾದರೂ ಆಯಿತಾ ಎಂದು ಅಭಿಮಾನಿಗಳು ಆತಂಕಗೊಂಡಿದ್ದರು. ಕೊನೆಗೂ ಅಸಲಿ ಕಾರಣವನ್ನು ರಾಜ್ ಕುಂದ್ರಾ ಹೊರ ಹಾಕಿದ್ದಾರೆ.ಕಳೆದ ಎರಡು ವರ್ಷಗಳಿಂದ ಅವರು ಮನೆಯಿಂದ ಆಚೆ ಕಾಲಿಡುವಾಗ ಫೇಸ್ ಮಾಸ್ಕ್ ಧರಿಸುತ್ತಿದ್ದರು. ಆ ಮಾಸ್ಕ್ ನಿಂದ ಮುಕ್ತಿ ಪಡೆದುಕೊಂಡಿದ್ದಾರೆ. ಆ ವಿಷಯವನ್ನು ಅವರು ಅನುಮಾನ ಬರುವ ರೀತಿಯಲ್ಲಿ ಬರೆದುಕೊಂಡಿದ್ದರು. ಆ ಬರಹ ಕಂಡು ಬಹಳಷ್ಟು ಜನ ಶಿಲ್ಪಾ ಶೆಟ್ಟಿ ಅವರಿಂದ ರಾಜ್ ಕುಂದ್ರಾ ದೂರವಾಗಿದ್ದಾರೆ ಎಂದೇ ತಿಳಿದುಕೊಂಡಿದ್ದರು. ಇದೀಗ ಎಲ್ಲದಕ್ಕೂ ರಾಜ್ ಕುಂದ್ರಾ ತೆರೆ ಎಳೆದಿದ್ದಾರೆ.

Recent News


Leave a Comment: