ಜೋಕಟ್ಟೆ: ಮನೆ ಮೇಲೆ ತಡೆಗೋಡೆ ಕುಸಿತ; ಬಾಲಕ ಮೃತ್ಯು

ಸುದ್ದಿಗಳು News

Posted by vidyamaana on 2024-07-25 12:27:06 |

Share: | | | | |


ಜೋಕಟ್ಟೆ: ಮನೆ ಮೇಲೆ ತಡೆಗೋಡೆ ಕುಸಿತ; ಬಾಲಕ ಮೃತ್ಯು

ಪಣಂಬೂರು: ಇಲ್ಲಿನ ಜೋಕಟ್ಟೆ ಗ್ರಾಮ ಪಂಚಾಯತ್ ಗುಡ್ಡೆ ಎಂಬಲ್ಲಿ ಮನೆಯ ಮೇಲೆ� ತಡೆಗೋಡೆ ಕುಸಿದು ಬಿದ್ದು ಯುವಕ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ‌.ಮುಲ್ಕಿ ಕೊಲ್ನಾಡು ನಿವಾಸಿ ಶಂಕರ ಎಂಬವರ ಪುತ್ರ ಶೈಲೇಶ್ (17) ಮೃತ ಯುವಕ. ಜೋಕಟ್ಟೆಯಲ್ಲಿರುವ ತನ್ನ ದೊಡಮ್ಮನ ಮಗಳ ಮನೆಗೆ ಬಂದಿದ್ದ ಶೈಲೇಶ್, ಇಲ್ಲಿಯೇ ಉಳಿದುಕೊಂಡಿದ್ದ.

ಮನೆಯಲ್ಲಿ ಶೈಲೇಶ್ ರವರ ದೊಡ್ಡಮನ ಮಗಳು ಸವಿತಾ, ಆಕೆಯ ಗಂಡ ಸುರೇಶ್ ಮತ್ತು ಮಗು ಸಾಕ್ಷಿ ಮನೆಯ ಒಂದು ಕೋಣೆಯಲ್ಲಿ ಮಲಗಿದ್ದು, ಶೈಲೇಶ್ ಇನ್ನೊಂದು ಕಡೆ ಮಲಗಿದ್ದ. ತಡೆಗೋಡೆ ಕುಸಿದು ಹಂಚಿನ ಮನೆಯ ಮೇಲೆ ಬಿದ್ದಿದ್ದರಿಂದ ಅಲ್ಲಿ ಮಲಗಿದ್ದ ಶೈಲೇಶ್ ತೀವ್ರ ಗಾಯಗೊಂಡು ಮೃತಪಟ್ಟಿದ್ದಾನೆ. ಇನ್ನೊಂದು ಕೋಣೆಯಲ್ಲಿ ಮಲಗಿದ್ದ ಇತರ ಮೂರು ಜನರಲ್ಲಿ ಸವಿತಾ ಅವರಿಗೆ ಸಣ್ಣ ಗಾಯವಾಗಿದ್ದು‌, ಚಿಕಿತ್ಸೆ ಪಡೆದಿದ್ದಾರೆ‌ ಎಂದು ತಿಳಿದು ಬಂದಿದೆ.

ಶೈಲೇಶ್ ಅವರ ಮೃತದೇಹವನ್ನು ನಗರದ ಎ.ಜೆ.ಆಸ್ಪತ್ರೆಯ ಶವಗಾರದಲ್ಲಿಡಲಾಗಿದ್ದು, ಸ್ಥಳಕ್ಕೆ ಪಣಂಬೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

 Share: | | | | |


3 ನೇ ಮಹಾಯುದ್ಧದ ಭೀತಿ : ಇಸ್ರೇಲ್ ಮೇಲೆ ದಾಳಿಗೆ ಇರಾನ್, ಯೆಮೆನ್, ಸಿರಿಯಾ ಮತ್ತು ಇರಾಕ್ ಸಜ್ಜು

Posted by Vidyamaana on 2024-04-14 12:55:15 |

Share: | | | | |


3 ನೇ ಮಹಾಯುದ್ಧದ ಭೀತಿ : ಇಸ್ರೇಲ್ ಮೇಲೆ ದಾಳಿಗೆ ಇರಾನ್, ಯೆಮೆನ್, ಸಿರಿಯಾ ಮತ್ತು ಇರಾಕ್ ಸಜ್ಜು

ಇಸ್ರೇಲ್ : ಇಂದು ಮುಂಜಾನೆ ಇಸ್ರೇಲ್ ಮೇಲೆ ಇರಾನ್ ನಡೆಸಿದ ದಾಳಿಯು ಮೂರನೇ ಮಹಾಯುದ್ಧದ ಗಂಟೆಯನ್ನು ಬಾರಿಸಿದೆ. ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ, ಇರಾನ್ ಭಾನುವಾರ ಮುಂಜಾನೆ ಇಸ್ರೇಲ್ ಮೇಲೆ ತೀವ್ರ ದಾಳಿ ನಡೆಸಿತು. ಈ ಸಮಯದಲ್ಲಿ, ಇರಾನ್ ಇಸ್ರೇಲ್ ಮೇಲೆ ನೂರಾರು ಡ್ರೋನ್ಗಳು, ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಕ್ರೂಸ್ ಕ್ಷಿಪಣಿಗಳನ್ನು ಹಾರಿಸುವ ಮೂಲಕ ಕೋಲಾಹಲವನ್ನು ಸೃಷ್ಟಿಸಿತು.ಇಂದು ಮುಂಜಾನೆ, ಇರಾನ್ ಮತ್ತು ಯೆಮೆನ್, ಸಿರಿಯಾ ಮತ್ತು ಇರಾಕ್ನ ಅನುಕಂಪ ಹೊಂದಿರುವವರು ಇಸ್ರೇಲ್ನಲ್ಲಿನ ಮಿಲಿಟರಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದರು. ಸಂಪೂರ್ಣ ದಾಳಿಯಿಂದ ಇಸ್ರೇಲ್ ಆಘಾತಕ್ಕೊಳಗಾಗಿದೆ. ಆದಾಗ್ಯೂ, ಇಸ್ರೇಲಿ ಸೈನ್ಯವು ಈ ಹೆಚ್ಚಿನ ದಾಳಿಗಳನ್ನು ಹಿಮ್ಮೆಟ್ಟಿಸಿತು. ಇರಾನ್ ಸೇರಿದಂತೆ ಇತರ ದೇಶಗಳ ಡ್ರೋನ್ಗಳು ಮತ್ತು ಕ್ಷಿಪಣಿಗಳನ್ನು ಹೊಡೆದುರುಳಿಸಲು ಯುಎಸ್ ಇಸ್ರೇಲ್ಗೆ ಸಹಾಯ ಮಾಡಿತು.

ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

Posted by Vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

123 ಸ್ಥಾನ ಬರದಿದ್ದರೆ ಪಕ್ಷ ವಿಸರ್ಜಿಸುತ್ತೇವೆ ಎಂದಿದ್ದ ಕುಮಾರಸ್ವಾಮಿ

Posted by Vidyamaana on 2023-07-14 16:02:32 |

Share: | | | | |


123 ಸ್ಥಾನ ಬರದಿದ್ದರೆ ಪಕ್ಷ ವಿಸರ್ಜಿಸುತ್ತೇವೆ ಎಂದಿದ್ದ ಕುಮಾರಸ್ವಾಮಿ

ಬೆಂಗಳೂರು: ಕರ್ನಾಟಕ ವಿಧಾನಮಂಡಲ ಮುಂಗಾರು ಜಂಟಿ ಅಧಿವೇಶನ ಮುಂದುವರಿದಿದೆ. ವಿಧಾನ ಪರಿಷತ್​​ನಲ್ಲಿ ರಾಜ್ಯಪಾಲರ ಭಾಷಣದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.  


5 ಚುನಾವಣೆಗಳ ಪೈಕಿ 2 ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದ ಸಿದ್ದರಾಮಯ್ಯ ಕಾಂಗ್ರೆಸ್​​ ಚುನಾವಣೆ ವೇಳೆ 5 ಗ್ಯಾರಂಟಿ ಘೋಷಣೆ ಮಾಡಿದ್ದೆವು. ಜನ ನಮ್ಮ ಪಕ್ಷವನ್ನು ನಂಬುತ್ತಾರೆ ನಿಮ್ಮನ್ನು ನಂಬಲ್ಲ. ಜೆಡಿಎಸ್​ ಕೂಡ ಪಂಚರತ್ನ ಘೋಷಣೆ ಮಾಡಿತ್ತು. ಹೆಚ್ ​ಡಿ ಕುಮಾರಸ್ವಾಮಿ 123 ಸ್ಥಾನ ಬರದಿದ್ದರೆ ಪಕ್ಷ ವಿಸರ್ಜಿಸುತ್ತೇವೆ ಎಂದಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.

 ಜೆಡಿಎಸ್ (JDS)​​ ಶೇಕಡಾವಾರು ಮತ ಶೇ.19ರಿಂದ ಶೇ.13ಕ್ಕೆ ಕುಸಿದಿದೆ. 2005ರವರೆಗೆ ನಾನು ಜೆಡಿಎಸ್​ನಲ್ಲೇ ಇದ್ದೆ. ನಾನು ಜೆಡಿಎಸ್​ ಬಿಡಲಿಲ್ಲ, ನನ್ನನ್ನು ಪಕ್ಷದಿಂದ ಉಚ್ಚಾಟಿಸಿದರು. ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ನನ್ನನ್ನು ಉಚ್ಚಾಟಿಸಿದರು. ಕಾಂಗ್ರೆಸ್​​ ಪಕ್ಷದಿಂದ 2 ಬಾರಿ ಸಿಎಂ ಆಗುವ ಅವಕಾಶ ಸಿಕ್ಕಿದೆ. ಕಾಂಗ್ರೆಸ್​ಗೆ ನಾನು ಚಿರಋಣಿ ಆಗಿರುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಪ್ರೊಫೆಸರ್‌ನ ಕಾರು ಡಿಕ್ಕಿ: ಇಬ್ಬರು ವಿದ್ಯಾರ್ಥಿ ಸೇರಿ ಮೂವರು ಗಾಯ

Posted by Vidyamaana on 2023-10-08 08:43:11 |

Share: | | | | |


ಪ್ರೊಫೆಸರ್‌ನ ಕಾರು ಡಿಕ್ಕಿ: ಇಬ್ಬರು ವಿದ್ಯಾರ್ಥಿ ಸೇರಿ ಮೂವರು ಗಾಯ


ಬೆಂಗಳೂರು : ಕಾಲೇಜಿನ ಪ್ರೊಫೆಸರ್‌ವೊಬ್ಬರು ಅತೀವೇಗವಾಗಿ ಕಾರು ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಸರಣಿ ಅಪಘಾತವಾಗಿ ಇಬ್ಬರು ವಿದ್ಯಾರ್ಥಿನಿಯರು ಹಾಗೂ ಒಬ್ಬ ಶಿಕ್ಷಕಿಗೆ ಗಾಯಗೊಂಡಿರುವ ಪ್ರಕರಣ ನಗರದ ಮಹಾರಾಣಿ ಕಾಲೇಜಿನ ಆವರಣದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ


ಅಸಿಡಿಟಿಯ ಎದೆ ಉರಿಯನ್ನು ಮತ್ತು ಎದೆ ನೋವಿನ ಉರಿಯನ್ನು ಐಡೆಂಟಿಫೈ ಮಾಡೋದು ತುಂಬಾ ಸುಲಭ: ಡಾ. ಜೆ ಸಿ ಅಡಿಗ

.ಘಟನೆಯಲ್ಲಿ ಬಿ.ಕಾಂ. ವಿದ್ಯಾರ್ಥಿನಿ ಅಶ್ವಿನಿ(೧೯), ಬಿಎಸ್ಸಿ ವಿದ್ಯಾರ್ಥಿನಿ ನಂದಪ್ರಿಯಾ(೧೯) ಹಾಗೂ ಸಂಗೀತ ಉಪನ್ಯಾಸಕಿ ಜ್ಯೋತಿ(೩೩) ಎಂಬುವರಿಗೆ ಗಾಯಗಳಾಗಿದೆ. ಇದೇ ವೇಳೆ ಕಾರು ಚಾಲಕ, ಪ್ರೊಫೆಸರ್ ನಾಗರಾಜ್ ಅವರಿಗೂ ಗಾಯಗಳಾಗಿದ್ದು, ನಾಲ್ವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಅಶ್ವಿನಿಗೆ ತಲೆ ಮತ್ತು ಎರಡು ಕಾಲುಗಳಿಗೆ ಗಂಭೀರ ಪೆಟ್ಟು ಬಿದ್ದಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಮಹಾರಾಣಿ ಕಾಲೇಜಿನ ಇಂಗ್ಲಿಷ್ ಪ್ರೊಫೆಸರ್ ನಾಗರಾಜ್ ಬೆಳಗ್ಗೆ ೯.೪೫ ರ ಸುಮಾರಿಗೆ ಕಾಲೇಜು ಆವರಣಕ್ಕೆ ಕಾರಿನಲ್ಲಿ ಬಂದಿದ್ದು, ಕಾರು ಪಾರ್ಕಿಂಗ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ಬ್ರೇಕ್ ಬದಲು ಆಕ್ಸಿಲೆಟರ್ ಒತ್ತಿದ್ದಾರೆ. ಅದರಿಂದ ನಿಯಂತ್ರಿಸಲು ಸಾಧ್ಯವಾಗದೆ ವಿದ್ಯಾರ್ಥಿಗಳು ಓಡಾಡುವ ಮಾರ್ಗದ ಕಡೆ ಕಾರು ತಿರುಗಿಸಿದ್ದಾರೆ. ಇದೇ ವೇಳೆ ಕಾಲೇಜಿಗೆಬರುತ್ತಿದ್ದ ಅಶ್ವಿನಿ ಮತ್ತು ನಂದಪ್ರಿಯಾಗೆ ಡಿಕ್ಕಿ ಹೊಡೆದು, ಬಳಿಕ ಬೈಕ್ ಪಾರ್ಕಿಂಗ್ ಬಳಿ ನಿಂತಿದ್ದ ಸಂಗೀತ ಉಪನ್ಯಾಸಕಿ ಜ್ಯೋತಿಗೆ ಗುದ್ದಿದ್ದಾರೆ. ಬಳಿಕ ಎರಡ್ಮೂರು ಬೈಕ್‌ಗಳು ಹಾಗೂ ಒಂದು ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದು, ಕಾರಿನ ಹಿಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಹಾಗೆಯೇ ನಾಗರಾಜ್ ಕಾರಿನ ಮುಂಭಾಗವೂ ಸಂಪೂರ್ಣ ಜಖಂಗೊಂಡಿದೆ.


ವಿದ್ಯಾರ್ಥಿನಿಯರ ಪೈಕಿ ನಂದಪ್ರಿಯಾ ಮತ್ತು ಸಂಗೀತ ಉಪನ್ಯಾಸಕಿ ಜ್ಯೋತಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಂಡಿದ್ದಾರೆ. ಆದರೆ, ಅಶ್ವಿನಿ ತಲೆ ಮತ್ತು ಎರಡು ಕಾಲುಗಳಿಗೆ ಗಂಭೀರ ಪೆಟ್ಟು ಬಿದ್ದು, ತೀವ್ರ ರಕ್ತಸ್ರಾವವಾಗಿದೆ. ಆಕೆಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಸದ್ಯ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಕಾರು ಚಾಲಕ ನಾಗರಾಜ್‌ಗೂ ಗಾಯಗಳಾಗಿದ್ದು, ಅವರಿಗೂ ಚಿಕಿತ್ಸೆ ಮುಂದುವರಿದಿದೆ ಎಂದು ವೈದ್ಯರು ಮಾಹಿತಿ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.ಸ್ಥಳಕ್ಕೆ ಭೇಟಿ ನೀಡಿದ ಡಿಸಿಪಿ:

ಘಟನೆ ಬಳಿಕ ಹೈಗ್ರೌಂಡ್ಸ್ ಸಂಚಾರ ಠಾಣೆ ಪೊಲೀಸರು ಹಾಗೂ ಉತ್ತರ ಸಂಚಾರ ವಿಭಾಗದ ಡಿಸಿಪಿ ಸಚಿನ್ ಘೋರ್ಪಡೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಾಗರಾಜ್ ಅವರ ಪ್ರಾಥಮಿಕ ಹೇಳಿಕೆ ಪಡೆಯಲಾಗಿದ್ದು, ಈ ವೇಳೆ ಕಾರು ಪಾರ್ಕಿಂಗ್ ಮಾಡುವಾಗ ಗೊಂದಲಗೊಂಡು ಬ್ರೇಕ್ ಬದಲು ಆಕ್ಸಿಲೇಟರ್ ಒತ್ತಿದ್ದೆ. ಬಳಿಕ ಬ್ರೇಕ್ ಒತ್ತಿದರೂ ಕಾರು ನಿಯಂತ್ರಿಸಲು ಸಾಧ್ಯವಾಗಿಲ್ಲ ಎಂದಿದ್ದಾರೆ. ಕಾರು ಜಪ್ತಿ ಮಾಡಲಾಗಿದ್ದು, ಘಟನೆಗೆ ಸ್ಪಷ್ಟ ಕಾರಣ ತಿಳಿಯಲು ಆರ್‌ಟಿಓ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಸಾರಿಗೆ ಅಧಿಕಾರಿಗಳು ಬಂದು ಬ್ರೇಕ್ ವೈಫಲ್ಯದಿಂದ ಘಟನೆ ನಡೆದಿದೆಯೇ? ಬೇರೆ ಕಾರಣವೇ ಎಂಬುದನ್ನು ಖಚಿತ ಪಡಿಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಸಂಬಂಧ ಹೈಗ್ರೌಂಡ್ಸ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಟ್ಲ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ಮೂವರು ಆರೋಪಿಗಳ ಬಂಧನ

Posted by Vidyamaana on 2023-07-30 15:47:41 |

Share: | | | | |


ವಿಟ್ಲ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ಮೂವರು ಆರೋಪಿಗಳ ಬಂಧನ

ವಿಟ್ಲ: ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಮೂವರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆಮೂಡಬಿದರೆ ಮೂಲದ ಪ್ರಸ್ತುತ ಬೆರಿಪದವಿ ನಿವಾಸಿ ಅಕ್ಷಯ್ ದೇವಾಡಿಗ, ಬಾಯಾರು ಗ್ರಾಮದ ಕೊಜಪ್ಪ ನಿವಾಸಿ ಕಮಲಾಕ್ಷ ಬೆಳ್ಳಾಡ, ಬೆರಿಪದವು ನಿವಾಸಿ ಸುಕುಮಾರ ಬೆಳ್ಳಾಡ ಬಂಧಿತರಾಗಿದ್ದಾರೆ.ಅಕ್ಷಯ್ ಬೆರಿಪದವಿನಲ್ಲಿ ಅಣ್ಣನ ಮನೆಯಲ್ಲಿದ್ದು ಕೊಂಡು ಪೈಟಿಂಗ್ ಕೆಲಸ ನಿರ್ವಹಿಸುತ್ತಿದ್ದರೆ, ಕಮಲಾಕ್ಷ ಗಾರೆ ಕೆಲಸ ಹಾಗೂ ಸುಕುಮಾರ ಚಾಲಕ ವೃತ್ತಿಯನ್ನು ನಡೆಸಿಕೊಂಡಿದ್ದರು.ವಿಟ್ಲ ಠಾಣೆಯಲ್ಲಿ ಪೊಕ್ಸ್‌ ಹಾಗೂ ದಲಿತ ದೌರ್ಜನ್ಯ ಪ್ರಕರಣ ದಾಖಲಾಗಿದ್ದು, ಯುವತಿ ನೀಡಿದ ಮಾಹಿತಿಯಂತೆ ಮೂರು ಮಂದಿಯ ಬಂಧನ ಮಾಡಲಾಗಿದೆ

ಚಾರಣ ತೆರಳಿದ್ದ ಯುವಕ ಹೃದಯಘಾತದಿಂದ ಹರಿಯಾಣ ಮೂಲದ ಜತಿನ್ ನಿಧನ

Posted by Vidyamaana on 2023-12-25 14:52:36 |

Share: | | | | |


ಚಾರಣ ತೆರಳಿದ್ದ ಯುವಕ ಹೃದಯಘಾತದಿಂದ ಹರಿಯಾಣ ಮೂಲದ ಜತಿನ್ ನಿಧನ

ಕೊಡಗು:ಚಾರಣಕ್ಕೆ ತೆರಳಿದ್ದ ಯುವಕ ಹೃದಯಘಾತದಿಂದ ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆಯ ತಡಿಯಂಡಮೋಳ್ ಬೆಟ್ಟದಲ್ಲಿ ನಡೆದಿದೆ.ಹರಿಯಾಣ ಮೂಲದ ಜತಿನ್ (25) ಮೃತಪಟ್ಟ ಯುವಕ. ಜತಿನ್ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ‌ ಮಾಡುತ್ತಿದ್ದನು. 5 ಮಂದಿ ಸ್ನೇಹಿತರ ಜೊತೆ ತಡಿಯಂಡಮೋಳ್ ಬೆಟ್ಟಕ್ಕೆ ಬಂದಿದ್ದನು.ಬೆಟ್ಟದ ಮೇಲೆ ತಲುಪಿದಾಗ ತೀವ್ರತರಹದ ಎದೆನೋವಿಗೆ ಒಳಗಾದ ಜತಿನ್ ಹೃದಯಾಘಾತದಿಂದ ಬೆಟ್ಟದ ಮೇಲೆ ಕೊನೆಯುಸಿರೆಳೆದಿದ್ದಾನೆ.ಸ್ಥಳಕ್ಕೆ ನಾಪೋಕ್ಲು ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ದುರ್ಗಮ ಹಾದಿಯಲ್ಲೆ ಪ್ರವಾಸಿಗನ ಮೃತದೇಹ ಹೊತ್ತು ತಂದಿದ್ದಾರೆ.

Recent News


Leave a Comment: